ಸೀನಿಯರ್ ಸಿಟಿಜನ್‌ಗಳಿಗೆ ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್

Digit

No Capping

on Room Rent

Affordable

Premium

24/7

Customer Support

Zero Paperwork. Quick Process.
Your Name
Mobile Number

No Capping

on Room Rent

Affordable

Premium

24/7

Customer Support

ಸೀನಿಯರ್ ಸಿಟಿಜನ್‌ಗಳಿಗೆ ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಹೇಗೆ ಕೆಲಸ ಮಾಡುತ್ತದೆ?

ಸೀನಿಯರ್ ಸಿಟಿಜನ್‌ಗಳು ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಏಕೆ ಪಡೆಯಬೇಕು?

ಹೆಲ್ತ್ ಕೇರ್ ವೆಚ್ಚಗಳ ಹೆಚ್ಚಳ

ಹೆಲ್ತ್ ಕೇರ್ ವೆಚ್ಚಗಳ ಹೆಚ್ಚಳ

ಸಾಮಾನ್ಯ ಜನರಿಗಿಂತ ವಯಸ್ಸಾದ ಪೋಷಕರ ಆರೋಗ್ಯ ವೆಚ್ಚಗಳು 3.8 ಪಟ್ಟು ಹೆಚ್ಚು! ಇದರರ್ಥ ನಿಮ್ಮ ಪೋಷಕರಿಗೆ ಹೆಚ್ಚಿನ ಸಮ್ ಇನ್ಶೂರ್ಡ್ ಅಗತ್ಯವಿದೆ. ನೀವು ಅವುಗಳನ್ನು ಕವರ್ ಮಾಡುವ ಕಾರ್ಪೊರೇಟ್ ಯೋಜನೆಯನ್ನು ಹೊಂದಿದ್ದರೂ, ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಉತ್ತಮ ಕವರೇಜ್‌ಗಾಗಿ ನಿಮ್ಮ ಸಮ್ ಇನ್ಶೂರ್ಡ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಕೈಗೆಟುಕುವ ಪ್ರೀಮಿಯಂನಲ್ಲಿ ಹೆಚ್ಚಿನ ಕವರೇಜ್

ಕೈಗೆಟುಕುವ ಪ್ರೀಮಿಯಂನಲ್ಲಿ ಹೆಚ್ಚಿನ ಕವರೇಜ್

ವಯಸ್ಸಾದವರಿಗೆ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳು ಸಾಮಾನ್ಯವಾಗಿ ಅವರ ವಯಸ್ಸು ಮತ್ತು ಆರೋಗ್ಯದ ಅಪಾಯಗಳ ಕಾರಣದಿಂದಾಗಿ ಹೆಚ್ಚಾಗಿರುತ್ತವೆ. ಆದಾಗ್ಯೂ, ನೀವು ಟಾಪ್-ಅಪ್ ಅನ್ನು ಆಯ್ಕೆ ಮಾಡಬಹುದು. ಇದು ನಿಮಗೆ ವ್ಯಾಪಕವಾದ ಕವರೇಜ್ ನೀಡುತ್ತದೆ ಮತ್ತು ಸಾಮಾನ್ಯ ಹಿರಿಯ ನಾಗರಿಕರ ಹೆಲ್ತ್ ಕೇರ್ ಯೋಜನೆಗಿಂತ ಈ ಯೋಜನೆಯು ಇನ್ನಷ್ಟು ಅಗ್ಗವಾಗಿದೆ. ಸಹಜವಾಗಿ, ನಿಮಗಿರುವ ತೊಂದರೆಯೆಂದರೆ ನೀವು ಮೊದಲು ನಿಮ್ಮ ಜಿ.ಎಮ್.ಸಿ ಅಥವಾ ನಿಮ್ಮ ಸ್ವಂತ ಜೇಬಿನಿಂದ ಕಳೆಯಬಹುದಾದ ಮೊತ್ತವನ್ನು ಕವರ್ ಮಾಡಬೇಕು.

ಹೆಚ್ಚುತ್ತಿರುವ ಆರೋಗ್ಯ ಅಪಾಯಗಳು

ಹೆಚ್ಚುತ್ತಿರುವ ಆರೋಗ್ಯ ಅಪಾಯಗಳು

ದುರದೃಷ್ಟವಶಾತ್, ಜನರಿಗೆ ವಯಸ್ಸಾದಂತೆ - ಅನಾರೋಗ್ಯ ಮತ್ತು ಕಾಯಿಲೆಗಳ ಅಪಾಯಗಳು ಸಹ ಹೆಚ್ಚಾಗುತ್ತವೆ. ಆದ್ದರಿಂದ, ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್‌ನಂತಹ ಕೈಗೆಟುಕುವ ಇನ್ನೂ ಹೆಚ್ಚಿನ ಕವರೇಜ್‌ನೊಂದಿಗೆ, ಆ ಅಪಾಯಗಳ ವಿರುದ್ಧ ನೀವು ಸುರಕ್ಷಿತವಾಗಿರುವುದು ಯಾವಾಗಲೂ ಉತ್ತಮವಾಗಿದೆ

ಹೆಚ್ಚುವರಿ ತೆರಿಗೆ ಉಳಿತಾಯ

ಹೆಚ್ಚುವರಿ ತೆರಿಗೆ ಉಳಿತಾಯ

ಸ್ಟ್ಯಾಂಡರ್ಡ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಂತೆಯೇ, ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಸಹ 25,000 ರೂಪಾಯಿಗಳವರೆಗೆ ತೆರಿಗೆ ಉಳಿತಾಯದೊಂದಿಗೆ ಬರುತ್ತದೆ!

ನಿಮ್ಮ ಹೆಲ್ತ್ ಇನ್ಶೂರೆನ್ಸ್‌ನಲ್ಲಿ ಯಾವ ಅಂಶಗಳು ಉತ್ತಮವಾಗಿದೆ?

  • ಡಿಜಿಟ್ ಒಂದು ಸೂಪರ್ ಟಾಪ್-ಅಪ್ ಯೋಜನೆಯನ್ನು ನೀಡುತ್ತದೆ : ಪಾಲಿಸಿ ವರ್ಷದಲ್ಲಿ ಒಂದೇ ಕ್ಲೈಮ್, ಡಿಡಕ್ಟಿಬಲ್ ಮೊತ್ತವನ್ನು ಮೀರಿದಾಗ ಮಾತ್ರ ನಿಮ್ಮನ್ನು ಕವರ್ ಮಾಡುವ ಇತರ ಸ್ಟ್ಯಾಂಡರ್ಡ್ ಟಾಪ್-ಅಪ್ ಪ್ಲಾನ್ ಗಿಂತ ವಿಭಿನ್ನವಾಗಿ, ಸೂಪರ್-ಟಾಪ್ ಅಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು, ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ಕ್ಲೈಮ್‌ಗಳು ಡಿಡಕ್ಟಿಬಲ್ ಮೊತ್ತವನ್ನು ಮೀರಿದಾಲೂ ಸಹ ಆ ವೆಚ್ಚವನ್ನು ಭರಿಸುತ್ತದೆ.

  • ಸಾಂಕ್ರಾಮಿಕ ರೋಗಗಳನ್ನು ಕವರ್ ಮಾಡುತ್ತದೆ : ಕೋವಿಡ್-19 ನಮ್ಮ ಜೀವನದಲ್ಲಿ ಸಾಕಷ್ಟು ಅನಿಶ್ಚಿತತೆಯನ್ನು ತಂದಿತು ಎನ್ನುವುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಅದಕ್ಕಾಗಿ ನಾವಿದನ್ನು ಕವರ್ ಮಾಡುತ್ತದೆ!
  • ನಿಮ್ಮ ಕಳೆಯಬಹುದಾದ ಮೊತ್ತವನ್ನು ಒಮ್ಮೆ ಮಾತ್ರ ಪಾವತಿಸಿ : ಸೂಪರ್ ಟಾಪ್-ಅಪ್ ಇನ್ಶೂರೆನ್ಸ್‌ನೊಂದಿಗೆ, ನಿಮ್ಮ ಕಳೆಯಬಹುದಾದ ಮೊತ್ತವನ್ನು ನೀವು ಒಮ್ಮೆ ಮಾತ್ರ ಪಾವತಿಸಬೇಕಾಗುತ್ತದೆ. ನಂತರ, ವರ್ಷದಲ್ಲಿ ಅನೇಕ ಬಾರಿ ಕ್ಲೈಮ್ ಮಾಡಬಹುದು. ನಿಜವಾದ ಡಿಜಿಟ್‌ನ ವಿಶೇಷ!

  • ಹೆಲ್ತ್ ಕೇರ್ ಅಗತ್ಯಗಳಿಗೆ ಅನುಗುಣವಾಗಿ ನಿಮ್ಮ ಸೂಪರ್ ಟಾಪ್-ಅಪ್ ಪಾಲಿಸಿಯನ್ನು ಕಸ್ಟಮೈಸ್ ಮಾಡಿ : ನೀವು 1, 2, ಮತ್ತು 3 ಲಕ್ಷಗಳ ಕಡಿತಗಳಿಂದ ಆಯ್ಕೆ ಮಾಡಬಹುದು ಮತ್ತು ನಿಮ್ಮ ಸಮ್ ಇನ್ಶೂರ್ಡ್ ಆಗಿ ₹10 ಲಕ್ಷದಿಂದ 20 ಲಕ್ಷಗಳ ನಡುವೆ ಆಯ್ಕೆ ಮಾಡಬಹುದು.
  • ಕೊಠಡಿ ಬಾಡಿಗೆಗೆ ಯಾವುದೇ ನಿರ್ಬಂಧವಿಲ್ಲ : ಪ್ರತಿಯೊಬ್ಬರೂ ವಿಭಿನ್ನ ಆದ್ಯತೆಗಳನ್ನು ಹೊಂದಿದ್ದಾರೆ ಮತ್ತು ನಾವದನ್ನು ಅರ್ಥಮಾಡಿಕೊಳ್ಳುತ್ತೇವೆ. ಅದಕ್ಕಾಗಿಯೇ, ನಾವು ಹಿರಿಯ ನಾಗರಿಕರಿಗಾಗಿ ಯಾವುದೇ ಕೊಠಡಿ ಬಾಡಿಗೆ ನಿರ್ಬಂಧಗಳನ್ನು ಹೊಂದಿಲ್ಲ! ನೀವು ಇಷ್ಟಪಡುವ ಯಾವುದೇ ಆಸ್ಪತ್ರೆಯ ಕೊಠಡಿಯನ್ನು ಆಯ್ಕೆ ಮಾಡಿಕೊಳ್ಳಿ! 

  • ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ : ಕ್ಯಾಶ್‌ಲೆಸ್ ಕ್ಲೈಮ್‌ಗಳಿಗಾಗಿ ಭಾರತದಲ್ಲಿನ ನಮ್ಮ 16400+ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಒಂದನ್ನು ಆಯ್ಕೆಮಾಡಿ ಅಥವಾ ನೀವು ರಿಇಂಬರ್ಸ್‌ಮೆಂಟ್‌ ಅನ್ನು ಸಹ ಆಯ್ಕೆ ಮಾಡಿಕೊಳ್ಳಬಹುದು.
  • ಸುಲಭವಾದ ಆನ್‌ಲೈನ್ ಪ್ರಕ್ರಿಯೆಗಳು : ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವ ಪ್ರಕ್ರಿಯೆಯಿಂದ ಹಿಡಿದು ನೀವು ಕ್ಲೈಮ್ ಮಾಡುವವರೆಗಿನ ಎಲ್ಲಾ ಪ್ರಕ್ರಿಯೆಗಳು ಕಾಗದರಹಿತ, ಸುಲಭ, ತ್ವರಿತ ಮತ್ತು ತೊಂದರೆ ಮುಕ್ತವಾಗಿರುತ್ತವೆ! ಕ್ಲೈಮ್‌ಗಳಿಗೂ ಸಹ ಯಾವುದೇ ಹಾರ್ಡ್ ಕಾಪಿಗಳ ಅಗತ್ಯವಿಲ್ಲ!

ಒಂದು ಉದಾಹರಣೆಯೊಂದಿಗೆ ಸೂಪರ್ ಟಾಪ್-ಅಪ್ ಅನ್ನು ಅರ್ಥಮಾಡಿಕೊಳ್ಳಿ

ಸೂಪರ್ ಟಾಪ್-ಅಪ್ ಇನ್ಶೂರೆನ್ಸ್ (ಡಿಜಿಟ್ ಹೆಲ್ತ್ ಕೇರ್ ಪ್ಲಸ್) ಇತರೆ ಟಾಪ್-ಅಪ್ ಯೋಜನೆಗಳು
ಆಯ್ಕೆ ಮಾಡಿದ ಡಿಡಕ್ಟಿಬಲ್ 2 ಲಕ್ಷಗಳು 2 ಲಕ್ಷಗಳು
ಆಯ್ಕೆ ಮಾಡಿದ ಇನ್ಶೂರೆನ್ಸ್ ಮೊತ್ತ 10 ಲಕ್ಷಗಳು 10 ಲಕ್ಷಗಳು
ವರ್ಷದ 1ನೇ ಕ್ಲೈಮ್ 4 ಲಕ್ಷಗಳು 4 ಲಕ್ಷಗಳು
ನೀವು ಪಾವತಿಸುವುದು 2 ಲಕ್ಷಗಳು 2 ಲಕ್ಷಗಳು
ನಿಮ್ಮ ಟಾಪ್-ಅಪ್ ಇನ್ಶೂರರ್ ಪಾವತಿಸುವುದು 2 ಲಕ್ಷಗಳು 2 ಲಕ್ಷಗಳು
ವರ್ಷದ 2ನೇ ಕ್ಲೈಮ್ 6 ಲಕ್ಷಗಳು 6 ಲಕ್ಷಗಳು
ನೀವು ಪಾವತಿಸುವುದು ಏನನ್ನೂ ಪಾವತಿಸುವುದಿಲ್ಲ! 😊 2 ಲಕ್ಷಗಳು (ಆಯ್ಕೆ ಮಾಡಿದ ಡಿಡಕ್ಟಿಬಲ್)
ನಿಮ್ಮ ಟಾಪ್-ಅಪ್ ಇನ್ಶೂರರ್ ಪಾವತಿಸುವುದು 6 ಲಕ್ಷಗಳು 4 ಲಕ್ಷಗಳು
ವರ್ಷದ 3ನೇ ಕ್ಲೈಮ್ 1 ಲಕ್ಷ 1 ಲಕ್ಷ
ನೀವು ಪಾವತಿಸುವುದು ಏನನ್ನೂ ಪಾವತಿಸುವುದಿಲ್ಲ! 😊 1 ಲಕ್ಷ
ನಿಮ್ಮ ಟಾಪ್-ಅಪ್ ಇನ್ಶೂರರ್ ಪಾವತಿಸುವುದು 1 ಲಕ್ಷ ಏನನ್ನೂ ಪಾವತಿಸುವುದಿಲ್ಲ ☹

ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಏನೆಲ್ಲಾ ಕವರ್ ಮಾಡುತ್ತದೆ?

ನಿಮ್ಮ ಡಿಡಕ್ಟಿಬಲ್ ಮೊತ್ತವನ್ನು ಒಮ್ಮೆ ಮಾತ್ರ ಪಾವತಿಸಿ- ಡಿಜಿಟ್ ವಿಶೇಷ
4 ವರ್ಷಗಳು / 2 ವರ್ಷಗಳು
ನೋ ರೂಮ್ ರೆಂಟ್ ಕ್ಯಾಪಿಂಗ್ - ಡಿಜಿಟ್ ವಿಶೇಷ
ಮಿತಿ ಇಲ್ಲ

ಏನೆಲ್ಲಾ ಕವರ್ ಮಾಡುವುದಿಲ್ಲ?

ನಿಮ್ಮ ಡಿಡಕ್ಟಿಬಲ್ ಮೊತ್ತವನ್ನು ನೀವು ಖಾಲಿ ಮಾಡುವವರೆಗೆ ನೀವು ಕ್ಲೈಮ್ ಮಾಡಲು ಸಾಧ್ಯವಿಲ್ಲ

ಅಸ್ತಿತ್ವದಲ್ಲಿರುವ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಕ್ಲೈಮ್ ಮೊತ್ತವನ್ನು ನೀವು ಈಗಾಗಲೇ ಮುಗಿಸಿದ್ದರೆ ಆಗಷ್ಟೇ ನೀವು ನಿಮ್ಮ ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿ ಕ್ಲೈಮ್ ಮಾಡಬಹುದು. ಅಥವಾ ನೀವು ಈಗಾಗಲೇ ನಿಮ್ಮ ಜೇಬಿನಿಂದ ನಿಮ್ಮ ಡಿಡಕ್ಟಿಬಲ್ ಮೊತ್ತವನ್ನು ಖರ್ಚು ಮಾಡಿದ್ದರೆ, ಆಗ ಮಾತ್ರ ನಿಮ್ಮ ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿ ಕ್ಲೈಮ್ ಮಾಡಬಹುದು. ಹಾಗಿದ್ದರೂ, ಖುಷಿಯ ವಿಷಯವೇನೆಂದರೆ, ನೀವು ಒಮ್ಮೆ ಮಾತ್ರ ನಿಮ್ಮ ಡಿಡಕ್ಟಿಬಲ್ ಮೊತ್ತವನ್ನು ಪಾವತಿಸುತ್ತೀರಿ.

ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳು

ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಯ ಸಂದರ್ಭದಲ್ಲಿ, ವೇಟಿಂಗ್ ಪೀರಿಯಡ್ ಮುಗಿಯದ ಹೊರತು, ಆ ಕಾಯಿಲೆ ಅಥವಾ ಅನಾರೋಗ್ಯದ ಬಗ್ಗೆ ಕ್ಲೈಮ್ ಮಾಡಲು ಸಾಧ್ಯವಿಲ್ಲ.

ವೈದ್ಯರ ಶಿಫಾರಸು ಇಲ್ಲದೆ ಹಾಸ್ಪಿಟಲೈಸೇಷನ್

ನೀವು ಹಾಸ್ಪಿಟಲೈಸೇಷನ್ ಯಾವುದೇ ಸ್ಥಿತಿಯು, ವೈದ್ಯರ ಪ್ರಿಸ್ಕ್ರಿಪ್ಷನ್‌ಗೆ ಹೊಂದಿಕೆಯಾಗದೇ ಇದ್ದರೆ, ಅದನ್ನು ಪಾಲಿಸಿಯು ಕವರ್ ಮಾಡುವುದಿಲ್ಲ.

ಪ್ರೀ-ನೇಟಲ್ ಮತ್ತು ಪೋಸ್ಟ್ ನೇಟಲ್ ವೆಚ್ಚಗಳು

ವೆಚ್ಚಗಳು ಆಸ್ಪತ್ರೆಗೆ ದಾಖಲಾಗದ ಹೊರತು, ಪ್ರೀ-ನೇಟಲ್ ಮತ್ತು ಪೋಸ್ಟ್ ನೇಟಲ್ ಮೆಡಿಕಲ್ ವೆಚ್ಚಗಳನ್ನು ಪಾಲಿಸಿಯು ಕವರ್ ಮಾಡುವುದಿಲ್ಲ.

ಕ್ಲೈಮ್ ಸಲ್ಲಿಸುವುದು ಹೇಗೆ?

  • ರಿಇಂಬರ್ಸ್‌ಮೆಂಟ್‌ ಕ್ಲೈಮ್‌ಗಳು - ಹಾಸ್ಪಿಟಲೈಸೇಷನ್ ಎರಡು ದಿನಗಳಲ್ಲಿ 1800-258-4242 ಸಂಖ್ಯೆಗೆ ಕರೆ ಮಾಡಿ ನಮಗೆ ವಿಷಯ ತಿಳಿಸಿ ಅಥವಾ healthclaims@godigit.com ಗೆ ಇಮೇಲ್ ಮಾಡಿ ನಮಗೆ ಮಾಹಿತಿ ನೀಡಿ. ನಾವು ನಿಮಗೊಂದು ಲಿಂಕ್ ಕಳುಹಿಸುತ್ತೇವೆ. ಆ ಲಿಂಕ್‌ನಲ್ಲಿ ನಿಮ್ಮ ಆಸ್ಪತ್ರೆಯ ಬಿಲ್‌ಗಳನ್ನು ಹಾಗೂ ಸಂಬಂಧಿತ ಎಲ್ಲ ಡಾಕ್ಯುಮೆಂಟುಗಳನ್ನು ರಿಇಂಬರ್ಸ್‌ಮೆಂಟ್‌ ಪ್ರಕ್ರಿಯೆಗಾಗಿ ನೀವು ಅಪ್‌ಲೋಡ್ ಮಾಡಬಹುದು. 

  • ಕ್ಯಾಶ್‌ಲೆಸ್ ಕ್ಲೈಮ್‌ಗಳು - ನೆಟ್‌ವರ್ಕ್ ಆಸ್ಪತ್ರೆಯನ್ನು ಆಯ್ಕೆಮಾಡಿ. ನೆಟ್‌ವರ್ಕ್ ಆಸ್ಪತ್ರೆಗಳ ಸಂಪೂರ್ಣ ಪಟ್ಟಿಯನ್ನು ನೀವಿಲ್ಲಿ ಕಾಣಬಹುದು. ಆಸ್ಪತ್ರೆಯ ಹೆಲ್ಪ್‌ಡೆಸ್ಕಿಗೆ ಇ-ಹೆಲ್ತ್ ಕಾರ್ಡ್ ಅನ್ನು ತೋರಿಸಿ ಮತ್ತು ಕ್ಯಾಶ್‌ಲೆಸ್ ರಿಕ್ವೆಸ್ಟ್ ಫಾರ್ಮ್ ಅನ್ನು ಕೇಳಿ. ಎಲ್ಲವೂ ಸರಿಯಾಗಿದ್ದರೆ, ನಿಮ್ಮ ಕ್ಲೈಮ್ ಅನ್ನು ಆಗಲೇ ಮತ್ತು ಅಲ್ಲಿಯೇ ಪ್ರಕ್ರಿಯೆಗೊಳಿಸಲಾಗುತ್ತದೆ.

  • ನೀವು ಕೊರೊನಾವೈರಸ್‌ಗಾಗಿ ಕ್ಲೈಮ್ ಮಾಡಿದ್ದರೆ, ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ - ಐಸಿಎಂಆರ್‌ನ ಅಧಿಕೃತ ಕೇಂದ್ರದಿಂದ ನೀವು ಪಾಸಿಟಿವ್ ರಿಪೋರ್ಟ್ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ.