ಇನ್ಕಮ್ ಟ್ಯಾಕ್ಸ್ ರಿಟರ್ನ್ ಎನ್ನುವುದು ಒಂದು ಫಾರ್ಮ್ ಆಗಿದ್ದು, ಇದು ಫಾರ್ಮ್‌ನ ಕೆಟಗರಿ ಮತ್ತು ಡಿಮ್ಯಾಂಡ್‌ನ ಪ್ರಕಾರ ಟ್ಯಾಕ್ಸ್ ಪೇಯರ್‌ಗಳ ಟ್ಯಾಕ್ಸ್ ಲಯಬಿಲಿಟಿಗಳನ್ನು ಮತ್ತು ಡಿಡಕ್ಷನ್‌ಗಳನ್ನು ತಿಳಿಸುತ್ತದೆ. ಐಟಿಆರ್-1 ಮತ್ತು ಐಟಿಆರ್-7 ನಂತಹ ವಿವಿಧ ಐಟಿಆರ್ ಫಾರ್ಮ್‌ಗಳಿವೆ.
ಒಬ್ಬ ವ್ಯಕ್ತಿಯು ಆಯಾ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಅದನ್ನು ಐಟಿ ಡಿಪಾರ್ಟ್‌ಮೆಂಟ್‌ಗೆ ಸಬ್ಮಿಟ್ ಮಾಡಿದರೆ, ಅವಳು/ಅವನು ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಫೈಲ್ ಮಾಡಿದರು ಎಂದರ್ಥ. ಆದರೆ ಹೇಗೆ? ಈ ಪ್ರಕ್ರಿಯೆಯ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ.
ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್ ವಿಧಾನಗಳ ಮೂಲಕ ಫೈಲ್ ಮಾಡಬಹುದು. ನಾವು ಮೊದಲು ಆನ್‌ಲೈನ್ ಐಟಿ ರಿಟರ್ನ್ ಫೈಲಿಂಗ್ ವಿಧಾನದೊಂದಿಗೆ ಪ್ರಾರಂಭಿಸೋಣ.
ಆನ್‌ಲೈನ್‌ನಲ್ಲಿ ಐಟಿ ರಿಟರ್ನ್ ಫೈಲ್ ಮಾಡುವ ಹಂತ- ಹಂತವಾದ ಪ್ರಕ್ರಿಯೆ
- ಹಂತ 1 - ಇನ್ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ನ ಆಫೀಷಿಯಲ್ ಪೋರ್ಟಲ್‌ಗೆ ಭೇಟಿ ನೀಡಿ.
- ಹಂತ 2 - ನಿಮ್ಮ ಯೂಸರ್ ಐಡಿ ಆಗಿರುವ ಪ್ಯಾನ್ ನೊಂದಿಗೆ ರಿಜಿಸ್ಟರ್ ಮಾಡಿ. ರಿಜಿಸ್ಟರ್ಡ್ ಯೂಸರ್‌ಗಳು ‘ಇಲ್ಲಿ ಲಾಗಿನ್ ಮಾಡಿ’ ಆಯ್ಕೆಯ ಮೇಲೆ ಕ್ಲಿಕ್ ಮಾಡಬಹುದು.
- ಹಂತ 3 - ಇ-ಫೈಲ್‌ಗೆ ನ್ಯಾವಿಗೇಟ್ ಮಾಡಿ ಮತ್ತು 'ಇನ್ಕಮ್ ಟ್ಯಾಕ್ಸ್ ರಿಟರ್ನ್' ಮೇಲೆ ಕ್ಲಿಕ್ ಮಾಡಿ.
- ಹಂತ 4 - ಡ್ರಾಪ್-ಡೌನ್ ಮೆನುವಿನಿಂದ, ಐಟಿಆರ್ ಫಾರ್ಮ್ ನಂಬರ್ ಮತ್ತು ಮೌಲ್ಯಮಾಪನ ವರ್ಷವನ್ನು ಆಯ್ಕೆಮಾಡಿ. ನೀವು ಫೈಲಿಂಗ್ ವಿಧವಾಗಿ "ಒರಿಜಿನಲ್/ರಿವೈಸ್ಡ್ ರಿಟರ್ನ್" ಅನ್ನು ಆಯ್ಕೆ ಮಾಡಬೇಕು ಮತ್ತು ಸಬ್ಮಿಶನ್ ಮೋಡ್ ಆಗಿ 'ಪ್ರಿಪೇರ್ ಮಾಡಿ ಮತ್ತು ಆನ್‌ಲೈನ್‌ನಲ್ಲಿ ಸಬ್ಮಿಟ್ ಮಾಡಿ' ಅನ್ನು ಆಯ್ಕೆ ಮಾಡಬೇಕು.
- ಹಂತ 5 - ‘ಮುಂದುವರೆಯಿರಿ.’ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಹಂತ 6 - ಆ ಐಟಿಆರ್ ಫಾರ್ಮ್‌ನಲ್ಲಿ ಬೇಡಿಕೆಯಿರುವ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
- ಹಂತ 7 - ಪಾವತಿಸಬೇಕಾದ ಟ್ಯಾಕ್ಸ್ ಅನ್ನು ಕ್ಯಾಲ್ಕುಲೇಟ್ ಮಾಡಿ.
- ಹಂತ 8 - 'ಟ್ಯಾಕ್ಸ್‌ಗಳ ಪಾವತಿ ಮತ್ತು ವೆರಿಫಿಕೇಶನ್' ಟ್ಯಾಬ್‌ನಿಂದ, ಸೂಕ್ತವಾದ ಆಯ್ಕೆಯನ್ನು ಆಯ್ಕೆಮಾಡಿ.
- ಹಂತ 9 - ನಂತರ, 'ಪ್ರಿವ್ಯೂ ಮತ್ತು ಸಬ್ಮಿಟ್ ಮಾಡಿ' ಆಯ್ಕೆಯನ್ನು ಆಯ್ಕೆಮಾಡಿ.
- ಹಂತ 10 - ಆಧಾರ್ ಒಟಿಪಿ, ಎಲೆಕ್ಟ್ರಾನಿಕ್ ವೆರಿಫಿಕೇಶನ್ ಕೋಡ್ (ಇವಿಸಿ) ಮೂಲಕ ಬ್ಯಾಂಕ್ ಅಕೌಂಟ್, ಬ್ಯಾಂಕ್ ಎಟಿಎಂ, ಡಿಮ್ಯಾಟ್ ಅಕೌಂಟ್‌ನ ವಿವರಗಳ ಮೂಲಕ ಅಥವಾ ಭರ್ತಿ ಮಾಡಿದ ಐಟಿಆರ್-V (ಸ್ಪೀಡ್ ಪೋಸ್ಟ್ ಅಥವಾ ಸಾಮಾನ್ಯ) ಅನ್ನು ಐಟಿ ಡಿಪಾರ್ಟ್‌ಮೆಂಟ್‌ಗೆ ಕಳುಹಿಸುವ ಮೂಲಕ ವೆರಿಫಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
- ಹಂತ 11 - ಫೈನಲ್ ಸಬ್ಮಿಶನ್‌ಗಾಗಿ, ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ಗೆ ಕಳುಹಿಸಲಾದ ಒಟಿಪಿ/ಇವಿಸಿ ಅನ್ನು ಅದರ ವ್ಯಾಲಿಡಿಟಿಯ ಅವಧಿಯೊಳಗೆ ಟೈಪ್ ಮಾಡಿ ಹಾಗೂ ಸಬ್ಮಿಟ್ ಮಾಡಲು, ಅಂತಹ ಸೂಚನೆಗಳನ್ನು ಫಾಲೋ ಮಾಡಿ.
[ಮೂಲ]
ಆನ್‌ಲೈನ್‌ನಲ್ಲಿ ಐಟಿ ರಿಟರ್ನ್‌ಗಳನ್ನು ಫೈಲ್ ಮಾಡಲು ನಿಮಗೆ ಸೂಕ್ತವೆನಿಸದಿದ್ದರೆ, ನೀವು ಸುಲಭವಾಗಿ ಇತರ ಮಾರ್ಗವನ್ನು ಆಯ್ಕೆ ಮಾಡಬಹುದು. ಅದುವೇ ಆಫ್‌ಲೈನ್ ಪ್ರಕ್ರಿಯೆ.
ಐಟಿ ರಿಟರ್ನ್‌ಗಳನ್ನು ಆಫ್‌ಲೈನ್‌ನಲ್ಲಿ ಫೈಲ್ ಮಾಡುವ ಹಂತ- ಹಂತವಾದ ಪ್ರಕ್ರಿಯೆ
ಐಟಿಆರ್ ಅನ್ನು ಹಂತ-ಹಂತವಾಗಿ ಫೈಲ್ ಮಾಡುವುದು ಹೇಗೆ ಎಂಬ ಪ್ರಕ್ರಿಯೆಯು, ಒಬ್ಬ ವ್ಯಕ್ತಿಯು ಅನ್ವಯಿಸುವ ಫಾರ್ಮ್ ಅನ್ನು ಡೌನ್‌ಲೋಡ್ ಮಾಡುವುದನ್ನು, ಕಡ್ಡಾಯ ವಿವರಗಳನ್ನು ಆಫ್‌ಲೈನ್‌ನಲ್ಲಿ ಭರ್ತಿ ಮಾಡುವುದನ್ನು ಮತ್ತು ಹೊಸದಾಗಿ ಜನರೇಟ್ ಮಾಡಿದ ಎಕ್ಸ್ಎಮ್ಎಲ್ ಫೈಲ್ ಅನ್ನು ಸೇವ್ ಮಾಡುವುದನ್ನು ಮತ್ತು ಅಪ್‌ಲೋಡ್ ಮಾಡುವುದನ್ನು ಒಳಗೊಂಡಿರುತ್ತದೆ.
ಆದಾಗ್ಯೂ, ಈ ವಿಧಾನವು ಕೆಳಗಿನ ಐಟಿಆರ್ ಯುಟಿಲಿಟಿಗಳಲ್ಲಿ ಒಂದನ್ನು ಡೌನ್‌ಲೋಡ್ ಮಾಡುವ ಅಗತ್ಯವಿದೆ -
ಎಕ್ಸೆಲ್ ಯುಟಿಲಿಟಿ
ಜಾವಾ ಯುಟಿಲಿಟಿ
ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಆಫ್‌ಲೈನ್‌ನಲ್ಲಿ ಫೈಲ್ ಮಾಡಲು ಕೆಳಗೆ ತಿಳಿಸಲಾದ ಈ ಹಂತಗಳನ್ನು ಫಾಲೋ ಮಾಡಿ.
ಹಂತ 11 - ನಂತರ, ಮೌಲ್ಯಮಾಪನ ವರ್ಷ, ಐಟಿಆರ್ ಫಾರ್ಮ್ ನಂಬರ್‌ನಂತಹ ವಿವರಗಳನ್ನು ಒದಗಿಸಿ. ಮುಂದೆ, ಫೈಲಿಂಗ್ ವಿಧವನ್ನು 'ಒರಿಜಿನಲ್/ರಿವೈಸ್ಡ್' ಫಾರ್ಮ್ ಮತ್ತು 'ಸಬ್ಮಿಶನ್ ಮೋಡ್' ಅನ್ನು ಆಫ್‌ಲೈನ್‌ಗೆ ಸೆಟ್ ಮಾಡಿ.
ಹಂತ 13 - ಐಟಿಆರ್ ಅನ್ನು ವೆರಿಫೈ ಮಾಡಲು, 'ಆಧಾರ್ ಒಟಿಪಿ,' 'ಇವಿಸಿ ಮೂಲಕ ಬ್ಯಾಂಕ್ ಅಕೌಂಟ್ ವಿವರಗಳು,' 'ಡಿಮ್ಯಾಟ್ ಅಕೌಂಟ್ ವಿವರಗಳು,' ಅಥವಾ 'ಡಿಜಿಟಲ್ 'ಸಿಗ್ನೇಚರ್ ಸರ್ಟಿಫಿಕೇಟ್' ನಂತಹ ಯಾವುದಾದರೂ ಆಯ್ಕೆಗಳನ್ನು ಆಯ್ಕೆಮಾಡಿ.
- ಹಂತ 14 - ಆಯ್ಕೆಮಾಡಿದ ವೆರಿಫಿಕೇಶನ್ ಆಪ್ಷನ್ ಅನ್ನು ಆಧರಿಸಿ, ನೀವು ಅಗತ್ಯವಿರುವ ಫೈಲ್ ಅನ್ನು ಅಟ್ಯಾಚ್ ಮಾಡಬೇಕು/ಒದಗಿಸಬೇಕು. ನಿಖರವಾಗಿ,
ನೀವು ಡಿ.ಎಸ್.ಸಿ ಅನ್ನು ವೆರಿಫಿಕೇಶನ್ ಆಪ್ಷನ್ ಆಗಿ ಆಯ್ಕೆ ಮಾಡಿಕೊಂಡರೆ, ಡಿ.ಎಸ್.ಸಿ ಯುಟಿಲಿಟಿಯಿಂದ ರಚಿಸಲಾದ ಸಿಗ್ನೇಚರ್ ಫೈಲ್ ಅನ್ನು ನೀವು ಒದಗಿಸಬೇಕು.
ನೀವು ಆಧಾರ್ ಒನ್-ಟೈಮ್ ಪಾಸ್‌ವರ್ಡ್ (ಒಟಿಪಿ) ಅನ್ನು ವೆರಿಫಿಕೇಶನ್ ಆಪ್ಷನ್ ಆಗಿ ಆಯ್ಕೆ ಮಾಡಿಕೊಂಡರೆ, ನಿಮ್ಮ ಯುಐಡಿಎಐ-ರಿಜಿಸ್ಟರ್ಡ್ ಮೊಬೈಲ್ ನಂಬರ್‌ಗೆ ಕಳುಹಿಸಲಾದ ಒಟಿಪಿ ಅನ್ನು ನೀವು ನೀಡಬೇಕು.
ನೀವು ‘ಬ್ಯಾಂಕ್ ಅಕೌಂಟ್ ಮೂಲಕ ಇವಿಸಿ,’ ‘ಬ್ಯಾಂಕ್ ಎಟಿಎಂ,’ ಅಥವಾ ‘ಡಿಮ್ಯಾಟ್ ಅಕೌಂಟ್' ಅನ್ನು ವೆರಿಫಿಕೇಶನ್ ಆಪ್ಷನ್ ಆಗಿ ಆಯ್ಕೆ ಮಾಡಿಕೊಂಡರೆ, ಬ್ಯಾಂಕ್ ಅಥವಾ ಡಿಮ್ಯಾಟ್ ಅಕೌಂಟ್‌ನೊಂದಿಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ನಂಬರ್‌ಗೆ ಕಳುಹಿಸಿದ ಇವಿಸಿ ನಂಬರ್ ಅನ್ನು ನೀವು ನೀಡಬೇಕು.
ನೀವು ಬೇರೆ ಯಾವುದೇ ವೆರಿಫಿಕೇಶನ್ ಆಪ್ಷನ್ ಆಗಿ ಆಯ್ಕೆ ಮಾಡಿಕೊಂಡರೂ, ಐಟಿಆರ್ ಸಬ್ಮಿಶನ್ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ; ಆದರೆ, ವೆರಿಫಿಕೇಶನ್ ಪೂರ್ಣಗೊಳ್ಳುವವರೆಗೆ ಈ ಪ್ರಕ್ರಿಯೆಯನ್ನು 'ಪೂರ್ಣಗೊಂಡಿದೆ' ಎಂದು ಪರಿಗಣಿಸಲಾಗುವುದಿಲ್ಲ. ಈ ತರ, ನೀವು ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಈ ರೀತಿಯಲ್ಲಿ ಸಬ್ಮಿಟ್ ಮಾಡಬಹುದು.
ಮೈ ಅಕೌಂಟ್ ˃ಇ-ವೆರಿಫೈ ಆಯ್ಕೆಯನ್ನು ಬಳಸಿಕೊಂಡು ವ್ಯಕ್ತಿಗಳು ಸಬ್ಮಿಟ್ ಮಾಡಿದ ಐಟಿಆರ್ ಅನ್ನು ಇ-ವೆರಿಫೈ ಮಾಡಬೇಕಾಗುತ್ತದೆ. ಡಾಕ್ಯುಮೆಂಟ್ ಅನ್ನು ಅದರ ಮೇಲೆ ವ್ಯಕ್ತಿಯ ಸಹಿಯೊಂದಿಗೆ ಐಟಿ ಡಿಪಾರ್ಟ್‌ಮೆಂಟ್‌ಗೆ (ಸಿಪಿಸಿ, ಬೆಂಗಳೂರು) ಕಳುಹಿಸಬೇಕು.
- ಹಂತ 15 - 'ಸಬ್ಮಿಟ್' ಐಟಿಆರ್ ಮೇಲೆ ಕ್ಲಿಕ್ ಮಾಡಿ.