ಆನ್ಲೈನ್ ಜಿಎಸ್ಟಿ ಕ್ಯಾಲ್ಕುಲೇಟರ್
ಜಿಎಸ್ಟಿಯ ವಿಧ
ನಿವ್ವಳ ಬೆಲೆ
ಲಾಭದ ಅನುಪಾತ
ಜಿಎಸ್ಟಿ
ಭಾರತದಲ್ಲಿ ಜಿಎಸ್ಟಿ ಅನ್ನು ಆನ್ಲೈನ್ನಲ್ಲಿ ಲೆಕ್ಕಾಚಾರ ಮಾಡಿ
2017 ರಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಅನ್ನು ಪರಿಚಯಿಸಿದಾಗಿನಿಂದ, ಉತ್ಪನ್ನ/ಸೇವೆಯ ಅಂತಿಮ ಬೆಲೆಯನ್ನು ಲೆಕ್ಕಾಚಾರ ಮಾಡುವುದು ಗ್ರಾಹಕರ ಜವಾಬ್ದಾರಿಯಾಗಿದೆ. ಜಿಎಸ್ಟಿ ಬಹು-ಹಂತದ ಎಲ್ಲವನ್ನು ಒಳಗೊಂಡ ತೆರಿಗೆಯಾಗಿದ್ದು, ಈ ಹಿಂದೆ ವಿಭಜಿಸಲಾದ ಎಲ್ಲಾ ಪರೋಕ್ಷ ತೆರಿಗೆಗಳನ್ನು ಒಳಗೊಂಡಿದೆ.
ಆದಾಗ್ಯೂ, ಬಿಗಿಯಾದ ಬಜೆಟ್ನಲ್ಲಿ ಊಟಕ್ಕೆ ಹೋಗುವುದನ್ನು ಕಲ್ಪಿಸಿಕೊಳ್ಳಿ ಮತ್ತು ಅದು ಬರುವವರೆಗೆ ನಿಮ್ಮ ಬಿಲ್ ಮೊತ್ತವನ್ನು ಅಳೆಯಲು ಸಾಧ್ಯವಾಗುವುದಿಲ್ಲ. ನಮ್ಮಲ್ಲಿ ಯಾರೂ ಆ ರೀತಿಯ ಆತಂಕವನ್ನು ಬಯಸುವುದಿಲ್ಲವಾದ್ದರಿಂದ, ಈ ಸಮಯದಲ್ಲಿ ಆನ್ಲೈನ್ ಜಿಎಸ್ಟಿ ಕ್ಯಾಲ್ಕುಲೇಟರ್ ಬಳಕೆಗೆ ಬರುತ್ತದೆ. ಈ ಪ್ರಯೋಜನಕಾರಿ ಸಾಧನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ಲೇಖನ ಓದಿ.
ಜಿಎಸ್ಟಿ ಕ್ಯಾಲ್ಕುಲೇಟರ್ ಎಂದರೇನು?
ಆನ್ಲೈನ್ ಜಿಎಸ್ಟಿ ತೆರಿಗೆ ಕ್ಯಾಲ್ಕುಲೇಟರ್ ಒಂದು ಅವಧಿಗೆ ಅಥವಾ ಉತ್ಪನ್ನ/ಸೇವೆಗೆ ಪಾವತಿಸಬೇಕಾದ ಒಟ್ಟು ಜಿಎಸ್ಟಿ ಯನ್ನು ತ್ವರಿತವಾಗಿ ನಿರ್ಧರಿಸುವ ಒಂದು ಸುಲಭ ಮಾರ್ಗವಾಗಿದೆ. ಈ ಆನ್ಲೈನ್ ಪರಿಕರವು 3 ಕಾರ್ಯಾಚರಣೆಯ ವಿಧಾನಗಳೊಂದಿಗೆ ಬರುತ್ತದೆ, ಪ್ರತಿಯೊಬ್ಬ ಖರೀದಿದಾರನಿಗೆ, ತಯಾರಕನಿಗೆ ಮತ್ತು ಚಿಲ್ಲರೆ ವ್ಯಾಪಾರಿ/ಸಗಟು ಮಾರಾಟಗಾರರಿಗೆ. ಈ ಪ್ರತಿಯೊಂದು ರೂಪಾಂತರಗಳು ವಿಭಿನ್ನ ಆಯ್ಕೆಗಳೊಂದಿಗೆ ಬರುತ್ತದೆ.
- ಖರೀದಿದಾರರು ಕ್ಯಾಲ್ಕುಲೇಟರ್ ನಲ್ಲಿ ಉತ್ಪನ್ನದ ಬೆಲೆ ಮತ್ತು ಜಿಎಸ್ಟಿ ದರವನ್ನು ನಮೂದಿಸಬೇಕಾಗುತ್ತದೆ.
- ತಯಾರಕರು ತಮ್ಮ ಉತ್ಪನ್ನದ ವೆಚ್ಚ, ಲಾಭದ ಶೇಕಡಾವಾರು ಮತ್ತು ಜಿಎಸ್ಟಿ ದರವನ್ನು ನಮೂದಿಸಬೇಕಾಗುತ್ತದೆ.
- ಸಗಟು ವ್ಯಾಪಾರಿಗಳು ಅಥವಾ ಚಿಲ್ಲರೆ ವ್ಯಾಪಾರಿಗಳು ಸರಕುಗಳ ಒಟ್ಟು ವೆಚ್ಚ, ಲಾಭದ ಅನುಪಾತ ಮತ್ತು ಜಿಎಸ್ಟಿ ದರವನ್ನು ನಮೂದಿಸಬೇಕಾಗುತ್ತದೆ.
ಈ ಪ್ರತಿಯೊಬ್ಬ ಬಳಕೆದಾರರು ತೆರಿಗೆ, ಒಟ್ಟು ತೆರಿಗೆ ಮತ್ತು ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿ/ಐಜಿಎಸ್ಟಿ ಗೆ ಈ ತೆರಿಗೆಯ ವಿಭಜನೆ ಸೇರಿದಂತೆ ಅಂತಿಮ ಬೆಲೆಗೆ ಫಲಿತಾಂಶಗಳನ್ನು ಪಡೆಯುತ್ತಾರೆ.
ಈ ಪರಿಣಾಮಕಾರಿ ಆನ್ಲೈನ್ ಟೂಲ್ ನಿಮಗೆ ಈಗಷ್ಟೇ ಪರಿಚಿತವಾಗಿದ್ದರೆ, ಅದನ್ನು ಹೇಗೆ ಬಳಸಬೇಕು ಎಂಬುದನ್ನು ನೀವು ತಿಳಿದುಕೊಳ್ಳಲೇಬೇಕು.
ನೀವು ಆನ್ಲೈನ್ ಜಿಎಸ್ಟಿ ಕ್ಯಾಲ್ಕುಲೇಟರ್ ಅನ್ನು ಏಕೆ ಬಳಸಬೇಕು?
ಆನ್ಲೈನ್ ಜಿಎಸ್ಟಿ ಕ್ಯಾಲ್ಕುಲೇಟರ್ ಟೂಲ್ನಿಂದ ನೀವು ಹೇಗೆ ಪ್ರಯೋಜನ ಪಡೆಯಬಹುದು ಎಂಬುದು ಇಲ್ಲಿದೆ.
- ಇದು ಬಳಸಲು ಸುಲಭವಾಗಿದ್ದು, ತ್ವರಿತ ಫಲಿತಾಂಶಗಳನ್ನು ಒದಗಿಸುವ ಮೂಲಕ ಸಮಯವನ್ನು ಉಳಿಸುತ್ತದೆ.
- ಹಸ್ತಚಾಲಿತದಿಂದ ಉಂಟಾಗುವ ಲೆಕ್ಕಾಚಾರದ ತಪ್ಪುಗಳನ್ನುಈ ಆನ್ಲೈನ್ ಕ್ಯಾಲ್ಕುಲೇಟರ್ ತಡೆದು ನಿಖರವಾದ ಫಲಿತಾಂಶಗಳನ್ನು ನೀಡುತ್ತದೆ.
- ತೆರಿಗೆದಾರರು ಸಿಜಿಎಸ್ಟಿ , ಎಸ್ಜಿಎಸ್ಟಿ ಮತ್ತು ಐಜಿಎಸ್ಟಿ ಗಳ ವೈಯಕ್ತಿಕ ಮೊತ್ತವನ್ನು ನಿಖರವಾಗಿ ನಿರ್ಧರಿಸಬಹುದು, ಇದನ್ನು ಜಿಎಸ್ಟಿ ತೆರಿಗೆ ಲೆಕ್ಕಾಚಾರದ ಸೂತ್ರವನ್ನು ಬಳಸಿಕೊಂಡು ಹಸ್ತಚಾಲಿತವಾಗಿ ಲೆಕ್ಕಾಚಾರ ಮಾಡಲಾಗುವುದಿಲ್ಲ.
- ನೀವು ಆಯ್ಕೆಮಾಡಿದ ವಸ್ತುವಿನ ಒಟ್ಟು ಬೆಲೆಯನ್ನು ಸಹ ನೀವು ಅಂದಾಜು ಮಾಡಬಹುದು.
ಒಮ್ಮೆ ನೀವು ನಿಮ್ಮ ತೆರಿಗೆಗಳನ್ನು ಅರ್ಥಮಾಡಿಕೊಂಡರೆ ಮತ್ತು ಜಿಎಸ್ಟಿ ಅಡಿಯಲ್ಲಿ ಅಂತಹ ಖರೀದಿಗಳ ಎಲ್ಲಾ ವಿವರಗಳನ್ನು ಹೊಂದಿದ್ದರೆ, ನಿಮ್ಮ ಜಿಎಸ್ಟಿ ರಿಟರ್ನ್ಗಳನ್ನು ನಿಗದಿತ ದಿನಾಂಕದೊಳಗೆ ಸಲ್ಲಿಸಲು ಖಚಿತಪಡಿಸಿಕೊಳ್ಳಿ. ಇದನ್ನು ಅನುಸರಿಸದೇ ಇದ್ದಲ್ಲಿ ನಿಮಗೆ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತದೆ.
ಆನ್ಲೈನ್ ಜಿಎಸ್ಟಿ ಕ್ಯಾಲ್ಕುಲೇಟರ್ ಬಳಸಿ ಜಿಎಸ್ಟಿ ಮೊತ್ತವನ್ನು ಲೆಕ್ಕಾಚಾರ ಮಾಡುವುದು ಹೇಗೆ?
ಜಿಎಸ್ಟಿ ಯನ್ನು ಆನ್ಲೈನ್ನಲ್ಲಿ ಲೆಕ್ಕಾಚಾರ ಮಾಡುವುದು ಅತ್ಯಂತ ಸುಲಭ ಪ್ರಕ್ರಿಯೆಯಾಗಿದೆ. ಆದಾಗ್ಯೂ, ಲೆಕ್ಕಾಚಾರ ಪ್ರಕ್ರಿಯೆಯೊಂದಿಗೆ ಮುಂದುವರಿಯುವ ಮೊದಲು, ವಿವಿಧ ವರ್ಗಗಳ ಉತ್ಪನ್ನಗಳು/ಸೇವೆಗಳಿಗೆ ಅನ್ವಯವಾಗುವ ಜಿಎಸ್ಟಿ ದರಗಳ ಕಲ್ಪನೆಯನ್ನು ನೀವು ಹೊಂದಿರಬೇಕು.
ಹೊಸ ತೆರಿಗೆ ರಚನೆಯ ಅಡಿಯಲ್ಲಿ ಜಿಎಸ್ಟಿ ದರ ಸ್ಲ್ಯಾಬ್ಗಳು ಯಾವುವೆಂದರೆ 5%, 12%, 18% ಮತ್ತು 28%. ಒಮ್ಮೆ ನಿಮ್ಮ ಉತ್ಪನ್ನಕ್ಕೆ ಅನ್ವಯವಾಗುವ ದರವನ್ನು ನೀವು ತಿಳಿದಿದ್ದರೆ, ಖರೀದಿದಾರರಾಗಿ ಈ ಹಂತಗಳನ್ನು ಅನುಸರಿಸಿ.
- ಹಂತ 1: ನಿಮಗೆ ಬೇಕಾದ ಸರಕು/ಸೇವೆಗಳ ನಿವ್ವಳ ಬೆಲೆಯನ್ನು ನಮೂದಿಸಿ.
- ಹಂತ 2: ನಿಮಗೆ ಸಂಬಂಧಿಸಿದ ಉತ್ಪನ್ನ/ಸೇವೆ ವರ್ಗಕ್ಕೆ ಅನುಗುಣವಾಗಿ ಸೂಕ್ತವಾದ ಜಿಎಸ್ಟಿ ದರವನ್ನು ನಮೂದಿಸಿ. ನೀವು ಹೆಚ್.ಎಸ್.ಎನ್ ಅಥವಾ ಎಸ್ಎಸಿ ಕೋಡ್ ಅನ್ನು ಬಳಸಿಕೊಂಡು ಅನ್ವಯವಾಗುವ ಜಿಎಸ್ಟಿ ದರವನ್ನು ಕಂಡುಹಿಡಿಯಬಹುದು.
- ಹಂತ 3: "ಕ್ಯಾಲ್ಕುಲೇಟ್" ಮೇಲೆ ಕ್ಲಿಕ್ ಮಾಡಿ.
ತೆರಿಗೆ ಬ್ರೇಕ್ ಡೌನ್ ಗಳನ್ನು ಪ್ರದರ್ಶಿಸುವ ವಿವಿಧ ಸಂಕ್ಷಿಪ್ತ ರೂಪಗಳು ಏನನ್ನು ಸೂಚಿಸುತ್ತವೆ ಎಂಬುದರ ಕುರಿತು ನೀವು ಗೊಂದಲಕ್ಕೊಳಗಾಗಿದ್ದರೆ, ಇಲ್ಲಿ ಅದರ ಸಂಕ್ಷಿಪ್ತ ಅವಲೋಕನವಿದೆ.
ಜಿಎಸ್ಟಿ ಅಡಿಯಲ್ಲಿನ ತೆರಿಗೆಯ ವಿಧಗಳು ಈ ಕೆಳಗಿನಂತಿವೆ:
- ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್ಟಿ ): ಈ ತೆರಿಗೆಯನ್ನು ಸಂಗ್ರಹಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು.
- ಕೇಂದ್ರಾಡಳಿತ ಪ್ರದೇಶದ ಸರಕು ಮತ್ತು ಸೇವಾ ತೆರಿಗೆ (ಯುಟಿಜಿಎಸ್ಟಿ ): ಈ ರೀತಿಯ ಜಿಎಸ್ಟಿ ಅನ್ನು ಕೇಂದ್ರಾಡಳಿತ ಪ್ರದೇಶ ಸರ್ಕಾರವು ಸಂಗ್ರಹಿಸುತ್ತದೆ.
- ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್ ಜಿಎಸ್ಟಿ): ರಾಜ್ಯದೊಳಗೆ ವಹಿವಾಟು ನಡೆದಾಗ ಈ ತೆರಿಗೆ ಅನ್ವಯಿಸುತ್ತದೆ. ಅಂತಹ ತೆರಿಗೆಗಳನ್ನು ಪ್ರತ್ಯೇಕ ರಾಜ್ಯ ಸರ್ಕಾರಗಳು ಸಂಗ್ರಹಿಸುತ್ತವೆ.
- ಸಮಗ್ರ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್ಟಿ): 2 ವಿವಿಧ ರಾಜ್ಯಗಳ ನಡುವೆ ವಹಿವಾಟು ನಡೆಸಿದರೆ, ನಂತರ ಐಜಿಎಸ್ಟಿ ಅನ್ನು ಎಸ್ ಜಿಎಸ್ಟಿ ಬದಲಿಗೆ ಕೇಂದ್ರ ಸರ್ಕಾರ ಸಂಗ್ರಹಿಸುತ್ತದೆ.
ಆನ್ಲೈನ್ ಜಿಎಸ್ಟಿ ಕ್ಯಾಲ್ಕುಲೇಟರ್ ವಿವಿಧ ಹಂತಗಳಲ್ಲಿ ವಿಧಿಸಲಾದ ತೆರಿಗೆಯ ಬಗ್ಗೆ ಸ್ಪಷ್ಟವಾದ ದೃಷ್ಟಿಕೋನವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಇದು ಉತ್ಪನ್ನವು ನಿಮ್ಮನ್ನು ತಲುಪುವವರೆಗಿನ ಲೆಕ್ಕಾಚಾರವನ್ನು ನೀಡುತ್ತದೆ.
ಪ್ರತಿಯೊಬ್ಬ ತೆರಿಗೆದಾರನು ಇದೇ ಪಾರದರ್ಶಕತೆಯನ್ನು ಹಂಬಲಿಸುತ್ತಾನಲ್ಲವೇ?
ಈ ಆನ್ಲೈನ್ ಪರಿಕರದ ಫಲಿತಾಂಶಗಳನ್ನು ಹೇಗೆ ನಿರ್ವಹಿಸುವುದು ಮತ್ತು ಅರ್ಥಮಾಡಿಕೊಳ್ಳುವುದು ಎಂದು ಈಗ ನಿಮಗೆ ತಿಳಿದಿದೆ, ಇನ್ನು ಹಸ್ತಚಾಲಿತ ಲೆಕ್ಕಾಚಾರವನ್ನು ನೋಡೋಣ.
ಜಿಎಸ್ಟಿ ಅನ್ನು ಲೆಕ್ಕಾಚಾರ ಮಾಡುವ ಸೂತ್ರ ಯಾವುದು?
ಈ ಆನ್ಲೈನ್ ಟೂಲ್ ಒದಗಿಸಿದ ಔಟ್ಪುಟ್ ಅನ್ನು ನೀವೇ ಪರಿಶೀಲಿಸಲು ಬಯಸಿದರೆ, ಜಿಎಸ್ಟಿ ಅನ್ನು ಲೆಕ್ಕಾಚಾರ ಮಾಡುವ ಗಣಿತದ ಸೂತ್ರ ಇಲ್ಲಿದೆ.
ಈಗ, 2 ನಿದರ್ಶನಗಳನ್ನು ನೋಡೋಣ.
1. ನೀವು ನಿವ್ವಳ ಬೆಲೆಯನ್ನು ತಿಳಿದಿದ್ದು, ಜಿಎಸ್ಟಿ-ಒಳಗೊಂಡಿರುವ ಬೆಲೆಯನ್ನು ಲೆಕ್ಕಾಚಾರ ಮಾಡಲು ಬಯಸುತ್ತೀರಿ:
ಇಲ್ಲಿ, ನೀವು ಮೊದಲು ಜಿಎಸ್ಟಿ ಮೊತ್ತವನ್ನು ಲೆಕ್ಕಾಚಾರ ಮಾಡಬೇಕಾಗುತ್ತದೆ, ಈಗ A ಎಂಬ ಸೂತ್ರವನ್ನು ಬಳಸೋಣ.
A = (P x r) / 100
P ಎಂದರೆ ನಿವ್ವಳ ಬೆಲೆ ಮತ್ತು r ಜಿಎಸ್ಟಿ ದರವನ್ನು ಸೂಚಿಸುತ್ತದೆ.
ಈಗ ನೀವು ಅಂತಿಮ ಅಥವಾ ಒಟ್ಟು ಬೆಲೆ G ಅನ್ನು ಈ ಕೆಳಗಿನಂತೆ ಲೆಕ್ಕ ಹಾಕಬಹುದು.
G = P + A
2. ನೀಡಲಾಗಿರುವ ಜಿಎಸ್ಟಿ-ಒಳಗೊಂಡಿರುವ ಬೆಲೆಯನ್ನು ಮತ್ತು ನೀವು ಮೂಲ ಬೆಲೆಯನ್ನು ಲೆಕ್ಕಾಚಾರ ಮಾಡಲು ಬಯಸುತ್ತೀರಿ:
ಮೊದಲಿಗೆ, ನೀವು ಈ ಕೆಳಗಿನಂತೆ ನೀಡಿರುವ ಒಟ್ಟು ಬೆಲೆ G ಯಿಂದ ಒಟ್ಟು ಜಿಎಸ್ಟಿ ಮೊತ್ತ A ಅನ್ನು ಪಡೆಯಬೇಕು.
A = G - [G x {100 / (100 + r)}]
ಈಗ ನೀವು ಮೂಲ ಅಥವಾ ನಿವ್ವಳ ಬೆಲೆ P ಅನ್ನು ಲೆಕ್ಕ ಹಾಕಬಹುದು.
P = G – A
ಈ ಸೂತ್ರಗಳನ್ನು ಬಳಸಿಕೊಂಡು ಹಸ್ತಚಾಲಿತವಾಗಿ ಮಾಡಿದ ಲೆಕ್ಕಾಚಾರವು ನಿಮಗೆ ಒಟ್ಟು ಜಿಎಸ್ಟಿ ಮೊತ್ತವನ್ನು ಮಾತ್ರ ನೀಡುತ್ತದೆ ಎಂಬುದನ್ನು ಮೇಲಿನ ನಿದರ್ಶನಗಳಿಂದ, ನೀವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು.
ನೀವು ಸಿಜಿಎಸ್ಟಿ ಮತ್ತುಎಸ್ ಜಿಎಸ್ಟಿ/ಐಜಿಎಸ್ಟಿ ಯ ತೆರಿಗೆ ಹಂತಗಳನ್ನು ಪಡೆಯಲು ಸಾಧ್ಯವಿಲ್ಲ. ಇದು ನಮ್ಮನ್ನು ಮುಂದಿನ ವಿಭಾಗಕ್ಕೆ ಕರೆದೊಯ್ಯುವ, ಆನ್ಲೈನ್ ಜಿಎಸ್ಟಿ ಕ್ಯಾಲ್ಕುಲೇಟರ್ ಮಾತ್ರ ಒದಗಿಸಬಹುದಾದ ವಿಷಯವಾಗಿದೆ.
ಜಿಎಸ್ಟಿ ಬಡ್ಡಿ ಎಂದರೇನು?
ನಿರ್ದಿಷ್ಟ ದಿನಾಂಕದ ನಂತರ ನಿಮ್ಮ ಜಿಎಸ್ಟಿ ರಿಟರ್ನ್ಸ್ ಅನ್ನು ನೀವು ಸಲ್ಲಿಸಿದರೆ, ನಿಮ್ಮ ನಿವ್ವಳ ಜಿಎಸ್ಟಿ ಬಾಧ್ಯತೆಯ ಮೇಲಿನ ಬಡ್ಡಿಯೊಂದಿಗೆ ನೀವು ತಡವಾಗಿ ದಂಡವನ್ನು ಪಾವತಿಸಬೇಕಾಗುತ್ತದೆ. ಈ ಬಡ್ಡಿಯನ್ನು ನಿಗದಿತ ದಿನಾಂಕದ ನಂತರದ ದಿನದಿಂದ ಲೆಕ್ಕಹಾಕಲಾಗುತ್ತದೆ.
ಈಗ, ಸಂಬಂಧಿಸಿದ ಕಾಲಾವಧಿಯಲ್ಲಿ ನೀವು ಸರಬರಾಜುಗಳ ಮೇಲೆ ಯಾವುದೇ ಮಾರಾಟವನ್ನು ಹೊಂದಿಲ್ಲದಿದ್ದರೆ ಇದು ನಿಮಗೆ ಅನ್ವಯಿಸುತ್ತದೆಯೇ ಎಂದು ನೀವು ಪ್ರಶ್ನಿಸಬಹುದು. ಹೌದು, ಆಗಲೂ, ನೀವು ನಿಮ್ಮ ನಿಲ್ ಜಿಎಸ್ಟಿ ರಿಟರ್ನ್ಸ್ಗಳನ್ನು ಸಲ್ಲಿಸಬೇಕಾಗುತ್ತದೆ.
ನೀವು ಗಡುವನ್ನು ಮೀರಿದ್ದರೆ ಮತ್ತು ನಿಮ್ಮ ಸಂಭವನೀಯ ಬಡ್ಡಿ ಪಾವತಿಯನ್ನು ತಿಳಿದುಕೊಳ್ಳಲು ಬಯಸಿದರೆ, ನಿಮ್ಮ ಅನುಕೂಲಕ್ಕಾಗಿ ಜಿಎಸ್ಟಿ ಬಡ್ಡಿ ಲೆಕ್ಕಾಚಾರದ ಸೂತ್ರ ಇಲ್ಲಿದೆ.
I = P x (r/100) x (n/365)
I ಪಾವತಿಸಬೇಕಾದ ಬಡ್ಡಿಯನ್ನು ಪ್ರತಿನಿಧಿಸಿದರೆ, P ನಿವ್ವಳ ಜಿಎಸ್ಟಿ ಬಾಧ್ಯತೆಯನ್ನು ಸೂಚಿಸುತ್ತದೆ, r ಎಂಬುದು ವಾರ್ಷಿಕ ಬಡ್ಡಿ ದರವಾಗಿದೆ ಮತ್ತು n ಎಂಬುದು ನಿಗದಿತ ದಿನಾಂಕದಿಂದ ವಿಳಂಬವಾದ ದಿನಗಳ ಸಂಖ್ಯೆಯಾಗಿದೆ.
ನಿಮಗೆ ಜಿಎಸ್ಟಿ ಬಡ್ಡಿ ಕ್ಯಾಲ್ಕುಲೇಟರ್ ಆನ್ಲೈನ್ನಲ್ಲಿಯೂ ಲಭ್ಯವಿದೆ. ಇದು ಅಂತಹ ಮೊತ್ತವನ್ನು ವೇಗವಾಗಿ ನಿರ್ಧರಿಸಲು ನಿಮಗೆ ಸಹಾಯ ಮಾಡುತ್ತದೆ.
ಇಂತಹ ಅನಗತ್ಯ ಶುಲ್ಕಗಳನ್ನು ತಪ್ಪಿಸಲು, ಮಾಸಿಕ ಅಥವಾ ತ್ರೈಮಾಸಿಕದಲ್ಲಿ ಜಿಎಸ್ಟಿ ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನಾಂಕವನ್ನು ಗಮನಿಸುತ್ತಿರಿ. ಅಲ್ಲದೆ, ಆನ್ಲೈನ್ ಜಿಎಸ್ಟಿ ಕ್ಯಾಲ್ಕುಲೇಟರ್ನ ಸಹಾಯದಿಂದ ನಿಮ್ಮ ತೆರಿಗೆ ಹೊಣೆಗಾರಿಕೆಯನ್ನು ತಿಳಿದುಕೊಳ್ಳಿ.