ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿ ಆನ್‌ಲೈನ್‌

Zero Paperwork. Online Process

ಮೆರೈನ್ ಕಾರ್ಗೊ ಇನ್ಶೂರೆನ್ಸ್ ಎಂದರೇನು?

ರಸ್ತೆ, ರೈಲು, ಒಳನಾಡಿನ ಜಲಮಾರ್ಗಗಳ ಮೂಲಕ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವ ಕಾರ್ಗೊ ವೆಸ್ಸೆಲ್‌ಗಳಿಗೆ ಉಂಟಾಗುವ ಡ್ಯಾಮೇಜ್ ವಿರುದ್ಧ ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿ ಕವರೇಜ್ ಒದಗಿಸುತ್ತದೆ. ಹವಾಮಾನ ಪರಿಸ್ಥಿತಿಗಳು, ಮುಷ್ಕರಗಳು, ಯುದ್ಧ, ಘರ್ಷಣೆಗಳು, ಮುಳುಗುವಿಕೆ, ನ್ಯಾವಿಗೇಷನ್ ದೋಷಗಳು ಇತ್ಯಾದಿ ಅಂಶಗಳಿಂದ ನಿಂತಿದ್ದಾಗ ಅಥವಾ ಸಾಗಣೆಯಲ್ಲಿದ್ದಾಗ ಕಾರ್ಗೊಗೆ ಆಗುವ ಡ್ಯಾಮೇಜ್ ಅನ್ನು ಪಾಲಿಸಿ ಕವರ್ ಮಾಡುತ್ತದೆ.

ಮೆರೈನ್ ಕಾರ್ಗೊ ಇನ್ಶೂರೆನ್ಸ್ ಏನೆಲ್ಲಾ ಕವರ್ ಮಾಡುತ್ತದೆ?

ಏನೆಲ್ಲಾ ಕವರ್ ಆಗುವುದಿಲ್ಲ?

ಡಿಜಿಟ್‌ನ ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿಯು ಇಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಕವರ್ ಮಾಡುವುದಿಲ್ಲ:

ಉದ್ದೇಶಪೂರ್ವಕ ದುರ್ವರ್ತನೆ

ಇನ್ಶೂರ್ಡ್ ವ್ಯಕ್ತಿಯ ಉದ್ದೇಶಪೂರ್ವಕ ದುರ್ವರ್ತನೆಯ ಪರಿಣಾಮದಿಂದಾದ ಡ್ಯಾಮೇಜ್.

ಸಾಮಾನ್ಯ ವೆಚ್ಚಗಳು

ತೂಕ/ಪರಿಮಾಣ ಅಥವಾ ಸೋರಿಕೆಯಿಂದ ಉಂಟಾದ ಸಾಮಾನ್ಯ ನಷ್ಟ, ದೈನಂದಿನ ಬಳಕೆಯಿಂದ ಉಂಟಾಗುವ ವೆಚ್ಚಗಳು.

ಕೊರತೆ

ಇನ್ಶೂರ್ಡ್ ಸಾಗಣೆಯ ಸಾಮಾನ್ಯ ಘಟನೆಗಳನ್ನು ತಡೆದುಕೊಳ್ಳುವ ಇನ್ಶೂರ್ಡ್ ವಸ್ತು ವಿಷಯಗಳ ತಯಾರಿ ಅಥವಾ ಪ್ಯಾಕಿಂಗ್ ಕೊರತೆಯಿಂದ ಆದ ಡ್ಯಾಮೇಜ್.

ವಿಳಂಬ

ಇನ್ಶೂರ್ಡ್ ರಿಸ್ಕ್ ವಿರುದ್ಧವಾಗಿ ವಿಳಂಬವಾಗಿದ್ದನ್ನು ಒಳಗೊಂಡಂತೆ ವಿಳಂಬದಿಂದ ಉಂಟಾದ ಡ್ಯಾಮೇಜ್.

ಅಂತರ್ಗತ ಸ್ವಭಾವ

ಅಂತರ್ಗತ ಸ್ವಭಾವ ಅಥವಾ ಇನ್ಶೂರ್ಡ್ ವಸ್ತು-ವಿಷಯದ ಸ್ವಭಾವದಿಂದ ಉಂಟಾದ ಡ್ಯಾಮೇಜ್.

ಗಲಭೆಗಳು

ಕಾರ್ಮಿಕ ಅಡೆತಡೆಗಳು, ಗಲಭೆಗಳು ಅಥವಾ ನಾಗರಿಕ ದಂಗೆಗಳಲ್ಲಿ ಜನರು ಭಾಗವಹಿಸುವುದರಿಂದ ಉಂಟಾದ ವೆಚ್ಚಗಳು ಅಥವಾ ಡ್ಯಾಮೇಜ್ ಅನ್ನು ಇನ್ಶೂರೆನ್ಸ್ ಪಾಲಿಸಿ ಕವರ್ ಮಾಡುವುದಿಲ್ಲ.

ನ್ಯೂಕ್ಲಿಯರ್ ಫಿಷನ್ ಬಳಕೆ

ಅಟಾಮಿಕ್‌ ಅಥವಾ ನ್ಯೂಕ್ಲಿಯರ್ ಫಿಷನ್‌ ಮತ್ತು/ಅಥವಾ ಫ್ಯುಷನ್‌ಗೆ ಬಳಸಿಕೊಳ್ಳುವ ಆಯುಧ ಅಥವಾ ಡಿವೈಸ್ ನಿಂದ ಅಥವಾ ರಿಯಾಕ್ಷನ್ ಅಥವಾ ರೇಡಿಯೋಆ್ಯಕ್ಟಿವ್ ಬಲ ಅಥವಾ ವಸ್ತುವಿನಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಉಂಟಾಗುವ ಡ್ಯಾಮೇಜ್.

ಅಸಮರ್ಥತೆ

ಇನ್ಶೂರ್ಡ್ ವಸ್ತು ವಿಷಯದ ಸುರಕ್ಷಿತ ಸಾಗಣೆಗೆ ಬಳಸಲಾದ ಸಮುದ್ರ ಪ್ರಯಾಣಕ್ಕೆ ಯೋಗ್ಯವಲ್ಲದ ಶಿಪ್‌ನಿಂದ ಸಂಭವಿಸಿದ ಡ್ಯಾಮೇಜ್‌ನಿಂದ ಉಂಟಾಗುವ ವೆಚ್ಚಗಳನ್ನು ಪಾಲಿಸಿಯು ಕವರ್ ಮಾಡುವುದಿಲ್ಲ.

ಯುದ್ಧದಂತಹ ಅಪಾಯಗಳು

ಯುದ್ಧ, ಕ್ರಾಂತಿ, ದಂಗೆಯಿಂದಾಗಿ ಉಂಟಾದ ಡ್ಯಾಮೇಜ್ ಅನ್ನು ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ.

ದಿವಾಳಿತನ

ವೆಸ್ಸೆಲ್‌ಗೆ ಇನ್ಶೂರ್ಡ್ ವಸ್ತು ವಿಷಯವನ್ನು ಲೋಡ್ ಮಾಡುವ ಸಂದರ್ಭದಲ್ಲಿ ವೆಸ್ಸೆಲ್‌ನ ಆಪರೇಟರ್‌ಗಳು, ಚಾರ್ಟರರ್‌ಗಳು, ಮ್ಯಾನೇಜರ್‌ಗಳು, ಮಾಲೀಕರ ಆರ್ಥಿಕ ಡಿಫಾಲ್ಟ್ ಅಥವಾ ದಿವಾಳಿತನದಿಂದ ಉಂಟಾಗುವ ಡ್ಯಾಮೇಜ್. ಅಶ್ಯೂರ್ಡ್ ಸಾಮಾನ್ಯ ಬಿಸಿನೆಸ್ ಸಂದರ್ಭದಲ್ಲಿ ಆರ್ಥಿಕ ಡಿಫಾಲ್ಟ್ ಅಥವಾ ದಿವಾಳಿತನ ಪ್ರಯಾಣದ ದೈನಂದಿನ ನಿರ್ವಹಣೆಯನ್ನು ತಡೆಯಬಹುದು ಎಂಬ ಎಚ್ಚರಿಕೆ ಹೊಂದಿರಬೇಕು ಅಥವಾ ಅರಿತಿರಬೇಕು.

ಡಿಜಿಟ್‌ನ ಮೆರೈನ್ ಕಾರ್ಗೊ ಇನ್ಶೂರೆನ್ಸ್‌ನ ವೈಶಿಷ್ಟ್ಯಗಳು

ಎಲ್ಲಾ ಇನ್ಶೂರೆನ್ಸ್ ಪಾಲಿಸಿಗಳು ನಿಗದಿತ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಡಿಜಿಟ್‌ನ ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿಯು ಒದಗಿಸುವುದನ್ನು ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ:

ಕಾಂಪ್ರೆಹೆನ್ಸಿವ್ ಕವರೇಜ್

ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿಯು ಎಲ್ಲಾ ಪರಿಣಾಮಕಾರಿ ಅಪಾಯಗಳಿಗೆ ಕಾಂಪ್ರೆಹೆನ್ಸಿವ್ ಕವರೇಜ್ ಒದಗಿಸುತ್ತದೆ. ಇದು ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಸರಕುಗಳಿಗೆ ಆದ ಡ್ಯಾಮೇಜ್ ಅನ್ನು ಕವರ್ ಮಾಡುವ ಖಚಿತತೆ ಒದಗಿಸುತ್ತದೆ.

ಅನುಕೂಲತೆ

ಇನ್ಶೂರೆನ್ಸ್ ಪಾಲಿಸಿಯು ಹಲವಾರು ಆಯ್ಕೆಗಳೊಂದಿಗೆ ಬರುತ್ತದೆ ಮತ್ತು ಅದು ಹೊಂದಿಕೊಳ್ಳುವಂತೆ ಇರುತ್ತದೆ. ಪಾಲಿಸಿಹೋಲ್ಡರ್‌ಗಳು ಅವರ ಅವಶ್ಯಕತೆಗಳಿಗೆ ಮತ್ತು ಅವರ ಬಜೆಟ್‌ಗೆ ತಕ್ಕಂತೆ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಸುಲಭವಾದ ಕ್ಲೈಮ್ ಸೆಟಲ್‌ಮೆಂಟ್‌ ಪ್ರೊಸೆಸ್

ಈ ಪಾಲಿಸಿಯು ಸುಲಭವಾದ ಕ್ಲೈಮ್ ಸೆಟಲ್‌ಮೆಂಟ್‌ ಪಾಲಿಸಿಯೊಂದಿಗೆ ಬರುತ್ತದೆ. ಈ ವೈಶಿಷ್ಟ್ಯವು ವಿಶ್ವಾದ್ಯಂತ ಕ್ಲೈಮ್‌ಗಳ ಸೆಟಲ್‌ಮೆಂಟ್‌ ಅಸಿಸ್ಟೆನ್ಸ್‌ ಒದಗಿಸುವುದರಿಂದ ಪಾಲಿಸಿಹೋಲ್ಡರ್‌ಗಳನ್ನು ಒತ್ತಡಮುಕ್ತರನ್ನಾಗಿ ಮಾಡುತ್ತದೆ.

ಕಸ್ಟಮೈಸೇಶನ್

ಪಾಲಿಸಿಯು ಹೊಂದಿಕೊಳ್ಳುವಿಕೆಯೊಂದಿಗೆ ಬರುವುದರಿಂದ, ನೀವು ಯೋಜನೆಗಳನ್ನು ಕಸ್ಟಮೈಸ್ ಮಾಡಿಕೊಳ್ಳಬಹುದು ಮತ್ತು ನಿಮ್ಮ ಅಗತ್ಯಗಳಿಗೆ ತಕ್ಕಂತೆ ಹೊಂದಿಸಿಕೊಳ್ಳಬಹುದು.

ಕವರೇಜ್ ವಿಸ್ತರಣೆ

ಪಾಲಿಸಿಹೋಲ್ಡರ್ ಆ್ಯಡ್-ಆನ್ ಪ್ರಯೋಜನಗಳೊಂದಿಗೆ ಕವರೇಜ್ ವಿಸ್ತರಿಸುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಗಲಭೆಗಳು, ಮುಷ್ಕರಗಳು ಇತ್ಯಾದಿ ಅಂಶಗಳಿಂದ ಉಂಟಾಗಬಹುದಾದ ರಿಸ್ಕ್‌ಗಳಿಂದ ನೀವು ರಕ್ಷಿಸಲ್ಪಡುತ್ತೀರಿ ಎಂಬ ಖಚಿತತೆಯನ್ನು ಈ ವೈಶಿಷ್ಟ್ಯ ಒದಗಿಸುತ್ತದೆ.

ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿ ಯಾರಿಗೆ ಅವಶ್ಯ?

ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬಹುದಾದವರು ಎಂದರೆ -

ಮಾರಾಟಗಾರರು/ವ್ಯಾಪಾರಿಗಳು

ಸರಕುಗಳನ್ನು ದೇಶದ ವಿವಿಧ ಭಾಗಗಳಿಗೆ ಸಾಗಿಸುವ ಅವಶ್ಯಕತೆ ಹೊಂದಿರುವ ಸರಕು ಮಾರಾಟಗಾರರು ಈ ಪಾಲಿಸಿಯನ್ನು ಅವರಿಗಾಗಿ ಪಡೆದುಕೊಳ್ಳಬಹುದು.

ಕಂಟ್ರಾಕ್ಟರ್‌ಗಳು

ಕಂಟ್ರಾಕ್ಟರ್‌ಗಳು ಕೂಡ ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಬಹುದು.

ಸರಕುಗಳ ಆಮದು/ರಫ್ತಿನಲ್ಲಿ ಅಥವಾ ಸಾಗಣೆಯಲ್ಲಿ ತೊಡಗಿಕೊಂಡಿರುವ ಯಾರೇ ಆದರೂ

ಸರಕುಗಳ ಆಮದು ಮತ್ತು ರಫ್ತಿನಲ್ಲಿ ಅಥವಾ ದೇಶಾದ್ಯಂತ ಸಾಗಾಣಿಕೆಯಲ್ಲಿ ತೊಡಗಿಕೊಂಡಿರುವವರು ಕೂಡ ಆ ಪಾಲಿಸಿಯನ್ನು ಪಡೆಯಬಹುದು.

ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿ ಪ್ರೀಮಿಯಂ ಅನ್ನು ಹೇಗೆ ಕ್ಯಾಲ್ಕುಲೇಟ್ ಮಾಡಲಾಗುತ್ತದೆ?

ಈ ಕೆಳಗೆ ನಮೂದಿಸಿದ ಅಂಶಗಳನ್ನು ಆಧರಿಸಿಕೊಂಡು ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿ ಪ್ರೀಮಿಯಂ ಕ್ಯಾಲ್ಕುಲೇಟ್ ಮಾಡಲಾಗುತ್ತದೆ:

ಸಾಗಿಸಲಾಗುವ ಸರಕುಗಳ ವಿಧಗಳು

ಸಾಗಿಸಲಾಗುವ ಸರಕುಗಳು ಡ್ಯಾಮೇಜ್ ಆಗುವ ಹೆಚ್ಚಿನ ರಿಸ್ಕ್ ಹೊಂದಿದ್ದರೆ ಪ್ರೀಮಿಯಂ ಜಾಸ್ತಿ ಇರುತ್ತದೆ. ಆ ಕಾರಣ, ಸರಕುಗಳ ಸಾಗಾಣಿಕೆಗೆ ಹೆಚ್ಚಿನ ಎಚ್ಚರಿಕೆ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇರುವುದರಿಂದ, ಜಾಸ್ತಿ ಪ್ರೀಮಿಯಂ ವಿಧಿಸಲಾಗುತ್ತದೆ.

ಸಾರಿಗೆ ವಿಧಾನ

ಸರಕುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಲು ಬಳಸುವ ಸಾರಿಗೆ ವಿಧಾನ ಪಾಲಿಸಿಯ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಮತ್ತೊಂದು ಅಂಶ. ಸಾರಿಗೆಯ ವಿವಿಧ ವಿಧಾನಗಳು ವಿವಿಧ ರೀತಿಯ ರಿಸ್ಕ್‌ಗಳನ್ನು ಒಳಗೊಂಡಿರುವುದರಿಂದ ಪ್ರೀಮಿಯಂ ಬದಲಾಗುತ್ತದೆ.

ವೆಹಿಕಲ್ ವಿಧಾನ

ಪಾವತಿಸಬೇಕಾದ ಪ್ರೀಮಿಯಂ ಸರಕುಗಳ ಸಾಗಾಣಿಕೆಗೆ ಬಳಸಲಾಗುವ ವೆಹಿಕಲ್ ವಿಧಾನವನ್ನೂ ಅವಲಂಬಿಸಿರುತ್ತದೆ. ಬಳಸಿರುವ ವೆಹಿಕಲ್ ದೊಡ್ಡದಾಗಿದ್ದರೆ ಮತ್ತು ಹೆಚ್ಚಿನ ರಿಸ್ಕ್‌ ಒಳಗೊಂಡಿದ್ದರೆ ಪಾವತಿಸಬೇಕಾದ ಪ್ರೀಮಿಯಂ ಜಾಸ್ತಿ ಇರುತ್ತದೆ.

ವಾಹನದ ವಯಸ್ಸು

ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿಗೆ ವಿಧಿಸಲಾಗಿರುವ ಪ್ರೀಮಿಯಂ ಮೇಲೆ ವೆಹಿಕಲ್‌ನ ವಯಸ್ಸು ಕೂಡ ಪರಿಣಾಮ ಬೀರುತ್ತದೆ. ವೆಹಿಕಲ್‌ ಸುದೀರ್ಘ ಕಾಲದವರೆಗೆ ಬಳಕೆಯಲ್ಲಿದ್ದರಿಂದ ಕಾಲಕ್ರಮೇಣ ಸಾಮರ್ಥ್ಯ ಕಡಿಮೆಯಾಗಿರುವ ಸಾಧ್ಯತೆ ಮತ್ತು ಅದಕ್ಕೆ ಸಂಬಂಧಿಸಿದಂತೆ ರಿಸ್ಕ್‌ಗಳು ಜಾಸ್ತಿ ಇದ್ದರೆ ಪ್ರೀಮಿಯಂ ಜಾಸ್ತಿ ಇರುತ್ತದೆ.

ಸಾರಿಗೆ ವಾಹನದ ವೆಚ್ಚ

ಸರಕುಗಳನ್ನು ಸಾಗಾಣಿಕೆ ಮಾಡಲು ಬಳಸಲಾಗ ವೆಹಿಕಲ್‌ನ ವೆಚ್ಚ ಕೂಡ ಪಾವತಿಸಬೇಕಾದ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆ.

ವ್ಯಾಪಾರ ಮಿತಿ

ವ್ಯಾಪಾರ ಮತ್ತು ಟನ್‌ಮಾನದ ಮಿತಿ ಕೂಡ ಪಾಲಿಸಿಯ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆ. ಮಿತಿ ಜಾಸ್ತಿ ಇದ್ದರೆ ಪ್ರೀಮಿಯಂ ಕೂಡ ಜಾಸ್ತಿ ಇರುತ್ತದೆ ಮತ್ತು ವೈಸ್‌ ವರ್ಸಾ.

ಇನ್ಶೂರೆನ್ಸ್ ಕವರ್‌ನ ವಿಧ

ನೀವು ಆರಿಸಿಕೊಳ್ಳುವ ಇನ್ಶೂರೆನ್ಸ್‌ ಕವರ್‌ನ ವಿಧ ಕೂಡ ಪಾಲಿಸಿ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆ. ಮೇಲೆ ತಿಳಿಸಿದ ಅಂಶಗಳಂತೆ, ಕವರೇಜ್ ವಿಸ್ತಾರ ಜಾಸ್ತಿ ಇದ್ದಷ್ಟೂ ಪಾವತಿಸಬೇಕಾದ ಪ್ರೀಮಿಯಂ ಕೂಡ ಜಾಸ್ತಿ ಇರುತ್ತದೆ.

ಮಾಲೀಕತ್ವದ ನಿಯಮಗಳು

ಪಾಲಿಸಿಯ ಪ್ರೀಮಿಯಂ ಕ್ಯಾಲ್ಕುಲೇಟ್ ಮಾಡುವ ಮೊದಲು, ಮಾಲೀಕತ್ವದ ಮತ್ತು ಮ್ಯಾನೇಜ್‌ಮೆಂಟ್‌ ನಿಯಮಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಅದು ಪಾವತಿಸಬೇಕಾದ ಪ್ರೀಮಿಯಂ ನಿರ್ಧರಿಸುವಾಗ ಪ್ರಮುಖ ಪಾತ್ರ ವಹಿಸುತ್ತದೆ.

ಸರಿಯಾದ ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ?

ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡುವಾಗ ಕೆಲವು ಅಂಶಗಳನ್ನು ಪರಿಗಣಿಸುವ ಅವಶ್ಯಕತೆ ಇದೆ. ಅವುಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ:

  • ಇನ್ಶೂರರ್‌ಗಳ ಖ್ಯಾತಿ – ನೀವು ಇನ್ಶೂರೆನ್ಸ್ ಪಾಲಿಸಿ ಖರೀದಿಸಲು ಪ್ಲಾನ್ ಮಾಡಿರುವ ಇನ್ಶೂರರ್‌ಗಳ ಖ್ಯಾತಿಯನ್ನು ನೀವು ಗಮನಿಸಿಕೊಂಡಿರಬೇಕು. ಹೀಗೆ ಮಾಡುವುದರಿಂದ, ಕ್ಲೈಮ್‌ಗಳ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ ಎಂದು ನೀವು ಖಚಿತಪಡಿಸಿಕೊಳ್ಳಬಹುದಾಗಿರುತ್ತದೆ.
  • ದೃಢವಾದ ಮೆರೈನ್ ಕ್ಲೈಮ್ ವಿಭಾಗ - ಇನ್ಶೂರರ್ ಆರೋಗ್ಯಕರವಾದ ಮರೈಟೈಮ್ ಕ್ಲೈಮ್ ವಿಭಾಗವನ್ನು ಹೊಂದಿದ್ದಾರಾ ಎಂಬುದು ಪರಿಗಣಿಸಬೇಕಾದ ಮತ್ತೊಂದು ಅಂಶ. ಇದು ಅವಶ್ಯ, ಯಾಕೆಂದರೆ ನಿಮ್ಮ ಕ್ಲೈಮ್ ಅಪ್ಲಿಕೇಷನ್ ಅವರ ಟೇಬಲ್‌ನಲ್ಲಿ ಉಳಿದುಹೋಗುವುದನ್ನು ನೀವು ಬಯಸುವುದಿಲ್ಲ. 
  • ಕೈಗೆಟಕುವ ಪ್ರೀಮಿಯಂ – ನೀವು ಗಮನ ಹರಿಸುವ ಅವಶ್ಯಕತೆ ಇರುವ ಮತ್ತೊಂದು ಅಂಶ ಪಾವತಿಸಬೇಕಾದ ಪ್ರೀಮಿಯಂ. ನೀವು ನಿಮ್ಮ ಕವರೇಜ್‌ಗಾಗಿ ಜಾಸ್ತಿ ಪ್ರೀಮಿಯಂ ಪಾವತಿಸಲು ಬಯಸುವುದಿಲ್ಲ
  • ನಿಮಗೆ ಅವಶ್ಯವಿರುವ ಕವರೇಜ್ – ನಿಮಗಾಗಿ ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಡೆಯುವ ಸಂದರ್ಭದಲ್ಲಿ, ನೀವು ಅದು ಒದಗಿಸುವ ಕವರೇಜ್ ಅನ್ನು ಗಮನಿಸುವುದು ಅವಶ್ಯ. ಒಂದು ಇನ್ಶೂರೆನ್ಸ್ ಪಡೆಯಬೇಕು ಎಂಬ ಕಾರಣಕ್ಕಾಗಿ ಮಾತ್ರವಲ್ಲದೆ, ನೀವು ಬಯಸುವ ಕವರೇಜ್ ಅನ್ನು ಪಾಲಿಸಿ ಒದಗಿಸುತ್ತದೆ ಎಂಬುದನ್ನು ಇದು ಖಚಿತಪಡಿಸುತ್ತದೆ.
  • ಸರ್ವೇಯರ್ ಮತ್ತು ಅಸೆಸರ್ ನೆಟ್‌ವರ್ಕ್‌ - ಸರಿಯಾದ ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿಯನ್ನು ಆರಿಸುವಾಗ, ಇನ್ಶೂರರ್‌ನ ಸರ್ವೇಯರ್‌ಗಳ ಮತ್ತು ಅಸೆಸರ್‌ಗಳ ನೆಟ್‌ವರ್ಕ್‌ ಅನ್ನು ಗಮನಿಸುವುದು ಬಹಳ ಮುಖ್ಯ. ಯಾಕೆಂದರೆ ಕ್ಲೈಮ್ ನಿರ್ದಿಷ್ಟವಾದ ಮಿತಿಯನ್ನು ಮೀರಿದರೆ, ನಿಖರವಾದ ಡ್ಯಾಮೇಜ್ ಅನ್ನು ನಿರ್ಧರಿಸಲು ಅಸೆಸರ್ ನಿಮ್ಮನ್ನು ಭೇಟಿ ಮಾಡುತ್ತಾರೆ.

ಭಾರತದಲ್ಲಿ ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು

ನೈಸರ್ಗಿಕ ವಿಪತ್ತುಗಳಿಂದ ಉಂಟಾದ ಡ್ಯಾಮೇಜ್ ಅನ್ನು ಮೆರೈನ್ ಕಾರ್ಗೊ ಇನ್ಶೂರೆನ್ಸ್ ಕವರ್ ಮಾಡುತ್ತದೆಯೇ?

ಹೌದು, ಭೂಕಂಪ, ಮಿಂಚು, ಚಂಡಮಾರುತ ಇತ್ಯಾದಿ ನೈಸರ್ಗಿಕ ವಿಪತ್ತುಗಳಿಂದ ಉಂಟಾದ ಡ್ಯಾಮೇಜ್ ಅನ್ನು ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಕವರ್ ಮಾಡಲಾಗುತ್ತದೆ.

ಮೆರೈನ್ ಇನ್ಶೂರೆನ್ಸ್‌ನ ಸಾಮಾನ್ಯ ವಿಧಗಳು ಯಾವುವು?

ಮೆರೈನ್ ಇನ್ಶೂರೆನ್ಸ್‌ನ ಸಾಮಾನ್ಯ ವಿಧಗಳೆಂದರೆ - ಹಲ್ ಇನ್ಶೂರೆನ್ಸ್, ಫ್ರೈಟ್ ಇನ್ಶೂರೆನ್ಸ್, ಮೆರೈನ್ ಕಾರ್ಗೊ ಇನ್ಶೂರೆನ್ಸ್ ಮತ್ತು ಲಯಬಿಲಿಟಿ ಇನ್ಶೂರೆನ್ಸ್.

ಮೆರೈನ್ ಇನ್ಶೂರೆನ್ಸ್ ಪಾಲಿಸಿಯನ್ನು ಅಸೈನ್ ಮಾಡಬಹುದೇ?

ನಿಯಮಗಳು ಮತ್ತು ಷರತ್ತುಗಳು ಉಲ್ಲೇಖಿಸದ ಹೊರತು, ಮೆರೈನ್ ಪಾಲಿಸಿಯನ್ನು ಅಸೈನ್ ಮಾಡಬಹುದು.

ಮೆರೈನ್ ಇನ್ಶೂರೆನ್ಸ್‌ನ ತತ್ವಗಳು ಯಾವುವು?

ಸಾಮಾನ್ಯವಾಗಿ ಮೆರೈನ್ ಇನ್ಶೂರೆನ್ಸ್ ಪಾಲಿಸಿ ಆರು ತತ್ವಗಳನ್ನು ಆಧರಿಸಿದೆ: ಉತ್ತಮ ನಂಬಿಕೆ, ನಷ್ಟ ಪರಿಹಾರ, ಇನ್ಶೂರೆಬಲ್ ಇಂಟರೆಸ್ಟ್, ಅತಿ ಹತ್ತಿರದ ಕಾರಣ, ಕೊಡುಗೆ ಮತ್ತು ಪ್ರತಿಸ್ಥಾಪನೆ

ಕಾರ್ಗೊ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಸಾಗಾಣಿಕೆಯಲ್ಲಿನ ವಿಳಂಬ ಕವರ್ ಆಗುವುದೇ?

ಇಲ್ಲ, ಕಾರ್ಗೊ ಇನ್ಶೂರೆನ್ಸ್ ಪಾಲಿಸಿ ಸಾಗಾಣಿಕೆಯಲ್ಲಿನ ವಿಳಂಬಗಳನ್ನು ಕವರ್ ಮಾಡುವುದಿಲ್ಲ.

ಎಷ್ಟು ವಿಧದ ಕಾರ್ಗೊ ಇನ್ಶೂರೆನ್ಸ್ ಪಾಲಿಸಿಗಳು ಇವೆ?

ನಾಲ್ಕು ವಿಧದ ಕಾರ್ಗೊ ಇನ್ಶೂರೆನ್ಸ್ ಪಾಲಿಸಿಗಳು ಇವೆ. ಅವುಗಳೆಂದರೆ - ಆ್ಯನ್ಯುವಲ್ ಪಾಲಿಸಿ, ಸ್ಪೆಸಿಫಿಕ್ ವೊಯೇಜ್ ಪಾಲಿಸಿ, ಓಪನ್ ಪಾಲಿಸಿ ಮತ್ತು ಓಪನ್ ಕವರ್.

ಮೆರೈನ್ ಕಾರ್ಗೊ ಇನ್ಶೂರೆನ್ಸ್ ಅಡಿಯಲ್ಲಿ ಪಾಲಿಸಿಯ ಅವಧಿ ಎಷ್ಟು?

ಮೆರೈನ್ ಇನ್ಶೂರೆನ್ಸ್‌ನಲ್ಲಿ ಸಾಮಾನ್ಯವಾಗಿ ಒಂದು ವರ್ಷದ ಪಾಲಿಸಿ ಅವಧಿ ನೀಡಲಾಗುತ್ತದೆ. ಅದನ್ನು ಸಂಪೂರ್ಣ ಸ್ಪೆಸಿಫಿಕ್ ವೊಯೇಜ್‌ಗೆ ವಿಸ್ತರಿಸಬಹುದಾದರೂ, ಭಾರತದಲ್ಲಿ ವರ್ಷಕ್ಕೊಮ್ಮೆ ಮಾತ್ರ ಪಾಲಿಸಿ ನೀಡಲಾಗುತ್ತದೆ.

ಸ್ಪೆಸಿಫಿಕ್ ವೊಯೇಜ್ ಪಾಲಿಸಿ ಹೇಗೆ ಕೆಲಸ ಮಾಡುತ್ತದೆ?

ಈ ವಿಧದ ಕಾರ್ಗೊ ಇನ್ಶೂರೆನ್ಸ್ ಪಾಲಿಸಿಯನ್ನು ಸಾಗಣೆ ಆರಂಭವಾಗುವ ಮೊದಲು ನೀಡಲಾಗುತ್ತದೆ ಮತ್ತು ಪ್ರಯಾಣ ಪೂರ್ತಿಯಾದ ತಕ್ಷಣ ನಿಲ್ಲಿಸಲಾಗುತ್ತದೆ. ಇದು ಒಂದೇ ಕಡೆಯ ಸರಕು ಸಾಗಾಣಿಕೆ ಪ್ರಯಾಣಕ್ಕೆ ಸೂಕ್ತವಾಗಿದೆ.

ಮೆರೈನ್ ಕಾರ್ಗೊ ಇನ್ಶೂರೆನ್ಸ್ ಕೇವಲ ಜಲ ಸಾರಿಗೆಗೆ ಸೀಮಿತವಾಗಿದೆಯೇ?

ಇಲ್ಲ, ಮೆರೈನ್ ಕಾರ್ಗೊ ಇನ್ಶೂರೆನ್ಸ್ ಕೇವಲ ಜಲ ಸಾರಿಗೆಗೆ ಸೀಮಿತವಾಗಿಲ್ಲ. ಈ ಪಾಲಿಸಿ ರಸ್ತೆ, ರೈಲು ಮತ್ತು ವಾಯುಮಾರ್ಗದ ಮೂಲಕ ಮಾಡುವ ಕಾರ್ಗೊ ಸಾಗಾಣಿಕೆಯನ್ನೂ ಕವರ್ ಮಾಡುತ್ತದೆ.

ಮೆರೈನ್ ಕಾರ್ಗೊ ಇನ್ಶೂರೆನ್ಸ್ ಅಡಿಯಲ್ಲಿ ಯಾವೆಲ್ಲಾ ಸಾರಿಗೆ ವಿಧಾನಗಳು ಒಳಗೊಂಡಿವೆ?

ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿ ರಸ್ತೆ, ರೈಲು, ಸಮುದ್ರ ಮತ್ತು ಏರ್‌ಕ್ರಾಫ್ಟ್ ಮೂಲಕ ಮಾಡುವ ಕಾರ್ಗೊ ಸಾಗಾಣಿಕೆಗೆ ಕವರೇಜ್ ಒದಗಿಸುತ್ತದೆ.

ಮರೀನ್ ಕಾರ್ಗೋ ಇನ್ಶೂರೆನ್ಸ್ ಗಿಂತ ಮರೀನ್ ಇನ್ಶೂರೆನ್ಸ್ ಹೇಗೆ ಭಿನ್ನವಾಗಿದೆ?

ಮೆರೈನ್ ಇನ್ಶೂರೆನ್ಸ್ ಜಲ ಮಾರ್ಗಗಳ ಮೂಲಕ ಮಾಡಿದ ಕಾರ್ಗೊ ಸಾಗಾಣಿಕೆಗೆ ಕವರೇ ಒದಗಿಸಿದರೆ, ಮೆರೈನ್ ಕಾರ್ಗೊ ಇನ್ಶೂರೆನ್ಸ್ ಇನ್ನಿತರ ಸಾರಿಗೆ ವಿಧಾನಗಳನ್ನು ಬಳಸಿ ಮಾಡಿದ ಕಾರ್ಗೊ ಸಾಗಾಣಿಕೆಗೂ ಕವರೇಜ್ ಒದಗಿಸುತ್ತದೆ.