ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
ನಿಮ್ಮ ಕುಟುಂಬವೇ ನಿಮಗೆ ಸರ್ವಸ್ವವೆಂದು ನಮಗೆ ಗೊತ್ತಿದೆ. ಅಲ್ಲದೇ ನೀವು ಅವರ ಸುತ್ತಲೂ ಇರುವಾಗಲೂ ಅಥವಾ ಇಲ್ಲದಿದ್ದಾಗಲೂ ಅವರನ್ನು ಸಂತೋಷವಾಗಿ ಮತ್ತು ಸ್ವತಂತ್ರವಾಗಿ ನೋಡಲು ಬಯಸುತ್ತೀರಿ.
ಟರ್ಮ್ ಇನ್ಶೂರೆನ್ಸ್ ಅನ್ನು ಅತಿಯಾದ ಭಾವನಾತ್ಮಕ ವ್ಯಕ್ತಿಯು ಭಯದಿಂದ ತೆಗೆದುಕೊಳ್ಳುವ ನಿರ್ಧಾರ ಎಂದು ಅನೇಕರು ವಾದಿಸುತ್ತಾರೆ. ಆದರೆ ಇದು ತಪ್ಪು. ನೀವು ವಾರ್ಷಿಕ ಪ್ರೀಮಿಯಂ ಮೊತ್ತಕ್ಕೆ ಬೇಕಾದಷ್ಟನ್ನು ವ್ಯಯಿಸಬಲ್ಲಿರಿ ಎಂದಾದರೆ, ಅದರಿಂದ ನಿಮ್ಮ ಅನುಪಸ್ಥಿತಿಯಲ್ಲೂ ನಿಮ್ಮ ಕುಟುಂಬವನ್ನು ನೋಡಿಕೊಳ್ಳಲು ಯಾರಾದರೂ ಇದ್ದಾರೆ ಎಂಬ ನೆಮ್ಮದಿಯನ್ನು ಗಳಿಸುತ್ತೀರಿ ಎಂದಾದರೆ, ಯಾಕಾಗಬಾರದು? ಈ ಸತ್ಯವು ಹೆಲ್ತ್ ಇನ್ಶೂರೆನ್ಸ್ಗೂ ಅನ್ವಯಿಸುತ್ತದೆ.
ನಿಮ್ಮ ಕುಟುಂಬದ ವೈದ್ಯಕೀಯ ಯೋಗಕ್ಷೇಮದ ಬಗ್ಗೆ ನೀವು ಕಾಳಜಿಯುಳ್ಳವರಾಗಿದ್ದರೆ, ನೀವು ಸೂಪರ್ಹ್ಯೂಮನ್ ಅಲ್ಲವೆಂದು ಗೊತ್ತಿದ್ದರೆ ಮತ್ತು ಕಾಯಿಲೆಗಳು ಬರಲು ನಿಮ್ಮ ಅನುಮತಿಯನ್ನು ಕೇಳುವುದಿಲ್ಲವೆಂಬ ಅರಿವಿದ್ದರೆ ನೀವು ಪ್ರಾಯಶಃ ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕಾಗಿ ಹೆಲ್ತ್ ಇನ್ಶೂರೆನ್ಸ್ ಅನ್ನು ಪಡೆಯುತ್ತೀರಿ. ಅದಕ್ಕಾಗಿ ಬಹಳ ಕಡಿಮೆ ವೆಚ್ಚವನ್ನು ಪಾವತಿಸುವ ಮೂಲಕ ದೊಡ್ಡ ಮೊತ್ತದ ವೈದ್ಯಕೀಯ ಬಿಲ್ಗಳನ್ನು ದೂರವಿರಿಸುತ್ತೀರಿ.
ಬುದ್ಧಿವಂತರಾಗಿ ಮತ್ತು ಪರಿಸ್ಥಿತಿ ಕೈ ಮೀರುವ ಮೊದಲೇ ಸೂಕ್ತವಾಗಿ ಪ್ಲಾನ್ ಮಾಡಿ. ನಿಮಗೆ ಈ ಎರಡೂ ಪಾಲಿಸಿಗಳನ್ನು ಸರಿಯಾಗಿ ವಿವರಿಸಲು ನಾವಿದ್ದೇವೆ. ಈ ವಿವರಣೆಯಿಂದ ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬುದನ್ನು ನೀವೇ ನಿರ್ಧರಿಸಬಹುದು.
ನಮ್ಮ ವೇಗದ ಜೀವನದಲ್ಲಿ, ನಾವು ಬೆಳೆಯುತ್ತಾ ಹೋಗುತ್ತೇವೆ ಮತ್ತು ಖರ್ಚು ಮಾಡುತ್ತಾ ಹೋಗುತ್ತೇವೆ. ಸುಧಾರಿತ ಜೀವನ ಮಟ್ಟ ಎಂದರೆ ದಿನದಿನವೂ ಜೀವನವನ್ನು ಉತ್ತಮಗೊಳಿಸಲು ಖರ್ಚು ಮಾಡುವುದು ಎಂದರ್ಥ.
ಬ್ಯಾಂಕ್ ಖಾತೆಯು ನಮ್ಮ ಸಂಬಳ ಕ್ರೆಡಿಟ್ ಆಗಿರುವ ಮೆಸೇಜ್ ಅನ್ನು ತೋರಿಸಿದ ನಂತರ ನಾವು ಬಹುತೇಕರ ಉಳಿತಾಯವು ಆ ತಿಂಗಳ ಮೊದಲ ವಾರಕ್ಕೆ ಸೀಮಿತವಾಗಿರುತ್ತದೆ. ಬಿಲ್ಗಳನ್ನು ಪಾವತಿಸಿದ ನಂತರ ನಿಮ್ಮ ಬಳಿ ಉಳಿಯುವುದೇನು? ಆ ಉಳಿತಾಯ ಮಳೆಗಾಲಕ್ಕೆ ಸಾಕಾಗುತ್ತದೆಯೇ? ದುಃಖಕರವೆಂದರೆ ನಮ್ಮಲ್ಲಿ ಹೆಚ್ಚಿನವರಿಗೆ ಈ ಪ್ರಶ್ನೆಯ ಉತ್ತರ ಗೊತ್ತಿಲ್ಲ.
ಇದರಿಂದ ಅತ್ಯಂತ ಆತಂಕಗೊಳ್ಳಬೇಕಾದ ವಿಷಯವೇನು ಗೊತ್ತೆ? ಅನಿರೀಕ್ಷಿತವಾದ, ಆಹ್ವಾನಿಸದಿದ್ದರೂ ಬರುವ ವೈದ್ಯಕೀಯ ವೆಚ್ಚಗಳು. ದೊಡ್ಡ ಆಸ್ಪತ್ರೆಗಳು ಮತ್ತು ಅವುಗಳ ದೊಡ್ಡ ಇನ್ವಾಯ್ಸ್ಗಳು. ಹೆಲ್ತ್ ಇನ್ಶೂರೆನ್ಸ್ ನಮ್ಮನ್ನು ಇಂತಹ ಸನ್ನಿವೇಶದಿಂದ ಕಾಪಾಡುತ್ತದೆ.
ಇನ್ಶೂರ್ಡ್ ಅಥವಾ ಅವನ/ಅವಳ ಹೆಲ್ತ್ ಇನ್ಶೂರೆನ್ಸ್ನಲ್ಲಿ ಸೇರಿಸಿಕೊಂಡ ಕುಟುಂಬ ಸದಸ್ಯರು ಅನಾರೋಗ್ಯಕ್ಕೆ ಒಳಗಾದಾಗ, ಆಸ್ಪತ್ರೆಗೆ ದಾಖಲಾದಾಗ ಅಥವಾ ಶಸ್ತ್ರಚಿಕಿತ್ಸೆ ಅಥವಾ ಇನ್ನಾವುದೇ ರೀತಿಯ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದ್ದಾಗ ನಿಮ್ಮ ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ಇನ್ಶೂರೆನ್ಸ್ ರಿಇಂಬರ್ಸ್ ಮಾಡುತ್ತದೆ ಮತ್ತು ನಿಮ್ಮ ಜೀವನವನ್ನು ಸರಳವಾಗಿಸುತ್ತದೆ. ಈ ರೀತಿಯ ಇನ್ಶೂರೆನ್ಸ್ ನಿಮ್ಮ ಸ್ನೇಹಿತನಂತೆ ನಿಮ್ಮೊಂದಿಗಿರುತ್ತದೆ.
ನಿಮ್ಮ ಕುಟುಂಬದ ಸದಸ್ಯರೇ ನಿಮ್ಮ ಜಗತ್ತು. ಅವರಿಗೆ ಉತ್ತಮವಾದುದನ್ನು ನೀಡಲು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನೀವು ಏನು ಬೇಕಾದರೂ ಮಾಡಲು ಸಿದ್ಧರಿರುತ್ತೀರಿ. ಆದರೆ ನೀವು ಇನ್ನಿಲ್ಲವಾದ ಬಳಿಕ ಅವರ ಪರಿಸ್ಥಿತಿ ಏನಾಗಬಹುದು? ಇದೊಂದು ನೋಯಿಸುವ, ಕಾಡುವ ಪ್ರಶ್ನೆ. ಆದರೆ ಇದೇ ಸತ್ಯ ತಾನೇ.
ನೀವು ಇಲ್ಲಿ ಶಾಶ್ವತವಾಗಿ ಇರುವುದಿಲ್ಲ ಎನ್ನುವುದು ನಿಮಗೆ ತಿಳಿದಿದೆ. ಆದರೆ ನೀವು ತೊರೆದು ಹೋದ ಮೇಲೆ ಸಹ ನಿಮ್ಮ ಪ್ರೀತಿಪಾತ್ರರನ್ನು ನೋಡಿಕೊಳ್ಳಬಹುದು. ಇದೊಂಚೂರು ನೆಮ್ಮದಿ ಒದಗಿಸುತ್ತದೆ ಅಲ್ಲವೇ? ಮತ್ತು ನಿಮ್ಮ ಈ ನೆಮ್ಮದಿಗೆ ಉತ್ತರವೇ ಟರ್ಮ್ ಇನ್ಶೂರೆನ್ಸ್.
ನಿಮ್ಮ ಟರ್ಮ್ ಇನ್ಶೂರೆನ್ಸ್ ನೀವು ಇಲ್ಲದಿದ್ದರೂ ಸಹ ನಿಮ್ಮ ಕುಟುಂಬದ ಆರ್ಥಿಕ ಅಗತ್ಯಗಳನ್ನು ನೋಡಿಕೊಳ್ಳುತ್ತದೆ. ಇದೊಂದು ಲೈಫ್ ಇನ್ಶೂರೆನ್ಸ್ ಯೋಜನೆಯಾಗಿದ್ದು, ಇನ್ಶೂರೆನ್ಸ್ ಮಾಡಿದ ವ್ಯಕ್ತಿಯ ಫಲಾನುಭವಿ/ನಾಮಿನಿಗೆ ಆರ್ಥಿಕ ರಕ್ಷಣೆಯನ್ನು ನೀಡುತ್ತದೆ.
ಗಮನಿಸಿ: ಕೋವಿಡ್ 19ಗಾಗಿ ಹೆಲ್ತ್ ಇನ್ಶೂರೆನ್ಸ್ ಪ್ರಯೋಜನಗಳ ಕುರಿತು ಇನ್ನಷ್ಟು ತಿಳಿಯಿರಿ
ಟರ್ಮ್ ಇನ್ಶೂರೆನ್ಸ್ |
ಹೆಲ್ತ್ ಇನ್ಶೂರೆನ್ಸ್ |
ಇದು ಇನ್ಶೂರ್ಡ್ ವ್ಯಕ್ತಿಯು ಅವನ/ಅವಳ ಕುಟುಂಬಕ್ಕಾಗಿ ಮಾಡಿದ ರಕ್ಷಣಾ ಕವರ್ ಆಗಿದೆ. ಇನ್ಶೂರ್ಡ್ ತೀರಿಕೊಂಡ ಮೇಲೂ ಈ ಪಾಲಿಸಿಯು ಆತನ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡುತ್ತದೆ. |
ಇದು ನಿಮ್ಮನ್ನು ಮತ್ತು ವೈದ್ಯಕೀಯ/ಹೆಲ್ತ್ ಪಾಲಿಸಿಯಲ್ಲಿ ಸೇರಿಸಲಾದ ನಿಮ್ಮ ಕುಟುಂಬದ ಸದಸ್ಯರನ್ನು ಅನಿರೀಕ್ಷಿತ ವೈದ್ಯಕೀಯ ವೆಚ್ಚದಿಂದ ರಕ್ಷಿಸುತ್ತದೆ. |
ಇನ್ಶೂರ್ಡ್ ಇನ್ನಿಲ್ಲವಾದ ಸಂದರ್ಭದಲ್ಲಿ ಅವರ ನಾಮಿನಿಗೆ ನಿಗದಿತ ಮೊತ್ತವನ್ನು ಒಂದೇ ಬಾರಿ ಒದಗಿಸುತ್ತದೆ. |
ಇದು ಕಾಣದ ಕೈಯಂತೆ ಇರುತ್ತದೆ. ಯಾವುದೇ ನಿರ್ದಿಷ್ಟ ಸಮಯದ ಚೌಕಟ್ಟು ಇರದೆ, ನಿಮ್ಮ ಅಗತ್ಯದ ಸಮಯದಲ್ಲಿ ನಿಮಗೆ ಬೇಕಾದಾಗ ಹಣಕಾಸಿನ ಅಗತ್ಯಗಳನ್ನು ಒದಗಿಸುವ ಮೂಲಕ ಪೊರೆಯುತ್ತದೆ. |
ಪ್ರೀಮಿಯಂ ಸಾಮಾನ್ಯವಾಗಿ ತುಂಬಾ ಕಡಿಮೆ ಇರುತ್ತದೆ. |
ಪ್ರೀಮಿಯಂ ಸ್ವಲ್ಪ ಹೆಚ್ಚಿರುತ್ತದೆ. |
ಪ್ರೀಮಿಯಂ ಪಾವತಿ ಹೆಚ್ಚಾಗಿ ವಾರ್ಷಿಕ ಅವಧಿಯದಾಗಿರುತ್ತವೆ. ಅಂದಾಜು ಒಂದು ಕೋಟಿಯ ಪಾಲಿಸಿಗಾಗಿ ತಿಂಗಳಿಗೆ ಸಾಮಾನ್ಯವಾಗಿ 500 INRಗಿಂತ ಕಡಿಮೆಯಿರುತ್ತದೆ. ಹಾಗಾಗಿ ವಾರ್ಷಿಕವಾಗಿ ಪಾವತಿಸುವ ನಿಯಮ ಇದ್ದರೂ ಅಂತಿಮ ಮೊತ್ತ ಜೇಬಿಗೆ ಅಷ್ಟೊಂದು ಭಾರವಾಗುವುದಿಲ್ಲ. |
ಪ್ರೀಮಿಯಂ ಪಾವತಿ ಹೆಚ್ಚಾಗಿ ತಿಂಗಳ ಅವಧಿಯದ್ದಾರಿರುತ್ತದೆ. ಆದರೂ ಕೆಲವು ಇನ್ಶೂರೆನ್ಸ್ ಕಂಪನಿಗಳು ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕ ಪ್ರೀಮಿಯಂ ಪಾವತಿಯನ್ನು ಸಹ ನೀಡುತ್ತವೆ. |
ಇದು ಪಾಲಿಸಿ ಮೆಚ್ಯೂರಿಟಿ ಪ್ರಯೋಜನಗಳೊಂದಿಗೆ ಬರುವುದಿಲ್ಲ. ಇನ್ಶೂರ್ಡ್ ತೀರಿಕೊಂಡ ಬಳಿಕ ದುಃಖದಲ್ಲಿರುವ ಕುಟುಂಬ ಸದಸ್ಯರಿಗೆ ಇದೊಂದು ಆರ್ಥಿಕ ನೆರವು. ಪಾಲಿಸಿಯ ಅವಧಿಯ ಬಳಿಕವೂ ಇನ್ಶೂರ್ಡ್ ಬದುಕಿದ್ದರೆ ಟರ್ಮ್ ಇನ್ಶೂರೆನ್ಸ್ ಪಾಲಿಸಿಯನ್ನು ಕೊನೆಗೊಳಿಸಲಾಗುತ್ತದೆ. |
ನೋ-ಕ್ಲೇಮ್ ಮೆಚ್ಯೂರಿಟಿ ಬೋನಸ್ ಅಥವಾ ಬಳಕೆಯಾಗದ ಮೊತ್ತದ ಮುಂದುವರಿಕೆ ಅವಕಾಶ ಇಲ್ಲದೇ ಇರುವುದರಿಂದ ಕೆಲವು ಸಂದರ್ಭಗಳಲ್ಲಿ ಮುಂದಿನ ವರ್ಷದಲ್ಲಿ ಕಟ್ಟಬೇಕಾದ ಪ್ರೀಮಿಯಂ ಮೊತ್ತ ಕಡಿಮೆಯಾಗಬಹುದು. |
ಇದು ನಿಮ್ಮ ರೆಗ್ಯುಲರ್ ಹೂಡಿಕೆ ಪಾಲಿಸಿಯಲ್ಲ. ಆದರೂ ಇನ್ಶೂರ್ಡ್ ಪಡೆದ ವ್ಯಕ್ತಿ ಜೀವಂತವಾಗಿದ್ದರೆ ಮತ್ತು ಟರ್ಮ್ ಇನ್ಶೂರೆನ್ಸ್ ಪ್ಲಾನ್ ಪ್ರೀಮಿಯಂ ರಿಟರ್ನ್ ಪ್ಲಾನ್ ಆಗಿದ್ದರೆ, ಅವನು/ಆಕೆಯು ಅವಧಿಯುದ್ದಕ್ಕೂ ಪಾವತಿಸಿದ ಪ್ರೀಮಿಯಂಗಳನ್ನು ಕ್ಲೈಮ್ ಮಾಡುವ ಪ್ರಯೋಜನ ಪಡೆಯುತ್ತಾರೆ. ಈ ಪ್ರೀಮಿಯಂ ರೀಫಂಡ್ ತೆರಿಗೆ-ಮುಕ್ತವಾಗಿದೆ ಮತ್ತು ಒಂದು ರೀತಿಯಲ್ಲಿ ಸುರಕ್ಷಿತ ಪಿಗ್ಗಿ ಬ್ಯಾಂಕ್ ಥರ ಎಂದು ಪರಿಗಣಿಸಬಹುದು. |
ಇದು ಹೂಡಿಕೆ ಪಾಲಿಸಿಯಾಗಿದ್ದು, ನಿಮಗೆ ಹೆಚ್ಚು ಅಗತ್ಯವಿರುವಾಗ ಆರ್ಥಿಕವಾಗಿ ಸಹಾಯ ಮಾಡುತ್ತದೆ. ಕೆಲವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಮಾರುಕಟ್ಟೆ-ಸಂಯೋಜಿತ-ಹೂಡಿಕೆ ಪ್ಲಾನ್ ಗಳೊಂದಿಗೆ ಬರುತ್ತವೆ. |
ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ - ಹೆಸರೇ ಸೂಚಿಸುವಂತೆ ಒಬ್ಬ ವ್ಯಕ್ತಿಯನ್ನು ಕವರ್ ಮಾಡುತ್ತದೆ. ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ.
ಫ್ಯಾಮಿಲಿ ಫ್ಲೋಟರ್ ಪಾಲಿಸಿ - ಇನ್ಶೂರ್ಡ್ ಜೊತೆಗೆ ಇಡೀ ಕುಟುಂಬವನ್ನು ಒಂದೇ ಪ್ಲಾನ್ ಅಡಿಯಲ್ಲಿ ಕವರ್ ಮಾಡುತ್ತದೆ. ಪ್ರೀಮಿಯಂ ಅನ್ನು ವಾರ್ಷಿಕವಾಗಿ ಪಾವತಿಸಲಾಗುತ್ತದೆ. ಕುಟುಂಬಕ್ಕಾಗಿ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳ ಬಗ್ಗೆ ಇನ್ನಷ್ಟು ತಿಳಿಯಿರಿ.
ಯುನಿಟ್-ಲಿಂಕ್ಡ್ ಹೆಲ್ತ್ ಪ್ಲಾನ್ - ಇನ್ಶೂರೆನ್ಸ್ ಕಂಪನಿಗಳು ಯುನಿಟ್-ಲಿಂಕ್ಡ್ ಇನ್ಶೂರೆನ್ಸಿನ ಅಡಿಯಲ್ಲಿ ಕವರೇಜ್ ಮತ್ತು ಹೂಡಿಕೆ ಸೌಲಭ್ಯವನ್ನು ನೀಡುತ್ತವೆ.
ಸೀನಿಯರ್ ಸಿಟಿಜನ್ಸ್ ಹೆಲ್ತ್ ಇನ್ಶೂರೆನ್ಸ್ - ಈ ಪಾಲಿಸಿಯು ನಿಮ್ಮ ವಯಸ್ಸಾದ ಪೋಷಕರಿಗಾಗಿ. ಈ ಪಾಲಿಸಿಯನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ನಾವು ಎಲ್ಲಾ ಸಂಭಾವ್ಯ ಪ್ರಯೋಜನಗಳನ್ನು ಒದಗಿಸುತ್ತೇವೆ. ವೃದ್ಧಾಪ್ಯದಲ್ಲಿ ಅಗತ್ಯವಿರುವ ಸಾಮಾನ್ಯ ಚಿಕಿತ್ಸೆಗಳನ್ನು ಒದಗಿಸಲು ಅತ್ಯುತ್ತಮ ಆಸ್ಪತ್ರೆ ಮತ್ತು ಸರ್ವೀಸ್ ಟೈ-ಅಪ್ಗಳೊಂದಿಗೆ ನಾವು ನಮ್ಮ ಗ್ರಾಹಕರಿಗೆ ಅತ್ಯುತ್ತಮವಾದದ್ದನ್ನು ನೀಡುತ್ತೇವೆ. ಹಿರಿಯ ನಾಗರಿಕರ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳ ಬಗ್ಗೆ ಇನ್ನಷ್ಟು ತಿಳಿಯಿರಿ.
ಲೆವೆಲ್ ಟರ್ಮ್ ಇನ್ಶೂರೆನ್ಸ್ ಪ್ಲಾನ್ - ಪೂರ್ತಿ ಅವಧಿಯಲ್ಲಿ, ಸಮ್ ಅಶ್ಯೂರ್ಡ್ ಬದಲಾಗದೆ ಇರುತ್ತದೆ ಮತ್ತು ವಿಮಾದಾರರ ಮರಣದ ನಂತರ ಈ ಮೊತ್ತವನ್ನು ಕುಟುಂಬಕ್ಕೆ ಪಾವತಿಸಲಾಗುತ್ತದೆ.
ಪ್ರೀಮಿಯಂ ರೀಫಂಡ್ ಟರ್ಮ್ ಇನ್ಶೂರೆನ್ಸ್ - ಅವಧಿಯು ಅಂತ್ಯಗೊಂಡರೆ ಹಾಗೂ ಇನ್ಶೂರ್ಡ್ ಜೀವಂತವಾಗಿದ್ದರೆ ಪ್ರೀಮಿಯಂಗಳನ್ನು ಟ್ಯಾಕ್ಸ್-ಮುಕ್ತವಾಗಿ ರೀಫಂಡ್ ಮಾಡಲಾಗುತ್ತದೆ.
ಹೆಚ್ಚಳವಾಗುವ ಟರ್ಮ್ ಇನ್ಶೂರೆನ್ಸ್ - ಮರಣ ಪ್ರಯೋಜನವು ಪಾಲಿಸಿ ಅವಧಿಯ ಪ್ರಕಾರ ಪ್ರತಿ ವರ್ಷ ಹೆಚ್ಚುತ್ತಾ ಹೋಗುತ್ತದೆ. ಸಮ್ ಅಶ್ಯೂರ್ಡ್ ಹೆಚ್ಚಳದೊಂದಿಗೆ ಪ್ರೀಮಿಯಂ ಕೂಡ ಹೆಚ್ಚಾಗುತ್ತದೆ.
ಕಡಿಮೆಯಾಗುವ ಟರ್ಮ್ ಇನ್ಶೂರೆನ್ಸ್ - ಸಮ್ ಅಶ್ಯೂರ್ಡ್ ನಿಗದಿತ ಶೇಕಡಾವಾರಿನಲ್ಲಿ ಪಾಲಿಸಿಯ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತದೆ. ಪ್ರೀಮಿಯಂಗಳು ಹಾಗೆ ಇದ್ದರೂ ರಿಸ್ಕ್ ಕವರ್ ಮೇಲೆ ಪರಿಣಾಮ ಬೀರುತ್ತದೆ/ಕಡಿಮೆಯಾಗುತ್ತದೆ.
ಕನ್ವರ್ಟಿಬಲ್ ಟರ್ಮ್ ಪ್ಲಾನ್ - ಇನ್ಶೂರ್ಡ್ ಸ್ವಲ್ಪ ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಪಾಲಿಸಿಯನ್ನು ಎಂಡೋಮೆಂಟ್ ಅಶ್ಯೂರೆನ್ಸ್ ಪ್ಲಾನ್ ಆಗಿ ಪರಿವರ್ತಿಸಬಹುದು.
ಭಾರತದಲ್ಲಿ ಲಭ್ಯವಿರುವ ಇನ್ಶೂರೆನ್ಸ್ನ ವಿಧಗಳು ಮತ್ತು ಜನರಲ್ ಇನ್ಶೂರೆನ್ಸ್ನ ವಿಧಗಳ ಬಗ್ಗೆ ಇನ್ನಷ್ಟು ತಿಳಿಯಿರಿ.
ಹೆಲ್ತ್ ಇನ್ಶೂರೆನ್ಸ್ ವೈದ್ಯಕೀಯ ವೆಚ್ಚಗಳ ವಿರುದ್ಧ ನಿಮಗೆ ರಕ್ಷಣೆ ನೀಡುತ್ತದೆ
ರೀಸ್ಟೊರೇಷನ್ ಬೆನಿಫಿಟ್ - ನಿಮ್ಮ ಹೆಲ್ತ್ ಇನ್ಶೂರೆನ್ಸ್ನಲ್ಲಿರುವ ಕವರೇಜ್ ಇದಾಗಿದ್ದು, ಇದರಲ್ಲಿ ನಿಮ್ಮ ಸಮ್ ಇನ್ಶೂರ್ಡ್ ಕಾಯಿಲೆಯ ಚಿಕಿತ್ಸೆಗಾಗಿ ಖರ್ಚಾಗಿದ್ದರೆ ಇನ್ಶೂರೆನ್ಸ್ ಕಂಪನಿಯು ಅದನ್ನು ರೀಸ್ಟೋರ್ ಮಾಡುತ್ತದೆ.
ಕ್ರಿಟಿಕಲ್ ಇಲ್ ನೆಸ್ ಕವರ್ - ಇದನ್ನು ಆ್ಯಡ್-ಆನ್ ಆಗಿ ಅಥವಾ ಯೋಜನೆಯ ಭಾಗವಾಗಿ ಆಯ್ಕೆಮಾಡಿದರೆ ಇದು ತೀವ್ರ ಅನಾರೋಗ್ಯದ ಸಂದರ್ಭದಲ್ಲಿ ಆಸ್ಪತ್ರೆಯ ವೆಚ್ಚಗಳನ್ನು ಕವರ್ ಮಾಡುತ್ತದೆ.
ಡೈಲಿ ಹಾಸ್ಪಿಟಲ್ ಕ್ಯಾಶ್ ಕವರ್ - ಯಾವುದೇ ವೈದ್ಯಕೀಯ ತುರ್ತು ಸಂದರ್ಭದಲ್ಲಿ ಆಸ್ಪತ್ರೆಯ ಬಿಲ್ಗಿಂತ ಹೆಚ್ಚಿನ ವೆಚ್ಚಗಳನ್ನು ನಿರ್ವಹಿಸಲು ಈ ಕವರ್ ನಿಮಗೆ ಸಹಾಯ ಮಾಡುತ್ತದೆ.
ಮೆಟರ್ನಿಟಿ ಪ್ರಯೋಜನ - ನೀವು ಈ ಪ್ರಯೋಜನವನ್ನು ಆಯ್ಕೆ ಮಾಡಿಕೊಂಡರೆ, ತಾಯಿಯಾಗುತ್ತಿರುವ ಮಹಿಳೆಯು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾದಾಗ ಹೆರಿಗೆಯ ಚಿಕಿತ್ಸೆಯ ವೆಚ್ಚವನ್ನು ಹಾಗೂ ಎಲ್ಲಾ ಸಂಬಂಧಿತ ವೆಚ್ಚಗಳನ್ನು ನೋಡಿಕೊಳ್ಳುತ್ತದೆ. ಯಾವುದೇ ತೊಡಕುಗಳು ಕಂಡುಬಂದ ಸಂದರ್ಭದಲ್ಲಿ ಅಗತ್ಯವಿರುವ ಯಾವುದೇ ಚಿಕಿತ್ಸಾ ವೆಚ್ಚವನ್ನು ಸಹ ಇದು ನೋಡಿಕೊಳ್ಳುತ್ತದೆ.
ಹೋಮ್ (ಡೊಮಿಸಿಲಿಯರಿ) ಹಾಸ್ಪಿಟಲೈಸೇಷನ್ - ನಿಮ್ಮ ಪೋಷಕರು ಅಥವಾ ಕುಟುಂಬದ ಯಾವುದೇ ಸದಸ್ಯರಲ್ಲಿ ಯಾರಿಗಾದರೂ ಆಸ್ಪತ್ರೆ ದಾಖಲಾಗುವ ಅಗತ್ಯವಿದ್ದು, ಮನೆಯಲ್ಲಿ ಆರೈಕೆ ಬಯಸಿದರೆ ಈ ಪ್ರಯೋಜನವು ನಿಮಗಾಗಿ ಇದೆ.
ಆಸ್ಪತ್ರೆ ದಾಖಲಾತಿ ಪೂರ್ವ ಮತ್ತು ನಂತರದ ವೆಚ್ಚಗಳು - ಹೆಲ್ತ್ ಇನ್ಶೂರೆನ್ಸ್ಗಳಲ್ಲಿ ಸಾಮಾನ್ಯವಾಗಿ ಎಕ್ಸ್-ರೇಗಳು, ಸ್ಕ್ಯಾನ್ಗಳು, ಔಷಧಿಗಳಂತಹ ಕವರ್ ಆಗಿರದ ವೆಚ್ಚಗಳಿವೆ ಎಂಬುದು ನಮಗೆ ತಿಳಿದಿದೆ. ನಾವು ಈ ವೆಚ್ಚಗಳನ್ನು ಸಹ ನೋಡಿಕೊಳ್ಳುತ್ತೇವೆ ಎಂದು ಖಚಿತಪಡಿಸುತ್ತೇವೆ.
ಅಪಘಾತ ಸಂದರ್ಭ ಹಾಸ್ಪಿಟಲೈಸೇಷನ್ - ಈ ಪ್ರಯೋಜನವು ಆಂಬ್ಯುಲೆನ್ಸ್, ಡೇಕೇರ್ ಪ್ರಕ್ರಿಯೆಗಳು, ಆಸ್ಪತ್ರೆ ದಾಖಲಾತಿ ಪೂರ್ವ ಮತ್ತು ನಂತರದ ವೆಚ್ಚಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಐಸಿಯು, ಔಷಧಿ, ಓ.ಟಿ, ವೈದ್ಯರ ಶುಲ್ಕಗಳು, ಡಯಾಗ್ನೋಸ್ಟಿಕ್ಸ್ ಮತ್ತು ಅಪಘಾತದ ಸಂದರ್ಭದ ಮತ್ತಿತರ ಖರ್ಚುಗಳನ್ನು ಒಳಗೊಂಡಿದೆ.
ನೀವು ನಿಮ್ಮ ಕುಟುಂಬದವರ ಜೀವನದಿಂದ ದೂರವಾದಾಗ ಇದು ಮುಖ್ಯವಾಗಿ ನಿಮ್ಮ ಕುಟುಂಬಕ್ಕೆ ನಿಮ್ಮಿಂದ ದೊರೆಯುವ ಹಣಕಾಸಿನ ಸಹಾಯವಾಗಿದೆ.
ಪ್ರೀಮಿಯಂ ಸಾಮಾನ್ಯವಾಗಿ ಕಡಿಮೆ ಇರುತ್ತದೆ.
ಟರ್ಮ್ ಇನ್ಶೂರೆನ್ಸ್ ನೊಂದಿಗೆ ಟ್ಯಾಕ್ಸ್ ಪ್ರಯೋಜನ ಬರುತ್ತದೆ. ಆದಾಗ್ಯೂ, ಟರ್ಮ್ ಪಾಲಿಸಿಯನ್ನು ಖರೀದಿಸಲು ತೆರಿಗೆ ಉಳಿತಾಯವೊಂದೇ ಕಾರಣವಾಗಿರಬಾರದು. ಈ ಪಾಲಿಸಿಯು ಚಾಲ್ತಿಯಲ್ಲಿರುವ ತೆರಿಗೆ ಕಾನೂನುಗಳ ಪ್ರಕಾರ ತೆರಿಗೆ ಪ್ರಯೋಜನ ಮತ್ತು ವಿನಾಯಿತಿಗಳನ್ನು ನೀಡುತ್ತದೆ.
ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಬಹಳಷ್ಟು ಆ್ಯಡ್-ಆನ್ಗಳು ಮತ್ತು ಪ್ರಯೋಜನಗಳೊಂದಿಗೆ ಬರುತ್ತವೆ. ಅವುಗಳನ್ನು ಸರಿಯಾದ ಇನ್ಶೂರೆನ್ಸ್ ಕಂಪನಿಯಲ್ಲಿ ನೋಡುವುದು ತುಂಬಾ ಮುಖ್ಯವಾಗಿದೆ. ಡಿಜಿಟ್ನಲ್ಲಿ ನಾವು ನಮ್ಮ ಗ್ರಾಹಕರಿಗೆ ಉತ್ತಮ ಆ್ಯಡ್-ಆನ್ಗಳನ್ನು ಹಾಗೂ ಪ್ರಯೋಜನಗಳನ್ನು ಒದಗಿಸುತ್ತೇವೆ ಎಂದು ನಂಬಿದ್ದೇವೆ. ಇದರಿಂದ ಅವರು ತಮ್ಮ ಪಾಲಿಸಿಗಳಿಂದ ಹೆಚ್ಚಿನದನ್ನು ಪಡೆಯಬಹುದು.
ಎಲ್ಲವನ್ನೂ ಸಂಕ್ಷಿಪ್ತವಾಗಿ ಹೇಳುವುದಾದರೆ, ಎರಡರ ಪ್ರಯೋಜನಗಳನ್ನು ನೀವು ಸರಿಯಾಗಿ ಅರ್ಥಮಾಡಿಕೊಂಡರೆ, ಬೇಗನೇ ಅಥವಾ ತಡವಾಗಿಯಾದರೂ ನಮಗೆಲ್ಲರಿಗೂ ಈ ಎರಡೂ ಪಾಲಿಸಿಗಳು ಬೇಕಾಗುತ್ತವೆ ಎಂಬುದನ್ನು ಕೂಡ ಅರ್ಥಮಾಡಿಕೊಳ್ಳುತ್ತೀರಿ. ತಡವಾಗುವ ಮೊದಲು ಸರಿಯಾದ ಸಮಯದಲ್ಲಿ ಸೂಕ್ತ ಆಯ್ಕೆಯನ್ನು ಮಾಡುವುದು ಒಳ್ಳೆಯದು.