ಈ ಆಧುನಿಕ-ದಿನದ ಚಿಕಿತ್ಸೆಗಳು ನಿಮಗೆ ಕಡಿಮೆ ನೋವನ್ನು ನೀಡುವ ಭರವಸೆ ಒದಗಿಸುತ್ತವೆಯಾದರೂ ಕ್ಯಾನ್ಸರ್ ಚಿಕಿತ್ಸೆಯ ವಿಷಯಕ್ಕೆ ಬಂದಾಗ ಅಲ್ಲಿ ಎಲ್ಲವೂ ಇಳಿಮುಖವಾಗುತ್ತವೆ. ಚಿಕಿತ್ಸೆ ಪ್ರಕ್ರಿಯೆ ಕೂಡ ದೀರ್ಘವಾಗಿರುವ ಸಾಧ್ಯತೆ ಇರುತ್ತದೆ. ಚಿಕಿತ್ಸೆಯ ಪ್ರೋಟೋಕಾಲ್ಗಳು ಸಮಯ ತೆಗೆದುಕೊಳ್ಳುತ್ತವೆ ಮತ್ತು ಫಾಲೋ-ಅಪ್ನ ಅಗತ್ಯವಿರುತ್ತದೆ. ಮತ್ತು ಅವುಗಳು ತುಂಬಾ ದುಬಾರಿಯಾಗಿವೆ. ಕ್ಯಾನ್ಸರ್ ಬೆನಿಫಿಟ್ ಕವರ್ ಎಲ್ಲಿ ಪಡೆಯಬಹುದು ಎಂದು ಇಲ್ಲಿ ತಿಳಿಯಬಹುದು!
ಇನ್ಶೂರೆನ್ಸ್ ಕಂಪನಿಗಳು ಈಗ ನಿಮಗೆ 'ಕ್ಯಾನ್ಸರ್ ಟ್ರೀಟ್ಮೆಂಟ್ ಇನ್ಶೂರೆನ್ಸ್' ಅನ್ನು ನೀಡುತ್ತಿದ್ದು. ಅದು ನಿಮ್ಮ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಕವರ್ ಮಾಡುತ್ತದೆ ಎಂದು ಖಚಿತಪಡಿಸುತ್ತವೆ. ಕಾಯಿಲೆ ಪತ್ತೆ ಮಾಡುವುದರಿಂದ ಹಿಡಿದು ಕೀಮೋಥೆರಪಿ, ಶಸ್ತ್ರಚಿಕಿತ್ಸೆ, ಹಾಸ್ಪಿಟಲೈಸೇಷನ್, ರೇಡಿಯೇಶನ್ ಥೆರಪಿ, ಇಮ್ಯುನೋಥೆರಪಿ ಸೇರಿದಂತೆ ಕ್ಯಾನ್ಸರ್-ಸಂಬಂಧಿತ ಚಿಕಿತ್ಸೆಗಳು ಮತ್ತು ಖರ್ಚು ವೆಚ್ಚಗಳನ್ನು ಭರಿಸುತ್ತದೆ. ಜೊತೆಗೆ ಅನೇಕ ವರ್ಷಗಳ ಫಾಲೋ-ಅಪ್ ವೆಚ್ಚವೂ ದೊರೆಯುತ್ತದೆ.
ಕ್ಯಾನ್ಸರ್ನಿಂದ ಬಾಧಿತರಾದವರು ಮತ್ತು ಅವರ ಕುಟುಂಬ ವರ್ಗ ಭಾವನಾತ್ಮಕವಾಗಿ, ದೈಹಿಕವಾಗಿ ಹಾಗೂ ಅತಿಮುಖ್ಯವಾಗಿ ಆರ್ಥಿಕವಾಗಿ ಸದೃಢವಾಗಿರಲು ಕ್ಯಾನ್ಸರ್ ಇನ್ಶೂರೆನ್ಸ್ ಪಾಲಿಸಿಯು ನಿಶ್ಚಿತವಾಗಿ ನೆರವಾಗುತ್ತದೆ.
ಕೇವಲ ಭಾರತವೊಂದರಲ್ಲೇ ಪ್ರತಿ ವರ್ಷ ಸುಮಾರು 10 ಲಕ್ಷದಷ್ಟು ಜನ ಕ್ಯಾನ್ಸರ್ನಿಂದ ಬಳಲುತ್ತಾರೆ.
2035ರ ಹೊತ್ತಿಗೆ ಈ ಸಂಖ್ಯೆ ಮತ್ತು ಚಿಕಿತ್ಸೆಯ ವೆಚ್ಚ ಎರಡೂ ಬಹುತೇಕ ದ್ವಿಗುಣಗೊಳ್ಳಬಹುದು. ಯಾರಾದರೂ ಆಗಿರಲಿ, ಅವರ ಜೀವನಶೈಲಿ ಮತ್ತು ಕುಟುಂಬದ ಇತಿಹಾಸವನ್ನು ಮೀರಿ ಕ್ಯಾನ್ಸರ್ಗೆ ಬಲಿಯಾಗಬಹುದು. ಆದ್ದರಿಂದ ನೀವು ಕ್ಯಾನ್ಸರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಒಳಿತು. ಅದರಿಂದ ಹಣಕಾಸಿನ ಮುಗ್ಗಟ್ಟು ಎದುರಾದಾಗ ಕನಿಷ್ಠ ಒತ್ತಡ ಮುಕ್ತರಾಗುತ್ತೀರಿ. ಎಲ್ಲದಕ್ಕಿಂತ ಮುಖ್ಯವಾಗಿ, ಚಿಕಿತ್ಸೆ ಹಂತಕ್ಕೆ ಹೋಗುವುದಕ್ಕಿಂತ ಮೊದಲೇ ತಡೆಗಟ್ಟುವುದು ಉತ್ತಮವಲ್ಲವೇ!
ಈಗ ನೆಮ್ಮದಿಯ ಸೂಚಕವಾಗಿ ದೀರ್ಘ ನಿಟ್ಟುಸಿರು ಬಿಡುವ ಸಮಯ. ಕ್ಯಾನ್ಸರ್ ಟ್ರೀಟ್ಮೆಂಟ್ ಇನ್ಶೂರೆನ್ಸ್ ಪಾಲಿಸಿಯು ಈ ಕೆಳಗಿನ ರೀತಿಯ ಕ್ಯಾನ್ಸರ್ಗಳನ್ನು ಕವರ್ ಮಾಡುತ್ತದೆ:
ಕ್ಯಾನ್ಸರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಮೊದಲು ನೆನಪಲ್ಲಿಟ್ಟುಕೊಳ್ಳಬೇಕಾದ ಉಪಯುಕ್ತ ಸಲಹೆಗಳು ಇಲ್ಲಿವೆ:
1. ಹೆಚ್ಚು ಸಮ್ ಅಶ್ಯೂರ್ಡ್ ಆರಿಸಿ - ಕ್ಯಾನ್ಸರ್ ಚಿಕಿತ್ಸೆಯ ಅವಧಿಯು ದೀರ್ಘವಾಗಿರುತ್ತದೆ. ಆದ್ದರಿಂದ, ಹೆಚ್ಚಿನ ಪ್ರಮಾಣದ ಸಮ್ ಅಶ್ಯೂರ್ಡ್ ಅಮೌಂಟ್ ನೀಡುವ ಕ್ಯಾನ್ಸರ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳುವುದು ಬುದ್ಧಿವಂತರ ಲಕ್ಷಣವಾಗಿದೆ.
2. ನಿಮ್ಮ ಪಾಲಿಸಿಯು ಎಲ್ಲಾ ಹಂತದ ಕ್ಯಾನ್ಸರ್ ಕವರ್ ಮಾಡುವಂತಿರಬೇಕು - ಕ್ಯಾನ್ಸರ್ ಇನ್ಶೂರೆನ್ಸ್ ಪಾಲಿಸಿಯ ದರಗಳು ಅಧಿಕವಾಗಿದ್ದರೂ ಎಲ್ಲಾ ಹಂತದ ಕ್ಯಾನ್ಸರ್ ಚಿಕಿತ್ಸೆ ಕವರ್ ಮಾಡುವಂತಹ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಿ.
3. ಪಾಲಿಸಿಯು ಪ್ರೀಮಿಯಂ ಮನ್ನಾ ಮತ್ತು ಆದಾಯದ ಪ್ರಯೋಜನವನ್ನು ಒದಗಿಸಬೇಕು - ಕ್ಯಾನ್ಸರ್ ಚಿಕಿತ್ಸೆಯ ಅಧಿಕ ವೆಚ್ಚದಿಂದಾಗಿ ಅನಿವಾರ್ಯವಾಗಿ ನಿಮ್ಮ ಆದಾಯಕ್ಕೆ ಪೆಟ್ಟು ಬೀಳಬಹುದು. ಆದ್ದರಿಂದ, ಈ ಸಂದರ್ಭಗಳಲ್ಲಿ ಹಣಕಾಸಿನ ಬ್ಯಾಕಪ್ ಆಗಿ ಕಾರ್ಯನಿರ್ವಹಿಸುವ ಪಾಲಿಸಿಯನ್ನು ಆಯ್ಕೆ ಮಾಡಿ.
4. ಪಾಲಿಸಿಯ ಉಳಿಕೆ ಹಾಗೂ ವೇಟಿಂಗ್ ಪೀರಿಯಡ್ ನ ನಿಯಮ ಮತ್ತು ಷರತ್ತುಗಳನ್ನು ಗಮನಿಸಿ - ಪಾಲಿಸಿಯ ವೇಟಿಂಗ್ ಪೀರಿಯಡ್ ಅನ್ನು ಪರಿಶೀಲಿಸಿ ಮತ್ತು ಮರು-ಪರಿಶೀಲಿಸಿ. ಅಂದರೆ ಪಾಲಿಸಿಯು ಕವರೇಜ್ ನೀಡಲು ಪ್ರಾರಂಭಿಸುವ ಮೊದಲಿನ ಅವಧಿಯೇ ಕಾಯುವಿಕೆ ಅವಧಿ. ಮೇಲಾಗಿ, ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಪಾಲಿಸಿ ಉಳಿಯುವಿಕೆಯ ಅವಧಿಯನ್ನು ಪರಿಶೀಲಿಸಿ.
5. ಕುಟುಂಬದ ಆರೋಗ್ಯದ ಇತಿಹಾಸವನ್ನು ಪರಿಶೀಲಿಸಿ - ನಿಮ್ಮ ಕುಟುಂಬವು ಕ್ಯಾನ್ಸರ್ನ ಇತಿಹಾಸವನ್ನು ಹೊಂದಿದ್ದರೆ ಕ್ಯಾನ್ಸರ್ ಇನ್ಶೂರೆನ್ಸ್ ಆಯ್ಕೆ ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ಕ್ಯಾನ್ಸರ್ ಇನ್ಶೂರೆನ್ಸ್ ಪಾಲಿಸಿಯು ಕ್ಯಾನ್ಸರ್ಗೆ ಮಾತ್ರ ಕವರೇಜ್ ನೀಡುತ್ತದೆ ಎಂಬುದನ್ನು ನೆನಪಲ್ಲಿಡಿ. ಪ್ರತಿ ವರ್ಷವೂ ಸ್ಕ್ರೀನಿಂಗ್ ಮಾಡುವುದು ಅಪಾಯವನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.
6. ಡಬಲ್ ಪಾಲಿಸಿಯೆಂದರೆ ಡಬಲ್ ಕವರೇಜ್ ಎಂದರ್ಥವಲ್ಲ - ಕ್ಯಾನ್ಸರ್ ಬೆನಿಫಿಟ್ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳದ ಹೊರತು, ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಜೊತೆಗೆ ಪ್ರತ್ಯೇಕ ಕ್ಯಾನ್ಸರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದರಿಂದ ನೀವು ಎರಡೂ ಪಾಲಿಸಿಗಳ ಪ್ರಯೋಜನಗಳನ್ನು ಏಕಕಾಲದಲ್ಲಿ ಪಡೆಯಬಹುದು ಎಂದರ್ಥವಲ್ಲ. ಕ್ಯಾನ್ಸರ್ ಬೆನಿಫಿಟ್ ಪಾಲಿಸಿಯನ್ನು ತೆಗೆದುಕೊಂಡರೆ ರೆಗ್ಯುಲರ್ ಹಾಸ್ಪಿಟಲೈಸೇಷನ್ ಹಾಗೂ ಚಿಕಿತ್ಸೆಯ ವೆಚ್ಚಗಳನ್ನು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಿಂದ ಕವರ್ ಮಾಡಲಾಗುತ್ತದೆ ಮತ್ತು ಕ್ಯಾನ್ಸರ್ ಬೆನಿಫಿಟ್ ಪಾಲಿಸಿಯಡಿಯಲ್ಲಿ ಒಂದು ದೊಡ್ಡ ಮೊತ್ತವನ್ನು ಕ್ಲೈಮ್ ಮಾಡಬಹುದು. ಇದರಿಂದ ಇನ್ನಿತರ ಖರ್ಚು ನಿಭಾಯಿಸಲು ಸಹಾಯ ಆಗುತ್ತದೆ.
ಗಮನಿಸಿ: ಕೋವಿಡ್ 19 ಹೆಲ್ತ್ ಇನ್ಶೂರೆನ್ಸ್ ಪ್ರಯೋಜನಗಳು ಮತ್ತು ಏನೇನು ಕವರ್ ಮಾಡುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಪಾಲಿಸಿಯನ್ನು ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಖರೀದಿಸಬಹುದು.
ನೀವು ‘ಲೆವೆಲ್ ಸಮ್ ಇನ್ಶೂರ್ಡ್’ ಅಥವಾ ಇನ್ಕ್ರೀಸಿಂಗ್ ಸಮ್ ಇನ್ಶೂರ್ಡ್’ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಕ್ಯಾನ್ಸರ್ ಪ್ರಯೋಜನ ಅಥವಾ ಕ್ಯಾನ್ಸರ್ ಹಾಸ್ಪಿಟಲೈಸೇಷನ್ ಪಾಲಿಸಿಯನ್ನು ನಿಮ್ಮ ಆಯ್ಕೆಯ ಪ್ರಕಾರ ಆರಿಸಿಕೊಳ್ಳಬಹುದು.
ಈ ಪಾಲಿಸಿಯು ಎಲ್ಲಾ ಹಂತದ ಕ್ಯಾನ್ಸರ್ ಗೆ ಇನ್ಬಿಲ್ಟ್ ಪ್ರೀಮಿಯಂ ಮನ್ನಾ ಪ್ರಯೋಜನ ಹೊಂದಿರುತ್ತದೆ.
ವ್ಯಕ್ತಿಯೊಬ್ಬರಲ್ಲಿ ಆರಂಭಿಕ ಹಂತದ ಕ್ಯಾನ್ಸರ್ ಇರುವುದು ಪತ್ತೆಯಾದರೆ ಸಮ್ ಇನ್ಶೂರ್ಡ್ ನ ಶೇ.25ರಷ್ಟು ಅಮೌಂಟ್ ಅನ್ನು ಒಮ್ಮೆಲೇ ಪಾವತಿ ಮಾಡಲಾಗುತ್ತದೆ.
ಪಾಲಿಸಿದಾರರಿಗೆ ಪ್ರಮುಖ ಹಂತದ ಕ್ಯಾನ್ಸರ್ ಪತ್ತೆಯಾದರೆ ಕ್ಯಾನ್ಸರ್ ಪತ್ತೆಯಾದ ಸಮಯದಲ್ಲಿ ಸಮ್ ಇನ್ಶೂರ್ಡ್ ನ ಶೇ.100ರಷ್ಟು ಮತ್ತು ಮುಂದಿನ 10 ವರ್ಷಗಳವರೆಗೆ ಆದಾಯದ ಪ್ರಯೋಜನವನ್ನು ಒದಗಿಸಲಾಗುತ್ತದೆ.
ಈ ಪಾಲಿಸಿಯಲ್ಲಿ ಸಾಮಾನ್ಯವಾಗಿ ಇರುವ ವೇಟಿಂಗ್ ಪೀರಿಯಡ್ 60ರಿಂದ 180 ದಿನಗಳು. ಉಳಿಯುವಿಕೆಯ ಅವಧಿ 7 ರಿಂದ 30 ದಿನಗಳು.
ಈ ಪಾಲಿಸಿಯನ್ನು 20 ರಿಂದ 65 ವರ್ಷಗಳ ನಡುವಿನ ವ್ಯಕ್ತಿಗಳು 10 ರಿಂದ 30 ವರ್ಷಗಳ ನಡುವಿನ ಪಾಲಿಸಿ ಅವಧಿಗೆ ಖರೀದಿಸಬಹುದು.
ಈ ಪಾಲಿಸಿಗೆ ಕನಿಷ್ಠ ಮತ್ತು ಗರಿಷ್ಠ ಸಮ್ ಇನ್ಶೂರ್ಡ್ ಕ್ರಮವಾಗಿ ರೂ.10 ಲಕ್ಷ ಮತ್ತು ರೂ.50 ಲಕ್ಷ.