ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಇನ್ಕಮ್ ಟ್ಯಾಕ್ಸ್ ರಿಟರ್ನ್ ಐಟಿಆರ್ (ITR) ಫೈಲಿಂಗ್ ಬಗೆಗಿನ ಎಲ್ಲಾ ಮಾಹಿತಿ

ಐಟಿ ರಿಟರ್ನ್ಸ್ ಫೈಲ್ ಮಾಡುವುದು ಕಷ್ಟಕರವಾದ ಪ್ರಕ್ರಿಯೆಯಂತೆ ಕಾಣಿಸಬಹುದು, ಆದರೆ ವಾಸ್ತವದಲ್ಲಿ, ಅದು ಕಷ್ಟದ ಕೆಲಸವಲ್ಲ. ಐಟಿ ರಿಟರ್ನ್ ಅನ್ನು ಹೇಗೆ ಫೈಲ್ ಮಾಡಬೇಕು ಎಂಬುದರ ಕುರಿತ ಸಂಪೂರ್ಣ ಗೈಡ್ ಇಲ್ಲಿದೆ.

ಆನ್‌ಲೈನ್‌ನಲ್ಲಿ ಐಟಿ ರಿಟರ್ನ್ ಫೈಲ್ ಮಾಡುವ ಹಂತ- ಹಂತವಾದ ಪ್ರಕ್ರಿಯೆ

ಇನ್ಕಮ್ ಟ್ಯಾಕ್ಸ್ ರಿಟರ್ನ್ ಎನ್ನುವುದು ಒಂದು ಫಾರ್ಮ್ ಆಗಿದ್ದು, ಇದು ಫಾರ್ಮ್‌ನ ಕೆಟಗರಿ ಮತ್ತು ಡಿಮ್ಯಾಂಡ್‌ನ ಪ್ರಕಾರ ಟ್ಯಾಕ್ಸ್ ಪೇಯರ್‌ಗಳ ಟ್ಯಾಕ್ಸ್ ಲಯಬಿಲಿಟಿಗಳನ್ನು ಮತ್ತು ಡಿಡಕ್ಷನ್‌ಗಳನ್ನು ತಿಳಿಸುತ್ತದೆ. ಐಟಿಆರ್-1 ಮತ್ತು ಐಟಿಆರ್-7 ನಂತಹ ವಿವಿಧ ಐಟಿಆರ್ ಫಾರ್ಮ್‌ಗಳಿವೆ.

ಒಬ್ಬ ವ್ಯಕ್ತಿಯು ಆಯಾ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಅದನ್ನು ಐಟಿ ಡಿಪಾರ್ಟ್‌ಮೆಂಟ್‌ಗೆ ಸಬ್ಮಿಟ್ ಮಾಡಿದರೆ, ಅವಳು/ಅವನು ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಫೈಲ್ ಮಾಡಿದರು ಎಂದರ್ಥ. ಆದರೆ ಹೇಗೆ? ಈ ಪ್ರಕ್ರಿಯೆಯ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ.

ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್ ವಿಧಾನಗಳ ಮೂಲಕ ಫೈಲ್ ಮಾಡಬಹುದು. ನಾವು ಮೊದಲು ಆನ್‌ಲೈನ್ ಐಟಿ ರಿಟರ್ನ್ ಫೈಲಿಂಗ್ ವಿಧಾನದೊಂದಿಗೆ ಪ್ರಾರಂಭಿಸೋಣ.

ಆನ್‌ಲೈನ್‌ನಲ್ಲಿ ಐಟಿ ರಿಟರ್ನ್ ಫೈಲ್ ಮಾಡುವ ಹಂತ- ಹಂತವಾದ ಪ್ರಕ್ರಿಯೆ

  • ಹಂತ 1 - ಇನ್ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ನ ಆಫೀಷಿಯಲ್ ಪೋರ್ಟಲ್‌ಗೆ ಭೇಟಿ ನೀಡಿ.
  • ಹಂತ 2 - ನಿಮ್ಮ ಯೂಸರ್ ಐಡಿ ಆಗಿರುವ ಪ್ಯಾನ್ ನೊಂದಿಗೆ ರಿಜಿಸ್ಟರ್ ಮಾಡಿ. ರಿಜಿಸ್ಟರ್ಡ್ ಯೂಸರ್‌ಗಳು ‘ಇಲ್ಲಿ ಲಾಗಿನ್ ಮಾಡಿ’ ಆಯ್ಕೆಯ ಮೇಲೆ ಕ್ಲಿಕ್ ಮಾಡಬಹುದು.
  • ಹಂತ 3 - ಇ-ಫೈಲ್‌ಗೆ ನ್ಯಾವಿಗೇಟ್ ಮಾಡಿ ಮತ್ತು 'ಇನ್ಕಮ್ ಟ್ಯಾಕ್ಸ್ ರಿಟರ್ನ್' ಮೇಲೆ ಕ್ಲಿಕ್ ಮಾಡಿ.
  • ಹಂತ 4 - ಡ್ರಾಪ್-ಡೌನ್ ಮೆನುವಿನಿಂದ, ಐಟಿಆರ್ ಫಾರ್ಮ್ ನಂಬರ್ ಮತ್ತು ಮೌಲ್ಯಮಾಪನ ವರ್ಷವನ್ನು ಆಯ್ಕೆಮಾಡಿ. ನೀವು ಫೈಲಿಂಗ್ ವಿಧವಾಗಿ "ಒರಿಜಿನಲ್/ರಿವೈಸ್ಡ್ ರಿಟರ್ನ್" ಅನ್ನು ಆಯ್ಕೆ ಮಾಡಬೇಕು ಮತ್ತು ಸಬ್ಮಿಶನ್ ಮೋಡ್ ಆಗಿ 'ಪ್ರಿಪೇರ್ ಮಾಡಿ ಮತ್ತು ಆನ್‌ಲೈನ್‌ನಲ್ಲಿ ಸಬ್ಮಿಟ್ ಮಾಡಿ' ಅನ್ನು ಆಯ್ಕೆ ಮಾಡಬೇಕು.
  • ಹಂತ 5 - ‘ಮುಂದುವರೆಯಿರಿ.’ ಆಯ್ಕೆ ಮೇಲೆ ಕ್ಲಿಕ್ ಮಾಡಿ.
  • ಹಂತ 6 - ಆ ಐಟಿಆರ್ ಫಾರ್ಮ್‌ನಲ್ಲಿ ಬೇಡಿಕೆಯಿರುವ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
  • ಹಂತ 7 - ಪಾವತಿಸಬೇಕಾದ ಟ್ಯಾಕ್ಸ್ ಅನ್ನು ಕ್ಯಾಲ್ಕುಲೇಟ್ ಮಾಡಿ.
  • ಹಂತ 8 - 'ಟ್ಯಾಕ್ಸ್‌ಗಳ ಪಾವತಿ ಮತ್ತು ವೆರಿಫಿಕೇಶನ್' ಟ್ಯಾಬ್‌ನಿಂದ, ಸೂಕ್ತವಾದ ಆಯ್ಕೆಯನ್ನು ಆಯ್ಕೆಮಾಡಿ.
  • ಹಂತ 9 - ನಂತರ, 'ಪ್ರಿವ್ಯೂ ಮತ್ತು ಸಬ್ಮಿಟ್ ಮಾಡಿ' ಆಯ್ಕೆಯನ್ನು ಆಯ್ಕೆಮಾಡಿ.
  • ಹಂತ 10 - ಆಧಾರ್ ಒಟಿಪಿ, ಎಲೆಕ್ಟ್ರಾನಿಕ್ ವೆರಿಫಿಕೇಶನ್ ಕೋಡ್ (ಇವಿಸಿ) ಮೂಲಕ ಬ್ಯಾಂಕ್ ಅಕೌಂಟ್, ಬ್ಯಾಂಕ್ ಎಟಿಎಂ, ಡಿಮ್ಯಾಟ್ ಅಕೌಂಟ್‌ನ ವಿವರಗಳ ಮೂಲಕ ಅಥವಾ ಭರ್ತಿ ಮಾಡಿದ ಐಟಿಆರ್-V (ಸ್ಪೀಡ್ ಪೋಸ್ಟ್ ಅಥವಾ ಸಾಮಾನ್ಯ) ಅನ್ನು ಐಟಿ ಡಿಪಾರ್ಟ್‌ಮೆಂಟ್‌ಗೆ ಕಳುಹಿಸುವ ಮೂಲಕ ವೆರಿಫಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. 
  • ಹಂತ 11 - ಫೈನಲ್ ಸಬ್ಮಿಶನ್‌ಗಾಗಿ, ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ಗೆ ಕಳುಹಿಸಲಾದ ಒಟಿಪಿ/ಇವಿಸಿ ಅನ್ನು ಅದರ ವ್ಯಾಲಿಡಿಟಿಯ ಅವಧಿಯೊಳಗೆ ಟೈಪ್ ಮಾಡಿ ಹಾಗೂ ಸಬ್ಮಿಟ್ ಮಾಡಲು, ಅಂತಹ ಸೂಚನೆಗಳನ್ನು ಫಾಲೋ ಮಾಡಿ. 

[ಮೂಲ]

ಆನ್‌ಲೈನ್‌ನಲ್ಲಿ ಐಟಿ ರಿಟರ್ನ್‌ಗಳನ್ನು ಫೈಲ್ ಮಾಡಲು ನಿಮಗೆ ಸೂಕ್ತವೆನಿಸದಿದ್ದರೆ, ನೀವು ಸುಲಭವಾಗಿ ಇತರ ಮಾರ್ಗವನ್ನು ಆಯ್ಕೆ ಮಾಡಬಹುದು. ಅದುವೇ ಆಫ್‌ಲೈನ್ ಪ್ರಕ್ರಿಯೆ.

ಐಟಿ ರಿಟರ್ನ್‌ಗಳನ್ನು ಆಫ್‌ಲೈನ್‌ನಲ್ಲಿ ಫೈಲ್ ಮಾಡುವ ಹಂತ- ಹಂತವಾದ ಪ್ರಕ್ರಿಯೆ

ಐಟಿಆರ್ ಅನ್ನು ಹಂತ-ಹಂತವಾಗಿ ಫೈಲ್ ಮಾಡುವುದು ಹೇಗೆ ಎಂಬ ಪ್ರಕ್ರಿಯೆಯು, ಒಬ್ಬ ವ್ಯಕ್ತಿಯು ಅನ್ವಯಿಸುವ ಫಾರ್ಮ್ ಅನ್ನು ಡೌನ್‌ಲೋಡ್ ಮಾಡುವುದನ್ನು, ಕಡ್ಡಾಯ ವಿವರಗಳನ್ನು ಆಫ್‌ಲೈನ್‌ನಲ್ಲಿ ಭರ್ತಿ ಮಾಡುವುದನ್ನು ಮತ್ತು ಹೊಸದಾಗಿ ಜನರೇಟ್ ಮಾಡಿದ ಎಕ್ಸ್ಎಮ್ಎಲ್ ಫೈಲ್ ಅನ್ನು ಸೇವ್ ಮಾಡುವುದನ್ನು ಮತ್ತು ಅಪ್‌ಲೋಡ್ ಮಾಡುವುದನ್ನು ಒಳಗೊಂಡಿರುತ್ತದೆ.

ಆದಾಗ್ಯೂ, ಈ ವಿಧಾನವು ಕೆಳಗಿನ ಐಟಿಆರ್ ಯುಟಿಲಿಟಿಗಳಲ್ಲಿ ಒಂದನ್ನು ಡೌನ್‌ಲೋಡ್ ಮಾಡುವ ಅಗತ್ಯವಿದೆ - 

  • ಎಕ್ಸೆಲ್ ಯುಟಿಲಿಟಿ 

  • ಜಾವಾ ಯುಟಿಲಿಟಿ 

ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಆಫ್‌ಲೈನ್‌ನಲ್ಲಿ ಫೈಲ್ ಮಾಡಲು ಕೆಳಗೆ ತಿಳಿಸಲಾದ ಈ ಹಂತಗಳನ್ನು ಫಾಲೋ ಮಾಡಿ.

  • ಹಂತ 1 - ಆಫೀಷಿಯಲ್ ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಿ.

  • ಹಂತ 2 - ‘ಡೌನ್‌ಲೋಡ್ ಐಟಿ ರಿಟರ್ನ್ ಪ್ರಿಪರೇಷನ್ ಸಾಫ್ಟ್‌ವೇರ್’ ಅಡಿಯಲ್ಲಿ ಸಂಬಂಧಿತ ಐಟಿಆರ್ ಯುಟಿಲಿಟಿಯನ್ನು ಡೌನ್‌ಲೋಡ್ ಮಾಡಿ.

  • ಹಂತ 3 - ನೀವು ಡೌನ್‌ಲೋಡ್ ಮಾಡಿದ ಯುಟಿಲಿಟಿಯ ZIP ಫೈಲ್ ಅನ್ನು ಹೊರತೆಗೆಯಿರಿ.

  • ಹಂತ 4 - ನಿರ್ದಿಷ್ಟ ಯುಟಿಲಿಟಿ ಫೈಲ್ ಅನ್ನು ತೆರೆಯಿರಿ.

  • ಹಂತ 5 - ಐಟಿ ರಿಟರ್ನ್ಸ್ ಫಾರ್ಮ್‌ನಲ್ಲಿ ಅಗತ್ಯ ವಿವರಗಳನ್ನು ಒದಗಿಸಿ.

  • ಹಂತ 6 - ಎಲ್ಲಾ ಟ್ಯಾಬ್‌ಗಳನ್ನು ಮೌಲ್ಯೀಕರಿಸಿ ಮತ್ತು ಟ್ಯಾಕ್ಸ್ ಅನ್ನು ಕ್ಯಾಲ್ಕುಲೇಟ್ ಮಾಡಿ.

  • ಹಂತ 7 - ಎಕ್ಸ್ಎಮ್ಎಲ್ ಫೈಲ್ ಅನ್ನು ರಚಿಸಿ ಮತ್ತು ಸೇವ್ ಮಾಡಿ.

  • ಹಂತ 8 - ಪ್ಯಾನ್ ಮತ್ತು ಪಾಸ್‌ವರ್ಡ್ ನೀಡುವ ಮೂಲಕ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಮಾಡಿ. ನಂತರ, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.

  • ಹಂತ 9 - ಇ-ಫೈಲ್ ಆಯ್ಕೆಮಾಡಿ.

  • ಹಂತ 10 - 'ಇನ್ಕಮ್ ಟ್ಯಾಕ್ಸ್ ರಿಟರ್ನ್' ಲಿಂಕ್ ಅನ್ನು ಆಯ್ಕೆಮಾಡಿ.

  • ಹಂತ 11 - ನಂತರ, ಮೌಲ್ಯಮಾಪನ ವರ್ಷ, ಐಟಿಆರ್ ಫಾರ್ಮ್ ನಂಬರ್‌ನಂತಹ ವಿವರಗಳನ್ನು ಒದಗಿಸಿ. ಮುಂದೆ, ಫೈಲಿಂಗ್ ವಿಧವನ್ನು 'ಒರಿಜಿನಲ್/ರಿವೈಸ್ಡ್' ಫಾರ್ಮ್ ಮತ್ತು 'ಸಬ್ಮಿಶನ್ ಮೋಡ್' ಅನ್ನು ಆಫ್‌ಲೈನ್‌ಗೆ ಸೆಟ್ ಮಾಡಿ.

  • ಹಂತ 12 - 'ಮುಂದುವರೆಯಿರಿ ಮತ್ತು ವ್ಯಾಲಿಡೇಶನ್ ಗಾಗಿ ಹಂತ 7 ರಲ್ಲಿ ಜನರೇಟ್ ಮಾಡಲಾದ 'ಐಟಿಆರ್ ಎಕ್ಸ್ಎಮ್ಎಲ್ ಫೈಲ್ ಅನ್ನು ಅಟ್ಯಾಚ್ ಮಾಡಿ' ಆಯ್ಕೆಯನ್ನು ಆಯ್ಕೆಮಾಡಿ.

  • ಹಂತ 13 - ಐಟಿಆರ್ ಅನ್ನು ವೆರಿಫೈ ಮಾಡಲು, 'ಆಧಾರ್ ಒಟಿಪಿ,' 'ಇವಿಸಿ ಮೂಲಕ ಬ್ಯಾಂಕ್ ಅಕೌಂಟ್ ವಿವರಗಳು,' 'ಡಿಮ್ಯಾಟ್ ಅಕೌಂಟ್ ವಿವರಗಳು,' ಅಥವಾ 'ಡಿಜಿಟಲ್ 'ಸಿಗ್ನೇಚರ್ ಸರ್ಟಿಫಿಕೇಟ್' ನಂತಹ ಯಾವುದಾದರೂ ಆಯ್ಕೆಗಳನ್ನು ಆಯ್ಕೆಮಾಡಿ.

  •  ಹಂತ 14 - ಆಯ್ಕೆಮಾಡಿದ ವೆರಿಫಿಕೇಶನ್ ಆಪ್ಷನ್ ಅನ್ನು ಆಧರಿಸಿ, ನೀವು ಅಗತ್ಯವಿರುವ ಫೈಲ್ ಅನ್ನು ಅಟ್ಯಾಚ್ ಮಾಡಬೇಕು/ಒದಗಿಸಬೇಕು. ನಿಖರವಾಗಿ, 

ನೀವು ಡಿ.ಎಸ್.ಸಿ ಅನ್ನು ವೆರಿಫಿಕೇಶನ್ ಆಪ್ಷನ್ ಆಗಿ ಆಯ್ಕೆ ಮಾಡಿಕೊಂಡರೆ, ಡಿ.ಎಸ್.ಸಿ ಯುಟಿಲಿಟಿಯಿಂದ ರಚಿಸಲಾದ ಸಿಗ್ನೇಚರ್ ಫೈಲ್ ಅನ್ನು ನೀವು ಒದಗಿಸಬೇಕು.

ನೀವು ಆಧಾರ್ ಒನ್-ಟೈಮ್ ಪಾಸ್‌ವರ್ಡ್ (ಒಟಿಪಿ) ಅನ್ನು ವೆರಿಫಿಕೇಶನ್ ಆಪ್ಷನ್ ಆಗಿ ಆಯ್ಕೆ ಮಾಡಿಕೊಂಡರೆ, ನಿಮ್ಮ ಯುಐಡಿಎಐ-ರಿಜಿಸ್ಟರ್ಡ್ ಮೊಬೈಲ್ ನಂಬರ್‌ಗೆ ಕಳುಹಿಸಲಾದ ಒಟಿಪಿ ಅನ್ನು ನೀವು ನೀಡಬೇಕು.

ನೀವು ‘ಬ್ಯಾಂಕ್ ಅಕೌಂಟ್ ಮೂಲಕ ಇವಿಸಿ,’ ‘ಬ್ಯಾಂಕ್ ಎಟಿಎಂ,’ ಅಥವಾ ‘ಡಿಮ್ಯಾಟ್ ಅಕೌಂಟ್' ಅನ್ನು ವೆರಿಫಿಕೇಶನ್ ಆಪ್ಷನ್ ಆಗಿ ಆಯ್ಕೆ ಮಾಡಿಕೊಂಡರೆ, ಬ್ಯಾಂಕ್ ಅಥವಾ ಡಿಮ್ಯಾಟ್ ಅಕೌಂಟ್‌ನೊಂದಿಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ನಂಬರ್‌ಗೆ ಕಳುಹಿಸಿದ ಇವಿಸಿ ನಂಬರ್ ಅನ್ನು ನೀವು ನೀಡಬೇಕು.

ನೀವು ಬೇರೆ ಯಾವುದೇ ವೆರಿಫಿಕೇಶನ್ ಆಪ್ಷನ್ ಆಗಿ ಆಯ್ಕೆ ಮಾಡಿಕೊಂಡರೂ, ಐಟಿಆರ್ ಸಬ್ಮಿಶನ್ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ; ಆದರೆ, ವೆರಿಫಿಕೇಶನ್ ಪೂರ್ಣಗೊಳ್ಳುವವರೆಗೆ ಈ ಪ್ರಕ್ರಿಯೆಯನ್ನು 'ಪೂರ್ಣಗೊಂಡಿದೆ' ಎಂದು ಪರಿಗಣಿಸಲಾಗುವುದಿಲ್ಲ. ಈ ತರ, ನೀವು ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಈ ರೀತಿಯಲ್ಲಿ ಸಬ್ಮಿಟ್ ಮಾಡಬಹುದು. 

ಮೈ ಅಕೌಂಟ್ ˃ಇ-ವೆರಿಫೈ ಆಯ್ಕೆಯನ್ನು ಬಳಸಿಕೊಂಡು ವ್ಯಕ್ತಿಗಳು ಸಬ್ಮಿಟ್ ಮಾಡಿದ ಐಟಿಆರ್ ಅನ್ನು ಇ-ವೆರಿಫೈ ಮಾಡಬೇಕಾಗುತ್ತದೆ. ಡಾಕ್ಯುಮೆಂಟ್ ಅನ್ನು ಅದರ ಮೇಲೆ ವ್ಯಕ್ತಿಯ ಸಹಿಯೊಂದಿಗೆ ಐಟಿ ಡಿಪಾರ್ಟ್‌ಮೆಂಟ್‌ಗೆ (ಸಿಪಿಸಿ, ಬೆಂಗಳೂರು) ಕಳುಹಿಸಬೇಕು. 

  • ಹಂತ 15 - 'ಸಬ್ಮಿಟ್' ಐಟಿಆರ್ ಮೇಲೆ ಕ್ಲಿಕ್ ಮಾಡಿ.

ಐಟಿ ರಿಟರ್ನ್ ಫೈಲಿಂಗ್‌ಗೆ ಅಗತ್ಯವಿರುವ ಡಾಕ್ಯುಮೆಂಟುಗಳು ಯಾವುವು?

ನಿಮ್ಮ ಇನ್ಕಮ್ ವಿಧಗಳಿಗೆ ಅನುಗುಣವಾಗಿ ಐಟಿ ರಿಟರ್ನ್ಸ್‌ಗೆ ಅಗತ್ಯವಿರುವ ಎಲ್ಲಾ ಅಗತ್ಯ ಡಾಕ್ಯುಮೆಂಟುಗಳ ಪಟ್ಟಿ ಇಲ್ಲಿದೆ. ನಿಮ್ಮ ಇನ್ಕಮ್ ಕೆಟಗರಿಯನ್ನು ಹುಡುಕಿ ಮತ್ತು ಅದಕ್ಕೆ ಅನುಗುಣವಾಗಿ ಡಾಕ್ಯುಮೆಂಟುಗಳನ್ನು ಸಂಗ್ರಹಿಸಿ.

ಉದ್ಯೋಗದ ವಿಧ ಡಾಕ್ಯುಮೆಂಟ್
ಸ್ಯಾಲರಿ ಇನ್ಕಮ್ ಫಾರ್ಮ್-16 (ಮೂಲ ಸರ್ಟಿಫಿಕೇಟ್‌ನಲ್ಲಿ ಡಿಡಕ್ಟ್ ಮಾಡಲಾದ ಟ್ಯಾಕ್ಸ್ ಎನ್ನುತ್ತಾರೆ)
ಇತರ ಮೂಲಗಳಿಂದ ಬಂದ ಇನ್ಕಮ್‌ ಇತರ ಮೂಲಗಳಿಂದ ಬರುವ ಇನ್ಕಮ್ ಬ್ಯಾಂಕ್ ಅಕೌಂಟ್/ಬ್ಯಾಂಕ್ ಪಾಸ್‌ಬುಕ್ ಸ್ಟೇಟ್‌ಮೆಂಟ್, ಸೇವಿಂಗ್ಸ್, ರೆಂಟ್ ಅಗ್ರಿಮೆಂಟ್ ಅಥವಾ ಟಿಡಿಎಸ್ ಸರ್ಟಿಫಿಕೇಟ್‌ನ ಮೇಲೆ ಗಳಿಸಿದ ಇಂಟರೆಸ್ಟ್‌ಗೆ ಫಾರ್ಮ್ 16A (ಅಗತ್ಯವಿರುವಂತೆ), ಬ್ಯಾಂಕ್ ಎಫ್‌ಡಿ ಇಂಟರೆಸ್ಟ್‌ಗೆ ಇಂಟರೆಸ್ಟ್‌ ಅಥವಾ ಟಿಡಿಎಸ್ ಸರ್ಟಿಫಿಕೇಟ್‌, ಡಿವಿಡೆಂಡ್ ವಾರಂಟ್ (ಡಿವಿಡೆಂಡ್‌ನಿಂದ ಇನ್ಕಮ್ ಜನರೇಟ್ ಆಗಿದ್ದರೆ), ಇತರ ಡಾಕ್ಯುಮೆಂಟರಿ ಪ್ರೂಫ್ (ಅಗತ್ಯವಿರುವಂತೆ)
ಟ್ಯಾಕ್ಸ್ ಸೇವಿಂಗ್ಸ್ ಇನ್ವೆಸ್ಟ್‌ಮೆಂಟ್ ಮೆಡಿಕಲ್ ಇನ್ಶೂರೆನ್ಸಿನ ರಿಸಿಪ್ಟ್, ಲೈಫ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಪಾವತಿಸಿದ ರಿಸಿಪ್ಟ್, ಫಿಕ್ಸೆಡ್ ಡೆಪಾಸಿಟ್ ರಿಸಿಪ್ಟ್, ಡೊನೇಶನ್ ಪಾವತಿಸಿದ ಸರ್ಟಿಫಿಕೇಟ್, ಟ್ಯೂಷನ್ ಫೀ ಪಾವತಿಸಿದ ಸರ್ಟಿಫಿಕೇಟ್, ಎಜುಕೇಷನ್ ಲೋನ್ ರಿಪೇಮೆಂಟ್ ಸರ್ಟಿಫಿಕೇಟ್, ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಪಾಸ್‌ಬುಕ್, ಮ್ಯೂಚುಯಲ್ ಫಂಡ್ ಕನ್ಸಾಲಿಡೇಟೆಡ್ ಅಕೌಂಟ್ ಸ್ಟೇಟ್‌ಮೆಂಟ್ (ಸಿಎಎಸ್)
ಕ್ಯಾಪಿಟಲ್ ಗೇನ್ಸ್ ಇನ್ಕಮ್ (ಬಂಡವಾಳ ಲಾಭದಿಂದ ಬರುವ ಆದಾಯ) ಸ್ಥಿರವಾದ ಪ್ರಾಪರ್ಟಿಗಳ ಖರೀದಿ ಮತ್ತು ಮಾರಾಟದ ಕರಾರು ಪತ್ರ, ಅನ್ವಯವಾಗುವ ಎಲ್ಲಾ ಕ್ಯಾಪಿಟಲ್ ಅಸೆಟ್ ಗಳ ಖರೀದಿ ಮತ್ತು ಮಾರಾಟದ ಪ್ರೂಫ್/ರಿಸಿಪ್ಟ್‌ಗಳು, ಕಾಂಟ್ರ್ಯಾಕ್ಟ್ ನೋಟ್, ಡಿಮ್ಯಾಟ್ ಅಕೌಂಟ್ ಸ್ಟೇಟ್‌ಮೆಂಟ್
ಬಿಸಿನೆಸ್ ಅಥವಾ ಪ್ರೊಫೆಷನ್‌ನಿಂದ ಬರುವ ಇನ್ಕಮ್ ಟಿಡಿಎಸ್ ಸರ್ಟಿಫಿಕೇಟ್‌ಗಳು, ಬ್ಯಾಲೆನ್ಸ್ ಶೀಟ್‌ಗಳು, ಆಡಿಟ್ ಮಾಡಿದ ಫೈನಾನ್ಸಿಯಲ್ ಡಾಕ್ಯುಮೆಂಟುಗಳು (ಅಗತ್ಯವಿದ್ದಂತೆ), ಇನ್ಕಮ್ ಟ್ಯಾಕ್ಸ್ ಪಾವತಿ (ಸ್ವಯಂ ಮೌಲ್ಯಮಾಪನ ಟ್ಯಾಕ್ಸ್/ಅಡ್ವಾನ್ಸ್ ಟ್ಯಾಕ್ಸ್) ಚಲನ್ ಕಾಪಿ
ಲೀವ್ ಟ್ರಾವೆಲ್ ಅಲೋವೆನ್ಸ್ ಅನ್ವಯವಾಗುವ ಟಿಕೆಟ್‌ಗಳು ಮತ್ತು ಖರೀದಿಸಿದ ಟಿಕೆಟ್‌ಗಳ ರಿಸಿಪ್ಟ್‌ಗಳು
ವೈದ್ಯಕೀಯ ವೆಚ್ಚದ ಮೇಲಿನ ಟ್ಯಾಕ್ಸ್ ಡಿಡಕ್ಷನ್‌ಗಳು ವೈದ್ಯಕೀಯ ವೆಚ್ಚಗಳ ಬಿಲ್
ಹೆಚ್.ಆರ್.ಎ ವಿನಾಯಿತಿ ಬಾಡಿಗೆ ಪಾವತಿಸಿದ ರಿಸಿಪ್ಟ್‌ಗಳು

ಸಾಮಾನ್ಯವಾಗಿ, ನಿಮ್ಮ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡಲು ನಿಮಗೆ ಅಗತ್ಯವಿರುವ ಡಾಕ್ಯುಮೆಂಟುಗಳ ಪಟ್ಟಿ ಇಲ್ಲಿದೆ.

  • ಫಾರ್ಮ್-16

  • ಸ್ಯಾಲರಿ ಸ್ಲಿಪ್‌ಗಳು

  • ಬ್ಯಾಂಕುಗಳು ಮತ್ತು ಅಂಚೆ ಕಛೇರಿಗಳಿಂದ ಇಂಟರೆಸ್ಟ್ ಸರ್ಟಿಫಿಕೇಟ್‌ಗಳು

  • ಫಾರ್ಮ್-16A/ಫಾರ್ಮ್-16B/ಫಾರ್ಮ್-16C

  • ಫಾರ್ಮ್-26AS

  • ಟ್ಯಾಕ್ಸ್ ಸೇವಿಂಗ್ಸ್-ಇನ್ವೆಸ್ಟ್‌ಮೆಂಟ್ ಪ್ರೂಫ್ಸ್

  • 80D ನಿಂದ 80U ವರೆಗಿನ ಡಿಡಕ್ಷನ್‌ಗಳು

  • ಕ್ಯಾಪಿಟಲ್ ಗೇನ್ಸ್

  • ಬ್ಯಾಂಕ್ ಮತ್ತು ಎನ್.ಬಿ.ಎಫ್.ಸಿ ಯಿಂದ ಹೋಮ್ ಲೋನ್ ಸ್ಟೇಟ್‌ಮೆಂಟ್

  • ಆಧಾರ್ ಕಾರ್ಡ್

    [ಮೂಲ]

ಫಾರ್ಮ್-16 ನೊಂದಿಗೆ ಮತ್ತು ಅದರ ಹೊರತಾಗಿ ಐಟಿ ರಿಟರ್ನ್ ಅನ್ನು ಫೈಲ್ ಮಾಡುವುದು ಹೇಗೆ?

ಐಟಿ ರಿಟರ್ನ್ಸ್ ಫೈಲ್ ಮಾಡುವಲ್ಲಿ, ಫಾರ್ಮ್-16 ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಫಾರ್ಮ್-16 ಎಂಪ್ಲಾಯರ್‌ಗಳು ಎಂಪ್ಲಾಯೀಗಳಿಗೆ ಮೂಲದಲ್ಲಿ ಡಿಡಕ್ಟ್ ಮಾಡಲಾದ ಟ್ಯಾಕ್ಸ್‌ (ಟಿಡಿಎಸ್) ಮತ್ತು ಸರಿಯಾದ ಸ್ಯಾಲರಿ ಬ್ರೇಕಪ್‌ನ ಎಲ್ಲಾ ಪ್ರಮುಖ ವಿವರಗಳನ್ನು ಒದಗಿಸುವ ಅತ್ಯಗತ್ಯ ಸರ್ಟಿಫಿಕೇಟ್ ಆಗಿದೆ. 

ಅದಕ್ಕಾಗಿಯೇ ಇದು ವ್ಯಕ್ತಿಗಳು ಕಲೆಕ್ಟ್ ಮಾಡಬೇಕಾದ ಬೇಸಿಕ್ ಫಾರ್ಮ್ ಆಗಿದೆ. ಆದಾಗ್ಯೂ, ಕೆಲವರು ಫಾರ್ಮ್-16 ಇಲ್ಲದೆಯೂ ಐಟಿ ಫೈಲ್‌ ಮಾಡಲು ಅಪ್ಲೈ ಮಾಡಬಹುದಾದ ಕೆಲವು ಸಂದರ್ಭಗಳಿವೆ.

ಆದ್ದರಿಂದ, ಫಾರ್ಮ್-16 ನೊಂದಿಗೆ ಐಟಿಆರ್ ಅನ್ನು ಹೇಗೆ ಫೈಲ್ ಮಾಡಬೇಕು ಮತ್ತು ಅದರ ಹೊರತಾಗಿ ಹೇಗೆ ಮಾಡಬೇಕು ಎಂಬುದಕ್ಕೆ, ನಾವು ಈ ಎರಡೂ ಪ್ರಕ್ರಿಯೆಗಳನ್ನು ಚರ್ಚಿಸಿದ್ದೇವೆ.

ಫಾರ್ಮ್-16 ನೊಂದಿಗೆ ಐಟಿಆರ್ (ITR) ಅನ್ನು ಫೈಲ್ ಮಾಡಿ

ಇನ್ಕಮ್ ಟ್ಯಾಕ್ಸ್ ಫಾರ್ಮ್ ಅನ್ನು ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 203 ರ ಅಡಿಯಲ್ಲಿ ನೀಡಲಾಗುತ್ತದೆ. ಈ ಡಾಕ್ಯುಮೆಂಟ್ ಸ್ಯಾಲರಿ, ಎಂಪ್ಲಾಯರ್ ಪಾವತಿಸಿದ ಘಟಕಗಳು ಮತ್ತು ಸ್ಯಾಲರಿಯಿಂದ ವಿನಾಯಿತಿ ಪಡೆದ ಟ್ಯಾಕ್ಸ್ ಬಗ್ಗೆ ವಿವರವಾದ ಮಾಹಿತಿಯನ್ನು ಒಳಗೊಂಡಿದೆ. 

ಫಾರ್ಮ್-16 ನೊಂದಿಗೆ ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಹೇಗೆ ಫೈಲ್ ಮಾಡುವುದು ಎಂಬುದನ್ನು ಈ ಕೆಳಗೆ ಚರ್ಚಿಸಲಾಗಿದೆ.

  • ಹಂತ 1 - ಆಫೀಷಿಯಲ್ ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಿ.
  • ಹಂತ 2 - ನೀವು ಇನ್ನೂ ರಿಜಿಸ್ಟರ್ ಮಾಡಿರದಿದ್ದರೆ, ನೀವೇ ರಿಜಿಸ್ಟರ್ ಮಾಡಿಕೊಳ್ಳಿ. ಪ್ಯಾನ್ ಕಾರ್ಡ್ ನಿಮ್ಮ ಯೂಸರ್ ಐಡಿ ಆಗಿರುತ್ತದೆ ಮತ್ತು ನಿಮ್ಮ ಜನ್ಮ ದಿನಾಂಕ ನಿಮ್ಮ ಪಾಸ್‌ವರ್ಡ್ ಆಗಿರುತ್ತದೆ. 
  • ಹಂತ 3 - ಫಾರ್ಮ್-26AS ಅನ್ನು ಜನರೇಟ್ ಮಾಡಿ, ಅದನ್ನು ಇನ್ಕಮ್ ಟ್ಯಾಕ್ಸ್ ಫೈಲಿಂಗ್ ಪೋರ್ಟಲ್‌ನಿಂದ 'ಮೈ ಅಕೌಂಟ್' ಗೆ ಹೋಗಿ, ನಂತರ 'ಫಾರ್ಮ್ 26AS ನೋಡಿ' ಮೇಲೆ ಕ್ಲಿಕ್ ಮಾಡುವ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು 
  • ಹಂತ 4 - ಇ-ಫೈಲ್ ಮೇಲೆ ಕ್ಲಿಕ್ ಮಾಡಿ ಮತ್ತು ಪಟ್ಟಿಯಿಂದ 'ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡಿ'' ಅನ್ನು ಆಯ್ಕೆಮಾಡಿ. ಮೌಲ್ಯಮಾಪನ ವರ್ಷದಂತಹ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಮತ್ತು ನೀವು ಫೈಲ್ ಮಾಡಲು ಬಯಸುವ ಐಟಿಆರ್ ಫಾರ್ಮ್ ಅನ್ನು ಆಯ್ಕೆ ಮಾಡಿ. ಅಲ್ಲದೇ ನೀವು ಮೇಲೆ ತಿಳಿಸಿದ ಆಫ್‌ಲೈನ್ ವಿಧಾನವನ್ನು ಬಳಸಿಕೊಂಡು ಸಹ ನಿಮ್ಮ ರಿಟರ್ನ್ ಅನ್ನು ಫೈಲ್ ಮಾಡಬಹುದು. 
  • ಹಂತ 5 - ಅಗತ್ಯವಿರುವ ವಿವರಗಳೊಂದಿಗೆ ಐಟಿಆರ್ ಫಾರ್ಮ್ ಅನ್ನು ಭರ್ತಿ ಮಾಡಿ. ಪರಿಣಾಮಕಾರಿ ಸಹಾಯಕ್ಕಾಗಿ ಫಾರ್ಮ್-16 ಅನ್ನು ನೋಡಿ. ಅನ್‌ಡಿಕ್ಲೇರ್ ಆದ ರಿಪೋರ್ಟ್‌ಗಳು ಅಥವಾ ಇತರ ಮಾಹಿತಿಯನ್ನು ಫಾರ್ಮ್-16 ಮತ್ತು ಫಾರ್ಮ್-26ಎಎಸ್ ನಿಂದ ಸುಲಭವಾಗಿ ಪಡೆಯಬಹುದು.
  • ಹಂತ 6 - ಇನ್ಕಮ್ ವಿವರಗಳನ್ನು ಭರ್ತಿ ಮಾಡಿ ಮತ್ತು ಅಗತ್ಯ ಡಾಕ್ಯುಮೆಂಟುಗಳ ಸಹಾಯದಿಂದ ವ್ಯಾಲಿಡೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
  • ಹಂತ 7 - ನಿಮ್ಮ ಟ್ಯಾಕ್ಸ್ ಲಯಬಿಲಿಟಿಯನ್ನು ಕ್ಯಾಲ್ಕುಲೇಟ್ ಮಾಡಿ.
  • ಹಂತ 8 - ಟ್ಯಾಕ್ಸ್ ಪೇಮೆಂಟ್ ಸ್ಟೇಟಸ್ ಅನ್ನು ಡಿಸ್‌ಪ್ಲೇ ಮಾಡುವ ಟ್ಯಾಬ್ ಅನ್ನು ಫಾಲೋ ಮಾಡಿ (ಅದನ್ನು ಪಾವತಿಸಿದ್ದರೆ, ಇನ್ನೂ ಪಾವತಿಸಬೇಕಿದ್ದರೆ ಅಥವಾ ರಿಫಂಡ್ ಮಾಡುವುದಿದ್ದರೆ). ಬ್ಯಾಂಕ್ ವಿವರಗಳನ್ನು ಭರ್ತಿ ಮಾಡಿ ಮತ್ತು ಡಿಕ್ಲರೇಶನ್ ಅನ್ನು ವ್ಯಾಲಿಡೇಟ್ ಮಾಡಿ. 
  • ಹಂತ 9 - 'ಸಬ್ಮಿಟ್' ಬಟನ್ ಮೇಲೆ ಕ್ಲಿಕ್ ಮಾಡಿ.
  • ಹಂತ 10 - ಐಟಿಆರ್-V (ಸ್ವೀಕೃತಿ ಮತ್ತು ವೆರಿಫಿಕೇಶನ್ ಡಾಕ್ಯುಮೆಂಟ್) ಅನ್ನು ಜನರೇಟ್ ಮಾಡಿ.
  • ಹಂತ 11 - ವಿವರಗಳನ್ನು ಇ-ವೆರಿಫೈ ಮಾಡಿ. 

ಫಾರ್ಮ್-16 ಇಲ್ಲದೆ ಐಟಿಆರ್ (ITR) ಅನ್ನು ಫೈಲ್ ಮಾಡಿ

ಕೆಲವು ಕಾರಣಗಳಿಂದಾಗಿ ನಿಮ್ಮ ಎಂಪ್ಲಾಯರ್‌ಗಳಿಂದ ನೀವು ಫಾರ್ಮ್-16 ಅನ್ನು ಸ್ವೀಕರಿಸದಿದ್ದರೆ, ನೀವು ಐಟಿ ರಿಟರ್ನ್ ಫೈಲ್ ಮಾಡುವುದನ್ನು ಮುಂದುವರೆಸಬಹುದು. ಫಾರ್ಮ್-16 ಇಲ್ಲದೆ ಐಟಿಆರ್ ಅನ್ನು ಹೇಗೆ ಫೈಲ್ ಮಾಡುವುದು ಎಂಬುದಕ್ಕೆ ಉತ್ತರ ಈ ಕೆಳಗಿನಂತಿದೆ.

  • ಹಂತ 1 - ಎಲ್ಲಾ ಮೂಲಗಳಿಂದ ನಿಮ್ಮ ಇನ್ಕಮ್ ಅನ್ನು ಗುರುತಿಸಿ. ಇದು ಸ್ಯಾಲರಿ ಮತ್ತು ಪೆನ್ಷನ್‌ಗಳು, ಕ್ಯಾಪಿಟಲ್ ಗೇನ್ಸ್, ಹೌಸಿಂಗ್ ಪ್ರಾಪರ್ಟಿಯಿಂದ ಇನ್ಕಮ್, ಫಿಕ್ಸೆಡ್ ಡೆಪಾಸಿಟ್‌ನ ಇಂಟರೆಸ್ಟ್, ರಿಫಂಡ್ ಮೇಲಿನ ಇಂಟರೆಸ್ಟ್ ಮುಂತಾದ ಇತರ ಮೂಲಗಳಿಂದ ಬರುವ ಇನ್ಕಮ್ ಅನ್ನು ಒಳಗೊಂಡಿರಬಹುದು. 
  • ಹಂತ 2 - ಫಾರ್ಮ್-26AS ಅನ್ನು ಪಡೆಯಿರಿ (ಇದನ್ನು ವಾರ್ಷಿಕ ಟ್ಯಾಕ್ಸ್ ಸ್ಟೇಟ್‌ಮೆಂಟ್ ಎಂದು ಕರೆಯಬಹುದು). ಇನ್ಕಮ್ ಟ್ಯಾಕ್ಸ್ ಫೈಲಿಂಗ್ ಪೋರ್ಟಲ್‌ನಲ್ಲಿ ನಿಮ್ಮ ಅಕೌಂಟ್‌ಗೆ ಲಾಗ್ ಇನ್ ಮಾಡುವ ಮೂಲಕ ನೀವಿದನ್ನು ಡೌನ್‌ಲೋಡ್ ಮಾಡಬಹುದು. 
  • ಹಂತ 3 - ವಿವಿಧ ಪಾವತಿಗಳು ಮತ್ತು ಇನ್ವೆಸ್ಟ್‌ಮೆಂಟ್‌ಗಳಿಗೆ ಸಂಬಂಧಿಸಿದ ಡೇಟಾವನ್ನು ಸಂಗ್ರಹಿಸಿ ಮತ್ತು ಅನ್ವಯವಾಗುವ ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 80C ಮತ್ತು 80D ಅಡಿಯಲ್ಲಿ, ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಿ. 
  • ಹಂತ 4 - ಫಾರ್ಮ್-16 ಇಲ್ಲದೆ ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಹೇಗೆ ಫೈಲ್ ಮಾಡುವುದು ಎಂಬ ಪ್ರಕ್ರಿಯೆಯ ಮುಂದಿನ ಹಂತವು, ಮನೆ ಬಾಡಿಗೆ ಭತ್ಯೆ (ಹೌಸ್ ರೆಂಟ್ ಅಲೋವೆನ್ಸ್ - ಹೆಚ್.ಆರ್.ಎ) ಮತ್ತು ಇತರ ಭತ್ಯೆಗಳನ್ನು ನೀವೇ ಕ್ಯಾಲ್ಕುಲೇಟ್ ಮಾಡುವುದು ಮತ್ತು ಕ್ಲೈಮ್ ಮಾಡುವುದನ್ನು ಒಳಗೊಂಡಿರುತ್ತದೆ.
  • ಹಂತ 5 - ಡಿಡಕ್ಷನ್ ಮತ್ತು ಕ್ಲೈಮ್ ಅನ್ನು ನಿರ್ಧರಿಸಿದ ನಂತರ, ಒಟ್ಟು ಟ್ಯಾಕ್ಸೇಬಲ್ ಇನ್ಕಮ್ ಅನ್ನು ಕ್ಯಾಲ್ಕುಲೇಟ್ ಮಾಡಬೇಕು. ಒಟ್ಟು ಇನ್ಕಮ್‌ನಿಂದ (ಆಯಾ ಹಣಕಾಸು ವರ್ಷದಲ್ಲಿ ಗಳಿಸಿದ) ಒಟ್ಟು ಡಿಡಕ್ಷನ್‌ಗಳನ್ನು (ಕ್ಲೈಮ್ ಮಾಡಬೇಕಾದ) ಕಳೆಯುವ ಮೂಲಕ, ನೀವು ಒಟ್ಟು ಟ್ಯಾಕ್ಸೇಬಲ್ ಮೊತ್ತವನ್ನು ಕ್ಯಾಲ್ಕುಲೇಟ್ ಮಾಡಬಹುದು. 
  • ಹಂತ 6 - ಮುಂದೆ, ಅನ್ವಯವಾಗುವ ಸ್ಲ್ಯಾಬ್ ದರಕ್ಕೆ ಟ್ಯಾಕ್ಸ್ ಲಯಬಿಲಿಟಿಯನ್ನು ಕ್ಯಾಲ್ಕುಲೇಟ್ ಮಾಡಿ. 
  • ಹಂತ 7 - ಪಾವತಿಸಬೇಕಾದ ಟ್ಯಾಕ್ಸ್ ಅನ್ನು ಕ್ಯಾಲ್ಕುಲೇಟ್ ಮಾಡಿ.
  • ಹಂತ 8 - ನೀವು ಮೇಲೆ ತಿಳಿಸಿದ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ ನಂತರ, ನೀವು ಆಫೀಷಿಯಲ್ ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಬಹುದು.
  • ಹಂತ 9 - ಫಾರ್ಮ್-16 ಇಲ್ಲದೆಯೇ ಐಟಿಆರ್ ರಿಟರ್ನ್ಸ್ ಫೈಲ್ ಮಾಡಿ.
  • ಹಂತ 10 - ಒಮ್ಮೆ ನೀವು ಐಟಿಆರ್ ಫೈಲ್ ಮಾಡುವುದನ್ನು ಪೂರ್ಣಗೊಳಿಸಿದ ನಂತರ, ನೀವದನ್ನು ಇ-ವೆರಿಫೈ ಮಾಡಬೇಕಾಗುತ್ತದೆ.

ನೀವು ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರೆ ಮತ್ತು ಇ-ವೆರಿಫಿಕೇಶನ್ ಅನ್ನು ಮಾಡದಿದ್ದರೆ, ಸಬ್ಮಿಶನ್ ಪ್ರಾರಂಭವಾಗುವುದಿಲ್ಲ.

ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಅನ್ನು ಫೈಲ್ ಮಾಡುವುದರ ಪ್ರಯೋಜನಗಳೇನು?

ಇನ್ಕಮ್ ಟ್ಯಾಕ್ಸ್ ಎನ್ನುವುದು ನೀವು ಪಾವತಿಸುವ ಹಣ/ಮೊತ್ತವಾಗಿದ್ದು, ಅದೊಂದು ವರವಾಗಿದೆ. ಹಾಗೂ ಹೆಚ್ಚು ಏಕರೂಪತೆಯೊಂದಿಗೆ ರಾಷ್ಟ್ರದ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. 

ಅಲ್ಲದೇ, ಐಟಿ ರಿಟರ್ನ್ಸ್ ಫೈಲ್ ಮಾಡುವ ಮೂಲಕ ನೀವು ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಓದನ್ನು ಮುಂದುವರಿಸಿ!

  • ತೊಂದರೆ-ಮುಕ್ತ ಲೋನ್ ಅಪ್ರುವಲ್ - ಐಟಿ ರಿಟರ್ನ್‌ಗಳನ್ನು ಫೈಲ್ ಮಾಡುವುದರಿಂದ ನಿಮಗೆ ಟು ವೀಲರ್ ಅಥವಾ ಫೋರ್ ವೀಲರ್ ಲೋನ್‌ಗಳು, ಬಿಸಿನೆಸ್ ಲೋನ್‌ಗಳು ಮುಂತಾದ ವಿವಿಧ ಹಣಕಾಸು ಪ್ರಾಡಕ್ಟ್‌ಗಳ ಮೇಲೆ ಸುಲಭವಾಗಿ ಅಪ್ರುವಲ್ ಪಡೆಯಲು ಸಹಾಯ ಆಗುತ್ತದೆ. ಪ್ರಮುಖ ಫೈನಾನ್ಸಿಯಲ್ ಇನ್ಸ್ಟಿಟ್ಯೂಷನ್‌ಗಳು ನಿಮ್ಮ ಡಾಕ್ಯುಮೆಂಟುಗಳನ್ನು ವೆರಿಫಿಕೇಶನ್ ಮಾಡುವಾಗ ಐಟಿ ರಿಟರ್ನ್ಸ್‌ನ ಕಾಪಿಯನ್ನು ಕೇಳಬಹುದು.

  • ಫಾಸ್ಟ್ ವೀಸಾ ಪ್ರೊಸೆಸಿಂಗ್ - ನೀವು ವಿದೇಶಕ್ಕೆ ಟ್ರಾವೆಲ್ ಮಾಡಲು ಸಿದ್ಧರಿದ್ದರೆ, ವಿದೇಶಿ ಕಾನ್ಸ್ಯುಲೇಟ್ ನಿಮ್ಮನ್ನು ಇಂಟರ್ವ್ಯೂ ಸಮಯದಲ್ಲಿ ಹಿಂದಿನ ಎರಡು ವರ್ಷಗಳ ಐಟಿಆರ್ ರಿಸಿಪ್ಟ್‌ಗಳನ್ನು ಕೇಳುತ್ತದೆ. ಇದಲ್ಲದೆ, ಕೆಲವು ಎಂಬೆಸಿಗಳು ಹಿಂದಿನ ಮೂರು ವರ್ಷಗಳ ಐಟಿ ರಿಟರ್ನ್‌ಗಳನ್ನು ನೀಡುವಂತೆ ಕೇಳುತ್ತವೆ. ಆದ್ದರಿಂದ, ಐಟಿ ರಿಟರ್ನ್‌ಗಾಗಿ ಫೈಲ್ ಮಾಡುವುದರಿಂದ ಯಾವುದೇ ತೊಂದರೆಯಿಲ್ಲದೆ ವೇಗವಾಗಿ ವೀಸಾ ಪ್ರಕ್ರಿಯೆಗೆ ಅನುಕೂಲವಾಗುತ್ತದೆ.

  • ಇನ್ಕಮ್ ಮತ್ತು ಅಡ್ರೆಸ್ ಪ್ರೂಫ್ - ಐಟಿ ರಿಟರ್ನ್ ಅನ್ನು ಫೈಲ್ ಮಾಡುವ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ, ಕೆಲವೊಮ್ಮೆ ಇದು ಅಡ್ರೆಸ್ ಪ್ರೂಫ್ ಆಗಿಯೂ ಕೆಲಸ ಮಾಡುತ್ತದೆ. 

  • ಪೆನಲ್ಟಿಯನ್ನು ತಪ್ಪಿಸಿ - ನೀವು ಐಟಿ ರಿಟರ್ನ್ ಅನ್ನು ಫೈಲ್ ಮಾಡುವುದು ಬಾಕಿಯಿದ್ದು ನೀವಿನ್ನೂ ಫೈಲ್ ಮಾಡಿರದಿದ್ದರೆ, ನಿಮ್ಮ ಇನ್ಕಮ್ ಅನ್ನು ಅವಲಂಬಿಸಿ ನೀವು ₹5000 ಅಥವಾ ₹1000 ಗಳ ಭಾರೀ ಪೆನಲ್ಟಿಯನ್ನು ಅನುಭವಿಸಬಹುದು. ಆದ್ದರಿಂದ, ನಿಗದಿತ ದಿನಾಂಕದೊಳಗೆ ಐಟಿ ರಿಟರ್ನ್ಸ್ ಫೈಲ್ ಮಾಡುವುದರಿಂದ, ನೀವು ಗಣನೀಯ ಮೊತ್ತವನ್ನು ಉಳಿಸಬಹುದು 

  • ಟ್ಯಾಕ್ಸ್ ರಿಫಂಡ್ ಪಡೆಯಿರಿ - ನಿಮ್ಮ ನಿಜವಾದ ಟ್ಯಾಕ್ಸ್ ಲಯಬಿಲಿಟಿಗಿಂತ ಹೆಚ್ಚಿನ ಹಣವನ್ನು ನೀವು ಪಾವತಿಸಿದ್ದರೆ, ನೀವು ರಿಫಂಡ್ ಅನ್ನು ಕ್ಲೈಮ್ ಮಾಡಬಹುದು.

  • ಕ್ಯಾರಿ ಫಾರ್ವರ್ಡ್ ನಷ್ಟಗಳು - ನೀವು ಐಟಿ ರಿಟರ್ನ್ ಅನ್ನು ಫೈಲ್ ಮಾಡದ ಹೊರತು ಪ್ರಸ್ತುತ ಹಣಕಾಸು ವರ್ಷದ ಕ್ಯಾಪಿಟಲ್ ನಷ್ಟ ಮತ್ತು ಬಿಸಿನೆಸ್ ನಷ್ಟಗಳನ್ನು ಮುಂದಿನ ಹಣಕಾಸು ವರ್ಷಕ್ಕೆ ಕ್ಯಾರಿ ಫಾರ್ವರ್ಡ್ ಮಾಡಲು ಸಾಧ್ಯವಿಲ್ಲ. ಆದ್ದರಿಂದ, ನಿಗದಿತ ದಿನಾಂಕದೊಳಗೆ ಅದೇ ರೀತಿ ಮಾಡುವುದು ಕಡ್ಡಾಯವಾಗಿದೆ. 

ನೀವು ಇನ್ಕಮ್ ಟ್ಯಾಕ್ಸ್ ಅನ್ನು ಫೈಲ್ ಮಾಡದಿದ್ದರೆ ಏನು ಮಾಡಬೇಕು?

ನಿಮ್ಮ ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಫೈಲ್ ಮಾಡದೇ ಇರುವುದಕ್ಕಾಗಿ ನೀವು ಸೆಕ್ಷನ್ 142(1) ಅಡಿಯಲ್ಲಿ ನೋಟಿಸ್ ಪಡೆಯಬಹುದು. ನೀವು ನೋಟಿಸ್‌ಗೆ ಉತ್ತರಿಸಬಹುದು ಮತ್ತು ನಿಮ್ಮ ಐಟಿಆರ್ ಅನ್ನು ಫೈಲ್ ಮಾಡಬಹುದು. ಅದರ ಹೊರತಾಗಿ, ನಿಮ್ಮ ರಿಟರ್ನ್ ಅನ್ನು ಫೈಲ್ ಮಾಡದೇ ಇದ್ದಿದ್ದಕ್ಕಾಗಿ, ನೀವು ಪೆನಲ್ಟಿಯನ್ನು ಪಾವತಿಸಬೇಕಾಗಬಹುದು. 

[ಮೂಲ]

ಇನ್ಕಮ್ ಟ್ಯಾಕ್ಸ್ ಅನ್ನು ಫೈಲ್ ಮಾಡದಿರುವುದಕ್ಕೆ ವಿಧಿಸುವ ಪೆನಲ್ಟಿ ಎಷ್ಟು?

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 234F ಪ್ರಕಾರ, 2018-19ರ ಹಣಕಾಸು ವರ್ಷದಿಂದ, ಐಟಿ ರಿಟರ್ನ್ಸ್ ಫೈಲ್ ಮಾಡಲು ಲೇಟ್ ಪೆನಲ್ಟಿ ಫೀಸ್ ಅನ್ನು ವಿಧಿಸಲಾಗುತ್ತದೆ. ನೀವು ನಿಗದಿತ ದಿನಾಂಕದ ನಂತರ ಆದರೆ ಮೌಲ್ಯಮಾಪನ ವರ್ಷದ ಡಿಸೆಂಬರ್ 31 ರ ಮೊದಲು IT ರಿಟರ್ನ್ ಅನ್ನು ಫೈಲ್ ಮಾಡಿದರೆ, ನೀವು ₹5000 ಲೇಟ್ ಫೈನ್ ಅನ್ನು ಪಾವತಿಸಬೇಕಾಗುತ್ತದೆ. ಆ ಮೌಲ್ಯಮಾಪನ ವರ್ಷದ ಡಿಸೆಂಬರ್ 31 ರ ನಂತರ ನೀವು ಪಾವತಿಸಿದರೆ, ಪೆನಲ್ಟಿಯು ₹10000 ಆಗಿರುತ್ತದೆ. ಆದಾಗ್ಯೂ, ನಿಮ್ಮ ಇನ್ಕಮ್ ₹ 5 ಲಕ್ಷಗಳನ್ನು ಮೀರದಿದ್ದರೆ ಲೇಟ್ ಫೀಸ್, ₹1000 ಗಳನ್ನು ಮೀರುವುದಿಲ್ಲ. 

ಮೇಲೆ ತಿಳಿಸಲಾದ ಐಟಿ ರಿಟರ್ನ್ ಅನ್ನು ಹೇಗೆ ಫೈಲ್ ಮಾಡುವುದು, ಐಟಿ ರಿಟರ್ನ್ ಫೈಲ್ ಮಾಡುವ ಪ್ರಯೋಜನಗಳು, ಅಗತ್ಯ ಡಾಕ್ಯುಮೆಂಟುಗಳು, ರಿಟರ್ನ್‌ಗಳನ್ನು ಫೈಲ್ ಮಾಡುವ ಡ್ಯೂ ಡೇಟ್ ಇತ್ಯಾದಿಗಳ ಕುರಿತು ಈ ಬರಹ ವಿಸ್ತಾರವಾಗಿ ಮಾತನಾಡುತ್ತದೆ. ವಿವರಗಳನ್ನು ಸಂಪೂರ್ಣವಾಗಿ ಓದಿ ಮತ್ತು ಅದರ ಅಡಿಯಲ್ಲಿ ನೀಡಲಾಗುವ ಗಮನಾರ್ಹ ಪ್ರಯೋಜನಗಳನ್ನು ಪಡೆಯಲು, ಡೆಡ್‌ಲೈನ್‌ಗೂ ಮೊದಲು ಐಟಿ ರಿಟರ್ನ್ ಅನ್ನು ಫೈಲ್ ಮಾಡಿ.

[ಮೂಲ]

ಪದೇ ಪದೇ ಕೇಳಲಾದ ಪ್ರಶ್ನೆಗಳು

ರಿಟರ್ನ್‌ಗಳನ್ನು ಇ-ವೆರಿಫೈ ಮಾಡುವುದು ಕಡ್ಡಾಯವೇ?

ಇಲ್ಲ, ನಿಮ್ಮ ರಿಟರ್ನ್‌ಗಳನ್ನು ಇ-ವೆರಿಫೈ ಮಾಡುವುದು ಕಡ್ಡಾಯವಲ್ಲ. ನೀವು ಐಟಿಆರ್-V ನ ಕಾಪಿಯನ್ನು ಸಹಿ ಮಾಡಿ ಮತ್ತದನ್ನು ವೆರಿಫಿಕೇಶನ್‌ಗಾಗಿ ಸಿಪಿಸಿ ಬೆಂಗಳೂರಿಗೆ ಭೌತಿಕವಾಗಿ ಕಳುಹಿಸಬಹುದು. 

[ಮೂಲ]

ಐಟಿ ರಿಟರ್ನ್ ಅನ್ನು ಮ್ಯಾನುವಲ್ ಆಗಿ ಫೈಲ್ ಮಾಡಲು ಸಾಧ್ಯವೇ?

ಹೌದು, ಐಟಿ ರಿಟರ್ನ್ ಅನ್ನು ಮ್ಯಾನುವಲ್ ಆಗಿ ಫೈಲ್ ಮಾಡಲು ಸಾಧ್ಯವಿದೆ. 

[ಮೂಲ]

ರಿಟರ್ನ್‌ಗಳನ್ನು ಇ-ವೆರಿಫೈ ಮಾಡಬೇಕಾದ ಯಾವುದಾದರೂ ನಿರ್ದಿಷ್ಟಪಡಿಸಿದ ದಿನಗಳು ಇವೆಯೇ?

ಹೌದು, ಫೈಲ್ ಮಾಡಿದ 30 ದಿನಗಳ ಒಳಗೆ ರಿಟರ್ನ್‌ಗಳನ್ನು ಇ-ವೆರಿಫೈ ಮಾಡಬೇಕು. 

[ಮೂಲ]