Thank you for sharing your details with us!
ಮಷೀನರಿ ಬ್ರೇಕ್ಡೌನ್ ಇನ್ಶೂರೆನ್ಸ್ ಎಂದರೇನು?
ಬಳಕೆಯಲ್ಲಿರುವಾಗ ಅಥವಾ ವಿಶ್ರಾಂತ ಸ್ಥಿತಿಯಲ್ಲಿರುವಾಗ ಇನ್ಶೂರ್ಡ್ ಮಷೀನರಿಗೆ ಉಂಟಾಗುವ ಯಾವುದೇ ಅನಿರೀಕ್ಷಿತ ಡ್ಯಾಮೇಜ್ ಅನ್ನು ಇನ್ಶೂರರ್ ಕವರ್ ಮಾಡುವ ಖಚಿತತೆಯನ್ನು ಮಷೀನರಿ ಬ್ರೇಕ್ಡೌನ್ ಇನ್ಶೂರೆನ್ಸ್ ಪಾಲಿಸಿ ಒದಗಿಸುತ್ತದೆ. ನಿರ್ದಿಷ್ಟವಾದ ಕಾರಣಗಳನ್ನು ಹೊರತುಪಡಿಸಿ ಇನ್ಶೂರ್ಡ್ ಮಷೀನರಿಯ ಡ್ಯಾಮೇಜ್ ಆದ ಭಾಗಗಳನ್ನು ರಿಪ್ಲೇಸ್ ಮಾಡಲು ಅಥವಾ ರಿಪೇರಿ ಮಾಡಲು ಉಂಟಾಗುವ ವೆಚ್ಚವನ್ನು ಡಿಜಿಟ್ನ ಮಷೀನರಿ ಬ್ರೇಕ್ಡೌನ್ ಇನ್ಶೂರೆನ್ಸ್ ಪಾಲಿಸಿ ಕವರ್ ಮಾಡುತ್ತದೆ. ಇನ್ಶೂರ್ಡ್ ವಸ್ತುಗಳ ಕಾರ್ಯಕ್ಷಮತೆ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡ ಮೇಲೆ ಅವುಗಳು ಕೆಲಸ ಮಾಡುತ್ತಿದ್ದರೂ ಅಥವಾ ವಿಶ್ರಾಂತ ಸ್ಥಿತಿಯಲ್ಲಿದ್ದರೂ ಅದನ್ನು ಪರಿಗಣಿಸದೆ ಪಾಲಿಸಿ ಅಪ್ಲೈ ಆಗುತ್ತದೆ.
ಡಿಜಿಟ್ನ ಮಷೀನರಿ ಬ್ರೇಕ್ಡೌನ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಏನೆಲ್ಲಾ ಕವರ್ ಆಗುತ್ತದೆ?
ತಕ್ಷಣದ ರಿಪೇರಿ ಅಥವಾ ರಿಪ್ಲೇಸ್ಮೆಂಟ್ ಅವಶ್ಯಕತೆಯನ್ನು ಸೂಚಿಸಿರುವ ಆವರಣದಲ್ಲಿರುವ ಯಾವುದೇ ನಿರ್ದಿಷ್ಟ ಇನ್ಶೂರ್ಡ್ ಪ್ರಾಪರ್ಟಿಯನ್ನು ಇನ್ನು ಮುಂದೆ ಹೊರತುಪಡಿಸದಿರುವ ಯಾವುದೇ ಕಾರಣದಿಂದ ಉಂಟಾದ ಹಠಾತ್ ಭೌತಿಕ ಡ್ಯಾಮೇಜ್ ಮತ್ತು ಅನಿರೀಕ್ಷಿತ ಘಟನೆಗಳ ವಿರುದ್ಧ ಡಿಜಿಟ್ನ ಮಷೀನರಿ ಬ್ರೇಕ್ಡೌನ್ ಇನ್ಶೂರೆನ್ಸ್ ಪಾಲಿಸಿ ಇನ್ಶೂರ್ಡ್ಗೆ ನಷ್ಟ ಪರಿಹಾರ ಒದಗಿಸುತ್ತದೆ.
ಏನೆಲ್ಲಾ ಕವರ್ ಆಗುವುದಿಲ್ಲ?
ಡಿಜಿಟ್ನ ಮಷೀನರಿ ಬ್ರೇಕ್ಡೌನ್ ಇನ್ಶೂರೆನ್ಸ್ ಪಾಲಿಸಿ ಈ ಕೆಳಗೆ ನಮೂದಿಸಿರುವ ಕಾರಣಗಳಿಂದ ಆದ ಡ್ಯಾಮೇಜ್ಗಳಿಗೆ ಕವರೇಜ್ ಒದಗಿಸುವುದಿಲ್ಲ:
- ಬೆಂಕಿ ಅಥವಾ ಅದಕ್ಕೆ ಸಂಬಂಧಿಸಿದ ಅಪಾಯಗಳಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮಷೀನರಿ ಅಥವಾ ಅದರ ಭಾಗಗಳಿಗೆ ಉಂಟಾದ ಡ್ಯಾಮೇಜ್ ಅಥವಾ ನಷ್ಟ.
- ಯುದ್ಧ, ಆಕ್ರಮಣ, ವಿದೇಶಿ ಶತ್ರುವಿನ ಹಗೆತನ, ಅಂತರ್ಯುದ್ಧ, ದಂಗೆ, ಗಲಭೆಗಳು, ಮುಷ್ಕರಗಳು ಇತ್ಯಾದಿ ಕಾರಣಗಳಿಂದ ಉಂಟಾಗುವ ಡ್ಯಾಮೇಜ್/ನಷ್ಟ.
- ನ್ಯೂಕ್ಲಿಯರ್ ರಿಯಾಕ್ಷನ್, ನ್ಯೂಕ್ಲಿಯರ್ ರೇಡಿಯೇಷನ್ ಅಥವಾ ರೇಡಿಯೋಆ್ಯಕ್ಟಿವ್ ಕಂಟಾಮಿನೇಷನ್ ಕಾರಣದಿಂದ ಉಂಟಾದ ಡ್ಯಾಮೇಜ್.
- ನಿಧಾನವಾಗಿ ದೊಡ್ಡದಾಗುತ್ತಿರುವ ದೋಷಗಳು, ಮೆಶಿನ್ನಲ್ಲಿರುವ ಬಿರುಕುಗಳು ಅಥವಾ ರಿಪೇರಿ ಆಗುವ ಅಥವಾ ರಿನೀವ್ ಆಗುವ ಅಗತ್ಯ ಇರುವ ಭಾಗಶಃ ಮುರಿತಗಳು ಇತ್ಯಾದಿಗಳಿಂದ ಉಂಟಾದ ಡ್ಯಾಮೇಜ್.
- ಸಹಜ ಬಳಕೆ ಮತ್ತು ತೆರೆದಿಡುವಿಕೆಗೆ ಒಳಗಾದ ಮಷೀನರಿಯ ಯಾವುದೇ ಭಾಗಗಳ ಸುದೀರ್ಘ ಸಾಮಾನ್ಯ ಉಪಯೋಗದಿಂದ ಆದ ಹಾನಿ ಅಥವಾ ಕೆಟ್ಟುಹೋಗಿದ್ದರ ಕಾರಣದಿಂದ ಉಂಟಾದ ನಷ್ಟ.
- ಕೆಮಿಕಲ್ ರಿಕವರಿ ಬಾಯ್ಲರ್ಗಳಲ್ಲಿ ಸ್ಫೋಟಗಳು, ಒತ್ತಡ ಸ್ಫೋಟಗಳನ್ನು ಹೊರತು ಪಡಿಸಿ ಉದಾಹಹರಣೆಗೆ ಸ್ಮೆಲ್ಟ್, ರಾಸಾನಿಕ, ದಹನ, ಸ್ಫೋಟಗಳು ಇತ್ಯಾದಿ ಕಾರಣಗಳಿಂದ ಉಂಟಾದ ಡ್ಯಾಮೇಜ್ ಅಥವಾ ನಷ್ಟ.
- ಇನ್ಶೂರೆನ್ಸ್ ಪಾಲಿಸಿ ಪ್ರಾರಂಭದ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ದೋಷಗಳಿಂದ ಉಂಟಾದ ಲಯಬಿಲಿಟಿ.
- ಉದ್ದೇಶಪೂರ್ವ ಕ್ರಿಯೆ ಅಥವಾ ನಿರ್ಲಕ್ಷ್ಯ ಅಥವಾ ಸಂಪೂರ್ಣ ನಿರ್ಲಕ್ಷ್ಯದಿಂದ ಉಂಟಾದ ಡ್ಯಾಮೇಜ್ ಅಥವಾ ನಷ್ಟ.
- ಕಾನೂನು ಅಥವಾ ಕಾಂಟ್ರಾಕ್ಟ್ ಪ್ರಕಾರ ಜವಾಬ್ದಾರರಾಗಿರುವ ಪ್ರಾಪರ್ಟಿಯ ತಯಾರಕರು/ಪೂರೈಕೆದಾರರು/ರಿಪೇರಿಯವರಿಂದಾದ ಡ್ಯಾಮೇಜ್ ಅಥವಾ ನಷ್ಟ.
- ಒಂದು ಘಟನೆಯಲ್ಲಿ ಒಂದಕ್ಕಿಂತ ಹೆಚ್ಚು ಅಥವಾ ಜಾಸ್ತಿ ವಸ್ತುಗಳು ಡ್ಯಾಮೇಜ್ ಆದಾಗ ಮಾಡುವ ಪ್ರತೀ ಕ್ಲೈಮ್.
- ಬೆಲ್ಟ್ಗಳು, ಚೈನ್ಗಳು, ಕಟ್ಟರ್ಗಳು, ಗ್ಲಾಸ್ನಿಂದ ತಯಾರಿಸಲಾದ ವಸ್ತುಗಳು, ಮೆಟಲ್ನಿಂದ ಮಾಡಲ್ಪಡದ ಭಾಗಗಳು, ವಿನಿಮಯ ಮಾಡಿಕೊಳ್ಳಬಹುದಾದ ಸಾಧನಗಳು ಇತ್ಯಾದಿ ವಸ್ತುಗಳಿಂದ ಆದ ಡ್ಯಾಮೇಜ್.
- ಓವರ್ ಲೋಡ್ ಪ್ರಯೋಗಗಳು ಅಥವಾ ಅವಶ್ಯವಿರುವ ಪರೀಕ್ಷೆಗಳ ಪರಿಣಾಮದಿಂದ ಉಂಟಾದ ಅಪಘಾತ, ನಷ್ಟ, ಡ್ಯಾಮೇಜ್/ಮತ್ತು/ಅಥವಾ ಲಯಬಿಲಿಟಿ.
ಮಷೀನರಿ ಬ್ರೇಕ್ಡೌನ್ ಇನ್ಶೂರೆನ್ಸ್ ಪಾಲಿಸಿ ಯಾರಿಗೆ ಅವಶ್ಯವಿದೆ?
ತಮ್ಮ ದೈನಂದಿನ ವ್ಯವಹಾರಗಳಲ್ಲಿ ಮಷೀನರಿಗಳನ್ನು ಬಳಸುವ ಸಂಸ್ಥೆಗಳು, ಕಾರ್ಖಾನೆಗಳು, ಇಂಡಸ್ಟ್ರಿಗಳು ಮತ್ತು ಘಟಕಗಳಿಗೆ ಈ ಮಷೀನರಿ ಬ್ರೇಕ್ಡೌನ್ ಇನ್ಶೂರೆನ್ಸ್ ಪಾಲಿಸಿಯ ಅವಶ್ಯವಿದೆ.
ಹಠಾತ್ ಬ್ರೇಕ್ಡೌನ್ಗಳು ಅಥವಾ ಮಷೀನರಿಗಳಿಗೆ ಆದ ಡ್ಯಾಮೇಜ್ನಿಂದ ಉಂಟಾದ ವ್ಯಾವಹಾರಿಕ ನಷ್ಟಗಳನ್ನು ಇನ್ಶೂರೆನ್ಸ್ ಪಾಲಿಸಿ ಕವರ್ ಮಾಡುತ್ತದೆ. ಅದು ಡ್ಯಾಮೇಜ್ ಆದ ಭಾಗಗಳನ್ನು ರಿಪೇರಿ ಅಥವಾ ರಿಪ್ಲೇಸ್ ಮಾಡಲು ಅವಶ್ಯ ಇರುವ ಹಣದ ರೂಪದಲ್ಲಾಗಿರಬಹುದು ಅಥವಾ ಸಂಪೂರ್ಣ ಮಷೀನರಿಯೇ ಆಗಿರಬಹುದು.
ಮಷೀನರಿ ಬ್ರೇಕ್ಡೌನ್ ಇನ್ಶೂರೆನ್ಸ್ ಪಾಲಿಸಿಗೆ ಪ್ರೀಮಿಯಂ ಅನ್ನು ಹೇಗೆ ಕ್ಯಾಲ್ಕುಲೇಟ್ ಮಾಡಲಾಗುತ್ತದೆ?
ಮಷೀನರಿ ಬ್ರೇಕ್ಡೌನ್ ಇನ್ಶೂರೆನ್ಸ್ ಪಾಲಿಸಿ ಪಡೆಯಲು ಪಾವತಿಸಬೇಕಾದ ಪ್ರೀಮಿಯಂ ಅನ್ನು ಮಷೀನರಿಯ ವಯಸ್ಸು, ಮಷೀನರಿಯ ಡೆಪ್ರಿಸಿಯೇಷನ್ ಮತ್ತು ಆಯ್ಕೆ ಮಾಡಿಕೊಂಡ ಆ್ಯಡ್-ಆನ್ಗಳ ಸಂಖ್ಯೆ ಮುಂತಾದ ಹಲವು ಅಂಶಗಳನ್ನು ಪರಿಗಣಿಸಿಕೊಂಡು ಕ್ಯಾಲ್ಕುಲೇಟ್ ಮಾಡಲಾಗುತ್ತದೆ. ಮೂಲ ಪಾಲಿಸಿಗೆ ಹೆಚ್ಚುವರಿಯಾಗಿ ಪಾಲಿಸಿಹೋಲ್ಡರ್ ಆಯ್ಕೆ ಮಾಡಿಕೊಂಡ ಆ್ಯಡ್-ಆನ್ಗಳ ನಂಬರ್ ಪಾವತಿಸಬೇಕಾದ ಪ್ರೀಮಿಯಂ ಕ್ಯಾಲ್ಕುಲೇಷನ್ನಲ್ಲಿ ಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತದೆ.
ಮಷೀನರಿ ಬ್ರೇಕ್ಡೌನ್ ಇನ್ಶೂರೆನ್ಸ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು
ಡಿಸ್ಕ್ಲೈಮರ್ - ಈ ಬರಹವನ್ನು ಮಾಹಿತಿ ನೀಡುವ ಉದ್ದೇಶದಿಂದ ಮತ್ತು ಡಿಜಿಟ್ನ ಪಾಲಿಸಿ ವರ್ಡಿಂಗ್ಸ್ ಡಾಕ್ಯುಮೆಂಟ್ ಗೆ ಸಂಬಂಧಿಸಿದಂತೆ ಇಂಟರ್ನೆಟ್ನ ನಾನಾ ಮೂಲಗಳಿಂದ ಸಂಗ್ರಹಿಸಿ ರೂಪಿಸಲಾಗಿದೆ. ಡಿಜಿಟ್ನ ಮಷೀನರಿ ಬ್ರೇಕ್ಡೌನ್ ಇನ್ಶೂರೆನ್ಸ್ ಪಾಲಿಸಿ (UIN: IRDAN158RP0021V02201920)ಯ ವಿವರವಾದ ಕವರೇಜ್, ಹೊರಗಿಡುವಿಕೆ, ಷರತ್ತುಗಳನ್ನು ತಿಳಿಯಲು ಪಾಲಿಸಿ ಡಾಕ್ಯುಮೆಂಟ್ ಅನ್ನು ಎಚ್ಚರಿಕೆಯಿಂದ ಓದಿರಿ.