ಎಜುಕೇಶನ್ ಲೋನ್ ಇಎಂಐ ಕ್ಯಾಲ್ಕುಲೇಟರ್
ಸಾಲದ ಮೊತ್ತ
ಅವಧಿ (ವರ್ಷಗಳು)
ಬಡ್ದಿ ದರ (ವಾರ್ಷಿಕ)
ಎಜುಕೇಶನ್ ಲೋನ್ದ ಇಎಂಐ ಕ್ಯಾಲ್ಕುಲೇಟರ್ ನ ಸಮಗ್ರ ಮಾರ್ಗದರ್ಶಿ
ಎಜುಕೇಶನ್ ಲೋನ್ದ ಮೂಲಕ ನಿಮ್ಮ ಮಗುವಿನ ಉನ್ನತ ಶಿಕ್ಷಣಕ್ಕೆ ಹಣಕಾಸು ಒದಗಿಸುವಾಗ, ನೀವು ಹಲವಾರು ವಿಷಯಗಳನ್ನು ಪರಿಗಣಿಸಬೇಕಾಗುತ್ತದೆ. ಇಂತಹ ಒಂದು ವಿಷಯವೆಂದರೆ ಇಎಂಐ (ಸಮಾನ ಮಾಸಿಕ ಕಂತುಗಳು) ಮೊತ್ತ. ಇಎಂಐ ಮೊತ್ತದ ಬಗ್ಗೆ ಮುಂಚಿತವಾಗಿ ತಿಳಿದುಕೊಳ್ಳುವುದರಿಂದ ವ್ಯಕ್ತಿಗಳಿಗೆ/ಪೋಷಕರಿಗೆ ಹಣಕಾಸಿನ/ಬಜೆಟ್ ಯೋಜನೆಯನ್ನು ರೂಪಿಸಲು ಮತ್ತು ಖರ್ಚುವೆಚ್ಚ ತೂಗಿಸಲು ಸಹಾಯವಾಗುತ್ತದೆ. ಎಜುಕೇಶನ್ ಲೋನ್ದ ಇಎಂಐ ಅನ್ನು ಲೆಕ್ಕಾಚಾರ ಮಾಡಲು, ವ್ಯಕ್ತಿಗಳು ಎಜುಕೇಶನ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಅನ್ನು ಬಳಸಬಹುದು. ಎಜುಕೇಶನ್ ಲೋನ್ ಇಎಂಐಯ ಲೆಕ್ಕಾಚಾರ ಪ್ರಕ್ರಿಯೆಯನ್ನು ತಿಳಿಯಲು ಮುಂದೆ ಓದಲು ಆರಂಭಿಸಿ.
ಎಜುಕೇಶನ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಎಂದರೇನು?
ಎಜುಕೇಶನ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಒಂದು ಆನ್ಲೈನ್ ಸಾಧನವಾಗಿದ್ದು, ಎಜುಕೇಶನ್ ಲೋನ್ದ ಸಮಾನ ಮಾಸಿಕ ಕಂತು (ಇಎಂಐ) ಲೆಕ್ಕಾಚಾರ ಮಾಡಲು ಅರ್ಜಿದಾರರಿಗೆ ಸಹಾಯ ಮಾಡುತ್ತದೆ.
ಈ ಸರಳ ಇಎಂಐ ಕ್ಯಾಲ್ಕುಲೇಟರ್ ಒಂದು ಫಾರ್ಮುಲಾ ಬಾಕ್ಸ್ ಒಳಗೊಂಡಿರುತ್ತದೆ. ಅಲ್ಲಿ ಸಾಲದ ಅರ್ಜಿದಾರರು ಆಯಾ ಬಾಕ್ಸ್ಗಳಲ್ಲಿ ವಿವರಗಳನ್ನು ನಮೂದಿಸಬಹುದು ಅಥವಾ ಮೌಲ್ಯವನ್ನು ಹೊಂದಿಸಲು ಸ್ಲೈಡರ್ಗಳನ್ನು ಹೊಂದಿಸಿಕೊಳ್ಳಬಹುದು. ವಿವರಗಳನ್ನು ನಮೂದಿಸಿದ ನಂತರ, ಎಜುಕೇಶನ್ ಲೋನ್ದ ಅರ್ಜಿದಾರರು ಬಾಕ್ಸ್ನಲ್ಲಿ ಫಲಿತಾಂಶಗಳನ್ನು ನೋಡಬಹುದು.
ಈಗ ಎಜುಕೇಶನ್ ಲೋನ್ದ ಇಎಂಐ ಕ್ಯಾಲ್ಕುಲೇಟರ್ನ ಪರಿಕಲ್ಪನೆಯು ಅರ್ಜಿದಾರರಿಗೆ ಸ್ಪಷ್ಟವಾಗಿರಬಹುದು, ಮುಂದೆ ಇಎಂಐ ಲೆಕ್ಕಾಚಾರ ಪ್ರಕ್ರಿಯೆಯ ಕಡೆ ಗಮನ ಹರಿಸೋಣ.
ಎಜುಕೇಶನ್ ಲೋನ್ ಇಎಂಐ ಲೆಕ್ಕಾಚಾರ ಮಾಡುವ ಫಾರ್ಮುಲಾ ಯಾವುದು?
ಇಎಂಐ ಅನ್ನು ಲೆಕ್ಕ ಹಾಕಲು ಎಜುಕೇಶನ್ ಲೋನ್ದ ಕ್ಯಾಲ್ಕುಲೇಟರ್ ಕೆಳಗೆ ತಿಳಿಸಿದ ಫಾರ್ಮುಲಾ ಅನುಸರಿಸುತ್ತದೆ.
ಇಎಂಐ = [P * R * (1+R) ^n] / [(1+R)^ n-1]
ಈ ಫಾರ್ಮುಲಾದಲ್ಲಿ ಬಳಸಲಾದ ಅಂಶಗಳು ಈ ಕೆಳಗಿನಂತಿವೆ:
P = ಅಸಲು ಸಾಲದ ಮೊತ್ತ
N = ಮಾಸಿಕ ಕಂತುಗಳ ಸಂಖ್ಯೆ
R = ಬಡ್ದಿ ದರ
ಶ್ರೀ ಸಂಜೀವ್ ಅವರು 2 ವರ್ಷಕ್ಕೆ 12% ಬಡ್ಡಿ ದರದಲ್ಲಿ ₹ 10 ಲಕ್ಷ ಎಜುಕೇಶನ್ ಲೋನ್ವನ್ನು ತೆಗೆದುಕೊಂಡಿದ್ದಾರೆ ಎಂದು ಭಾವಿಸೋಣ.
ಶ್ರೀ ಸಂಜೀವ್ ಅವರು ಇಎಂಐ ಆಗಿ ಪಾವತಿಸಬೇಕಾದ ಮೊತ್ತವನ್ನು ಈ ಕೆಳಗಿನ ಕೋಷ್ಟಕದಲ್ಲಿ ಲೆಕ್ಕಾಚಾರ ಮಾಡಲಾಗಿದೆ.
ಇನ್ಪುಟ್ |
ಮೌಲ್ಯಗಳು |
P |
₹ 10 ಲಕ್ಷ |
R |
12% (12/100/12 -ತಿಂಗಳುಗಳಿಗೆ ಪರಿವರ್ತಿಸಿದಾಗ) |
N |
2 ವರ್ಷಗಳು/24 ತಿಂಗಳುಗಳು |
ಅರ್ಜಿದಾರರು ಈ ವಿವರಗಳನ್ನು ಸಂಬಂಧಿತ ಕ್ಷೇತ್ರಗಳಲ್ಲಿ ನಮೂದಿಸಬೇಕು,
ಔಟ್ಪುಟ್ |
ಮೌಲ್ಯಗಳು |
EMI [10,00,000 x 12/100/12 x (1+12/100/12)^24] / [(1+12/100/12)^24-1] |
₹ 47,073 |
ಆದ್ದರಿಂದ ಶ್ರೀ ಸಂಜೀವ್ 2 ವರ್ಷಕ್ಕೆ ₹ 47,073 ಇಎಂಐ ಅನ್ನು ಪಾವತಿಸಬೇಕು.
ಎಜುಕೇಶನ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಫಲಿತಾಂಶಗಳನ್ನು ತೋರಿಸಲು ಈ ಫಾರ್ಮುಲಾ ಬಳಸುತ್ತದೆ. ಎಜುಕೇಶನ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಅನ್ನು ಬಳಸಲು, ಅರ್ಜಿದಾರರು ಅಸಲು, ಬಡ್ಡಿ ದರ ಮತ್ತು ಅವಧಿಯನ್ನು ಸಂಬಂಧಿತ ಬಾಕ್ಸ್ಗಳಲ್ಲಿ ನಮೂದಿಸಬೇಕು, ಈ ವಿವರಗಳನ್ನು ನಮೂದಿಸಿದ ನಂತರ ಕ್ಯಾಲ್ಕುಲೇಟರ್ ಫಲಿತಾಂಶವನ್ನು ಅಂದರೆ ಇಎಂಐ ಅನ್ನು ಸ್ಕ್ರೀನ್ ಮೇಲೆ ಪ್ರದರ್ಶಿಸುತ್ತದೆ.
ಎಜುಕೇಶನ್ ಲೋನ್ದ ಅರ್ಜಿದಾರರು ಲೆಕ್ಕಾಚಾರದ ಪ್ರಕ್ರಿಯೆಯ ಬಗ್ಗೆ ತಿಳಿದಿರುವುದರಿಂದ, ಅಂತಹ ಕ್ಯಾಲ್ಕುಲೇಟರ್ಗಳನ್ನು ಬಳಸುವ ಪ್ರಯೋಜನಗಳನ್ನು ನಾವೀಗ ಚರ್ಚಿಸೋಣ.
ಎಜುಕೇಶನ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಅನ್ನು ಬಳಸುವುದು ಹೇಗೆ?
ಆನ್ಲೈನ್ ಕ್ಯಾಲ್ಕುಲೇಟರ್ ಅನ್ನು ಬಳಸುವುದು ನಿಮ್ಮ ಎಜುಕೇಶನ್ ಲೋನ್ದ ಇಎಂಐ ಅನ್ನು ಕಂಡುಹಿಡಿಯಲು ಸುಲಭವಾದ ಮಾರ್ಗವಾಗಿದೆ. ನಿಮ್ಮ ಎಜುಕೇಶನ್ ಲೋನ್ದ ಇಎಂಐ ಮೊತ್ತವನ್ನು ಕಂಡುಹಿಡಿಯಲು ಕೆಳಗಿನ ಸರಳ ಹೆಜ್ಜೆಗಳನ್ನು ಅನುಸರಿಸಿ.
ಹಂತ 1: ಸ್ಕ್ರಾಲ್ ಬಟನ್ ಅನ್ನು ಬಳಸುವ ಮೂಲಕ ಅಥವಾ ನೇರವಾಗಿ ಮೊತ್ತವನ್ನು ಟೈಪ್ ಮಾಡುವ ಮೂಲಕ 1 ಲಕ್ಷದಿಂದ 5 ಕೋಟಿವರೆಗಿನ ನಿಮ್ಮ ಸಾಲದ ಅಸಲು ಮೊತ್ತವನ್ನು ಆಯ್ಕೆಮಾಡಿ.
ಹಂತ 2: ಈಗ ನೀವು ಸ್ಕ್ರಾಲ್ ಬಟನ್ ಅನ್ನು ಬಳಸುವ ಮೂಲಕ ಅಥವಾ ವರ್ಷಗಳ ಸಂಖ್ಯೆಯನ್ನು ನೇರವಾಗಿ ಟೈಪ್ ಮಾಡುವ ಮೂಲಕ 1 ವರ್ಷದಿಂದ 20 ವರ್ಷಗಳ ನಡುವಿನ ವರ್ಷಗಳಲ್ಲಿ ನಿಮ್ಮ ಸಾಲದ ಅವಧಿಯನ್ನು ಆಯ್ಕೆ ಮಾಡಬೇಕಾಗುತ್ತದೆ.
ಹಂತ 3: ಅಂತಿಮವಾಗಿ ನೀವು ಆಯ್ಕೆ ಬಟನ್ ಅನ್ನು ಸ್ಕ್ರೋಲ್ ಮಾಡುವ ಮೂಲಕ ಅಥವಾ ನೇರವಾಗಿ ಶೇಕಡಾವಾರು ಬರೆಯುವ ಮೂಲಕ ನಿಮ್ಮ ಸಾಲದ ಬಡ್ಡಿ ದರವನ್ನು ಸೇರಿಸಬೇಕಾಗುತ್ತದೆ. ಆಯ್ಕೆ ಪ್ರಮಾಣವು 1% ಮತ್ತು 20% ನಡುವಿನ ಶೇಕಡಾವಾರು ಪ್ರಮಾಣದಲ್ಲಿರಲಿದೆ.
ಎಜುಕೇಶನ್ ಲೋನ್ದ ಕ್ಯಾಲ್ಕುಲೇಟರ್ ಅನ್ನು ಬಳಸುವ ಪ್ರಯೋಜನಗಳೇನು?
ಎಜುಕೇಶನ್ ಲೋನ್ದ ಇಎಂಐ ಕ್ಯಾಲ್ಕುಲೇಟರ್ ಅನ್ನು ಬಳಸುವ ಪ್ರಯೋಜನಗಳು ಈ ಕೆಳಗಿನಂತಿವೆ.
- ನಿಖರತೆ: ಮೊದಲೇ ಹೇಳಿದಂತೆ, ಎಜುಕೇಶನ್ ಲೋನ್ ಇಎಂಐ ಕ್ಯಾಲ್ಕುಲೇಟರ್ಗಳು ಉಪಯುಕ್ತ ಆನ್ಲೈನ್ ಸಾಧನಗಳಾಗಿವೆ; ಬ್ಯಾಕ್ ಎಂಡ್ ನಲ್ಲಿ ಪೂರ್ವ ನಿರ್ಧರಿತ ಫಾರ್ಮುಲಾಗಳೊಂದಿಗೆ ಸಿಂಕ್ ಆಗಿ ಲೆಕ್ಕಾಚಾರ ನಡೆಯುತ್ತದೆ. ಆದ್ದರಿಂದ, ಡೇಟಾ ಇನ್ಪುಟ್ ಹೊರತುಪಡಿಸಿ ಬೇರೆ ಯಾವುದೇ ಮಾನವ ಹಸ್ತಕ್ಷೇಪವಿರುವುದಿಲ್ಲ. ಪರಿಣಾಮವಾಗಿ, ಈ ಕ್ಯಾಲ್ಕುಲೇಟರ್ಗಳು ಸ್ವಯಂಚಾಲಿತವಾಗಿ ನಿಖರವಾದ ಫಲಿತಾಂಶಗಳನ್ನು ಒದಗಿಸುತ್ತವೆ.
- ಶೀಘ್ರ ಫಲಿತಾಂಶಗಳು: ಕೈಯಿಂದ ಮಾಡುವ ಎಜುಕೇಶನ್ ಲೋನ್ ಇಎಂಐ ಲೆಕ್ಕಾಚಾರವು ಪ್ರಯಾಸದಾಯಕ ಮತ್ತು ಸಮಯ ತೆಗೆದುಕೊಳ್ಳುವಂತದ್ದಾಗಿದೆ. ಮತ್ತೊಂದೆಡೆ, ಎಜುಕೇಶನ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಅನ್ನು ಬಳಸುವ ಮೂಲಕ, ಸಾಲದ ಅರ್ಜಿದಾರರು ಬಹುತೇಕ ತಕ್ಷಣವೇ ಫಲಿತಾಂಶಗಳನ್ನು ಪಡೆಯಬಹುದಾಗಿದೆ.
- ಬಳಸಲು ಸುಲಭ: ಎಜುಕೇಶನ್ ಲೋನ್ ಇಎಂಐ ಅನ್ನು ಲೆಕ್ಕಾಚಾರ ಮಾಡುವ ಫಾರ್ಮುಲಾ ಸಂಕೀರ್ಣವಾಗಿದೆ ಮತ್ತು ಫಲಿತಾಂಶವನ್ನು ಪಡೆಯುವುದು, ಅಂದರೆ ಫಾರ್ಮುಲಾ ಮೂಲಕ EMI ಕಂಡು ಪಡೆಯುವುದು, ಇನ್ನೂ ಕಠಿಣವಾಗಿದೆ. ಆದಾಗ್ಯೂ, ಸಾಲದ ಅರ್ಜಿದಾರರು ಸುಲಭವಾಗಿ ಎಜುಕೇಶನ್ ಲೋನ್ ಇಎಂಐ ಕ್ಯಾಲ್ಕುಲೇಟರ್ಗಳನ್ನು ಬಳಸಬಹುದು. ಇಲ್ಲಿ, ಅವರು ಆಯಾ ಕ್ಷೇತ್ರಗಳಲ್ಲಿ ಮೂರು ವಿವರಗಳನ್ನು ನಮೂದಿಸಬೇಕು ಮತ್ತು ಫಲಿತಾಂಶಗಳು ತಕ್ಷಣವೇ ಅವರ ಮುಂದೆ ಇರುತ್ತವೆ.
- ಉಚಿತ: ಎಜುಕೇಶನ್ ಲೋನ್ದ ಕ್ಯಾಲ್ಕುಲೇಟರ್ಗಳು ಆನ್ಲೈನ್ನಲ್ಲಿ ಲಭ್ಯವಿವೆ ಮತ್ತು ಅವುಗಳನ್ನು ಒಳಗೊಂಡಿರುವ ವೆಬ್ಸೈಟ್ಗಳು ಹೆಚ್ಚಾಗಿ ಸಾಲದ ಅರ್ಜಿದಾರರಿಗೆ ಅವುಗಳನ್ನು ಉಚಿತವಾಗಿ ಬಳಸಲು ಅನುಮತಿಸುತ್ತದೆ. ಇದು ಸಾಲದ ಅರ್ಜಿದಾರರು ಎಜುಕೇಶನ್ ಲೋನ್ ಇಎಂಐ ಬಗ್ಗೆ ತಿಳಿದುಕೊಳ್ಳಲು ಪ್ರತಿ ಬಾರಿ ಬ್ಯಾಂಕ್ಗಳಿಗೆ ಅಥವಾ ಸಾಲ ನೀಡುವ ಸಂಸ್ಥೆಗಳಿಗೆ ಭೇಟಿ ನೀಡುವುದನ್ನು ತಪ್ಪಿಸುತ್ತದೆ.
ಎಜುಕೇಶನ್ ಲೋನ್ದ ಇಎಂಐ ಲೆಕ್ಕಾಚಾರಗಳ ಮೇಲೆ ಯಾವ ಅಂಶಗಳು ಪರಿಣಾಮ ಬೀರುತ್ತವೆ?
ಎಜುಕೇಶನ್ ಲೋನ್ದ ಇಎಂಐ ಪ್ರಾಥಮಿಕವಾಗಿ ಮೂರು ಅಂಶಗಳನ್ನು ಅವಲಂಬಿಸಿರುತ್ತದೆ. ಅವುಗಳು ಈ ರೀತಿ ಇವೆ,
- ಅಸಲು/ಸಾಲದ ಮೊತ್ತ: ಸಾಲದ ಮೊತ್ತವು ಬ್ಯಾಂಕ್ಗಳು ಅಥವಾ ಹಣಕಾಸು ಸಂಸ್ಥೆಗಳು ಸಾಲಗಾರನಿಗೆ ನೀಡುವ ಮೊತ್ತವನ್ನು ಸೂಚಿಸುತ್ತದೆ. ಬಡ್ಡಿ ದರವನ್ನು ಅಸಲಿನ ಶೇಕಡಾವಾರು ಎಂದು ಲೆಕ್ಕಾಚಾರ ಮಾಡಲಾಗುತ್ತದೆ ಮತ್ತು ಸಾಲದ ಮೊತ್ತವನ್ನು ಅವಲಂಬಿಸಿ (ಹೆಚ್ಚು ಅಥವಾ ಕಡಿಮೆ), ಇಎಂಐ ಪಡೆಯುವ ಸಾಲದ ಮೊತ್ತದ ಪ್ರಕಾರ ಬದಲಾಗುತ್ತದೆ.
- ಅವಧಿ: ಅವಧಿಯು ಸಾಲದ ಅರ್ಜಿದಾರರು ಪಡೆಯುವ ಸಾಲದ ಅವಧಿಯನ್ನು ಸೂಚಿಸುತ್ತದೆ. ಅವಧಿಯು ಇಎಂಐ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಸುದೀರ್ಘ ಅವಧಿಯು ಇಎಂಐ ಹೊರೆಯನ್ನು ಕಡಿಮೆ ಮಾಡಬಹುದು. ಆದರೆ ತೆರಬೇಕಾದ ಒಟ್ಟು ಬಡ್ಡಿ ಮೊತ್ತವನ್ನು ಹೆಚ್ಚಿಸುತ್ತದೆ. ಅವಧಿ ಕಡಿಮೆ ಇದ್ದರೆ ತೆರಬೇಕಾದ ಬಡ್ಡಿಯೂ ಕಡಿಮೆ. ಆದ್ದರಿಂದ, ಬುದ್ಧಿವಂತಿಕೆಯಿಂದ ಎಜುಕೇಶನ್ ಲೋನ್ಕ್ಕೆ ಅರ್ಜಿ ಸಲ್ಲಿಸಿ.
- ಬಡ್ದಿ ದರ: ಬಡ್ಡಿ ದರಗಳು, ಸಾಲ ನೀಡುವವರು ಅರ್ಜಿದಾರರಿಗೆ ಸಾಲ ನೀಡುವಾಗ ನಿಗದಿಗೊಳಿಸುವ ದರವನ್ನು ಉಲ್ಲೇಖಿಸುತ್ತದೆ. ಬಡ್ಡಿದರವು ಸಾಲದ ಒಟ್ಟು ವೆಚ್ಚವನ್ನು ಸಹ ನಿರ್ಧರಿಸುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ಗಳು ಮತ್ತು ಹಣಕಾಸಿನ ಸ್ಥಿತಿಯನ್ನು ಹೊಂದಿರುವ ವ್ಯಕ್ತಿಗಳು ಸಾಲದಾತರೊಂದಿಗೆ ಒಳಿತಾಗುವ ನಿಯಮಗಳಿಗಾಗಿ ಸಂವಹನ ನಡೆಸಬಹುದು. ಇದಲ್ಲದೆ, ಅವರು ಸ್ಪರ್ಧಾತ್ಮಕ ಬಡ್ಡಿ ದರವನ್ನು ಪಡೆಯಲು ಮತ್ತು ಸಾಲದ ಒಟ್ಟು ವೆಚ್ಚವನ್ನು ಕಡಿಮೆ ಮಾಡಲು ಮಾರುಕಟ್ಟೆ ಸಂಶೋಧನೆ ನಡೆಸಬೇಕು.
ಎಜುಕೇಶನ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಅನ್ನು ಸುಲಭವಾಗಿ ಬಳಸಿ, ಫಲಿತಾಂಶಗಳನ್ನು ತಕ್ಷಣವೇ ಪಡೆಯಿರಿ ಮತ್ತು ನಿಮ್ಮ ಜೇಬಿಗೆ ಹೊರೆಯಾಗದಂತೆ ಸೂಕ್ತವಾದ ಇಎಂಐ ಅನ್ನು ಆಯ್ಕೆಮಾಡಿ.