ಹೆಲ್ತ್ ಇನ್ಶೂರೆನ್ಸ್ ನಲ್ಲಿ ಗ್ರೇಸ್ ಪೀರಿಯಡ್
ಇಂದಿನ ಕಾಲದಲ್ಲಿ, ಒಂದು ಕಡೆ ವೈದ್ಯಕೀಯ ಆವಿಷ್ಕಾರಗಳು ಸುಧಾರಿತ ಆರೋಗ್ಯ ವ್ಯವಸ್ಥೆಗಳಿಗೆ ಪ್ರವೇಶವನ್ನು ಒದಗಿಸಿದರೆ, ಮತ್ತೊಂದೆಡೆ ಅದೇ ಆರೋಗ್ಯ ಸೌಲಭ್ಯಗಳು ಗಗನಕ್ಕೇರುತ್ತಿರುವ ಬೆಲೆಗಳನ್ನು ತಲುಪಿವೆ ಮತ್ತು ಕೆಲವೊಮ್ಮೆ ಸಾಮಾನ್ಯ ಜನರಿಗೆ ಕೈಗೆಟುಕುವಂತಿರುವುದಿಲ್ಲ.
ಈ ರೀತಿಯ ಪರಿಸರ ವ್ಯವಸ್ಥೆಯಲ್ಲಿ, ಅನಾರೋಗ್ಯದ ಸಮಯದಲ್ಲಿ ಮತ್ತು ಅನಿರೀಕ್ಷಿತ ಹೆಲ್ತ್ ಕೇರ್ ಅವಶ್ಯಕತೆಗಳ ಸಮಯದಲ್ಲಿ ಹಣಕಾಸಿನ ನಷ್ಟಗಳ ವಿರುದ್ಧ ಹೆಲ್ತ್ ಇನ್ಶೂರೆನ್ಸ್ ನಮಗೆ ರಕ್ಷಣೆಯಾಗಿದೆ.
ಹೆಲ್ತ್ ಇನ್ಶೂರೆನ್ಸ್ ಮಹತ್ವವನ್ನು ಗಮನಿಸಿದರೆ, ನಮ್ಮ ಹೆಲ್ತ್ ಕೇರ್ ಪಾಲಿಸಿಯು ಯಾವಾಗಲೂ ಸಕ್ರಿಯವಾಗಿರುವುದು ಅತ್ಯಗತ್ಯವಾಗಿರುತ್ತದೆ ಏಕೆಂದರೆ ಅದು ನಮಗೆ ಯಾವಾಗ ಬೇಕಾಗುವುದು ಎಂದು ನಮಗೆ ತಿಳಿದಿರುವುದಿಲ್ಲ. ಆದ್ದರಿಂದ, ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಸಮಯಕ್ಕೆ ಪಾವತಿಸುವುದು ಅತ್ಯಂತ ಮಹತ್ವದ ಕಾರ್ಯವಾಗಿದೆ.
ಹೆಲ್ತ್ ಇನ್ಶೂರೆನ್ಸ್ ನಲ್ಲಿ ಗ್ರೇಸ್ ಪೀರಿಯಡ್ ಎಂದರೇನು?
ಕೆಲವೊಮ್ಮೆ ನಾವು ಜೀವನದಲ್ಲಿ ಎಷ್ಟು ಕಾರ್ಯನಿರತವಾಗುತ್ತೇವೆ ಎಂದರೆ, ನಾವು ನಮ್ಮ ಪ್ರೀಮಿಯಂ ಪಾವತಿ ಮಾಡುವುದನ್ನು ಮರೆಯಬಹುದು.
ಇನ್ಶೂರೆನ್ಸ್ ಕಂಪೆನಿಗಳು ಮಾನವನ ಈ ನಡವಳಿಕೆಯನ್ನು ಗಣನೆಗೆ ತೆಗೆದುಕೊಳ್ಳುತ್ತವೆ ಮತ್ತು ಹೀಗಾಗಿ ಪಾಲಿಸಿಯು ಸಕ್ರಿಯವಾಗಿರುವ ಪೀರಿಯಡ್ ನಲ್ಲಿ ತಪ್ಪಿದ ಪ್ರೀಮಿಯಂ ಪಾವತಿ ದಿನಾಂಕದ ನಂತರ ಒಂದು ನಿರ್ದಿಷ್ಟ ಪೀರಿಯಡ್ ಅನ್ನು ಅನುಮತಿಸುತ್ತವೆ.
ಈ ವಿಸ್ತೃತ ಪೀರಿಯಡ್ ಅನ್ನು ಹೆಲ್ತ್ ಇನ್ಶೂರೆನ್ಸ್ ವಿಷಯದಲ್ಲಿ "ಗ್ರೇಸ್ ಪೀರಿಯಡ್" ಎಂದು ಕರೆಯಲಾಗುತ್ತದೆ.
ಎಲ್ಲಾ ಪ್ರಯೋಜನಗಳನ್ನು ಗ್ರೇಸ್ ಪೀರಿಯಡ್ ನಲ್ಲಿ ಮುಂದುವರಿಯುತ್ತವೆಯಾದರೂ, ಗ್ರೇಸ್ ಪೀರಿಯಡ್ ನಲ್ಲಿ ಅವುಗಳನ್ನು ಕ್ಲೈಮ್ ಮಾಡಲಾಗುವುದಿಲ್ಲ.
ಗ್ರೇಸ್ ಪೀರಿಯಡ್ ವಿಭಿನ್ನ ಇನ್ಶೂರೆನ್ಸ್ ಪೂರೈಕೆದಾರರು ಮತ್ತು ವಿವಿಧ ರೀತಿಯ ಪಾಲಿಸಿಗಳಿಗೆ ಭಿನ್ನವಾಗಿರುತ್ತದೆ. ಆದಾಗ್ಯೂ, ಇದು ಸಾಮಾನ್ಯವಾಗಿ 15-30 ದಿನಗಳ ನಡುವೆ ಇರುತ್ತದೆ ಮತ್ತು ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳಲ್ಲಿ ನಿರ್ದಿಷ್ಟಪಡಿಸಲಾಗಿರುತ್ತದೆ. ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಮೊದಲು ಅವುಗಳನ್ನು ಎಚ್ಚರಿಕೆಯಿಂದ ಓದುವುದನ್ನು ಮರೆಯಬೇಡಿ.
ಸಮಯಕ್ಕೆ ಸರಿಯಾಗಿ ನಿಮ್ಮ ಹೆಲ್ತ್ ಪಾಲಿಸಿಯನ್ನು ರಿನೀವ್ ಮಾಡದಿರುವ ಅನಾನುಕೂಲಗಳು.
ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ನೀವು ಪಾವತಿ ತಪ್ಪಿಸಿದ ಸಮಯಗಳಿಗೆ ನಿಮಗೆ ಗ್ರೇಸ್ ಪೀರಿಯಡ್ ಅನ್ನು ನೀಡಿದರೂ, ನಿಮ್ಮ ಪ್ರೀಮಿಯಂ ಅನ್ನು ಪಾವತಿಸಲು ಗ್ರೇಸ್ ಪೀರಿಯಡ್ ವಿಸ್ತರಣೆಗಾಗಿ ಕಾಯುವುದು ಖಂಡಿತವಾಗಿಯೂ ಒಳ್ಳೆಯದಲ್ಲ. ಇದರ ಕೆಲವು ಪ್ರಮುಖ ನ್ಯೂನತೆಗಳು ಇಲ್ಲಿವೆ:
- ಗ್ರೇಸ್ ಪೀರಿಯಡ್ ನಲ್ಲಿ ಯಾವುದೇ ಹೆಲ್ತ್ ಕವರೇಜ್ ಇರುವುದಿಲ್ಲ: ನಮ್ಮನ್ನು ನಂಬಿ, ಇದು ನಮ್ಮ ಊಹೆಗಿಂತ ಹೆಚ್ಚು ಗಂಭೀರ ವಿಷಯವಾಗಿದೆ. ಗ್ರೇಸ್ ಪೀರಿಯಡ್ ನಲ್ಲಿ ಮಾಡಲಾದ ಯಾವುದೇ ಕ್ಲೈಮ್ ಅನ್ನು ನಿರರ್ಥಕವೆಂದು ಪರಿಗಣಿಸಲಾಗುತ್ತದೆ ಮತ್ತು ಇನ್ಶೂರರ್ ನಿಂದ ನಿರಾಕರಿಸಲಾಗುತ್ತದೆ.
- ಕ್ಯುಮುಲೇಟಿವ್ ಬೋನಸ್‌ನ ನಷ್ಟ: ಹೆಚ್ಚಿನ ಹೆಲ್ತ್ ಪಾಲಿಸಿಗಳು ಕ್ಯುಮುಲೇಟಿವ್ ಬೋನಸ್ ನೊಂದಿಗೆ ಬರುತ್ತವೆ, ಹಾಗೂ ಇದು ಪ್ರತಿ ಕ್ಲೈಮ್ ರಹಿತ ವರ್ಷಕ್ಕೆ ಹೆಚ್ಚುತ್ತಾ ಹೋಗುತ್ತದೆ. ನಿಗದಿತ ಸಮಯದಲ್ಲಿ ನಿಮ್ಮ ಪಾಲಿಸಿಯನ್ನು ನವೀಕರಿಸಲು ನೀವು ವಿಫಲರಾದಾಗ, ನೀವು ಈ ಸಂಚಿತ ಬೋನಸ್ ಅನ್ನು ಕಳೆದುಕೊಳ್ಳುತ್ತೀರಿ.
- ವೇಟಿಂಗ್ ಪೀರಿಯಡ್ ಆರಂಭದಿಂದ ಆರಂಭವಾಗುತ್ತದೆ: ಗಂಭೀರ ಕಾಯಿಲೆಗಳು ಮತ್ತು ಮೊದಲೇ ಅಸ್ತಿತ್ವದಲ್ಲಿರುವ ರೋಗಗಳ ಕವರೇಜ್ ಗಾಗಿ ವೇಟಿಂಗ್ ಪೀರಿಯಡ್ ಶೂನ್ಯಕ್ಕೆ ಮರುಹೊಂದಿಕೊಳ್ಳುತ್ತದೆ.
- ಗ್ರೇಸ್ ಪೀರಿಯಡ್ ನಲ್ಲಿ ಹೆಚ್ಚಿನ ಪ್ರೀಮಿಯಂ: ನವೀಕರಣ ದಿನಾಂಕದ ನಂತರ, ಗ್ರೇಸ್ ಪೀರಿಯಡ್ ನಲ್ಲಿ ನಿಮ್ಮ ಹೆಲ್ತ್ ಕೇರ್ ಪ್ರೀಮಿಯಂ ಅನ್ನು ನೀವು ಪಾವತಿಸಿದರೆ ಕೆಲವು ಕಂಪನಿಗಳು ವಿಳಂಬ ಶುಲ್ಕವನ್ನು ವಿಧಿಸುತ್ತವೆ. ನೀವು ಸಕಾಲಿಕ ಪ್ರೀಮಿಯಂ ಪಾವತಿಯಲ್ಲಿ ನಿಯಮಿತ ಡೀಫಾಲ್ಟರ್ ಆಗಿದ್ದರೆ ಪ್ರೀಮಿಯಂ ಮತ್ತಷ್ಟು ಹೆಚ್ಚಾಗಬಹುದು.
- ಪೋರ್ಟೆಬಿಲಿಟಿ ಪ್ರಯೋಜನದ ನಷ್ಟ: ನಿಮ್ಮ ಪಾಲಿಸಿಯನ್ನು ಪೋರ್ಟ್ ಅಥವಾ ವರ್ಗಾವಣೆ ಮಾಡುವ ಮೂಲಕ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪೂರೈಕೆದಾರರನ್ನು ನೀವು ಬದಲಾಯಿಸಬಹುದು, ಆದರೆ ಪಾಲಿಸಿ ಜಾರಿಯಲ್ಲಿರುವಾಗ ಮಾತ್ರ ನೀವು ಇದನ್ನು ಮಾಡಬಹುದಾಗಿದೆ. ಪಾಲಿಸಿಯು ಗ್ರೇಸ್ ಪೀರಿಯಡ್ ಗೆ ಹೋದ ನಂತರ ಪೋರ್ಟೆಬಿಲಿಟಿ ಆಯ್ಕೆಯು ಮುಕ್ತಾಯಗೊಳ್ಳುತ್ತದೆ.
ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ನಲ್ಲಿರುವ ಗ್ರೇಸ್ ಪೀರಿಯಡ್ ಎಷ್ಟು?
ಡಿಜಿಟ್‌ನಲ್ಲಿ, ಹೆಲ್ತ್ ಇನ್ಶೂರೆನ್ಸ್ ಕವರ್ ಎಷ್ಟು ಮುಖ್ಯ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಆದ್ದರಿಂದ ನಿರಂತರತೆಯನ್ನು ಉಳಿಸಿಕೊಳ್ಳಲು, ನಾವು ಗ್ರೇಸ್ ಪೀರಿಯಡ್ ಅನ್ನು ಒದಗಿಸುತ್ತೇವೆ.
ಪಾಲಿಸಿಹೋಲ್ಡರ್ ಕಂತುಗಳ ಆಧಾರದ ಮೇಲೆ ಅಂದರೆ ಅರ್ಧ ವಾರ್ಷಿಕ, ತ್ರೈಮಾಸಿಕ ಅಥವಾ ಮಾಸಿಕವಾಗಿ ಪ್ರೀಮಿಯಂ ಪಾವತಿಯನ್ನು ಆಯ್ಕೆ ಮಾಡಿಕೊಂಡಿದ್ದರೆ, ಈ ಕೆಳಗಿನ ಷರತ್ತುಗಳು ಅನ್ವಯಿಸುತ್ತವೆ:
- ಪಾಲಿಸಿಗೆ ಬಾಕಿ ಇರುವ ಕಂತಿನ ಪ್ರೀಮಿಯಂ ಅನ್ನು ಪಾವತಿಸಲು 15 ದಿನಗಳ ಗ್ರೇಸ್ ಪೀರಿಯಡ್ ಅನ್ನು ನೀಡಲಾಗುತ್ತದೆ.
- ಇಂತಹ ಗ್ರೇಸ್ ಪೀರಿಯಡ್ ನಲ್ಲಿ, ಕಂತಿನ ಪ್ರೀಮಿಯಂ ಪಾವತಿಯ ಅಂತಿಮ ದಿನಾಂಕದಿಂದ ಕಂಪೆನಿಯಿಂದ ಪ್ರೀಮಿಯಂ ಸ್ವೀಕರಿಲಾಗುವ ದಿನಾಂಕದವರೆಗೆ ಕವರೇಜ್ ಲಭ್ಯವಿರುವುದಿಲ್ಲ.
- ನಿಗದಿತ ಗ್ರೇಸ್ ಪೀರಿಯಡ್ ಒಳಗೆ ಪ್ರೀಮಿಯಂ ಪಾವತಿಯ ಸಂದರ್ಭದಲ್ಲಿ ಇನ್ಶೂರ್ ಆದ ವ್ಯಕ್ತಿಯು "ವೇಟಿಂಗ್ ಪೀರಿಯಡ್ ಗಳಿಗೆ ", "ನಿರ್ದಿಷ್ಟ ವೇಟಿಂಗ್ ಪೀರಿಯಡ್ ಗಳಿಗೆ" ಸಂಬಂಧಿಸಿದಂತೆ ಸಂಚಿತ ನಿರಂತರತೆಯ ಪ್ರಯೋಜನವನ್ನು ಪಡೆಯುತ್ತಾನೆ.
- ಕಂತು ಪ್ರೀಮಿಯಂ ಅನ್ನು ನಿಗದಿತ ದಿನಾಂಕದಂದು ಪಾವತಿಸದಿದ್ದರೆ ಯಾವುದೇ ಬಡ್ಡಿಯನ್ನು ವಿಧಿಸಲಾಗುವುದಿಲ್ಲ.
- ಗ್ರೇಸ್ ಪೀರಿಯಡ್ ಒಳಗೆ ಕಂತು ಪ್ರೀಮಿಯಂ ಅನ್ನು ಸ್ವೀಕರಿಸದಿದ್ದಲ್ಲಿ ಪಾಲಿಸಿಯನ್ನು ರದ್ದುಗೊಳಿಸಲಾಗುತ್ತದೆ.
ಪಾಲಿಸಿಯ ಪೀರಿಯಡ್ ಕೊನೆಯಲ್ಲಿ, ಪಾಲಿಸಿಯು ಅಂತ್ಯಗೊಳ್ಳುತ್ತದೆ ಮತ್ತು ಪಾಲಿಸಿಯಲ್ಲಿ ಬ್ರೇಕ್ ಇಲ್ಲದೆ ಪ್ರಯೋಜನಗಳ ನಿರಂತರತೆಯನ್ನು ಕಾಪಾಡಿಕೊಳ್ಳಲು ಗ್ರೇಸ್ ಪೀರಿಯಡ್ ಒಳಗೆ ಇದನ್ನು ರಿನೀವಲ್ ಮಾಡಬಹುದು. ಗ್ರೇಸ್ ಪೀರಿಯಡ್ ನಲ್ಲಿ ಕವರೇಜ್ ಲಭ್ಯವಿರುವುದಿಲ್ಲ.
ಡಿಜಿಟ್‌ನಲ್ಲಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಹೋಲ್ಡರ್ ಆಗಿ ನೀವು ಪಡೆಯುವ ಇನ್ನೂ ಕೆಲವು ಪ್ರಯೋಜನಗಳು ಇಲ್ಲಿವೆ:
ಡಿಜಿಟ್‌ನಲ್ಲಿ ಹೆಲ್ತ್ ಇನ್ಶೂರೆನ್ಸ್ ನ ವಿಶೇಷತೆ ಏನು?
ಸರಳ ಆನ್‌ಲೈನ್ ಪ್ರಕ್ರಿಯೆಗಳು - ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಪ್ರಕ್ರಿಯೆಯಿಂದ ಹಿಡಿದು ಕ್ಲೈಮ್‌ಗಳನ್ನು ಮಾಡುವವರೆಗೆ ಎಲ್ಲವೂ ಕಾಗದರಹಿತ, ಸುಲಭ, ತ್ವರಿತ ಮತ್ತು ಗೊಂದಲಮುಕ್ತವಾಗಿರುತ್ತದೆ! ಕ್ಲೈಮ್‌ಗಳಿಗೂ ಸಹ ಯಾವುದೇ ಹಾರ್ಡ್ ಕಾಪಿಗಳ ಅಗತ್ಯವಿಲ್ಲ!
ವಯಸ್ಸು-ಆಧಾರಿತ ಅಥವಾ ವಲಯ-ಆಧಾರಿತ ಸಹ-ಪಾವತಿ ಇಲ್ಲ - ನಮ್ಮ ಹೆಲ್ತ್ ಇನ್ಶೂರೆನ್ಸ್ ವಯಸ್ಸು ಆಧಾರಿತ ಅಥವಾ ವಲಯ-ಆಧಾರಿತವಲ್ಲದ ಸಹಪಾವತಿ ವೈಶಿಷ್ಟ್ಯವನ್ನು ಹೊಂದಿದೆ. ಇದರರ್ಥ, ಹೆಲ್ತ್ ಇನ್ಶೂರೆನ್ಸ್ ಕ್ಲೈಮ್‌ಗಳ ಸಮಯದಲ್ಲಿ, ನಿಮ್ಮ ಜೇಬಿನಿಂದ ನೀವು ಏನನ್ನೂ ಪಾವತಿಸಬೇಕಾಗಿಲ್ಲ.
ರೂಮ್ ಬಾಡಿಗೆ ನಿರ್ಬಂಧವಿಲ್ಲ - ಪ್ರತೀಯೊಬ್ಬರ ಆದ್ಯತೆಗಳು ವಿಭಿನ್ನ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಅದಕ್ಕಾಗಿಯೇ ನಮ್ಮಲ್ಲಿ ರೂಮ್ ಬಾಡಿಗೆ ನಿರ್ಬಂಧಗಳಿಲ್ಲ. ನೀವು ಇಷ್ಟಪಡುವ ಯಾವುದೇ ಆಸ್ಪತ್ರೆಯ ರೂಮ್ ಅನ್ನು ಆರಿಸಿ.
ಎಸ್‌ಐ ವಾಲೆಟ್ ಪ್ರಯೋಜನ - ಪಾಲಿಸಿ ಪೀರಿಯಡ್ ನಲ್ಲಿ ನಿಮ್ಮ ಸಮ್ ಇನ್ಶೂರ್ಡ್ ಅನ್ನು ನೀವು ಖಾಲಿ ಮಾಡಿದರೆ, ನಾವು ಅದನ್ನು ನಿಮಗಾಗಿ ಪುನಃ ಭರಿಸುತ್ತೇವೆ.
ಯಾವ ಆಸ್ಪತ್ರೆಯಲ್ಲಿ ಬೇಕಾದರೂ ಚಿಕಿತ್ಸೆ ಪಡೆಯಿರಿ - ನಗದುರಹಿತ ಚಿಕಿತ್ಸೆಗಾಗಿ ಭಾರತದಲ್ಲಿನ ನಮ್ಮ 16400+ ನೆಟ್‌ವರ್ಕ್ ಆಸ್ಪತ್ರೆ ಗಳಿಂದ ಆಯ್ಕೆಮಾಡಿ ಅಥವಾ ಮರುಪಾವತಿಯನ್ನು ಆರಿಸಿಕೊಳ್ಳಿ.
ವೆಲ್ನೆಸ್ ಪ್ರಯೋಜನಗಳು - ಉನ್ನತ ದರ್ಜೆಯ ಹೆಲ್ತ್ ಮತ್ತು ವೆಲ್ನೆಸ್ ಪಾರ್ಟ್ ನರ್ ಗಳ ಸಹಯೋಗದೊಂದಿಗೆ ಡಿಜಿಟ್ ಅಪ್ಲಿಕೇಶನ್‌ನಲ್ಲಿ ವಿಶೇಷ ವೆಲ್ನೆಸ್ ಪ್ರಯೋಜನ ಗಳನ್ನು ಪಡೆಯಿರಿ.
ನಿಮ್ಮ ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ರಿನೀವ್ ಮಾಡುವಾಗ ಪರಿಗಣಿಸಬೇಕಾದ ಕೆಲವು ವಿಷಯಗಳು.
- ನಿಮ್ಮ ಸಮ್ ಇನ್ಸೂರ್ಡ್ ಅನ್ನು ಹೆಚ್ಚಿಸಲು ನೀವು ಬಯಸಿದರೆ, ಇದೇ ಅದಕ್ಕಾಗಿರುವ ಸಮಯವಾಗಿದೆ. ವರ್ಷದಲ್ಲಿ ಯಾವುದೇ ಸಮಯದಲ್ಲಿ ನೀವು ಇದನ್ನು ಮಾಡಲು ಸಾಧ್ಯವಿಲ್ಲ.
- ಕಳೆದ ವರ್ಷದಲ್ಲಿ ನೀವು ಕ್ಲೈಮ್ ಮಾಡದಿದ್ದರೆ, ನಿಮ್ಮ ಪಾಲಿಸಿಯು ಅದನ್ನು ನೀಡುವಂತಿದ್ದರೆ ನಿಮಗೆ ನೋ ಕ್ಲೈಮ್ ಬೋನಸ್ ನೀಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.
- ನಿಮ್ಮ ಸಂಗಾತಿ ಅಥವಾ ಮಕ್ಕಳಂತಹ ಸದಸ್ಯರನ್ನು ಸೇರಿಸಲು ನೀವು ಬಯಸಿದರೆ, ರಿನೀವಲ್ ಸಮಯದಲ್ಲಿ ಮಾತ್ರ ನೀವು ಹೀಗೆ ಮಾಡುವ ಆಯ್ಕೆಯನ್ನು ಹೊಂದಿರುತ್ತೀರಿ. ಆದ್ದರಿಂದ ಇದರ ಬಗ್ಗೆ ಖಂಡಿತ ಯೋಚಿಸಿ.
ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದನ್ನು ತಪ್ಪಿಸುವುದು ಹಲವು ಹಂತಗಳಲ್ಲಿ ತುಂಬಾ ಕಷ್ಟವಾಗಬಹುದು. ಆರೋಗ್ಯದ ಅನಿಶ್ಚಿತತೆ, ಮತ್ತೊಮ್ಮೆ ಕಾಯುವಿಕೆ ಪೀರಿಯಡ್ಗಳ ಗೊಂದಲ ಮತ್ತು ಇತರ ಹಲವು ಪ್ರಯೋಜನಗಳ ಕೊರತೆಯು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ನ ಸರಿಯಾದ ಸಮಯದ ಪಾವತಿಯನ್ನು ಬಹಳ ಮುಖ್ಯವಾಗಿಸುತ್ತದೆ.
ವಿಶೇಷವಾಗಿ, ಪಾಲಿಸಿದಾರರು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವವರಾಗಿದ್ದರೆ ಅಥವಾ ವೇಟಿಂಗ್ ಪೀರಿಯಡ್ ಅಗತ್ಯವಿರುವ ಯಾವುದೇ ಅನಾರೋಗ್ಯಕ್ಕೆ ಒಳಗಾಗಿದ್ದರೆ, ನಿಮ್ಮ ಹೆಲ್ತ್ ಪ್ರೀಮಿಯಂ ಅನ್ನು ಸಮಯಕ್ಕೆ ಪಾವತಿಸುವುದು ಸಂಪೂರ್ಣವಾಗಿ ಅವಶ್ಯಕವಾಗುವುದರಿಂದ ಅದನ್ನು ಗ್ರೇಸ್ ಪೀರಿಯಡ್ ತಲುಪಲು ಬಿಡಬೇಡಿ.
ಹೆಲ್ತ್ ಇನ್ಶೂರೆನ್ಸ್ ನಲ್ಲಿ ಗ್ರೇಸ್ ಪೀರಿಯಡ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು
ಗ್ರೇಸ್ ಪೀರಿಯಡ್ ಮುಗಿದ ನಂತರ ನಾನು ಪ್ರೀಮಿಯಂ ಅನ್ನು ಪಾವತಿಸಬಹುದೇ?
ಗ್ರೇಸ್ ಪೀರಿಯಡ್ ಮುಗಿದ ನಂತರ, ನಿಮ್ಮ ಪಾಲಿಸಿ ಲ್ಯಾಪ್ಸ್ ಆಗುತ್ತದೆ ಮತ್ತು ನೀವು ಹೊಸ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸಬೇಕಾಗುತ್ತದೆ. ಆದ್ದರಿಂದ ನಿಮ್ಮ ಪ್ರೀಮಿಯಂ ಅನ್ನು ಸರಿಯಾದ ಸಮಯಕ್ಕೆ ಪಾವತಿಸುವುದನ್ನು ಯಾವಾಗಲೂ ಶಿಫಾರಸು ಮಾಡಲಾಗುತ್ತದೆ.
ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಗ್ರೇಸ್ ಪೀರಿಯಡ್ ಪೀರಿಯಡ್ ಎಷ್ಟು?
ಗ್ರೇಸ್ ಪೀರಿಯಡ್ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪೂರೈಕೆದಾರರ ಮೇಲೆ ಅವಲಂಬಿತವಾಗಿರುತ್ತದೆ ಮತ್ತು 1 ರಿಂದ 30 ದಿನಗಳ ನಡುವೆ ಬದಲಾಗುತ್ತದೆ.
ಗ್ರೇಸ್ ಪೀರಿಯಡ್ ಮತ್ತು ವೇಟಿಂಗ್ ಪೀರಿಯಡ್ ನಡುವಿನ ವ್ಯತ್ಯಾಸವೇನು?
ಇವೆರಡೂ ಸಂಪೂರ್ಣವಾಗಿ ಭಿನ್ನ ವಿಷಯಗಳಾಗಿವೆ. ವೇಟಿಂಗ್ ಪೀರಿಯಡ್ ಪಾಲಿಸಿಯ ಪ್ರಾರಂಭದ ಸಮಯದ ಪೀರಿಯಡ್ ಆಗಿದ್ದು, ಪಾಲಿಸಿಯ ಪ್ರಯೋಜನಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಮೊದಲು ಅದನ್ನು ಪೂರ್ಣಗೊಳಿಸಬೇಕಾಗುತ್ತದೆ. ಮತ್ತೊಂದೆಡೆ, ಗ್ರೇಸ್ ಪೀರಿಯಡ್ ಇನ್ಶೂರೆನ್ಸ್ ಕಂಪನಿಯು ಪಾಲಿಸಿದಾರರಿಗೆ ಪ್ರೀಮಿಯಂ ಪಾವತಿಸಲು ಒದಗಿಸುವ ವಿಸ್ತೃತ ಸಮಯದ ಮಿತಿಯಾಗಿದೆ, ಅದರ ಮುಕ್ತಾಯದ ನಂತರ, ಪ್ರೀಮಿಯಂ ಅನ್ನು ಇನ್ನೂ ಪಾವತಿಸದಿದ್ದರೆ ಪಾಲಿಸಿಯು ಲ್ಯಾಪ್ಸ್ ಆಗುತ್ತದೆ.