ಇತ್ತೀಚಿನ ದಿನಗಳಲ್ಲಿ, ಗಗನಕ್ಕೇರುತ್ತಿರುವ ಹೆಲ್ತ್ ಕೇರ್ಗಳ ವೆಚ್ಚಗಳನ್ನು ಗಮನಿಸಿದರೆ, ಕೂಲಂಕುಷವಾಗಿ ಪರಿಶೀಲಿಸಿದ ಮತ್ತು ಸಾಕಷ್ಟು ಮೊತ್ತದ ಹೆಲ್ತ್ ಇನ್ಶೂರೆನ್ಸ್ ಹೊಂದುವುದು ಹೆಚ್ಚು ಅವಶ್ಯಕವಾಗಿದೆ. ಆದಾಗ್ಯೂ, ವ್ಯಕ್ತಿಯೊಬ್ಬರು ಸಾಕಷ್ಟು ಪ್ರಮಾಣದ ಹೆಲ್ತ್ ಕೇರ್ ಅನ್ನು ಹೊಂದಿದ್ದರೂ ಸಹ, ಪಾಲಿಸಿಯ ಕೆಲವು ಹೊರಗಿಡುವಿಕೆಗಳು ಮತ್ತು ನಾನ್-ಪೇಯೇಬಲ್ಗಳಿಂದಾಗಿ ಅದು ಕಡಿಮೆಯಾಗಬಹುದು. ಅಂತಹ ಸಂದರ್ಭಗಳಲ್ಲಿ, ಆಸ್ಪತ್ರೆಯ ಬಿಲ್ನ ಹೆಚ್ಚಿನ ಪಾಲನ್ನು ನಮ್ಮ ಜೇಬಿನಿಂದ ಪಾವತಿಸಬೇಕಾಗುತ್ತದೆ.
ಇಂತಹ ಪ್ರಕರಣಗಳನ್ನು ಪರಿಗಣಿಸಿ ಮತ್ತು ಸಾಂಕ್ರಾಮಿಕ ಸಮಯದಲ್ಲಿ ಹೆಲ್ತ್ ಕೇರ್ಗಳ ಪ್ರಾಮುಖ್ಯತೆಯನ್ನು ಪರಿಗಣಿಸಿ, ಕೆಲವು ಇನ್ಶೂರೆನ್ಸ್ ಕಂಪನಿಗಳು ಈಗ ಇಂತಹ ಅನೇಕ ನಾನ್-ಪೇಯೇಬಲ್ಗಳಿಗೆ ಕವರೇಜ್ ನೀಡಲು ಪ್ರಾರಂಭಿಸಿವೆ.
ಇವುಗಳಲ್ಲಿ ಒಂದು ಕನ್ಸ್ಯೂಮೇಬಲ್ಸ್ ಕವರ್. ಇದನ್ನು ಈಗ ಅನೇಕ ಇನ್ಶೂರೆನ್ಸ್ ಕಂಪನಿಗಳಿಂದ ಆ್ಯಡ್-ಆನ್ ಆಗಿ ನೀಡಲಾಗುತ್ತಿದೆ.
ಹೆಲ್ತ್ ಇನ್ಶೂರೆನ್ಸ್ನಲ್ಲಿ ಕನ್ಸ್ಯೂಮೇಬಲ್ಸ್ ಅಥವಾ ಉಪಭೋಗ್ಯ ಕವರ್ ಎಂದರೆ ಸಾಮಾನ್ಯವಾಗಿ ವೈದ್ಯಕೀಯ ಉಪಕರಣಗಳು/ಚಿಕಿತ್ಸೆಯ ನಂತರ ಬಿಸಾಕುವ ಬಳಸಿದ ವಸ್ತುಗಳು ಉದಾಹರಣೆಗೆ ಪಿಪಿಇ ಕಿಟ್ಗಳು, ಗ್ಲವ್ಸ್, ಮಾಸ್ಕ್ಗಳು, ಸಿರಿಂಜ್ಗಳು, ಇತ್ಯಾದಿ.
ಸಾಮಾನ್ಯವಾಗಿ, ಇವುಗಳು ಮೊದಲು ಹೆಲ್ತ್ ಇನ್ಶೂರೆನ್ಸ್ ಕಂಪನಿಗಳಿಂದ ಕವರ್ ಆಗುತ್ತಿರಲಿಲ್ಲ. ಆದಾಗ್ಯೂ, ಸಾಂಕ್ರಾಮಿಕ ಸಮಯದಲ್ಲಿ, ಹೆಚ್ಚಿದ ಬಳಕೆಯಿಂದಾಗಿ ಕನ್ಸ್ಯೂಮೇಬಲ್ಸ್ಸ್ಆಸ್ಪತ್ರೆಯ ಬಿಲ್ನ ಒಂದು ಗಮನಾರ್ಹ ಭಾಗವಾಯಿತು.
ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಆಸ್ಪತ್ರೆಯ ಸಿಬ್ಬಂದಿಯು ಕಡ್ಡಾಯವಾಗಿ ರಕ್ಷಾಕವಚವನ್ನು ಧರಿಸುತ್ತಾರೆ. ಇತ್ತೀಚೆಗೆ ಸಾಮಾನ್ಯ ಅಭ್ಯಾಸವಾಗಿ, ಮಾಸ್ಕ್ಗಳು, ಗ್ಲವ್ಸ್ ಮತ್ತು ಇತರ ರಕ್ಷಣಾ ಸಾಧನಗಳ ಬಳಕೆ ಹೆಚ್ಚಾಗಿದೆ. ಇದು ಹೆಲ್ತ್ ಇನ್ಶೂರೆನ್ಸ್ ಕವರೇಜಿನ ಅಡಿಯಲ್ಲಿ ಕನ್ಸ್ಯೂಮೇಬಲ್ಸ್ ವಸ್ತುಗಳ ಸೇರ್ಪಡೆಯನ್ನು ಮತ್ತೊಮ್ಮೆ ಒತ್ತಿಹೇಳುತ್ತದೆ.
ಹೆಲ್ತ್ ಇನ್ಶೂರೆನ್ಸ್ನಲ್ಲಿನ ಕನ್ಸ್ಯೂಮೇಬಲ್ಸ್ ಕವರ್ ಅಥವಾ ಉಪಭೋಗ್ಯ ಕವರ್ ಎಂದರೆ ಎಲ್ಲಾ ವೈದ್ಯಕೀಯ ಉಪಕರಣಗಳು/ಸಾಮಾನ್ಯವಾಗಿ ಸಿಂಗಲ್-ಯೂಸ್ ಸಾಧನಗಳಾದ ಪ್ರೋಟೆಕ್ಟಿವ್ ಗೇರ್, ಮಾಸ್ಕ್ಗಳು, ಗ್ಲವ್ಸ್ ಇತ್ಯಾದಿ ವಸ್ತುಗಳನ್ನು 'ಕನ್ಸ್ಯೂಮೇಬಲ್ಸ್' ಎಂದು ವರ್ಗೀಕರಿಸಲಾಗಿದೆ.
ಇವುಗಳಲ್ಲಿ ಒಂದು ಕನ್ಸ್ಯೂಮೇಬಲ್ಸ್ ಕವರ್. ಇದನ್ನು ಈಗ ಅನೇಕ ಇನ್ಶೂರೆನ್ಸ್ ಕಂಪನಿಗಳಿಂದ ಆ್ಯಡ್-ಆನ್ ಆಗಿ ನೀಡಲಾಗುತ್ತಿದೆ.
ಮಾಸ್ಕ್ಗಳು, ಗ್ಲವ್ಸ್ ಮುಂತಾದ ಕೆಲವು ಬಿಸಾಡಬಹುದಾದ ವಸ್ತುಗಳು, ಆಸ್ಪತ್ರೆಯ ಬಿಲ್ ಅನ್ನು ಹೇಗೆ ಗಣನೀಯವಾಗಿ ಹೆಚ್ಚಿಸುತ್ತವೆ ಎಂಬುದನ್ನು ಕೇಳಿದರೆ ನೀವು ಖಂಡಿತ ಆಶ್ಚರ್ಯ ಪಡುತ್ತೀರಿ. ಅಂದಹಾಗೆ, ನೀವು ಅಂದುಕೊಂಡಿದ್ದು ಸಂಪೂರ್ಣವಾಗಿ ತಪ್ಪಲ್ಲ. ಕನ್ಸ್ಯೂಮೇಬಲ್ಸ್ ವಸ್ತುಗಳು ಈ ಹಿಂದೆ ಆಸ್ಪತ್ರೆಯ ಬಿಲ್ನ ಸ್ವಲ್ಪ ಭಾಗವನ್ನು ಆಕ್ರಮಿಸಿಕೊಳ್ಳುತ್ತಿದ್ದವು. ಹಾಗಾಗಿ ಜನರು ಸಹ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಸಾಂಕ್ರಾಮಿಕ ಸಮಯದ ನಂತರ, ಬಿಸಾಡಬಹುದಾದ ಮತ್ತು ರಕ್ಷಣಾ ಸಾಧನಗಳ ಹೆಚ್ಚಿದ ಬಳಕೆಯಿಂದ, ಇವುಗಳ ಪಾಲು ಹೆಚ್ಚಾಗಿದೆ.
ಹೆಲ್ತ್ ಇನ್ಶೂರೆನ್ಸ್ ಯೋಜನೆಗಳಲ್ಲಿ ಹೆಚ್ಚು ಆದ್ಯತೆಯ ಬಳಕೆಯ ವಸ್ತುಗಳ ಪಟ್ಟಿ ಇಲ್ಲಿದೆ:
ಇಲ್ಲೊಂದು ವಿಷಯವಿದೆ!
ಐ.ಆರ್.ಡಿ.ಎ.ಐ ಸೂಚಿಸಿದಂತೆ ಕನ್ಸ್ಯೂಮೇಬಲ್ಸ್ ವಸ್ತುಗಳ ಪಟ್ಟಿಯು ಉದ್ದವಾಗಿದೆ. ಆದರೆ ಇದು ಸಾಮಾನ್ಯವಾಗಿ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸುತ್ತದೆ. ಮತ್ತು ಇನ್ಶೂರೆನ್ಸ್ ಪೂರೈಕೆದಾರರು ತಮ್ಮ ಪಾಲಿಸಿಯಲ್ಲಿ ಯಾವುದೇ ವಸ್ತುವನ್ನು ಸೇರಿಸಲು/ಹೊರಹಾಕಲು ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ.
ಕನ್ಸ್ಯೂಮೇಬಲ್ಸ್ ವಸ್ತುಗಳ ಪಟ್ಟಿಯು ಇದೀಗ ಅಗ್ಗವಾಗಿ ಕಾಣಿಸಬಹುದು. ಆದರೆ ಅವು ಖಚಿತವಾಗಿ ನಿಮ್ಮ ಬಿಲ್ ಅನ್ನು ಹೆಚ್ಚಿಸಬಹುದು. ನಿಮ್ಮ ಜೇಬನ್ನು ಈ ಹೊಡೆತದಿಂದ ತಪ್ಪಿಸಲು, ನಿಮ್ಮ ಹೆಲ್ತ್ ಇನ್ಶೂರೆನ್ಸ್ನಲ್ಲಿ ಕನ್ಸ್ಯೂಮೇಬಲ್ಸ್ ಕವರ್ ಪಡೆಯುವುದನ್ನು ನೀವು ಮುಖ್ಯವೆಂದು ಪರಿಗಣಿಸಬೇಕು.
ಕನ್ಸ್ಯೂಮೇಬಲ್ಸ್ ವಸ್ತುಗಳೆಂದು ವರ್ಗೀಕರಿಸಲಾದ ಹಲವಾರು ವಸ್ತುಗಳನ್ನು ಒಂದೇ ವಸ್ತುವಾಗಿ ಖರೀದಿಸಿದಾಗ ತುಲನಾತ್ಮಕವಾಗಿ ಅದು ಅಗ್ಗವಾಗಿ ಕಾಣಿಸಬಹುದು. ಆದಾಗ್ಯೂ, ಒಂದು ಪ್ರಕ್ರಿಯೆಯಲ್ಲಿ ಅಥವಾ ಚಿಕಿತ್ಸೆಯ ಸಮಯದಲ್ಲಿ ಇವುಗಳನ್ನು ಪುನರಾವರ್ತಿತವಾಗಿ ಬಳಸಿದಾಗ, ಅವು ಬಿಲ್ನಲ್ಲಿ ಹೆಚ್ಚಿನ ಭಾಗವನ್ನು ಹೊಂದಿರಬಹುದು. ಅಂತಹ ಸಂದರ್ಭದಲ್ಲಿ, ಕನ್ಸ್ಯೂಮೇಬಲ್ಸ್ ಕವರ್ ಹೊಂದುವುದರಿಂದ, ಈ ಕನ್ಸ್ಯೂಮೇಬಲ್ಸ್ ವಸ್ತುಗಳ ಆರ್ಥಿಕ ಹೊರೆಯಿಂದ ನಿಮ್ಮನ್ನು ಉಳಿಸಬಹುದು.
ಕನ್ಸ್ಯೂಮೇಬಲ್ಸ್ ವೆಚ್ಚವು ನೇರವಾಗಿ ನಿಮ್ಮ ಮೇಲೆ ಬೀಳುವುದಿಲ್ಲ. ಬದಲಾಗಿ ಇದನ್ನು ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ನೋಡಿಕೊಳ್ಳುವುದರಿಂದ, ಹಣಕಾಸಿನ ಬಿಕ್ಕಟ್ಟಿನಿಂದಾಗಿ, ಚಿಕಿತ್ಸೆಯನ್ನು ತಡೆಗಟ್ಟುವ ಕ್ರಮಗಳೊಂದಿಗೆ ರಾಜಿಯಾಗದಂತೆ ನೋಡಿಕೊಳ್ಳುತ್ತದೆ.
ಹೆಲ್ತ್ ಇನ್ಶೂರೆನ್ಸ್ನಲ್ಲಿ ಕನ್ಸ್ಯೂಮೇಬಲ್ಸ್ ಅನ್ನು ಕವರ್ ಮಾಡಲು ಇನ್ಶೂರೆನ್ಸ್ ಪೂರೈಕೆದಾರರು ಹಿಂಜರಿಯುವ ಪ್ರಾಥಮಿಕ ಕಾರಣವೆಂದರೆ, ಹೆಚ್ಚಿನ ಕನ್ಸ್ಯೂಮೇಬಲ್ಸ್ಗಳು ಬಿಸಾಡಬಹುದಾದ ಮತ್ತು ಸಿಂಗಲ್-ಯೂಸ್ ವಸ್ತುಗಳಾಗಿವೆ. ಯಾವುದೇ ಚಿಕಿತ್ಸೆಯ ಸಮಯದಲ್ಲಿ, ಇವುಗಳನ್ನು ರಾಶಿಯಾಗಿ ಬಳಸಲಾಗುತ್ತದೆ ಮತ್ತು ಬಿಸಾಡಲಾಗುತ್ತದೆ. ಇದು ಪ್ರತಿಯಾಗಿ, ಇನ್ಶೂರೆನ್ಸ್ ಪೂರೈಕೆದಾರರು ಪಾವತಿಸಲು ಇಷ್ಟಪಡದ ರೋಗಿಯ ಆಸ್ಪತ್ರೆಯ ಬಿಲ್ ಅನ್ನು ಹೆಚ್ಚಿಸುತ್ತದೆ.
ಕನ್ಸ್ಯೂಮೇಬಲ್ಸ್ ವಸ್ತುಗಳು ಎಂದರೆ ಆಸ್ಪತ್ರೆಯಲ್ಲಿ ರೋಗಿಯ ಆರಾಮದಾಯಕ ಮತ್ತು ಸುರಕ್ಷಿತ ವಾಸ್ತವ್ಯಕ್ಕಾಗಿ, ನೀಡಲಾದ ಅಗತ್ಯ ಸೇವೆಗಳು ಮತ್ತು ವಸ್ತುಗಳು. ಇವುಗಳಲ್ಲಿ ರಾಜಿ ಮಾಡಿಕೊಳ್ಳುವುದು ಎಂದರೆ ನೇರವಾಗಿ ರೋಗಿಯ ಆರೋಗ್ಯವನ್ನು ರಾಜಿ ಮಾಡಿಕೊಂಡಂತೆ. ಆದ್ದರಿಂದ, ರೋಗಿಯ ನಿಗದಿತ ಅವಶ್ಯಕತೆಗಳಿಂದ ಕನ್ಸ್ಯೂಮೇಬಲ್ಸ್ ವಸ್ತುಗಳನ್ನು ಬಿಡದಂತೆ ತಡೆಯುವುದು ಅತ್ಯಗತ್ಯ. ಈ ಕನ್ಸ್ಯೂಮೇಬಲ್ಸ್ ವಸ್ತುಗಳ ವೆಚ್ಚವು, ರೋಗಿಯ ಜೇಬಿಗೆ ಇಳಿಯದಂತೆ ಕನ್ಸ್ಯೂಮೇಬಲ್ಸ್ ಕವರ್ ಖಚಿತಪಡಿಸುತ್ತದೆ.
ಡಿಜಿಟ್ನೊಂದಿಗೆ ನೀಡಲಾದ ಇನ್ಶೂರೆನ್ಸ್ ಪಾಲಿಸಿಗಳು ಕನ್ಸ್ಯೂಮೇಬಲ್ಸ್ ಕವರ್ ಅನ್ನು ಆ್ಯಡ್-ಆನ್ನಂತೆ ಒದಗಿಸುತ್ತವೆ. ಅದನ್ನು ನೀವು ನಿಮ್ಮ ಬೇಸ್ ಪಾಲಿಸಿಗೆ ಸೇರಿಸಬಹುದು ಮತ್ತು ಕನ್ಸ್ಯೂಮೇಬಲ್ಸ್ ವೆಚ್ಚಗಳನ್ನು ಭರಿಸಬಹುದು.