Thank you for sharing your details with us!
ಮನಿ ಇನ್ಶೂರೆನ್ಸ್ ಪಾಲಿಸಿ ಎಂದರೇನು?
ಯಾವುದೇ ಬಿಸಿನೆಸ್ ಗಾಗಿ ಹಣ ಮತ್ತು ವಿತ್ತೀಯ ವಹಿವಾಟುಗಳು ಸಂಪೂರ್ಣವಾಗಿ ಅವಶ್ಯಕವಾಗಿರುತ್ತವೆ! ಆದರೆ ನೀವು ಕ್ಯಾಶ್, ಚೆಕ್‌ಗಳು, ಡ್ರಾಫ್ಟ್‌ಗಳು, ಪೋಸ್ಟಲ್ ಆರ್ಡರ್ಗಳಂತಹ ವಿಷಯಗಳೊಂದಿಗೆ ವ್ಯವಹರಿಸುವಾಗ, ಯಾವಾಗಲೂ ಸ್ವಲ್ಪ ಅಪಾಯವು ಇರುತ್ತದೆ ಮತ್ತು ನಾವು ಇದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ. ಅದಕ್ಕಾಗಿಯೇ ನಿಮ್ಮ ಬಿಸಿನೆಸ್ ಹಣವನ್ನು 24/7 ರಕ್ಷಿಸಲು ಡಿಜಿಟ್ನ ಮನಿ ಇನ್ಶೂರೆನ್ಸ್ ಪಾಲಿಸಿಯು ನಿಮಗೆ ಸಹಾಯ ಮಾಡುತ್ತದೆ!
ಉದಾಹರಣೆಗೆ, ಮಾರಾಟಗಾರರಿಗೆ ಪಾವತಿಸಲು ಅಥವಾ ವೇತನವನ್ನು ವಿತರಿಸಲು ನೀವು ಬ್ಯಾಂಕ್ನಿಂದ ನಿಮ್ಮ ಕಾರ್ಖಾನೆಗೆ ಕ್ಯಾಶ್ ಅನ್ನು ಸಾಗಿಸುತ್ತಿದ್ದೀರಿ ಎಂದು ಭಾವಿಸಿ. ಆದರೆ, ಅಲ್ಲಿಗೆ ಹೋಗುವ ದಾರಿಯಲ್ಲಿ, ನಿಮ್ಮನ್ನು ನಿಲ್ಲಿಸಿ ದರೋಡೆ ಮಾಡಲಾಗುತ್ತದೆ, ಮತ್ತು ಪೊಲೀಸರು ಅಪರಾಧಿಗಳನ್ನು ಹುಡುಕುತ್ತಾರೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ!
ಈ ರೀತಿಯ ಮನಿ ಇನ್ಶೂರೆನ್ಸ್ ಇಲ್ಲದೆ, ಇಂತಹ ವಿನಾಶಕಾರಿ ನಷ್ಟವನ್ನು ಸರಿದೂಗಿಸಲು ನಿಮ್ಮ ಬಳಿ ಯಾವುದೇ ಮಾರ್ಗವಿರುವುದಿಲ್ಲ. ಆದಾಗ್ಯೂ, ನೀವು ಈ ಇನ್ಶೂರೆನ್ಸ್ ನಿಂದ ಕವರ್ ಆಗಿದ್ದರೆ, ಆ ಮೊತ್ತವನ್ನು ಮರಳಿ ಪಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ. 😊
ಆದ್ದರಿಂದ, ಈ ಪಾಲಿಸಿಯು ನಿಮ್ಮ ಹಣವನ್ನು ಸಂಪೂರ್ಣ ನಷ್ಟಗಳು, ವಿನಾಶ ಅಥವಾ ಅಪಘಾತದಿಂದ ಉಂಟಾದ ಹಾನಿಗಳಿಂದ ರಕ್ಷಿಸುತ್ತದೆ ಎಂದು ತಿಳಿದು ನೀವು ಚಿಂತೆಯಿಲ್ಲದೆ ಇರಬಹುದು.
ಮನಿ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದುವ ಪ್ರಯೋಜನಗಳು
ನಿಮ್ಮ ಹಣವು ಸುರಕ್ಷಿತವಾಗಿದ್ದಾಗ ಅಥವಾ ಸಾಗಣೆಯಲ್ಲಿದ್ದಾಗ ಕಳ್ಳತನ, ನಷ್ಟ ಅಥವಾ ಅಪಘಾತದ ಹಾನಿಯ ಸಂದರ್ಭದಲ್ಲಿ ನಿಮ್ಮನ್ನು ಮತ್ತು ನಿಮ್ಮ ಬಿಸಿನೆಸ್ ಅನ್ನು ರಕ್ಷಿಸಲು ಮನಿ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರುವುದು ಅತ್ಯಗತ್ಯ. ಆದರೆ ನಿಮಗೆ ನಿಜವಾಗಿಯೂ ಅದು ಏಕೆ ಬೇಕಾಗುತ್ತದೆ?
ಏನೆಲ್ಲಾ ಕವರ್ ಆಗಬಹುದು?
ಮನಿ ಇನ್ಶೂರೆನ್ಸ್ ಪಾಲಿಸಿಯೊಂದಿಗೆ, ನೀವು ಇವುಗಳಿಗಾಗಿ ಕವರ್ ಅನ್ನು ಪಡೆಯುತ್ತೀರಿ...
*ದರೋಡೆ ಮತ್ತು ಕಳ್ಳತನದ ನಡುವಿನ ವ್ಯತ್ಯಾಸವೇನೆಂದು ಒಂದು ವೇಳೆ ನೀವು ಯೋಚಿಸುತ್ತಿದ್ದರೆ, ಯಾರಾದರೂ ಬಲವನ್ನು ಬಳಸಿ(ಅಥವಾ ಬಲವನ್ನು ಬಳಸಲಾಗುವುದು ಎಂಬ ಭಾವನೆಯನ್ನು ಮೂಡಿಸಿ) ವ್ಯಕ್ತಿಯಿಂದ ಕದ್ದರೆ ಅದು ದರೋಡೆಯಾಗುತ್ತದೆ, ಆದರೆ ಕಳ್ಳತನ ಎಂದರೆ ಯಾವುದೇ ಬಲದ ಬಳಕೆಯನ್ನು ಮಾಡದೆ ಒಬ್ಬರ ಆಸ್ತಿಯನ್ನು ಕಸಿಯುವುದು. ಯಾರಾದರೂ ಕದಿಯಲು ಅಕ್ರಮವಾಗಿ ಒಬ್ಬರ ಆಸ್ತಿಯನ್ನು ಪ್ರವೇಶಿಸುವುದನ್ನು ಕನ್ನ ಎಂದು ಕರೆಯಲಾಗುತ್ತದೆ.
ಏನೆಲ್ಲಾ ಕವರ್ ಆಗಿರುವುದಿಲ್ಲ?
ಡಿಜಿಟ್‌ನಲ್ಲಿ ನಾವು ಪಾರದರ್ಶಕತೆಯನ್ನು ನಂಬುತ್ತೇವೆ, ಆದ್ದರಿಂದ ನೀವು ಕವರ್ ಆಗಿರದ ಕೆಲವು ಸಂದರ್ಭಗಳನ್ನು ನೀವು ತಿಳಿದುಕೊಳ್ಳಬೇಕೆಂದು ನಾವು ಬಯಸುತ್ತೇವೆ - ನಂತರ ಯಾವುದೇ ಆಶ್ಚರ್ಯಗಳು ಇರದಂತೆ...
ನಿಮಗಾಗಿ ಸರಿಯಾದ ಮನಿ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡುವುದು ಹೇಗೆ?
ಮನಿ ಇನ್ಶೂರೆನ್ಸ್ ಪಾಲಿಸಿ ಯಾರಿಗೆಲ್ಲಾ ಬೇಕಾಗುತ್ತದೆ?
ಹಣ ಅಥವಾ ವಹಿವಾಟುಗಳೊಂದಿಗೆ ವ್ಯವಹರಿಸುವ ಯಾವುದೇ ಬಿಸಿನೆಸ್ (ಅಂದರೆ ಎಲ್ಲಾ ಬಿಸಿನೆಸ್ ಗಳು!) ಎಷ್ಟು ಜಾಗರೂಕರಾಗಿದ್ದರೂ ಸಾಲದು. ಅದಕ್ಕಾಗಿಯೇ ಮನಿ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದು ಒಳ್ಳೆಯದು, ವಿಶೇಷವಾಗಿ: