Third-party premium has changed from 1st June. Renew now
ಭಾರತದಲ್ಲಿ ಕಾರ್ ಇನ್ಶೂರೆನ್ಸ್ ಕಂಪನಿಗಳು
ಖರೀದಿ ಮಾಡಲು ಸೂಕ್ತವಾದ ಕಾರ್ ಮಾಡೆಲ್ ಅನ್ನು ನೀವು ಅಂತಿಮಗೊಳಿಸಿದ ತಕ್ಷಣ, ಅದಕ್ಕಾಗಿ ಉತ್ತಮ ಗುಣಮಟ್ಟದ ಇನ್ಶೂರೆನ್ಸ್ ಪಾಲಿಸಿಗಾಗಿ ಹುಡುಕಾಟ ಪ್ರಾರಂಭಿಸಬೇಕು. ಮೋಟಾರ್ ವಾಹನಗಳ ಕಾಯಿದೆ, 1988 ರ ಅಡಿಯಲ್ಲಿ, ಎಲ್ಲಾ ಕಾರ್ ಮಾಲೀಕರು ಎಲ್ಲಾ ಸಮಯದಲ್ಲೂ ತಮ್ಮ ವಾಹನಗಳಿಗೆ ಮಾನ್ಯವಾದ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಲೇಬೇಕು.
ಈ ನಿಯಮವನ್ನು ಪಾಲಿಸಲು ವಿಫಲವಾದಲ್ಲಿ ₹2000 ಮತ್ತು ಪುನರಾವರ್ತಿತ ಅಪರಾಧಕ್ಕೆ ₹4000 ಗಳ ಭಾರೀ ದಂಡವನ್ನು ವಿಧಿಸಬಹುದು.
ಅದೃಷ್ಟವಶಾತ್, ಭಾರತದಲ್ಲಿ ಅತ್ಯುತ್ತಮ ಕಾರ್ ಇನ್ಶೂರೆನ್ಸ್ ಕಂಪನಿಗಳಿಗೆ ಅಥವಾ ಪಾಲಿಸಿಗಳಿಗೆ ಕೊರತೆಯಿಲ್ಲ. ನಿಮ್ಮ ಪ್ರೀತಿಯ ವಾಹನಕ್ಕೆ ಹಣಕಾಸಿನ ರಕ್ಷಣೆಯನ್ನು ಪಡೆಯುವ ವಿಷಯ ಬಂದಾಗ, ನಿಮಗೆ ಆಯ್ಕೆ ಮಾಡಲು ವಿಶಾಲ ವ್ಯಾಪ್ತಿಯ ಆಯ್ಕೆಗಳಿವೆ. ಪ್ರತಿಯೊಂದು ಪಾಲಿಸಿಯು ಭಿನ್ನವಾದ ಪ್ರಯೋಜನಗಳನ್ನು ಮತ್ತು ವೈಶಿಷ್ಟ್ಯಗಳನ್ನು ಒದಗಿಸಲಾಗುತ್ತಿದ್ದು, ನಿರ್ದಿಷ್ಟ ಗ್ರಾಹಕರ ವಿಭಾಗಕ್ಕೆ ಮೊಟಕುಗೊಳಿಸಲಾಗುತ್ತದೆ.
ಭಾರತದಲ್ಲಿನ ಕಾರ್ ಇನ್ಶೂರೆನ್ಸ್ ಕಂಪನಿಗಳ ಪಟ್ಟಿಯನ್ನು ನೋಡೋಣ.
ಭಾರತದಲ್ಲಿನ ಕಾರ್ ಇನ್ಶೂರೆನ್ಸ್ ಕಂಪನಿಗಳ ಪಟ್ಟಿ
ಕಂಪನಿಯ ಹೆಸರು | ಸಂಸ್ಥಾಪನಾ ವರ್ಷ | ಪ್ರಧಾನ ಕಚೇರಿ ಸ್ಥಳ |
ನ್ಯಾಷನಲ್ ಇನ್ಶುರೆನ್ಸ್ ಕಂಪನಿ. ಲಿಮಿಟೆಡ್. | 1906 | ಕೋಲ್ಕತ್ತಾ |
ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್. | 2016 | ಬೆಂಗಳೂರು |
ಬಜಾಜ್ ಅಲಿಯಾನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2001 | ಪುಣೆ |
ಚೋಳಮಂಡಲಂ ಎಮ್. ಎಸ್ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2001 | ಚೆನ್ನೈ |
ಭಾರ್ತಿ ಅಕ್ಸಾ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2008 | ಮುಂಬೈ |
ಹೆಚ್.ಡಿ.ಎಫ್.ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2002 | ಮುಂಬೈ |
ಫ್ಯೂಚರ್ ಜನರಲಿ ಇಂಡಿಯಾ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2007 | ಮುಂಬೈ |
ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ. ಲಿಮಿಟೆಡ್. | 1919 | ಮುಂಬೈ |
ಇಫ್ಕೋ ಟೋಕಿಯೊ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2000 | ಗುರುಗ್ರಾಮ್ |
ರಿಲಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2000 | ಮುಂಬೈ |
ರಾಯಲ್ ಸುಂದರಂ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2001 | ಚೆನ್ನೈ |
ದಿ ಓರಿಯಂಟಲ್ ಇನ್ಶೂರೆನ್ಸ್ ಕಂ. ಲಿಮಿಟೆಡ್. | 1947 | ನವದೆಹಲಿ |
ಟಾಟಾ ಎಐಜಿ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2001 | ಮುಂಬೈ |
ಎಸ್.ಬಿ.ಐ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2009 | ಮುಂಬೈ |
ಅಕೋ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ | 2016 | ಮುಂಬೈ |
ನವಿ ಜನರಲ್ ಇನ್ಶೂರೆನ್ಸ್ ಲಿಮಿಟೆಡ್. | 2016 | ಮುಂಬೈ |
ಜುನೋ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ (ಹಿಂದೆ ಎಡೆಲ್ವೀಸ್ ಜನರಲ್ ಇನ್ಶೂರೆನ್ಸ್ ಎಂದು ಕರೆಯಲಾಗುತ್ತಿತ್ತು) | 2016 | ಮುಂಬೈ |
ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2001 | ಮುಂಬೈ |
ಕೋಟಕ್ ಮಹೀಂದ್ರಾ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2015 | ಮುಂಬೈ |
ಲಿಬರ್ಟಿ ಜನರಲ್ ಇನ್ಶೂರೆನ್ಸ್ ಲಿಮಿಟೆಡ್. | 2013 | ಮುಂಬೈ |
ಮ್ಯಾಗ್ಮಾ ಹೆಚ್.ಡಿ.ಐ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2009 | ಕೋಲ್ಕತ್ತಾ |
ರಹೇಜಾ ಕ್ಯು.ಬಿ.ಇ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2007 | ಮುಂಬೈ |
ಶ್ರೀರಾಮ್ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2006 | ಜೈಪುರ |
ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 1938 | ಚೆನ್ನೈ |
ಯುನಿವರ್ಸಲ್ ಸೊಂಪೊ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. | 2007 | ಮುಂಬೈ |
ಇನ್ಶೂರೆನ್ಸ್ ಕಂಪನಿ Vs. ಇನ್ಶೂರೆನ್ಸ್ ಅಗ್ರಿಗೇಟರ್‌ಗಳು Vs. ಇನ್ಶೂರೆನ್ಸ್ ಬ್ರೋಕರ್‌ಗಳು
ಇನ್ಶೂರೆನ್ಸ್ ಕಂಪನಿಗಳು, ಅಗ್ರಿಗೇಟರ್‌ಗಳು ಮತ್ತು ಬ್ರೋಕರ್‌ಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಿ.
ಇನ್ಶೂರೆನ್ಸ್ ಕಂಪನಿ | ಅಗ್ರಿಗೇಟರ್‌ಗಳು | ಬ್ರೋಕರ್‌ಗಳು |
ಯಾವುದೇ ಸಂಸ್ಥೆಯು ತನ್ನ ಗ್ರಾಹಕರಿಗಾಗಿ ವಿವಿಧ ಇನ್ಶೂರೆನ್ಸ್ ಪಾಲಿಸಿಗಳನ್ನು ಮತ್ತು ಉತ್ಪನ್ನಗಳನ್ನು ಪ್ಯಾಕೇಜ್ ಮಾಡುತ್ತದೆ ಮತ್ತು ಮಾರಾಟ ಮಾಡುತ್ತದೆ. | ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಇನ್ಶೂರೆನ್ಸ್ ಕಂಪನಿಗಳ ವಿವಿಧ ಪಾಲಿಸಿಗಳನ್ನು ಗ್ರಾಹಕರು ಹೋಲಿಸಿ ನೋಡಿಬಹುದಾದ ಥರ್ಡ್-ಪಾರ್ಟಿ ಪೋರ್ಟಲ್. | ಇನ್ಶೂರೆನ್ಸ್ ಕಂಪನಿ ಮತ್ತು ಅದರ ಸಂಭಾವ್ಯ ಗ್ರಾಹಕರ ನಡುವೆ ಮಧ್ಯಸ್ಥಿಕೆ ವಹಿಸುವ ವ್ಯಕ್ತಿಗಳು. |
ಯಾರಿಂದಲೂ ನೇಮಕಗೊಂಡಿಲ್ಲ | ಥರ್ಡ್ ಪಾರ್ಟಿಯಿಂದ ನೇಮಕಗೊಂಡಿದ್ದು, ಇದು ಯಾವುದೇ ಇನ್ಶೂರೆನ್ಸ್ ಕಂಪನಿಗೆ ಸಂಬಂಧಿಸಿಲ್ಲ | ವೈಯಕ್ತಿಕ ಇನ್ಶೂರೆನ್ಸ್ ಕಂಪನಿಗಳು ಬ್ರೋಕರ್‌ಗಳನ್ನು ನೇಮಿಸಿಕೊಳ್ಳುತ್ತವೆ. |
ಪಾತ್ರ - ಗುಣಮಟ್ಟದ ಇನ್ಶೂರೆನ್ಸ್ ಪಾಲಿಸಿಗಳನ್ನು ಒದಗಿಸಲು, ಇನ್ಶೂರೆನ್ಸ್ ಹೊಂದಿದ ಆಸ್ತಿಯು ಅಪಘಾತ ಮತ್ತು ಹಾನಿಗಳಿಗೆ ಒಳಗಾದಾಗ, ಪಾಲಿಸಿದಾರರಿಗೆ ಪರಿಹಾರವನ್ನು ನೀಡುತ್ತದೆ. | ಪಾತ್ರ - ಹೋಲಿಕೆ ಉದ್ದೇಶಗಳಿಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಇನ್ಶೂರೆನ್ಸ್ ಪಾಲಿಸಿಗಳಿಗೆ ಸಂಬಂಧಿಸಿದ, ಎಲ್ಲಾ ಸಂಬಂಧಿತ ಮಾಹಿತಿಯನ್ನು ಪಟ್ಟಿ ಮಾಡುತ್ತದೆ ಮತ್ತು ವಿವರಿಸುತ್ತದೆ. | ಪಾತ್ರ - ಬ್ರೋಕರ್‌ಗಳು ತಮ್ಮನ್ನು ನೇಮಿಸಿಕೊಂಡ ಇನ್ಶೂರೆನ್ಸ್ ಪೂರೈಕೆದಾರರ ಪರವಾಗಿ, ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡುತ್ತಾರೆ. |
ಎಲ್ಲಾ ಇನ್ಶೂರೆನ್ಸ್ ಪಾಲಿಸಿ ಕ್ಲೈಮ್‌ಗಳನ್ನು ಇನ್ಶೂರೆನ್ಸ್ ಪೂರೈಕೆದಾರರು ಅಥವಾ ಕಂಪನಿಗಳು ಇತ್ಯರ್ಥಗೊಳಿಸುತ್ತವೆ. | NA | NA |
ಕಾರ್ ಇನ್ಶೂರೆನ್ಸ್ ಕಂಪನಿಯಲ್ಲಿ ಗಮನಿಸಬೇಕಾದ ಅಂಶಗಳು
ನಿಮ್ಮ ಅಗತ್ಯಕ್ಕೆ ಇದು ಸೂಕ್ತವಾಗಿದೆಯೇ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಕೆಳಗೆ ತಿಳಿಸಲಾಗಿರುವ ಇನ್ಶೂರೆನ್ಸ್ ಕಂಪನಿಯ ಗುಣಲಕ್ಷಣಗಳನ್ನು ಗಮನಿಸಿ:
ಬ್ರ್ಯಾಂಡ್‌ನ ಖ್ಯಾತಿ - ಇಂದು ಇದನ್ನು ಅಳೆಯುವುದು ಸುಲಭ, ಇಂಟರ್ನೆಟ್‌ಗೆ ಧನ್ಯವಾದಗಳು. ಪ್ರಶ್ನೆಯಲ್ಲಿರುವ ಇನ್ಶೂರೆನ್ಸ್ ಪೂರೈಕೆದಾರರ ಆನ್‌ಲೈನ್ ಸರ್ಚ್ ಅನ್ನು ನೀವು ಸರಳವಾಗಿ ಮಾಡಬಹುದು ಮತ್ತು ಪಬ್ಲಿಕ್ ರಿವ್ಯೂ ವಿಭಾಗವನ್ನು ಸಹ ಪರಿಶೀಲಿಸಬಹುದು. ಪ್ರಸ್ತುತ ಪಾಲಿಸಿದಾರರು ತಮ್ಮ ಆಯ್ಕೆಗಳೊಂದಿಗೆ ಸಂತೋಷವಾಗಿದ್ದಾರೆಯೇ ಎಂಬುದನ್ನು ನಿರ್ಣಯಿಸಲು ಇದು ನಿಮಗೆ ಸಹಾಯ ಮಾಡುತ್ತದೆ.
ಐ.ಆರ್.ಡಿ.ಎ.ಐ(IRDAI) ನಿಂದ ಅನುಮೋದಿಸಲ್ಪಡಬೇಕು - ಇನ್ಶೂರೆನ್ಸ್ ರೆಗ್ಯುಲೇಟರಿ ಮತ್ತು ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ ಅಥವಾ ಐ.ಆರ್.ಡಿ.ಎ.ಐ ದೇಶದ ಇನ್ಶೂರೆನ್ಸ್ ಕ್ಷೇತ್ರದ ಮೇಲ್ವಿಚಾರಣೆ ಮತ್ತು ಅಭಿವೃದ್ಧಿಗೆ ಕಾರಣವಾಗಿದೆ. ಈ ಕೇಂದ್ರೀಯ ಸಂಸ್ಥೆಯಲ್ಲಿ ರಿಜಿಸ್ಟರ್ ಮಾಡಿರುವ ಕಂಪನಿಗಳು, ಇನ್ಶೂರೆನ್ಸ್ ಕ್ಲೈಮ್‌ಗಳೊಂದಿಗೆ ವ್ಯವಹರಿಸುವಾಗ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹೆಚ್ಚುವರಿಯಾಗಿ, ಮೋಸದ ಚಟುವಟಿಕೆಗಳಿಗೆ ಯಾವುದೇ ಅವಕಾಶಗಳಿಲ್ಲದ ಕಾರಣ ರಿಜಿಸ್ಟರ್ಡ್ ಕಂಪನಿಯನ್ನು ಆಯ್ಕೆ ಮಾಡುವುದು ಸುರಕ್ಷಿತವಾಗಿದೆ.
ಕಾರ್ ಇನ್ಶೂರೆನ್ಸ್ ಪ್ರೀಮಿಯಮ್‌ಗಳು - ನಿಮ್ಮ ಕಾರಿಗೆ ಸಂಭವಿಸುವ ಅಪಘಾತ ಅಥವಾ ಕಾರಿನ ಕಳ್ಳತನದ ಸಂದರ್ಭದಲ್ಲಿ ಹಣಕಾಸಿನ ಭದ್ರತೆ ಮುಖ್ಯವಾಗಿದ್ದರೂ ಸಹ, ನಿಮ್ಮ ವಾರ್ಷಿಕ ಕಾರ್ ಇನ್ಶೂರೆನ್ಸ್ ಪ್ರೀಮಿಯಮ್‌ಗಳಲ್ಲಿ ಮಾತ್ರ ನೀವು ಹೆಚ್ಚು ಹೂಡಿಕೆ ಮಾಡಬಹುದು. ಇನ್ಶೂರೆನ್ಸ್ ಅಗ್ರಿಗೇಟರ್ ಪೋರ್ಟಲ್‌ಗಳು ವಿವಿಧ ಕಂಪನಿಗಳ ಉತ್ಪನ್ನಗಳ ನಡುವಿನ ಬೆಲೆಯನ್ನು ಹೋಲಿಸಲು ನಿಮ್ಮನ್ನು ಅನುಮತಿಸುವುದರಿಂದ, ಅಂತಹ ಇನ್ಶೂರೆನ್ಸ್ ಪಾಲಿಸಿಗಳ ಸರಾಸರಿ ಬೆಲೆಯು ನಿಮಗೆ ತಿಳಿಯುವಂತೆ ಮಾಡುತ್ತದೆ.
ಕ್ಲೈಮ್ ಸೆಟ್ಲ್‌ಮೆಂಟ್ ಅನುಪಾತ - ಜನರಲ್ ಇನ್ಶೂರೆನ್ಸ್ ಕಂಪನಿಯ ಕ್ಲೈಮ್ ಸೆಟ್ಲ್‌ಮೆಂಟ್ ಅನುಪಾತವು, ತುರ್ತುಸ್ಥಿತಿಯಲ್ಲಿ ನಿಮ್ಮ ಇನ್ಶೂರೆನ್ಸ್ ಕಂಪನಿಯಿಂದ ಯಾವ ರೀತಿಯ ಬೆಂಬಲವನ್ನು ನಿರೀಕ್ಷಿಸಬಹುದು ಎಂಬುದನ್ನು ಬಹಿರಂಗಪಡಿಸುತ್ತದೆ. ಅಧಿಕ ಕ್ಲೈಮ್ ಸೆಟ್ಲ್‌ಮೆಂಟ್ ಅನುಪಾತವು, ಪಾಲಿಸಿದಾರರು ಮಾಡುವ ಬಹುಪಾಲು ಕ್ಲೈಮ್‌ಗಳನ್ನು ಕಂಪನಿಯು ಇತ್ಯರ್ಥಗೊಳಿಸುತ್ತದೆ ಎಂಬುದನ್ನು ಸೂಚಿಸುತ್ತದೆ. ಕಡಿಮೆ ಕ್ಲೈಮ್ ಸೆಟ್ಲ್‌ಮೆಂಟ್ ಅನುಪಾತವು ಅನಗತ್ಯವಾದುದು ಎಂದು ಹೇಳಬೇಕಿಲ್ಲ.
ನೆಟ್‌ವರ್ಕ್ ಗ್ಯಾರೇಜ್‌ಗಳು - ಪ್ರತಿಯೊಂದು ಇನ್ಶೂರೆನ್ಸ್ ಕಂಪನಿಯು ಆಯ್ದ ಗ್ಯಾರೇಜ್‌ಗಳಲ್ಲಿ ಮತ್ತು ವರ್ಕ್‌ಶಾಪ್‌ಗಳಲ್ಲಿ, ಕ್ಯಾಶ್‌ಲೆಸ್ ರಿಪೇರಿಗೆ ಅವಕಾಶ ನೀಡುತ್ತವೆ. ಅಂತಹ ಹೆಚ್ಚಿನ ಸಂಖ್ಯೆಯ ನೆಟ್‌ವರ್ಕ್ ಗ್ಯಾರೇಜ್‌ಗಳು ನಿಮಗೆ ಹತ್ತಿರವಿರುವ ಯಾವುದಾದರೂ ಒಂದನ್ನು ಹುಡುಕಬಹುದು ಎಂಬುದನ್ನು ಖಚಿತಪಡಿಸುತ್ತವೆ. ಕ್ಯಾಶ್‌ಲೆಸ್ ಔಟ್‌ಲೆಟ್‌ಗಳಿಗೆ ಬಂದಾಗ ಅಪಾರ ಸಂಖ್ಯೆಯ ಆಯ್ಕೆಗಳನ್ನು ಒದಗಿಸುವ ಕಂಪನಿಗಳನ್ನು ಆಯ್ಕೆ ಮಾಡಲು ಶಿಫಾರಸು ಮಾಡಲಾಗಿದೆ.
ತ್ವರಿತ ಮತ್ತು ಅನುಕೂಲಕರ ಕ್ಲೈಮ್ ಪ್ರಕ್ರಿಯೆ - ಕ್ಲೈಮ್ ಸಲ್ಲಿಸಲು ಪ್ರತಿ ಬಾರಿಯೂ ಕಷ್ಟಪಡಲು ಯಾರೂ ಇಷ್ಟಪಡುವುದಿಲ್ಲ. ಆದ್ದರಿಂದ, ಥೇರಿ ಮತ್ತು ಪ್ರಾಕ್ಟೀಸ್ ಎರಡರಲ್ಲೂ ಕ್ಲೈಮ್ ಫೈಲಿಂಗ್ ಹಾಗೂ ಸೆಟ್ಲ್‌ಮೆಂಟ್ ಪ್ರಕ್ರಿಯೆಯನ್ನು ಅನುಸರಿಸಲು ಸರಳವಾಗಿರುವ ವಿಮಾದಾರರನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ, ಡಿಜಿಟಲ್ ಕ್ಲೈಮ್ ಸೆಟ್ಲ್‌ಮೆಂಟ್ ಪ್ರಕ್ರಿಯೆಯನ್ನು ನೀಡುವ ಕಂಪನಿಗಳು, ಪ್ರಕ್ರಿಯೆಯನ್ನು ವ್ಯವಸ್ಥಿತಗೊಳಿಸಲು ಅತ್ಯಂತ ಸಹಾಯಕವಾಗಬಹುದು.
ನೀವು ಆಯ್ಕೆ ಮಾಡಿದ ಕಂಪನಿಯ ಹೊರತಾಗಿಯೂ, ಇನ್ಶೂರೆನ್ಸ್‌ಗಾಗಿ ನೀವು ನಿಮ್ಮ ಕಾರ್ ಡೀಲರ್‌ಶಿಪ್‌ನ ಮೇಲೆ ಅವಲಂಬಿತವಾಗುವ ಬದಲು, ಕಂಪನಿಯಿಂದಲೇ ನೇರವಾಗಿ ನಿಮ್ಮ ಪಾಲಿಸಿಯನ್ನು ಖರೀದಿಸುವುದು ಒಳ್ಳೆಯದು.
ಏಕೆಯೆಂದು ನೀವು ಕೇಳುತ್ತೀರಿ?
ಡೈರೆಕ್ಟ್ ಇನ್ಶೂರೆನ್ಸ್ ಪೂರೈಕೆದಾರರಿಂದ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?
ಹೆಚ್ಚಿನ ಜನರು ಕಾರ್ ಇನ್ಶೂರೆನ್ಸ್ ಅನ್ನು ತಮ್ಮ ಕಾರ್ ಡೀಲರ್‌ಶಿಪ್‌ನಿಂದ ಖರೀದಿಸಲು ಆಸಕ್ತಿ ತೋರುತ್ತಾರೆ. ಆದಾಗ್ಯೂ, ನೀವು ಹಾಗೆ ಮಾಡುವುದರಿಂದ ನಿಮಗೆ ಆರ್ಥಿಕವಾಗಿ ಹಿನ್ನಡೆಯಾಗಬಹುದು ಮತ್ತು ನಿಮ್ಮನ್ನು ಇನ್ಶೂರೆನ್ಸ್ ಪಾಲಿಸಿಯ ಸಂಪೂರ್ಣ ಪ್ರಯೋಜನಗಳ ಬಳಕೆಯಿಂದ ತಡೆಯಬಹುದು.
ಇನ್ಶೂರೆನ್ಸ್ ಕಂಪನಿಯಿಂದ ನೇರವಾಗಿ ಪಾಲಿಸಿಯನ್ನು ಖರೀದಿಸುವುದು ಉತ್ತಮವಾದ ಕ್ರಮವೆನ್ನಲು ಕೆಲವು ಕಾರಣಗಳು ಇಲ್ಲಿವೆ:
ಇನ್ಶೂರೆನ್ಸ್ ಪಾಲಿಸಿಗಳನ್ನು ಕಸ್ಟಮೈಸ್ ಮಾಡುವ ಸಾಮರ್ಥ್ಯ- ಕಾರ್ ಡೀಲರ್‌ಗಳು ಸಾಮಾನ್ಯವಾಗಿ ಫೀಚರ್‌ಗಳ ಸೆಟ್‌ನೊಂದಿಗೆ ಬರುವ ಪ್ರೀ-ಪ್ಯಾಕೇಜ್ಡ್ ಇನ್ಸೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡುತ್ತಾರೆ. ಆದ್ದರಿಂದ, ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಪಾಲಿಸಿಯನ್ನು ಕಸ್ಟಮೈಸ್ ಮಾಡುವ ನಿಮ್ಮ ಸಾಮರ್ಥ್ಯವು ಬಹುತೇಕ ಅಸಾಧ್ಯವಾಗಿದೆ.
ವೈವಿಧ್ಯಮಯ ಶ್ರೇಣಿಯ ಆಯ್ಕೆಗಳು - ಕಾರ್ ಡೀಲರ್‌ಗಳು ಸಾಮಾನ್ಯವಾಗಿ ಕೆಲವೇ ಕೆಲವು ಇನ್ಶೂರೆನ್ಸ್ ಪೂರೈಕೆದಾರರೊಂದಿಗೆ ಸಹಯೋಗವನ್ನು ಹೊಂದಿರುತ್ತಾರೆ. ನೀವು ಅವರಿಂದ ಖರೀದಿಸಿದಾಗ, ನೀವು ಆ ಕಂಪನಿಗಳ ಪಾಲಿಸಿಯನ್ನು ಮಾತ್ರವೇ ಆಯ್ಕೆ ಮಾಡಲು ಸೀಮಿತವಾಗುತ್ತೀರಿ ಹೊರತು, ಮಾರುಕಟ್ಟೆಯಲ್ಲಿರುವ ಇತರ ಕಂಪನಿಗಳನ್ನು ಆಯ್ಕೆ ಮಾಡಲು ಸಾಧ್ಯವಾಗುವುದಿಲ್ಲ.
ಯಾವುದೇ ಹೆಚ್ಚುವರಿ ಪ್ರೀಮಿಯಂ ಪಾವತಿಗಳಿಲ್ಲ - ಕಾರ್ ಡೀಲರ್‌ಶಿಪ್‌ಗಳು ಕಮಿಷನ್ ಆಧಾರದ ಮೇಲೆ ಇನ್ಶೂರೆನ್ಸ್ ಕಂಪನಿಗಳೊಂದಿಗೆ ಕೆಲಸ ಮಾಡುತ್ತವೆ. ಇದರರ್ಥ ನೀವು ಅವರಿಂದ ಒಂದು ನಿರ್ದಿಷ್ಟ ದರದಲ್ಲಿ ಪಾಲಿಸಿಯನ್ನು ಖರೀದಿಸಿದಾಗ, ಆ ಮೊತ್ತದ ಒಂದು ಭಾಗವು ಡೀಲರ್‌ಶಿಪ್‌ನ ಪಾಕೆಟ್ ಸೇರುತ್ತದೆ. ಕಂಪನಿಗಳಿಂದ ನೇರವಾಗಿ ಖರೀದಿ ಮಾಡುವುದರಿಂದ, ನೀವು ಆಯ್ಕೆಮಾಡಿದ ಪಾಲಿಸಿಯ ನಿಜವಾದ ಬೆಲೆಯನ್ನಷ್ಟೆ ನೀವು ಪಾವತಿಸುತ್ತೀರಿ ಮತ್ತು ಹೆಚ್ಚುವರಿ ಏನನ್ನೂ ನೀಡುವುದಿಲ್ಲ.
ಹೋಲಿಕೆ ಮತ್ತು ಸಂಶೋಧನೆ - ವಿವಿಧ ಪಾಲಿಸಿಗಳನ್ನು ಹೋಲಿಕೆ ಮಾಡಿ ನೋಡುವ ಪ್ರಯೋಜನಗಳಿಗೆ ಡೀಲರ್‌ಶಿಪ್‌ಗಳು ನಿಮ್ಮನ್ನು ಅನುಮತಿಸುವುದಿಲ್ಲ. ಹೋಲಿಕೆ ಮಾಡದೇ, ನೀವು ಎಂದಿಗೂ ಹೆಚ್ಚಿನ ಮೌಲ್ಯದ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಲು ಸಾಧ್ಯವಿಲ್ಲ.
ಆದ್ದರಿಂದ, ನೀವು ಅವುಗಳನ್ನು ಹೋಲಿಸುವಾಗ ನೀವು ಪರಿಗಣಿಸುವ ಇನ್ಶೂರೆನ್ಸ್ ಪಾಲಿಸಿಯ ಪ್ರತಿಯೊಂದು ನಿಯಮಗಳು ಮತ್ತು ಷರತ್ತುಗಳನ್ನು ಓದಬೇಕು. ನೀವು ಪಾಲಿಸಿಯನ್ನು ನಿಶ್ಚಯಿಸುವ ಮೊದಲು ಅದರ ಸಕಾರಾತ್ಮಕ ಅಂಶಗಳನ್ನು ಮೀರಿ ನೋಡಲು ಉತ್ತಮ ಪ್ರಿಂಟ್ ನಿಮಗೆ ಸಹಾಯ ಮಾಡುತ್ತದೆ.
ಏಕೆ ಕೇಳುವೆ?
ನೀವು ಡಿಜಿಟ್ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?
ಪದೇಪದೇ ಕೇಳಲಾದ ಪ್ರಶ್ನೆಗಳು
ಭಾರತದಲ್ಲಿ ಅತ್ಯುತ್ತಮ ಕಾರ್ ಇನ್ಶೂರೆನ್ಸ್ ಕಂಪನಿ ಯಾವುದು?
ಕಾರ್ ಇನ್ಶೂರೆನ್ಸ್ ಅವಶ್ಯಕತೆಗಳು ಒಬ್ಬರಿಂದ ಮತ್ತೊಬ್ಬರಿಗೆ ಭಿನ್ನವಾಗಿರುತ್ತವೆ. ಆದ್ದರಿಂದ, ನಿಮಗಾಗಿ ಸರಿಯೆನಿಸುವ ಪಾಲಿಸಿಯು ಇತರರಿಗೆ ಸೂಕ್ತವಾಗದಿರಬಹುದು. ಅತ್ಯುತ್ತಮ ಇನ್ಶೂರೆನ್ಸ್ ಪೂರೈಕೆದಾರರನ್ನು ಹುಡುಕುವ ಬದಲು, ಅದ್ಭುತ ಹಿನ್ನೆಲೆ, ಖ್ಯಾತಿ, ಕ್ಲೈಮ್ ಸೆಟ್ಲ್‌ಮೆಂಟ್ ಅನುಪಾತ ಮತ್ತು ಕ್ಯಾಶ್‌ಲೆಸ್ ನೆಟ್‌ವರ್ಕ್ ಹೊಂದಿರುವ ಕಂಪನಿಗಳನ್ನು ನೀವು ಹುಡುಕಬೇಕು
ಕಾರ್ ಇನ್ಶೂರೆನ್ಸ್ ಪಾಲಿಸಿ ಅಥವಾ ಪೂರೈಕೆದಾರರನ್ನು ಆಯ್ಕೆಮಾಡುವಾಗ ಕ್ಲೈಮ್ ಸೆಟ್ಲ್‌ಮೆಂಟ್ ಅನುಪಾತದ ಪ್ರಾಮುಖ್ಯತೆ ಏನು?
ಕ್ಲೈಮ್ ಸೆಟ್ಲ್‌ಮೆಂಟ್ ಅನುಪಾತವು ಇನ್ಶೂರೆನ್ಸ್ ಕಂಪನಿಯು ಪಡೆಯುವ ಒಟ್ಟು ಕ್ಲೈಮ್‌ಗಳ ಹೋಲಿಕೆ ಮತ್ತು ಅವುಗಳಲ್ಲಿ ಇತ್ಯರ್ಥಗೊಳ್ಳುವ ಕ್ಲೈಮ್‌ಗಳ ಸಂಖ್ಯೆಯನ್ನು ಸೂಚಿಸುತ್ತದೆ. ಹೆಚ್ಚಿನ ಅನುಪಾತಗಳು, ವಿಮಾದಾರರು ನಿಜವಾದ ಕ್ಲೈಮ್‌ಗಳನ್ನು ಇತ್ಯರ್ಥಪಡಿಸುವ ಸಾಧ್ಯತೆಯಿದೆ ಎನ್ನುವುದನ್ನು ಸೂಚಿಸುತ್ತದೆ. ಮತ್ತೊಂದೆಡೆ, ಕಡಿಮೆ ಕ್ಲೈಮ್ ಇತ್ಯರ್ಥದ ಅಂಕಿ ಅಂಶವು ಕಟ್ಟುನಿಟ್ಟಾದ ಪ್ರಕ್ರಿಯೆಯನ್ನು ಸೂಚಿಸುತ್ತದೆ, ಅದು ಕ್ಲೈಮ್‌ಗಳನ್ನು ಇತ್ಯರ್ಥಗೊಳಿಸಲು ಕಷ್ಟವಾಗಿಸುತ್ತದೆ.
ಐ.ಆರ್.ಡಿ.ಎ.ಐ(IRDAI) ಅಡಿಯಲ್ಲಿ ರಿಜಿಸ್ಟರ್ಡ್ ಆಗದ ಕಂಪನಿಯಿಂದ ಕಾರ್ ಇನ್ಶೂರೆನ್ಸ್ ಖರೀದಿಸುವುದರಿಂದ ಉಂಟಾಗುವ ಅಪಾಯಗಳೇನು?
ಐ.ಆರ್.ಡಿ.ಎ.ಐ ಒಟ್ಟಾರೆಯಾಗಿ ಇನ್ಶೂರೆನ್ಸ್ ವಲಯದ ಅಭಿವೃದ್ಧಿ ಮತ್ತು ಪಾಲಿಸಿಗಳನ್ನು ಅನುಸರಿಸುತ್ತದೆ. ಈ ಸರ್ಕಾರಿ ಸಂಸ್ಥೆಯೊಂದಿಗೆ ಸರಿಯಾದ ರಿಜಿಸ್ಟ್ರೇಷನ್ ಇಲ್ಲದೆ ಕಾರ್ಯನಿರ್ವಹಿಸುವ ಯಾವುದೇ ಇನ್ಶೂರೆನ್ಸ್ ಪೂರೈಕೆದಾರರು, ತಮ್ಮದೇ ಆದ ಮಾರ್ಗಸೂಚಿಗಳಿಗೆ ಬದ್ಧವಾಗಿರಲು ಸ್ವತಂತ್ರವಾಗಿವೆ. ಅಂತಹ ಕಂಪನಿಯು ನಿಮ್ಮ ಹಣದಿಂದ ವಂಚನೆ ಅಥವಾ ಇತರ ಕಾನೂನುಬಾಹಿರ ಚಟುವಟಿಕೆಯನ್ನು ಸಹ ಮಾಡಬಹುದು, ಅಲ್ಲದೇ ಅದಕ್ಕೆ ಪ್ರತಿಯಾಗಿ ಸಾಲದಿರುವಷ್ಟು ಹಣಕಾಸಿನ ಕವರೇಜ್ ಅನ್ನು ನೀಡಬಹುದು. ಹೀಗಾಗಿ, ಐ.ಆರ್.ಡಿ.ಎ.ಐ ಅಡಿಯಲ್ಲಿ ರಿಜಿಸ್ಟರ್ಡ್ ಆಗಿರುವ ಮತ್ತು ಅಧಿಕೃತ ಕಾರ್ ಇನ್ಶೂರೆನ್ಸ್ ಪಾಲಿಸಿಗಳಿಂದ ಮಾತ್ರವೇ ಖರೀದಿಸುವುದು ಯಾವಾಗಲೂ ಉತ್ತಮವಾಗಿದೆ.
ಕಾರ್ ಇನ್ಶೂರೆನ್ಸ್ ಅನ್ನು ಕಾರ್ ಡೀಲರ್‌ಶಿಪ್‌ಗಳಿಂದ ಖರೀದಿಸಿದಾಗ ಏಕೆ ದುಬಾರಿಯಾಗಿರುತ್ತದೆ?
ಡೀಲರ್‌ಶಿಪ್‌ಗಳು ಅವರು ಮಾರಾಟ ಮಾಡಲು ಸಾಧ್ಯವಾಗುವ ಪ್ರತಿ ಇನ್ಶೂರೆನ್ಸ್ ಪಾಲಿಸಿಯ ಮೇಲೆ ಒಂದು ನಿರ್ದಿಷ್ಟ ಕಮಿಷನ್ ಅನ್ನು ಗಳಿಸುತ್ತಾರೆ. ಕಾರ್ ಡೀಲರ್‌ಶಿಪ್‌ನಿಂದ ಖರೀದಿಸುವಾಗ ಅಂತಹ ಪಾಲಿಸಿಗಾಗಿ ನೀವು ಪಾವತಿಸುವ ವಾರ್ಷಿಕ ಪ್ರೀಮಿಯಂಗೆ ಈ ಕಮಿಷನ್ ಮೊತ್ತವನ್ನು ಸೇರಿಸಲಾಗುತ್ತದೆ. ಇನ್ಶೂರೆನ್ಸ್ ಪೂರೈಕೆದಾರರಿಂದ ನೇರವಾಗಿ ಪಾಲಿಸಿಗಳನ್ನು ಖರೀದಿಸುವುದು ನಿಮಗೆ ಪ್ರಯೋಜನಕಾರಿಯಾಗಲು ಇದು ಮತ್ತೊಂದು ಕಾರಣವಾಗಿದೆ. ಹೀಗೆ ಮಾಡುವುದರಿಂದ ನಿಮ್ಮ ಹಣವನ್ನು ಗಣನೀಯವಾಗಿ ಉಳಿಸಬಹುದು.ಡೀಲರ್‌ಶಿಪ್‌ಗಳು ಅವರು ಮಾರಾಟ ಮಾಡಲು ಸಾಧ್ಯವಾಗುವ ಪ್ರತಿ ಇನ್ಶೂರೆನ್ಸ್ ಪಾಲಿಸಿಯ ಮೇಲೆ ಒಂದು ನಿರ್ದಿಷ್ಟ ಕಮಿಷನ್ ಅನ್ನು ಗಳಿಸುತ್ತಾರೆ. ಕಾರ್ ಡೀಲರ್‌ಶಿಪ್‌ನಿಂದ ಖರೀದಿಸುವಾಗ ಅಂತಹ ಪಾಲಿಸಿಗಾಗಿ ನೀವು ಪಾವತಿಸುವ ವಾರ್ಷಿಕ ಪ್ರೀಮಿಯಂಗೆ ಈ ಕಮಿಷನ್ ಮೊತ್ತವನ್ನು ಸೇರಿಸಲಾಗುತ್ತದೆ. ಇನ್ಶೂರೆನ್ಸ್ ಪೂರೈಕೆದಾರರಿಂದ ನೇರವಾಗಿ ಪಾಲಿಸಿಗಳನ್ನು ಖರೀದಿಸುವುದು ನಿಮಗೆ ಪ್ರಯೋಜನಕಾರಿಯಾಗಲು ಇದು ಮತ್ತೊಂದು ಕಾರಣವಾಗಿದೆ. ಹೀಗೆ ಮಾಡುವುದರಿಂದ ನಿಮ್ಮ ಹಣವನ್ನು ಗಣನೀಯವಾಗಿ ಉಳಿಸಬಹುದು.