ಮೋಟಾರ್
ಹೆಲ್ತ್
ಮೋಟಾರ್
ಹೆಲ್ತ್
More Products
ಮೋಟಾರ್
ಹೆಲ್ತ್
ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
Exclusive
Wellness Benefits
24*7 Claims
Support
Tax Savings
u/s 80D
Try agian later
I agree to the Terms & Conditions
{{abs.isPartnerAvailable ? 'We require some time to check & resolve the issue. If customers policy is expiring soon, please proceed with other insurers to issue the policy.' : 'We require some time to check & resolve the issue.'}}
We wouldn't want to lose a customer but in case your policy is expiring soon, please consider exploring other insurers.
Analysing your health details
Please wait a moment....
Terms and conditions
Terms and conditions
ಅನಾರೋಗ್ಯದ ಚಿಕಿತ್ಸೆಗೆ ಖಾಲಿಯಾದ ಬಳಿಕ ಇನ್ಶೂರೆನ್ಸ್ ಕಂಪನಿಯು ಸಮ್ ಇನ್ಶೂರ್ಡ್ ಅನ್ನು ರೀಸ್ಟೋರ್ ಮಾಡುವ ಪ್ರಯೋಜನವೇ ರೀಸ್ಟೊರೇಷನ್ ಬೆನಿಫಿಟ್.
ಆದ್ದರಿಂದ, ನೀವು ಸಂಪೂರ್ಣ ಸಮ್ ಇನ್ಶೂರ್ಡ್ ಅನ್ನು ಬಳಸಿದ್ದರೂ ಸಹ ಚಿಂತಿಸಬೇಕಿಲ್ಲ. ನೀವು ಈ ಪ್ರಯೋಜನವನ್ನು ಹೊಂದಿದ್ದರೆ ನಿಮ್ಮ ಇನ್ಶೂರೆನ್ಸ್ ಕಂಪನಿಯು ಸಂಪೂರ್ಣ ಸಮ್ ಇನ್ಶೂರ್ಡ್ ಅನ್ನು ರೀಸ್ಟೋರ್ ಮಾಡಬಹುದು ಮತ್ತು ನೀವದನ್ನು ಭವಿಷ್ಯದಲ್ಲಿ ಬಳಸಿಕೊಳ್ಳಬಹುದು.
ಇದನ್ನು ಒಂದು ಉದಾಹರಣೆಯೊಂದಿಗೆ ಅರ್ಥಮಾಡಿಕೊಳ್ಳೋಣ - ಶ್ರೀ ರವಿ ಅವರು ರೀಸ್ಟೊರೇಷನ್ ಬೆನಿಫಿಟ್ನೊಂದಿಗೆ ₹ 4 ಲಕ್ಷಗಳ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದಾರೆ. ಅವರು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ₹4 ಲಕ್ಷ ರೂಪಾಯಿಗಳ ಸಂಪೂರ್ಣ ಸಮ್ ಇನ್ಶೂರ್ಡ್ ಖಾಲಿಯಾಯಿತು.
ಕೆಲವು ತಿಂಗಳ ನಂತರ ರವಿಯವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಇದಕ್ಕೆ ಸುಮಾರು ₹2 ಲಕ್ಷ ವೆಚ್ಚದ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಈಗ ಇನ್ಶೂರೆನ್ಸ್ ಕಂಪನಿ ರವಿಯವರ ಶಸ್ತ್ರಚಿಕಿತ್ಸೆ, ಆಸ್ಪತ್ರೆ ದಾಖಲಾತಿ ಮತ್ತು ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಭರಿಸುತ್ತದೆ. ಏಕೆಂದರೆ ರವಿಯವರು ತಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ರೀಸ್ಟೊರೇಷನ್ ಬೆನಿಫಿಟ್ ಅನ್ನು ಆರಿಸಿಕೊಂಡಿದ್ದರಿಂದ ₹ 4 ಲಕ್ಷಗಳ ಮೂಲ ಸಮ್ ಇನ್ಶೂರ್ಡ್ ಅನ್ನು ಕಂಪನಿ ರೀಸ್ಟೋರ್ ಮಾಡಿದೆ.
ಕೇವಲ ಆಡಂಬರದ ಪ್ರಯೋಜನ ನೀಡಿ ಗ್ರಾಹಕರನ್ನು ಓಲೈಸುವುದರಲ್ಲಿ ನಮಗೆ ನಂಬಿಕೆಯಿಲ್ಲ. ದೀರ್ಘಾವಧಿಯಲ್ಲಿ ನಿಮಗೆ ನಿಜವಾಗಿಯೂ ಸಹಾಯವಾಗುವ ರೀಸ್ಟೊರೇಷನ್ ಬೆನಿಫಿಟ್ನಂತಹ ನೈಜ ಪ್ರಯೋಜನಗಳನ್ನು ನಾವು ನಿಮಗೆ ನೀಡುತ್ತೇವೆ.
ಇದು ಏಕೆ ಮುಖ್ಯ - ಇದು ತುಂಬಾ ಮುಖ್ಯ ಮತ್ತು ಪ್ರಯೋಜನಕಾರಿಯಾಗಿದೆ. ಏಕೆಂದರೆ ನೀವಿದನ್ನು ಆಯ್ಕೆ ಮಾಡಿದಾಗ ನೀವು ಬುದ್ಧಿವಂತ ನಿರ್ಧಾರವನ್ನು ತೆಗೆದುಕೊಂಡಿದ್ದೀರಿ ಎದರ್ಥ.
ಯಾವುದೇ ಸಂದರ್ಭದಲ್ಲಿ ಬ್ಯಾಕ್-ಅಪ್ ಯೋಜನೆಯನ್ನು ಹೊಂದಿರುವುದು ಯಾವಾಗಲೂ ಅವಶ್ಯಕ. ವಿಶೇಷವಾಗಿ ನಿಮ್ಮ ಆರೋಗ್ಯದ ವಿಷಯಕ್ಕೆ ಬಂದಾಗ. ಅಂತೆಯೇ, ರೀಸ್ಟೊರೇಷನ್ ಬೆನಿಫಿಟ್ ನಿಮ್ಮ ಬ್ಯಾಕ್-ಅಪ್ ಯೋಜನೆಯಾಗಿದೆ ಮತ್ತು ಅಗತ್ಯವಿದ್ದಾಗ ನಿಮಗೆ ಸಹಾಯ ಮಾಡುತ್ತದೆ.
ಇದರ ಬಗ್ಗೆ ಇನ್ನಷ್ಟು ಓದಿ:
ನಿಮಗೆ ಎರಡು ವಿಧದ ರೀಸ್ಟೊರೇಷನ್ ಆಯ್ಕೆಗಳು ಲಭ್ಯವಿವೆ. ನೀವು ಅವುಗಳಲ್ಲಿ ಒಂದನ್ನು ಆಯ್ಕೆಮಾಡುವ ಮೊದಲು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಗಮನವಿಟ್ಟು ಓದಬೇಕೆಂದು ನಾವು ಸೂಚಿಸುತ್ತೇವೆ:
ಸಮ್ ಇನ್ಶೂರ್ಡ್ ಸಂಪೂರ್ಣ ಬಳಕೆ - ಈ ಆಯ್ಕೆಯಲ್ಲಿ ಸಮ್ ಇನ್ಶೂರ್ಡ್ ಸಂಪೂರ್ಣ ಖಾಲಿಯಾದಾಗ ಮಾತ್ರ ಈ ಪ್ರಯೋಜನವು ಕಾರ್ಯರೂಪಕ್ಕೆ ಬರುತ್ತದೆ.
ಸಮ್ ಇನ್ಶೂರ್ಡ್ ಭಾಗಶಃ ಬಳಕೆ - ಈ ಆಯ್ಕೆಯಲ್ಲಿ ಸಮ್ ಇನ್ಶೂರ್ಡ್ ನಲ್ಲಿ ಒಂದು ಭಾಗ ಖಾಲಿಯಾದಾಗಲೂ ಪ್ರಯೋಜನವು ಜಾರಿಗೆ ಬರುತ್ತದೆ.
ನಿಮ್ಮ ಪಾಲಿಸಿಯ ಗರಿಷ್ಠ ಪ್ರಯೋಜನಗಳನ್ನು ಆನಂದಿಸಲು ಫ್ಯಾಮಿಲಿ ಫ್ಲೋಟರ್ ಪಾಲಿಸಿಯನ್ನು ಖರೀದಿಸುವಾಗ ಈ ಆ್ಯಡ್-ಆನ್ ಪ್ರಯೋಜನವನ್ನೂ ಖರೀದಿಸುವಂತೆ ನಾವು ನಿಮಗೆ ಸಲಹೆ ನೀಡುತ್ತೇವೆ. ಈ ಪ್ರಯೋಜನವು ನಿಮ್ಮ ಫ್ಯಾಮಿಲಿ ಫ್ಲೋಟರ್ ಯೋಜನೆಗೆ ಸರಿಹೊಂದುತ್ತದೆ ಮತ್ತು ಇದು ನಿಮ್ಮ ಯೋಜನೆಗೆ ಸರಿಯಾದ ಮೌಲ್ಯವನ್ನು ಸೇರಿಸುತ್ತದೆ.
ಇದರ ಬಗ್ಗೆ ಕಡಿಮೆ ತಿಳಿದುಕೊಂಡವರಿಗೆ ಹೇಳುವುದಾದರೆ, ಫ್ಯಾಮಿಲಿ ಫ್ಲೋಟರ್ ಯೋಜನೆಗಳಲ್ಲಿ ಕುಟುಂಬದ ಸದಸ್ಯರ ನಡುವೆ ಪ್ರಯೋಜನವು 'ಹಂಚಲ್ಪಡುತ್ತದೆ'. ಅಂತಹ ಪಾಲಿಸಿಗಳಲ್ಲಿ, ರಿಸ್ಟೊರೇಷನ್ ಬೆನಿಫಿಟ್ ವೈಶಿಷ್ಟ್ಯವು ಉಪಯೋಗಕ್ಕೆ ಬರುತ್ತದೆ.
ಉದಾಹರಣೆಗೆ, ನೀವು ₹4 ಲಕ್ಷಗಳ ಸಮ್ ಇನ್ಶೂರ್ಡ್ ನೊಂದಿಗೆ ಫ್ಲೋಟರ್ ಯೋಜನೆಯನ್ನು ಪಡೆದಿರುವಿರಿ. ಇಂತಹ ಸಂದರ್ಭದಲ್ಲಿ ನಿಮ್ಮ ಸಂಗಾತಿಯು ಅನಾರೋಗ್ಯಕ್ಕೆ ಒಳಗಾದರೆ ಸಂಪೂರ್ಣ ಕವರೇಜ್ ಅನ್ನು ಬಳಸಲಾಗುತ್ತದೆ.
ದುರದೃಷ್ಟವಶಾತ್, ಅದೇ ಪಾಲಿಸಿ ವರ್ಷದಲ್ಲಿ ನಿಮ್ಮ ಕುಟುಂಬದ ಮತ್ತೊಬ್ಬ ಸದಸ್ಯರು ಸಹ ಆಸ್ಪತ್ರೆಗೆ ದಾಖಲಾದರೆ ಆ ಪರಿಸ್ಥಿತಿಯಲ್ಲಿ ನಿಮ್ಮ ಸಮ್ ಇನ್ಶೂರ್ಡ್ ಅನ್ನು ರೀಸ್ಟೋರ್ ಮಾಡಲಾಗುವ ವೈಶಿಷ್ಟ್ಯದಿಂದ ನಿಮಗೆ ಸಹಾಯ ಆಗುತ್ತದೆ.
ರೀಸ್ಟೊರೇಷನ್ ಬೆನಿಫಿಟ್ ಆರ್ಥಿಕವಾಗಿಯೂ ಸಹ ಪ್ರಯೋಜನಕಾರಿಯಾಗಿದೆ. ಆದಾಗ್ಯೂ, ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಅನ್ನು ನಿರ್ಧರಿಸುವ ಮುಖ್ಯ ನಿಯಮಗಳಲ್ಲಿ ಒಂದನ್ನು ಗಮನದಲ್ಲಿಟ್ಟುಕೊಳ್ಳಿ. ಪಾಲಿಸಿಯೊಂದಿಗೆ ಬರುವ ಹೆಚ್ಚಿನ ವೈಶಿಷ್ಟ್ಯಗಳನ್ನು ಆಯ್ಕೆ ಮಾಡಿದಷ್ಟೂ ಅದರ ಪ್ರೀಮಿಯಂ ಅಮೌಂಟ್ ಹೆಚ್ಚಾಗುತ್ತದೆ.
ಈ ಪ್ರಯೋಜನವು ಖಂಡಿತವಾಗಿಯೂ ಪ್ರೀಮಿಯಂ ಮೊತ್ತವನ್ನು ಹೆಚ್ಚಿಸುತ್ತದೆ. ಇದು ಹೆಚ್ಚುವರಿ ಯೋಜನೆಗಾಗಿ ಇನ್ಶೂರೆನ್ಸ್ ಪಡೆದ ವ್ಯಕ್ತಿಯು ಖರ್ಚು ಮಾಡುವ ಹೆಚ್ಚುವರಿ ವೆಚ್ಚವಾಗಿದೆ.
ಉದಾಹರಣೆಗೆ, ₹4 ಲಕ್ಷಗಳ ಇನ್ಶೂರೆನ್ಸ್ ಯೋಜನೆಯಲ್ಲಿ 34 ವರ್ಷ ವಯಸ್ಸಿನವರು ವಾರ್ಷಿಕವಾಗಿ ₹ 5,000ಕ್ಕಿಂತ ಸ್ವಲ್ಪ ಹೆಚ್ಚು ಮೊತ್ತ ಕಟ್ಟಬೇಕಾಗಿರುತ್ತದೆ. ರೀಸ್ಟೊರೇಷನ್ ಬೆನಿಫಿಟ್ ಅನ್ನು ಹೊಂದಿದ್ದರೆ ಯೋಜನೆಗೆ ₹ 6,000ಕ್ಕಿಂತ ಹೆಚ್ಚು ಮೊತ್ತ ಕಟ್ಟಬೇಕಿರುತ್ತದೆ.
ರೀಸ್ಟೊರೇಷನ್ ಬೆನಿಫಿಟ್ ಸಂಬಂಧವಿಲ್ಲದ ವೈದ್ಯಕೀಯ ಸ್ಥಿತಿಯಲ್ಲಿ ಪ್ರಚೋದನೆಗೊಳಪಡುತ್ತದೆ
ಇದು ನಿಮ್ಮ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನೀವು ಖರೀದಿಸಬಹುದಾದ 'ಆ್ಯಡ್-ಆನ್' ಪ್ರಯೋಜನವಾಗಿದೆ
ಕೊಂಚ ಹೆಚ್ಚುವರಿ ವೆಚ್ಚದೊಂದಿಗೆ ಪಾಲಿಸಿಯನ್ನು ಖರೀದಿಸುವಾಗ ಇದನ್ನು ತೆಗೆದುಕೊಳ್ಳಬಹುದು
ಸಮ್ ಇನ್ಶೂರ್ಡ್ ಸಂಪೂರ್ಣ ಅಥವಾ ಭಾಗಶಃ ಮುಗಿದ ನಂತರ ರೀಸ್ಟೋರ್ ಆಗುತ್ತದೆ
ರೀಸ್ಟೊರೇಷನ್ ಮಾಡಲಾದ ಸಮ್ ಇನ್ಶೂರ್ಡ್ ಮುಂದಿನ ಪಾಲಿಸಿ ವರ್ಷಕ್ಕೆ ಮುಂದುವರಿಯುವುದು ಸಾಧ್ಯವಿಲ್ಲ
ಮೊದಲ ಕ್ಲೈಮ್ನಲ್ಲಿ ರೀಸ್ಟೊರೇಷನ್ ಬೆನಿಫಿಟ್ ಅನ್ವಯಿಸುವುದಿಲ್ಲ
ಇದು ಕೇವಲ ಹೆಚ್ಚಿನ ಸಮ್ ಇನ್ಶೂರ್ಡ್ ಗೆ ಮಾತ್ರ ಅನ್ವಯಿಸುವುದು ಅಲ್ಲ. ಬದಲಿಗೆ ಯಾವುದೇ ನಿರ್ದಿಷ್ಟ ಸಮ್ ಇನ್ಶೂರ್ಡ್ ಗೂ ಅನ್ವಯಿಸಬಹುದು
ಪಾಲಿಸಿ ಅವಧಿಯೊಳಗೆ ನೀವು ಒಂದೇ ಕ್ಲೈಮ್ನಲ್ಲಿ ಸಮ್ ಇನ್ಶೂರ್ಡ್ ಅನ್ನು ಬಳಸಿದ ನಂತರ ರೀಸ್ಟೊರೇಷನ್ ಬೆನಿಫಿಟ್ ಒಟ್ಟು ಸಮ್ ಇನ್ಶೂರ್ಡ್ ಅನ್ನು ರೀಸ್ಟೋರ್ ಮಾಡುತ್ತದೆ
ರಿಸ್ಟೊರೇಷನ್ ಬೆನಿಫಿಟ್ ಗಳು ಭವಿಷ್ಯದ ಕ್ಲೈಮ್ಗಳಿಗಾಗಿ ಮಾತ್ರ.
ಕೆಲವು ಕಂಪನಿಗಳು ಹೆಚ್ಚುವರಿ ಬೆಲೆಯಲ್ಲಿ 30 ರಿಂದ 45 ದಿನಗಳ ಅಂತರದಲ್ಲಿ ಮತ್ತದೇ ಕಾಯಿಲೆಗೆ ಒಳಗಾದರೆ ಪ್ರಯೋಜನವನ್ನು ರೀಸ್ಟೋರ್ ಮಾಡುವ ಸೌಲಭ್ಯ ನೀಡುತ್ತವೆ. ಇಲ್ಲದಿದ್ದರೆ ಇನ್ಶೂರೆನ್ಸ್ ಉದ್ಯಮ ಹೇಗಿರುತ್ತದೆ ಎಂದರೆ - ಹೆಲ್ತ್ ಇನ್ಶೂರೆನ್ಸ್ನಲ್ಲಿ ಸಂಬಂಧವಿಲ್ಲದ ಕಾಯಿಲೆಗಳಿಗೆ ಆಸ್ಪತ್ರೆ ದಾಖಲಾತಿ ಹೊಂದಿದರೆ ಮಾತ್ರ ರೀಸ್ಟೊರೇಷನ್ ಬೆನಿಫಿಟ್ ಅನ್ನು ಪಡೆಯಬಹುದು. ಉದಾಹರಣೆಗೆ, ನೀವು ಮೂಳೆ ಮುರಿತಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದೀರಿ ಮತ್ತು ಅದಕ್ಕಾಗಿ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಅನ್ನು ಕ್ಲೈಮ್ ಮಾಡಿದ್ದೀರಿ. ದುರದೃಷ್ಟವಶಾತ್, ಮುಂಬರುವ ತಿಂಗಳಲ್ಲಿ ನೀವು ಹಂದಿ ಜ್ವರಕ್ಕೆ ತುತ್ತಾಗಿದ್ದೀರಿ. ನೀವು ಮತ್ತದೇ ಕಾಯಿಲೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗದೇ ಇರುವುದರಿಂದ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ಸಂದರ್ಭದಲ್ಲಿ ನಿಮ್ಮ ರೀಸ್ಟೊರೇಷನ್ ಬೆನಿಫಿಟ್ಟ್ ಅನ್ನು ಆ್ಯಕ್ಟಿವೇಟ್ ಮಾಡಲಾಗುತ್ತದೆ.
ಕೆಲವು ಕಂಪನಿಗಳು ಹೆಚ್ಚುವರಿ ಬೆಲೆಯಲ್ಲಿ 30 ರಿಂದ 45 ದಿನಗಳ ಅಂತರದಲ್ಲಿ ಮತ್ತದೇ ಕಾಯಿಲೆಗೆ ಒಳಗಾದರೆ ಪ್ರಯೋಜನವನ್ನು ರೀಸ್ಟೋರ್ ಮಾಡುವ ಸೌಲಭ್ಯ ನೀಡುತ್ತವೆ.
ಇಲ್ಲದಿದ್ದರೆ ಇನ್ಶೂರೆನ್ಸ್ ಉದ್ಯಮ ಹೇಗಿರುತ್ತದೆ ಎಂದರೆ - ಹೆಲ್ತ್ ಇನ್ಶೂರೆನ್ಸ್ನಲ್ಲಿ ಸಂಬಂಧವಿಲ್ಲದ ಕಾಯಿಲೆಗಳಿಗೆ ಆಸ್ಪತ್ರೆ ದಾಖಲಾತಿ ಹೊಂದಿದರೆ ಮಾತ್ರ ರೀಸ್ಟೊರೇಷನ್ ಬೆನಿಫಿಟ್ ಅನ್ನು ಪಡೆಯಬಹುದು. ಉದಾಹರಣೆಗೆ, ನೀವು ಮೂಳೆ ಮುರಿತಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದೀರಿ ಮತ್ತು ಅದಕ್ಕಾಗಿ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಅನ್ನು ಕ್ಲೈಮ್ ಮಾಡಿದ್ದೀರಿ. ದುರದೃಷ್ಟವಶಾತ್, ಮುಂಬರುವ ತಿಂಗಳಲ್ಲಿ ನೀವು ಹಂದಿ ಜ್ವರಕ್ಕೆ ತುತ್ತಾಗಿದ್ದೀರಿ. ನೀವು ಮತ್ತದೇ ಕಾಯಿಲೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗದೇ ಇರುವುದರಿಂದ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ಸಂದರ್ಭದಲ್ಲಿ ನಿಮ್ಮ ರೀಸ್ಟೊರೇಷನ್ ಬೆನಿಫಿಟ್ಟ್ ಅನ್ನು ಆ್ಯಕ್ಟಿವೇಟ್ ಮಾಡಲಾಗುತ್ತದೆ.
ರೀಸ್ಟೊರೇಷನ್ ಬೆನಿಫಿಟ್ ಗಳು ಬಹುತೇಕ ಭವಿಷ್ಯದ ಕ್ಲೈಮ್ಗಳಿಗಾಗಿ ಇವೆ. ಆದ್ದರಿಂದ, ಅದೇ ಕ್ಲೈಮ್ನಲ್ಲಿ ರೀಸ್ಟೊರೇಷನ್ ಬೆನಿಫಿಟ್ ಪಡೆಯಲಾಗುವುದಿಲ್ಲ. ಉದಾಹರಣೆಗೆ, ನೀವು 5 ಲಕ್ಷಗಳ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ ಹಾಗೂ ನಿಮ್ಮ ಆಸ್ಪತ್ರೆಯ ವೆಚ್ಚ 8 ಲಕ್ಷವಾದರೆ ಹೆಚ್ಚುವರಿ 3 ಲಕ್ಷಗಳನ್ನು ನೀವು ನಿಮ್ಮ ಜೇಬಿನಿಂದ ಪಾವತಿಸಬೇಕಾಗುತ್ತದೆ. ನೀವು ಈಗಾಗಲೇ ಕೊನೆಯ ಕ್ಲೈಮ್ನಲ್ಲಿ ಸಂಪೂರ್ಣ ಮಿತಿಯನ್ನು ಬಳಸಿಕೊಂಡಿದ್ದರೂ ಮುಂದಿನ ದಿನಗಳಲ್ಲಿ ನೀವು ಮತ್ತೆ ಆಸ್ಪತ್ರೆಗೆ ದಾಖಲಾಗಬೇಕಾದರೆ ನಿಮ್ಮ ಸಮ್ ಇನ್ಶೂರ್ಡ್ 5 ಲಕ್ಷವನ್ನು ರೀಸ್ಟೋರ್ ಮಾಡಲಾಗುತ್ತದೆ. ಆದಾಗ್ಯೂ, ಕೆಲವು ಹೆಲ್ತ್ ಯೋಜನೆಗಳಲ್ಲಿ ಕ್ಲೈಮ್ ಅಮೌಂಟ್ ಸಮ್ ಇನ್ಶೂರ್ಡ್ ಅನ್ನು ಮೀರಿದರೆ ಅದು ಸ್ವಯಂಚಾಲಿತವಾಗಿ ರೀಸ್ಟೊರೇಷನ್ ಬೆನಿಫಿಟ್ ಅನ್ನು ಚಾಲ್ತಿಗೆ ತರುತ್ತದೆ.

ಹೆಚ್ಚಿನ ಹೆಲ್ತ್ ಇನ್ಶೂರೆನ್ಸ್ ಪೂರೈಕೆದಾರರು ಒಂದೇ ಕ್ಲೈಮ್ ಅಡಿಯಲ್ಲಿ ಸಂಪೂರ್ಣ ಸಮ್ ಇನ್ಶೂರ್ಡ್ ಖಾಲಿಯಾಗಿದ್ದರೆ ಮಾತ್ರ ಒಟ್ಟು ಸಮ್ ಇನ್ಶೂರ್ಡ್ ಅನ್ನು ರೀಸ್ಟೋರ್ ಮಾಡುತ್ತಾರೆ. ಆದರೆ ಇನ್ನೂ ಕೆಲವು ಹೆಲ್ತ್ ಇನ್ಶೂರೆನ್ಸ್ ಕಂಪನಿಗಳು ಹಾಸ್ಪಿಟಲೈಸೇಷನ್ ಅಗತ್ಯವಿದ್ದರೆ ತಕ್ಷಣವೇ ರಿಸ್ಟೊರೇಷನ್ ಬೆನಿಫಿಟ್ ಅನ್ನು ನೀಡುತ್ತಾರೆ. ಪಾಲಿಸಿ ವರ್ಷದಲ್ಲಿ ಅನೇಕ ಬಾರಿ ರೀಸ್ಟೋರ್ ಮಾಡಬಹುದಾದ ಕೆಲವು ಯೋಜನೆಗಳೂ ಇವೆ. ಆದ್ದರಿಂದ, ಈ ಪ್ರಯೋಜನವನ್ನು ಆಯ್ಕೆಮಾಡುವ ಮೊದಲು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಕಂಪನಿಯವರೊಂದಿಗೆ ಚರ್ಚಿಸುವಂತೆ ಯಾವಾಗಲೂ ಸಲಹೆ ನೀಡಲಾಗುತ್ತದೆ.

ಅಪಘಾತಗಳ ಸಂದರ್ಭವನ್ನು ನೋಡುವುದಾದರೆ, ಕೆಲವು ಹೆಲ್ತ್ ಪಾಲಿಸಿಗಳಲ್ಲಿ ಇನ್ಶೂರೆನ್ಸ್ ಹೊಂದಿದ ಸದಸ್ಯರು ಅನ್ಲಿಮಿಟೆಡ್ ಕವರೇಜನ್ನು ಹೊಂದಿರುತ್ತಾರೆ. ವ್ಯಕ್ತಿಯೊಬ್ಬರು ಸಮ್ ಇನ್ಶೂರ್ಡ್ ಆಗಿ 5 ಲಕ್ಷಗಳ ಮಿತಿಯೊಂದಿಗೆ ಫ್ಯಾಮಿಲಿ ಫ್ಲೋಟರ್ ಪಾಲಿಸಿಯನ್ನು ಹೊಂದಿದ್ದಾರೆ ಎಂದಿಟ್ಟುಕೊಳ್ಳಿ. ದುರದೃಷ್ಟವಶಾತ್, ಅಪಘಾತದಲ್ಲಿ ಕುಟುಂಬದ 3 ಸದಸ್ಯರು ಗಾಯಗೊಂಡಿದ್ದಾರೆ. ರೀಸ್ಟೊರೇಷನ್ ಬೆನಿಫಿಟ್ ಇಲ್ಲಿ ಪ್ರಾರಂಭಗೊಳ್ಳುತ್ತದೆ. ಪಾಲಿಸಿಯಡಿಯಲ್ಲಿ ಒಳಗೊಂಡಿರುವ ಕುಟುಂಬದ ಗಾಯಗೊಂಡ ಪ್ರತಿಯೊಬ್ಬ ಸದಸ್ಯರು ಸಮ್ ಇನ್ಶೂರ್ಡ್ ಆಗಿ 5 ಲಕ್ಷಗಳನ್ನು ಪಡೆಯುತ್ತಾರೆ. ಪರಿಣಾಮವಾಗಿ ಸಮ್ ಇನ್ಶೂರ್ಡ್ ಅನ್ನು 5 ಲಕ್ಷಗಳಿಂದ 15 ಲಕ್ಷಕ್ಕೆ ಹೆಚ್ಚಿಸಲಾಗುತ್ತದೆ.

ರೀಸ್ಟೊರೇಷನ್ ಬೆನಿಫಿಟ್ ಅನ್ನು ಭವಿಷ್ಯದ ಕ್ಲೈಮ್ಗಳಿಗೆ ಮಾತ್ರ ಕ್ಲೈಮ್ ಮಾಡಬಹುದಾಗಿದೆ. ಆದ್ದರಿಂದ ಆ ಸಮಯದಲ್ಲಿ ಒಬ್ಬ ವ್ಯಕ್ತಿ ಮಾತ್ರ ಅದನ್ನು ಪಡೆಯಬಹುದು. ಕಾಯಿಲೆಯ ಎದುರಾಗುವ ಸಂದರ್ಭಗಳು ವಿಭಿನ್ನ ಕಾಲಾವಧಿಯಲ್ಲಿ ಇರಬೇಕು. ಆದಾಗ್ಯೂ, ಫ್ಯಾಮಿಲಿ ಫ್ಲೋಟರ್ ಪಾಲಿಸಿಯಲ್ಲಿ ಕೆಲವು ವಿಶೇಷ ಸಂದರ್ಭಗಳಲ್ಲಿ ಬೇರೆ ಬೇರೆ ವ್ಯಕ್ತಿಗಳಿಗೆ ರೀಸ್ಟೊರೇಷನ್ ಬೆನಿಫಿಟ್ ಜಾರಿಗೆ ಬರಬಹುದು. ಉದಾಹರಣೆಗೆ ಅಪಘಾತದಿಂದಾಗಿ, ಕುಟುಂಬದ ಅನೇಕ ಸದಸ್ಯರು ಗಾಯಗೊಂಡಿದ್ದರೆ ಮತ್ತು ಆಸ್ಪತ್ರೆಗೆ ದಾಖಲಾದರೆ, ವಿವಿಧ ಸದಸ್ಯರು ರೀಸ್ಟೊರೇಷನ್ ಬೆನಿಫಿಟ್ ಪಡೆಯಬಹುದು.

Please try one more time!
ಆರೋಗ್ಯ ವಿಮೆಗೆ ಸಂಬಂಧಿಸಿದ ಇನ್ನಷ್ಟು ಲೇಖನಗಳು
ಹಕ್ಕು ನಿರಾಕರಣೆ #1: *ಗ್ರಾಹಕರು ವಿಮೆಯನ್ನು ಪಡೆಯುವ ಸಮಯದಲ್ಲಿ ಆಯ್ಕೆಗಳನ್ನು ಆಯ್ಕೆ ಮಾಡಬಹುದು. ಪ್ರೀಮಿಯಂ ಮೊತ್ತವು ಅನುಗುಣವಾಗಿ ಬದಲಾಗಬಹುದು. ವಿಮೆದಾರರು ಪ್ರಸ್ತಾವನೆ ರೂಪದಲ್ಲಿ ಪಾಲಿಸಿ ನೀಡುವ ಮೊದಲು ಯಾವುದೇ ಪೂರ್ವ ಅಸ್ತಿತ್ವದಲ್ಲಿರುವ ಸ್ಥಿತಿಯನ್ನು ಅಥವಾ ಚಿಕಿತ್ಸೆಗೆ ಹೋಗುತ್ತಿರುವುದನ್ನು ಬಹಿರಂಗಪಡಿಸುವ ಅಗತ್ಯವಿದೆ.
ಹಕ್ಕುತ್ಯಾಗ #2: ಈ ಮಾಹಿತಿಯನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಸೇರಿಸಲಾಗಿದೆ ಮತ್ತು ಇಂಟರ್ನೆಟ್ನಾದ್ಯಂತ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ. ಅಂಕಿ ವಿಮೆ ಇಲ್ಲಿ ಯಾವುದನ್ನೂ ಪ್ರಚಾರ ಮಾಡುತ್ತಿಲ್ಲ ಅಥವಾ ಶಿಫಾರಸು ಮಾಡುತ್ತಿಲ್ಲ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ದಯವಿಟ್ಟು ಮಾಹಿತಿಯನ್ನು ಪರಿಶೀಲಿಸಿ.
Get 10+ Exclusive Features only on Digit App
closeAuthor: Team Digit
Last updated: 25-10-2024
CIN: U66010PN2016PLC167410, IRDAI Reg. No. 158.
ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ (ಹಿಂದೆ ಒಬೆನ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು) - ರಿಜಿಸ್ಟರ್ಡ್ ಆಫೀಸ್ ವಿಳಾಸ - 1 ರಿಂದ 6ನೇ ಮಹಡಿಗಳು, ಅನಂತ ಒನ್ (ಎಆರ್ ಒನ್), ಪ್ರೈಡ್ ಹೋಟೆಲ್ ಲೇನ್, ನರ್ವೀರ್ ತಾನಾಜಿ ವಾಡಿ, ಸಿಟಿ ಸರ್ವೆ ನಂ.1579, ಶಿವಾಜಿ ನಗರ, ಪುಣೆ -411005, ಮಹಾರಾಷ್ಟ್ರ | ಕಾರ್ಪೊರೇಟ್ ಆಫೀಸ್ ವಿಳಾಸ - ಅಟ್ಲಾಂಟಿಸ್, 95, 4ನೇ B ಕ್ರಾಸ್ ರೋಡ್, ಕೋರಮಂಗಲ ಇಂಡಸ್ಟ್ರಿಯಲ್ ಲೇಔಟ್, 5ನೇ ಬ್ಲಾಕ್, ಬೆಂಗಳೂರು-560095, ಕರ್ನಾಟಕ | ಮೇಲೆ ಡಿಸ್ಪ್ಲೇ ಮಾಡಲಾದ ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಎಂಬ ಟ್ರೇಡ್ ಲೋಗೋ, ಗೋ ಡಿಜಿಟ್ ಇನ್ಫೋವರ್ಕ್ಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಗೆ ಸೇರಿದೆ ಮತ್ತು ಇದನ್ನು ಲೈಸೆನ್ಸ್ನ ಅಡಿಯಲ್ಲಿ ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಒದಗಿಸಿದೆ ಮತ್ತು ಬಳಸುತ್ತದೆ.