Thank you for sharing your details with us!
ಮ್ಯಾನೇಜ್‌ಮೆಂಟ್ ಲಯಬಿಲಿಟಿ ಇನ್ಶೂರೆನ್ಸ್ ಎಂದರೇನು?
ಮ್ಯಾನೇಜ್‌ಮೆಂಟ್ ಲಯಬಿಲಿಟಿ ಇನ್ಶೂರೆನ್ಸ್(ಡೈರೆಕ್ಟರ್ಸ್ ಮತ್ತು ಆಫೀಸರ್ಸ್ ಇನ್ಶೂರೆನ್ಸ್ ಎಂದೂ ಕರೆಯುತ್ತಾರೆ) ಇದು ನಿಮ್ಮ ಕಂಪನಿ ಮತ್ತು ಅದರ ಮ್ಯಾನೇಜರ್‌ಗಳು, ಡೈರೆಕ್ಟರ್‌ಗಳು ಮತ್ತು ಆಫೀಸರ್ಗಳನ್ನು, ಅವರ ತಪ್ಪುಗಳಿಂದ ಅಥವಾ ಕ್ರಿಯೆಗಳಿಂದ ಉಂಟಾಗುವ ಯಾವುದೇ ಹಣಕಾಸಿನ ನಷ್ಟಗಳಿಂದ ರಕ್ಷಿಸಲು ಇರುವ ಒಂದು ವಿಧದ ಪಾಲಿಸಿಯಾಗಿದೆ.
ಉದಾಹರಣೆಗೆ, ನಿಮ್ಮ ಬಿಸಿನೆಸ್ ಅನ್ನು ಮ್ಯಾನೇಜ್ ಮಾಡುವಾಗ ಅಥವಾ ನೋಡಿಕೊಳ್ಳುವಾಗ ಡೈರೆಕ್ಟರ್‌ಗಳು ಮತ್ತು ಆಫೀಸರ್‌ಗಳ ಕೆಪ್ಯಾಸಿಟಿಯಲ್ಲಿ ಈ ವ್ಯಕ್ತಿಗಳ ವಿರುದ್ಧ ತರಲಾದ ತಾರತಮ್ಯ, ಕಿರುಕುಳ, ವಂಚನೆ ಅಥವಾ ತಪ್ಪಾದ ಟರ್ಮಿನೇಶನ್ನ ಯಾವುದೇ ಕ್ಲೈಮ್‌ಗಳಿಂದ ಉಂಟಾಗಬಹುದಾದ ಹಣಕಾಸಿನ ನಷ್ಟಗಳಿಂದ ಡೈರೆಕ್ಟರ್ಗಳುನ್ನು, ಮ್ಯಾನೇಜರ್ಗಳನ್ನು ರಕ್ಷಿಸಲು ಇದು ಸಹಾಯ ಮಾಡುತ್ತದೆ.
ಅಂತಹ ಸಂದರ್ಭಗಳಲ್ಲಿ, ಮ್ಯಾನೇಜ್‌ಮೆಂಟ್ ಲಯಬಿಲಿಟಿ ಇನ್ಶೂರೆನ್ಸ್ ಎಲ್ಲಾ ರೀತಿಯ ಅನಿರೀಕ್ಷಿತ ಮತ್ತು ಸಂಭಾವ್ಯ ದೊಡ್ಡ ಲಯಬಿಲಿಟಿ ಕ್ಲೈಮ್‌ಗಳ ವಿರುದ್ಧ ಎಕ್ಸ್ಟ್ರಾ ಲೆವೆಲ್ ಕವರೇಜನ್ನು ನೀಡುತ್ತದೆ. ಜೊತೆಗೆ ಮೊಕದ್ದಮೆಯ ಕಾರಣದಿಂದಾಗಿ ಕೆಲವು ನಷ್ಟಗಳನ್ನು ಕವರ್ ಮಾಡುತ್ತದೆ.
ನಿಮಗೆ ಮ್ಯಾನೇಜ್‌ಮೆಂಟ್ ಲಯಬಿಲಿಟಿ ಇನ್ಶೂರೆನ್ಸ್ ಏಕೆ ಬೇಕು?
ಕಂಪನಿ ಅಥವಾ ಅದರ ಡೈರೆಕ್ಟರ್‌ಗಳು ಹಾಗೂ ಆಫೀಸರ್‌ಗಳಿಂದ ಕಿರುಕುಳ ಮತ್ತು ವಂಚನೆಯಂತಹ ತಪ್ಪುಗಳು ಅಥವಾ ತಪ್ಪು ಕ್ರಮಗಳಿಂದಾಗಿ, ಅನಿರೀಕ್ಷಿತ ಮತ್ತು ಸಂಭಾವ್ಯ ದೊಡ್ಡ ಲಯಬಿಲಿಟಿ ಕ್ಲೈಮ್‌ಗಳಿಂದ ರಕ್ಷಿಸಲು, ದೊಡ್ಡ ಮತ್ತು ಸಣ್ಣ ಗಾತ್ರದ ಎಲ್ಲಾ ಬಿಸಿನೆಸ್‌ಗಳಿಗೆ ಸಹಾಯ ಮಾಡಲು ಮ್ಯಾನೇಜ್‌ಮೆಂಟ್ ಲಯಬಿಲಿಟಿ ಇನ್ಶೂರೆನ್ಸ್ ಇದೆ. ಆದರೆ ನಿಮಗೆ ನಿಜವಾಗಿಯೂ ಈ ಪಾಲಿಸಿ ಏಕೆ ಬೇಕು?
ಮ್ಯಾನೇಜ್‌ಮೆಂಟ್ ಲಯಬಿಲಿಟಿ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?
ನೀವು ಮ್ಯಾನೇಜ್‌ಮೆಂಟ್ ಲಯಬಿಲಿಟಿ ಇನ್ಶೂರೆನ್ಸ್ ಅನ್ನು ಪಡೆದಾಗ, ಈ ಕೆಳಗಿನ ಸಂದರ್ಭಗಳಲ್ಲಿ ನಿಮ್ಮ ಬಿಸಿನೆಸ್ ಅನ್ನು ರಕ್ಷಿಸಲಾಗುತ್ತದೆ....
ಏನನ್ನು ಕವರ್ ಮಾಡುವುದಿಲ್ಲ?
ನಾವು ಡಿಜಿಟ್‌ನಲ್ಲಿ ಪಾರದರ್ಶಕತೆಯನ್ನು ನಂಬಿರುವುದರಿಂದ, ನೀವು ಕವರ್ ಆಗದ ಕೆಲವು ಸಂದರ್ಭಗಳು ಇಲ್ಲಿವೆ.
ಮ್ಯಾನೇಜ್‌ಮೆಂಟ್ ಲಯಬಿಲಿಟಿ ಇನ್ಶೂರೆನ್ಸಿನ ಬೆಲೆ ಎಷ್ಟು?
ನಿಮ್ಮ ಮ್ಯಾನೇಜ್‌ಮೆಂಟ್ ಲಯಬಿಲಿಟಿ ಇನ್ಶೂರೆನ್ಸ್ ಪ್ರೀಮಿಯಂ ಎಷ್ಟು ವೆಚ್ಚ ಆಗುತ್ತದೆ ಎಂಬುದು ಹಲವಾರು ಅಂಶಗಳನ್ನು ಆಧರಿಸಿದೆ, ಉದಾಹರಣೆಗೆ:
- ನಿಮ್ಮ ಬಿಸಿನೆಸ್‌ನ ಸ್ವರೂಪ ಮತ್ತು ಪ್ರಕಾರ ಮತ್ತು ಅದು ಕಾರ್ಯನಿರ್ವಹಿಸುವ ಇಂಡಸ್ಟ್ರಿ
- ಎಷ್ಟು ಮ್ಯಾನೇಜರ್‌ಗಳು, ಡೈರೆಕ್ಟರ್‌ಗಳು ಮತ್ತು ಆಫೀಸರ್‌ಗಳು ಆ ಕಂಪನಿಯ ಭಾಗವಾಗಿದ್ದಾರೆ
- ಎಂಪ್ಲಾಯೀಗಳ ಸಂಖ್ಯೆ
- ನಿಮ್ಮ ಕಂಪನಿಯ ಗಾತ್ರ
- ನಿಮ್ಮ ಬಿಸಿನೆಸ್ ಎಲ್ಲಿ ಲೊಕೇಟ್ ಆಗಿದೆ
- ನಿಮ್ಮ ಬಿಸಿನೆಸ್‌ನ ವಿರುದ್ಧ ಮಾಡಿದ ಹಳೆಯ ಕ್ಲೈಮ್‌ಗಳು
- ಕಂಪನಿಯ ಅಂದಾಜು ರೆವಿನ್ಯೂ ಮತ್ತು/ಅಥವಾ ಪ್ರಾಫಿಟ್
- ಒಟ್ಟು ಅಸೆಟ್ಗಳ ಸಂಖ್ಯೆ
- ನೀವು ಆಯ್ಕೆ ಮಾಡುವ ಲಯಬಿಲಿಟಿಯ ಲಿಮಿಟ್
ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಇತರ ಅಂಶಗಳೆಂದರೆ ಕಂಪನಿಯ ವಯಸ್ಸು, ಅದರ ಫೈನಾನ್ಸಿಯಲ್ ಸ್ಟೆಬಿಲಿಟಿ, ಅದರ ಟ್ರೇಡಿಂಗ್ ಪ್ಯಾಟರ್ನ್ ಮತ್ತು ಶೇರ್ಹೋಲ್ಡರ್ಗಳು.
ಯಾವ ಬಿಸಿನೆಸ್‌ಗಳಿಗೆ ಮ್ಯಾನೇಜ್‌ಮೆಂಟ್ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಯ ಅಗತ್ಯವಿದೆ?
ಮ್ಯಾನೇಜರ್‌ಗಳು, ಡೈರೆಕ್ಟರ್‌ಗಳು ಮತ್ತು ಆಫೀಸರ್‌ಗಳ ವಿರುದ್ಧ ಇಂಟರ್ನಲ್ ಅಥವಾ ಎಕ್ಸ್ಟರ್ನಲ್ ಕ್ಲೈಮ್‌ಗಳಿಂದ ನಿಮ್ಮ ಬಿಸಿನೆಸ್‌ಗೆ ರಕ್ಷಣೆಗಾಗಿ, ಈ ಇನ್ಶೂರೆನ್ಸ್ ಅನ್ನು ಪಡೆಯುವುದರಿಂದ, ನೀವು ಪ್ರಯೋಜನ ಪಡೆಯಬಹುದು. ಎಲ್ಲಾ ಗಾತ್ರದ ಬಿಸಿನೆಸ್‌ಗಳಿಗೆ ಮ್ಯಾನೇಜ್‌ಮೆಂಟ್ ಲಯಬಿಲಿಟಿ ಇನ್ಶೂರೆನ್ಸ್ ಮುಖ್ಯವಾಗಿದೆ. ಅವುಗಳು ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ, ಸಂಭಾವ್ಯ ದೊಡ್ಡ ಲಯಬಿಲಿಟಿ ಕ್ಲೈಮ್‌ಗಳ ವಿರುದ್ಧ ಅದು ನಿಮ್ಮ ಕಂಪನಿಯನ್ನು ರಕ್ಷಿಸುತ್ತದೆ. ಆದಾಗ್ಯೂ, ಭಾರತದಲ್ಲಿ ರಿಜಿಸ್ಟರ್ಡ್ ಆಫೀಸ್ ಅನ್ನು ಹೊಂದಿರದ ಕಂಪನಿಗಳು, ರಾಜಕೀಯ ಸಂಸ್ಥೆಗಳು ಮತ್ತು ಮುಂತಾದ ಕೆಲವು ಬಿಸಿನೆಸ್‌ಗಳು ಮ್ಯಾನೇಜ್‌ಮೆಂಟ್ ಲಯಬಿಲಿಟಿ ಇನ್ಶೂರೆನ್ಸ್ ಪಡೆಯುವ ಅರ್ಹತೆ ಹೊಂದಿರುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.