ಹೆಲ್ತ್ ಇನ್ಶೂರೆನ್ಸ್ ಆನ್‌ಲೈನ್‌ನಲ್ಲಿ ಖರೀದಿಸಿ

ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಕೋಪೇ, ಕೋಇನ್ಶೂರೆನ್ಸ್ ಮತ್ತು ಡಿಡಕ್ಟಿಬಲ್ ಮಧ್ಯೆ ಇರುವ ವ್ಯತ್ಯಾಸ

ಕೋಪೇ, ಕೋಇನ್ಶೂರೆನ್ಸ್ ಮತ್ತು ಡಿಡಕ್ಟಿಬಲ್ ಎಂದರೇನು

ಹೆಲ್ತ್ ಇನ್ಶೂರೆನ್ಸ್ ಅನ್ನು ಪಡೆದುಕೊಳ್ಳುವ ವಿಷಯ ಬಂದಾಗ, ನೀವು ಕೆಲವು ನಿಯಮಗಳ ಬಗ್ಗೆ ಸ್ಪಷ್ಟತೆ ಹೊಂದಿರಬೇಕು, ಇಲ್ಲದಿದ್ದರೆ ಸಾಮಾನ್ಯವಾಗಿ ಗೊಂದಲಕ್ಕೊಳಕ್ಕೀಡಾಗಬಹುದು.

ನಿರ್ದಿಷ್ಟವಾಗಿ, ಕೋಪೇ, ಡಿಡಕ್ಟಿಬಲ್ ಮತ್ತು ಕೋಇನ್ಶೂರೆನ್ಸ್ ನಂತಹ ನಿಯಮಗಳಿಗೆ ಬಂದಾಗ, ಸರಿಯಾದ ಮಾಹಿತಿಯಿಲ್ಲದ ಯಾರಾದರೂ ಬಹಳ ವೇಗವಾಗಿ ಗೊಂದಲಕ್ಕೊಳಗಾಗಬಹುದು.

ಚಿಂತಿಸಬೇಡಿ, ನೀವು ಎಲ್ಲಾ ವಿಚಾರಗಳನ್ನು ಕವರ್ ಮಾಡುವಂತೆ ನಾವು ನೋಡಿಕೊಳ್ಳುತ್ತೇವೆ!

ಇಲ್ಲಿ, ನಾವು ಕೋಇನ್ಶೂರೆನ್ಸ್, ಡಿಡಕ್ಟಿಬಲ್ ಮತ್ತು ಕೋಪೇಯ ಅರ್ಥ ಮತ್ತು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಮೇಲೆ ಅವುಗಳ ಪರಿಣಾಮಗಳ ಬಗ್ಗೆ ಎಲ್ಲವನ್ನೂ ವಿವರಿಸುತ್ತೇವೆ.

ಅವುಗಳನ್ನು ಈ ಕೆಳಗೆ ತಿಳಿಯೋಣ!

ಹೆಲ್ತ್ ಇನ್ಶೂರೆನ್ಸ್ ನಲ್ಲಿ ಕೋಪೇ ಎಂದರೇನು?

ಪಾಲಿಸಿಹೋಲ್ಡರ್ ಗಳು ಮೆಡಿಕಲ್ ಚಿಕಿತ್ಸೆಗಾಗಿ ತಮ್ಮ ವೆಚ್ಚದ ಫಿಕ್ಸ್‌ಡ್‌ ಭಾಗವನ್ನು ಭರಿಸಬೇಕಾದಾಗ ಉಳಿದವು ಇನ್ಶೂರರ್ ರಿಂದ ಭರಿಸಬೇಕಾಗುವುದನ್ನು ಕೋಪೇ ಎನ್ನಲಾಗುತ್ತದೆ. ಇದು ಫಿಕ್ಸ್‌ಡ್‌ ಅಮೌಂಟ್ ಆಗಿರಬಹುದು ಅಥವಾ ಚಿಕಿತ್ಸೆಯ ವೆಚ್ಚದ ಫಿಕ್ಸ್‌ಡ್‌ ಪರ್ಸಟೇಂಜ್ ಆಗಿರಬಹುದು.

ಉದಾಹರಣೆಗೆ, ನಿಮ್ಮ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಚಿಕಿತ್ಸಾ ವೆಚ್ಚದ ರೂ.2000ರಷ್ಟರ ಕೋಪೇ ಷರತ್ತಿನೊಂದಿಗೆ ಬಂದರೆ ಮತ್ತು ಚಿಕಿತ್ಸೆಯ ವೆಚ್ಚ ರೂ. 10,000 ಆಗಿದ್ದರೆ ನಿಮ್ಮ ಚಿಕಿತ್ಸೆಗೆ ರೂ.2000 ಅನ್ನು ನೀವು ಪಾವತಿಸಬೇಕಾಗುತ್ತದೆ, ಉಳಿದ ರೂ. 8000 ಇನ್ಶೂರರ್ ರಿಂದ ಕವರ್ ಮಾಡಲಾಗುತ್ತದೆ.

ಮತ್ತೊಮ್ಮೆ, ಕೋಪೇ ಷರತ್ತಿನಲ್ಲಿ ನೀವು ಒಟ್ಟು ವೆಚ್ಚದ 10% ಅನ್ನು ಭರಿಸಲು ಬಯಸಿದರೆ, ನೀವು ಅದರ ಕಡೆಗೆ ರೂ.1000 ಪಾವತಿಸಬೇಕಾಗುತ್ತದೆ, ಉಳಿದ 90% (ರೂ. 9000) ಅನ್ನು ಇನ್ಶೂರರ್ ಪಾವತಿಸುತ್ತಾರೆ.

ಇನ್ಶೂರೆನ್ಸ್ ಪಾಲಿಸಿಗಳ ಅಡಿಯಲ್ಲಿ ಕೋಪೇಮೆಂಟ್ ವೈಶಿಷ್ಟ್ಯಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು:

ಕೋಪೇ ಷರತ್ತಿನೊಂದಿಗೆ, ಇನ್ಶೂರೆನ್ಸ್ ಪೂರೈಕೆದಾರರು ಬಹುಪಾಲು ಕ್ಲೈಮ್ ಅನ್ನು ಭರಿಸುತ್ತಾರೆ, ಆದರೆ ಪಾಲಿಸಿಹೋಲ್ಡರ್ ನಿರ್ದಿಷ್ಟ ಫಿಕ್ಸ್‌ಡ್‌ ಭಾಗವನ್ನು ಕವರ್ ಮಾಡಬೇಕಾಗುತ್ತದೆ.

ಪಡೆದ ಮೆಡಿಕಲ್ ಸೇವೆಗೆ ಅನುಗುಣವಾಗಿ ಕೋಪೇ ಅಮೌಂಟ್ ಫಿಕ್ಸ್‌ಡ್‌ ಆಗಿದೆ.

ಕಡಿಮೆ ಕೋಪೇಮೆಂಟ್ ಅಮೌಂಟ್ ಎಂದರೆ ಹೆಚ್ಚಿನ ಪ್ರೀಮಿಯಂ ಪಾವತಿ.

ಈ ನಿಬಂಧನೆಗಳನ್ನು ಹೆಚ್ಚಾಗಿ ಸೀನಿಯರ್ ಸಿಟಿಜನ್ ಗಳ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳ ಮೇಲೆ ವಿಧಿಸಲಾಗುತ್ತದೆ.

ಚಿಕಿತ್ಸೆಯ ವೆಚ್ಚ ಹೆಚ್ಚಿರುವ ಮೆಟ್ರೋಪಾಲಿಟನ್ ನಗರಗಳಲ್ಲಿ ಇವು ಹೆಚ್ಚು ಜನಪ್ರಿಯವಾಗಿವೆ.

ನೋ ಕೋಪೇಮೆಂಟ್ ಎಂದರೆ ಇನ್ಶೂರೆನ್ಸ್ ಪೂರೈಕೆದಾರರಿಂದ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುತ್ತದೆ ಎಂದರ್ಥ.

ಡಿಜಿಟ್ ಇನ್ಶೂರೆನ್ಸ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು 0% ಕೋಪೇಮೆಂಟ್ ನೊಂದಿಗೆ ಒದಗಿಸುತ್ತದೆ ಮತ್ತು ಒಬ್ಬ ವ್ಯಕ್ತಿಯಿಂದ ಉಂಟಾಗುವ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಕವರ್ ಮಾಡುತ್ತದೆ.

ಅದರ ಕುರಿತು ಬಗ್ಗೆ ಇನ್ನಷ್ಟು ತಿಳಿಯಿರಿ:

ಡಿಡಕ್ಟಿಬಲ್ಸ್ ಎಂಬುದರ ಅರ್ಥವೇನು?

ಡಿಡಕ್ಟಿಬಲ್ಸ್ ಎಂದರೆ ಇನ್ಶೂರೆನ್ಸ್ ವಿಮಾ ಪಾಲಿಸಿಯು ಅವರ ಮೆಡಿಕಲ್ ಚಿಕಿತ್ಸೆಗೆ ಕೊಡುಗೆ ನೀಡಲು ಪ್ರಾರಂಭಿಸುವ ಮೊದಲು ಪಾಲಿಸಿಹೋಲ್ಡರ್ ಗಳು ಪಾವತಿಸಬೇಕಾದ ಫಿಕ್ಸ್‌ಡ್‌ ಅಮೌಂಟ್ ಆಗಿದೆ. ಡಿಡಕ್ಟಿಬಲ್ಸ್ ಅನ್ನು ಪಾವತಿಸುವ ಅವಧಿಯನ್ನು ಇನ್ಶೂರೆನ್ಸ್ ಪೂರೈಕೆದಾರರು ನಿರ್ಧರಿಸುತ್ತಾರೆ - ಅದು ವರ್ಷಕ್ಕೋ ಅಥವಾ ಪ್ರತಿ ಚಿಕಿತ್ಸೆಗೋ ಅಂತ.

ಉದಾಹರಣೆಗೆ, ನಿಮ್ಮ ಪಾಲಿಸಿಯು ರೂ. 5000ಗಳ ಡಿಡಕ್ಟಿಬಲ್ಸ್ ಅನ್ನು ಕಡ್ಡಾಯಗೊಳಿಸಿದರೆ, ನಿಮ್ಮ ಇನ್ಶೂರೆನ್ಸ್ ಪಾಲಿಸಿಯು ಪ್ರಾರಂಭಗೊಂಡ ನಂತರ ನಿಮ್ಮ ಚಿಕಿತ್ಸಾ ವೆಚ್ಚಗಳಿಗೆ ರೂ.5000ವರೆಗಿನ ಅಮೌಂಟ್ ಅನ್ನು ನೀವು ಪಾವತಿಸಬೇಕಾಗುತ್ತದೆ.

ಡಿಡಕ್ಟಿಬಲ್ಸ್ ನ ಕೆಲವು ವೈಶಿಷ್ಟ್ಯಗಳು ಈ ಕೆಳಗಿನಂತಿವೆ:

  • ನಿಯಮಿತ ಮತ್ತು ಅನಗತ್ಯ ಕ್ಲೈಮ್‌ಗಳ ವಿರುದ್ಧ ತಮ್ಮ ಹಿತಾಸಕ್ತಿಯನ್ನು ಕಾಪಾಡಲು ಇನ್ಶೂರೆನ್ಸ್ ಕಂಪನಿಗಳಿಗೆ ಸಹಾಯ ಮಾಡಲು ಇದನ್ನು ವಿಧಿಸಲಾಗುತ್ತದೆ.
  • ಇದು ಇನ್ಶೂರೆನ್ಸ್ ಪಾಲಿಸಿಗಳಿಗೆ ಪ್ರೀಮಿಯಂ ಪಾವತಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಇದು ಒಬ್ಬ ವ್ಯಕ್ತಿಯು ತನ್ನ ಮೆಡಿಕಲ್ ಚಿಕಿತ್ಸೆಗಾಗಿ ಮಾಡುವ ಒಟ್ಟು ವೆಚ್ಚವನ್ನು ಹೆಚ್ಚಿಸಬಹುದು.

ಹೆಲ್ತ್ ಇನ್ಶೂರೆನ್ಸ್ ಡಿಡಕ್ಟಿಬಲ್ಸ್ ಕುರಿತು ಇನ್ನಷ್ಟು ತಿಳಿಯಿರಿ.

ಕೋಇನ್ಶೂರೆನ್ಸ್ ಎಂಬುದರ ಅರ್ಥವೇನು?

ಡಿಡಕ್ಟಿಬಲ್ ಗಳನ್ನು ಪಾವತಿಸಿದ ನಂತರ ನೀವು ಭರಿಸಬೇಕಾದ ಚಿಕಿತ್ಸೆಯ ವೆಚ್ಚಗಳ ಪರ್ಸಂಟೇಜ್ ಅನ್ನು ಕೋಇನ್ಶೂರೆನ್ಸ್ ಎನ್ನಲಾಗುತ್ತದೆ. ಈ ಅಮೌಂಟ್ ಅನ್ನು ಸಾಮಾನ್ಯವಾಗಿ ಫಿಕ್ಸ್‌ಡ್‌ ಪರ್ಸಂಟೇಜ್ ನಲ್ಲಿ ನೀಡಲಾಗುತ್ತದೆ. ಇದು ಹೆಲ್ತ್ ಇನ್ಶೂರೆನ್ಸ್ ಅಡಿಯಲ್ಲಿ ಕೋಪೇಮೆಂಟ್ ನಿಬಂಧನೆಯನ್ನು ಹೋಲುತ್ತದೆ.

ಉದಾಹರಣೆಗೆ, ನಿಮ್ಮ ಕೋಇನ್ಶೂರೆನ್ಸ್ 20% ಆಗಿದ್ದರೆ, ನಂತರ ನೀವು ಚಿಕಿತ್ಸೆಯ ವೆಚ್ಚದ 20% ಅನ್ನು ಭರಿಸಲು ಲಯಬಲ್ ಆಗಿರುತ್ತೀರಿ ಮತ್ತು ಉಳಿದ 80% ಅನ್ನು ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ಭರಿಸುತ್ತಾರೆ.

ಅಂದರೆ, ಒಂದು ನಿರ್ದಿಷ್ಟ ಕಾಯಿಲೆಯ ಚಿಕಿತ್ಸೆಗಾಗಿ ನಿಮ್ಮ ವೆಚ್ಚವು ರೂ.10,000 ಆಗಿದ್ದರೆ, ನೀವು ರೂ.2000 ಪಾವತಿಸಬೇಕಾಗುತ್ತದೆ. ಉಳಿದ ರೂ.8000 ನಿಮ್ಮ ಇನ್ಶೂರೆನ್ಸ್ ಪಾಲಿಸಿಯಿಂದ ಕವರ್ ಮಾಡಲ್ಪಡುತ್ತದೆ. ನಿಮ್ಮ ಡಿಡಕ್ಟಿಬಲ್ಸ್ ಅನ್ನು ನೀವು ಪಾವತಿಸಿದ ನಂತರ ಈ ಅಮೌಂಟ್ ಅನ್ನು ಸಾಮಾನ್ಯವಾಗಿ ಕ್ಯಾಲ್ಕುಲೇಟ್ ಮಾಡಲಾಗುತ್ತದೆ.

ಕೋಇನ್ಶೂರೆನ್ಸ್ ಪ್ಲಾನ್ ಗಳ ಕೆಲವು ವೈಶಿಷ್ಟ್ಯಗಳು ಈ ಕೆಳಗಿನಂತಿವೆ:

  • ಇದು ದೊಡ್ಡ ಕ್ಲೈಮ್‌ಗಳ ವಿರುದ್ಧ ಇನ್ಶೂರರ್ ರನ್ನು ರಕ್ಷಿಸಲು ಸಹಾಯ ಮಾಡುತ್ತದೆ.
  • ಪಾಲಿಸಿಹೋಲ್ಡರ್ ಗಳು ತಮ್ಮ ಕೋಇನ್ಶೂರೆನ್ಸ್ ಪ್ಲಾನ್ ಕಾರ್ಯರೂಪಕ್ಕೆ ಬರುವ ಮೊದಲು ತಮ್ಮ ಡಿಡಕ್ಟಿಬಲ್ ಅಮೌಂಟ್ ಅನ್ನು ಪಾವತಿಸಬೇಕಾಗುತ್ತದೆ.
  • ಕೋಇನ್ಶೂರೆನ್ಸ್ ಪರ್ಸಂಟೇಜ್ ಫಿಕ್ಸ್‌ಡ್‌ ಆಗಿರುತ್ತದೆ.
  • ಈ ಪರ್ಸಂಟೇಜ್ ನಿಮ್ಮ ಇನ್ಶೂರೆನ್ಸ್ ಪಾಲಿಸಿಯು ಉಳಿದ ಅಮೌಂಟ್ ಅನ್ನು ಪಾವತಿಸುವ ಮೊದಲು ನೀವು ಒಂದು ವರ್ಷಕ್ಕೆ ಪಾವತಿಸಬಹುದಾದ ಗರಿಷ್ಠ ಅಮೌಂಟ್ ಆಗಿದೆ.

ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗೆ ಈ ಪ್ರತಿಯೊಂದು ನಿಯಮಗಳು ಏನು ಎಂಬುದನ್ನು ನಾವು ಈಗ ವಿವರಿಸಿದ್ದೇವೆ, ಇವುಗಳಲ್ಲಿ ಪ್ರತಿಯೊಂದರ ನಡುವಿನ ವ್ಯತ್ಯಾಸಗಳನ್ನು ನಾವು ನೋಡೋಣ.

ಕೋಪೇ, ಕೋಇನ್ಶೂರೆನ್ಸ್ ಮತ್ತು ಡಿಡಕ್ಟಿಬಲ್ ಅನ್ನು ಉದಾಹರಣೆಯೊಂದಿಗೆ ತಿಳಿಯಿರಿ

ಕೆಳಗೆ ನೀಡಲಾದ ಕೋಷ್ಟಕದಲ್ಲಿ ಎಲ್ಲಾ ಮೂರು ವೆಚ್ಚ-ಹಂಚಿಕೆ ಆಯ್ಕೆಗಳನ್ನು ಸಂಕ್ಷಿಪ್ತವಾಗಿ ತಿಳಿಯಬಹುದು:

ಒಬ್ಬ ವ್ಯಕ್ತಿಯು ರೂ. 5 ಲಕ್ಷಗಳ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದಾನೆ ಎಂದು ಭಾವಿಸೋಣ. ಅದರ ಮೇಲೆ 10% ಕೋಪೇಮೆಂಟ್ ಮತ್ತು ರೂ. 5000 ಡಿಡಕ್ಟಿಬಲ್ಸ್ ಇದೆ.

ಡಿಡಕ್ಟಿಬಲ್ ಜೊತೆಗೆ, ಅವರು ಮುಂದೆ 10% ಕೋಇನ್ಶೂರೆನ್ಸ್ ನಿಬಂಧನೆಗಳನ್ನು ಹೊಂದಿದ್ದಾರೆ. ಒಂದು ನಿರ್ದಿಷ್ಟ ಕಾಯಿಲೆ ಚಿಕಿತ್ಸೆಗೆ ರೂ.10,000 ಇದ್ದರೆ, ಈ ನಿಬಂಧನೆಗಳ ಪ್ರಕಾರ ಅವನ ಲಯಬಿಲಿಟಿಗಳು ಹೀಗಿರುತ್ತವೆ:

ಕೋಪೇ ಡಿಡಕ್ಟಿಬಲ್ ಕೋ-ಇನ್ಶೂರೆನ್ಸ್
ಚಿಕಿತ್ಸೆಯ ವೆಚ್ಚದ 10%. ಚಿಕಿತ್ಸೆಯ ವೆಚ್ಚವು ರೂ. 10,000ವರೆಗಿದೆ ಎಂದುಕೊಳ್ಳೋಣ. ಹೀಗಾಗಿ, ಚಿಕಿತ್ಸೆಯ ಸಮಯದಲ್ಲಿ ಪಾಲಿಸಿಹೋಲ್ಡರ್ ರೂ. 1000 ಚಿಕಿತ್ಸಾ ವೆಚ್ಚ ಭರಿಸಬೇಕಾಗುತ್ತದೆ ಮತ್ತು ಉಳಿದ ರೂ. 9000 ಇನ್ಶೂರೆನ್ಸ್ ಪಾಲಿಸಿಯಿಂದ ಕವರ್ ಮಾಡಲ್ಪಡುತ್ತದೆ. ಇಲ್ಲಿ, ಡಿಡಕ್ಟಿಬಲ್ ರೂ. 5000, ಅದನ್ನು ಪಾಲಿಸಿಹೋಲ್ಡರ್ ಮೊದಲು ತನ್ನ ಚಿಕಿತ್ಸೆಗಾಗಿ ಪಾವತಿಸಬೇಕಾಗುತ್ತದೆ. ಪಾಲಿಸಿಹೋಲ್ಡರ್ ತನ್ನ ಆಕೆ/ಆತನ ಪಾಲಿನ ರೂ.5000ಗಳನ್ನು ಪಾವತಿಸಿದ ನಂತರವೇ ಪಾಲಿಸಿಯು ಕಾಂಟ್ರಿಬ್ಯೂಟ್ ಮಾಡಲು ಪ್ರಾರಂಭಿಸುತ್ತದೆ. ಡಿಡಕ್ಟಿಬಲ್ ಅನ್ನು ಪಾವತಿಸಿದ ನಂತರ ಕೋ-ಇನ್ಶೂರೆನ್ಸ್ ಅನ್ನು ಸಾಮಾನ್ಯವಾಗಿ ಪಾಲಿಸಿಗಳ ಮೇಲೆ ವಿಧಿಸಲಾಗುತ್ತದೆ. ಚಿಕಿತ್ಸೆ ವೆಚ್ಚ ರೂ. 10,000 ಆಗಿದ್ದರೆ ಮತ್ತು ಡಿಡಕ್ಟಿಬಲ್ ರೂ. 5000 ಪಾವತಿಸಲಾಗಿದ್ದರೆ, ಪಾಲಿಸಿಯು ಉಳಿದ ರೂ. 5000 ಅನ್ನು ಕವರ್ ಮಾಡುತ್ತದೆ. ಇದರಲ್ಲಿ ರೂ. 5000ದಲ್ಲಿ, ಪಾಲಿಸಿಹೋಲ್ಡರ್ ರೂ 10% ಅಂದರೆ ರೂ.500 ಅನ್ನು ಕೋ-ಇನ್ಶೂರೆನ್ಸ್ ನಿಬಂಧನೆ ಅಡಿಯಲ್ಲಿ ಪಾವತಿಸಬೇಕಾಗುತ್ತದೆ. ಉಳಿದ ರೂ. 4500 ಅನ್ನು ಇನ್ಶೂರೆನ್ಸ್ ಪಾಲಿಸಿ ಕವರ್ ಮಾಡುತ್ತದೆ.

ಕೋಪೇ ಮತ್ತು ಡಿಡಕ್ಟಿಬಲ್ ಮಧ್ಯೆ ಇರುವ ವ್ಯತ್ಯಾಸ ಏನು?

ಕೋಪೇ ಮತ್ತು ಡಿಡಕ್ಟಿಬಲ್ ನಿಬಂಧನೆಗಳ ನಡುವಿನ ವ್ಯತ್ಯಾಸವನ್ನು ಕೆಳಗಿನ ಕೋಷ್ಟಕದಲ್ಲಿ ವಿವರಿಸಲಾಗಿದೆ:

ಪ್ಯಾರಾಮೀಟರ್ ಕೋಪೇ ಡಿಡಕ್ಟಿಬಲ್
ಅಪ್ಲಿಕೇಬಲಿಟಿ ಕೋಪೇ ಎನ್ನುವುದು ಪಾಲಿಸಿಹೋಲ್ಡರ್ ತಮ್ಮ ಚಿಕಿತ್ಸಾ ವೆಚ್ಚಗಳಿಗೆ ಪಾವತಿಸಬೇಕಾದ ಫಿಕ್ಸ್‌ಡ್‌ ಭಾಗವಾಗಿದ್ದು, ಉಳಿದವುಗಳನ್ನು ಇನ್ಶೂರೆನ್ಸ್ ಪೂರೈಕೆದಾರರು ಭರಿಸುತ್ತಾರೆ. ಇದನ್ನು ಫಿಕ್ಸ್‌ಡ್‌ ಅಮೌಂಟ್ ಅಥವಾ ಚಿಕಿತ್ಸಾ ವೆಚ್ಚದ ಫಿಕ್ಸ್‌ಡ್‌ ಪರ್ಸಂಟೇಜ್ ಅಮೌಂಟ್ ಆಗಿ ನೀಡಬಹುದು. ಡಿಡಕ್ಟಿಬಲ್ ಎನ್ನುವುದು ಪಾಲಿಸಿಹೋಲ್ಡರ್ ತಮ್ಮ ಇನ್ಶೂರೆನ್ಸ್ ಪಾಲಿಸಿಗಳು ಕಾಂಟ್ರಿಬ್ಯೂಟ್ ಮಾಡಲು ಪ್ರಾರಂಭಿಸುವ ಮೊದಲು ಭರಿಸಬೇಕಾದ ಮತ್ತು ನಿಮ್ಮ ಮೆಡಿಕಲ್ ಬಿಲ್‌ನ ಹೆಚ್ಚಿನ ಭಾಗವನ್ನು ಕವರ್ ಮಾಡಬೇಕಾದ ಫಿಕ್ಸ್‌ಡ್‌ ಅಮೌಂಟ್ ಆಗಿದೆ.
ಪ್ರೀಮಿಯಂ ಮೇಲೆ ಪರಿಣಾಮ ದೊಡ್ಡ ಕೋಪೇ ಅಮೌಂಟ್ ನೊಂದಿಗೆ, ಪಾಲಿಸಿಹೋಲ್ಡರ್ ಕಡಿಮೆ ಪ್ರೀಮಿಯಂಗಳನ್ನು ಪಾವತಿಸಲು ಲಯಬಲ್ ಆಗಿರುತ್ತಾರೆ. ಡಿಡಕ್ಟಿಬಲ್ಸ್ ಪಾಲಿಸಿಹೋಲ್ಡರ್ ಗೆ ಸಣ್ಣ ಪ್ರೀಮಿಯಂ ಅಮೌಂಟ್ ಅನ್ನು ಪಾವತಿಸಲು ಅವಕಾಶ ನೀಡುತ್ತದೆ.
ಕೋಇನ್ಶೂರೆನ್ಸ್ ನಿಬಂಧನೆ ಕೋಪೇ ಅನ್ನು ಸಾಮಾನ್ಯವಾಗಿ ಕೋಇನ್ಶೂರೆನ್ಸ್ ನೊಂದಿಗೆ ಪರಸ್ಪರ ಬದಲಿಯಾಗಿ ಬಳಸಲಾಗುತ್ತದೆ. ಪಾಲಿಸಿಹೋಲ್ಡರ್ ಗಳು ಸಾಮಾನ್ಯವಾಗಿ ತಮ್ಮ ಪಾಲಿಸಿಯ ಡಿಡಕ್ಟಿಬಲ್ ಭಾಗವನ್ನು ಪೂರೈಸಿದ ನಂತರ ಕೋಇನ್ಶೂರೆನ್ಸ್ ಅನ್ನು ಪಾವತಿಸಬೇಕಾಗುತ್ತದೆ.
ಅನುಷ್ಠಾನ ಕೋಪೇ ನಿಬಂಧನೆಯನ್ನು ನಿರ್ದಿಷ್ಟ ಹೆಲ್ತ್ ಕೇರ್ ಸೇವೆಗಳ ಮೇಲೆ ಮಾತ್ರ ವಿಧಿಸಲಾಗುತ್ತದೆ. ಇನ್ಶೂರೆನ್ಸ್ ಪಾಲಿಸಿಯು ವ್ಯಕ್ತಿಯ ಚಿಕಿತ್ಸಾ ವೆಚ್ಚಗಳಿಗೆ ಕಾಂಟ್ರಿಬ್ಯೂಟ್ ಮಾಡಲು ಪ್ರಾರಂಭಿಸುವ ಮೊದಲು ಡಿಡಕ್ಟಿಬಲ್ ಅನ್ನು ಅಳವಡಿಸಲಾಗುತ್ತದೆ.

ಕೋಪೇ ಮತ್ತು ಕೋಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸ ಏನು?

ಇವುಗಳನ್ನು ಕೆಲವೊಮ್ಮೆ ಪರ್ಯಾಯವಾಗಿ ಬಳಸಲಾಗಿದ್ದರೂ ಸಹ, ಕೋಪೇ ಮತ್ತು ಕೋಇನ್ಶೂರೆನ್ಸ್ ಕೆಲವು ಸಣ್ಣ ವ್ಯತ್ಯಾಸಗಳನ್ನು ಹೊಂದಿರುತ್ತದೆ. ಕೋಇನ್ಶೂರೆನ್ಸ್ ವರ್ಸಸ್ ಕೋಪೇ ಎಂದರೇನು ಎಂದು ತಿಳಿಯಲು, ನಾವು ಕೆಳಗಿನ ಕೋಷ್ಟಕವನ್ನು ನೋಡೋಣ:

ಪ್ಯಾರಾಮೀಟರ್ ಕೋಪೇ ಕೋಇನ್ಶೂರೆನ್ಸ್
ಅಪ್ಲಿಕೇಬಲಿಟಿ ಇದು ಪೂರ್ವನಿರ್ಧರಿತ ಫಿಕ್ಸ್‌ಡ್‌ ಭಾಗವಾಗಿದ್ದು, ಮೆಡಿಕಲ್ ಚಿಕಿತ್ಸೆಯ ಸಮಯದಲ್ಲಿ ಉಂಟಾಗುವ ವೆಚ್ಚಗಳಿಗೆ ನೀವು ಪಾವತಿಸಬೇಕಾಗುತ್ತದೆ. ಇದನ್ನು ಫಿಕ್ಸ್‌ಡ್‌ ಅಮೌಂಟ್ ಅಥವಾ ಚಿಕಿತ್ಸಾ ವೆಚ್ಚದ ಫಿಕ್ಸ್‌ಡ್‌ ಪರ್ಸಂಟೇಜ್ ಅಮೌಂಟ್ ಆಗಿ ನೀಡಬಹುದು. ಕೋಇನ್ಶೂರೆನ್ಸ್ ಗಾಗಿ ನಿಜವಾದ ಅಮೌಂಟ್ ಬದಲಾಗುತ್ತಿರುತ್ತದೆ. ಆದರೆ, ಕೋಇನ್ಶೂರೆನ್ಸ್ ನಿಬಂಧನೆ ಪ್ರಕಾರ ನಿಮ್ಮ ಚಿಕಿತ್ಸೆಗಾಗಿ ನೀವು ಭರಿಸಬೇಕಾದ ವೆಚ್ಚಗಳ ಪರ್ಸಂಟೇಜ್ ಫಿಕ್ಸ್‌ಡ್‌ ಆಗಿರುತ್ತದೆ.
ಪೇಮೆಂಟ್ ಪ್ರೊಸೆಸ್ ಕೋಪೇ ನಿಬಂಧನೆಯಲ್ಲಿ, ನೀವು ಯಾವುದೇ ಮೆಡಿಕಲ್ ಸೇವೆಯನ್ನು ಪಡೆಯಲು ಪ್ರತಿ ಬಾರಿ ಪೇಮೆಂಟ್ ಗಳ ಒಂದು ಭಾಗವನ್ನು ಮಾಡಬೇಕಾಗುತ್ತದೆ. ನಿಮ್ಮ ಡಿಡಕ್ಟಿಬಲ್ ನ್ನು ನೀವು ಕವರ್ ಮಾಡಿದ ನಂತರ ಮೆಡಿಕಲ್ ಸೇವೆಗಳಿಗೆ ಕೋಇನ್ಶೂರೆನ್ಸ್ ಅನ್ನು ಪಾವತಿಸಬೇಕಾಗುತ್ತದೆ.
ಪೇಮೆಂಟ್ ಸಮಯ ಕೋಪೇ ನಿಬಂಧನೆ ಅಡಿಯಲ್ಲಿ, ಸೇವೆಯನ್ನು ಕೋರುವ ಸಮಯದಲ್ಲಿ ನೀವು ವೆಚ್ಚವನ್ನು ಭರಿಸಬೇಕಾಗುತ್ತದೆ. ನಿಮ್ಮ ಚಿಕಿತ್ಸೆಗಾಗಿ ನೀವು ಪಾವತಿಸುವ ಅಮೌಂಟ್ ಅನ್ನು ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ಬಿಲ್ ಮಾಡುತ್ತಾರೆ ಮತ್ತು ನೀವು ಅವರಿಗೆ ನೇರವಾಗಿ ಪಾವತಿಸಬೇಕಾಗುತ್ತದೆ.
ಡಿಡಕ್ಟಿಬಲ್ಸ್ ಮೇಲಿವ ಪರಿಣಾಮ ಕೆಲವು ಸಂದರ್ಭಗಳಲ್ಲಿ ಮಾತ್ರ ಡಿಡಕ್ಟಿಬಲ್ಸ್ ಕಡೆಗೆ ಕೋಪೇ ಪರಿಗಣಿಸಲಾಗುತ್ತದೆ. ಡಿಡಕ್ಟಿಬಲ್ಸ್ ಅನ್ನು ಪೂರೈಸಿದ ನಂತರವೇ ಕೋಇನ್ಶೂರೆನ್ಸ್ ಅನ್ನು ಪಾವತಿಸಲಾಗುತ್ತದೆ.

ಕೋಇನ್ಶೂರೆನ್ಸ್ ಮತ್ತು ಡಿಡಕ್ಟಿಬಲ್ ಮಧ್ಯೆ ಇರುವ ವ್ಯತ್ಯಾಸ ಏನು?

ಈಗ ನೀವು ಕೋಪೇ ಮತ್ತು ಡಿಡಕ್ಟಿಬಲ್ ನಡುವಿನ ವ್ಯತ್ಯಾಸಗಳನ್ನು ಮತ್ತು ಕೋಪೇ ಮತ್ತು ಕೋಇನ್ಶೂರೆನ್ಸ್ ನಡುವಿನ ವ್ಯತ್ಯಾಸವನ್ನು ಕಲಿತಿದ್ದೀರಿ. ಹಾಗಾಗಿ ಕೋಇನ್ಶೂರೆನ್ಸ್ ಮತ್ತು ಡಿಡಕ್ಟಿಬಲ್ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಸಾಕಷ್ಟು ಸುಲಭವಾಗುತ್ತದೆ. ಆ ವ್ಯತ್ಯಾಸಗಳಲ್ಲಿ ಕೆಲವು ಈ ಕೆಳಗಿನಂತಿವೆ:

ಪ್ಯಾರಾಮೀಟರ್ ಕೋಇನ್ಶೂರೆನ್ಸ್ ಡಿಡಕ್ಟಿಬಲ್
ಅಪ್ಲಿಕೇಬಲಿಟಿ ಇದು ಪಾಲಿಸಿಹೋಲ್ಡರ್ ಭರಿಸಬೇಕಾದ ಕಾಯಿಲೆಯ ಚಿಕಿತ್ಸೆಗಾಗಿ ತಗಲುವ ವೆಚ್ಚದ ಫಿಕ್ಸ್‌ಡ್‌ ಪರ್ಸಂಟೇಜ್ ಆಗಿದ್ದು, ಉಳಿದವುಗಳನ್ನು ಅವರ ಇನ್ಶೂರೆನ್ಸ್ ಪೂರೈಕೆದಾರರು ಭರಿಸುತ್ತಾರೆ. ಡಿಡಕ್ಟಿಬಲ್, ಇನ್ಶೂರೆನ್ಸ್ ಹೋಲ್ಡರ್ ಗಳು ತಮ್ಮ ಇನ್ಶೂರೆನ್ಸ್ ಪಾಲಿಸಿ ಕಾಂಟ್ರಿಬ್ಯೂಷನ್ ಅನ್ನು ಪ್ರಾರಂಭಿಸುವ ಮೊದಲು ಮೆಡಿಕಲ್ ಚಿಕಿತ್ಸಾ ವೆಚ್ಚಗಳನ್ನು ಭರಿಸಲು ಪಾವತಿಸಬೇಕಾದ ಫಿಕ್ಸ್‌ಡ್‌ ಅಮೌಂಟ್ ಅನ್ನು ಸೂಚಿಸುತ್ತದೆ.
ಪೇಮೆಂಟ್ ಮಿತಿ ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ವಿರುದ್ಧ ನೀವು ಕ್ಲೈಮ್ ಅನ್ನು ಮಾಡಿದಾಗ ಪ್ರತಿ ಬಾರಿ ಕೋಇನ್ಶೂರೆನ್ಸ್ ಅನ್ನು ಪಾವತಿಸಲಾಗುತ್ತದೆ. ನೀವು ನಿಗದಿತ ಅಮೌಂಟ್ ಅನ್ನು ಪಾವತಿಸಿದ ನಂತರ ಒಂದು ವರ್ಷದ ಡಿಡಕ್ಟಿಬಲ್ಸ್ ಕಡೆಗಿನ ಪೇಮೆಂಟ್ ಕೊನೆಗೊಳ್ಳುತ್ತದೆ. ಮುಂದಿನ ವರ್ಷ ಡಿಡಕ್ಟಿಬಲ್ ಅನ್ನು ನೀವು ಮತ್ತೆ ಪಾವತಿಸಬೇಕಾಗುತ್ತದೆ.
ಪೇಮೆಂಟ್ ಅಮೌಂಟ್ ವ್ಯತ್ಯಾಸಗಳು ಕೋಇನ್ಶೂರೆನ್ಸ್ ಗಾಗಿ ಪಾವತಿಸಿದ ಅಮೌಂಟ್ ಚಿಕಿತ್ಸೆಗಾಗಿ ಭರಿಸುವ ವೆಚ್ಚಗಳ ಪ್ರಕಾರ ಬದಲಾಗುತ್ತದೆ. ಡಿಡಕ್ಟಿಬಲ್ ಅಮೌಂಟ್ ಫಿಕ್ಸ್‌ಡ್‌ ಆಗಿರುತ್ತದೆ.
ರಿಸ್ಕ್ ಫ್ಯಾಕ್ಟರ್ ಲಯಬಿಲಿಟಿಗಳನ್ನು ಪರಿಗಣಿಸಿದರೆ, ಕೋಇನ್ಶೂರೆನ್ಸ್ ಹೆಚ್ಚು ರಿಸ್ಕ್ ಅನ್ನು ಹೊಂದಿದೆ. ಏಕೆಂದರೆ ನೀವು ಚಿಕಿತ್ಸೆಯ ವೆಚ್ಚದ ಫಿಕ್ಸ್‌ಡ್‌ ಪರ್ಸಂಟೇಜ್ ಅನ್ನು ಭರಿಸಬೇಕಾಗುತ್ತದೆ. ಚಿಕಿತ್ಸೆಯ ವೆಚ್ಚವು ಅಧಿಕವಾಗಿದ್ದರೆ ಇದು ಗಣನೀಯ ಅಮೌಂಟ್ ಆಗಿರುತ್ತದೆ. ಚಿಕಿತ್ಸೆಯ ವೆಚ್ಚಗಳು ಗಣನೀಯವಾಗಿದ್ದರೂ ಸಹ ಪಾವತಿಸಬೇಕಾದ ಅಮೌಂಟ್ ಫಿಕ್ಸ್‌ಡ್‌ ಆಗಿರುವುದರಿಂದ ಡಿಡಕ್ಟಿಬಲ್ಸ್ ಲಯಬಿಲಿಟಿ ಆಗಿ ಇರುವುದಿಲ್ಲ.

ಆದ್ದರಿಂದ, ಈಗ ನಾವು ಕೋಪೇ, ಕೋಇನ್ಶೂರೆನ್ಸ್ ಮತ್ತು ಡಿಡಕ್ಟಿಬಲ್ ಮತ್ತು ಅವುಗಳ ವ್ಯತ್ಯಾಸಗಳ ಬಗ್ಗೆ ಸುದೀರ್ಘವಾಗಿ ಕಲಿತಿದ್ದೇವೆ, ಇದರಿಂದಾಗಿ ಗರಿಷ್ಠ ಪ್ರಯೋಜನಗಳೊಂದಿಗೆ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹುಡುಕುವುದು ಸುಲಭವಾಗುತ್ತದೆ.

 

ಇವುಗಳ ಕುರಿತು ಹೆಚ್ಚು ತಿಳಿಯಿರಿ:

ಡಿಡಕ್ಟಿಬಲ್ ಜೊತೆ ಕೋಪೇ ಎಂಬುದರ ಅರ್ಥವೇನು?

ಕೋಪೇ, ಡಿಡಕ್ಟಿಬಲ್ ಮತ್ತು ಕೋಇನ್ಶೂರೆನ್ಸ್, ವೆಚ್ಚ-ಹಂಚಿಕೆಯ ನಿಯಮಗಳಾಗಿದ್ದರೂ, ಅವುಗಳ ಅಪ್ಲಿಕೇಬಲಿಟಿಯು ನಿಮ್ಮ ಒಟ್ಟಾರೆ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ನಲ್ಲಿ ದೊಡ್ಡ ವ್ಯತ್ಯಾಸವನ್ನು ಮಾಡಬಹುದು.

ಡಿಡಕ್ಟಿಬಲ್ಸ್ ಮತ್ತು ಕೋಇನ್ಶೂರೆನ್ಸ್ ಗಳು ಒಂದೇ ಇನ್ಶೂರೆನ್ಸ್ ಪ್ಲಾನ್ ಅಡಿಯಲ್ಲಿ ಹೆಚ್ಚಾಗಿ ಒಟ್ಟಿಗೆ ಅಳವಡಿಸಲಾದ ನಿಬಂಧನೆಗಳಾಗಿವೆ. ಆದರೆ, ಕೆಲವು ಇನ್ಶೂರೆನ್ಸ್ ಪ್ಲಾನ್ ಗಳು ಕೋಪೇಮೆಂಟ್ ಮತ್ತು ಡಿಡಕ್ಟಿಬಲ್ ನಿಬಂಧನೆಗಳನ್ನು ಏಕಕಾಲದಲ್ಲಿ ಕಾರ್ಯಗತಗೊಳಿಸುತ್ತವೆ.

ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅದೇ ರೀತಿ ಮಾಡಿದರೆ, ಆಗ ನಿಮಗೆ ಏನಾಗುತ್ತದೆ ಎಂಬುದು ಇಲ್ಲಿದೆ -

  • ನಿಮ್ಮ ಚಿಕಿತ್ಸಾ ಪ್ಲಾನ್ ಗಳಿಗೆ ನೀವು ಫಿಕ್ಸ್‌ಡ್‌ ಅಮೌಂಟ್ ಅನ್ನು ಪಾವತಿಸಬೇಕಾಗುತ್ತದೆ. ನೀವು ಪಾವತಿಸಿದ ಡಿಡಕ್ಟಿಬಲ್ ಅಮೌಂಟ್ ಮುಗಿದ ನಂತರವೇ ನಿಮ್ಮ ಇನ್ಶೂರೆನ್ಸ್ ಪ್ಲಾನ್ ನಿಮ್ಮ ಚಿಕಿತ್ಸೆಗೆ ಕಾಂಟ್ರಿಬ್ಯೂಟ್ ಮಾಡಲು ಪ್ರಾರಂಭಿಸುತ್ತದೆ.
  • ಒಮ್ಮೆ ಇನ್ಶೂರೆನ್ಸ್ ಪ್ಲಾನ್ ಪ್ರಾರಂಭವಾದಾಗ, ನೀವು ಪ್ರತಿ ಬಾರಿ ಪಾಲಿಸಿಯ ವಿರುದ್ಧ ಕ್ಲೈಮ್‌ಗಳನ್ನು ಮಾಡಿದಾಗ ನೀವು ಫಿಕ್ಸ್‌ಡ್‌ ಅಮೌಂಟ್ ಅನ್ನು ಪಾವತಿಸಬೇಕಾಗುತ್ತದೆ. ನಿಮ್ಮ ಕೋಪೇಮೆಂಟ್ ಅಮೌಂಟ್ ಅನ್ನು ನೀವು ಪಾವತಿಸಿದ ನಂತರ ಇನ್ಶೂರೆನ್ಸ್ ಪ್ಲಾನ್ ಬಾಕಿಯಿರುವ ಅಮೌಂಟ್ ಅನ್ನು ಕವರ್ ಮಾಡುತ್ತದೆ.
  • ಪಾಲಿಸಿಗೆ ನೀವು ಕಡಿಮೆ ಪ್ರೀಮಿಯಂಗಳನ್ನು ಪಾವತಿಸಬೇಕಾಗುತ್ತದೆ, ಇದರಿಂದಾಗಿ ಅದನ್ನು ಪಡೆಯುವುದು ಅಗ್ಗವಾಗಲಿದೆ.

ನೀವು ಕೋಪೇಮೆಂಟ್, ಕೋಇನ್ಶೂರೆನ್ಸ್ ಮತ್ತು ಡಿಡಕ್ಟಿಬಲ್ ನಿಬಂಧನೆಗಳೊಂದಿಗೆ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಆರಿಸಿಕೊಳ್ಳಬೇಕೇ?

ಇರಲಿ, ಪೇಪರ್‌ನಲ್ಲಿದ್ದರೂ ಸಹ ನೀವು ಅಂತಹ ವೆಚ್ಚ-ಹಂಚಿಕೆಯ ನಿಯಮಗಳೊಂದಿಗೆ ಪಾಲಿಸಿಯನ್ನು ಆರಿಸಿದರೆ ನಿಮ್ಮ ಪ್ರೀಮಿಯಂ ಪಾವತಿಯು ಕಡಿಮೆಯಾಗುತ್ತದೆ, ಆದರೆ ಪಾಲಿಸಿಯ ಕಡೆಗೆ ನಿಮ್ಮ ಲಯಬಿಲಿಟಿಯು ಹೆಚ್ಚಾಗುತ್ತದೆ. ಮೆಡಿಕಲ್ ಎಮರ್ಜೆನ್ಸಿ ಎದುರಾದಾಗಲೆಲ್ಲಾ ವೆಚ್ಚದ ಒಂದು ಭಾಗವನ್ನು ನೀವು ನೋಡಿಕೊಳ್ಳಬೇಕಾಗುತ್ತದೆ. ನಿಮ್ಮ ಕೈಯಲ್ಲಿ ಸುಲಭವಾಗಿ ಲಭ್ಯವಿರುವ ಕ್ಯಾಶ್ ಇಲ್ಲದಿದ್ದರೆ, ಅದು ತೊಂದರೆಗಳಿಗೆ ಕಾರಣವಾಗಬಹುದು.

ಹೀಗಾಗಿ, ಅಂತಹ ವೆಚ್ಚ-ಹಂಚಿಕೆ ನಿಯಮಗಳನ್ನು ವಿಧಿಸದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಪಡೆದುಕೊಳ್ಳುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಭಾರತದಲ್ಲಿ ಇನ್ಶೂರೆನ್ಸ್ ಕಂಪನಿಗಳು ಒದಗಿಸುವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳ ಸಮೃದ್ಧಿಯೊಂದಿಗೆ, ನಿಮ್ಮ ಅವಶ್ಯಕತೆಗಳಿಗೆ ಪರಿಣಾಮಕಾರಿಯಾಗಿ ಸರಿಹೊಂದುವ ಪಾಲಿಸಿಯನ್ನು ನೀವು ಸುಲಭವಾಗಿ ಕಂಡುಕೊಳ್ಳಬಹುದು.

ನಿಮ್ಮ ಅವಶ್ಯಕತೆಗಳಿಗೆ ಸೂಕ್ತವಾದದ್ದೊಂದನ್ನು ಪಡೆಯಲು ಪ್ರತಿ ಪಾಲಿಸಿಯ ಅಡಿಯಲ್ಲಿ ಹಾಕಲಾದ ಎಲ್ಲಾ ನಿಯಮಗಳು ಮತ್ತು ನಿಬಂಧನೆಗಳನ್ನು ಪರಿಶೀಲಿಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ!

ಕೋಇನ್ಶೂರೆನ್ಸ್, ಕೋಪೇ ಮತ್ತು ಡಿಡಕ್ಟಿಬಲ್ ನಡುವಿನ ವ್ಯತ್ಯಾಸದ ಕುರಿತು ಪದೇಪದೇ ಕೇಳಲಾದ ಪ್ರಶ್ನೆಗಳು

ಮಾರುಕಟ್ಟೆಯಲ್ಲಿ ಯಾವುದೇ ಕೋಪೇಮೆಂಟ್ ನಿಬಂಧನೆಗಳಿಲ್ಲದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಿವೆಯೇ?

ಹೌದು, ಡಿಜಿಟ್ ನ ಹೆಲ್ತ್ ಇನ್ಶೂರೆನ್ಸ್ 0% ಕೋ-ಪೇಮೆಂಟ್ ನೊಂದಿಗೆ ಬರುತ್ತದೆ. ಅಲ್ಲದೆ, ನೀವು ಪಾಲಿಸಿಯೊಂದಿಗೆ ಜೋನ್ ಅಪ್‌ಗ್ರೇಡ್ ಕವರ್ ಅನ್ನು ಖರೀದಿಸಬಹುದು.

ಕೋಇನ್ಶೂರೆನ್ಸ್ ಮತ್ತು ಡಿಡಕ್ಟಿಬಲ್ ಗಳನ್ನು ಒಂದೇ ಸಮಯದಲ್ಲಿ ವಿಧಿಸಬಹುದೇ?

ಹೌದು, ಕೋಇನ್ಶೂರೆನ್ಸ್ ನಿಬಂಧನೆಗಳನ್ನು ಹೆಚ್ಚಾಗಿ ಡಿಡಕ್ಟಿಬಲ್ಸ್ ನೊಂದಿಗಿನ ಇನ್ಶೂರೆನ್ಸ್ ಪಾಲಿಸಿಗಳಿಗೆ ಸೇರಿಸಲಾಗುತ್ತದೆ.

ವಿವಿಧ ಹೆಲ್ತ್ ಸೇವೆಗಳಿಗೆ ಕೋಪೇ ಅಮೌಂಟ್ ಬದಲಾಗುತ್ತದೆಯೇ?

ಹೌದು, ವಿವಿಧ ಸೇವೆಗಳಿಗೆ ಕೋಪೇ ಬದಲಾಗುತ್ತದೆ, ಆದರೆ ಹಣದ ಅಮೌಂಟ್ ಸೇವೆಗೆ ಫಿಕ್ಸ್‌ಡ್‌ ಆಗಿರುತ್ತದೆ.

ಕೋಪೇ ನಿಬಂಧನೆ ಪ್ರೀಮಿಯಂ ಪೇಮೆಂಟ್ ಗಳನ್ನು ಕಡಿಮೆ ಮಾಡುತ್ತದೆಯೇ?

ಹೌದು, ಕೋಪೇ ನಿಬಂಧನೆಗಳೊಂದಿಗಿನ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು, ನಿಬಂಧನೆ ಇಲ್ಲದಿರುವುದಕ್ಕಿಂತ ತುಲನಾತ್ಮಕವಾಗಿ ಅಗ್ಗವಾಗಿದೆ.