ಭಾರತದಲ್ಲಿನ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳು
ನಿಮ್ಮ ಆರೋಗ್ಯವು ನಿಮ್ಮಲ್ಲಿರುವ ಅತ್ಯಮೂಲ್ಯ ಆಸ್ತಿಯಾಗಿದೆ, ಅದಕ್ಕಾಗಿಯೇ ಅದನ್ನು ಹಾನಿಯಿಂದ ರಕ್ಷಿಸಲು ನೀವು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಾಗಿದ್ದರೂ, ಅನಾರೋಗ್ಯ ಅಥವಾ ಅಪಘಾತಗಳು ಸಾಮಾನ್ಯವಾಗಿವೆ ಮತ್ತು ಅವು ಯಾವುದೇ ಸಮಯದಲ್ಲಿ ನಿಮ್ಮನ್ನು ಎಮರ್ಜೆನ್ಸಿ ರೂಮ್‌ಗೆ ಕಳುಹಿಸಬಹುದು.
ಭಾರತದಲ್ಲಿನ ಹೆಲ್ತ್ ಕೇರ್‌ನ ಪ್ರಸ್ತುತ ಸ್ಥಿತಿ ಮತ್ತು ವೆಚ್ಚದೊಂದಿಗೆ, ಆಸ್ಪತ್ರೆಗೆ ಮಾಡುವ ಇಂತಹ ಯೋಜಿತವಲ್ಲದ ಭೇಟಿಗಳು ನಿಮಗೆ ಹಣಕಾಸಿನ ತೊಂದರೆಯನ್ನುಂಟು ಮಾಡಬಹುದು.
ಅದೃಷ್ಟವಶಾತ್, ಮೆಡಿಕಲ್ ಇನ್ಶೂರೆನ್ಸ್‌ನೊಂದಿಗೆ ತಮ್ಮ ಆರೋಗ್ಯವನ್ನು ಸುರಕ್ಷಿತ ಪ್ಪವಾಗಿಡುವ ವ್ಯಕ್ತಿಗಳು ಅಂತಹ ಯೋಜಿತವಲ್ಲದ ವೆಚ್ಚಗಳನ್ನು ಭರಿಸಬೇಕಾಗಿಲ್ಲ.
ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ವ್ಯಕ್ತಿಗಳಿಗೆ ತಮ್ಮ ಚಿಕಿತ್ಸೆಗೆಂದು ಚಿಕಿತ್ಸಾ ಶುಲ್ಕಗಳ ಜೊತೆಗೆ ಹಣಕಾಸನ್ನು ಒದಗಿಸಲು ಸಹಾಯ ಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ, ಪಾಲಿಸಿದಾರರು ನೆಟ್‌ವರ್ಕ್ ಆಸ್ಪತ್ರೆಗಳಿಂದ ಮತ್ತು ಚಿಕಿತ್ಸಾಲಯಗಳಿಂದ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವ ಸಂದರ್ಭದಲ್ಲಿ, ತಮ್ಮ ಸ್ವಂತ ಜೇಬಿನಿಂದ ಯಾವುದೇ ಹಣವನ್ನು ಖರ್ಚು ಮಾಡದಂತೆ ತಪ್ಪಿಸಲು ಸಾಧ್ಯವಾಗುತ್ತದೆ.
ಹೆಲ್ತ್ ಇನ್ಶೂರೆನ್ಸ್ ಯೋಜನೆಗಳ ಹೆಚ್ಚುವರಿ ಪ್ರಯೋಜನಗಳೆಂದರೆ, ಚಿಕಿತ್ಸಾ ಪೂರ್ವದ ಮತ್ತು ನಂತರದ ವೆಚ್ಚಗಳು, ಡೇಕೇರ್ ವೆಚ್ಚಗಳ ಮರುಪಾವತಿ ಮತ್ತು ಆಕರ್ಷಕ ವಾರ್ಷಿಕ ತೆರಿಗೆ ಪ್ರಯೋಜನಗಳು.
ಭಾರತದಲ್ಲಿನ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳ ಪಟ್ಟಿ
ಕಂಪನಿಯ ಹೆಸರು | ಸಂಸ್ಥಾಪನಾ ವರ್ಷ | ಪ್ರಧಾನ ಕಚೇರಿ ಸ್ಥಳ |
ನ್ಯಾಷನಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 1906 | ಕೋಲ್ಕತ್ತಾ |
ಗೋ ಡಿಜಿಟ್ ಜನರಲ್ ಲಿಮಿಟೆಡ್. | 2016 | ಬೆಂಗಳೂರು |
ಬಜಾಜ್ ಅಲಿಯಾನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2001 | ಪುಣೆ |
ಚೋಳಮಂಡಲಂ ಎಮ್ಎಸ್ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2001 | ಚೆನ್ನೈ |
ಭಾರ್ತಿ ಎಕ್ಸಾ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2008 | ಮುಂಬೈ |
ಹೆಚ್.ಡಿ.ಎಫ್.ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2002 | ಮುಂಬೈ |
ಫ್ಯೂಚರ್ ಜನರಲಿ ಇಂಡಿಯಾ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2007 | ಮುಂಬೈ |
ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ. ಲಿಮಿಟೆಡ್. | 1919 | ಮುಂಬೈ |
ಇಫ್ಕೋ ಟೋಕಿಯೊ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2000 | ಗುರುಗ್ರಾಮ್ |
ರಿಲಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2000 | ಮುಂಬೈ |
ರಾಯಲ್ ಸುಂದರಂ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2001 | ಚೆನ್ನೈ |
ದಿ ಓರಿಯಂಟಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 1947 | ನವದೆಹಲಿ |
ಟಾಟಾ ಎಐಜಿ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2001 | ಮುಂಬೈ |
ಎಸ್.ಬಿ.ಐ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2009 | ಮುಂಬೈ |
ಅಕೋ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ | 2016 | ಮುಂಬೈ |
ನವಿ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್. | 2016 | ಮುಂಬೈ |
ಜುನೋ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ (ಹಿಂದೆ ಎಡೆಲ್ವೀಸ್ ಜನರಲ್ ಇನ್ಶೂರೆನ್ಸ್ ಎಂದು ಕರೆಯಲಾಗುತ್ತಿತ್ತು) | 2016 | ಮುಂಬೈ |
ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2001 | ಮುಂಬೈ |
ಕೋಟಕ್ ಮಹೀಂದ್ರಾ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2015 | ಮುಂಬೈ |
ಲಿಬರ್ಟಿ ಜನರಲ್ ಇನ್ಶೂರೆನ್ಸ್ ಲಿಮಿಟೆಡ್. | 2013 | ಮುಂಬೈ |
ಮ್ಯಾಗ್ಮಾ ಹೆಚ್.ಡಿ.ಐ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2009 | ಕೋಲ್ಕತ್ತಾ |
ರಹೇಜಾ ಕ್ಯು.ಬಿ.ಇ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2007 | ಮುಂಬೈ |
ರಹೇಜಾ ಕ್ಯು.ಬಿ.ಇ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2007 | ಮುಂಬೈ |
ಶ್ರೀರಾಮ್ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2006 | ಜೈಪುರ |
ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 1938 | ಚೆನ್ನೈ |
ಮಣಿಪಾಲ್ ಸಿಗ್ನಾ ಹೆಲ್ತ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ | 2014 | ಮುಂಬೈ |
ಆದಿತ್ಯ ಬಿರ್ಲಾ ಹೆಲ್ತ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2015 | ಮುಂಬೈ |
ಸ್ಟಾರ್ ಹೆಲ್ತ್ & ಅಲೈಡ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2006 | ಚೆನ್ನೈ |
ಮ್ಯಾಕ್ಸ್ ಬುಪಾ ಹೆಲ್ತ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್. | 2008 | ನವದೆಹಲಿ |
ಕೇರ್ ಹೆಲ್ತ್ ಇನ್ಶೂರೆನ್ಸ್ ಲಿಮಿಟೆಡ್. | 2012 | ಗುರ್ಗಾಂವ್ |
ಯುನಿವರ್ಸಲ್ ಸೊಂಪೊ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2007 | ಮುಂಬೈ |
ಈಗ ನೀವು ಭಾರತದಲ್ಲಿನ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳ ಪಟ್ಟಿಯನ್ನು ನೋಡಿದ್ದೀರಿ, ಹಾಗೆಯೇ ಇನ್ಶೂರೆನ್ಸ್ ಕಂಪನಿ, ಇನ್ಶೂರೆನ್ಸ್ ಬ್ರೋಕರ್ ಮತ್ತು ಇನ್ಶೂರೆನ್ಸ್ ಅಗ್ರಿಗೇಟರ್ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಸಹ ಅಷ್ಟೇ ಮುಖ್ಯವಾಗಿದೆ.
ಇನ್ಶೂರೆನ್ಸ್ ಕಂಪನಿ Vs. ಇನ್ಶೂರೆನ್ಸ್ ಅಗ್ರಿಗೇಟರ್‌ಗಳು Vs. ಇನ್ಶೂರೆನ್ಸ್ ಬ್ರೋಕರ್‌ಗಳು
ಇನ್ಶೂರೆನ್ಸ್ ಕಂಪನಿಗಳು, ಅಗ್ರಿಗೇಟರ್‌ಗಳು ಮತ್ತು ಬ್ರೋಕರ್‌ಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಿ.
ಇನ್ಶೂರೆನ್ಸ್ ಕಂಪನಿ | ಅಗ್ರಿಗೇಟರ್‌ಗಳು | ಬ್ರೋಕರ್‌ಗಳು |
ಇನ್ಶೂರೆನ್ಸ್ ಕಂಪನಿಗಳು ಇನ್ಶೂರೆನ್ಸ್ ಉತ್ಪನ್ನಗಳನ್ನು ರಚಿಸುವ ಮತ್ತು ಗ್ರಾಹಕರಿಗೆ ಮಾರಾಟ ಮಾಡುವ ಜವಾಬ್ದಾರಿಯುತ ವ್ಯವಹಾರಗಳಾಗಿವೆ. | ಅಗ್ರಿಗೇಟರ್‌ಗಳು ಥರ್ಡ್ ಪಾರ್ಟಿ ಘಟಕಗಳಾಗಿದ್ದು, ಇವು ಸಂಭಾವ್ಯ ಗ್ರಾಹಕರಿಗೆ ಹೋಲಿಸಲು ಸೂಕ್ತವಾದ ಡೇಟಾದೊಂದಿಗೆ, ಲಭ್ಯವಿರುವ ಎಲ್ಲಾ ಇನ್ಶೂರೆನ್ಸ್ ಆಯ್ಕೆಗಳನ್ನು ಪಟ್ಟಿ ಮಾಡುತ್ತಾರೆ. | ಬ್ರೋಕರ್‌ಗಳು, ಇನ್ಶೂರೆನ್ಸ್ ಕಂಪನಿ ಮತ್ತು ಅದರ ಗ್ರಾಹಕರ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತವೆ. |
ಪಾತ್ರ - ಗ್ರಾಹಕರಿಗಾಗಿ ವಿವಿಧ ಇನ್ಶೂರೆನ್ಸ್ ಉತ್ಪನ್ನಗಳನ್ನು ಉತ್ಪಾದಿಸಿ ಮತ್ತು ಈ ಉತ್ಪನ್ನಗಳನ್ನು ಖರೀದಿಸುವ ವ್ಯಕ್ತಿಗಳಿಗೆ ಸಾಕಷ್ಟು ಹಣಕಾಸಿನ ಬೆಂಬಲವನ್ನು ನೀಡುತ್ತದೆ. | ಪಾತ್ರ - ಇದು ಸಂಭಾವ್ಯ ಇನ್ಶೂರೆನ್ಸ್ ಖರೀದಿದಾರರಿಗೆ ಲಭ್ಯವಿರುವ ವಿವಿಧ ಯೋಜನೆಗಳನ್ನು ಹೋಲಿಸಲು ವೇದಿಕೆಯನ್ನು ನೀಡುತ್ತಿದ್ದು, ಇದರಿಂದ ಗ್ರಾಹಕರು ಹೆಚ್ಚು ಸೂಕ್ತವಾದ ಆಯ್ಕೆಯನ್ನು ಆರಿಸಿಕೊಳ್ಳಬಹುದು. | ಪಾತ್ರ - ಕಮಿಷನ್ ಗಳಿಸಲು ಇನ್ಶೂರೆನ್ಸ್ ಕಂಪನಿಯ ಪರವಾಗಿ ಗ್ರಾಹಕರಿಗೆ ಇನ್ಶೂರೆನ್ಸ್ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. |
ಯಾರಿಂದಲೂ ನೇಮಕಗೊಂಡಿಲ್ಲ | ಅಗ್ರಿಗೇಟರ್‌ಗಳು, ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಇನ್ಶೂರೆನ್ಸ್ ಕಂಪನಿಗಳೊಂದಿಗೆ ಯಾವುದೇ ಸಂಬಂಧ ಹೊಂದಿರದ ಥರ್ಡ್ ಪಾರ್ಟಿಗಳಾಗಿವೆ. | ಬ್ರೋಕರ್‌ಗಳು ಸಾಮಾನ್ಯವಾಗಿ ಇನ್ಶೂರೆನ್ಸ್ ಕಂಪನಿಯಿಂದ ನೇಮಕಗೊಂಡಿರುತ್ತಾರೆ. ಪರ್ಯಾಯವಾಗಿ, ಅವರು ಕಮಿಷನ್ ಪ್ರೋಗ್ರಾಂ ಮೂಲಕ ಅಂತಹ ಕಂಪನಿಗಳಿಗೆ ಸೇರಿಕೊಳ್ಳಬಹುದು. |
ಇನ್ಶೂರೆನ್ಸ್ ಕಂಪನಿಯು ತನ್ನ ಪಾಲಿಸಿದಾರರ ಎಲ್ಲಾ ವಿಶ್ವಾಸಾರ್ಹ ಕ್ಲೈಮ್‌ಗಳನ್ನು ಇತ್ಯರ್ಥಪಡಿಸುವ ಜವಾಬ್ದಾರಿಯನ್ನು ಹೊಂದಿದೆ. | NA | NA |
ಅನೇಕ ಆಯ್ಕೆಗಳನ್ನು ಪರಿಗಣಿಸುತ್ತ, ಒಂದು ಸರಿಯಾದ ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಆಯ್ಕೆ ಮಾಡುವುದು ಒತ್ತಡವನ್ನು ತೋರುತ್ತದೆ. ಅದೃಷ್ಟವಶಾತ್, ಮೆಡಿಕಲ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ನೀವು ಕೆಲವು ನಿರ್ದಿಷ್ಟ ಅಂಶಗಳನ್ನು ನೆನಪಲ್ಲಿಡಬೇಕು.
ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆಮಾಡುವ ಮೊದಲು ಪರಿಶೀಲಿಸಬೇಕಾದ ವಿಷಯಗಳು
ನೀವು ಈ ಕೆಳಗಿನ ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ, ನೀವು ಖರೀದಿಸುವ ಹೆಲ್ತ್ ಇನ್ಶೂರೆನ್ಸ್ ಯೋಜನೆಯು ನಿಮಗೆ ಸಾಕಷ್ಟು ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ.
ಬ್ರ್ಯಾಂಡ್‌ನ ಖ್ಯಾತಿ - ವೈದ್ಯಕೀಯ ತುರ್ತುಸ್ಥಿತಿಗಳಲ್ಲಿ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪೂರೈಕೆದಾರರನ್ನು ನೀವು ಅವಲಂಬಿಸಬೇಕಿದೆ. ಹೀಗಾಗಿ, ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆಮಾಡುವ ಮೊದಲು ಆನ್‌ಲೈನ್‌ನಲ್ಲಿ, ಸೋಷಿಯಲ್ ಮೀಡಿಯಾ ಮತ್ತು ಇತರ ಸ್ಥಳಗಳಲ್ಲಿ ಕಂಪನಿಯ ರೇಟಿಂಗ್‌ಗಳನ್ನು ಪರಿಶೀಲಿಸುವುದು ಅತ್ಯಗತ್ಯ ಭಾಗವಾಗಿದೆ. ಕಂಪನಿಯ ಪ್ರಸ್ತುತ ಗ್ರಾಹಕರು ಅದರ ಉತ್ಪನ್ನಗಳಿಂದ ಅಥವಾ ಸೇವೆಯಿಂದ ಎದುರಿಸುತ್ತಿರುವ ಸಮಸ್ಯೆಗಳಿಗಾಗಿ ಅಥವಾ ನೆಗೆಟಿವ್ ಕಾಮೆಂಟ್‌ಗಳಿಗಾಗಿ ನಿಮ್ಮ ಕಣ್ಣುಗಳನ್ನು ತೆರೆದು ನೋಡಿ.
ಐ.ಆರ್.ಡಿ.ಎ.ಐ ಅನುಮೋದನೆ ಕಡ್ಡಾಯ - ಇನ್ಶೂರೆನ್ಸ್ ರೆಗ್ಯುಲೆಟರಿ ಮತ್ತು ಡೆವಲಪ್ಮೆಂಟ್ ಅಥಾರಿಟಿಯು ಸರ್ಕಾರಿ ಘಟಕವಾಗಿದ್ದು, ಇದು ಭಾರತದಲ್ಲಿನ ಇನ್ಶೂರೆನ್ಸ್ ಕಂಪನಿಗಳ ನಿಯಂತ್ರಣದ ಉಸ್ತುವಾರಿಯನ್ನು ಹೊಂದಿದೆ. ಇದರ ಅಡಿಯಲ್ಲಿ ರಿಜಿಸ್ಟರ್ ಆಗುವ ಕಂಪನಿಗಳು ಅದರ ಮಾರ್ಗಸೂಚಿಗಳನ್ನು ಪಾಲಿಸಬೇಕು ಹಾಗೂ ತಮ್ಮ ಚಟುವಟಿಕೆಗಳಲ್ಲಿ ಸಾಕಷ್ಟು ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕು. ಹೀಗಾಗಿ, ನಿಮಗಾಗಿ ಅಥವಾ ನಿಮ್ಮ ಕುಟುಂಬಕ್ಕಾಗಿ ಮೆಡಿಕಲ್ ಇನ್ಶೂರೆನ್ಸ್ ಅನ್ನು ಪಡೆದುಕೊಳ್ಳುವಾಗ ಅಂತಹ ಐ.ಆರ್.ಡಿ.ಎ.ಐ ಅನುಮೋದಿತ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಯಾವಾಗಲೂ ಬುದ್ಧಿವಂತ ಹೆಜ್ಜೆಯಾಗಿದೆ.
ಕ್ಲೈಮ್ ಸೆಟ್ಲ್‌ಮೆಂಟ್‌ನ ಡಾಕ್ಯುಮೆಂಟನ್ನು ಟ್ರ್ಯಾಕ್ ಮಾಡಿ - ಮೆಡಿಕಲ್ ಎಮರ್ಜೆನ್ಸಿಗಳಲ್ಲಿ, ಚಿಕಿತ್ಸೆಗಾಗಿ ಹಣವನ್ನು ಹೊಂದಿಸಲು ನೀವು ಅತ್ಯಂತ ಸೀಮಿತ ವ್ಯಾಪ್ತಿಯನ್ನು ಅಥವಾ ಸಮಯವನ್ನು ಹೊಂದಿರಬಹುದು. ಅಂತಹ ಸಮಯದಲ್ಲಿ, ನಿಮಗೆ ಕ್ಲೈಮ್ ವಿನಂತಿಗಳನ್ನು ತ್ವರಿತವಾಗಿ ಅನುಮೋದಿಸುವ, ಸರಿಯಾದ ಕಾಳಜಿ ವಹಿಸಲು ವಿಳಂಬವಾಗದಂತೆ ಅಗತ್ಯ ಹಣಕಾಸಿನ ನೆರವನ್ನು ನೀಡುವ ಇನ್ಶೂರೆನ್ಸ್ ಕಂಪನಿಯ ಅಗತ್ಯವಿರುತ್ತದೆ. ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಆಯ್ಕೆ ಮಾಡುವ ಮೊದಲು, ಅದರ ಕ್ಲೈಮ್ ಸೆಟ್ಲ್‌ಮೆಂಟ್ ಅನುಪಾತವನ್ನು ಪರಿಶೀಲಿಸಿ. ಕಂಪನಿಯು ಪಡೆಯುವ ಕ್ಲೈಮ್‌ಗಳಲ್ಲಿ, ಇತ್ಯರ್ಥಗೊಳಿಸುವ ಶೇಕಡಾವಾರು ಕ್ಲೈಮ್‌ಗಳ ಬಗ್ಗೆ ಇದು ನಿಮಗೆ ಸರಿಯಾದ ಕಲ್ಪನೆಯನ್ನು ನೀಡಬೇಕು. ಹೆಚ್ಚಿನ ಅನುಪಾತಗಳು ಅನುಕೂಲಕರವೆಂದು ಹೇಳುವ ಅಗತ್ಯವಿಲ್ಲ.
ನೆಟ್‌ವರ್ಕ್ ಆಸ್ಪತ್ರೆಗಳು - ಪಾಲಿಸಿದಾರರು, ಕಂಪನಿಯ ನೆಟ್‌ವರ್ಕ್ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಲ್ಲಿ ಕ್ಯಾಶ್‌ಲೆಸ್ ಚಿಕಿತ್ಸೆಯನ್ನು ಪಡೆಯಬಹುದು. ಈ ಸಂದರ್ಭಗಳಲ್ಲಿ, ಪಾಲಿಸಿದಾರರು ಇನ್ಶೂರೆನ್ಸ್ ಕ್ಲೈಮ್ ಅನ್ನು ಸಲ್ಲಿಸುವ ಅಗತ್ಯವಿಲ್ಲ ಅಥವಾ ಹಣಕಾಸಿನ ಪರಿಹಾರ ಪಡೆಯಲು ಮರುಪಾವತಿ ವಿಧಾನವನ್ನು ಅನುಸರಿಸುವ ಅಗತ್ಯವಿಲ್ಲ. ಬದಲಾಗಿ, ಮೆಡಿಕಲ್ ಬಿಲ್‌ಗಳನ್ನು ನೇರವಾಗಿ ವಿಮಾದಾರರು ಮತ್ತು ಪ್ರಶ್ನಾರ್ಹ ಆಸ್ಪತ್ರೆಯ ನಡುವೆ ಇತ್ಯರ್ಥಗೊಳಿಸಲಾಗುತ್ತದೆ. ಗರಿಷ್ಠ ಸಂಖ್ಯೆಯ ನೆಟ್‌ವರ್ಕ್ ಔಟ್‌ಲೆಟ್‌ಗಳನ್ನು ಹೊಂದಿರುವ ಕಂಪನಿಗಳನ್ನು ನೋಡಿ, ಇದರಿಂದ ನೀವು ಪ್ರತಿ ಬಾರಿಯೂ ಕ್ಯಾಶ್‌ಲೆಸ್ ಚಿಕಿತ್ಸೆಯನ್ನು ಪಡೆಯಬಹುದು
ತೊಂದರೆ-ಮುಕ್ತ ಕ್ಲೈಮ್‌ಗಳ ಪ್ರಕ್ರಿಯೆ - ಸಂಕೀರ್ಣವಾದ ಕ್ಲೈಮ್ ಫೈಲಿಂಗ್ ಪ್ರಕ್ರಿಯೆಯು, ತುರ್ತು ಪರಿಸ್ಥಿತಿಯ ಸಮಯದಲ್ಲಿ ನಿಮ್ಮನ್ನು ನಿಯಮಗಳ ಹೇರಿಕೆಯಲ್ಲಿ ಮುಳುಗಿಸಬಹುದು. ಮೆಡಿಕಲ್ ಎಮರ್ಜೆನ್ಸಿಯು ಸಂಭವಿಸಿದಾಗ, ನೀವು ಅರ್ಹವಿರುವ ಹಣಕಾಸಿನ ಸಹಾಯವನ್ನು ಪಡೆಯಲು, ರಾಶಿಗಟ್ಟಲೇ ಕಾಗದಗಳನ್ನು ತುಂಬುತ್ತ ಕೂರಲು ನಿಮಗೆ ಸಾಧ್ಯವಿರುವುದಿಲ್ಲ. ಆದ್ದರಿಂದ, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಕಂಪನಿಯನ್ನು ಆಯ್ಕೆಮಾಡುವ ಮೊದಲು, ನಿಮ್ಮ ವಿಮಾದಾರರು ಸರಳವಾದ ಮತ್ತು ತೊಂದರೆ-ಮುಕ್ತ ಕ್ಲೈಮ್‌ಗಳ ವಿಧಾನವನ್ನು ಅನುಸರಿಸುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಯಾಕೆಂದರೆ ಇದು ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದಿಲ್ಲ ಅಥವಾ ಗೊಂದಲಕ್ಕೀಡಾಗುವುದಿಲ್ಲ.
ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳು - ಮೆಡಿಕಲ್ ಕವರೇಜ್ ಅನ್ನು ಪಡೆಯಲು ನೀವು ಪಾವತಿಸುವ ಹಣದ ಮೊತ್ತವು, ಪಾಲಿಸಿಯನ್ನು ಖರೀದಿಸುವ ಮೊದಲು ನೀವು ಬಹುಮುಖ್ಯವಾಗಿ ಪರಿಗಣಿಸಬೇಕಾದ ಮತ್ತೊಂದು ಪ್ರಮುಖ ಅಂಶವಾಗಿದೆ. ಅದೇನೇ ಇದ್ದರೂ, ಕೇವಲ ಬೆಲೆಯನ್ನಷ್ಟೆ ನೋಡಬೇಡಿ. ಬದಲಾಗಿ, ನೀಡುವ ಹಣಕ್ಕೆ ತಕ್ಕ ಉತ್ತಮ ಮೌಲ್ಯದ ಪಾಲಿಸಿಗಾಗಿ ನೋಡಿ. ಪಾಲಿಸಿಯ ಸೇರ್ಪಡೆಗಳು ಮತ್ತು ಹೊರಗಿಡುವಿಕೆಗಳನ್ನು ಪರಿಗಣಿಸುವಾಗ ಅವುಗಳ ಬೆಲೆಗಳನ್ನು ಹೋಲಿಕೆ ಮಾಡಿ. ಹಾಗೆ ಮಾಡುವುದರಿಂದ ಮೆಡಿಕಲ್ ಎಮರ್ಜೆನ್ಸಿಗಳಲ್ಲಿ ಹಣಕಾಸಿನ ಭದ್ರತೆಗೆ ಧಕ್ಕೆಯಾಗದಂತೆ ಆರ್ಥಿಕ ಯೋಜನೆಯನ್ನು ಆಯ್ಕೆ ಮಾಡಲು ನಿಮಗೆ ಸಹಾಯವಾಗುತ್ತದೆ.
ಸಂಭಾವ್ಯ ಹೆಲ್ತ್ ಇನ್ಶೂರೆನ್ಸ್ ಖರೀದಿಗಾರರಿಗೆ ಬಹುಶಃ ನಾವು ನೀಡುವ ಪ್ರಮುಖ ಸಲಹೆಯೆಂದರೆ, ಅಂತಹ ಪಾಲಿಸಿಗಳನ್ನು ಇನ್ಶೂರೆನ್ಸ್ ಕಂಪನಿಯಿಂದ ನೇರವಾಗಿ ಖರೀದಿಸಲು ನಿಶ್ಚಯಿಸಿರಿ.
ಮೆಡಿಕಲ್ ಪಾಲಿಸಿಯನ್ನು ಖರೀದಿಸುವಾಗ ಅನೇಕ ಏಜೆಂಟ್‌ಗಳ ಮೂಲಕ ಖರೀದಿಸಲು ಬಯಸುತ್ತಾರೆ. ಆದರೂ, ಕಂಪನಿಯೊಂದಿಗಿನ ನೇರ ವಹಿವಾಟು ಯಾವಾಗಲೂ ಹೆಚ್ಚು ಪ್ರಯೋಜನಕಾರಿಯಾಗಿದೆ.
ಏಕೆ ಎಂದು ತಿಳಿಯೋಣ ಬನ್ನಿ!
ಇನ್ಶೂರೆನ್ಸ್ ಕಂಪನಿಯಿಂದ ನೇರವಾಗಿ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವ ಪ್ರಯೋಜನಗಳು
ಇತರ ಮೂಲಗಳಿಗೆ ಅಥವಾ ಬ್ರೋಕರ್‌ಗಳಿಗೆ ವಿರುದ್ಧವಾಗಿ ಕಂಪನಿಯಿಂದ ಹೆಲ್ತ್ ಕವರೇಜ್ ಅನ್ನು ಖರೀದಿಸುವ ಕೆಲವು ಪ್ರಯೋಜನಗಳು ಈ ಕೆಳಗಿನಂತಿವೆ:
ಹಲವಾರು ಆಯ್ಕೆಗಳಿಂದ ಆರಿಸಿಕೊಳ್ಳಿ - ಬ್ರೋಕರ್‌ಗಳು ಅಥವಾ ಏಜೆಂಟ್‌ಗಳು ಸಾಮಾನ್ಯವಾಗಿ ಒಂದು ನಿರ್ದಿಷ್ಟ ಕಂಪನಿಯಲ್ಲಿ ಲಭ್ಯವಿರುವ ಎಲ್ಲಾ ಹೆಲ್ತ್ ಇನ್ಶೂರೆನ್ಸ್ ಉತ್ಪನ್ನಗಳನ್ನು ನಿಮ್ಮೆದುರು ಬಹಿರಂಗಪಡಿಸುವುದಿಲ್ಲ. ಅವರು ನಿಮ್ಮ ಯೋಚನೆಯನ್ನು ದುಬಾರಿ ಆಯ್ಕೆಗಳಿಗೆ ಸೀಮಿತಗೊಳಿಸಲು ಪ್ರಯತ್ನಿಸುತ್ತಾರೆ. ಏಕೆಂದರೆ ಅಂತಹ ಆಯ್ಕೆಗಳಿಂದ ಅವರು ಹೆಚ್ಚಿನ ಕಮಿಷನ್ ಅನ್ನು ಪಡೆದುಕೊಳ್ಳಬಹುದು. ವಿಮಾದಾರರಿಂದ ನೇರವಾಗಿ ಖರೀದಿ ಮಾಡುವುದರಿಂದ ಅಂತಹ ಮಿತಿಗಳನ್ನು ತಡೆಯಬಹುದು.
ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಇನ್ಶೂರೆನ್ಸ್ ಪಾಲಿಸಿಗಳನ್ನು ಕಸ್ಟಮೈಸ್ ಮಾಡುವುದು - ಇನ್ಶೂರೆನ್ಸ್ ಕಂಪನಿಗಳು ತನ್ನ ಪಾಲಿಸಿದಾರರಿಗೆ ಹಲವಾರು ಕಸ್ಟಮೈಸೇಶನ್ ಆಯ್ಕೆಗಳನ್ನು ನೀಡುತ್ತವೆ, ಇವನ್ನು ಬಳಸಿಕೊಂಡು ನಿಮ್ಮ ನಿರ್ದಿಷ್ಟ ಅಗತ್ಯಗಳಿಗೆ ಸರಿಹೊಂದುವಂತೆ, ನೀವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರ್ಪಡಿಸಬಹುದು. ಒಬ್ಬ ಬ್ರೋಕರ್, ನಿಮಗೆ ಪಾಲಿಸಿಯನ್ನು ಮಾರಾಟ ಮಾಡುವುದರಿಂದ ಅಂತಹ ಕಸ್ಟಮೈಸೇಶನ್‌ಗಳನ್ನು ನಿಮ್ಮೆದುರು ಬಹಿರಂಗಪಡಿಸದಿರಬಹುದು, ಇದರಿಂದಾಗಿ ನೀವು ಬೇಸಿಕ್ ಪಾಲಿಸಿಯೊಂದಿಗೆ ಸಿಲುಕಿಕೊಳ್ಳುತ್ತೀರಿ.
ಯಾವುದೇ ಕಮಿಷನ್ ಪಾವತಿಗಳಿಲ್ಲ- ಏಜೆಂಟ್ ಅಥವಾ ಬ್ರೋಕರ್‌ಗಳು ನಿಮ್ಮ ಮತ್ತು ಮೆಡಿಕಲ್ ಕವರೇಜ್ ನೀಡುವ ಕಂಪನಿಯ ನಡುವೆ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ಅಂತಹ ಬ್ರೋಕರ್‌ನಿಂದ ಪಾಲಿಸಿಯನ್ನು ಖರೀದಿಸಲು ನೀವು ನಿರ್ಧರಿಸಿದಾಗ, ನಿಮ್ಮ ಪಾಲಿಸಿ ಪ್ರೀಮಿಯಂನ ಭಾಗವಾಗಿ ನೀವು ಹೆಚ್ಚುವರಿ ಶುಲ್ಕವನ್ನು ಪಾವತಿಸುತ್ತೀರಿ, ಅದನ್ನು ಈ ಏಜೆಂಟ್‌ಗಳು ಕಮಿಷನ್‌ನಂತೆ ತಮ್ಮ ಜೇಬಿಗಿಳಿಸಿಕೊಳ್ಳುತ್ತಾರೆ. ಅದೃಷ್ಟವಶಾತ್, ನೀವು ಇನ್ಶೂರೆನ್ಸ್ ಕಂಪನಿಯೊಂದಿಗೆ ನೇರವಾಗಿ ವ್ಯವಹರಿಸುವಾಗ ಅಂತಹ ಹೆಚ್ಚುವರಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ.
ಹಲವಾರು ಉತ್ಪನ್ನಗಳನ್ನು ಹೋಲಿಕೆ ಮಾಡಿ - ಬ್ರೋಕರ್‌ಗಳು ನಿಮಗಿರುವ ಎಲ್ಲಾ ಆಯ್ಕೆಗಳನ್ನು ನೋಡಲು ನಿಮಗೆ ಅವಕಾಶ ನೀಡುವುದಿಲ್ಲ. ಬದಲಾಗಿ, ಅವರು ನೀಡುವ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಅವರು ನಿಮ್ಮನ್ನು ಆತುರಪಡಿಸುತ್ತಾರೆ. ನೀವು ನೇರವಾಗಿ ಕಂಪನಿಯನ್ನು ಸಂಪರ್ಕಿಸಿದಾಗ, ನಿಮಗೆ ಲಭ್ಯವಿರುವ ವಿವಿಧ ಪಾಲಿಸಿಗಳನ್ನು ಹೋಲಿಕೆ ಮಾಡಲು ಮತ್ತು ವಿವರವಾಗಿ ತಿಳಿಯಲು ನೀವು ಸಮಯವನ್ನು ತೆಗೆದುಕೊಳ್ಳಬಹುದು. ನೀವು ತಿಳುವಳಿಕೆಯುತ ಆಯ್ಕೆಯನ್ನು ಮಾಡಿದ ನಂತರವೇ, ಪಾಲಿಸಿ ಡಾಕ್ಯುಮೆಂಟುಗಳಿಗೆ ನೀವು ಸಹಿ ಮಾಡಬೇಕಾಗುತ್ತದೆ.
ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಎನ್ನುವುದು ಬದುಕು ಮತ್ತು ಸಾವಿನ ನಡುವಿರುವ ವ್ಯತ್ಯಾಸವಾಗಿದೆ. ಆದ್ದರಿಂದ, ಅಂತಹ ಕವರೇಜಿಗೆ ಸಂಬಂಧಿಸಿದ ನಿರ್ಧಾರಗಳನ್ನು ಲಘುವಾಗಿ ತೆಗೆದುಕೊಳ್ಳಬೇಡಿ.
ನಿಮ್ಮ ಪಾಲಿಸಿ ಡಾಕ್ಯುಮೆಂಟ್‌ಗಳಲ್ಲಿರುವ ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಓದಿ, ಅದು ಏನನ್ನು ಒಳಗೊಂಡಿದೆ ಮತ್ತು ಏನನ್ನು ಮಾಡುವುದಿಲ್ಲ ಎಂಬುದನ್ನು ವಿವರವಾಗಿ ಅರ್ಥಮಾಡಿಕೊಳ್ಳಿ. ಹಾಗೆ ಮಾಡುವುದರಿಂದ ದೀರ್ಘಾವಧಿಯಲ್ಲಿ ಅದರ ಪ್ರಯೋಜನಗಳನ್ನು ಗರಿಷ್ಠಗೊಳಿಸಲು ನಿಮಗೆ ಸಹಾಯವಾಗುತ್ತದೆ.
ಪದೇಪದೇ ಕೇಳಲಾದ ಪ್ರಶ್ನೆಗಳು
ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಲು ಸರಿಯಾದ ಸಮಯ ಯಾವುದು?
ಹೆಲ್ತ್ ಇನ್ಶೂರೆನ್ಸ್ ಯೋಜನೆಗಳು ಯುವಜನರಿಗೆ ಅಗ್ಗವಾಗಿರುತ್ತವೆ ಮತ್ತು ಅದಕ್ಕೆ ಪ್ರತಿಯಾಗಿ ದೊಡ್ಡವರಿಗೆ ಸ್ವಲ್ಪ ಹೆಚ್ಚಾಗಬಹುದು. ಆದ್ದರಿಂದ, ನೀವು 20 ಅಥವಾ 30 ರಲ್ಲಿದ್ದಾಗ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡುವುದು ಬುದ್ಧಿವಂತ ನಿರ್ಧಾರವಾಗಿದೆ. ಕೈಗೆಟುಕುವ ವ್ಯಾಪ್ತಿಯ ಹೊರತಾಗಿ, ಯಾವುದೇ ಮೆಡಿಕಲ್ ಎಮರ್ಜೆನ್ಸಿಯ ಸಮಯದಲ್ಲಿ ನೀವು ಆರ್ಥಿಕವಾಗಿ ಇದರ ಲಾಭ ಪಡೆಯಬಹುದು.
ಮೆಡಿಕಲ್ ಕವರೇಜ್ ಅನ್ನು ಖರೀದಿಸುವಾಗ ಪರಿಗಣಿಸಬೇಕಾದ ಕೆಲವು ಅಂಶಗಳು ಯಾವುವು?
ಪ್ರತಿಷ್ಠಿತ ವಿಮಾದಾರರು ಯಾವಾಗಲೂ ತ್ವರಿತ ಮತ್ತು ಪರಿಣಾಮಕಾರಿ ಕ್ಲೈಮ್ ಸೆಟಲ್‌ಮೆಂಟ್‌ಗಳನ್ನು ಒದಗಿಸುತ್ತಾರೆ, ಇದು ಪಾಲಿಸಿದಾರರಿಗೆ ಗುಣಮಟ್ಟದ ಮೆಡಿಕಲ್ ಕೇರ್ ಅನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಹೆಚ್ಚುವರಿಯಾಗಿ, ನೀವು ಕ್ಲೈಮ್ ಫೈಲಿಂಗ್ ಪ್ರಕ್ರಿಯೆಯನ್ನು ಪರಿಗಣಿಸಲೇಬೇಕು. ಕೆಲವು ಕಂಪನಿಗಳು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಮಾಡಲು ನಿಮಗೆ ಅವಕಾಶ ಮಾಡಿಕೊಡುತ್ತವೆ. ಅಂತಹ ಡಿಜಿಟಲ್ ಕಾರ್ಯವಿಧಾನಗಳು ಅಗತ್ಯವಿದ್ದಾಗ ಅರ್ಥಮಾಡಿಕೊಳ್ಳಲು ಮತ್ತು ಪೂರ್ಣಗೊಳಿಸಲು ಸುಲಭವಾಗಿದೆ.
ಇನ್ಶೂರೆನ್ಸ್ ಕಂಪನಿಗಳನ್ನು ಆಯ್ಕೆಮಾಡುವಾಗ ಐ.ಆರ್.ಡಿ.ಎ.ಐ ಅನುಮೋದನೆ ಏಕೆ ಮುಖ್ಯವಾಗಿದೆ?
ಐ.ಆರ್.ಡಿ.ಎ.ಐ ಭಾರತದಲ್ಲಿ ಇನ್ಶೂರೆನ್ಸ್ ಕ್ಷೇತ್ರದ ಅಭಿವೃದ್ಧಿ ಮತ್ತು ನಿಯಂತ್ರಣಕ್ಕೆ ಮಾತ್ರ ಜವಾಬ್ದಾರವಾಗಿರುವ ಕೇಂದ್ರ ಸರ್ಕಾರದ ಸಂಸ್ಥೆಯಾಗಿದೆ. ಐ.ಆರ್.ಡಿ.ಎ.ಐ ಅಡಿಯಲ್ಲಿ ರಿಜಿಸ್ಟರ್ ಆಗಿರುವ ಕಂಪನಿಗಳು ಕೆಲವು ಮಾರ್ಗಸೂಚಿಗಳು ಮತ್ತು ನಿಯಮಗಳನ್ನು ಅನುಸರಿಸಲೇಬೇಕು, ಇದು ಪಾಲಿಸಿದಾರರಿಗೆ ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ. ಇತರ ಕಂಪನಿಗಳು ಈ ನಿಯಮಗಳಿಗೆ ಬದ್ಧವಾಗಿರುವುದಿಲ್ಲ, ಇದು ನಂತರದಲ್ಲಿ ಗ್ರಾಹಕರಿಗೆ ತೊಂದರೆಗಳನ್ನು ಉಂಟುಮಾಡಬಹುದು.
ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು ಇನ್ಶೂರೆನ್ಸ್ ಪೂರೈಕೆದಾರರಿಂದ ನೇರವಾಗಿ ಖರೀದಿಸಿದಾಗ ಏಕೆ ಅವು ಅಗ್ಗವಾಗಿರುತ್ತವೆ?
ನೀವು ಏಜೆಂಟ್‌ನಿಂದ ಖರೀದಿಸಿದಾಗ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಹೆಚ್ಚು ದುಬಾರಿಯಾಗುತ್ತವೆ, ಆದರೆ ಕಂಪನಿಯಿಂದ ನೇರವಾಗಿ ಖರೀದಿಸುವಾಗ ಸ್ವಲ್ಪ ಕಡಿಮೆ ವೆಚ್ಚವಾಗುತ್ತದೆ. ಏಕೆಂದರೆ ಏಜೆಂಟ್‌ಗಳು ಗ್ರಾಹಕರಿಗೆ ಮಾರಾಟ ಮಾಡುವ ಪ್ರತಿ ಪಾಲಿಸಿಯ ಮೇಲೆ ನಿರ್ದಿಷ್ಟ ಕಮಿಷನ್ ಅನ್ನು ವಿಧಿಸುತ್ತಾರೆ.
ಈ ಹೆಚ್ಚುವರಿ ಶುಲ್ಕವು ಹೆಚ್ಚಿದ ಪ್ರೀಮಿಯಂಗಳ ರೂಪದಲ್ಲಿ ಪಾಲಿಸಿದಾರರ ಜೇಬಿನಿಂದ ಬರುತ್ತದೆ. ನೀವು ನೇರವಾಗಿ ಇನ್ಶೂರೆನ್ಸ್ ಕಂಪನಿಯನ್ನು ಸಂಪರ್ಕಿಸಿದಾಗ, ಈ ಕಮಿಷನ್ ಮೊತ್ತವನ್ನು ನೀವು ಭರಿಸಬೇಕಿಲ್ಲ, ಇದರಿಂದಾಗಿ ನಿಮ್ಮ ಪ್ರೀಮಿಯಂ ಹೊಣೆಗಾರಿಕೆಗಳು ಕಡಿಮೆಯಾಗುತ್ತವೆ.