ಅನುಭವಿಸಿದ ಆಕಸ್ಮಿಕತೆಯ ವಿಧದ ಆಧಾರದ ಮೇಲೆ, ನೀವು ಅವಲಂಬಿಸಿರುವ ಇನ್ಶೂರೆನ್ಸ್ ನ ಕ್ಲೈಮ್ ಪ್ರಕ್ರಿಯೆಯು ಭಿನ್ನವಾಗಿರಬಹುದು.
ಇಲ್ಲಿ, ನೀವು ಕ್ಲೈಮ್ ಅನ್ನು ರೈಸ್ ಮಾಡುವ ಎಲ್ಲಾ ಸಂಭವನೀಯ ಸನ್ನಿವೇಶಗಳನ್ನು ಮತ್ತು ಅನುಸರಿಸಬೇಕಾದ ಕ್ರಮಗಳನ್ನು ನಾವು ಪಟ್ಟಿ ಮಾಡುತ್ತೇವೆ.
1) ಅಪಘಾತದಿಂದ ಅಥವಾ ಸಹಜ ಕಾರಣಗಳಿಂದ ಸಾವು
ಇನ್ಶೂರ್ ಆದ ವ್ಯಕ್ತಿಯ ಮರಣದ ನಂತರ, ನಾಮಿನಿಯು ಈ ಕೆಳಗಿನ ಹಂತಗಳಲ್ಲಿ ಮರಣದ ಕ್ಲೈಮ್ ಮಾಡಬಹುದು.
- ಹಂತ 1: ಆಮ್ ಆದ್ಮಿ ಬಿಮಾ ಯೋಜನೆಯ ಡೆತ್ ಕ್ಲೈಮ್ ಫಾರ್ಮ್ ಅನ್ನು ಭರ್ತಿ ಮಾಡಿ.
- ಹಂತ 2: ಪಾಲಿಸಿಹೋಲ್ಡರ್ ನ ಮೂಲ ಮರಣ ಪ್ರಮಾಣಪತ್ರ ಮತ್ತು ಒಂದು ದೃಢೀಕರಿಸಿದ ಪ್ರತಿಯೊಂದಿಗೆ ಅದನ್ನು ಸಂಬಂಧಪಟ್ಟ ನೋಡಲ್ ಏಜೆನ್ಸಿ ಅಧಿಕಾರಿಗೆ ಸಲ್ಲಿಸಿ.
- ಹಂತ 3: ಪರಿಶೀಲನೆಯ ನಂತರ, ಅಧಿಕಾರಿಯು ಕ್ಲೈಮ್ ಫಾರ್ಮ್ ಅನ್ನು ಒದಗಿಸಲಾದ ಡಾಕ್ಯುಮೆಂಟ್ ಗಳು ಮತ್ತು ಮೃತ ಪಾಲಿಸಿದಾರರ ಅರ್ಹತಾ ಪ್ರಮಾಣಪತ್ರದೊಂದಿಗೆ ಸಲ್ಲಿಸುತ್ತಾರೆ.
ಆಕಸ್ಮಿಕ ಮರಣದ ಪ್ರಕರಣದಲ್ಲಿ, ನಾಮಿನಿಗಳು ಮರಣೋತ್ತರ ಪರೀಕ್ಷೆಯ ವರದಿ, ಎಫ್‌ಐಆರ್, ಪೊಲೀಸ್ ವಿಚಾರಣೆ ವರದಿ ಮತ್ತು ಅಂತಿಮ ಪೊಲೀಸ್ ವರದಿಯ ಪ್ರತಿಗಳನ್ನು ಸಹ ಸಲ್ಲಿಸಬೇಕಾಗುತ್ತದೆ.
2) ಭಾಗಶಃ ಅಥವಾ ಸಂಪೂರ್ಣ ಅಂಗವೈಕಲ್ಯ
ಅಂಗವೈಕಲ್ಯ ಕ್ಲೈಮ್ ಅನ್ನು ಸಲ್ಲಿಸಲು, ಪಾಲಿಸಿದಾರರು ಆಮ್ ಆದ್ಮಿ ಬಿಮಾ ಯೋಜನಾ ಕ್ಲೈಮ್ ಫಾರ್ಮ್ ಜೊತೆಗೆ ಈ ಕೆಳಗಿನ ಡಾಕ್ಯುಮೆಂಟ್ ಗಳನ್ನು ಸಲ್ಲಿಸಬೇಕಾಗುತ್ತದೆ.
- ಪೊಲೀಸ್ ಎಫ್‌ಐಆರ್‌ನಂತಹ ಅಪಘಾತದ ಪುರಾವೆಯನ್ನು ಹೊಂದಿರುವ ಡಾಕ್ಯುಮೆಂಟ್ ಗಳು.
- ಅಂಗವೈಕಲ್ಯದ ವಿವರಗಳನ್ನು ಮತ್ತು ಪ್ರಕಾರವನ್ನು ತಿಳಿಸುವ ವೈದ್ಯಕೀಯ ಸರ್ಟಿಫಿಕೇಟ್. ಇದನ್ನು ಒಬ್ಬ ನೋಂದಾಯಿತ ಸರ್ಕಾರಿ ಆರ್ಥೋಪೆಡಿಕ್ ಅಥವಾ ಸರ್ಕಾರಿ ಸಿವಿಲ್ ಸರ್ಜನ್ ನೀಡಬೇಕು.
- ಸ್ಕಾಲರ್‌ಶಿಪ್ ಪ್ರಯೋಜನ
ನಿಮ್ಮ ಮಗುವು ಎಎಬಿವೈ ಅಡಿಯಲ್ಲಿ ಸ್ಕಾಲರ್‌ಶಿಪ್ ಪ್ರಯೋಜನಕ್ಕೆ ಅರ್ಹರಾಗಿದ್ದರೆ, ನೀವು ಆಮ್ ಆದ್ಮಿ ಬಿಮಾ ಯೋಜನಾ ಸ್ಕಾಲರ್‌ಶಿಪ್ ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಅದನ್ನು ನಿಮ್ಮ ನೋಡಲ್ ಏಜೆನ್ಸಿಗೆ ಸಲ್ಲಿಸಬೇಕು.
ನಿಮ್ಮ ಮಗು ಅರ್ಹತಾ ಮಿತಿಗಳನ್ನು ದಾಟಿದೆಯೇ ಎಂದು ನೋಡಲ್ ಏಜೆನ್ಸಿಯು ಪರಿಶೀಲನೆ ನಡೆಸಲು ಪ್ರತಿ 6 ತಿಂಗಳಿಗೊಮ್ಮೆ ಈ ವಿಧಾನವನ್ನು ಅನುಸರಿಸಬೇಕಾಗುತ್ತದೆ. ನಂತರ ಸಂಸ್ಥೆಯು ಗುರುತಿಸಲಾದ ವಿದ್ಯಾರ್ಥಿಗಳ ಪಟ್ಟಿಯನ್ನು ಎಲ್ಐಸಿ ಯ ಪಿಂಚಣಿ ಮತ್ತು ಗುಂಪು ಯೋಜನೆ ಘಟಕಕ್ಕೆ ಕಳುಹಿಸುತ್ತದೆ.
ಈ ಪಟ್ಟಿಯು ಪ್ರತಿ ಫಲಾನುಭವಿಯ ಕುರಿತು ಈ ಕೆಳಗಿನ ವಿವರಗಳನ್ನು ಹೊಂದಿರಬೇಕು.
- ವಿದ್ಯಾರ್ಥಿಯ ಹೆಸರು
- ತರಗತಿ
- ಶಾಲೆಯ ಹೆಸರು
- ಇನ್ಶೂರ್ ಆಗಿರುವವರ ಹೆಸರು
- ಆಮ್ ಆದ್ಮಿ ಬಿಮಾ ಯೋಜನೆ ಪಾಲಿಸಿ ಸಂಖ್ಯೆ
- ಎನ್ಇಎಫ್ಟಿ ಸಂಖ್ಯೆ
- ಇನ್ಶೂರ್ ಆದ ಸದಸ್ಯರ ಸದಸ್ಯತ್ವ ಸಂಖ್ಯೆ.
ಅರ್ಹ ವಿದ್ಯಾರ್ಥಿಗಳ ಸಂಪೂರ್ಣ ಪಟ್ಟಿಯನ್ನು ಸ್ವೀಕರಿಸಿದ ನಂತರ, ಎಲ್ಐಸಿಯು ಸ್ಕಾಲರ್‌ಶಿಪ್ ಮೊತ್ತವನ್ನು ಪಾಲಿಸಿದಾರರ ಬ್ಯಾಂಕ್ ಖಾತೆಗೆ ಎನ್ಇಎಫ್ಟಿ ಮೂಲಕ ವರ್ಗಾಯಿಸುತ್ತದೆ.
ಈ ಸಂಪೂರ್ಣ ಕಾರ್ಯವಿಧಾನದ ಹಲವಾರು ಜಟಿಲತೆಗಳನ್ನು ಗಮನಿಸಿದರೆ, ಆಸಕ್ತ ವ್ಯಕ್ತಿಗಳು ಗೊಂದಲಗಳು ಮತ್ತು ಪ್ರಶ್ನೆಗಳನ್ನು ಹೊಂದಲು ಸಾಧ್ಯವಿದೆ.
ಸರಿ, ಅದಕ್ಕಾಗಿ, ನೀವು ಎಲ್ಐಸಿ ಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಆಮ್ ಆದ್ಮಿ ಬಿಮಾ ಯೋಜನೆಯ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. ನಿಮ್ಮ ಹತ್ತಿರದ ಎಲ್ಐಸಿ ಶಾಖೆಯ ಸಂಪರ್ಕ ವಿವರಗಳ ಮೂಲಕವೂ ನಿಮ್ಮ ಪ್ರಶ್ನೆಗಳನ್ನು ನೀವು ಫಾರ್ವರ್ಡ್ ಮಾಡಬಹುದು.