ಆಮ್ ಆದ್ಮಿ ಬಿಮಾ ಯೋಜನೆಯ ಬಗ್ಗೆ ಎಲ್ಲವನ್ನೂ ತಿಳಿಯಿರಿ
1.3 ಶತಕೋಟಿಗಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ದೇಶದಲ್ಲಿ, ದುಡಿಯುವ ಸಮೂಹದ 22%, ಅಂತರರಾಷ್ಟ್ರೀಯ ದೈನಂದಿನ ವೇತನ ಮಾನದಂಡವಾದ ರೂ.143 ಕ್ಕಿಂತ ಕಡಿಮೆ ಗಳಿಕೆಯನ್ನು ಮಾಡುತ್ತದೆ.
ಬಹುಪಾಲು ಉದ್ಯೋಗಿಗಳು ಅವರ ಕುಟುಂಬಕ್ಕೆ ಆದಾಯದ ಮೂಲಕ್ಕೆ ಸಂಬಂಧಿಸಿದ ಅನಿರೀಕ್ಷಿತ ಆರೋಗ್ಯ ತುರ್ತು ಪರಿಸ್ಥಿತಿಗಳಲ್ಲಿ ಸಂಪೂರ್ಣವಾಗಿ ಅಸಹಾಯಕ ಪರಿಸ್ಥಿತಿಗೆ ಸಿಲುಕುತ್ತಾರೆ. ಇಂತಹದ್ದೇ ಸಮಸ್ಯೆಯನ್ನು ಪರಿಹರಿಸಲು, ಭಾರತ ಸರ್ಕಾರವು ಆಮ್ ಆದ್ಮಿ ಬಿಮಾ ಯೋಜನೆಯನ್ನು ಪರಿಚಯಿಸಿತು.
ಈ ಯೋಜನೆ ಏನು ಮತ್ತು ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಯೋಚಿಸುತ್ತಿದ್ದೀರಾ?
ದಯವಿಟ್ಟು ನಮ್ಮ ಮಾರ್ಗದರ್ಶಿಯನ್ನು ಓದಿ.
ಆಮ್ ಆದ್ಮಿ ಬಿಮಾ ಯೋಜನೆ (ಎಎಬಿವೈ) ಎಂದರೇನು?
ಅಸಂಘಟಿತ ವಲಯದ ಕಾರ್ಮಿಕರ ಹಿತದೃಷ್ಟಿಯಿಂದ ಆಮ್ ಆದ್ಮಿ ಬಿಮಾ ಯೋಜನೆಯನ್ನು ಭಾರತ ಸರ್ಕಾರವು 2ನೇ ಅಕ್ಟೋಬರ್ 2007 ರಂದು ಪ್ರಾರಂಭಿಸಿತು. ಈ ಸಾಮಾಜಿಕ ಭದ್ರತಾ ಯೋಜನೆಯು ಕಡಿಮೆ-ಆದಾಯದ ಗುಂಪುಗಳಿಗೆ ಆರೋಗ್ಯ ದುರ್ಬಲತೆ ಮತ್ತು ಮರಣದ ವಿರುದ್ಧ ಹಣಕಾಸಿನ ನೆರವು ನೀಡುವ ಗುರಿಯನ್ನು ಹೊಂದಿದೆ.
ಬೀದಿಬದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು, ಮೀನುಗಾರರು, ಆಟೋ ಚಾಲಕರು, ನೇಕಾರರು, ಚರ್ಮ ಕಾರ್ಮಿಕರಂತಹ ಹಲವು ಕಾರ್ಮಿಕರು ಯಾವುದೇ ಕಾಯಿದೆಯಡಿ ನೋಂದಾಯಿಸಲ್ಪಟ್ಟಿಲ್ಲ ಎಂಬ ಅಂಶವನ್ನು ಪರಿಗಣಿಸಿ ಇದನ್ನು ಮಾಡಲಾಗಿತ್ತು. ಇದರಿಂದ, ಅವರು ಸಂಘಟಿತ ವಲಯಗಳಲ್ಲಿನ ಕಾರ್ಮಿಕರನ್ನು ಕವರ್ ಮಾಡುವ ಸರ್ಕಾರಿ ಇನ್ಶೂರೆನ್ಸ್ ಯೋಜನೆಗಳನ್ನು ಕಳೆದುಕೊಳ್ಳುತ್ತಾರೆ.
ಪ್ರಧಾನ ಮಂತ್ರಿ ಆಮ್ ಆದ್ಮಿ ಬಿಮಾ ಯೋಜನೆ ಅಡಿಯಲ್ಲಿ ಏನೆಲ್ಲಾ ಕವರ್ ಆಗುತ್ತದೆ?
ಈ ಸರ್ಕಾರಿ-ಅನುದಾನಿತ ಯೋಜನೆಯಿಂದ ಯಾವ ರೀತಿಯ ಕವರೇಜ್ ಅನ್ನು ಪಡೆಯಬಹುದು ಎಂದು ಈಗ ನೀವು ಯೋಚಿಸುತ್ತಿರಬಹುದು, ಅಲ್ಲವೇ?
ನಿಮ್ಮ ಸಂದೇಹಗಳನ್ನು ಸ್ಪಷ್ಟಪಡಿಸಲು ಮಾನ್ಯವಾದ ಸಂದರ್ಭಗಳು ಹಾಗೂ ಅವುಗಳ ವಿರುದ್ಧವಿರುವ ಇನ್ಶೂರ್ಡ್ ಮೊತ್ತವನ್ನು ವಿವರಿಸುವ ಟೇಬಲ್ ಇಲ್ಲಿದೆ.
ತುರ್ತು ಪರಿಸ್ಥಿತಿಯ ವಿಧ | ಅಮೌಂಟ್ ಇನ್ಶೂರ್ಡ್ |
---|---|
ಅಪಘಾತದಿಂದಾದ ಸಾವು | ರೂ.75000 |
ಸಹಜ ಸಾವು | ರೂ.3000 |
ಅಪಘಾತದಿಂದಾದ ಭಾಗಶಃ ಅಂಗವೈಕಲ್ಯ | ರೂ.37500 |
ಅಪಘಾತದಿಂದಾದ ಶಾಶ್ವತ ಸಂಪೂರ್ಣ ಅಂಗವೈಕಲ್ಯ | ರೂ.75000 |
ಮೇಲಿನ ಪ್ರಯೋಜನಗಳ ಜೊತೆಗೆ, ಇನ್ಶೂರ್ ಆದ ವ್ಯಕ್ತಿಯು ಯಾವುದೇ ಘಟನೆಯ ಸಂದರ್ಭದಲ್ಲಿ ಅವನ/ಅವಳ ಸಂತತಿಗೆ ಹೆಚ್ಚುವರಿ ವಿದ್ಯಾರ್ಥಿವೇತನದ ಪ್ರಯೋಜನವನ್ನು ಉಚಿತವಾಗಿ ಪಡೆಯಬಹುದು. ಆಮ್ ಆದ್ಮಿ ಬಿಮಾ ಯೋಜನೆಯಡಿಯಲ್ಲಿ ಈ ಕವರೇಜ್ ಪ್ರತಿ ಮಗುವಿಗೆ ಮಾಸಿಕ ರೂ.100 ರ ಮೊತ್ತವನ್ನು ಒಳಗೊಂಡಿರುತ್ತದೆ. ಇದು 2 ಮಕ್ಕಳವರೆಗೆ ಮಾತ್ರ ಅನ್ವಯಿಸುತ್ತದೆ ಮತ್ತು ಇಬ್ಬರೂ 9 ರಿಂದ 12 ನೇ ತರಗತಿಯಲ್ಲಿ ಓದುತ್ತಿರಬೇಕು ಎಂಬುದನ್ನು ಗಮನಿಸಿ.
ಎಎಬಿವೈ(AABY) ಅಡಿಯಲ್ಲಿಯ ಹೊರಗಿಡುವಿಕೆಗಳು
ಇದೊಂದು ಹೆಲ್ತ್ ಇನ್ಶೂರೆನ್ಸ್ ಯೋಜನೆಯಾಗಿರುವುದರಿಂದ, ಇದು ಎಲ್ಲಾ ರೀತಿಯ ವೈದ್ಯಕೀಯ ವೆಚ್ಚಗಳನ್ನು ಭರಿಸುತ್ತದೆ ಎಂಬುದು ವ್ಯಕ್ತಿಗಳಲ್ಲಿ ಮೂಡಬಹುದಾದ ಒಂದು ಸಾಮಾನ್ಯವಾದ ತಪ್ಪು ಕಲ್ಪನೆಯಾಗಿದೆ. ಆದಾಗ್ಯೂ, ಎಲ್ಲಾ ಇತರ ಮೆಡಿಕಲ್ ಇನ್ಶೂರೆನ್ಸ್ ಪಾಲಿಸಿಗಳಂತೆ, ಆಮ್ ಆದ್ಮಿ ಬಿಮಾ ಯೋಜನೆಯು ಸಹ ನಿರ್ದಿಷ್ಟ ವಿನಾಯಿತಿಗಳನ್ನು ಹೊಂದಿದೆ.
ಈ ಕಾರ್ಯಕ್ರಮದಡಿಯಲ್ಲಿ ಕವರ್ ಆಗಿರದ ಷರತ್ತುಗಳು/ಸಂದರ್ಭಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.
- ಹಾಸ್ಪಿಟಲೈಸೇಷನ್ ವೆಚ್ಚ
- ಗರ್ಭಧಾರಣೆ ಮತ್ತು ಹೆರಿಗೆ
- ಮಾದಕ ದ್ರವ್ಯ ಸೇವನೆಯಿಂದ ಸಾವು ಅಥವಾ ಅಂಗವೈಕಲ್ಯ
- ಜೈವಿಕ, ರಾಸಾಯನಿಕ ಅಥವಾ ವಿಕಿರಣಶೀಲ ಆಯುಧಗಳಿಂದ ಉಂಟಾಗುವ ಗಾಯ
- ಮಾನಸಿಕ ಅಸ್ವಸ್ಥತೆ
- ವಿಪರೀತ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಉಂಟಾದ ಗಾಯ
- ಆತ್ಮಹತ್ಯೆ ಅಥವಾ ಸ್ವಯಂ ಕೃತ ಹಾನಿ
- ಅಪರಾಧ ಚಟುವಟಿಕೆಗಳಿಂದ ಸಾವು ಅಥವಾ ಅಂಗವೈಕಲ್ಯ
- ಯುದ್ಧ ಅಥವಾ ಯುದ್ಧದಂತಹ ಸಂದರ್ಭಗಳಲ್ಲಿ ಗಾಯ
ಮೇಲಿನ ಪಟ್ಟಿಯಿಂದ, ನಿಮ್ಮ ಕುಟುಂಬವು ಈ ಯೋಜನೆಯಿಂದ ಹೇಗೆ ಪ್ರಯೋಜನ ಪಡೆಯಬಹುದು ಎಂಬುದರ ಸ್ಪಷ್ಟ ಕಲ್ಪನೆಯನ್ನು ನೀವು ಪಡೆಯಬಹುದು.
ಆಮ್ ಆದ್ಮಿ ಬಿಮಾ ಯೋಜನೆ (ಎಎಬಿವೈ) ಯ ವೈಶಿಷ್ಟ್ಯಗಳು
ಪಾಲಿಸಿ ಸೇರ್ಪಡೆಗಳು ಮತ್ತು ಹೊರಗಿಡುವಿಕೆಗಳ ಜೊತೆಗೆ, ಈ ಇನ್ಶೂರೆನ್ಸ್ ಯೋಜನೆಯ ಇತರ ಕೆಲವು ಪ್ರಮುಖ ಗುಣಲಕ್ಷಣಗಳ ಪಟ್ಟಿ ಇಲ್ಲಿದೆ.
- ಎಎಬಿವೈ ಯ ಪ್ರಾಥಮಿಕ ಗುರಿಯು ನಗರ ಆರೋಗ್ಯ ಸೇವೆಗೆ ಪ್ರವೇಶವನ್ನು ನಿಭಾಯಿಸಲು ಆಗದ ವ್ಯಕ್ತಿಗಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದಾಗಿದೆ.
- ಈ ಪಾಲಿಸಿಯು ಒಂದು ನಿಶ್ಚಿತ ಇನ್ಶೂರೆನ್ಸ್ ಮೊತ್ತವನ್ನು ಒಳಗೊಂಡಿರುತ್ತದೆ, ಇದು ಆಕಸ್ಮಿಕತೆಯ ಪ್ರಕಾರವನ್ನು ಅವಲಂಬಿಸಿ ಬದಲಾಗುತ್ತದೆ.
- ಈ ಸಂಪೂರ್ಣ ಕವರೇಜ್ ಮೊತ್ತವನ್ನು ಕ್ಲೈಮ್‌ನ ಸಂದರ್ಭದಲ್ಲಿ ಒಂದೇ ಬಾರಿಗೆ ಪಾವತಿಸಲಾಗುತ್ತದೆ.
- ಆಮ್ ಆದ್ಮಿ ಬಿಮಾ ಯೋಜನೆಯು ಪ್ರತಿ ಕುಟುಂಬಕ್ಕೆ ಒಬ್ಬ ಸದಸ್ಯರಿಗೆ ಮಾತ್ರ ಅನ್ವಯಿಸುತ್ತದೆ. ಆದ್ದರಿಂದ, ಕುಟುಂಬದ ಇನ್ನೊಬ್ಬ ಸದಸ್ಯ ಈಗಾಗಲೇ ಅದರ ಫಲವನ್ನುಅನುಭವಿಸಿದ್ದರೆ ನೀವು ಉಲ್ಲೇಖಿತ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ.
- ಆಸಕ್ತ ವ್ಯಕ್ತಿಗಳು ಈ ಯೋಜನೆಯನ್ನು ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್ಐಸಿ) ಮೂಲಕ ಮಾತ್ರ ಖರೀದಿಸಬಹುದು ಏಕೆಂದರೆ ಪ್ರಸ್ತುತದಲ್ಲಿ ಇದು ಈ ಯೋಜನೆಯನ್ನು ನೀಡುತ್ತಿರುವ ಏಕೈಕ ಇನ್ಶೂರೆನ್ಸ್ ಕಂಪನಿಯಾಗಿದೆ.
ಈ ಯೋಜನೆಯ ಪ್ರಮುಖ ಗುಣಲಕ್ಷಣಗಳನ್ನು ನೀವು ಈಗ ತಿಳಿದಿರುವುದರಿಂದ, ಇದರ ಅನುಕೂಲಗಳನ್ನು ನೋಡುವ ಸಮಯ ಬಂದಿದೆ.
ಆಮ್ ಆದ್ಮಿ ಬಿಮಾ ಯೋಜನೆ (ಎಎಬಿವೈ) ಯ ಪ್ರಯೋಜನಗಳು
ಈ ಇನ್ಶೂರೆನ್ಸ್ ಯೋಜನೆಯ ಕೆಲವು ಪ್ರಮುಖ ಪ್ರಯೋಜನಗಳು ಇಲ್ಲಿವೆ.
- ಸಬ್ಸಿಡಿ ಇರುವ ಮತ್ತು ಕೈಗೆಟುಕುವ ಪ್ರೀಮಿಯಂಗಳು: ಈ ಯೋಜನೆಯು ಇತರ ಇನ್ಶೂರೆನ್ಸ್ ಪಾಲಿಸಿಗಳಿಗೆ ಹೋಲಿಸಿದರೆ ಅತ್ಯಂತ ಒಳ್ಳೆ ಪ್ರೀಮಿಯಂಗಳೊಂದಿಗೆ ಬರುತ್ತಿದ್ದು, ಇದರಲ್ಲಿ 50% ಸರ್ಕಾರ-ಪ್ರಾಯೋಜಿತವಾಗಿದೆ. ಪ್ರೀಮಿಯಂಗಳ ವಿಭಾಗದ ಅಡಿಯಲ್ಲಿ ನಾವು ಈ ಅಂಶವನ್ನು ವಿವರವಾಗಿ ಚರ್ಚಿಸಿದ್ದೇವೆ.
- ತ್ವರಿತ ನೆರವು: ಯೋಜನೆಯ ಸದಸ್ಯರ ಡಿಜಿಟಲ್ ಡೇಟಾಬೇಸ್ ಇರುವುದರಿಂದ ಅಗತ್ಯವಿದ್ದಾಗ ಇದು ಮಾಹಿತಿಯ ತ್ವರಿತ ವಿನಿಮಯವನ್ನು ಸುಗಮಗೊಳಿಸುತ್ತದೆ. ಪರಿಹಾರಕ್ಕಾಗಿ ಪಾಲಿಸಿದಾರರು ತಮ್ಮ ಹತ್ತಿರದ ಎಲ್ಐಸಿ ಶಾಖೆಯನ್ನು ಸುಲಭವಾಗಿ ಸಂಪರ್ಕಿಸಬಹುದು.
- ತೊಂದರೆ-ಮುಕ್ತ ದಾಖಲಾತಿ: ಅಪ್ಲಿಕೇಶನ್ ಮತ್ತು ದಾಖಲಾತಿಯು ವ್ಯಾಪಕವಾದ ಡಾಕ್ಯುಮೆಂಟೇಶನ್ ಅನ್ನು ಒಳಗೊಂಡಿರುವುದಿಲ್ಲ.
- ಸರಳವಾದ ಕ್ಲೈಮ್ ಪ್ರಕ್ರಿಯೆ: ದಾಖಲಾತಿ ಪ್ರಕ್ರಿಯೆಯಂತೆಯೇ, ಕ್ಲೈಮ್ ಅನ್ನು ಸಲ್ಲಿಸುವ ಪ್ರಕ್ರಿಯೆಯು ಎಎಬಿವೈ ಕಾರ್ಡ್ ಮೂಲಕ ಸುಲಭವಾಗುತ್ತದೆ.
ಆದಾಗ್ಯೂ, ನೀವು ಆದಾಯ, ವಯಸ್ಸು ಮತ್ತು ವೃತ್ತಿಯ ನಿರ್ದಿಷ್ಟ ಮಾನದಂಡಗಳನ್ನು ಪೂರೈಸಿದರೆ ಮಾತ್ರ ನೀವು ಈ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ಗಮನಿಸಿ.
ಆಮ್ ಆದ್ಮಿ ಬಿಮಾ ಯೋಜನೆ ಅಡಿಯಲ್ಲಿ ಯಾವ ವೃತ್ತಿಗಳನ್ನು ಒಳಗೊಂಡಿದೆ?
ಈಗಾಗಲೇ ಹೇಳಿದಂತೆ, ಈ ಯೋಜನೆಯು ಪ್ರಾಥಮಿಕವಾಗಿ ಕಡಿಮೆ-ಆದಾಯದ ಗುಂಪಿಗೆ ಸೇರಿದ ವ್ಯಕ್ತಿಗಳ ಮೇಲೆ ಕೇಂದ್ರಿತವಾಗಿದೆ.
ಆದಾಗ್ಯೂ, ನೀವು ನಿರ್ದಿಷ್ಟತೆಗಳನ್ನು ಹುಡುಕುತ್ತಿದ್ದರೆ ನಮಗೆ ಅರ್ಥವಾಗುತ್ತದೆ. ಆಮ್ ಆದ್ಮಿ ಬಿಮಾ ಯೋಜನೆಯು ಯಾರಿಗೆಲ್ಲಾ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳಲು ಬಯಸಿದರೆ, ಕೆಳಗಿನ ಪಟ್ಟಿಯನ್ನು ನೋಡಿ.
- ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯಡಿ ಕವರ್ ಆಗಿರುವ ಅಸಂಘಟಿತ ಕಾರ್ಮಿಕರು
- ಮೀನುಗಾರರು
- ಪಟಾಕಿ ಕಾರ್ಮಿಕರು
- ಕಾಗದದ ಉತ್ಪನ್ನ ತಯಾರಕರು
- ಕೃಷಿಕರು
- ಸಾರಿಗೆ ಚಾಲಕರ ಸಂಘ
- ಅಂಗನವಾಡಿ ಶಿಕ್ಷಕರು
- ಮರದ ಉತ್ಪನ್ನಗಳ ತಯಾರಕರು
- ಸಾರಿಗೆ ಕರ್ಮಚಾರಿಗಳು
- ಸ್ವಚ್ಚತಾ ಕರ್ಮಚಾರಿಗಳು
- ಆಟೋ ಚಾಲಕರು ಅಥವಾ ರಿಕ್ಷಾ ಚಾಲಕರು
- ಸಾಗರೋತ್ತರ ಭಾರತೀಯ ಕಾರ್ಮಿಕರು
- ಮಣ್ಣಿನ ಆಟಿಕೆಗಳ ತಯಾರಕರು
- ಬೀಡಿ ಕಾರ್ಮಿಕರು
- ಸ್ವಸಹಾಯ ಗುಂಪುಗಳಿಗೆ ಸೇರಿರುವ ಮಹಿಳೆಯರು
- ಇಟ್ಟಿಗೆ ಗೂಡು ಕೆಲಸಗಾರರು
- ಅರಣ್ಯ ಕಾರ್ಮಿಕರು
- ಹಮಾಲರು
- ಕೊತ್ವಾಲ
- ಲೇಡಿ ಟೈಲರ್ ಗಳು
- ಬಡಗಿಗಳು
- ಕರಕುಶಲ ಕಾರ್ಮಿಕರು
- ಸ್ವಯಂ ಉದ್ಯೋಗಿ ದೈಹಿಕ ವಿಕಲಚೇತನರು
- ಗುಡ್ಡಗಾಡು ಪ್ರದೇಶಗಳ ಮಹಿಳೆಯರು
- ಸೇವಾ (SEWA) ಗೆ ಸಂಬಂಧಿಸಿದ ಪಾಪಡ್ ಕೆಲಸಗಾರರು
- ಮೇಣದಬತ್ತಿ ತಯಾರಕರು
- ಕುರಿ ಸಾಕಣೆದಾರರು
- ಕೈಮಗ್ಗ ನೇಕಾರರು
- ಉಪ್ಪು ಬೆಳೆಗಾರರು
- ತಾಳೆ ರಸ ತೆಗೆಯುವವರು
- ತೆಂಡು ಎಲೆ ಸಂಗ್ರಾಹಕರು
- ಚಮ್ಮಾರರು
- ಲೆದರ್ ಮತ್ತು ಚರ್ಮೋದ್ಯಮ ಕೆಲಸಗಾರರು
- ರಬ್ಬರ್ ಮುದ್ರಣ ಮತ್ತು ಕಲ್ಲಿದ್ದಲು ಉತ್ಪನ್ನಗಳ ಉದ್ಯೋಗದಲ್ಲಿರುವ ವ್ಯಕ್ತಿಗಳು
- ತೋಟದ ಕಾರ್ಮಿಕರು
- ರೇಷ್ಮೆ ಕೃಷಿ ಉದ್ಯೋಗಿಗಳು
- ವಿದ್ಯುತ್ ಮಗ್ಗಗಳ ಕಾರ್ಮಿಕರು
- ತೆಂಗಿನಕಾಯಿ ಸಂಸ್ಕಾರಕಗಳು
- ಪ್ರಾಥಮಿಕ ಹಾಲು ಉತ್ಪಾದಕರು
- ಜವಳಿ ಉದ್ಯೋಗಿಗಳು
- ಕಟ್ಟಡ ಕಾರ್ಮಿಕರು
- ಚರ್ಮದ ಉತ್ಪನ್ನಗಳ ತಯಾರಕರು
ಮೇಲಿನ ಯಾವುದೇ ವೃತ್ತಿಗಳಿಗೆ ಸೇರಿರುವುದರ ಜೊತೆಗೆ, ಈ ಇನ್ಶೂರೆನ್ಸ್ ಯೋಜನೆಗೆ ಅರ್ಹತೆ ಪಡೆಯಲು ನೀವು ಕೆಲವು ಅರ್ಹತಾ ಮಾನದಂಡಗಳನ್ನು ಸಹ ಪೂರೈಸಬೇಕಾಗುತ್ತದೆ.
ಅರ್ಹತಾ ಮಾನದಂಡಗಳು
ಯಶಸ್ವಿ ಅಪ್ಲಿಕೇಶನ್ ಅನ್ನು ಆನಂದಿಸಲು ಷರತ್ತುಗಳನ್ನು ನೋಡಿ.
- ಸಂಭಾವ್ಯ ಇನ್ಶೂರ್ಡ್ ಆದ ಸದಸ್ಯರು 18-59 ವರ್ಷ ವಯಸ್ಸಿನವರಾಗಿರಬೇಕು.
- ಅರ್ಜಿದಾರರು ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬ, ಗ್ರಾಮೀಣ ಭೂರಹಿತ ಕುಟುಂಬ (ಆರ್ ಎಲ್ ಹೆಚ್ )ದಿಂದ ಬರಬೇಕು ಅಥವಾ ಯಾವುದೇ ಉಲ್ಲೇಖಿತ ಔದ್ಯೋಗಿಕ ಗುಂಪುಗಳಲ್ಲಿ ತೊಡಗಿಸಿಕೊಂಡಿರಬೇಕು.
- ಅರ್ಜಿ ಸಲ್ಲಿಸುವ ವ್ಯಕ್ತಿಯು ಕುಟುಂಬದ ಮುಖ್ಯಸ್ಥನಾಗಿರಬೇಕು, ಅವರು ಗಳಿಸುವ ಏಕೈಕ ಸದಸ್ಯನಾಗಿರಲಿ ಅಥವಾ ಇಲ್ಲದಿರಲಿ.
ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಈ ಯೋಜನೆಯ ಇರುವಿಕೆಯ ಬಗ್ಗೆ ಸಂಪೂರ್ಣ ಅರಿವಿಲ್ಲದಿದ್ದರೆ, ನಿಮ್ಮ ಮೊದಲ ಬಾರಿಯ ಅಪ್ಲಿಕೇಶನ್‌ಗಾಗಿ ಮಾರ್ಗದರ್ಶಿ ಇಲ್ಲಿದೆ.
ಆಮ್ ಆದ್ಮಿ ಬಿಮಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಆಮ್ ಆದ್ಮಿ ಬಿಮಾ ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ನೀಡಿರುವ ಹಂತಗಳನ್ನು ಅನುಸರಿಸಿ.
ಹಂತ 1: ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
ಹಂತ 2: ಹೋಮ್ ಪೇಜ್ ನಲ್ಲಿ "LIC ಆಮ್ ಆದ್ಮಿ ಬಿಮಾ ಯೋಜನೆ ಆನ್‌ಲೈನ್ ಅರ್ಜಿ ಸಲ್ಲಿಕೆ" ಅನ್ನು ಆಯ್ಕೆಮಾಡಿ.
ಹಂತ 3: ಮುಂದಿನ ಸ್ಕ್ರೀನ್ ನಲ್ಲಿ, ನಿಖರವಾದ ವಿವರಗಳೊಂದಿಗೆ ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡಿ.
ಹಂತ 4: ಅಗತ್ಯವಿರುವ ಎಲ್ಲಾ ಡಾಕ್ಯುಮೆಂಟ್ ಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ ಮತ್ತು "ಸಲ್ಲಿಸಿ" ಕ್ಲಿಕ್ ಮಾಡಿ.
ಇಂಟರ್ನೆಟ್‌ಗೆ ಪ್ರವೇಶವನ್ನು ಹೊಂದಿರದ ವ್ಯಕ್ತಿಗಳು ಎಎಬಿವೈ ಅಪ್ಲಿಕೇಶನ್ ವಿಧಾನವನ್ನು ಆಫ್‌ಲೈನ್ ಆಗಿ ಪೂರ್ಣಗೊಳಿಸಬಹುದು. ಇದಕ್ಕಾಗಿ ಈ ಕೆಳಗಿನ ಹಂತಗಳಿವೆ.
ಹಂತ 1: ಅಪ್ಲಿಕೇಶನ್ ಫಾರ್ಮ್ ಅನ್ನು ಪಡೆಯಲು ನಿಮ್ಮ ಹತ್ತಿರದ ಎನ್ಐಸಿ ನೋಡಲ್ ಏಜೆನ್ಸಿಗೆ ಭೇಟಿ ನೀಡಿ.
ಹಂತ 2: ಆನ್‌ಲೈನ್ ಪ್ರಕ್ರಿಯೆಯಂತೆಯೇ, ಇಲ್ಲಿಯೂ ಸರಿಯಾದ ಮಾಹಿತಿಯೊಂದಿಗೆ ಈ ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡಿ.
ಹಂತ 3: ಎಲ್ಲಾ ಅಗತ್ಯ ಡಾಕ್ಯುಮೆಂಟ್ ಗಳ ಪ್ರತಿಗಳನ್ನು ಅಪ್ಲಿಕೇಶನ್ ಫಾರ್ಮ್ ನೊಂದಿಗೆ ಲಗತ್ತಿಸಿ.
ಹಂತ 4: ನಿಮ್ಮ ಹತ್ತಿರದ ಎಲ್‌ಐಸಿ ಕಛೇರಿಗೆ ಹೋಗಿ ಮತ್ತು ಹಿಂದೆ ತಿಳಿಸಿರುವ ವಸ್ತುಗಳನ್ನು ಸಲ್ಲಿಸಿ.
ಅಷ್ಟೇ!
ಈಗ, ನಿಮಗೆ ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ಅಗತ್ಯವಿದ್ದರೆ, ಈ ಕೆಳಗಿನ ಎಸ್ಎಂಎಸ್ ಅನ್ನು 9222492224 ಅಥವಾ 56767877 ಗೆ ಕಳುಹಿಸಿ:
“LICHELP <Policy Number>.”
ಎಎಬಿವೈ(AABY) ಗೆ ಅರ್ಜಿ ಸಲ್ಲಿಸುವಾಗ ಬೇಕಾಗುವ ಕಡ್ಡಾಯ ಡಾಕ್ಯುಮೆಂಟ್ ಗಳು ಯಾವುವು?
ಮೊದಲ ಬಾರಿಯ ಅರ್ಜಿದಾರರಿಗೆ ಅರ್ಜಿಗೆ ಅಗತ್ಯವಿರುವ ಎಲ್ಲಾ ಡಾಕ್ಯುಮೆಂಟ್ ಗಳನ್ನು ಟ್ರ್ಯಾಕ್ ಮಾಡುವುದು ಕಷ್ಟಕರವಾಗಬಹುದು. ನಿಮ್ಮ ಈ ಗೊಂದಲವನ್ನು ಪರಿಹರಿಸಲು, ಅರ್ಜಿ ಸಲ್ಲಿಸುವ ಮೊದಲು ನೀವು ಸಿದ್ಧವಾಗಿ ಇಟ್ಟುಕೊಳ್ಳಬೇಕಾದ ಎಲ್ಲಾ ಅಗತ್ಯ ಡಾಕ್ಯುಮೆಂಟ್ ಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.
- ಪಡಿತರ ಚೀಟಿ(ರೇಶನ್ ಕಾರ್ಡ್)
- ಆಧಾರ್ ಕಾರ್ಡ್
- ವೋಟರ್ ಐಡಿ ಕಾರ್ಡ್
- ಆದಾಯದ ಸರ್ಟಿಫಿಕೆಟ್
- ನಾಮಿನಿ ಅಪ್ಲಿಕೇಶನ್ ಫಾರ್ಮ್
ಯಾವುದೇ ಹೆಚ್ಚುವರಿ ಡಾಕ್ಯುಮೆಂಟ್‌ನ ಅಗತ್ಯವನ್ನು ದೃಢೀಕರಿಸಿ ಮತ್ತು ನಿಮ್ಮ ಅಪ್ಲಿಕೇಶನ್ ಫಾರ್ಮ್ ಜೊತೆಯಲ್ಲಿ ಅದನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಿ.
ಒಮ್ಮೆ ನೀವು ಅಪ್ಲಿಕೇಶನ್ ಕಾರ್ಯವಿಧಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ನೀವು ಪಾವತಿಸಬೇಕಾದ ಪ್ರೀಮಿಯಂ ಬಗ್ಗೆ ಚಿಂತಿಸಬಹುದು. ಅದಕ್ಕೂ ನಾವು ವ್ಯವಸ್ಥೆ ಮಾಡಿದ್ದೇವೆ!
ಆಮ್ ಆದ್ಮಿ ಬಿಮಾ ಯೋಜನೆಯಿಂದ ವಿಧಿಸಲಾದ ಪ್ರೀಮಿಯಂ ಎಷ್ಟು?
ಯಾವುದೇ ಇತರ ಇನ್ಶೂರೆನ್ಸ್ ಯೋಜನೆಗಳಂತೆ, ಎಎಬಿವೈ ಯೋಜನೆಯು ಸಹ ಪ್ರೀಮಿಯಂಗಳೊಂದಿಗೆ ಬರುತ್ತದೆ, ಆದರೂ ಇದೊಂದು ಅಲ್ಪ ಮೊತ್ತವಾಗಿದೆ. ಹೌದು, ಈ ಯೋಜನೆಯು ಕಡಿಮೆ ಆದಾಯದ ಕಾರ್ಮಿಕರ ಜೀವನವನ್ನು ಸರಾಗಗೊಳಿಸುವ ಗುರಿಯನ್ನು ಹೊಂದಿರುವುದರಿಂದ, ವಾರ್ಷಿಕ ಪ್ರೀಮಿಯಂ ಅನ್ನು ರೂ.30,000 ರ ಇನ್ಶೂರೆನ್ಸ್ ಕವರೇಜ್ ವಿರುದ್ಧ ರೂ.200 ಗೆ ನಿಗದಿಪಡಿಸಲಾಗಿದೆ. ಅದರ ಮೇಲೂ, ಈ ಮೊತ್ತದ 50% ಅನ್ನು ಆಗಲೇ ಕೇಂದ್ರ ಸರ್ಕಾರ ಪಾವತಿಸಿಯಾಗಿರುತ್ತದೆ.
ಇದರ ಜೊತೆ, ಈ ಕೆಳಗಿನ ವರ್ಗಗಳಿಗೆ ಸೇರಿದ ವ್ಯಕ್ತಿಗಳು ನಂತರದ ಪ್ರಯೋಜನಗಳನ್ನು ಆನಂದಿಸಬಹುದು.
- ಗ್ರಾಮೀಣ ಭೂರಹಿತ ಕುಟುಂಬಗಳು (ಆರ್ ಎಲ್ ಎಚ್): ಉಳಿದ 50% ಪ್ರೀಮಿಯಂ ಅನ್ನು ಯುಟಿ/ರಾಜ್ಯ ಸರ್ಕಾರವು ಪಾವತಿಸುತ್ತದೆ.
- ಮಾನ್ಯತೆ ಪಡೆದ ವೃತ್ತಿಪರ ಗುಂಪುಗಳು: ಉಳಿದ 50% ಪ್ರೀಮಿಯಂ ಅನ್ನು ನೋಡಲ್ ಏಜೆನ್ಸಿ ಅಥವಾ ಯುಟಿ/ರಾಜ್ಯ ಸರ್ಕಾರದಿಂದ ಪಾವತಿಸಲಾಗುತ್ತದೆ.
ಆದ್ದರಿಂದ, ನೀವು ಮೇಲೆ ತಿಳಿಸಲಾದ ಗುಂಪುಗಳ ಭಾಗವಾಗಿದ್ದರೆ, ಆಮ್ ಆದ್ಮಿ ಬಿಮಾ ಯೋಜನೆಯ ಅಡಿಯಲ್ಲಿ ಶೂನ್ಯ-ಪ್ರೀಮಿಯಂ ಪಾವತಿಯೊಂದಿಗೆ ನೀವು ಸಂಪೂರ್ಣ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು!
ಎಎಬಿವೈ(AABY) ಯೋಜನೆಯಡಿಯಲ್ಲಿ ಕ್ಲೈಮ್ ಅನ್ನು ರೈಸ್ ಮಾಡುವುದು ಹೇಗೆ?
ಅನುಭವಿಸಿದ ಆಕಸ್ಮಿಕತೆಯ ವಿಧದ ಆಧಾರದ ಮೇಲೆ, ನೀವು ಅವಲಂಬಿಸಿರುವ ಇನ್ಶೂರೆನ್ಸ್ ನ ಕ್ಲೈಮ್ ಪ್ರಕ್ರಿಯೆಯು ಭಿನ್ನವಾಗಿರಬಹುದು.
ಇಲ್ಲಿ, ನೀವು ಕ್ಲೈಮ್ ಅನ್ನು ರೈಸ್ ಮಾಡುವ ಎಲ್ಲಾ ಸಂಭವನೀಯ ಸನ್ನಿವೇಶಗಳನ್ನು ಮತ್ತು ಅನುಸರಿಸಬೇಕಾದ ಕ್ರಮಗಳನ್ನು ನಾವು ಪಟ್ಟಿ ಮಾಡುತ್ತೇವೆ.
1) ಅಪಘಾತದಿಂದ ಅಥವಾ ಸಹಜ ಕಾರಣಗಳಿಂದ ಸಾವು
ಇನ್ಶೂರ್ ಆದ ವ್ಯಕ್ತಿಯ ಮರಣದ ನಂತರ, ನಾಮಿನಿಯು ಈ ಕೆಳಗಿನ ಹಂತಗಳಲ್ಲಿ ಮರಣದ ಕ್ಲೈಮ್ ಮಾಡಬಹುದು.
- ಹಂತ 1: ಆಮ್ ಆದ್ಮಿ ಬಿಮಾ ಯೋಜನೆಯ ಡೆತ್ ಕ್ಲೈಮ್ ಫಾರ್ಮ್ ಅನ್ನು ಭರ್ತಿ ಮಾಡಿ.
- ಹಂತ 2: ಪಾಲಿಸಿಹೋಲ್ಡರ್ ನ ಮೂಲ ಮರಣ ಪ್ರಮಾಣಪತ್ರ ಮತ್ತು ಒಂದು ದೃಢೀಕರಿಸಿದ ಪ್ರತಿಯೊಂದಿಗೆ ಅದನ್ನು ಸಂಬಂಧಪಟ್ಟ ನೋಡಲ್ ಏಜೆನ್ಸಿ ಅಧಿಕಾರಿಗೆ ಸಲ್ಲಿಸಿ.
- ಹಂತ 3: ಪರಿಶೀಲನೆಯ ನಂತರ, ಅಧಿಕಾರಿಯು ಕ್ಲೈಮ್ ಫಾರ್ಮ್ ಅನ್ನು ಒದಗಿಸಲಾದ ಡಾಕ್ಯುಮೆಂಟ್ ಗಳು ಮತ್ತು ಮೃತ ಪಾಲಿಸಿದಾರರ ಅರ್ಹತಾ ಪ್ರಮಾಣಪತ್ರದೊಂದಿಗೆ ಸಲ್ಲಿಸುತ್ತಾರೆ.
ಆಕಸ್ಮಿಕ ಮರಣದ ಪ್ರಕರಣದಲ್ಲಿ, ನಾಮಿನಿಗಳು ಮರಣೋತ್ತರ ಪರೀಕ್ಷೆಯ ವರದಿ, ಎಫ್‌ಐಆರ್, ಪೊಲೀಸ್ ವಿಚಾರಣೆ ವರದಿ ಮತ್ತು ಅಂತಿಮ ಪೊಲೀಸ್ ವರದಿಯ ಪ್ರತಿಗಳನ್ನು ಸಹ ಸಲ್ಲಿಸಬೇಕಾಗುತ್ತದೆ.
2) ಭಾಗಶಃ ಅಥವಾ ಸಂಪೂರ್ಣ ಅಂಗವೈಕಲ್ಯ
ಅಂಗವೈಕಲ್ಯ ಕ್ಲೈಮ್ ಅನ್ನು ಸಲ್ಲಿಸಲು, ಪಾಲಿಸಿದಾರರು ಆಮ್ ಆದ್ಮಿ ಬಿಮಾ ಯೋಜನಾ ಕ್ಲೈಮ್ ಫಾರ್ಮ್ ಜೊತೆಗೆ ಈ ಕೆಳಗಿನ ಡಾಕ್ಯುಮೆಂಟ್ ಗಳನ್ನು ಸಲ್ಲಿಸಬೇಕಾಗುತ್ತದೆ.
- ಪೊಲೀಸ್ ಎಫ್‌ಐಆರ್‌ನಂತಹ ಅಪಘಾತದ ಪುರಾವೆಯನ್ನು ಹೊಂದಿರುವ ಡಾಕ್ಯುಮೆಂಟ್ ಗಳು.
- ಅಂಗವೈಕಲ್ಯದ ವಿವರಗಳನ್ನು ಮತ್ತು ಪ್ರಕಾರವನ್ನು ತಿಳಿಸುವ ವೈದ್ಯಕೀಯ ಸರ್ಟಿಫಿಕೇಟ್. ಇದನ್ನು ಒಬ್ಬ ನೋಂದಾಯಿತ ಸರ್ಕಾರಿ ಆರ್ಥೋಪೆಡಿಕ್ ಅಥವಾ ಸರ್ಕಾರಿ ಸಿವಿಲ್ ಸರ್ಜನ್ ನೀಡಬೇಕು.
- ಸ್ಕಾಲರ್‌ಶಿಪ್ ಪ್ರಯೋಜನ
ನಿಮ್ಮ ಮಗುವು ಎಎಬಿವೈ ಅಡಿಯಲ್ಲಿ ಸ್ಕಾಲರ್‌ಶಿಪ್ ಪ್ರಯೋಜನಕ್ಕೆ ಅರ್ಹರಾಗಿದ್ದರೆ, ನೀವು ಆಮ್ ಆದ್ಮಿ ಬಿಮಾ ಯೋಜನಾ ಸ್ಕಾಲರ್‌ಶಿಪ್ ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಅದನ್ನು ನಿಮ್ಮ ನೋಡಲ್ ಏಜೆನ್ಸಿಗೆ ಸಲ್ಲಿಸಬೇಕು.
ನಿಮ್ಮ ಮಗು ಅರ್ಹತಾ ಮಿತಿಗಳನ್ನು ದಾಟಿದೆಯೇ ಎಂದು ನೋಡಲ್ ಏಜೆನ್ಸಿಯು ಪರಿಶೀಲನೆ ನಡೆಸಲು ಪ್ರತಿ 6 ತಿಂಗಳಿಗೊಮ್ಮೆ ಈ ವಿಧಾನವನ್ನು ಅನುಸರಿಸಬೇಕಾಗುತ್ತದೆ. ನಂತರ ಸಂಸ್ಥೆಯು ಗುರುತಿಸಲಾದ ವಿದ್ಯಾರ್ಥಿಗಳ ಪಟ್ಟಿಯನ್ನು ಎಲ್ಐಸಿ ಯ ಪಿಂಚಣಿ ಮತ್ತು ಗುಂಪು ಯೋಜನೆ ಘಟಕಕ್ಕೆ ಕಳುಹಿಸುತ್ತದೆ.
ಈ ಪಟ್ಟಿಯು ಪ್ರತಿ ಫಲಾನುಭವಿಯ ಕುರಿತು ಈ ಕೆಳಗಿನ ವಿವರಗಳನ್ನು ಹೊಂದಿರಬೇಕು.
- ವಿದ್ಯಾರ್ಥಿಯ ಹೆಸರು
- ತರಗತಿ
- ಶಾಲೆಯ ಹೆಸರು
- ಇನ್ಶೂರ್ ಆಗಿರುವವರ ಹೆಸರು
- ಆಮ್ ಆದ್ಮಿ ಬಿಮಾ ಯೋಜನೆ ಪಾಲಿಸಿ ಸಂಖ್ಯೆ
- ಎನ್ಇಎಫ್ಟಿ ಸಂಖ್ಯೆ
- ಇನ್ಶೂರ್ ಆದ ಸದಸ್ಯರ ಸದಸ್ಯತ್ವ ಸಂಖ್ಯೆ.
ಅರ್ಹ ವಿದ್ಯಾರ್ಥಿಗಳ ಸಂಪೂರ್ಣ ಪಟ್ಟಿಯನ್ನು ಸ್ವೀಕರಿಸಿದ ನಂತರ, ಎಲ್ಐಸಿಯು ಸ್ಕಾಲರ್‌ಶಿಪ್ ಮೊತ್ತವನ್ನು ಪಾಲಿಸಿದಾರರ ಬ್ಯಾಂಕ್ ಖಾತೆಗೆ ಎನ್ಇಎಫ್ಟಿ ಮೂಲಕ ವರ್ಗಾಯಿಸುತ್ತದೆ.
ಈ ಸಂಪೂರ್ಣ ಕಾರ್ಯವಿಧಾನದ ಹಲವಾರು ಜಟಿಲತೆಗಳನ್ನು ಗಮನಿಸಿದರೆ, ಆಸಕ್ತ ವ್ಯಕ್ತಿಗಳು ಗೊಂದಲಗಳು ಮತ್ತು ಪ್ರಶ್ನೆಗಳನ್ನು ಹೊಂದಲು ಸಾಧ್ಯವಿದೆ.
ಸರಿ, ಅದಕ್ಕಾಗಿ, ನೀವು ಎಲ್ಐಸಿ ಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಆಮ್ ಆದ್ಮಿ ಬಿಮಾ ಯೋಜನೆಯ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. ನಿಮ್ಮ ಹತ್ತಿರದ ಎಲ್ಐಸಿ ಶಾಖೆಯ ಸಂಪರ್ಕ ವಿವರಗಳ ಮೂಲಕವೂ ನಿಮ್ಮ ಪ್ರಶ್ನೆಗಳನ್ನು ನೀವು ಫಾರ್ವರ್ಡ್ ಮಾಡಬಹುದು.
ಪದೇ ಪದೇ ಕೇಳಲಾದ ಪ್ರಶ್ನೆಗಳು
ಯಾವ ಪರಿಸ್ಥಿತಿಗಳಲ್ಲಿ ನಾನು ಭಾಗಶಃ ಅಂಗವೈಕಲ್ಯ ಮತ್ತು ಶಾಶ್ವತ ಸಂಪೂರ್ಣ ಅಂಗವೈಕಲ್ಯದ ಅಡಿಯಲ್ಲಿ ಕವರೇಜ್ ಅನ್ನು ಪಡೆಯಬಹುದು?
ಭಾಗಶಃ ಅಂಗವೈಕಲ್ಯ, ವ್ಯಕ್ತಿಯು ಇನ್ನೂ ಜೀವನಕ್ಕಾಗಿ ಕೆಲಸ ಮಾಡುವ ಸ್ಥಿತಿಯನ್ನು ಸೂಚಿಸುತ್ತದೆ ಮತ್ತು ಒಂದು ಕಣ್ಣು ಅಥವಾ ಅಂಗದ ನಷ್ಟವನ್ನು ಒಳಗೊಂಡಿರುತ್ತದೆ. ಶಾಶ್ವತ ಸಂಪೂರ್ಣ ಅಂಗವೈಕಲ್ಯವು ಎರಡೂ ಕಣ್ಣುಗಳು, ಎರಡೂ ಅಂಗಗಳು ಅಥವಾ ಒಂದು ಕಣ್ಣು ಮತ್ತು ಒಂದು ಅಂಗವನ್ನು ಕಳೆದುಕೊಳ್ಳುವುದನ್ನು ಸೂಚಿಸುತ್ತದೆ. ಅಂಗವೈಕಲ್ಯದ ವಿಧವನ್ನು ಅವಲಂಬಿಸಿ, ಪಾಲಿಸಿದಾರರು ಅದಕ್ಕೆ ಅನುಗುಣವಾದ ಇನ್ಶೂರೆನ್ಸ್ ಮೊತ್ತವನ್ನು ಪಡೆಯಬಹುದು.
ಎಎಬಿವೈ ಅರ್ಜಿ ಸಲ್ಲಿಕೆಯ ಸಮಯದಲ್ಲಿ ನಾನು ನಾಮಿನಿಯನ್ನು ನೇಮಿಸಬೇಕೇ?
ಹೌದು, ಈ ಇನ್ಶೂರೆನ್ಸ್ ಯೋಜನೆಗೆ ಅರ್ಜಿ ಸಲ್ಲಿಸುವಾಗ ನಾಮಿನಿಯನ್ನು ನೇಮಿಸುವುದು ಕಡ್ಡಾಯವಾಗಿದೆ ಹಾಗೂ ಇದನ್ನು ಮಾಡುವುದರಿಂದ ಪಾಲಿಸಿದಾರರ ಮರಣದ ನಂತರ ಕ್ಲೈಮ್ ಮಾಡಬಹುದು. ಇದಕ್ಕಾಗಿ, ಸಲ್ಲಿಸುವ ಮೊದಲು ನಿಮ್ಮ ಅರ್ಜಿ ಫಾರ್ಮ್ ಜೊತೆ ಒದಗಿಸಲಾಗುವ ನಾಮನಿರ್ದೇಶನ ಫಾರ್ಮ್ ಅನ್ನು ನೀವು ಸರಿಯಾಗಿ ಭರ್ತಿ ಮಾಡಬೇಕಾಗುತ್ತದೆ. ನಂತರ, ಅದು ಇದನ್ನು ಮರಣದ ಕ್ಲೈಂ ಸಂದರ್ಭದಲ್ಲಿ ಎಲ್ಐಸಿ ಗೆ ವರ್ಗಾಯಿಸುವವರೆಗೆ ಈ ಫಾರ್ಮ್ ನೋಡಲ್ ಏಜೆನ್ಸಿಯ ಬಳಿ ಇರುತ್ತದೆ.
ಸಾಮಾಜಿಕ ಭದ್ರತಾ ನಿಧಿಯ ಪಾತ್ರವೇನು?
ಆರ್ಥಿಕವಾಗಿ ಹಿಂದುಳಿದ ಕಾರ್ಮಿಕರಿಗೆ ಎಎಬಿವೈ ಇನ್ಶೂರೆನ್ಸ್ ಯೋಜನೆಗಳನ್ನು ಕೈಗೆಟುಕುವಂತೆ ಮಾಡುವುದು ಇಲ್ಲಿ ಗುರಿಯಾಗಿದೆ. ಇದಕ್ಕಾಗಿಯೇ ಕೇಂದ್ರ ಸರ್ಕಾರವು ಪ್ರೀಮಿಯಂ ಮೊತ್ತದ ಅರ್ಧದಷ್ಟನ್ನು ಸಬ್ಸಿಡಿಯಾಗಿಸಲು ಸಾಮಾಜಿಕ ಭದ್ರತಾ ನಿಧಿಯನ್ನು ಸ್ಥಾಪಿಸಿತು.
ನನ್ನ ಕುಟುಂಬದ ಹಿಂದಿನ ಪಾಲಿಸಿದಾರರು ಸತ್ತ ನಂತರ ನಾನು ಮತ್ತೊಮ್ಮೆ ಆಮ್ ಆದ್ಮಿ ಬಿಮಾ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದೇ?
ಇಲ್ಲ, ಪ್ರತಿ ಕುಟುಂಬಕ್ಕೆ ಆಮ್ ಆದ್ಮಿ ಬಿಮಾ ಯೋಜನೆಯ ಒಂದು ಅಪ್ಲಿಕೇಶನ್ ಮಾತ್ರ ಮಾನ್ಯವಾಗಿರುತ್ತದೆ. ನಿಮ್ಮ ಕುಟುಂಬದ ಪಾಲಿಸಿದಾರರು ಮರಣ ಹೊಂದಿದರೆ, ಡೆತ್ ಕ್ಲೈಮ್ ಫೈಲ್ ಮಾಡುವ ಮೂಲಕ ಅಸ್ತಿತ್ವದಲ್ಲಿರುವ ಕವರೇಜ್‌ನಿಂದ ನೀವು ಪ್ರಯೋಜನ ಪಡೆಯಬಹುದು. ಆದಾಗ್ಯೂ, ಈ ಯೋಜನೆಯ ಪ್ರಯೋಜನವನ್ನು ಎರಡನೇ ಬಾರಿ ಪಡೆಯಲು ನೀವು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.