ಡೆಲಿವರಿ ದಿನಾಂಕವನ್ನು ಲೆಕ್ಕಾಚಾರ ಮಾಡಲು ಹಲವಾರು ದಾರಿಗಳಿವೆ. ಡೆಲಿವರಿ ದಿನಾಂಕದ ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು ನಿರೀಕ್ಷಿತ ಡೆಲಿವರಿ ದಿನಾಂಕವನ್ನು ಗೊತ್ತು ಮಾಡಿಕೊಳ್ಳಲು, ನಿಮಗೆ ನಿಮ್ಮ ಕೊನೆಯ ಪೀರಿಯಡ್ ನ ಮೊದಲ ದಿನ ಅಥವಾ ಗರ್ಭಧಾರಣೆಯ ದಿನಾಂಕ ತಿಳಿದಿರಬೇಕು.
ಐವಿಎಫ್ ಮೂಲಕ ಗರ್ಭಧರಿಸಿದ ಸಂದರ್ಭಗಳಲ್ಲಿ, ವರ್ಗಾವಣೆಯ ದಿನಾಂಕವನ್ನು ನಿರೀಕ್ಷಿತ ಡೆಲಿವರಿ ದಿನಾಂಕವನ್ನು ಲೆಕ್ಕಾಚಾರ ಮಾಡಲು ಬಳಸಲಾಗುತ್ತದೆ. ಆದಾಗ್ಯೂ, ಈ ದಿನಾಂಕಗಳಲ್ಲಿ ಯಾವ ದಿನಾಂಕವೂ ತಿಳಿದಿಲ್ಲದಿದ್ದರೆ, ವೈದ್ಯರು ಹೆರಿಗೆಯ ದಿನಾಂಕವನ್ನು ಕಂಡುಹಿಡಿಯಲು ಅಲ್ಟ್ರಾಸೌಂಡ್ ಸ್ಕ್ಯಾನ್ ಅನ್ನು ಬಳಸುತ್ತಾರೆ.
ಈ ಅಂಶಗಳ ಬಗ್ಗೆ ಈಗ ವಿವರವಾಗಿ ತಿಳಿದುಕೊಳ್ಳೋಣ.
1. ನಿಮ್ಮ ಕೊನೆಯ ಪೀರಿಯಡ್ ನ ಮೊದಲ ದಿನ
ಸಾಮಾನ್ಯವಾಗಿ, ಗರ್ಭಧಾರಣೆಯು ಸುಮಾರು 38-40 ವಾರಗಳವರೆಗೆ ಇರುತ್ತದೆ. ಆದ್ದರಿಂದ, ನಿಮ್ಮ ಡ್ಯೂ ಡೇಟ್ ಕಂಡುಕೊಳ್ಳಲು ನಿಮ್ಮ ಕೊನೆಯ ಋತುಚಕ್ರದ ಮೊದಲ ದಿನದಿಂದ 40 ವಾರಗಳನ್ನು ಅಥವಾ 280 ದಿನಗಳನ್ನು ಎಣಿಸಿಕೊಳ್ಳಿ. ಕೊನೆಯ ಮುಟ್ಟಿನ ಅವಧಿಯಿಂದ ಮೂರು ತಿಂಗಳುಗಳನ್ನು ಕಳೆಯುವುದರ ಮೂಲಕ ಮತ್ತು ಏಳು ದಿನಗಳನ್ನು ಸೇರಿಸುವುದರ ಮೂಲಕ ಕೂಡ ಕಂಡುಹಿಡಿಯಬಹುದಾಗಿದೆ.
ಒಬ್ಬರ ಡ್ಯೂ ಡೇಟ್ ಅನ್ನು ಕಂಡುಹಿಡಿಯಲು ಇದು ಅತೀ ಹೆಚ್ಚು ಬಳಕೆಯಲ್ಲಿರುವ ವಿಧಾನವಾಗಿದೆ. ಆದಾಗ್ಯೂ, ಇದು ಕೇವಲ ನಿರೀಕ್ಷಿತ ದಿನಾಂಕ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಮಗು ಡ್ಯೂ ಡೇಟ್ ಗಿಂತ ಬೇಗ ಅಥವಾ ನಿಗದಿತ ದಿನಾಂಕಕ್ಕಿಂತ ಕೆಲವು ದಿನಗಳ ನಂತರ ಜನಿಸುವ ಸಾಧ್ಯತೆಯೂ ಇರುತ್ತದೆ.
2. ಗರ್ಭಧಾರಣೆಯ ದಿನಾಂಕ
ಕೆಲವು ಮಹಿಳೆಯರಿಗೆ ಮಾತ್ರ ಅವರ ಗರ್ಭಧಾರಣೆಯ ದಿನಾಂಕ ತಿಳಿದಿರುತ್ತದೆ. ಅವರು ತಮ್ಮ ಅಂಡೋತ್ಪತ್ತಿ ಲಕ್ಷಣಗಳನ್ನು ಟ್ರ್ಯಾಕ್ ಮಾಡಿದರೆ ಮಾತ್ರ ಇದು ಸಾಧ್ಯ. ಅಂಥವರಲ್ಲಿ ನೀವೂ ಒಬ್ಬರಾಗಿದ್ದರೆ, ನಿಮ್ಮ ನಿರೀಕ್ಷಿತ ಹೆರಿಗೆ ದಿನಾಂಕವನ್ನು ತಿಳಿಯಲು ನೀವು ಆ ದಿನಾಂಕವನ್ನು ಪ್ರೆಗ್ನೆನ್ಸಿ ಡ್ಯೂ ಡೇಟ್ ಕ್ಯಾಲ್ಕುಲೇಟರ್ನಲ್ಲಿ ಹಾಕಬಹುದು.
ಗರ್ಭಧಾರಣೆಯ ದಿನಾಂಕದಿಂದ 266 ದಿನಗಳನ್ನು ಸೇರಿಸುವುದರ ಮೂಲಕ ಸಾಂಪ್ರದಾಯಿಕ ವಿಧಾನವನ್ನು ಸಹ ಬಳಸಬಹುದು. ಇದು ಸಹ ನಿಮಗೆ ನಿರೀಕ್ಷಿತ ದಿನಾಂಕವೊಂದನ್ನು ತಿಳಿಸುತ್ತದೆ. ಅದೇನೇ ಇದ್ದರೂ, ಡ್ಯೂ ಡೇಟ್ ತಿಳಿದುಕೊಳ್ಳುವುದು ಅನೇಕ ಕಾರಣಗಳಿಗೆ ಪ್ರಯೋಜನಕಾರಿಯಾಗಿದೆ. ಪ್ರಾಥಮಿಕವಾಗಿ ಹೊಸ ಪೋಷಕರು ಮಗುವಿನ ಆಗಮನಕ್ಕೆ ಸಿದ್ಧರಾಗಲು ಸಹಾಯ ಮಾಡುತ್ತದೆ.
3. ಐವಿಎಫ್ (IVF) ವರ್ಗಾವಣೆ ದಿನಾಂಕ
ನೀವು ಐವಿಎಫ್ (IVF) ಅಥವಾ ಇನ್-ವಿಟ್ರೋ ಫರ್ಟಿಲೈಸೇಶನ್ ಅನ್ನು ಬಳಸಿಕೊಂಡು ಗರ್ಭಧರಿಸಿದರೆ, ನಿಮ್ಮ ಡೆಲಿವರಿ ದಿನಾಂಕವನ್ನು ಕಂಡುಹಿಡಿಯಲು ನಿಮ್ಮ ವರ್ಗಾವಣೆ ದಿನಾಂಕವನ್ನು ಬಳಸಬಹುದು. ಈ ಪ್ರಕ್ರಿಯೆಯಲ್ಲಿ, ಫಲವತ್ತಾದ ವೀರ್ಯಗಳೊಂದಿಗೆ ಉತ್ತಮ ಅಂಡಾಣುಗಳನ್ನು ಪತ್ತೆ ಹಚ್ಚಲಾಗುತ್ತದೆ. ನಂತರ ಫಲವತ್ತಾದ ಅಂಡಾಣುಗಳು ಅಥವಾ ಭ್ರೂಣಗಳನ್ನು ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ.
ನೀವು 5 ಡೇ ಭ್ರೂಣ ವರ್ಗಾವಣೆ ಮಾಡಿದ್ದರೆ, ನಿಮ್ಮ ವರ್ಗಾವಣೆ ದಿನಾಂಕದಿಂದ ಶುರುಮಾಡಿ 261 ದಿನಗಳನ್ನು ನೀವು ಎಣಿಕೆ ಮಾಡಬೇಕಾಗುತ್ತದೆ. ನೀವು 3 ಡೇ ಭ್ರೂಣ ವರ್ಗಾವಣೆ ಆರಿಸಿಕೊಂಡಿದ್ದರೆ, ವರ್ಗಾವಣೆ ದಿನಾಂಕದಿಂದ 263 ದಿನಗಳನ್ನು ಎಣಿಕೆ ಮಾಡಬೇಕಾಗುತ್ತದೆ. ಆದ್ದರಿಂದ, ವರ್ಗಾವಣೆಯ ಪ್ರಕಾರವನ್ನು ನೋಡಿಕೊಂಡು ದಿನಾಂಕವನ್ನು ಡ್ಯೂ ಡೇಟ್ ಕ್ಯಾಲ್ಕುಲೇಟರ್ ನಲ್ಲಿ ಹಾಕಿರಿ.
4. ಅಲ್ಟ್ರಾಸೌಂಡ್ ಸ್ಕ್ಯಾನ್
ನಿಮಗೆ ಕೊನೆಯ ಪೀರಿಯಡ್ ನ ಮೊದಲ ದಿನಾಂಕ ಅಥವಾ ಗರ್ಭಧಾರಣೆಯ ದಿನಾಂಕ ತಿಳಿದಿಲ್ಲ ಅಥವಾ ಅಂಡೋತ್ಪತ್ತಿ ಲಕ್ಷಣಗಳನ್ನು ಅರ್ಥಮಾಡಿಕೊಳ್ಳಲಾಗಲಿಲ್ಲ ಎಂದು ಭಾವಿಸೋಣ. ಡ್ಯೂ ಡೇಟ್ ತಿಳಿಯುವ ಮತ್ತೊಂದು ದಾರಿ ಯಾವುದೆಂದರೆ ನೀವು ನಿಮ್ಮ ಮೊದಲ ಪ್ರಸವಪೂರ್ವ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡುವ ಕ್ಷಣಗಳು.
ವೈದ್ಯರಿಗೆ ಡೆಲಿವರಿ ದಿನಾಂಕವನ್ನು ಲೆಕ್ಕಾಚಾರ ಮಾಡಲು ಸಹಾಯ ಮಾಡುವ ಕೆಲವು ಸುಳಿವುಗಳು ಇಲ್ಲಿವೆ.
ಆರಂಭಿಕ ಅಲ್ಟ್ರಾಸೌಂಡ್ ಮಾಡಿಸುವುದರಿಂದ ಡೆಲಿವರಿ ದಿನಾಂಕವನ್ನು ಹೆಚ್ಚು ನಿಖರವಾಗಿ ನಿರ್ಧರಿಸಬಹುದು. ಆದಾಗ್ಯೂ, ಪ್ರತಿ ಮಹಿಳೆಗೂ ಆರಂಭಿಕ ಅಲ್ಟ್ರಾಸೌಂಡ್ ಅನ್ನು ಸೂಚಿಸಲಾಗುವುದಿಲ್ಲ ಏಕೆಂದರೆ ಅದು ಅವರು ನಂಬಿಕೊಂಡಿರುವ ವೈದ್ಯರ ಮೇಲೆ ಅವಲಂಬಿತವಾಗಿರುತ್ತದೆ.
ಕೆಲವರು ವಾಡಿಕೆಯ ಅಲ್ಟ್ರಾಸೌಂಡ್ ಅನ್ನು ಸೂಚಿಸಿದರೆ, ಬಹುತೇಕರು ಪೀರಿಯಡ್ಸ್ ವಿಳಂಬವಾಗಿದ್ದರೆ, ನಿಮಗೆ 35+ ವಯಸ್ಸು ಆಗಿದ್ದರೆ ಅಥವಾ ನೀವು ಗರ್ಭಪಾತದ ಇತಿಹಾಸವನ್ನು ಹೊಂದಿದ್ದಾರೆ ಮಾತ್ರ ಶಿಫಾರಸು ಮಾಡುತ್ತಾರೆ. ಕೆಲವೊಮ್ಮೆ, ದೈಹಿಕ ಪರೀಕ್ಷೆ ಅಥವಾ ಕೊನೆಯ ಪೀರಿಯಡ್ ಮೂಲಕ ಡ್ಯೂ ಡೇಟ್ ಅನ್ನು ಕಂಡುಹಿಡಿಯಲು ಸಾಧ್ಯವಾಗದಿದ್ದಾಗ ಈ ಸ್ಕ್ಯಾನ್ ಅನ್ನು ಸೂಚಿಸುತ್ತಾರೆ.
- ಮಗುವಿನ ಹೃದಯ ಬಡಿತವನ್ನು ಆಲಿಸುವುದು
ವೈದ್ಯರು ಮಗುವಿನ ಹೃದಯ ಬಡಿತವನ್ನು ಆಲಿಸುವುದು ಡೆಲಿವರಿ ದಿನಾಂಕವನ್ನು ನಿರ್ಧರಿಸಲು ಸಹಾಯ ಮಾಡುವ ಮತ್ತೊಂದು ಸುಳಿವು. ಸಾಮಾನ್ಯವಾಗಿ, 9 ಅಥವಾ 10ನೇ ವಾರದಲ್ಲಿ, ಭ್ರೂಣದ ಹೃದಯ ಬಡಿತವನ್ನು ಪರಿಶೀಲಿಸಲು ವೈದ್ಯರು ಸ್ಕ್ಯಾನ್ ಮಾಡಲು ಸೂಚಿಸುತ್ತಾರೆ.
ಕೆಲವು ಸಮಯದ ನಂತರ, ನೀವು ಭ್ರೂಣದ ಚಲನೆಯನ್ನು ಅನುಭವಿಸಲು ಪ್ರಾರಂಭಿಸಿದಾಗ, ನಿಮ್ಮ ವೈದ್ಯರು 18ನೇ ಅಥವಾ 22 ನೇ ವಾರದಲ್ಲಿ ಮತ್ತೊಂದು ಸ್ಕ್ಯಾನ್ ಮಾಡಲು ಸೂಚಿಸುತ್ತಾರೆ. ಮಗುವಿನ ಚಲನೆಯನ್ನು ಪರಿಶೀಲಿಸುವುದು ಮತ್ತು ನಿಮ್ಮ ಡ್ಯೂ ಡೇಟ್ ಅನ್ನು ಊಹಿಸಲು ಈ ಸ್ಕ್ಯಾನ್ ನಿಂದ ಸಾಧ್ಯವಾಗುತ್ತದೆ.
- ಫಂಡಲ್ ಹೈಟ್ ಮತ್ತು ಗರ್ಭಾಶಯದ ಗಾತ್ರದ ಪರಿಶೀಲನೆ
ವೈದ್ಯರು ನಡೆಸುವ ಮತ್ತೊಂದು ತಪಾಸಣೆ ಫಂಡಲ್ ಹೈಟ್ ನದ್ದಾಗಿರುತ್ತದೆ. ಪ್ಯುಬಿಕ್ ಮೂಳೆಯಿಂದ ಗರ್ಭಾಶಯದವರೆಗಿನ ಅಳತೆಯನ್ನು ಫಂಡಲ್ ಹೈಟ್ ಎನ್ನಲಾಗುತ್ತದೆ. ಪ್ರಸವಪೂರ್ವ ತಪಾಸಣೆಗಾಗಿ ನೀವು ಪ್ರತಿ ಬಾರಿ ಭೇಟಿ ನೀಡಿದಾಗಲೂ ಈ ಅಂತರವನ್ನು ಪರಿಶೀಲಿಸಲಾಗುತ್ತದೆ. ಈ ಅಂತರವನ್ನು ಪರಿಶೀಲಿಸುವುದರಿಂದ ನಿಮ್ಮ ಡ್ಯೂ ಡೇಟ್ ನಿಂದ ನೀವು ಎಷ್ಟು ದೂರದಲ್ಲಿದ್ದೀರಿ ಎಂಬ ಸೂಚನೆ ಸಿಗುತ್ತದೆ.
ಕೆಲವು ವೈದ್ಯರು ಆರಂಭಿಕ ಪ್ರಸವಪೂರ್ವ ಪರೀಕ್ಷೆಯ ಸಮಯದಲ್ಲಿ ನಿಮ್ಮ ಗರ್ಭಾಶಯದ ಗಾತ್ರವನ್ನು ಪರಿಶೀಲಿಸುವ ಮೂಲಕ ಅಂದಾಜು ಡೆಲಿವರಿ ದಿನಾಂಕವನ್ನು ಹೇಳುವ ಸಾಧ್ಯತೆ ಇರುತ್ತದೆ. ಈ ಅಂಶಗಳು ಹೆಚ್ಚು ನಿಖರವಾದ ಡೆಲಿವರಿ ದಿನಾಂಕವನ್ನು ಸೂಚಿಸುತ್ತವೆಯಾದರೂ, ನೀವು ಮುಂಚಿತವಾಗಿಯೇ ಸಿದ್ಧವಾಗಿ ಇರಬೇಕು.