ಎಸ್ಐಪಿ ಕ್ಯಾಲ್ಕುಲೇಟರ್
ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್ಐಪಿ) ಕ್ಯಾಲ್ಕುಲೇಟರ್
ಸೂಕ್ತವಾದ ಪ್ರಾಪರ್ಟಿ ಕೆಟಗರಿಗಳಲ್ಲಿ ಹೂಡಿಕೆ ಮಾಡುವುದು, ಹಣಕಾಸಿನ ಸಂಗ್ರಹಣೆಯನ್ನು ಹೆಚ್ಚಿಸುವ ಉತ್ತಮ ಮಾರ್ಗವಾಗಿದೆ. ಎಸ್ಐಪಿ ಕ್ಯಾಲ್ಕುಲೇಟರ್ನಂತಹ ಆನ್ಲೈನ್ ಟೂಲ್, ಈ ಪ್ರಕ್ರಿಯೆಯನ್ನು ಜನರಿಗೆ ಸುಲಭಗೊಳಿಸಲು ಮಾತ್ರ ಸಹಾಯ ಮಾಡುತ್ತದೆ. ಅಂತಹ ಟೂಲ್, ಹೂಡಿಕೆಯ ಮೊದಲು ನೀವು ಮಾಡುವಂತಹ ವ್ಯಾಪಕವಾದ ಸಂಶೋಧನೆ ಮತ್ತು ವಿಶ್ಲೇಷಣೆಗಾಗಿ ಕಳೆಯುವ ನಿಮ್ಮ ಅಮೂಲ್ಯ ಸಮಯವನ್ನು ಉಳಿಸಬಹುದು.
ಇದೇ ಸಮಯದಲ್ಲಿ, ಅಂತಹ ಕ್ಯಾಲ್ಕುಲೇಟರ್ಗಳು ಜನರಿಗೆ ತಮ್ಮ ಎಸ್ಐಪಿ ಹೂಡಿಕೆಗಳಲ್ಲಿ ಗರಿಷ್ಠ ಆದಾಯವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಬಹುದು.
ಈ ಆನ್ಲೈನ್ ಕ್ಯಾಲ್ಕುಲೇಟರ್ "ಏನು" ಮತ್ತು "ಹೇಗೆ" ಎಂದು ಇನ್ನೂ ಪರಿಚಯವಾಗಲಿಲ್ಲವೇ?
ನಿಮಗೆ ಸಹಾಯ ಮಾಡಲು ಇಲ್ಲಿ ಸಂಕ್ಷಿಪ್ತ ಸಾರಾಂಶ ಇಲ್ಲಿದ. ಮುಂದೆ ಓದಿ!
ಎಸ್ಐಪಿ ಕ್ಯಾಲ್ಕುಲೇಟರ್ ಎಂದರೇನು?
ಎಸ್ಐಪಿ ಹೂಡಿಕೆ ಕ್ಯಾಲ್ಕುಲೇಟರ್ ಎನ್ನುವುದು ಎಸ್ಐಪಿ ಮೂಲಕ ತಮ್ಮ ಹೂಡಿಕೆಯ ಆದಾಯವನ್ನು ಅಂದಾಜು ಮಾಡಲು ಜನರಿಗೆ ಅನುಮತಿಸುವ ಆನ್ಲೈನ್ ಟೂಲ್ ಆಗಿದೆ.
ನೀವು ಪ್ರಸ್ತುತ ಅಥವಾ ಸಂಭಾವ್ಯ ಮ್ಯೂಚುಯಲ್ ಫಂಡ್ ಹೂಡಿಕೆದಾರರಾಗಿದ್ದರೆ, ಅಂತಹ ಫಂಡ್ ಯೋಜನೆಗಳಲ್ಲಿ ಹೂಡಿಕೆ ಮಾಡುವ 2 ವಿಧಾನಗಳಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್ಐಪಿ) ಒಂದಾಗಿದೆ ಎಂಬುದನ್ನು ನೀವು ತಿಳಿದಿರಬೇಕು. ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೇಡಿಕೆಯುಳ್ಳ ಹೂಡಿಕೆಯ ಸಾಧನವಾಗಿದೆ. ಈ ವಿಧಾನವು ಜನರಿಗೆ ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಮತ್ತು ವಾರ್ಷಿಕವಾಗಿ ನಿಯಮಿತ ಮಧ್ಯಂತರಗಳಲ್ಲಿ ಹೂಡಿಕೆ ಮಾಡಲು ಅನುಮತಿಸುತ್ತದೆ.
ಈ ಆನ್ಲೈನ್ ಕ್ಯಾಲ್ಕುಲೇಟರ್ ನಿಮಗೆ, ಎಸ್ಐಪಿ ಹೂಡಿಕೆಗಳ ಮೂಲಕ ನಿಮ್ಮ ಸಂಭಾವ್ಯ ಆದಾಯದ ಸಂಗ್ರಹಣೆಯ ಒಳನೋಟವನ್ನು ಪಡೆಯಲು ಸಹಾಯ ಮಾಡುತ್ತದೆ. ಪ್ರತಿಯಾಗಿ, ಹಣವನ್ನು ನಿಯೋಜಿಸುವ ಮೊದಲು ತಿಳುವಳಿಕೆಯುತ ನಿರ್ಧಾರವನ್ನು ತೆಗೆದುಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ.
ಈ ನಿಟ್ಟಿನಲ್ಲಿ, ಹಲವಾರು ಹೂಡಿಕೆದಾರರು ವ್ಯವಸ್ಥಿತ ಹೂಡಿಕೆ ಯೋಜನೆ ಕ್ಯಾಲ್ಕುಲೇಟರ್ನ ಪರಿಣಾಮಕಾರಿತ್ವವನ್ನು ನಿರ್ಣಯಿಸಲು ಬಯಸಬಹುದು. ಇಲ್ಲಿ, ಈ ಆನ್ಲೈನ್ ಪರಿಕರವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ, ಬಳಕೆದಾರರಿಗೆ ಅವರ ನಿರೀಕ್ಷಿತ ಫಲಿತಾಂಶಗಳನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ.
ಎಸ್ಐಪಿ ಕ್ಯಾಲ್ಕುಲೇಟರ್ ಹೇಗೆ ಕೆಲಸ ಮಾಡುತ್ತದೆ?
ಎಸ್ಐಪಿ ಕ್ಯಾಲ್ಕುಲೇಟರ್ ಬಳಕೆದಾರರಿಂದ ನಿರ್ದಿಷ್ಟ ಹೂಡಿಕೆಯ ವಿವರಗಳನ್ನು ಬಯಸುತ್ತದೆ. ಇವುಗಳಲ್ಲಿ ಹೂಡಿಕೆಯ ಮೊತ್ತ, ನಿರೀಕ್ಷಿತ ಆದಾಯದ ದರ, ಒಟ್ಟು ಹೂಡಿಕೆಯ ಅವಧಿ ಇತ್ಯಾದಿ ಸೇರಿವೆ. ನಂತರ, ಈ ಟೂಲ್ ಅಗತ್ಯ ಫಲಿತಾಂಶಗಳನ್ನು ನೀಡಲು ಗಣಿತದ ಸೂತ್ರದಲ್ಲಿ ಅಂತಹ ಡೇಟಾವನ್ನು ಬಳಸಿಕೊಳ್ಳುತ್ತದೆ.
ಎಸ್ಐಪಿ ಕ್ಯಾಲ್ಕುಲೇಟರ್ ಸೂತ್ರವನ್ನು ಈ ಕೆಳಗಿನಂತೆ ಪ್ರತಿನಿಧಿಸಬಹುದು:
A = [P x {(1+i)n – 1} x (1+i)] / i
ಇದರಲ್ಲಿ,
A = ಮೆಚ್ಯೂರಿಟಿಯ ನಂತರ ನೀವು ಪಡೆಯುವ ಅಂತಿಮ ಮೊತ್ತ,
P = ಆವರ್ತಕ ಹೂಡಿಕೆ ಮೊತ್ತ,
i = ಆವರ್ತಕ ಬಡ್ಡಿ ದರ, ಮತ್ತು
n = ಮಾಡಿದ ಪಾವತಿಗಳ ಒಟ್ಟು ಸಂಖ್ಯೆ
ಎಸ್ಐಪಿ ರಿಟರ್ನ್ ಸೂತ್ರವನ್ನು ಬಳಸುವ ಮೂಲಕ, ಆನ್ಲೈನ್ ಪರಿಕರವು ಒಟ್ಟು ಹೂಡಿಕೆ, ಅಂತಿಮ ನಿರೀಕ್ಷಿತ ಆದಾಯ ಮತ್ತು ನಿವ್ವಳ ಆದಾಯದ ಫಲಿತಾಂಶಗಳನ್ನು ತೋರಿಸುತ್ತದೆ.
ಕೆಲವು ವೆಬ್ಸೈಟ್ಗಳಲ್ಲಿ, ನಿಮ್ಮ ನಿರೀಕ್ಷಿತ ವಾರ್ಷಿಕ ಆದಾಯ ದರ ಮತ್ತು ಆದ್ಯತೆಯ ಹೂಡಿಕೆ ಆವರ್ತನವನ್ನು ನೀವು ನಮೂದಿಸಬೇಕಾಗಬಹುದು. ಉದಾಹರಣೆಗೆ, ನಿಮ್ಮ ವಾರ್ಷಿಕ ಆದಾಯದ ನಿರೀಕ್ಷಿತ ದರವು 12% ಆಗಿದೆ ಮತ್ತು ನೀವು 60 ತಿಂಗಳ ಅವಧಿಗೆ ಮಾಸಿಕ ₹1000 ಹೂಡಿಕೆ ಮಾಡಲು ಬಯಸುತ್ತೀರಿ.
ಆ ಸಂದರ್ಭದಲ್ಲಿ, 'i' ಅನ್ನು 12%/12, ಅಂದರೆ 1% ಎಂದು ಲೆಕ್ಕಹಾಕಲಾಗುತ್ತದೆ.
ಎಸ್ಐಪಿ ಸೂತ್ರದಲ್ಲಿ ಇತರೆ ಮೌಲ್ಯಗಳನ್ನು ಬದಲಿಸಿದರೆ, ಒಟ್ಟು ನಿರೀಕ್ಷಿತ ಆದಾಯವು ₹82,487 ರ ಒಟ್ಟು ಹೂಡಿಕೆಯ ವಿರುದ್ಧ ₹60,000 ಆಗುತ್ತದೆ. ಆದ್ದರಿಂದ, ಬಹುಶಃ ಸಂಪತ್ತಿನ ಲಾಭ ₹22,487.
ಈ ಎಸ್ಐಪಿ ರಿಟರ್ನ್ ಕ್ಯಾಲ್ಕುಲೇಟರ್, ವೆಚ್ಚದ ಅನುಪಾತ ಮತ್ತು ಎಕ್ಸಿಟ್ ಲೋಡ್ನಂತಹ ಅಂಶಗಳನ್ನು ಪರಿಗಣಿಸುವುದಿಲ್ಲ ಎಂಬುದನ್ನು ಗಮನಿಸಿ. ನಿಮ್ಮ ನಿವ್ವಳ ಆದಾಯವನ್ನು ನಿರ್ಧರಿಸುವಲ್ಲಿ ಈ ಅಂಶಗಳು ಪ್ರಮುಖ ಪಾತ್ರವಹಿಸುತ್ತವೆ. ಆದ್ದರಿಂದ, ನಿಮ್ಮ ನೈಜ ಆದಾಯವು ಕ್ಯಾಲ್ಕುಲೇಟರ್ನ ಫಲಿತಾಂಶದಿಂದ ಭಿನ್ನವಾಗಿರಬಹುದು.
ಅದೇನೇ ಇದ್ದರೂ, ಸುಮ್ಮನೇ ಇರುವುದಕ್ಕಿಂತ ಸ್ವಲ್ಪ ಯೋಚನೆಯನ್ನಾದರೂ ಮಾಡುವುದು ಉತ್ತಮ, ಅಲ್ಲವೇ?
ನೀವು ಎಸ್ಐಪಿ ರಿಟರ್ನ್ಸ್ ಅನ್ನು ಕೈಯಿಂದಲೇ ಲೆಕ್ಕಾಚಾರ ಮಾಡಲು, ತಿಳಿಸಲಾದ ಸೂತ್ರವನ್ನು ಬಳಸಬಹುದು. ಆದಾಗ್ಯೂ, ಆನ್ಲೈನ್ ಟೂಲ್ ಬಳಸುವುದರಿಂದ ಲೆಕ್ಕಾಚಾರ ಮಾಡುವ ಪ್ರಕ್ರಿಯೆಯನ್ನು ಹೆಚ್ಚು ಸರಳವಾಗಿ ಮತ್ತು ನಿಖರವಾಗಿ ಮಾಡಬಹುದು.
ಆನ್ಲೈನ್ ಕ್ಯಾಲ್ಕುಲೇಟರ್ನೊಂದಿಗೆ ಎಸ್ಐಪಿ ಅನ್ನು ಹೇಗೆ ಲೆಕ್ಕಾಚಾರ ಮಾಡುವುದು?
ಆನ್ಲೈನ್ ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು ಎಸ್ಐಪಿ ರಿಟರ್ನ್ಗಳನ್ನು ಹೇಗೆ ಲೆಕ್ಕಾಚಾರ ಮಾಡುವುದು ಎಂದು ನಿಮಗೆ ಇನ್ನೂ ಖಚಿತವಾಗಿರದಿದ್ದರೆ, ನಿಮಗಾಗಿ ಇಲ್ಲಿ ಹಂತ-ಹಂತದ ಮಾರ್ಗದರ್ಶಿಯಿದೆ.
ಹಂತ 1: ನೀವು ಆಯ್ಕೆ ಮಾಡಿದ ಎ.ಎಮ್.ಸಿ ಯ ಅಧಿಕೃತ ವೆಬ್ಸೈಟ್ಗೆ ಹೋಗಿ. ಎಸ್ಐಪಿ ಕ್ಯಾಲ್ಕುಲೇಟರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 2: ನಿಮ್ಮ ಆದ್ಯತೆಯ ಹೂಡಿಕೆ ಮೊತ್ತವನ್ನು ನಮೂದಿಸಿ.
ಹಂತ 3: ಮಾಸಿಕ, ತ್ರೈಮಾಸಿಕ, ಇತ್ಯಾದಿ ಆಯ್ಕೆಗಳಿಂದ ಹೂಡಿಕೆಯ ಆವರ್ತನವನ್ನು ಆಯ್ಕೆ ಮಾಡಿ.
ಹಂತ 4: ಒಟ್ಟು ಹೂಡಿಕೆಯ ಅವಧಿಯನ್ನು ಆಯ್ಕೆಮಾಡಿ.
ಹಂತ 5: ನಿಮ್ಮ ನಿರೀಕ್ಷಿತ ಆದಾಯದ ದರವನ್ನು ನಮೂದಿಸಿ.
ಹಂತ 6: "ಕ್ಯಾಲ್ಕ್ಯುಲೇಟ್" ಅಥವಾ ಯಾವುದೇ ಇತರ ಸಮಾನಾರ್ಥದ ಬಟನ್ ಮೇಲೆ ಕ್ಲಿಕ್ ಮಾಡಿ.
ಮೇಲಿನ ಮಾಹಿತಿಯನ್ನು ಬಳಸಿಕೊಂಡು, ಆನ್ಲೈನ್ ಎಸ್ಐಪಿ ಕ್ಯಾಲ್ಕುಲೇಟರ್ ಈ ಕೆಳಗಿನ ಔಟ್ಪುಟ್ ಅನ್ನು ತೋರಿಸುತ್ತದೆ.
ಒಟ್ಟು ಹೂಡಿಕೆಯ ಮೊತ್ತ
ಒಟ್ಟು ನಿರೀಕ್ಷಿತ ಆದಾಯ
ನಿವ್ವಳ ಸಂಪತ್ತು ಲಾಭ
ಹೂಡಿಕೆದಾರರು ಈ ಮೇಲಿನ ಫಲಿತಾಂಶಗಳನ್ನು, ಪರಿಣಾಮಕಾರಿ ಹಣಕಾಸು ನಿರ್ವಹಣೆಯಲ್ಲಿ ಸಹಾಯ ಮಾಡುವಂತಹ ಹಲವಾರು ಬಳಕೆಗಳಿಗೆ ಬಳಸಿಕೊಳ್ಳಬಹುದು.
ಈ ಉಪಯೋಗಗಳೇನು ಎಂದು ತಿಳಿಯಬೇಕೆ?
ಹಾಗಿದ್ದರೆ, ಓದುವುದನ್ನು ಮುಂದುವರೆಸಿ!
ಎಸ್ಐಪಿ ಕ್ಯಾಲ್ಕುಲೇಟರ್ನ ಉಪಯೋಗಗಳೇನು?
ಎಸ್ಐಪಿ ಕ್ಯಾಲ್ಕುಲೇಟರ್ನ ಪ್ರಾಥಮಿಕ ಉಪಯೋಗ ಏನೆಂದರೆ ಈ ಕ್ಯಾಲ್ಕುಲೇಟರ್, ಹೂಡಿಕೆದಾರಿಗೆ ತಮ್ಮ ಎಸ್ಐಪಿ ಹೂಡಿಕೆಗಳನ್ನು ಪರಿಣಾಮಕಾರಿಯಾಗಿ ಯೋಜಿಸಲು ಸಹಾಯ ಮಾಡುತ್ತದೆ.
ವ್ಯಕ್ತಿಯೊಬ್ಬನ ಹಣಕಾಸಿನ ಗುರಿಯನ್ನು ಅವಲಂಬಿಸಿ ಅವನು/ಅವಳು, ಈಕ್ವಿಟಿ ಮತ್ತು ಸಾಲ (ಡೆಟ್) ದ ಸಾಧನಗಳನ್ನೊಳಗೊಂಡಿರುವ ಮ್ಯೂಚುಯಲ್ ಫಂಡ್ ಪ್ರಕಾರಗಳಲ್ಲಿ ಹೂಡಿಕೆ ಮಾಡಬಹುದು. ಈಕ್ವಿಟಿ-ಆಧಾರಿತ ನಿಧಿಗಳು ಹೆಚ್ಚಿನ ಅಪಾಯ ಮತ್ತು ಆದಾಯವನ್ನು ಒಳಗೊಂಡಿದ್ದು, ಬಾಂಡ್ಗಳಂತಹ ಡೆಟ್ ಸಾಧನಗಳು ಉತ್ತಮ ಸೆಕ್ಯೂರಿಟಿಯನ್ನು ಒದಗಿಸುತ್ತವೆ. ಈ ಎರಡರ ಭವಿಷ್ಯದ ಕಾರ್ಯಕ್ಷಮತೆಯು, ಮಾರುಕಟ್ಟೆಯ ಪರಿಸ್ಥಿತಿಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.
ಎಸ್ಐಪಿ ಗಳ ಸರಿಯಾದ ವಿತರಣೆಯು, ಆರ್ಥಿಕ ಆಘಾತಗಳ ವಿರುದ್ಧ ನಿಮ್ಮ ಹೂಡಿಕೆಗಳ ಪರಿಣಾಮಗಳನ್ನು ಕಡಿಮೆ ಮಾಡುವಾಗ ಸಾಕಷ್ಟು ಆದಾಯವನ್ನು ಖಚಿತಪಡಿಸಿಕೊಳ್ಳುವ ಒಂದು ಮಾರ್ಗವಾಗಿದೆ. ಇದನ್ನು ಸಾಧಿಸಲು ಆನ್ಲೈನ್ ಎಸ್ಐಪಿ ಕ್ಯಾಲ್ಕುಲೇಟರ್, ಹೂಡಿಕೆದಾರರಿಗೆ ತಮ್ಮ ಹೂಡಿಕೆಯ ಯೋಜನೆಯಲ್ಲಿ ಉತ್ತಮ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸುವ ಮೂಲಕ ಸಹಾಯ ಮಾಡುತ್ತದೆ.
ಭಿನ್ನವಾದ ಹೂಡಿಕೆಯ ಪರಿಸ್ಥಿತಿಗಳ ವಿರುದ್ಧ ಸಂಭವನೀಯ ಆದಾಯವನ್ನು ಪರಿಶೀಲಿಸಲು, ಬಳಕೆದಾರರು ಇನ್ಪುಟ್ ಮೌಲ್ಯಗಳನ್ನು ಬದಲಾಯಿಸಬಹುದು. ಅಂತೆಯೇ, ಅವರು ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಹೆಚ್ಚು ಸೂಕ್ತವಾದ ವಿವರಗಳನ್ನು ನಿರ್ಧರಿಸಬಹುದು.
ಆದಾಗ್ಯೂ, ಎಸ್ಐಪಿ ಕ್ಯಾಲ್ಕುಲೇಟರ್ನ ಪ್ರಯೋಜನಗಳು ಇಲ್ಲಿಗೆ ಮುಗಿಯುವುದಿಲ್ಲ. ಇನ್ನೂ ಇದೆ, ಓದಿ ಮುಂದೆ!
ಎಸ್ಐಪಿ ಕ್ಯಾಲ್ಕುಲೇಟರ್ನ ಪ್ರಯೋಜನಗಳು
ಪ್ರಸ್ತುತದಲ್ಲಿರುವ ಮತ್ತು ಹೊಸ ಹೂಡಿಕೆದಾರರಿಗೆ ಎಸ್ಐಪಿ ಕ್ಯಾಲ್ಕುಲೇಟರ್ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಕೆಳಗೆ ಓದಿ.
ವೇಗವಾದ ಮತ್ತು ನಿಖರವಾದ ಫಲಿತಾಂಶಗಳು: ಕಷ್ಟಕರವಾದ ಎಸ್ಐಪಿ ಕ್ಯಾಲ್ಕುಲೇಟರ್ ಸೂತ್ರವನ್ನು ಬಳಸಿಕೊಂಡು, ಕೈಯಿಂದ ಮಾಡುವ ಲೆಕ್ಕಾಚಾರವು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೇ, ಇದು ದೋಷಗಳಿಂದ ತುಂಬಿರಬಹುದು. ಪ್ರತಿಯಾಗಿ, ಆನ್ಲೈನ್ ಕ್ಯಾಲ್ಕುಲೇಟರ್ ನಿಮಗೆ ಕೆಲವೇ ಕೆಲವು ಸೆಕೆಂಡುಗಳಲ್ಲಿ ನಿಖರವಾದ ಫಲಿತಾಂಶಗಳನ್ನು ನೀಡುತ್ತದೆ. ವ್ಯಾಪಕ ಲಭ್ಯತೆ: ಬಹುತೇಕ ಎಲ್ಲಾ ಎ.ಎಮ್.ಸಿ ಗಳು ತಮ್ಮ ವೆಬ್ಸೈಟ್ನಲ್ಲಿ ಎಸ್ಐಪಿ ಆದಾಯವನ್ನು ಲೆಕ್ಕಾಚಾರ ಮಾಡಲು ಆನ್ಲೈನ್ ಟೂಲ್ ಅನ್ನು ಒದಗಿಸುತ್ತವೆ. ಅಲ್ಲದೇ, ಇದು ದೋಷಗಳಿಂದ ತುಂಬಿರಬಹುದು. ಪ್ರತಿಯಾಗಿ, ಆನ್ಲೈನ್ ಕ್ಯಾಲ್ಕುಲೇಟರ್ ನಿಮಗೆ ಕೆಲವೇ ಕೆಲವು ಸೆಕೆಂಡುಗಳಲ್ಲಿ ನಿಖರವಾದ ಫಲಿತಾಂಶಗಳನ್ನು ನೀಡುತ್ತದೆ.
ವ್ಯಾಪಕ ಲಭ್ಯತೆ: ಬಹುತೇಕ ಎಲ್ಲಾ ಎ.ಎಮ್.ಸಿ ಗಳು ತಮ್ಮ ವೆಬ್ಸೈಟ್ನಲ್ಲಿ ಎಸ್ಐಪಿ ಆದಾಯವನ್ನು ಲೆಕ್ಕಾಚಾರ ಮಾಡಲು ಆನ್ಲೈನ್ ಟೂಲ್ ಅನ್ನು ಒದಗಿಸುತ್ತವೆ. ಆಸಕ್ತ ವ್ಯಕ್ತಿಗಳು ತಾವು ಬಯಸಿದ ಫಲಿತಾಂಶಗಳನ್ನು ತಕ್ಷಣವೇ ತಿಳಿದುಕೊಳ್ಳಲು ಅಂತಹ ವೆಬ್ಸೈಟ್ಗಳಿಗೆ ಭೇಟಿ ನೀಡಬಹುದು.
ಉಚಿತ ವೆಚ್ಚ: ಅಂತಹ ಆನ್ಲೈನ್ ಟೂಲ್ ಅನ್ನು ಬಳಸುವುದಕ್ಕಾಗಿ ವೆಬ್ಸೈಟ್ಗಳು ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ.
ಅನುಕೂಲಕರ ಬಳಕೆ: ಬಳಕೆದಾರರು ಈ ಹಿಂದೆ ಚರ್ಚಿಸಿದಂತೆ ಕೆಲವು ಸರಳ ವಿವರಗಳನ್ನು ಮಾತ್ರ ಒದಗಿಸಬೇಕಾಗುತ್ತದೆ. ಈ ರೀತಿಯಾಗಿ, ಹಣಕಾಸಿನ ಬಗ್ಗೆ ಹೆಚ್ಚಿನ ಜ್ಞಾನವಿರದ ಸಾಮಾನ್ಯ ವ್ಯಕ್ತಿಗಳು ಸಹ ಕ್ಯಾಲ್ಕುಲೇಟರ್ನ ಫಲಿತಾಂಶಗಳನ್ನು ಬಳಸಿಕೊಂಡು, ಬುದ್ಧಿವಂತ ಹೂಡಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.