ಕ್ರೆಡಿಟ್ ಸ್ಕೋರ್ ನ ಲೆಕ್ಕಾಚಾರ ಮಾಡುವುದು ಹೇಗೆ?
ಒಬ್ಬ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಅವರ "ಕ್ರೆಡಿಟ್ ಅರ್ಹತೆ"ಯನ್ನು ಖಚಿತಪಡಿಸಲು ಬ್ಯಾಂಕ್ ಹಾಗೂ ಇತರ ಸಾಲದಾರ ಸಂಸ್ಥೆಗಳು ಬಳಸುವ ಒಂದು ಸಂಖ್ಯೆಯಾಗಿದೆ. ಈ ಸಂಖ್ಯೆಯು ಸಾಮಾನ್ಯವಾಗಿ 300-900 ಮಧ್ಯೆ ಇರುತ್ತದೆ, ಇದು ಒಬ್ಬ ವ್ಯಕ್ತಿ ಪಡೆದ ಕ್ರೆಡಿಟ್ ಅನ್ನು ಮರುಪಾವತಿಸುವ ಸಾಮರ್ಥ್ಯವನ್ನು ದರ್ಶಿಸುತ್ತದೆ, ಉದಾಹರಣೆಗೆ ಸಾಲ.
ಒಂದು ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿರುವುದು ಮಹತ್ವಪೂರ್ಣವಾಗಿದೆ, ಏಕೆಂದರೆ ಇದು ಒಬ್ಬ ವ್ಯಕ್ತಿಯು ಈ ಹಿಂದೆ ಜವಾಬ್ದಾರಿಯುತ ಕ್ರೆಡಿಟ್ ವರ್ತನೆಯನ್ನು ಪ್ರದರ್ಶಿಸಿದ್ದಾರೆ ಎಂದು ಸಾಬೀತುಪಡಿಸುತ್ತದೆ. ಇದರಿಂದಾಗಿ, ನಿಮ್ಮ ಸಂಭಾವ್ಯ ಸಾಲದಾತರಿಗೆ ನಿಮ್ಮ ಕ್ರೆಡಿಟ್ ಮನವಿಗಳನ್ನು ಅನುಮೊದಿಸಲು ಹೆಚ್ಚಿನ ಭರವಸೆ ದೊರೆಯುತ್ತದೆ.
ಭಾರತದಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ), ನಾಗರಿಕರ ಕ್ರೆಡಿಟ್ ಸ್ಕೋರ್ ಗಳನ್ನು ಲೆಕ್ಕಾಚಾರ ಮಾಡಲು ನಾಲ್ಕು ಕ್ರೆಡಿಟ್ ಮಾಹಿತಿ ಕಂಪೆನಿಗಳಿಗೆ ಪರವಾನಗಿಯನ್ನು ನೀಡಿದೆ. ಟ್ರಾನ್ಸ್ಯೂನಿಯನ್ ಕ್ರೆಡಿಟ್ ಮಾಹಿತಿ ಬ್ಯೂರೋ(ಇಂಡಿಯಾ) ಲಿಮಿಟೆಡ್ (ಸಿಬಿಲ್), ಕ್ರಿಫ್ ಹೈಮಾರ್ಕ್, ಎಕ್ಸ್‌ಪೀರಿಯನ್, ಮತ್ತು ಈಕ್ವಿಫ್ಯಾಕ್ಸ್.
ಆದರೆ ಈ ಸ್ಕೋರ್ ಅನ್ನು ಹೇಗೆ ಲೆಕ್ಕಾಚಾರ ಮಾಡಲಾಗುತ್ತದೆ ಎಂದು ತಿಳಿಯುವುದೂ ಅವಶ್ಯಕವಾಗಿದೆ, ಇದರಿಂದ ನೀವು ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿರುವುದನ್ನು ದೃಢಪಡಿಸಬಹುದಾಗಿದೆ.
ಒಳ್ಳೆಯ ಕ್ರೆಡಿಟ್ ಸ್ಕೋರ್ ಎಂದರೇನು?
ಕ್ರೆಡಿಟ್ ಸ್ಕೋರ್ ನ ಲೆಕ್ಕಾಚಾರ ಮಾಡುವಾಗ ವಿಭಿನ್ನ ಕ್ರೆಡಿಟ್ ಬ್ಯೂರೋಗಳು ಭಿನ್ನವಾದ ಸ್ಕೋರಿಂಗ್ ಮಾದರಿಗಳನ್ನು ಬಳಸುತ್ತವೆಯಾದರೂ, ಸಾಮಾನ್ಯ ಕ್ರೆಡಿಟ್ ಸ್ಕೋರ್ ಗಳು ಈ ರೀತಿ ಇವೆ:
300-579 - ಕಳಪೆ
580-669 – ಸಾಧಾರಣ
670-739 – ಒಳ್ಳೆಯ
740-799 – ಉತ್ತಮ
800-850 – ಅತ್ಯುತ್ತಮ
ಸಾಮಾನ್ಯವಾಗಿ 700-750 ಕ್ಕಿಂತ ಮೇಲಿರುವ ಕ್ರೆಡಿಟ್ ಸ್ಕೋರ್ ಅನ್ನು ಒಳ್ಳೆಯ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ. ಆದರೆ, ಪ್ರತೀ ಸಾಲದಾತ ಸಂಸ್ಥೆಯು ಅದರದ್ದೇ ಆದ ಸ್ವಂತ ಶ್ರೇಣೀಕರಣವನ್ನು ಹೊಂದಿರುತ್ತದೆ. ಉದಾಹರಣೆಗೆ, ಒಂದು ಬ್ಯಾಂಕ್ 700 ಕ್ಕಿಂತ ಮೇಲಿರುವ ಸ್ಕೋರ್ ಅನ್ನು ಒಳ್ಳೆಯ ಸ್ಕೋರ್ ಎಂದು ಪರಿಗಣಿಸಬಹುದು, ಆದರೆ ಮತ್ತೊಂದು 750 ಕ್ಕಿಂತ ಮೇಲಿರುವ ಸ್ಕೋರ್ ಅನ್ನು ಕೇಳಬಹುದು.
ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೇಗೆ ಲೆಕ್ಕಾಚಾರ ಮಾಡಲಾಗುತ್ತದೆ?
ಈಗಾಗಲೇ ತಿಳಿಸಿರುವಂತೆ, ಒಬ್ಬ ವ್ಯಕ್ತಿಯ ಕ್ರೆಡಿಟ್ ಸ್ಕೋರ್ 300-900(900 ಗರಿಷ್ಠ ಸಾಧ್ಯ ಸ್ಕೋರ್ ಆಗಿದೆ) ಮಧ್ಯದ ಒಂದು ಸಂಖ್ಯೆಯಾಗಿದೆ. ಈ ಸ್ಕೋರ್ ಗಳನ್ನು, ಹಲವು ಅಂಶಗಳನ್ನು ಬಳಸಿ, ಕ್ರೆಡಿಟ್ ಮಾಹಿತಿ ಬ್ಯೂರೋಗಳು ಬಳಸುವ ಆಲ್ಗಾರಿದ್ಮ್ ಅಥವಾ ಕ್ರಮಾವಳಿಯನ್ನು ಉಪಯೋಗಿಸಿ ಲೆಕ್ಕಾಚಾರ ಮಾಡಲಾಗುತ್ತದೆ. ಆ ಅಂಶಗಳು ಈ ರೀತಿ ಇವೆ:
1. ಪಾವತಿ ಇತಿಹಾಸ
ನಿಮ್ಮ ಕ್ರೆಡಿಟ್ ಸ್ಕೋರ್ ನ ಲೆಕ್ಕಾಚಾರ ಮಾಡುವಾಗ ಬಳಸಲಾಗುವ ಒಂದು ಪ್ರಮುಖ ಅಂಶವೆಂದರೆ ನಿಮ್ಮ ಮರುಪಾವತಿ ಇತಿಹಾಸ. ಇದರಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಗಳು,ಸಾಲಗಳು ಹಾಗೂ ಇಎಂಐಗಳು ಸೇರಿವೆ. ಬ್ಯಾಂಕ್ ಗಳು ಹಾಗೂ ಇತರ ಹಣಕಾಸಿನ ಸಂಸ್ಥೆಗಳು ಈ ಮಾಹಿತಿಯನ್ನು ಮಾಸಿಕವಾಗಿ ಕ್ರೆಡಿಟ್ ಬ್ಯೂರೋಗಳಿಗೆ ಕಳಿಸುತ್ತವೆ.
ನೀವು ಯಾವತ್ತಾದರೂ ನಿಮ್ಮ ಬಿಲ್ ಹಾಗೂ ಇಎಂಐಗಳ ಪಾವತಿಯಲ್ಲಿ ವಿಳಂಬ ಮಾಡಿದ್ದರೆ, ಅದನ್ನು ನಿಮ್ಮ ಕ್ರೆಡಿಟ್ ರಿಪೋರ್ಟ್ ನಲ್ಲಿ ಪ್ರತಿಬಿಂಬಿಸಲಾಗುತ್ತದೆ, ಹಾಗೂ ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ.
2. ಸಾಲದ ಬಳಕೆ
ಸಾಲದ ಬಳಕೆಯು ನೀವು ಬಳಸುವ ಕ್ರೆಡಿಟ್ ಮೊತ್ತವನ್ನು ಉಲ್ಲೇಖಿಸುತ್ತದೆ. ಇದನ್ನು ನಿಮಗೆ ಲಭ್ಯವಿರುವ ಒಟ್ಟು ಕ್ರೆಡಿಟ್ ನ 30% ಕ್ಕಿಂತ ಕಡಿಮೆ ಇರಿಸತಕ್ಕದ್ದು. ಉದಾಹರಣೆಗೆ, ನಿಮ್ಮ ಪ್ರತೀ ತಿಂಗಳ ಕ್ರೆಡಿಟ್ ಲಿಮಿಟ್ ₹1,00,000 ಇದ್ದರೆ, ನೀವು ₹30,000 ಕ್ಕಿಂತ ಹೆಚ್ಚು ಬಳಕೆಯಾಗದಂತೆ ನೋಡಿಕೊಳ್ಳಬೇಕು.
ನಿಮ್ಮ ಸಾಲದ ಬಳಕೆ ಕಡಿಮೆ ಇದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿರುತ್ತದೆ. ಇದನ್ನು ಮಾಡಲು, ದೈನಂದಿನದ ಖರೀದಿಗಳಿಗೆ ಡೆಬಿಟ್ ಕಾರ್ಡ್ ಅಥವಾ ಕ್ಯಾಷ್ ಅನ್ನು ಬಳಸಿ, ನಿಮ್ಮ ಕ್ರೆಡಿಟ್ ಮಿತಿಯನ್ನು ಹೆಚ್ಚಿಸುವಂತೆ ಕೇಳಿಕೊಳ್ಳಿ, ಅಥವಾ ಎರಡನೇ ಕಾರ್ಡ್ ಆಯ್ಕೆ ಮಾಡಿ.
3. ಕ್ರೆಡಿಟ್ ಅವಧಿ
ನಿಮ್ಮ ಕ್ರೆಡಿಟ್ ಹಿಸ್ಟರಿಯ ಅವಧಿ ಒಂದು ಪ್ರಮುಖ ಅಂಶವಾಗಿದೆ. ಇದು ಮುಖ್ಯವಾಗಿ ನಿಮ್ಮ ಕ್ರೆಡಿಟ್ ಅಕೌಂಟ್ ಎಷ್ಟು ಸಮಯದಿಂದ ಇದೆ ಎಂಬುವುದಾಗಿದೆ, ಏಕೆಂದರೆ ಹಳೆಯ ಅಕೌಂಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳು ನೀವು ಸರಿಯಾದ ಸಮಯಕ್ಕೆ ನಿಮ್ಮ ಬಿಲ್ ಗಳನ್ನೂ ಪಾವತಿಸುತ್ತಿರುವಿರಿ ಎಂದು ನಿಮ್ಮ ಸಾಲದಾತರಿಗೆ ಭರವಸೆ ನೀಡುತ್ತದೆ.
ಕ್ರೆಡಿಟ್ ಸ್ಕೋರ್ ನಿರ್ಧರಿಸಲು ಇನ್ನೊಂದು ಪ್ರಮುಖ ಅಂಶವೆಂದರೆ ನಿಮ್ಮ ಕ್ರೆಡಿಟ್ ಸೇವೆಗೆ ನೀವು ತೆಗೆದುಕೊಂಡ ಸಮಯದ ಚೌಕಟ್ಟು. ಉದಾಹರಣೆಗೆ, ನೀವು ಅಲ್ಪಾವಧಿ ಸಾಲ ಪಡೆಯುವ ಬದಲು ಸುದೀರ್ಘ ಅವಧಿಯವರೆಗೆ ನಿಮ್ಮ ಸಾಲವನ್ನು ಮರುಪಾವತಿಸುವ ಆಯ್ಕೆಯನ್ನು ಮಾಡಿದ್ದರೆ (ಹಾಗೂ ಈ ಸಾಲದ ಮರುಪಾವತಿಯನ್ನು ಸರಿಯಾದ ಸಮಯದಲ್ಲಿ ಮಾಡುತ್ತಿದ್ದರೆ), ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಾಗಲು ಸಹಾಯ ದೊರೆಯುತ್ತದೆ.
4. ಕ್ರೆಡಿಟ್ ಮಿಕ್ಸ್
ನೀವು ಆಯ್ಕೆ ಮಾಡಿರುವ ಕ್ರೆಡಿಟ್ ವಿಧವೂ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನಿರ್ಧರಿಸುವಲ್ಲಿ ಪಾತ್ರವಹಿಸುತ್ತದೆ. ಮುಖ್ಯವಾಗಿ ಎರಡು ರೀತಿಯ ಸಾಲಗಳಿವೆ, ಅಸುರಕ್ಷಿತ ಹಾಗೂ ಸುರಕ್ಷಿತ ಸಾಲಗಳು. ಅಸುರಕ್ಷಿತ ಸಾಲಗಳು ಕ್ರೆಡಿಟ್ ಕಾರ್ಡ್ ಮತ್ತು ವೈಯಕ್ತಿಕ ಸಾಲಗಳನ್ನು ಒಳಗೊಂಡಿರುತ್ತವೆ, ಹಾಗೂ ಸುರಕ್ಷಿತ ಸಾಲಗಳು ವಾಹನ ಸಾಲ ಅಥವಾ ಹೋಮ್ ಲೋನ್ ಗಳನ್ನು ಒಳಗೊಂಡಿರುತ್ತವೆ.
ಸಾಮಾನ್ಯವಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಅಸುರಕ್ಷಿತ ಸಾಲಗಳನ್ನು ಹೊಂದಿರುವುದನ್ನು ಸಾಲದಾತ ಸಂಸ್ಥೆಗಳು ನಕಾರಾತ್ಮಕವಾಗಿ ನೋಡುತ್ತಾರೆ. ಏಕೆಂದರೆ ನೀವು ಅಪಾಯಕಾರಿ ಸಾಲಗಾರರಾಗಿರಬಹುದು, ಹಾಗೂ ಇದರಿಂದ ನಿಮ್ಮ ಸ್ಕೋರ್ ಕಡಿಮೆಯಾಗಬಹುದು.
ಇನ್ನೊಂದೆಡೆ, ಸಾಲದಾತರು ಮತ್ತು ಕ್ರೆಡಿಟ್ ಬ್ಯೂರೋಗಳು ಸಾಲಗಳಿಗೆ ಆದ್ಯತೆಯನ್ನು ನೀಡುವುದರಿಂದ, ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಾಗಲು ಸಹಾಯಕಾರಿಯಾಗಬಹುದು.
ಆದ್ದರಿಂದ, ಅಸುರಕ್ಷಿತ ಹಾಗೂ ಸುರಕ್ಷಿತ ಸಾಲಗಳ ಒಂದು ಆರೋಗ್ಯಕರ ಮಿಶ್ರಣವನ್ನು ಹೊಂದಿರುವುದನ್ನು ಶಿಫಾರಸು ಮಾಡಲಾಗುತ್ತದೆ.
5. ಹೊಸ ಕ್ರೆಡಿಟ್ ವಿಚಾರಣೆಗಳು
ನಿಮ್ಮ ಕ್ರೆಡಿಟ್ ಸ್ಕೋರ್ ನ ಮೇಲೆ ಪರಿಣಾಮ ಬೀರುವ ಅಂತಿಮ ಅಂಶಗಳಲ್ಲಿ, ನೀವು ಎಷ್ಟು ಬಾರಿ ಕ್ರೆಡಿಟ್ ಗೆ ಅರ್ಜಿ ಸಲ್ಲಿಸಿರುವಿರಿ, ಎಂದಾಗಿದೆ. ಇದರಲ್ಲಿ ಕ್ರೆಡಿಟ್ ಕಾರ್ಡ್, ಸಾಲ, ಇತ್ಯಾದಿಗಳಿಗೆ ಅರ್ಜಿ ಸಲ್ಲಿಸುವುದು ಸೇರಿದೆ. ಪ್ರತೀ ಬಾರಿ ನೀವು ಹೊಸ ಕ್ರೆಡಿಟ್ ಗಾಗಿ ಅರ್ಜಿ ಸಲ್ಲಿಸುವಾಗ, ಬ್ಯಾಂಕ್ ಹಾಗೂ ಸಾಲದಾತ ಸಂಸ್ಥೆಗಳು ನಿಮ್ಮ ಕ್ರೆಡಿಟ್ ಹಿಸ್ಟರಿಯನ್ನು ತಿಳಿಯಲು ನಿಮ್ಮ ಕ್ರೆಡಿಟ್ ಸ್ಕೋರ್ ನ "ಹಾರ್ಡ್ ವಿಚಾರಣೆ"ಯನ್ನು ಮಾಡುತ್ತಾರೆ.
ಇಂತಹ ಹಾರ್ಡ್ ವಿಚಾರಣೆಗಳು ನಿಮ್ಮ ಕ್ರೆಡಿಟ್ ಸ್ಕೋರ್ ನ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ನಿಮ್ಮ ಅಪ್ಲಿಕೇಶನ್ ಸ್ವೀಕರಿಸುವ ಹೆಚ್ಚಿನ ಸಾಧ್ಯತೆ ಇರುವ ಸಂಸ್ಥೆಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಿ ಎಂಬ ಸಲಹೆಯನ್ನು ನಾವು ನೀಡುತ್ತೇವೆ.
ಹಣ ಸಾಲ ನೀಡುವುದಕ್ಕೆ ಸಂಬಂಧವಿಲ್ಲದ ಕಾರಣಕ್ಕೆ ಯಾರಾದರೂ ನಿಮ್ಮ ಕ್ರೆಡಿಟ್ ಹಿಸ್ಟರಿ ಪರಿಶೀಲಿಸಿದರೆ ಅದಕ್ಕೆ "ಸಾಫ್ಟ್ ವಿಚಾರಣೆ" ಎನ್ನುತ್ತಾರೆ ಎಂದು ಗಮನಿಸಿ. ಉದಾಹರಣೆಗೆ, ನೀವು ನಿಮ್ಮ ಸ್ವಂತ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸಿದಾಗ. ನಿಮ್ಮ ಕ್ರೆಡಿಟ್ ರಿಪೋರ್ಟ್ ನಲ್ಲಿ ಈ ವಿಚಾರಣೆಗಳೂ ಇರುತ್ತವೆ ಆದರೆ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುವುದಿಲ್ಲ.