ಹೆಚ್ಆರ್ಎ ಕ್ಯಾಲ್ಕುಲೇಟರ್
Tax Slab | Tax Saving as per Old Regime (Including cess) |
---|---|
5% | ₹5200 |
20% | ₹20800 |
30% | ₹31200 |
Save up to ₹31200 Tax
with Digit Health Insurance
ಹೆಚ್ಆರ್ಎ(HRA) ತೆರಿಗೆ ವಿನಾಯಿತಿಯನ್ನು ಹೇಗೆ ಲೆಕ್ಕ ಹಾಕುವುದು – ವಿವರಿಸಲಾಗಿದೆ.
ಹೆಚ್ಆರ್ಎ(HRA) ಎಂದರೇನು?
ಹೆಚ್ಆರ್ಎ ಅಥವಾ ಹೌಸ್ ರೆಂಟ್ ಅಲ್ಲೋವನ್ಸ್ ಎನ್ನುವುದು ಉದ್ಯೋಗದಾತರು ಉದ್ಯೋಗಿಗಳಿಗೆ ಅವರ ಒಟ್ಟು ಮಾಸಿಕ ಗಳಿಕೆಯ ಒಂದು ಅಂಶವಾಗಿ ಪಾವತಿಸುವ ಮೊತ್ತವಾಗಿದೆ.
ನೀವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ, ಹಣಕಾಸು ವರ್ಷದ ಕೊನೆಯಲ್ಲಿ ತೆರಿಗೆಯಿಂದ ವಾರ್ಷಿಕ ಬಾಡಿಗೆಗೆ ವಿನಾಯಿತಿ ನೀಡುವ ಮೂಲಕ ಹೆಚ್ಆರ್ಎ ನಿಮಗೆ ಅನುಕೂಲ ಮಾಡಿಕೊಡುತ್ತದೆ.
ನೀವು ಹೆಚ್ಆರ್ಎ ಸ್ವೀಕರಿಸಲು ಅರ್ಹರಾಗಿದ್ದರೆ ಅದರ ನಿಖರವಾದ ಮೊತ್ತವು ನಿಮ್ಮ ಸಂಬಳ, ನಿವಾಸದ ಸ್ಥಳ ಸೇರಿದಂತೆ ಇನ್ನಿತರೆ ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.
ಹೆಚ್ಆರ್ಎ(HRA) ಕ್ಯಾಲ್ಕುಲೇಟರ್ ಎಂದರೇನು?
ಹೌಸ್ ರೆಂಟ್ ಅಲ್ಲೋವನ್ಸ್ ಕ್ಯಾಲ್ಕುಲೇಟರ್ ಎನ್ನುವುದು ಆನ್ಲೈನ್ ಹಣಕಾಸು ಸಾಧನವಾಗಿದ್ದು, ಆದಾಯ ತೆರಿಗೆ ಕಾಯಿದೆ, 1961 ರ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ಹೌಸ್ ರೆಂಟ್ ಭತ್ಯೆಯ ಮೇಲೆ ಪ್ರತಿ ವರ್ಷ ತೆರಿಗೆ ಪ್ರಯೋಜನವಾಗಿ ಪಡೆಯಬಹುದಾದ ಮೊತ್ತವನ್ನು ಲೆಕ್ಕಾಚಾರ ಮಾಡಲು ಸಹಾಯ ಮಾಡುತ್ತದೆ. ತೆರಿಗೆ ಪ್ರಯೋಜನಗಳ ಲೆಕ್ಕಾಚಾರ ಒಂದು ತೊಡಕಿನ ಕೆಲಸವಾಗಿದ್ದು, ಈ ಆನ್ಲೈನ್ ಕ್ಯಾಲ್ಕುಲೇಟರ್ ಇದನ್ನು ಸುಲಭಗೊಳಿಸಿದೆ.
ಹೆಚ್ಆರ್ಎ(HRA) ವಿನಾಯಿತಿ ಲೆಕ್ಕಾಚಾರದ ಸೂತ್ರ
ಆದಾಯ ತೆರಿಗೆ ನಿಯಮ 2A ಪ್ರಕಾರ ಹೆಚ್ಆರ್ಎ ವಿನಾಯಿತಿಯನ್ನು ಲೆಕ್ಕಹಾಕಲಾಗುತ್ತದೆ. ಇದರ ಪ್ರಕಾರ, ಸೆಕ್ಷನ್ 10(13A) ಅಡಿಯಲ್ಲಿ ಉದ್ಯೋಗಿಯ ವೇತನದಿಂದ ಈ ಕೆಳಗಿನವುಗಳಿಗೆ ಕನಿಷ್ಠ ಮೊತ್ತವನ್ನು ವಿನಾಯಿತಿ ನೀಡಲಾಗುತ್ತದೆ ಮತ್ತು ಅವರ ಆದಾಯದ ತೆರಿಗೆಗೆ ಒಳಪಡುವುದಿಲ್ಲ.
- ಉದ್ಯೋಗಿಗಳು ತಮ್ಮ ಉದ್ಯೋಗದಾತರಿಂದ ಪಡೆಯುವ ನಿಜವಾದ ಹೆಚ್ಆರ್ಎ.
- ಮೆಟ್ರೋ ಸಿಟಿ ಉದ್ಯೋಗಿಗಳಿಗೆ, ಹೆಚ್ಆರ್ಎ ಯು ಮೂಲ ವೇತನ ಮತ್ತು ಡಿಎ ಮೊತ್ತದ 50% ಆಗಿರುತ್ತದೆ. ಮೆಟ್ರೋ ನಗರೇತರ ಉದ್ಯೋಗಿಗಳಿಗೆ, ಇದು ಅವರ ಮೂಲ ವೇತನ ಮತ್ತು ಡಿಎ ಮೊತ್ತದ 40% ಆಗಿರುತ್ತದೆ.
- ವಾಸ್ತವಿಕ ಬಾಡಿಗೆಯು (ಮೂಲ ವೇತನ +ಡಿಎ )ಗೆ 10% ಕಳೆದು ಅನ್ವಯಿಸುತ್ತದೆ.
ನಿಮ್ಮ ಹೆಚ್ಆರ್ಎ ವಿನಾಯಿತಿಗೆ ಈ ನಿಬಂಧನೆಗಳಿಂದ ಕನಿಷ್ಠ ಮೊತ್ತ ಮಾತ್ರ ಅನ್ವಯಿಸುತ್ತದೆ ಎಂಬುದನ್ನು ನೆನಪಿನಲ್ಲಿಡಿ.
ಹೆಚ್ಆರ್ಎ(HRA) ಲೆಕ್ಕಾಚಾರದ ನಿಖರವಾದ ಪ್ರಕ್ರಿಯೆಯನ್ನು ಒಂದು ಉದಾಹರಣೆಯೊಂದಿಗೆ ಅರ್ಥಮಾಡಿಕೊಳ್ಳೋಣ.
ಅವಿನಾಶ್ ಮುಂಬೈನಲ್ಲಿ ನೆಲೆಸಿದ್ದಾರೆ ಎಂದು ಭಾವಿಸೋಣ, ಅಲ್ಲಿ ಅವರ ಮಾಸಿಕ ಬಾಡಿಗೆ ರೂ.30,000. ಅವರ ಪ್ರತಿ ತಿಂಗಳ ಹೆಚ್ಆರ್ಎ ಮೊತ್ತವು ರೂ.18,000 ಆಗಿರುತ್ತದೆ. ಆದರೆ ಅವರ ವೇತನದ ಮೂಲ ವೇತನದ ಅಂಶವು ಪ್ರತಿ ತಿಂಗಳಿಗೆ ರೂ.42,000 ಆಗಿರುತ್ತದೆ.
ಈಗ, ನಾವು ಅವರ ಪ್ರಕರಣದಲ್ಲಿ ವಿವಿಧ ಹೆಚ್ಆರ್ಎ ನಿಬಂಧನೆಗಳನ್ನು ಲೆಕ್ಕ ಹಾಕಬಹುದು.
- ಸ್ವೀಕರಿಸಲಾದ ನಿಜವಾದ ಹೆಚ್ಆರ್ಎ = ರೂ.(18000 x 12) = ರೂ.216000
- ಮೂಲ ವೇತನಕ್ಕೆ 10% ಕಡಿತಗೊಂಡು ಅನ್ವಯವಾಗುವ ವಾಸ್ತವಿಕ ಬಾಡಿಗೆ = ರೂ.(25800 x 12) = ರೂ.309600
- ಮೂಲ ವೇತನದ 50% (ಅವಿನಾಶ್ ಮೆಟ್ರೋ ನಗರದಲ್ಲಿ ಉಳಿದುಕೊಂಡಿರುವುದರಿಂದ) = ರೂ.(21000 x 12) = ರೂ.252000
ಈ ಮೊತ್ತಗಳಲ್ಲಿ ಕನಿಷ್ಠ ಮೊತ್ತವನ್ನು ಹೆಚ್ಆರ್ಎ, ಎಂದು ಪರಿಗಣಿಸಲಾಗಿರುವುದರಿಂದ, ಅವಿನಾಶ್ ಪ್ರತಿ ತಿಂಗಳು ಹೆಚ್ಆರ್ಎ ಯಾಗಿ ರೂ.18000 ಪಾವತಿಸಬೇಕಾಗುತ್ತದೆ ಎಂದು ನಾವು ಹೇಳಬಹುದು.
ಇಡೀ ವರ್ಷಕ್ಕೆ, ಅವರಿಗೆ ಹೆಚ್ಆರ್ಎ ವಿನಾಯಿತಿ ರೂ.18000 x 12 ಅಥವಾ ರೂ.2.16 ಲಕ್ಷ . ಈ ಮೊತ್ತವನ್ನು ಹಣಕಾಸು ವರ್ಷದ ಕೊನೆಯಲ್ಲಿ ಅವನ ಒಟ್ಟು ತೆರಿಗೆಯ ಆದಾಯದಿಂದ ಕಡಿತಗೊಳಿಸಲಾಗುತ್ತದೆ.
ಆದಾಗ್ಯೂ, ಹೆಚ್ಆರ್ಎ ಅನ್ನು ಹಸ್ತಚಾಲಿತವಾಗಿ ನಿರ್ಧರಿಸಲು ತೊಡಕಿನ ಪ್ರಕ್ರಿಯೆಯನ್ನು ಕೈಗೊಳ್ಳುವ ಬದಲು, ನೀವು ಯಾವಾಗಲೂ ಆನ್ಲೈನ್ನಲ್ಲಿ ಲಭ್ಯವಿರುವ ಹೆಚ್ಆರ್ಎ ವಿನಾಯಿತಿ ಕ್ಯಾಲ್ಕುಲೇಟರ್ ಅನ್ನು ಬಳಸಲು ಆಯ್ಕೆ ಮಾಡಬಹುದು. ಅಂತಹ ಟೂಲ್ ಲೆಕ್ಕಾಚಾರವನ್ನು ಸರಳಗೊಳಿಸಿ, ಪ್ರತಿ ಬಾರಿಯೂ ನಿಖರವಾದ ಫಲಿತಾಂಶಗಳನ್ನು ನೀಡುತ್ತದೆ.
ಆನ್ಲೈನ್ನಲ್ಲಿ ಹೆಚ್ಆರ್ಎ(HRA) ಕ್ಯಾಲ್ಕುಲೇಟರ್ ಅನ್ನು ಬಳಸುವುದು ಹೇಗೆ?
ಹೆಚ್ಆರ್ಎ ಕಡಿತವನ್ನು ಹಸ್ತಚಾಲಿತವಾಗಿ ನಿರ್ಧರಿಸುವುದು ಸಮಸ್ಯಾತ್ಮಕವಲ್ಲದೆ, ಅದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅದೃಷ್ಟವಶಾತ್, ಗುಣಮಟ್ಟದ ಹೆಚ್ಆರ್ಎ ವಿನಾಯಿತಿ ಕ್ಯಾಲ್ಕುಲೇಟರ್ ಅನ್ನು ಕಂಡುಹಿಡಿಯುವುದು ತುಲನಾತ್ಮಕವಾಗಿ ಸರಳವಾಗಿದೆ.
ಒಮ್ಮೆ ನೀವು ಅಂತಹ ಟೂಲ್ ಅನ್ನು ಕಂಡುಕೊಂಡರೆ, ನಿಮ್ಮ ವಾರ್ಷಿಕ ಹೆಚ್ಆರ್ಎ ಪ್ರಯೋಜನಗಳನ್ನು ನಿರ್ಧರಿಸಲು ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಿ.
- ಹಂತ 1: ಕ್ಯಾಲ್ಕುಲೇಟರ್ ಪುಟವನ್ನು ತೆರೆಯಿರಿ.
- ಹಂತ 2: ನಿಮ್ಮ ಮೂಲ ವೇತನದ ಮೊತ್ತ, ತುಟ್ಟಿಭತ್ಯೆ ಗಳಿಕೆಗಳು, ಹೆಚ್ಆರ್ಎ ಮೊತ್ತ ಮತ್ತು ನಿಮ್ಮ ಒಟ್ಟು ಬಾಡಿಗೆಯೊಂದಿಗೆ ಸೂಕ್ತವಾದ ಸ್ಥಳಗಳನ್ನು ಭರ್ತಿ ಮಾಡಿ.
- ಹಂತ 3: ಮುಂದೆ, ನೀವು ಮೆಟ್ರೋಪಾಲಿಟನ್ ನಗರದಲ್ಲಿ ವಾಸಿಸುತ್ತಿದ್ದೀರಾ ಅಥವಾ ಮೆಟ್ರೋ ಅಲ್ಲದ ನಗರದಲ್ಲಿಯೇ ಎಂಬುದನ್ನು ಆಯ್ಕೆಮಾಡಿ.
- ಹಂತ 4: ಯಾವುದೇ ದೋಷಗಳನ್ನು ತಡೆಗಟ್ಟಲು ನೀವು ನಮೂದಿಸಿದ ಎಲ್ಲಾ ಡೇಟಾವನ್ನು ಮತ್ತೊಮ್ಮೆ ಪರಿಶೀಲಿಸಿ.
- ಹಂತ 5: "ಕ್ಯಾಲ್ಕುಲೇಟ್" ಕ್ಲಿಕ್ ಮಾಡಿ.
ಈ ಐದು ಹಂತಗಳನ್ನು ಅನುಸರಿಸದ ನಂತರ ಕ್ಯಾಲ್ಕುಲೇಟರ್ ಆರ್ಥಿಕ ವರ್ಷದ ಕೊನೆಯಲ್ಲಿ ನಿಮ್ಮ ತೆರಿಗೆ ರಿಟರ್ನ್ಗಳನ್ನು ಸಲ್ಲಿಸುವಾಗ ನೀವು ಎಷ್ಟು ತೆರಿಗೆ ವಿನಾಯಿತಿಯನ್ನು ನಿರೀಕ್ಷಿಸಬಹುದು ಎಂಬುದನ್ನು ನಿಖರವಾಗಿ ತೋರಿಸುತ್ತದೆ.
ಕೆಲವು ಸಂದರ್ಭಗಳಲ್ಲಿ, ಸ್ಥಳಗಳ ಬದಲಿಗೆ ಸ್ಲೈಡರ್ಗಳೊಂದಿಗೆ ಹೆಚ್ಆರ್ಎ ಕ್ಯಾಲ್ಕುಲೇಟರ್ ಇರುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಅದೇನೇ ಇದ್ದರೂ, ಅದರ ಕಾರ್ಯವೈಖರಿಯು ಒಂದೇ ಆಗಿರುತ್ತದೆ.
ಹೆಚ್ಆರ್ಎ(HRA) ವಿನಾಯಿತಿ ಕ್ಯಾಲ್ಕುಲೇಟರ್ ನ ಪ್ರಯೋಜನಗಳು.
ನೀವು ಅಂತಹ ಆನ್ಲೈನ್ ಕ್ಯಾಲ್ಕುಲೇಟರ್ಗಳನ್ನು ಬಳಸಬಹುದಾ ಎಂಬ ಗೊಂದಲದಲ್ಲಿದ್ದರೆ, ಈ ಪರಿಕರಗಳನ್ನು ಬಳಸುವುದರಿಂದ ಆಗುವ ಕೆಲವು ಪ್ರಯೋಜನಗಳು ಹೀಗಿವೆ:
- ಈ ಕ್ಯಾಲ್ಕುಲೇಟರ್ಗಳು ನಿಮ್ಮ ಹೆಚ್ಆರ್ಎ ಕ್ಲೈಮ್ಗಳನ್ನು ತ್ವರಿತವಾಗಿ ಲೆಕ್ಕಾಚಾರ ಮಾಡುತ್ತದೆ. ಹಸ್ತಚಾಲಿತ ಲೆಕ್ಕಾಚಾರಗಳು ಹೆಚ್ಚು ನಿಧಾನವಾಗಿರುತ್ತವೆ.
- ಫಲಿತಾಂಶಗಳನ್ನು ಪ್ರದರ್ಶಿಸುವಾಗ ಕ್ಯಾಲ್ಕುಲೇಟರ್ಗಳು ಎಂದಿಗೂ ತಪ್ಪುಗಳನ್ನು ಮಾಡುವುದಿಲ್ಲ. ಇದನ್ನು ಹಸ್ತಚಾಲಿತ ಲೆಕ್ಕಾಚಾರಗಳಲ್ಲಿ ನಿರೀಕ್ಷಿಸಲಾಗುವುದಿಲ್ಲ. ಅಲ್ಲಿ ಅನಿರೀಕ್ಷಿತ ದೋಷಗಳು ಯಾವಾಗಲೂ ಸಂಭವನೀಯವಾಗಿರುತ್ತವೆ.
- ಹೆಚ್ಆರ್ಎ ಕ್ಯಾಲ್ಕುಲೇಟರ್ ನಿಮ್ಮ ಮೂಲ ವೇತನದಿಂದ ನೀವು ವಾಸಿಸುವ ನಗರದವರೆಗೆ ಹೆಚ್ಆರ್ಎ ಪ್ರಯೋಜನಗಳನ್ನು ಲೆಕ್ಕಾಚಾರ ಮಾಡುವ ಎಲ್ಲಾ ವೇರಿಯೇಬಲ್ಗಳನ್ನು ಪರಿಗಣಿಸುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಅಂತಹ ಕ್ಯಾಲ್ಕುಲೇಟರ್ ಗಳು ಆದಾಯ ಮತ್ತು ಇತರ ಅಂಶಗಳ ಆಧಾರದ ಮೇಲೆ ನಿರ್ದಿಷ್ಟ ವರ್ಷಕ್ಕೆ ನಿಮ್ಮ ಹೆಚ್ಆರ್ಎ ವಿನಾಯಿತಿಗಳನ್ನು ನಿರ್ಧರಿಸುವ ಕಾರ್ಯವನ್ನು ಸುಗಮಗೊಳಿಸುತ್ತದೆ. ನಿಮ್ಮ ವರ್ಷಾಂತ್ಯದ ತೆರಿಗೆಗಳನ್ನು ಸಲ್ಲಿಸುವಾಗಲೂ ನೀವು ಅದೇ ಲೆಕ್ಕಾಚಾರ ಮಾಡಬಹುದು.
ಹೆಚ್ಆರ್ಎ(HRA) ವಿನಾಯಿತಿಗಳನ್ನು ಪಡೆಯಲು ಇರುವ ಅರ್ಹತೆಗಳು.
ಸಂಬಳವನ್ನು ಪಡೆಯುವ ಪ್ರತಿ ಉದ್ಯೋಗಿಯು ತೆರಿಗೆಗಳನ್ನು ಸಲ್ಲಿಸುವಾಗ ಈ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ, ಏಕೆಂದರೆ ಅದರ ಲಾಭವನ್ನು ಪಡೆಯಲು ನಿರ್ದಿಷ್ಟ ಮಾನದಂಡಗಳನ್ನು ಪೂರೈಸುವ ಅಗತ್ಯವಿರುತ್ತದೆ. ಹೆಚ್ಆರ್ಎ ವಿನಾಯಿತಿಗಳಿಗೆ ನಿಮ್ಮ ಅರ್ಹತೆಯನ್ನು ನಿರ್ಧರಿಸುವ ಕೆಲವು ಅಂಶಗಳು ಇಲ್ಲಿವೆ:
- ನೀವು ಸಂಬಳ ಪಡೆಯುವ ಉದ್ಯೋಗಿಯಾಗಿರಬೇಕು.
- ನಿಮ್ಮ ಉದ್ಯೋಗದಾತರು ನಿಮ್ಮ ಮಾಸಿಕ ಪಾವತಿಗಳಲ್ಲಿ ಹೆಚ್ಆರ್ಎ ಅಂಶವನ್ನು ಅಳವಡಿಸಬೇಕು.
- ಹೌಸ್ ರೆಂಟ್ ಅಲ್ಲೋವನ್ಸ್ ತೆರಿಗೆ ಪ್ರಯೋಜನಗಳಿಗೆ ಅರ್ಹತೆ ಪಡೆಯಲು ನೀವು ಬಾಡಿಗೆಯನ್ನು ಪಾವತಿಸಬೇಕಾಗುತ್ತದೆ.
- ನೀವು ಯಾವುದೇ ವಸತಿ ಆಸ್ತಿಯನ್ನು ಹೊಂದಿರಬಾರದು.
- ನೀವು ಹೊಂದಬಹುದಾದ ಯಾವುದೇ ಆಸ್ತಿಯಿಂದ ನೀವು ಬಾಡಿಗೆಯನ್ನು ಪಡೆಯಬಾರದು.
ಮೇಲಿನ ಪಟ್ಟಿಯಿಂದ ತಿಳಿದುಬರುವುದೇನೆಂದರೆ ಸ್ವಯಂ ಉದ್ಯೋಗಿಗಳು ಈ ತೆರಿಗೆ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ ಎಂದು.
ಎರಡು ಷರತ್ತುಗಳ ಅಡಿಯಲ್ಲಿ ಹೋಮ್ ಲೋನ್ ಬಡ್ಡಿ ಮತ್ತು ಅಸಲು ಪಾವತಿಗಳ ಮೇಲೆ ಅನ್ವಯವಾಗುವ ತೆರಿಗೆ ಪ್ರಯೋಜನಗಳ ಜೊತೆಗೆ ಮನೆಮಾಲೀಕರು ಹೆಚ್ಆರ್ಎ ವಿನಾಯಿತಿಗಳನ್ನು ಪಡೆಯಬಹುದು.
ನಿಮ್ಮ ಒಡೆತನದ ಆಸ್ತಿಯನ್ನು ಬಾಡಿಗೆಗೆ ನೀಡಿದರೆ ನೀವು ಹೆಚ್ಆರ್ಎ ಗೆ ಅರ್ಹರಾಗುತ್ತೀರಿ, ಆದರೆ ನೀವು ಬಾಡಿಗೆಯನ್ನು ಸ್ವೀಕರಿಸುವಂತಿಲ್ಲ (ನಿಮ್ಮ ಪರವಾಗಿ ಕುಟುಂಬದ ಸದಸ್ಯರು ಬಾಡಿಗೆ ಪಡೆಯಬಹುದು).
ಪರ್ಯಾಯವಾಗಿ, ನೀವು ಆಸ್ತಿ ಮಾಲೀಕರಾಗಬಹುದು ಮತ್ತು ನಿಮ್ಮ ಒಡೆತನದ ಆಸ್ತಿ ಇರುವ ಸ್ಥಳಕ್ಕಿಂತ ಬೇರೆ ನಗರದಲ್ಲಿ ನೀವು ವಾಸಿಸುತ್ತಿದ್ದರೆ ಹೆಚ್ಆರ್ಎ ಪ್ರಯೋಜನಗಳನ್ನು ಕ್ಲೈಮ್ ಮಾಡಬಹುದು.
ಹೌಸ್ ರೆಂಟ್ ಅಲ್ಲೋವನ್ಸ್ ವಿನಾಯಿತಿಯನ್ನು ಲೆಕ್ಕಾಚಾರ ಮಾಡುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳು.
ಹೆಚ್ಆರ್ಎ ಕಡಿತಗಳನ್ನು ಲೆಕ್ಕಾಚಾರ ಮಾಡುವಾಗ, ನೀವು ಈ ಕೆಳಗಿನ ಮಾರ್ಗಸೂಚಿಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು:
- ಮಂಜೂರು ಮಾಡಲಾದ ಹೆಚ್ಆರ್ಎ ಯು ನಿಮ್ಮ ಮೂಲ ವೇತನದ 50% ಕ್ಕಿಂತ ಮೀರುವಂತಿಲ್ಲ.
- ಸಂಬಳದ ಉದ್ಯೋಗಿಗಳು ಪೂರ್ಣ ಬಾಡಿಗೆ ಮೊತ್ತದ ಕಡಿತಕ್ಕಾಗಿ ಕ್ಲೈಮ್ ಮಾಡುವಂತಿಲ್ಲ. ಬದಲಾಗಿ, ಮೂರು ನಿಬಂಧನೆಗಳಿಂದ ಕನಿಷ್ಠ ಮೊತ್ತವನ್ನು ಸೂಕ್ತ ವಿನಾಯಿತಿ ಎಂದು ಪರಿಗಣಿಸಲಾಗುತ್ತದೆ.
- ಗೃಹ ಸಾಲದ ತೆರಿಗೆ ರಿಯಾಯಿತಿಗಳ ಜೊತೆಗೆ ಹೆಚ್ಆರ್ಎಯ ತೆರಿಗೆ ಪ್ರಯೋಜನಗಳು ಲಭ್ಯವಿದೆ.
- ವಾರ್ಷಿಕ ಬಾಡಿಗೆ ರೂ.1 ಲಕ್ಷಕ್ಕಿಂತ ಹೆಚ್ಚಿದ್ದರೆ, ಹೆಚ್ಆರ್ಎ ಪ್ರಯೋಜನಗಳನ್ನು ಪಡೆಯಲು ನಿಮ್ಮ ಜಮೀನುದಾರರ ಪ್ಯಾನ್ ಕಾರ್ಡ್ ಅನ್ನು ಸಲ್ಲಿಸಬೇಕಾಗುತ್ತದೆ.
- ನೀವು ನಿಮ್ಮ ಪೋಷಕರೊಂದಿಗೆ ವಾಸಿಸುತ್ತಿದ್ದರೆ, ನೀವು ಅವರಿಗೆ ಬಾಡಿಗೆಯನ್ನು ಪಾವತಿಸಿ, ವಹಿವಾಟಿಗೆ ಹೆಚ್ಆರ್ಎ ರಸೀದಿಯನ್ನು ಸಂಗ್ರಹಿಸಬಹುದು. ಆದಾಗ್ಯೂ, ನಿಮ್ಮ ಸಂಗಾತಿಗೆ ಅಥವಾ ಪಾಲುದಾರರಿಗೆ ಬಾಡಿಗೆ ಪಾವತಿಸುವ ಮೂಲಕ ನೀವು ಹೆಚ್ಆರ್ಎ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ.
- ನಿಮ್ಮ ಜಮೀನುದಾರರು ಎನ್.ಆರ್.ಐ ಆಗಿದ್ದರೆ, ಹೆಚ್ಆರ್ಎ ಕಡಿತಕ್ಕಾಗಿ ಅರ್ಜಿ ಸಲ್ಲಿಸುವ ಮೊದಲು ನೀವು ಬಾಡಿಗೆ ಮೊತ್ತದಿಂದ 30% ತೆರಿಗೆಯನ್ನು ಕಡಿತಗೊಳಿಸಬೇಕಾಗುತ್ತದೆ.
ಈ ಲೆಕ್ಕಾಚಾರಗಳು ನಿಮಗೆ ತುಂಬಾ ಟ್ರಿಕಿ ಎನಿಸಿದರೆ, ಈ ನಿಬಂಧನೆಯ ಅಡಿಯಲ್ಲಿ ನಿಮ್ಮ ವಾರ್ಷಿಕ ಆದಾಯ ತೆರಿಗೆ ಉಳಿತಾಯವನ್ನು ನಿರ್ಧರಿಸಲು ನೀವು ಹೆಚ್ಆರ್ಎ ಕ್ಯಾಲ್ಕುಲೇಟರ್ ಅನ್ನು ಬಳಸಬಹುದು.