ಮೆಂಟಲ್ ಹೆಲ್ತ್ ಮತ್ತು ಸ್ವಾಸ್ಥ್ಯದ ಸುತ್ತ ಬಹುದೊಡ್ಡ ಕಳಂಕವಿದೆ. ಅದೃಷ್ಟವಶಾತ್, ಈಗ ಕಾಲ ಬದಲಾಗುತ್ತಿದಂತೆ ಜನರು ಮೆಂಟಲ್ ಹೆಲ್ತ್ ಬಗ್ಗೆ ಮಾತನಾಡಲು ಹೆಚ್ಚು ಮುಕ್ತರಾಗಿದ್ದಾರೆ ಮತ್ತು ಇದನ್ನು ದೈಹಿಕ ಕಾಯಿಲೆಯಷ್ಟೇ ಗಂಭೀರವಾಗಿ ಪರಿಗಣಿಸುತ್ತಾರೆ. ಇದೇ ಬದಲಾವಣೆಯನ್ನು ಇನ್ಶೂರೆನ್ಸ್ ಕ್ಷೇತ್ರದಲ್ಲೂ ತರಲಾಗಿದೆ.
16ನೇ ಆಗಸ್ಟ್ ರಂದು ಇನ್ಶೂರೆನ್ಸ್ ರೆಗ್ಯುಲೇಟರಿ ಆ್ಯಂಡ್ ಡೆವಲಪ್ ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐಆರ್ಡಿಎಐ) ಇನ್ಶೂರೆನ್ಸ್ ಕಂಪನಿಗಳಿಗೆ ಮೆಂಟಲ್ ಇಲ್ನೆಸ್ ಅನ್ನು ಕವರ್ ಮಾಡಲು ವ್ಯವಸ್ಥೆ ಮಾಡುವಂತೆ ಕೇಳಿದೆ . ವಿಶೇಷವಾಗಿ ಭಾರತದಲ್ಲಿ ಮೆಂಟಲ್ ಹೆಲ್ತ್ ದೊಡ್ಡ ವ್ಯಾಪ್ತಿಯನ್ನು ಹೊಂದಿರುವುದರಿಂದ ಇದು ಸ್ವಾಗತಾರ್ಹ ಹೆಜ್ಜೆಯಾಗಿದೆ. ಆದ್ದರಿಂದ ಮೆಂಟಲ್ ಹೆಲ್ತ್ ಇನ್ಶೂರೆನ್ಸ್ ಈಗ ನಿಜವಾಗಿದೆ ಮತ್ತು ಇನ್ನು ಮುಂದೆ ಇದನ್ನು ನಿಮ್ಮ ಹೆಲ್ತ್ ಇನ್ಶೂರೆನ್ಸ್ ನಿಂದ ಹೊರಗಿಡಲಾಗುವುದಿಲ್ಲ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ ಹಣಕಾಸಿನ ವರ್ಷ 2016ಗಾಗಿ ನಡೆಸಿದ ಭಾರತದ ರಾಷ್ಟ್ರೀಯ ಮೆಂಟಲ್ ಹೆಲ್ತ್ ಸಮೀಕ್ಷೆಯ ಪ್ರಕಾರ, ಸುಮಾರು 15% ಭಾರತೀಯ ವಯಸ್ಕರಿಗೆ ಒಂದು ಅಥವಾ ಹೆಚ್ಚಿನ ಮೆಂಟಲ್ ಹೆಲ್ತ್ ಸಮಸ್ಯೆಗಳಿಗೆ ಚಿಕಿತ್ಸೆಯ ಅಗತ್ಯವಿದೆ.
ಮೆಂಟಲ್ ಹೆಲ್ತ್ ಇನ್ಶೂರೆನ್ಸ್ ಯಾವುದೇ ಮೆಂಟಲ್ ಇಲ್ನೆಸ್ ಕಾರಣದಿಂದ ಯಾರಾದರೂ ಒಳರೋಗಿಯಾಗಿ ಹಾಸ್ಪಿಟಲೈಸ್ ಆಗಬೇಕಾದಾಗ ಉಂಟಾಗುವ ಯಾವುದೇ ವೆಚ್ಚವನ್ನು ಒಳಗೊಂಡಿದೆ. ಇದು ಡಯಾಗ್ನಾಸ್ಟಿಕ್ಸ್, ಔಷಧಿಗಳು, ಚಿಕಿತ್ಸಾ ವೆಚ್ಚಗಳು, ರೂಂ ಬಾಡಿಗೆ, ರೋಡ್ ಆಂಬ್ಯುಲೆನ್ಸ್ ಶುಲ್ಕಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ.
ಯಾವುದೇ ಒಬ್ಬ ವ್ಯಕ್ತಿಯು ಇಂತಹ ಕಾಯಿಲೆ ಬರುವ ಸಾಧ್ಯತೆ ಇರುವಂತಹ ಕೌಟುಂಬಿಕ ಇತಿಹಾಸ ಅಥವಾ ಯಾವುದೇ ಆಘಾತಕಾರಿ ಅನುಭವವನ್ನು ಹೊಂದಿದ್ದರೆ ಅವರಿಗೆ ಈ ಮೆಂಟಲ್ ಹೆಲ್ತ್ ಇನ್ಶೂರೆನ್ಸ್ ಕವರೇಜ್ ಸೂಕ್ತವಾಗಿದೆ. ಅಪಘಾತದ ನಂತರದ ಮಾನಸಿಕ ಧಕ್ಕೆ ಅಥವಾ ಪ್ರೀತಿಪಾತ್ರರನ್ನು ಕಳೆದುಕೊಂಡ ಅಗಾಧ ವೇದನೆಯಿಂದ ಬಳಲುತ್ತಿರುವ ಯಾರಿಗಾದರೂ ಸಹ ಇದು ಉಪಯುಕ್ತವಾಗಿದೆ. ಒತ್ತಡದ ಜೀವನಶೈಲಿ ಮತ್ತು ಜೀವನ ಪರಿಸ್ಥಿತಿಗಳ ಪ್ರಸ್ತುತ ಸನ್ನಿವೇಶದಲ್ಲಿ, ವಾಸ್ತವವಾಗಿ ಪ್ರತಿಯೊಬ್ಬರೂ ಮಾನಸಿಕ ಅಸ್ವಸ್ಥತೆಗೆ ಗುರಿಯಾಗುವ ಸಾಧ್ಯತೆ ಹೆಚ್ಚಿದೆ.
ಒಬ್ಬ ವ್ಯಕ್ತಿಯು ತಮ್ಮ ಹೆಲ್ತ್ ಇನ್ಶೂರೆನ್ಸ್ ನಲ್ಲಿ ವೆಚ್ಚವನ್ನು ಕ್ಲೈಮ್ ಮಾಡಲು ಮಾನಸಿಕ ಅಸ್ವಸ್ಥ ರೋಗಿಯು ಕನಿಷ್ಠ 24 ಗಂಟೆಗಳವರೆಗೆ ಹಾಸ್ಪಿಟಲೈಸೇಷನ್ ಆಗಿರಬೇಕು.
ಕೆಲವೇ ಕೆಲವು ಇನ್ಶೂರೆನ್ಸ್ ಪೂರೈಕೆದಾರರು ಓಪಿಡಿ ಪ್ರಯೋಜನದ ಅಡಿಯಲ್ಲಿ ಮೆಂಟಲ್ ಇಲ್ನೆಸ್ ಗೆ ಸಮಾಲೋಚನೆಗಳು ಮತ್ತು ಕೌನ್ಸಿಲಿಂಗ್ ಗಳನ್ನು ಕವರ್ ಮಾಡುತ್ತಾರೆ. ಆದರೆ ನೆನಪಿನಲ್ಲಿಟ್ಟುಕೊಳ್ಳಬೇಕಾದುದು ಏನೆಂದರೆ, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ನಿಮ್ಮ ಪ್ಲಾನ್, ಒಪಿಡಿ ಪ್ರಯೋಜನ ಮತ್ತು ಮೆಂಟಲ್ ಇಲ್ನೆಸ್ ಪ್ರಯೋಜನದ ಆಯ್ಕೆಯನ್ನು ಹೊಂದಿದೆಯೇ ಎಂದು ನೀವು ಮೊದಲು ಪರಿಶೀಲಿಸಬೇಕು.
ಇತರ ಎಲ್ಲದರ ಹಾಗೆ ಮೊದಲೇ ಅಸ್ತಿತ್ವದಲ್ಲಿರುವ ಡಿಸೀಸ್ ಗಳಂತೆ, ಮೆಂಟಲ್ ಇಲ್ನೆಸ್ ಪ್ರಯೋಜನವೂ ಸಹ ಇನ್ಶೂರರ್ ಭರಿಸಬೇಕಾದಂತಹ ಕಾಯುವ ಅವಧಿಯನ್ನು ಹೊಂದಿದೆ. ಹೆಚ್ಚಿನ ಇನ್ಶೂರರ್ ಗಳೊಂದಿಗೆ ಮೆಂಟಲ್ ಇಲ್ನೆಸ್ ಪ್ರಯೋಜನಕ್ಕಾಗಿ ಕಾಯುವ ಅವಧಿಯು 2 ವರ್ಷಗಳಾಗಿದೆ. ಆದ್ದರಿಂದ, ನೀವು ಇಂದು ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸಿದ್ದರೆ, ಮೆಂಟಲ್ ಇಲ್ನೆಸ್ ನಿಂದ ಉಂಟಾಗುವ ವೆಚ್ಚಗಳಿಗಾಗಿ ನೀವು ಕ್ಲೈಮ್ ಮಾಡುವ ಮೊದಲು 2 ವರ್ಷಗಳವರೆಗೆ ಕಾಯಬೇಕಾಗುತ್ತದೆ. ಆದ್ದರಿಂದ, ಬೇಗನೆ ಆರಂಭಿಸುವ ಮತ್ತು ನಿಮ್ಮ ಮೊದಲ ಪಾಲಿಸಿಯೊಂದಿಗೆ ಈ ಪ್ರಯೋಜನವನ್ನು ಪಡೆದುಕೊಳ್ಳುವ ಸಲಹೆಯನ್ನು ನಾವು ನಿಮಗೆ ನೀಡುತ್ತೇವೆ. ಇದರಿಂದ, ನಿಮಗೆ ಅಗತ್ಯವಿರುವಾಗ ನಿಮ್ಮ ಎಲ್ಲಾ ವೇಟಿಂಗ್ ಪೀರಿಯಡ್ ಗಳು ಮುಗಿದಿರುತ್ತವೆ.
ಮೆಂಟಲ್ ಇಲ್ನೆಸ್ ಪಟ್ಟಿಯಲ್ಲಿ ಬರುವ ಕೆಲವು ತಿಳಿದಿರುವ ರೋಗಗಳು ಈ ರೀತಿ ಇವೆ
ಮೆಂಟಲ್ ಹೆಲ್ತ್ ಇನ್ಶೂರೆನ್ಸ್ ರೋಗಿಯನ್ನು ಆಸ್ಪತ್ರೆಗೆ ಸೇರಿಸಬೇಕಾದಾಗ ತಗಲುವ ವೆಚ್ಚಗಳನ್ನು ಮಾತ್ರ ಒಳಗೊಂಡಿರುತ್ತದೆ. ಕೆಲವೇ ಕೆಲವು ಇನ್ಶೂರರ್ ಗಳು ಸಮಾಲೋಚನೆಗಳಂತಹ ಹೊರರೋಗಿ ಆರೈಕೆಯ ವೆಚ್ಚಗಳನ್ನು ಭರಿಸುತ್ತಾರೆ. ಅತಿಯಾದ ಮಾದಕ ದ್ರವ್ಯ ಅಥವಾ ಆಲ್ಕೋಹಾಲ್ ಸೇವನೆಯಿಂದ ಉಂಟಾಗುವ ಯಾವುದೇ ಮೆಂಟಲ್ ಇಲ್ನೆಸ್ ಅನ್ನು ಕವರ್ ಮಾಡುವುದಿಲ್ಲ.
ಅಲ್ಲದೆ, ಮರುಕಳಿಸುವ ಮಾನಸಿಕ ಸ್ಥಿತಿಯ ಇತಿಹಾಸವಿದ್ದರೆ, ಕ್ಲೈಮ್ ಸ್ವೀಕಾರ ಆಗದೆ ಇರಬಹುದು.
ಮೆಂಟಲ್ ಹೆಲ್ತ್ ಇನ್ಶೂರೆನ್ಸ್ ಅನಾದಿ ಕಾಲದಿಂದಲೂ ಮೆಂಟಲ್ ಇಲ್ನೆಸ್ ಅನ್ನು ಹೇಗೆ ನೋಡಲಾಗುತ್ತಿದೆ ಎಂಬುದರ ಕುರಿತು ಒಂದು ತಾಜಾ ನೋಟವಾಗಿದೆ. ನಿಮ್ಮ ಪ್ರೀತಿಪಾತ್ರರು ಯಾವುದೇ ಮೆಂಟಲ್ ಇಲ್ನೆಸ್ ನಿಂದ ಬಳಲುತ್ತಿದ್ದಾರೆ ಎಂದು ನಿಮಗೆ ಅನಿಸುತ್ತಿದ್ದರೆ ಇದರ ಬಗ್ಗೆ ಆಳವಾಗಿ ತಿಳಿದುಕೊಳ್ಳಲು ಇದೇ ಸಮಯವಾಗಿದೆ. ಅವರು ಸರಿಯಾದ ಸಮಯದಲ್ಲಿ ಸಹಾಯ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ಅದರ ಬಗ್ಗೆ ಮಾತನಾಡುವ ಸಮಯ ಇದೇ ಆಗಿದೆ!
ಓದಿ: ಕೋವಿಡ್ 19 ಗಾಗಿ ಹೆಲ್ತ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿದೆ ಎಂಬುದನ್ನು ಕಂಡುಕೊಳ್ಳಿ