ಎಸ್ಡಬ್ಲ್ಯುಪಿ ಕ್ಯಾಲ್ಕುಲೇಟರ್
ಒಟ್ಟು ಹೂಡಿಕೆ
ಪ್ರತಿ ತಿಂಗಳಿಗೆ ವಿದ್ಡ್ರಾವಲ್
ಅವಧಿ (ವರ್ಷಗಳಲ್ಲಿ)
ನಿರೀಕ್ಷಿತ ರಿಟರ್ನ್ ನ ದರ (ಪ್ರತಿ ವರ್ಷ)
ವ್ಯವಸ್ಥಿತ ವಿದ್ಡ್ರಾವಲ್ ಯೋಜನೆಯ ಕ್ಯಾಲ್ಕುಲೇಟರ್ (ಎಸ್ಡಬ್ಲ್ಯುಪಿ ಕ್ಯಾಲ್ಕುಲೇಟರ್)
ಹೂಡಿಕೆದಾರರು ಸಾಮಾನ್ಯವಾಗಿ ತಮ್ಮ ಹೂಡಿಕೆಯ ಮೇಲೆ ನಿಯಮಿತ ಆದಾಯವನ್ನು ಹೊಂದಲು ಮತ್ತು ರಿಟರ್ನ್ಸ್ ಗಳನ್ನು ಪಡೆಯಲು ಬಯಸುತ್ತಾರೆ. ಇದನ್ನು ಪೂರೈಸಲು, ವ್ಯವಸ್ಥಿತ ವಿದ್ಡ್ರಾವಲ್ ಯೋಜನೆಯು ಒಬ್ಬ ವ್ಯಕ್ತಿಗೆ ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಮತ್ತು ವಾರ್ಷಿಕವಾಗಿ ಸ್ಥಿರ ಅಥವಾ ವೇರಿಯಬಲ್ ಮೊತ್ತವನ್ನು ಹಿಂಪಡೆಯಲು ಸಹಕರಿಸುತ್ತದೆ.
ಮ್ಯೂಚುಯಲ್ ಫಂಡ್ ಹೂಡಿಕೆಯಿಂದ ವಿದ್ಡ್ರಾವಲ್ ಲೆಕ್ಕಾಚಾರವನ್ನು ಕಂಡುಹಿಡಿಯಲು ವ್ಯಕ್ತಿಯು ಎಸ್ಡಬ್ಲ್ಯುಪಿ ಕ್ಯಾಲ್ಕುಲೇಟರ್ ಅನ್ನು ಬಳಸಬಹುದು.
ಹಸ್ತಚಾಲಿತವಾಗಿ ವಿದ್ಡ್ರಾವಲ್ ಗಳ ಆಧಾರದ ಮೇಲೆ ಮೆಚುರಿಟಿ ಮೊತ್ತವನ್ನು ಲೆಕ್ಕಾಚಾರ ಮಾಡುವುದು ಕಷ್ಟದ ಕೆಲಸ. ಆದ್ದರಿಂದ, ಅಂತಹ ಸಂಕೀರ್ಣ ಲೆಕ್ಕಾಚಾರಗಳಿಗೆ ವ್ಯವಸ್ಥಿತ ವಿದ್ಡ್ರಾವಲ್ ಯೋಜನೆ ಕ್ಯಾಲ್ಕುಲೇಟರ್ ಅನ್ನು ಬಳಸುವುದು ಕಡ್ಡಾಯವಾಗಿದೆ.
ಈ ಲೇಖನದಲ್ಲಿ, ಈ ಕ್ಯಾಲ್ಕುಲೇಟರ್ನ ಕಾರ್ಯ, ಪ್ರಯೋಜನಗಳು ಸೇರಿದಂತೆ ಸಂಪೂರ್ಣ ವಿವರಗಳನ್ನು ಪಡೆದುಕೊಳ್ಳಬಹುದು.
ಆದ್ದರಿಂದ, ತಡಮಾಡದೆ, ಇನ್ನಷ್ಟು ತಿಳಿದುಕೊಳ್ಳಲು ಓದುವುದನ್ನು ಮುಂದುವರಿಸಿ!
ಎಸ್ಡಬ್ಲ್ಯುಪಿ ಕ್ಯಾಲ್ಕುಲೇಟರ್ ಎಂದರೇನು?
ಎಸ್ಡಬ್ಲ್ಯುಪಿ ಕ್ಯಾಲ್ಕುಲೇಟರ್ ವಿದ್ಡ್ರಾವಲ್ ನಂತರ ಮ್ಯೂಚುಯಲ್ ಫಂಡ್ ಯೋಜನೆಯಲ್ಲಿ ಉಳಿದಿರುವ ಮೊತ್ತವನ್ನು ತೋರಿಸುತ್ತದೆ. ಹೂಡಿಕೆದಾರನು ತನ್ನ ಖಾತೆಯಲ್ಲಿ ಹೊಂದಿರುವ ಅಂತಿಮ ಮೌಲ್ಯವನ್ನು ಕಂಡುಹಿಡಿಯಲು ಇದು ಸಂಕೀರ್ಣ ಲೆಕ್ಕಾಚಾರಗಳನ್ನು ಕೈಗೊಳ್ಳುತ್ತದೆ. ಈ ಕ್ಯಾಲ್ಕುಲೇಟರ್ ಅನ್ನು ಬಳಸಿದ ನಂತರ ನಿವೃತ್ತ ಸಿಬ್ಬಂದಿಯು ನಿಯಮಿತ ಆದಾಯವನ್ನು ಪಡೆಯಲು ನಿರೀಕ್ಷಿಸಬಹುದು. ಈ ಕ್ಯಾಲ್ಕುಲೇಟರ್ ಕೆಲವೇ ಸೆಕೆಂಡುಗಳಲ್ಲಿ ನಿಖರವಾದ ಫಲಿತಾಂಶಗಳನ್ನು ತೋರಿಸುವ ಕಾರಣ, ಇದು ಮ್ಯೂಚುಯಲ್ ಫಂಡ್ ಹೂಡಿಕೆದಾರರಿಗೆ ಅನುಕೂಲಕರವಾಗಿದೆ.
ಒಬ್ಬ ವ್ಯಕ್ತಿಯು ಅದರ ಕಾರ್ಯನಿರ್ವಹಣೆಯನ್ನು ಅರ್ಥಮಾಡಿಕೊಂಡ ನಂತರವೇ ಈ ಕ್ಯಾಲ್ಕುಲೇಟರ್ನಿಂದ ಪ್ರಯೋಜನಗಳನ್ನು ಪಡೆಯಬಹುದು. ಆದ್ದರಿಂದ, ಅದರ ಬಗ್ಗೆ ಸ್ಪಷ್ಟತೆ ಪಡೆಯಲು ಕೆಳಗಿನ ವಿಭಾಗಗಳನ್ನು ನೋಡಿ.
ಎಸ್ಡಬ್ಲ್ಯುಪಿ ಕ್ಯಾಲ್ಕುಲೇಟರ್ ಹೇಗೆ ಕೆಲಸ ಮಾಡುತ್ತದೆ?
ವ್ಯವಸ್ಥಿತ ವಿದ್ಡ್ರಾವಲ್ ಯೋಜನೆ ಕ್ಯಾಲ್ಕುಲೇಟರ್ ಸೂತ್ರದ ಪೆಟ್ಟಿಗೆಯನ್ನು ಒಳಗೊಂಡಿರುತ್ತದೆ, ಅಲ್ಲಿ ಈ ಕೆಳಗಿನ ಮಾಹಿತಿಯನ್ನು ನಮೂದಿಸಬೇಕಾಗುತ್ತದೆ.
- ಒಟ್ಟು ಹೂಡಿಕೆಯ ಮೊತ್ತ
- ಮಾಸಿಕ ವಿದ್ಡ್ರಾವಲ್
- ವಾರ್ಷಿಕ ರಿಟರ್ನ್ ದರ (ನಿರೀಕ್ಷಿಸಿದ)
- ಹೂಡಿಕೆಯ ಅವಧಿ
ಪರ್ಯಾಯವಾಗಿ, ಎಸ್ಡಬ್ಲ್ಯುಪಿ ಲೆಕ್ಕಾಚಾರಕ್ಕಾಗಿ ಸಂಕೀರ್ಣ ಗಣಿತದ ಸೂತ್ರವನ್ನು ಬಳಸಬಹುದು. ಕೆಳಗಿನ ಸೂತ್ರವನ್ನು ನೀವು ನೋಡಬಹುದು.
A = PMT ((1+r/n)^nt – 1) / (r/n))
ಕೊಟ್ಟಿರುವ ಸೂತ್ರದ ಅಂಶಗಳನ್ನು ಬಿಡಿಸಿ, ಅವುಗಳನ್ನು ನಿಖರವಾಗಿ ಅರ್ಥಮಾಡಿಕೊಳ್ಳೋಣ.
- A: ಇದು ಹೂಡಿಕೆಯ ಭವಿಷ್ಯದ ಮೌಲ್ಯವಾಗಿದೆ. ಸರಳವಾಗಿ ಹೇಳುವುದಾದರೆ, ಇದು ಅಂದಾಜು ಬೆಳವಣಿಗೆ ದರದ ಆಧಾರದ ಮೇಲೆ ಪ್ರಸ್ತುತ ಆಸ್ತಿಯ ಮೌಲ್ಯವಾಗಿದೆ.
- PMT: PMT ಎನ್ನುವುದು ಹಣಕಾಸಿನ ವಿಷಯದ ಪ್ರತಿ ಅವಧಿಯ ಪಾವತಿಯಾಗಿದೆ.
- r: ಇದು ವಾರ್ಷಿಕ ಆದಾಯದ ದರವನ್ನು ಸೂಚಿಸುತ್ತದೆ.
- n: ನಿರ್ದಿಷ್ಟ ಅವಧಿಯಲ್ಲಿ ಸಂಯುಕ್ತ ಸಂಖ್ಯೆಗಳನ್ನು "n" ನಿಂದ ಸೂಚಿಸಲಾಗುತ್ತದೆ.
- t: ಇದು ಮೊತ್ತವನ್ನು ಹೂಡಿಕೆ ಮಾಡುವ ಅವಧಿಗಳ ಸಂಖ್ಯೆ.
ಎಸ್ಡಬ್ಲ್ಯುಪಿ ಕ್ಯಾಲ್ಕುಲೇಟರ್ನ ಕಾರ್ಯನಿರ್ವಹಣೆಯ ಬಗ್ಗೆ ನಾವು ಒಂದು ಉದಾಹರಣೆಯ ಮೂಲಕ ತಿಳಿಯೋಣ.
ಉದಾಹರಣೆಗೆ, ಒಬ್ಬ ವ್ಯಕ್ತಿಯು 1 ವರ್ಷದ ಅವಧಿಗೆ ರೂ.60,000 ಹೂಡಿಕೆ ಮಾಡಿ, ತಿಂಗಳಿಗೆ ರೂ.1000 ರಷ್ಟು ವ್ಯವಸ್ಥಿತ ವಿದ್ಡ್ರಾವಲ್ ಅನ್ನು ಅನುಸರಿಸುತ್ತಾನೆ. ಇದಲ್ಲದೆ, ಆದಾಯದ ನಿರೀಕ್ಷಿತ ದರವು 10% ರಷ್ಟಿರುತ್ತದೆ. ಮಾಸಿಕ ವಿದ್ಡ್ರಾವಲ್ ನಂತರ, 12 ತಿಂಗಳ ಕೊನೆಯಲ್ಲಿ ಅಂತಿಮ ಮೌಲ್ಯವು ರೂ.53,459 ಆಗಿರುತ್ತದೆ. ಇದನ್ನು ಹಸ್ತಚಾಲಿತವಾಗಿ ಲೆಕ್ಕ ಹಾಕುವುದು ಕಷ್ಟಕರ ಹಾಗೂ ಅಸಮರ್ಪಕವಾಗಿರುತ್ತದೆ. ಆದಾಗ್ಯೂ, ಎಸ್ಡಬ್ಲ್ಯುಪಿ ಕ್ಯಾಲ್ಕುಲೇಟರ್ ಸೆಕೆಂಡುಗಳಲ್ಲಿ ನಿಖರವಾದ ಮೌಲ್ಯಗಳನ್ನು ಕಂಡುಹಿಡಿಯುತ್ತದೆ.
ಈ ಕ್ಯಾಲ್ಕುಲೇಟರ್ನ ಕಾರ್ಯನಿರ್ವಹಣೆಯ ಬಗ್ಗೆ ಈಗ ನಿಮಗೆ ತಿಳಿದಿದೆ, ಅದನ್ನು ಬಳಸುವ ಹಲವಾರು ವಿಧಾನಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ.
ಎಸ್ಡಬ್ಲ್ಯುಪಿ ಕ್ಯಾಲ್ಕುಲೇಟರ್ ಅನ್ನು ಬಳಸುವುದು ಹೇಗೆ?
ಆರಂಭಿಕರಿಗೆ, ಈ ಕ್ಯಾಲ್ಕುಲೇಟರ್ ಹೆಚ್ಚು ಸುಲಭ ಮತ್ತು ಅನುಕೂಲಕರವಾಗಿದೆ. ವ್ಯವಸ್ಥಿತ ವಿದ್ಡ್ರಾವಲ್ ಯೋಜನೆ ಕ್ಯಾಲ್ಕುಲೇಟರ್ ಅನ್ನು ಬಳಸುವಾಗ ಅನುಸರಿಸಬೇಕಾದ ಹಂತಗಳು ಇಲ್ಲಿವೆ.
- ಮೊದಲನೆಯದಾಗಿ, ನಿಮ್ಮ ಹೂಡಿಕೆಯ ಒಟ್ಟು ಮೊತ್ತವನ್ನು ನೀವು ನಮೂದಿಸಬೇಕು.
- ಮೊತ್ತವನ್ನು ನಮೂದಿಸಿದ ನಂತರ, ನೀವು ಪ್ರತಿ ತಿಂಗಳು ಅಥವಾ ತ್ರೈಮಾಸಿಕವಾಗಿ ಪಡೆಯಲು ಬಯಸುವ ವಿದ್ಡ್ರಾವಲ್ ಮೌಲ್ಯವನ್ನು ಭರ್ತಿ ಮಾಡಿ.
- ನಿಮ್ಮ ಹೂಡಿಕೆಯ ಅವಧಿಯನ್ನು ಸಲ್ಲಿಸಿ.
- ಶೇಕಡಾವಾರು ಆದಾಯದ ನಿರೀಕ್ಷಿತ ದರವನ್ನು ನೀಡಿ.
- ಸೆಕೆಂಡುಗಳಲ್ಲಿ ನೀವು ಸಂಪೂರ್ಣ ಮಾಹಿತಿಯನ್ನು ವೀಕ್ಷಿಸಲು ಮತ್ತು ಅಂತಿಮ ಮೌಲ್ಯವನ್ನು ಪಡೆಯಲು ಸಾಧ್ಯವಾಗುತ್ತದೆ. ಮಾಹಿತಿಯು ಒಟ್ಟು ವಿದ್ಡ್ರಾವಲ್, ಒಟ್ಟು ಹೂಡಿಕೆ ಮತ್ತು ಗಳಿಸಿದ ಬಡ್ಡಿಯನ್ನು ಸಹ ಒಳಗೊಂಡಿರುತ್ತದೆ.
ಆದ್ದರಿಂದ, ಕ್ಯಾಲ್ಕುಲೇಟರ್ ವ್ಯವಸ್ಥಿತ ವಿದ್ಡ್ರಾವಲ್ ಯೋಜನೆಯ ಮೂಲಕ ನಿಯಮಿತ ನಗದು ಹರಿವುಗಳನ್ನು ಕಂಡುಹಿಡಿಯುತ್ತದೆ ಎಂಬುದು ಸ್ಪಷ್ಟವಾಯಿತು.
ಈಗ ನಾವು ಈ ಕ್ಯಾಲ್ಕುಲೇಟರ್ ಅನ್ನು ಬಳಸುವುದರಿಂದ ಆಗುವ ಕೆಲವು ಪ್ರಯೋಜನಗಳ ಮೇಲೆ ಕೇಂದ್ರೀಕರಿಸೋಣ.
ಎಸ್ಡಬ್ಲ್ಯುಪಿ ಕ್ಯಾಲ್ಕುಲೇಟರ್ನ ಉಪಯೋಗಗಳು ಯಾವುವು?
ಹಿರಿಯ ನಾಗರಿಕರು ಮತ್ತು ನಿವೃತ್ತ ಸಿಬ್ಬಂದಿಗಳು ಅಂತಹ ಹೂಡಿಕೆದಾರರಾಗಿದ್ದರೆ, ಅವರಿಗೆ ಹಣಕಾಸಿನ ಇನ್ಪುಟ್ನ ಸ್ಥಿರ ಹರಿವಿನ ಅಗತ್ಯವಿರುತ್ತದೆ. ಪಿಂಚಣಿ ಹಣದ ಹೊರತಾಗಿ, ಒಂದು ಎಸ್ಡಬ್ಲ್ಯುಪಿ ಅವರಿಗೆ ನಿಯಮಿತ ಆದಾಯದ ಆಯ್ಕೆಯನ್ನು ನೀಡುತ್ತದೆ. ಆದ್ದರಿಂದ, ಆ ಉದ್ದೇಶಕ್ಕಾಗಿ ಕ್ಯಾಲ್ಕುಲೇಟರ್ ಅನ್ನು ಬಳಸಿದರೆ ಈ ಕೆಳಗಿನ ಪ್ರಯೋಜನಗಳು ಉಂಟಾಗುತ್ತದೆ.
- ಎಸ್ಡಬ್ಲ್ಯುಪಿ ಕ್ಯಾಲ್ಕುಲೇಟರ್ನ ಪ್ರಯೋಜನಗಳಲ್ಲಿ ಮುಖ್ಯವಾದುದೆಂದರೆ ಸುಲಭವಾದ ಲೆಕ್ಕಾಚಾರ ಮತ್ತು ಗಳಿಸಿದ ಬಡ್ಡಿಯ ನಿಖರ ಫಲಿತಾಂಶಗಳು ಮತ್ತು ನಿರ್ದಿಷ್ಟ ಅವಧಿಯ ನಂತರ ನಿಮ್ಮ ಹೂಡಿಕೆಯ ಒಟ್ಟು ಲಾಭದ ಮೌಲ್ಯವನ್ನು ಕಂಡುಕೊಳ್ಳುವುದಾಗಿದೆ.
- ಬಳಕೆದಾರರಿಗೆ ವಿದ್ಡ್ರಾವಲ್ ಮೊತ್ತವನ್ನು ಬದಲಾಯಿಸಲು ಮತ್ತು ಅದಕ್ಕೆ ಅನುಗುಣವಾಗಿ ಮೆಚುರಿಟಿ ಮೌಲ್ಯವನ್ನು ಪಡೆಯಲು ಈ ಕ್ಯಾಲ್ಕುಲೇಟರ್ ಸಕ್ರಿಯಗೊಳಿಸುತ್ತದೆ.
- ಈ ಕ್ಯಾಲ್ಕುಲೇಟರ್ ಆನ್ಲೈನ್ನಲ್ಲಿ ಲಭ್ಯವಿರುವುದರಿಂದ ಸುಲಭವಾಗಿ ಪ್ರವೇಶಿಸಬಹುದಾಗಿದೆ.
- ಈ ಕ್ಯಾಲ್ಕುಲೇಟರ್ನಲ್ಲಿ ಕಾರ್ಯನಿರ್ವಹಿಸಲು ಪರಿಣತಿ ಬೇಕಾಗಿಲ್ಲ. ನೀವು ಅನನುಭವಿ ಅಥವಾ ಅನುಭವಿ ಹೂಡಿಕೆದಾರರಾಗಿದ್ದರೂ, ಅಗತ್ಯವಿರುವ ಸ್ಥಳದಲ್ಲಿ ಮೌಲ್ಯಗಳನ್ನು ನಮೂದಿಸುವ ಮೂಲಕ ನೀವು ಎಸ್ಡಬ್ಲ್ಯುಪಿ ಕ್ಯಾಲ್ಕುಲೇಟರ್ ಅನ್ನು ಬಳಸಬಹುದು.
- ಈ ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು, ಒಬ್ಬ ವ್ಯಕ್ತಿಯು ಅವನ ಅಥವಾ ಅವಳ ಆಯಾ ಯೋಜನೆಯಿಂದ ಉತ್ತಮ ಮಾಸಿಕ ಅಥವಾ ತ್ರೈಮಾಸಿಕ ಮೊತ್ತವನ್ನು ಕಂಡುಹಿಡಿಯಬಹುದು.
- ಇದಲ್ಲದೆ, ಈ ಕ್ಯಾಲ್ಕುಲೇಟರ್ ಹೆಚ್ಚುವರಿ ನಿಧಿಗಳ ನಿರ್ಣಯದಲ್ಲಿ ಸಹಾಯ ಮಾಡುತ್ತದೆ. ಹೂಡಿಕೆದಾರರ ಅಗತ್ಯತೆಗಳಿಗೆ ಅನುಗುಣವಾಗಿ ಈ ಹಣವನ್ನು ಇತರ ಹಣಕಾಸು ಸಾಧನಗಳಲ್ಲಿ ಬಳಸಬಹುದು.
ಆದ್ದರಿಂದ, ಹೂಡಿಕೆದಾರರು ನಿಶ್ಚಿತ ಮಾಸಿಕ ಆದಾಯವನ್ನು ಪಡೆಯುವ ಅನುಕೂಲಕರ ಮಾರ್ಗಗಳಲ್ಲಿ ಎಸ್ಡಬ್ಲ್ಯುಪಿ ಒಂದಾಗಿದೆ. ಆದಾಗ್ಯೂ, ವಿದ್ಡ್ರಾವಲ್ ಗಳನ್ನು ಮತ್ತು ಹೂಡಿಕೆಯಿಂದ ಲಾಭದ ಮೌಲ್ಯವನ್ನು ಯೋಜಿಸುವುದರ ಕುರಿತು ಹಸ್ತಚಾಲಿತವಾಗಿ ಅಂದಾಜು ಮಾಡುವುದು ಹೆಚ್ಚು ಸಮಯ ಹಿಡಿಯುವ ಪ್ರಕ್ರಿಯೆಯಾಗಿದೆ. ಆದ್ದರಿಂದ, ಎಸ್ಡಬ್ಲ್ಯುಪಿ ಕ್ಯಾಲ್ಕುಲೇಟರ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಸಲಹೆಯಾಗಿದೆ.