ಎನ್‌ಎಸ್‌ಸಿ ಕ್ಯಾಲ್ಕುಲೇಟರ್
ಹೂಡಿಕೆ ಮೊತ್ತ
ಆದಾಯ ದರ (ವಾರ್ಷಿಕ)
ಪ್ರಸ್ತುತ ಬಡ್ಡಿ ದರ 6.8%
ಕಾಲಾವಧಿ
ಎನ್‌ಎಸ್‌ಸಿ 5 ವರ್ಷಗಳಲ್ಲಿ ಮೆಚೂರ್ ಆಗುವುದರಿಂದ ಕಾಲಾವಧಿಯನ್ನು 5 ವರ್ಷವೆಂದು ನಿಗದಿಪಡಿಸಲಾಗಿದೆ
ಎನ್‌ಎಸ್‌ಸಿ ಕ್ಯಾಲ್ಕುಲೇಟರ್: ಮೆಚುರಿಟಿ ಮೌಲ್ಯ ಮತ್ತು ತೆರಿಗೆ ಮೊತ್ತ ಲೆಕ್ಕಾಚಾರದ ವಿವರಣೆ
ವ್ಯಕ್ತಿಗಳು ಎನ್‌ಎಸ್‌ಸಿ ಕ್ಯಾಲ್ಕುಲೇಟರ್ ಅನ್ನು ಬಳಸಿ ಮೆಚುರಿಟಿ ಸಮಯದಲ್ಲಿ ಸ್ವೀಕರಿಸುವ ಹಣದ ಮೊತ್ತವನ್ನು ಸುಲಭವಾಗಿ ಲೆಕ್ಕಾಚಾರ ಮಾಡಬಹುದು. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ ಬಡ್ಡಿ ಕ್ಯಾಲ್ಕುಲೇಟರ್ ಬಳಸಲು ಸುಲಭವಾಗಿದೆ ಮತ್ತು ಒಬ್ಬ ವ್ಯಕ್ತಿಯ ಹೂಡಿಕೆಯ ಒಟ್ಟು ಆದಾಯದ ಫಲಿತಾಂಶಗಳನ್ನು ಶೀಘ್ರವಾಗಿ ತೋರಿಸುತ್ತದೆ.
ಈ ಆನ್‌ಲೈನ್ ಪರಿಕರವನ್ನು ಬಳಸಿಕೊಂಡು ಎನ್‌ಎಸ್‌ಸಿ ಬಡ್ಡಿ ದರವನ್ನು ಹೇಗೆ ಲೆಕ್ಕ ಹಾಬಹುದು ಎಂಬುದನ್ನು ತಿಳಿಯಲು ಮುಂದೆ ಓದಿ.
ಎನ್‌ಎಸ್‌ಸಿ ಕ್ಯಾಲ್ಕುಲೇಟರ್ ಎಂದರೇನು?
ಎನ್‌ಎಸ್‌ಸಿ ಬಡ್ಡಿ ಕ್ಯಾಲ್ಕುಲೇಟರ್ ಪೋಸ್ಟ್ ಆಫೀಸ್ಗಳಲ್ಲಿ ಹೂಡಿಕೆ ಮಾಡಲಾದ 5 ವರ್ಷ ಕಾಲಾವಧಿಯ ಎನ್‌ಎಸ್‌ಸಿ ಯ ಮೆಚುರಿಟಿ ಮೌಲ್ಯವನ್ನು ಲೆಕ್ಕಾಚಾರ ಮಾಡಲು ವಿನ್ಯಾಸಗೊಳಿಸಲಾದ ಆನ್‌ಲೈನ್ ಸಾಧನವಾಗಿದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯು ಭಾರತೀಯ ನಿವಾಸಿಗಳನ್ನು ಉಳಿತಾಯ ಮಾಡಲು ಪ್ರೋತ್ಸಾಹಿಸುವ ಒಂದು ಸರಕಾರಿ ಉಪಕ್ರಮವಾಗಿದೆ. ವ್ಯಕ್ತಿಗಳು ಎನ್‌ಎಸ್‌ಸಿ ಯಲ್ಲಿ ಇನ್ವೆಸ್ಟ್ ಮಾಡಬಹುದು ಮತ್ತು ಅದರ ಅಡಿಯಲ್ಲಿ ಲಭ್ಯವಾಗುವ ಹಲವು ಪ್ರಯೋಜನಗಳನ್ನು ಪಡೆಯಬಹುದು. ಇವುಗಳಲ್ಲಿ ಮೆಚುರಿಟಿ ಸಮಯದಲ್ಲಿ ಖಚಿತವಾದ ಬಡ್ಡಿ ಆದಾಯ ಮತ್ತು ಇನ್‌ಕಮ್ ಟ್ಯಾಕ್ಸ್ ಕಾಯ್ದೆಯ ವಿಭಾಗ 80ಸಿ ಅಡಿಯಲ್ಲಿ ಹೂಡಿಕೆ ಮೊತ್ತದ ಮೇಲಿನ ತೆರಿಗೆ ವಿನಾಯಿತಿ ಸೇರಿವೆ.
ಎನ್‌ಎಸ್‌ಸಿ ಬಡ್ದಿ ದರವನ್ನು ಲೆಕ್ಕಾಚಾರ ಮಾಡುವುದು ಹೇಗೆ?
ಮೊದಲೇ ಹೇಳಿದಂತೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಕ್ಯಾಲ್ಕುಲೇಟರ್ ನೊಂದಿಗೆ ಒಬ್ಬರು ಮೆಚುರಿಟಿ ನಂತರ ಅವನು/ಅವಳು ಗಳಿಸುವ ಬಡ್ಡಿಯ ಲೆಕ್ಕಾಚಾರ ಮಾಡಬಹುದು.
ನಿಮ್ಮ ಹೂಡಿಕೆ ಮೇಲಿನ ಒಟ್ಟು ಬಡ್ಡಿ ಲೆಕ್ಕಾಚಾರವನ್ನು ನೀವು ಕೈಲೆಕ್ಕದ ಮುಖಾಂತರವೂ ತಿಳಿಯಬಹುದಾಗಿದೆ. ಆದಾಗ್ಯೂ, ಆನ್‌ಲೈನ್ ಎನ್‌ಎಸ್‌ಸಿ ಬಡ್ದಿ ಕ್ಯಾಲ್ಕುಲೇಟರ್ ಅನ್ನು ಬಳಸುವವರು ಕೆಳಗೆ ನೀಡಲಾದ ಮಾಹಿತಿಯನ್ನು ನಮೂದಿಸಬೇಕು -
- ಎನ್‌ಎಸ್‌ಸಿ ವಿಧ (ಸಂಚಿಕೆ VIII /ಸಂಚಿಕೆ IX)
- ಎನ್ಎಸ್ಸಿಯ ಖರೀದಿ ದಿನಾಂಕ
- ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ಹೂಡಿಕೆ ಮಾಡಿರುವ ಮೊತ್ತ
- ಒಟ್ಟು ಕಾಲಾವಧಿ
- ಅನ್ವಯಿಸುವ ಬಡ್ಡಿ ದರ
ಒಮ್ಮೆ ನೀವು ಸಂಬಂಧಿತ ಬಾಕ್ಸ್ಗಳಲ್ಲಿ ಮಾಹಿತಿಯನ್ನು ನಮೂದಿಸಿದ ನಂತರ, ಎನ್‌ಎಸ್‌ಸಿ ಆದಾಯ ಕ್ಯಾಲ್ಕುಲೇಟರ್ ಫಲಿತಾಂಶಗಳನ್ನು ತೋರಿಸುತ್ತದೆ.
ಬಡ್ಡಿ ದರವು ಹೂಡಿಕೆಯ ಸಮಯವನ್ನು ಅವಲಂಬಿಸುತ್ತದೆ. ಹಣಕಾಸು ಸಚಿವರು ಈ ಬಡ್ಡಿ ದರವನ್ನು ನಿರ್ಧರಿಸುತ್ತಾರೆ ಮತ್ತು ಅದನ್ನು ಒಂದು ಸುತ್ತೋಲೆಯ ಮೂಲಕ ಪ್ರಕಟಿಸುತ್ತಾರೆ.
2021ರ ಪ್ರಕಾರ, ಎನ್‌ಎಸ್‌ಸಿ ಬಡ್ಡಿ ದರವು 6.8% ಇದೆ.
ಪೋಸ್ಟ್ ಆಫೀಸ್ ಎನ್‌ಎಸ್‌ಸಿ ಕ್ಯಾಲ್ಕುಲೇಟರ್‌ನೊಂದಿಗೆ ಬಡ್ಡಿಯನ್ನು ಲೆಕ್ಕ ಮಾಡುವ ಉದಾಹರಣೆ
ಎನ್‌ಎಸ್‌ಸಿ ಕ್ಯಾಲ್ಕುಲೇಟರ್ ಸಂಯುಕ್ತ ಬಡ್ಡಿ ಸೂತ್ರದ ಮೇಲೆ ಕಾರ್ಯನಿರ್ವಹಿಸುತ್ತದೆ. ಇಲ್ಲಿ, ಬಡ್ಡಿಯನ್ನು ವಾರ್ಷಿಕವಾಗಿ ಸಂಯೋಜಿಸಲಾಗುತ್ತದೆ. ಆದ್ದರಿಂದ, ಮೆಚುರಿಟಿ ಮೊತ್ತವನ್ನು ಲೆಕ್ಕಾಚಾರ ಮಾಡುವ ಸೂತ್ರವು ಹೀಗಿರುತ್ತದೆ:
P [1+ R/100]^n
ಇಲ್ಲಿ,
ವಿವರಗಳು |
ಮೌಲ್ಯ |
ಹೂಡಿಕೆ ಮೊತ್ತ (P) |
₹1,00,000 |
ಬಡ್ದಿ ದರ (R) |
ವಾರ್ಷಿಕ 6.8% |
ಲಾಕ್-ಇನ್ ಅವಧಿ (n) |
5 ವರ್ಷಗಳು |
ಆಯಾ ಮೌಲ್ಯಗಳನ್ನು ಸೂತ್ರದಲ್ಲಿ ಇರಿಸಿದಾಗ, ನಾವು ಪಡೆಯುತ್ತೇವೆ,
ಮೆಚುರಿಟಿ ಮೊತ್ತ = ₹ 100000[1+ 6.8/100]^5
= ₹1,46,254
ಇದರಂತೆ, ಗಳಿಸಿದ ಒಟ್ಟು ಬಡ್ಡಿ ₹(1,46,254 - 1,00,000) = ₹46,254 ಆಗುತ್ತದೆ.
ಮೇಲಿನ ಲೆಕ್ಕಾಚಾರದಿಂದ, ₹1,00,000 ಹೂಡಿಕೆ ಮಾಡುವ ಒಬ್ಬ ವ್ಯಕ್ತಿ 5 ವರ್ಷಗಳಲ್ಲಿ ಮೆಚುರಿಟಿ ಆದ ಬಳಿಕ ಅವನು ಅಥವಾ ಅವಳು ಒಟ್ಟು ₹46,254 ಬಡ್ಡಿ ಆದಾಯವನ್ನು ಗಳಿಸುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ.
ಹೀಗಾಗಿ, ಆನ್‌ಲೈನ್ 5-ವರ್ಷದ ಎನ್‌ಎಸ್‌ಸಿ ಆಸಕ್ತಿ ಕ್ಯಾಲ್ಕುಲೇಟರ್ ಅನ್ನು ಬಳಸುವ ಮೂಲಕ, ವ್ಯಕ್ತಿಗಳು ಇಲ್ಲಿ ಉಲ್ಲೇಖಿಸಿದ ಫಲಿತಾಂಶಗಳನ್ನು ತ್ವರಿತವಾಗಿ ಪಡೆಯಬಹುದು.
ಎನ್‌ಎಸ್‌ಸಿ ಮೆಚುರಿಟಿ ಮೌಲ್ಯದ ಮೇಲೆ ತೆರಿಗೆ ಮೊತ್ತವನ್ನು ಲೆಕ್ಕಾಚಾರ ಮಾಡುವುದು ಹೇಗೆ?
ಮೊದಲೇ ಹೇಳಿರುವಂತೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯಡಿ ಮಾಡಿ ಹೂಡಿಕೆ ಮೊತ್ತವು ತೆರಿಗೆ ವಿನಾಯಿತಿಗೆ ಅರ್ಹವಾಗಿದೆ. ಇನ್‌ಕಮ್ ಟ್ಯಾಕ್ಸ್ ಕಾಯ್ದೆ ಸೆಕ್ಷನ್ 80ಸಿ ಪ್ರಕಾರ ವಿನಾಯಿತಿ ಪಡೆಯಬಹುದಾಗಿದೆ. ಆದಾಗ್ಯೂ, ಹೂಡಿಕೆ ಮೇಲೆ ಗಳಿಸಿದ ಬಡ್ಡಿಯು ತೆರಿಗೆ ಮುಕ್ತವಾಗಿರುವುದಿಲ್ಲ. ಒಬ್ಬ ವ್ಯಕ್ತಿಯ ಇನ್‌ಕಮ್ ಟ್ಯಾಕ್ಸ್ ಸ್ಲ್ಯಾಬ್ ದರದ ಪ್ರಕಾರ ಬಡ್ಡಿಯ ಮೇಲೆ ತೆರಿಗೆ ಅನ್ವಯಿಸುತ್ತದೆ. ಇಲ್ಲಿ ತೆರಿಗೆಗೆ ಒಳಪಡುವ ಮೊತ್ತವನ್ನು ಕಂಡುಹಿಡಿಯಲು ಒಟ್ಟು ಆದಾಯದಿಂದ ಕಳೆಯಬೇಕಾಗುತ್ತದೆ.
ಸೂಚನೆ: ₹1.5 ಲಕ್ಷದವರೆಗಿನ ಹೂಡಿಕೆ ಮೇಲೆ ಮಾತ್ರ ತೆರಿಗೆ ಪ್ರಯೋಜನಗಳು ಅನ್ವಯವಾಗುತ್ತವೆ ಎಂಬುದನ್ನು ನೆನಪಿನಲ್ಲಿಡಬೇಕು.
ಉಲ್ಲೇಖಿಸಲಾದ ಫಲಿತಾಂಶಗಳನ್ನು ಅಂದಾಜು ಮಾಡಲು ವ್ಯಕ್ತಿಗಳು ಎನ್‌ಎಸ್‌ಸಿ ತೆರಿಗೆ ಕ್ಯಾಲ್ಕುಲೇಟರ್ ಅನ್ನು ಬಳಸಬಹುದು.
ಎನ್‌ಎಸ್‌ಸಿ ಮೆಚುರಿಟಿ ಮೌಲ್ಯದ ಮೇಲೆ ತೆರಿಗೆ ಮೊತ್ತವನ್ನು ಲೆಕ್ಕಾಚಾರ ಮಾಡಲು ಉದಾಹರಣೆ
ವಿವರಗಳು |
ಮೌಲ್ಯ |
ಹೂಡಿಕೆ ಮೊತ್ತ |
₹1,50,000 |
ಬಡ್ಡಿ ದರ |
ವಾರ್ಷಿಕ 6.8% |
ಕಾಲಾವಧಿ |
5 ವರ್ಷಗಳು |
ವಿವರಗಳು |
ಲೆಕ್ಕಾಚಾರ ಮಾಡಲಾದ ಮೌಲ್ಯ |
ಮೆಚುರಿಟಿ ಮೌಲ್ಯ |
₹2,08,424 |
ಗಳಿಸಿದ ಬಡ್ದಿ |
₹58, 424 |
ಇಲ್ಲಿ, ಹೂಡಿಕೆದಾರರ ತೆರಿಗೆ ಸ್ಲ್ಯಾಬ್ ದರದ ಪ್ರಕಾರ ಗಳಿಸಿದ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ.
ಎನ್‌ಎಸ್‌ಸಿ 5ನೇ ವರ್ಷದ ಬಡ್ಡಿಯನ್ನು ಮರುಹೂಡಿಕೆ ಮಾಡುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಆದ್ದರಿಂದ, ವ್ಯಕ್ತಿಗಳು ತೆರಿಗೆ ವಿಧಿಸಬಹುದಾದ ಆದಾಯದಲ್ಲಿ ಇನ್‌ಕಮ್ ಟ್ಯಾಕ್ಸ್ ಕಾಯಿದೆಯ ಸೆಕ್ಷನ್ 80ಸಿ ಪ್ರಕಾರ ಡಿಡಕ್ಷನ್ ಪಡೆಯಲು ಸಾಧ್ಯವಿಲ್ಲ.
ಎನ್‌ಎಸ್‌ಸಿ ಕ್ಯಾಲ್ಕುಲೇಟರ್ ಅನ್ನು ಬಳಸುವ ಜ್ಞಾನವನ್ನು ಹೊಂದಿರುವ ವ್ಯಕ್ತಿಗಳು ಈಗ ತಮ್ಮ ಹೂಡಿಕೆ ಕಾರ್ಯತಂತ್ರವನ್ನು ಅದಕ್ಕೆ ಅನುಗುಣವಾಗಿ ಯೋಜಿಸಬಹುದು.