ನೀವು ಹೆಲ್ತ್ ಇನ್ಶೂರೆನ್ಸ್ ಪಡೆಯಲು ಬಯಸುತ್ತಿದ್ದರೆ ನೀವು ಟರ್ಮ್ ಪ್ಲಾನ್ ಬಗ್ಗೆಯೂ ಗಮನ ಹರಿಸಬೇಕು. ಟರ್ಮ್ ಪ್ಲಾನ್ ಎಂದರೆ ದೀರ್ಘಾವಧಿಯ ಇನ್ಶೂರೆನ್ಸ್ ಪ್ಲಾನ್ ಆಗಿದ್ದು, ಇದರಲ್ಲಿ ಇನ್ಶೂರೆನ್ಸ್ ಪಾಲಿಸಿದಾರರ ನಾಮಿನಿಯು ಪಾಲಿಸಿಹೋಲ್ಡರ್ ಮರಣದ ಸಂದರ್ಭದಲ್ಲಿ ಸಮ್ ಅಶ್ಯೂರ್ಡ್ ಪಡೆಯುತ್ತಾರೆ.
ಆದರೆ ಪಾಲಿಸಿಹೋಲ್ಡರ್ ಖರೀದಿಸಿದ ಇನ್ಶೂರೆನ್ಸ್ ಪಾಲಿಸಿ ಯಾವುದು ಎಂಬುದರ ಆಧಾರದ ಮೇಲೆ ಪಾಲಿಸಿಹೋಲ್ಡರ್ ಒಂದೋ ಪ್ರೀಮಿಯಂ ಪಾವತಿಸಬೇಕು ಅಥವಾ ಒನ್-ಟೈಮ್ ಪೇಮೆಂಟ್ ಮಾಡಬೇಕಾಗುತ್ತದೆ. ಕೆಲವು ಟರ್ಮ್ ಪಾಲಿಸಿಗಳಲ್ಲಿ, ಕ್ಯಾನ್ಸರ್, ಹೃದಯಾಘಾತ, ಅಂಗ ವೈಫಲ್ಯ ಮುಂತಾದ ದೊಡ್ಡ ಕಾಯಿಲೆಗಳ ರೋಗನಿರ್ಣಯ ಮಾಡಿಸಲು ಪಾಲಿಸಿಹೋಲ್ಡರ್ ಗೆ ಕ್ಯಾಶ್ ಅಮೌಂಟ್ ಒದಗಿಸಲಾಗುತ್ತದೆ.
ಈ ಪಾಲಿಸಿಗಳು ಕಾಯಿಲೆಗಳ ವಿಧಾನಗಳಾದ ಕ್ರಿಟಿಕಲ್ ಇಲ್ನೆಸ್ ಮತ್ತು ಟರ್ಮಿನಲ್ ಇಲ್ನೆಸ್ ಹಾಗೂ ಪಾಲಿಸಿಯ ನಿಯಮ ಮತ್ತು ಷರತ್ತುಗಳನ್ನು ಆಧರಿಸಿ ವಿಮೆ ಮಾಡಿದ ಮೊತ್ತವನ್ನು ನೀಡುತ್ತವೆ. ಬಹು ಮುಖ್ಯವಾಗಿ ನೀವು ನಿಮ್ಮ ಪಾಲಿಸಿಯನ್ನು ಆಯ್ಕೆಮಾಡುವ ಮೊದಲು, ಕ್ರಿಟಿಕಲ್ ಇಲ್ನೆಸ್ ಮತ್ತು ಟರ್ಮಿನಲ್ ಇಲ್ನೆಸ್ ಇವೆರಡರ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಅವಶ್ಯ. ನಿಮಗೆ ಈ ಎರಡು ವಿಧದ ಅನಾರೋಗ್ಯಗಳ ನಡುವಿನ ಸ್ಪಷ್ಟ ವ್ಯತ್ಯಾಸ ಗೊತ್ತಾದರೆ, ನೀವು ನಿಮಗೆ ಸೂಕ್ತ ಅನ್ನಿಸುವ ಇನ್ಶೂರೆನ್ಸ್ ಪಾಲಿಸಿಯ ಸರಿಯಾದ ಪ್ರಕಾರವನ್ನು ಆಯ್ಕೆ ಮಾಡುವುದು ಸುಲಭವಾಗುತ್ತದೆ.
ಸರಳವಾಗಿ ಹೇಳುವುದಾದರೆ, ಟರ್ಮಿನಲ್ ಇಲ್ನೆಸ್ ಎಂದರೆ ಗುಣಪಡಿಸಲಾಗದ ಕಾಯಿಲೆಗಳು. ದುರದೃಷ್ಟವಶಾತ್, ಈ ವಿಧದ ಕಾಯಿಲೆಗಳು ಹೆಚ್ಚಿನ ಪ್ರಮಾಣವನ್ನು ತಲುಪುತ್ತಿವೆ. ಅದರಲ್ಲೂ ವಿಶೇಷವಾಗಿ ನಗರಗಳಲ್ಲಿ ಈ ಕಾಯಿಲೆಗಳಿಂದ ಬಳಲುತ್ತಿರುವ ಬಹುತೇಕ ರೋಗಿಗಳ ಜೀವಿತಾವಧಿ ಕುಂಠಿತಗೊಳ್ಳುತ್ತಿದೆ.
ಅಂತಹ ಪರಿಸ್ಥಿತಿಗಳಲ್ಲಿ, ಟರ್ಮಿನಲ್ ಇನ್ಶೂರೆನ್ಸ್ ಪಾಲಿಸಿಯು ಬಹಳ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಪಾಲಿಸಿಹೋಲ್ಡರ್ ಮರಣದ ನಂತರ ನಾಮಿನಿಯು ಸಮ್ ಅಶ್ಯೂರ್ಡ್ ಜೊತೆಗೆ ಹೆಚ್ಚುವರಿ ಬೋನಸ್ ಮೊತ್ತವನ್ನೂ ಪಡೆಯುತ್ತಾರೆ. ಕೆಲವು ಸಂದರ್ಭಗಳಲ್ಲಿ, ಪಾಲಿಸಿಹೋಲ್ಡರ್ ಜೀವಿತಾವಧಿಯು 12 ತಿಂಗಳುಗಳಿಗಿಂತ ಕಡಿಮೆಯಿದ್ದರೆ ಇನ್ಶೂರೆನ್ಸ್ ಪೂರೈಕೆದಾರರು ಅವರಿಗೆ ಸಮ್ ಅಶ್ಯೂರ್ಡ್ ನಲ್ಲಿ ಶೇ.25ರಷ್ಟು ಪಾವತಿಸುತ್ತಾರೆ.
ಆದಾಗ್ಯೂ, ಈ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಮರಣ ಸಂದರ್ಭದಲ್ಲಿ ದೊರಕುವ ಅಮೌಂಟ್ ಅನ್ನು ಪಾಲಿಸಿಹೋಲ್ಡರ್ ಚಿಕಿತ್ಸೆಗಾಗಿ ಈಗಾಗಲೇ ಪಾವತಿಸಿದ ಮೊತ್ತಕ್ಕೆ ಸಮಾನವಾಗಿ ಇಳಿಸಲಾಗುತ್ತದೆ.
ಕ್ರಿಟಿಕಲ್ ಇಲ್ನೆಸ್ ಎಂದರೆ ತುಂಬಾ ಗಂಭೀರ ರೀತಿಯ ಕಾಯಿಲೆಯಾಗಿದ್ದು, ಇದನ್ನು ತೀವ್ರ ಮೆಡಿಕಲ್ ಚಿಕಿತ್ಸೆಯಿಂದ ಗುಣಪಡಿಸಬಹುದಾಗಿದೆ. ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್, ಅಂಗವೈಕಲ್ಯ, ಪಾರ್ಶ್ವವಾಯು, ಕುರುಡುತನ, ಆರ್ಗನ್ ಟ್ರಾನ್ಸ್ ಪ್ಲಾಂಟ್ ಇತ್ಯಾದಿಗಳನ್ನು ಸಾಮಾನ್ಯವಾಗಿ ಕ್ರಿಟಿಕಲ್ ಇಲ್ನೆಸ್ ಎನ್ನಲಾಗುತ್ತದೆ. ಸಾಮಾನ್ಯವಾಗಿ, ಲೈಫ್ ಇನ್ಶೂರೆನ್ಸ್ನಲ್ಲಿ ಯಾವುದೇ ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದರೂ ಪಾಲಿಸಿಹೋಲ್ಡರ್ ಒಂದು ಹಂತದವರೆಗೆ ನಿರ್ದಿಷ್ಟ ಮಟ್ಟಿಗಿನ ಪ್ರಯೋಜನವನ್ನು ಪಡೆಯುತ್ತಾರೆ.
ಆದರೆ ಹೆಲ್ತ್ ಇನ್ಶೂರೆನ್ಸ್ನಲ್ಲಿ, ಪಾಲಿಸಿಹೋಲ್ಡರ್ ಹಾಸ್ಪಿಟಲೈಸೇಷನ್ ಆಗಿದ್ದರೆ ಮಾತ್ರ ಕ್ಲೈಮ್ ಮಾನ್ಯವಾಗುತ್ತದೆ ಮತ್ತು ಪಾಲಿಸಿಹೋಲ್ಡರ್ ಸಮ್ ಇನ್ಶೂರ್ಡ್ ಮಿತಿಯನ್ನು ಮೀರದಿದ್ದರಷ್ಟೇ ಪಾಲಿಸಿಹೋಲ್ಡರ್ ಚಿಕಿತ್ಸೆ ವೆಚ್ಚಕ್ಕಾಗಿ ಹಣಕಾಸಿನ ಪ್ರಯೋಜನ ಪಡೆಯುತ್ತಾರೆ. ಆದರೆ ಇದು ಕ್ರಿಟಿಕಲ್ ಇಲ್ನೆಸ್ ಪಾಲಿಸಿಯ ಸಂದರ್ಭದಲ್ಲಿ ಅಲ್ಲ.
ಕ್ರಿಟಿಕಲ್ ಇಲ್ನೆಸ್ ಪಾಲಿಸಿಯಲ್ಲಿ ಮುಖ್ಯವಾಗಿ ಕ್ರಿಟಿಕಲ್ ಇಲ್ನೆಸ್ ಚಿಕಿತ್ಸೆಯು ತುಂಬಾ ದುಬಾರಿಯಾಗಿದ್ದಾಗ ಇನ್ಶೂರೆನ್ಸ್ ಪಡೆದ ವ್ಯಕ್ತಿಯು ಒನ್-ಟೈಮ್ ನಿಶ್ಚಿತ ಪ್ರಯೋಜನವನ್ನು ಪಡೆಯುತ್ತಾರೆ. ಆದರೆ, ಒಂದು ಬಾರಿ ನೀವು ಒನ್-ಟೈಮ್ ನಿಶ್ಚಿತ ಪ್ರಯೋಜನವನ್ನು ಪಡೆದರೆ, ನಂತರದಲ್ಲಿ ಪಾಲಿಸಿಯನ್ನು ರಿನೀವ್ ಮಾಡುವವರೆಗೆ ನೀವು ಇನ್ಶೂರೆನ್ಸ್ ಪೂರೈಕೆದಾರರಿಂದ ಯಾವುದೇ ಹೆಚ್ಚಿನ ಪ್ರಯೋಜನವನ್ನು ಪಡೆಯಲಾಗುವುದಿಲ್ಲ.
ಟರ್ಮಿನಲ್ ಇಲ್ನೆಸ್ ಇನ್ಶೂರೆನ್ಸ್ |
ಕ್ರಿಟಿಕಲ್ ಇಲ್ನೆಸ್ ಇನ್ಶೂರೆನ್ಸ್ |
|
ಸಮ್ ಅಮೌಂಟ್ ಅಶ್ಯೂರ್ಡ್ |
ಟರ್ಮಿನಲ್ ಇಲ್ನೆಸ್ ಇನ್ಶೂರೆನ್ಸ್ನಲ್ಲಿ, ಪಾಲಿಸಿಹೋಲ್ಡರಿಗೆ ಟರ್ಮಿನಲ್ ಇಲ್ನೆಸ್ ಚಿಕಿತ್ಸೆಗಾಗಿ ಹಣದ ಅಗತ್ಯವಿದ್ದರೆ ಸಮ್ ಅಮೌಂಟ್ ಅಶ್ಯೂರ್ಡ್ ನ ಶೇ.25ರಷ್ಟನ್ನು ಕ್ಲೈಮ್ ಮಾಡಿಕೊಳ್ಳಬಹುದು. |
ಕ್ರಿಟಿಕಲ್ ಇಲ್ನೆಸ್ ಇನ್ಶೂರೆನ್ಸ್ನಲ್ಲಿ, ನಿಮಗೆ ಹೆಚ್ಚು ಹಣದ ಅಗತ್ಯ ಇರುವ ಸಮಯದಲ್ಲಿ ನೀವು ಒಂದು ದೊಡ್ಡ ಅಮೌಂಟ್ ಅನ್ನು ಮತ್ತು ಒನ್-ಟೈಮ್ ಪ್ರಯೋಜನವನ್ನು ಪಡೆಯಬಹುದು. |
ಕ್ಲೈಮ್ ಲಭ್ಯತೆ |
ಟರ್ಮಿನಲ್ ಇಲ್ನೆಸ್ ಇನ್ಶೂರೆನ್ಸ್ನಲ್ಲಿ ಇನ್ಶೂರೆನ್ಸ್ ಪಾಲಿಸಿಹೋಲ್ಡರ್ ತಮ್ಮ ಮರಣದ ನಂತರ ತಮ್ಮ ನಾಮಿನಿಗೆ ಹೆಚ್ಚಿನ ಮೊತ್ತವನ್ನು ಒದಗಿಸುವುದರಿಂದ ನಿಮ್ಮ ಕುಟುಂಬದ ಸದಸ್ಯರನ್ನು ನೀವು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬಹುದು. |
ಕ್ರಿಟಿಕಲ್ ಇಲ್ನೆಸ್ ಇನ್ಶೂರೆನ್ಸ್ನಲ್ಲಿ ಹಾಸ್ಪಿಟಲೈಸ್ಡ್ ಆಗದೇ ಇದ್ದರೂ ನೀವು ಪ್ರಯೋಜನ ಪಡೆಯಲು ಕ್ಲೈಮ್ ಮಾಡಬಹುದು. |
ಆರ್ಥಿಕ ಪ್ರಯೋಜನಗಳು |
ಟರ್ಮಿನಲ್ ಇಲ್ನೆಸ್ ಇನ್ಶೂರೆನ್ಸ್ ಪಾಲಿಸಿಯು ಪಾಲಿಸಿಹೋಲ್ಡರ್ ಟರ್ಮಿನಲ್ ಇಲ್ನೆಸ್ ಹೊಂದಿದ್ದರೆ ಮತ್ತು ಆ ಪಾಲಿಸಿಹೋಲ್ಡರ್ ಜೀವಿತಾವಧಿಯು 12 ತಿಂಗಳುಗಳಿಗಿಂತ ಕಡಿಮೆ ಇದ್ದರೆ ಮಾತ್ರ ಅವರಿಗೆ ಹಣಕಾಸಿನ ಪ್ರಯೋಜನವನ್ನು ಒದಗಿಸುತ್ತದೆ. |
ಕ್ರಿಟಿಕಲ್ ಇಲ್ನೆಸ್ ಇನ್ಶೂರೆನ್ಸ್ ಪಾಲಿಸಿಯು ಪಾಲಿಸಿಹೋಲ್ಡರ್ ಯಾವುದಾದರೂ ಕ್ರಿಟಿಕಲ್ ಇಲ್ನೆಸ್ ಗಳಿಂದ ಬಳಲುತ್ತಿದ್ದರೆ ಮಾತ್ರ ಅವರಿಗೆ ಹಣಕಾಸಿನ ಲಾಭವನ್ನು ನೀಡುತ್ತದೆ. |
ಟರ್ಮಿನಲ್ ಇಲ್ನೆಸ್ ಪಾಲಿಸಿ ಹೊಂದಿರುವ ಕೆಲವು ಪ್ರಯೋಜನಗಳು ಈ ಕೆಳಗಿನಂತಿವೆ:
ಕ್ರಿಟಿಕಲ್ ಇಲ್ನೆಸ್ ಪಾಲಿಸಿಯ ಕೆಲವು ಪ್ರಯೋಜನಗಳು ಈ ಕೆಳಗಿನಂತಿವೆ.
ಕ್ಯಾನ್ಸರ್, ಹೃದ್ರೋಗ, ಸ್ಟ್ರೋಕ್, ಪ್ರಮುಖ ಅಂಗಾಂಗ ವೈಫಲ್ಯ, ಕೊರೋನರಿ ಆರ್ಟರಿ ಬೈಪಾಸ್ ಕಾಯಿಲೆ, ಆಲ್ಜೈಮರ್ ಕಾಯಿಲೆ, ಕಿವುಡುತನ, ಕುರುಡುತನ, ಬ್ರೇನ್ ಟ್ಯೂಮರ್, ತೀವ್ರ ಸುಟ್ಟಗಾಯಗಳು, ಪಾರ್ಶ್ವವಾಯು, ಕೋಮಾ ಮುಂತಾದ ಟರ್ಮಿನಲ್ ಇಲ್ನೆಸ್ ಗಳಿಂದ ಬಳಲುತ್ತಿರುವ ಜನರು ಈ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇವು ಬಹುತೇಕ ಗುಣಪಡಿಸಲಾಗದ ಕಾಯಿಲೆಗಳು. ಇಂತಹ ಪರಿಸ್ಥಿತಿ ಇದ್ದಾಗ ಸಾಮಾನ್ಯವಾಗಿ ಮಾನವರ ಜೀವಿತಾವಧಿಯು ಕಡಿಮೆಯಾಗುತ್ತದೆ. ಆದ್ದರಿಂದ ಟರ್ಮಿನಲ್ ಇಲ್ನೆಸ್ ಗಳ ಇನ್ಶೂರೆನ್ಸ್ ಪಡೆಯುವುದು ಉತ್ತಮ. ಏಕೆಂದರೆ ಈ ಪಾಲಿಸಿ ಪಡೆಯುವುದರಿಂದ ಮರಣದ ನಂತರವೂ ನೀವು ನಿಮ್ಮ ಕುಟುಂಬದ ಆರ್ಥಿಕ ಸ್ಥಿತಿಯನ್ನು ಭದ್ರಪಡಿಸಬಹುದು.
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್, ಹೃದಯಾಘಾತ, ಸ್ಟ್ರೋಕ್, ಅಂಗವೈಕಲ್ಯ, ಪಾರ್ಶ್ವವಾಯು, ಕುರುಡುತನ, ಆರ್ಗನ್ ಟ್ರಾನ್ಸಪ್ಲಾಂಟ್ ಮುಂತಾದ ಕ್ರಿಟಿಕಲ್ ಇಲ್ನೆಸ್ ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಆದ್ದರಿಂದ, ಪ್ರತಿಯೊಬ್ಬರೂ ಕ್ರಿಟಿಕಲ್ ಇಲ್ನೆಸ್ ಗಳ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಏಕೆಂದರೆ ಭವಿಷ್ಯದಲ್ಲಿ ಅಂತಹ ಯಾವುದೇ ಕಾಯಿಲೆಗಳು ಎದುರಾದಲ್ಲಿ ಅಥವಾ ಕಾಯಿಲೆಯ ನಂತರ ಕೆಲಸ ಕಳೆದುಕೊಂಡರೆ ಚಿಕಿತ್ಸೆಗೆ ಬೇಕಾದ ಹಣಕಾಸಿನ ವೆಚ್ಚ ಭರಿಸಲು ಇದು ನಿಮಗೆ ಸಹಾಯ ಮಾಡುತ್ತದೆ.