ಹ್ಯೂಮನ್ ಲೈಫ್ ವ್ಯಾಲ್ಯೂ ಕ್ಯಾಲ್ಕುಲೇಟರ್
ವಾರ್ಷಿಕ ಆದಾಯ
ಪ್ರಸ್ತುತ ವಯಸ್ಸು (ವರ್ಷಗಳು)
ಮಾಸಿಕ ವೆಚ್ಚಗಳು
ಭಾರಿ ವೆಚ್ಚಗಳು
ಅಸ್ತಿತ್ವದಲ್ಲಿರುವ ಉಳಿತಾಯಗಳು
ಅಸ್ತಿತ್ವದಲ್ಲಿರುವ ಇನ್ಶೂರೆನ್ಸ್ ಎಸ್ಐ
ಬಾಕಿ ಸಾಲಗಳು
ಹ್ಯೂಮನ್ ಲೈಫ್ ವ್ಯಾಲ್ಯೂ ಕ್ಯಾಲ್ಕುಲೇಟರ್
ವಿಶ್ವದಲ್ಲಿ ಬದುಕು ಅನ್ನುವುದು ಅತ್ಯಂತ ಅನಿಶ್ಚಿತ ವಾಸ್ತವ ಸತ್ಯ. ಒಂದು ಜೀವವನ್ನು ಕಳೆದುಕೊಂಡಾಗ ಬಹಳಷ್ಟು ಕಳೆದುಕೊಳ್ಳಬೇಕಾಗುತ್ತದೆ. ಜೀವನಕ್ಕೆ ಒಂದು ಮೌಲ್ಯವನ್ನು ತುಂಬಲು, ಅದಕ್ಕೆ ಬೇಕಾಗಿ ಪ್ರೈಸ್ ಟ್ಯಾಗ್ ಅಂಟಿಸಲು ಸಾಧ್ಯವಿಲ್ಲ. ಆದಾಗ್ಯೂ, ನಾವು ಇನ್ಶೂರೆನ್ಸ್ ಮೂಲಕ ಜೀವನದ ಆರ್ಥಿಕ ಮೌಲ್ಯವನ್ನು ಸುರಕ್ಷಿತಗೊಳಿಸಲು ಪ್ರಯತ್ನಿಸಬಹುದು.
ಒಬ್ಬರಿಗೆ ಎಷ್ಟು ಇನ್ಶೂರೆನ್ಸ್ ಬೇಕು ಎಂಬುದನ್ನು ಕಂಡುಹಿಡಿಯಲು, ಇನ್ಶೂರೆನ್ಸ್ ಉದ್ಯಮದಾದ್ಯಂತ ವ್ಯಾಪಕವಾಗಿ ಬಳಸಲಾಗುವ ಪ್ರಮುಖ ಅಂಶ ಹ್ಯೂಮನ್ ಲೈಫ್ ವ್ಯಾಲ್ಯೂ ಅಥವಾ ಎಚ್ ಎಲ್ ವಿ (HLV). ಸರಳವಾಗಿ ಹೇಳಬೇಕೆಂದರೆ ಎಚ್ ಎಲ್ ವಿ (HLV) ಎಂದರೆ ಒಬ್ಬ ವ್ಯಕ್ತಿಗೆ ಅನ್ವಯಿಸಬಹುದಾದ ಆರ್ಥಿಕ ಮೌಲ್ಯ.
ಇದು ಒಬ್ಬ ವ್ಯಕ್ತಿಯು ಭವಿಷ್ಯದಲ್ಲಿ ತನ್ನ ಕುಟುಂಬಕ್ಕಾಗಿ ಸಂಪಾದಿಸಲು ಬಯಸುವ ಎಲ್ಲಾ ಆದಾಯದ ಪ್ರಸ್ತುತ ಮೌಲ್ಯ. ಕುಟುಂಬದ ಅನ್ನದಾತರ ಅಕಾಲಿಕ ಮರಣದ ಸಂದರ್ಭದಲ್ಲಿ ಕುಟುಂಬವು ಅನುಭವಿಸಬಹುದಾದ ಆರ್ಥಿಕ ನಷ್ಟವನ್ನು ಇದು ನೇರವಾಗಿ ಸೂಚಿಸುತ್ತದೆ.
ಡಾ. ಸೋಲೋಮನ್ ಎಸ್. ಹ್ಯುಬ್ನರ್ ಅವರು ಹ್ಯೂಮನ್ ಲೈಫ್ ವ್ಯಾಲ್ಯೂ ಪರಿಕಲ್ಪನೆಯನ್ನು ಕಂಡುಹಿಡಿದರು. ಈ ಲೆಕ್ಕಾಚಾರವು ವ್ಯಕ್ತಿಗಳಿಗೆ ತಮ್ಮ ಆದಾಯ, ಉಳಿತಾಯ, ವೆಚ್ಚಗಳು, ಹೊಣೆಗಾರಿಕೆಗಳ ಆಧಾರದ ಮೇಲೆ ಲೈಫ್ ಇನ್ಶೂರೆನ್ಸ್ ಅಗತ್ಯಗಳನ್ನು ನಿರ್ಧರಿಸಲು ನೆರವು ನೀಡುತ್ತದೆ.
ಹ್ಯೂಮನ್ ಲೈಫ್ ವ್ಯಾಲ್ಯೂ ಕ್ಯಾಲ್ಕುಲೇಟರ್ ಎಂದರೇನು?
ನಿಮ್ಮ ಅನುಪಸ್ಥಿತಿಯಲ್ಲಿ ಹಣಕಾಸಿನ ಹೊಣೆಗಾರಿಕೆಗಳನ್ನು ನಿಭಾಯಿಸಲು ನಿಮ್ಮ ಕುಟುಂಬಕ್ಕೆ ಅಗತ್ಯವಿರುವಷ್ಟು ಪ್ರಮಾಣದ ಇನ್ಶೂರೆನ್ಸ್ ಸುರಕ್ಷೆಯ ಮೊತ್ತವನ್ನು ನಿರ್ಧರಿಸುವುದು ಅತ್ಯವಶ್ಯ. ಎಚ್ ಎಲ್ ವಿ ಕ್ಯಾಲ್ಕುಲೇಟರ್ ಅದನ್ನು ಮಾಡುತ್ತದೆ!
ಹ್ಯೂಮನ್ ಲೈಫ್ ವ್ಯಾಲ್ಯೂ ಕ್ಯಾಲ್ಕುಲೇಟರ್ ಆನ್ಲೈನ್ ಸಾಧನವಾಗಿದ್ದು, ಅದು ಹ್ಯೂಮನ್ ಲೈಫ್ ವ್ಯಾಲ್ಯೂ ಪರಿಕಲ್ಪನೆಯನ್ನು ಬಳಸಿಕೊಂಡು ಅದಕ್ಕೆ ಅನುಗುಣವಾಗಿ ನಿಮಗೆ ಅಗತ್ಯವಿರುವ, ನೀವು ಖರೀದಿಸಬಹುದಾದ, ಸರಿಯಾದ ಇನ್ಶೂರೆನ್ಸ್ ಮೊತ್ತವನ್ನು ನಿರ್ಧರಿಸಲು ವ್ಯಕ್ತಿಗಳಿಗೆ ಸಹಾಯ ಮಾಡುತ್ತದೆ. ಪ್ರಸ್ತುತ, ಆನ್ಲೈನ್ನಲ್ಲಿ ಹಲವಾರು ಎಚ್ ಎಲ್ ವಿ ಕ್ಯಾಲ್ಕುಲೇಟರ್ಗಳು ಲಭ್ಯವಿದೆ.
ಹ್ಯೂಮನ್ ಲೈಫ್ ವ್ಯಾಲ್ಯೂ ಮೇಲೆ ಯಾವೆಲ್ಲಾ ಅಂಶಗಳು ಪರಿಣಾಮ ಬೀರುತ್ತವೆ?
ಹ್ಯೂಮನ್ ಲೈಫ್ ವ್ಯಾಲ್ಯೂ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶಗಳು:
- ವಯಸ್ಸು
- ವಾರ್ಷಿಕ ಆದಾಯ
- ಮಾಸಿಕ ಖರ್ಚುವೆಚ್ಚ (ಮನೆಯ ವೆಚ್ಚಗಳು, ಇಎಂಐಗಳು, ಶಾಲಾ ಶುಲ್ಕಗಳು ಇತ್ಯಾದಿ.)
- ಬಾಕಿ ಇರುವ ಸಾಲಗಳು ಮತ್ತು ಇತರ ಹೊಣೆಗಾರಿಕೆಗಳು
- ಸಂಭವನೀಯ ಭವಿಷ್ಯದ ವೆಚ್ಚಗಳು (ಮಗುವಿನ ಉನ್ನತ ಶಿಕ್ಷಣ, ಮನೆ ಖರೀದಿ, ಇತ್ಯಾದಿ)
- ಅಸ್ತಿತ್ವದಲ್ಲಿರುವ ಹೂಡಿಕೆಗಳು
- ಅಸ್ತಿತ್ವದಲ್ಲಿರುವ ಲೈಫ್ ಇನ್ಶೂರೆನ್ಸ್ ರಕ್ಷಣೆ
ಎಚ್ ಎಲ್ ವಿ ಅನ್ನು ಲೆಕ್ಕ ಹಾಕುವುದು ಹೇಗೆ?
ಸಾಮಾನ್ಯ ಎಚ್ ಎಲ್ ವಿ ಅನ್ನು ಲೆಕ್ಕಾಚಾರ ಮಾಡಲು ಎರಡು ವಿಧಾನಗಳನ್ನು ಬಳಸಲಾಗುತ್ತದೆ
ಇನ್ ಕಮ್ ರಿಪ್ಲೇಸ್ ಮೆಂಟ್
ಈ ವಿಧಾನವು, ಕುಟುಂಬದ ಮರಣ ಹೊಂದಿದ ಅನ್ನದಾತರ ಆದಾಯದ ಗಳಿಕೆಯನ್ನು ಸರಿತೂಗುವಷ್ಟು ಪ್ರಮಾಣದ ಇನ್ಶೂರೆನ್ಸ್ ಮೊತ್ತವು ಅವಶ್ಯವಾಗಿ ಸಿಗಬೇಕು ಎಂಬ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತದೆ. ಆದ್ದರಿಂದ, ಈ ವಿಧಾನದ ಪ್ರಕಾರ,
ಇನ್ಶೂರೆನ್ಸ್ ಕವರ್ = ಪ್ರಸ್ತುತ ವಾರ್ಷಿಕ ಆದಾಯ x ನಿವೃತ್ತಿಗೆ ಬಾಕಿ ಉಳಿದಿರುವ ವರ್ಷಗಳ ಸಂಖ್ಯೆ
ಇದು ನಿಮಗೆ ಅಗತ್ಯವಿರುವ ಇನ್ಶೂರೆನ್ಸ್ ಮೊತ್ತದ ಅಂದಾಜು ಒದಗಿಸುವ ಸರಳ ವಿಧಾನವಾಗಿದೆ. ಆದರೆ ಇದರ ಒಂದು ಗಮನಾರ್ಹ ನ್ಯೂನತೆಯೆಂದರೆ ಇದು ಹಣದುಬ್ಬರ, ಆದಾಯ ಏರಿಕೆ ಮತ್ತು ಈ ಮುಂದೆ ಎದುರಾಗಬಹುದಾದ ಪ್ರಮುಖ ವೆಚ್ಚಗಳನ್ನು ಪರಿಗಣಿಸುವುದಿಲ್ಲ.
ಆವಶ್ಯಕತೆ-ಆಧರಿತ ವಿಧಾನ
ಈ ವಿಧಾನವು ಹಣದುಬ್ಬರ ಮತ್ತು ಡಿಸ್ ಕೌಂಟಿಂಗ್ ಫ್ಯಾಕ್ಟರ್ ಅನ್ನು ಪರಿಗಣಿಸುತ್ತದೆ ಮತ್ತು ಹಲವಾರು ಅಂಶಗಳ ಆಧಾರದ ಮೇಲೆ ಎಚ್ ಎಲ್ ವಿ ಲೆಕ್ಕಾಚಾರ ಮಾಡುತ್ತದೆ.
ಎಚ್ ಎಲ್ ವಿ ನಿರ್ಧರಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಲಾಗುತ್ತದೆ:
ಹಂತ 1: ನಿಮ್ಮ ಪ್ರಸ್ತುತ ಆದಾಯವನ್ನು ನಮೂದಿಸಿ.
ಹಂತ 2: ನಿಮ್ಮ ವೆಚ್ಚಗಳು, ಇನ್ಶೂರೆನ್ಸ್ ಕಂತುಗಳು ಮತ್ತು ಇನ್ಕಮ್ ಟ್ಯಾಕ್ಸ್ ಪಾವತಿಗಳನ್ನು ಕಳೆಯಿರಿ.
ಹಂತ 3: ನೀವು ನಿಮ್ಮ ನಿವೃತ್ತಿಗೆ ಮುನ್ನ ಆದಾಯ ಗಳಿಸುವ ವರ್ಷಗಳ ಸಂಖ್ಯೆಯನ್ನು ಗುರುತಿಸಿ.
ಹಂತ 4: ಹಣದುಬ್ಬರ ಮತ್ತು ಡಿಸ್ ಕೌಂಟಿಂಗ್ ಫ್ಯಾಕ್ಟರ್ ದರವನ್ನು ಕಂಡುಹಿಡಿಯಿರಿ.
ಹಂತ 5: ಹಣದುಬ್ಬರ ದರ ಸೇರಿಸಿದ ನಂತರ ಉಳಿದಿರುವ ಪ್ರಸ್ತುತ ಗಳಿಕೆಯ ಮೌಲ್ಯವನ್ನು ನಿರ್ಧರಿಸಿ.
ಮೇಲಿನ ಲೆಕ್ಕಾಚಾರ ಸ್ವಲ್ಪ ಸಂಕೀರ್ಣವಾಗಿದೆ. ಎಚ್ ಎಲ್ ವಿ ಕ್ಯಾಲ್ಕುಲೇಟರ್ ನಿಮಗಾಗಿ ಈ ಲೆಕ್ಕಾಚಾರವನ್ನು ಸರಳಗೊಳಿಸುತ್ತದೆ.
ಹ್ಯೂಮನ್ ಲೈಫ್ ವ್ಯಾಲ್ಯೂ ಕ್ಯಾಲ್ಕುಲೇಟರ್ ಅನ್ನು ಬಳಸುವುದು ಹೇಗೆ?
ಹ್ಯೂಮನ್ ಲೈಫ್ ವ್ಯಾಲ್ಯೂ ಕ್ಯಾಲ್ಕುಲೇಟರ್ ನಿಮ್ಮ ಅವಶ್ಯಕತೆಗಳನ್ನು ನಿರ್ಣಯಿಸಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಕುಟುಂಬದ ಸುರಕ್ಷಿತೆಗೆ ಬೇಕಾಗುವ ಸೂಕ್ತ ಇನ್ಶೂರೆನ್ಸ್ ರಕ್ಷಣೆಯನ್ನು ಸೂಚಿಸುತ್ತದೆ. ಇದು ಎಲ್ಲಾ ಆದಾಯ ಮೂಲಗಳು ಮತ್ತು ಹೊಣೆಗಾರಿಕೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಆದಾಯ ಗಳಿಕೆಯ ವರ್ಷಗಳ ಸಂಖ್ಯೆ ಮತ್ತು ಅನ್ವಯವಾಗುವ ಹಣದುಬ್ಬರ ಅಂಶಗಳು ಭವಿಷ್ಯದ ಆದಾಯದ ಮೌಲ್ಯವನ್ನು ವರ್ತಮಾನದಲ್ಲಿ ಲೆಕ್ಕ ಹಾಕುವಾಗ ಪರಿಗಣನೆಗೆ ಬರುತ್ತದೆ.
ನೀವು ಇದನ್ನು ಕೇವಲ ಕೆಲವು ಸರಳ ಹಂತಗಳಲ್ಲಿ ಸಾಧಿಸಬಹುದು:
ಹಂತ 1: ವಾರ್ಷಿಕ ಆದಾಯ ಮತ್ತು ಪ್ರಸ್ತುತ ವಯಸ್ಸು ಇತ್ಯಾದಿ ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಿ.
ಹಂತ 2: ಮಾಸಿಕ ವೆಚ್ಚಗಳು, ಭಾರಿ ವೆಚ್ಚಗಳು ಮತ್ತು ಬಾಕಿ ಇರುವ ಸಾಲಗಳು ಇತ್ಯಾದಿ ಹೊಣೆಗಾರಿಕೆಗಳ ವಿವರಗಳನ್ನು ನಮೂದಿಸಿ.
ಹಂತ 3: ಅಸ್ತಿತ್ವದಲ್ಲಿರುವ ಉಳಿತಾಯ ಮತ್ತು ಅಸ್ತಿತ್ವದಲ್ಲಿರುವ ಇನ್ಶೂರೆನ್ಸ್ ನಂತಹ ನಿಮ್ಮ ಹೂಡಿಕೆ ವಿವರಗಳನ್ನು ನಮೂದಿಸಿ.
ಅನ್ವಯವಾಗಬಹುದಾದ ಹಣದುಬ್ಬರ ದರ ಮತ್ತು ನಿವೃತ್ತಿ ವಯಸ್ಸು ಮುಂತಾದ ಅಂಶಗಳನ್ನು ಕ್ಯಾಲ್ಕುಲೇಟರ್ ಪರಿಗಣಿಸುತ್ತದೆ.
ಅಷ್ಟೇ! ಕೆಲವೇ ಸರಳ ಹಂತಗಳಲ್ಲಿ ನೀವು, ನಿಮ್ಮ ಕುಟುಂಬದ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಬೇಕಾದ ಅಂದಾಜು ರಕ್ಷಣೆಯ ಮೊತ್ತದ ಸಂಖ್ಯೆಯನ್ನು ತಿಳಿದುಕೊಂಡಿದ್ದೀರಿ.
ಎಚ್ ಎಲ್ ವಿಯ ಪ್ರಾಮುಖ್ಯತೆ ಏನು?
ಈಗಾಗಲೇ ಹೇಳಿದಂತೆ, ನೀವು ಮಾನವ ಜೀವನದ ಪ್ರಾಮುಖ್ಯತೆಯನ್ನು ಅಳೆಯಲು ಸಾಧ್ಯವಿಲ್ಲ. ಆದರೆ ಕುಟುಂಬದ ಅನ್ನದಾತರ ಆಕಸ್ಮಿಕ ನಿರ್ಗಮನದಂತಹ ದುರದೃಷ್ಟಕರ ಪರಿಸ್ಥಿತಿ ಎದುರಾದರೆ ಆ ಕುಟುಂಬದ ಅವಲಂಬಿತರಿಗೆ ಬೇಕಾದ ಆರ್ಥಿಕ ಅವಶ್ಯಕತೆಯ ಮೊತ್ತವನ್ನು ತಿಳಿದುಕೊಳ್ಳಬಹುದು. ಎಚ್ ಎಲ್ ವಿ ಈ ಉದ್ದೇಶವನ್ನು ಪೂರೈಸುತ್ತದೆ. ಎಚ್ ಎಲ್ ವಿ ಯಾಕೆ ಮಹತ್ವದ್ದು ಅನ್ನುವುದನ್ನು ತಿಳಿಸುವ ಎರಡು ಲಕ್ಷಣಗಳು ಇಲ್ಲಿವೆ:
1. ನಿಮ್ಮ ಅವಲಂಬಿತರಿಗೆ ಸೂಕ್ತವಾದ ಲೈಫ್ ಕವರ್ ಆಯ್ಕೆ.
ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಕುಟುಂಬವು ಹಣಕಾಸು ಸಂಕಷ್ಟದಲ್ಲಿ ಒದ್ದಾಡಬೇಕು ಅನ್ನುವುದನ್ನು ನೀವು ಎಂದಿಗೂ ಬಯಸುವುದಿಲ್ಲ. ಆದ್ದರಿಂದ, ನಿಮ್ಮ ಕುಟುಂಬಕ್ಕೆ ಸೂಕ್ತವಾದ ಲೈಫ್ ಕವರ್ ಅನ್ನು ಲೆಕ್ಕಾಚಾರ ಮಾಡುವುದು ಅತ್ಯಂತ ಮಹತ್ವದ ಕೆಲಸವಾಗಿದೆ. ಹ್ಯೂಮನ್ ಲೈಫ್ ವ್ಯಾಲ್ಯೂ ಅದನ್ನು ಸೂಚಿಸುತ್ತದೆ.
2. ಹಣದುಬ್ಬರವನ್ನು ಗಣನೆಗೆ ತೆಗೆದುಕೊಳ್ಳುತ್ತದೆ
ನಮ್ಮ ಅನುಪಸ್ಥಿತಿಯಲ್ಲಿ ನಮ್ಮ ಕುಟುಂಬವು ಹಣಕಾಸಿನ ಅವಶ್ಯಕತೆಗಳನ್ನು ಎಷ್ಟರ ಮಟ್ಟಿಗೆ ನಿಭಾಯಿಸಬೇಕಾಗಿ ಬರಬಹುದು ಎಂದು ನಾವು ಲೆಕ್ಕಾಚಾರ ಮಾಡುವಾಗ, ಹಣದುಬ್ಬರ ಮತ್ತು ಸಾಲಸೋಲಗಳ ಹೊಣೆಗಾರಿಕೆಗಳನ್ನು ಪರಿಗಣಿಸುವುದನ್ನು ಬಿಟ್ಟುಬಿಡುತ್ತೇವೆ.
ಹೊಣೆಗಾರಿಕೆಗಳು ಕುಟುಂಬದ ಅನ್ನದಾತರೊಂದಿಗೆ ಕೊನೆಗೊಳ್ಳುವುದಿಲ್ಲ. ಬದಲಿಗೆ, ಆತನ ನಿಧನದ ನಂತರ ಕುಟುಂಬ ಸದಸ್ಯರ ಹೆಗಲ ಮೇಲೆ ಆ ಹೊಣೆಗಾರಿಕೆಗಳು ಬರುತ್ತವೆ.
ಅದೇ ರೀತಿ, ಹಣದುಬ್ಬರವು ನಮ್ಮ ಉಳಿತಾಯದ ಮೌಲ್ಯವನ್ನು ಕಡಿಮೆ ಮಾಡುತ್ತದೆ ಮತ್ತು ವೆಚ್ಚಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ ನಾವು ಹಣದುಬ್ಬರದ ಅಂಶವನ್ನು ಪರಿಗಣಿಸದೇ ಹೋದರೆ ನಮ್ಮ ಹಣಕಾಸು ಯೋಜನೆಗೆ ಹೊಡೆತ ಬೀಳುತ್ತದೆ.
ಹ್ಯೂಮನ್ ಲೈಫ್ ವ್ಯಾಲ್ಯೂ ಲೆಕ್ಕಾಚಾರವು ಹಣದುಬ್ಬರ ಮತ್ತು ಹೊಣೆಗಾರಿಕೆಗಳನ್ನು ಪರಿಗಣಿಸುತ್ತದೆ. ಹೀಗಾಗಿ, ನಿಮಗೆ ಅವಶ್ಯ ಇರುವ ಅತ್ಯುತ್ತಮ ಇನ್ಶೂರೆನ್ಸ್ ರಕ್ಷಣೆ ಯೋಜನೆಯನ್ನು ಆರಿಸಿಕೊಳ್ಳಲು ನೆರವಾಗುತ್ತದೆ.
ನಿಮ್ಮ ಕುಟುಂಬದ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಸೂಕ್ತವಾದ ಇನ್ಶೂರೆನ್ಸ್ ರಕ್ಷಣೆ ಪಡೆಯಲು ಮಾಡಬೇಕಾದ ಲೆಕ್ಕಾಚಾರದ ಪ್ರಾಮುಖ್ಯತೆ ನಿಮಗೆ ಈಗ ಅರಿವಾಗಿದೆ. ಆದ್ದರಿಂದ ಹ್ಯೂಮನ್ ಲೈಫ್ ವ್ಯಾಲ್ಯೂ ಕ್ಯಾಲ್ಕುಲೇಟರ್ ಅನ್ನು ಬಳಸಲು ಈ ಸಮಯ ಸೂಕ್ತವಾಗಿದೆ.