ಎರೆಕ್ಷನ್ ಆಲ್ ರಿಸ್ಕ್ ಇನ್ಶೂರೆನ್ಸ್ ಎಂದರೇನು?
ಎರೆಕ್ಷನ್ ಆಲ್ ರಿಸ್ಕ್ ಇನ್ಶೂರೆನ್ಸ್ ಒಂದು ಪಾಲಿಸಿಯಾಗಿದ್ದು, ಇದು ಪ್ರಾಜೆಕ್ಟ್ ನ ಯಶಸ್ವಿ ಪೂರ್ಣತೆ ಮತ್ತು ಕಾರ್ಯಾರಂಭದವರೆಗೆ, ನಿರ್ಮಾಣ ಹಂತದಲ್ಲಿ ಆಸ್ತಿ ನಷ್ಟ ಅಥವಾ ಹಾನಿಗಾಗಿ ಪಾಲಿಸಿಯ ಅವಧಿಯಲ್ಲಿ ಹಣಕಾಸಿನ ಕವರ್ ಅನ್ನು ನೀಡುತ್ತದೆ.
ಪ್ರಮುಖ ಸತ್ಯಾಂಶಗಳು
- ಭಾರತೀಯ ಕಾರ್ಮಿಕ ಅಂಕಿಅಂಶಗಳ ಪ್ರಕಾರ, ಕೈಗಾರಿಕಾ ಅಪಘಾತಗಳಿಂದ ಮಾರಣಾಂತಿಕ ಗಾಯಗಳ ಸಂಖ್ಯೆಯು ಹೆಚ್ಚುತ್ತಿರುವ ಪ್ರವೃತ್ತಿಯನ್ನು ಕಂಡಿದೆ.
- ಅಧಿಕೃತ ಅಂಕಿಅಂಶಗಳ ಪ್ರಕಾರ, 2014 ರಲ್ಲಿ 4,499 ಕೈಗಾರಿಕಾ ಅಪಘಾತಗಳು ಸಂಭವಿಸಿವೆ. ಈ ಪೈಕಿ, 515 ಮಾರಣಾಂತಿಕವಾಗಿದ್ದವು.
- ಬ್ರಿಟಿಷ್ ಸೇಫ್ಟಿ ಕೌನ್ಸಿಲ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಭಾರತವು ಪ್ರತಿ 500 ಕಾರ್ಖಾನೆಗಳಿಗೆ ಒಬ್ಬ ಇನ್ಸ್‌ಪೆಕ್ಟರ್ ಅನ್ನು ಮಾತ್ರ ಹೊಂದಿದೆ.
ಎರೆಕ್ಷನ್ ಆಲ್ ರಿಸ್ಕ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿರುತ್ತದೆ?
ಏನೆಲ್ಲಾ ಕವರ್ ಆಗಿರುವುದಿಲ್ಲ?
ಡಿಜಿಟ್‌ನ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕೆಲವು ನಿರ್ದಿಷ್ಟ ಹೊರಗಿಡುವಿಕೆಗಳಿವೆ. ಅವುಗಳಲ್ಲಿ ಕೆಲವು ಈ ರೀತಿ ಇವೆ:
ದಾಸ್ತಾನು ತೆಗೆದುಕೊಳ್ಳುವ ಸಮಯದಲ್ಲಿ ಪತ್ತೆಯಾದ ನಷ್ಟ ಅಥವಾ ಡ್ಯಾಮೇಜ್.
ಸಾಮಾನ್ಯ ಸವೆತ ಮತ್ತು ವಾತಾವರಣದ ಪರಿಸ್ಥಿತಿಗಳಿಂದಾಗಿ ಆಗುವ ಕ್ರಮೇಣ ಕ್ಷೀಣಿಸುವಿಕೆಯಿಂದ ಉಂಟಾಗುವ ಡ್ಯಾಮೇಜ್.
ಎರೆಕ್ಷನ್ ದೋಷಗಳನ್ನು ಹೊರತುಪಡಿಸಿ, ದೋಷಪೂರಿತ ವಿನ್ಯಾಸ, ದೋಷಯುಕ್ತ ಮೆಟೀರಿಯಲ್, ಕೆಟ್ಟ ಕಾರ್ಯಕೌಶಲದಿಂದ ಉಂಟಾಗುವ ಡ್ಯಾಮೇಜ್.
ದೈಹಿಕ ಹಾನಿಗೆ ಕಾರಣವಾಗುವುದನ್ನು ಹೊರತುಪಡಿಸಿ, ಎರೆಕ್ಷನ್ ಸಮಯದಲ್ಲಿ ಆದ ಯಾವುದೇ ದೋಷವನ್ನು ಸರಿಪಡಿಸಲು ಉಂಟಾದ ವೆಚ್ಚ.
ಫೈಲ್‌ಗಳು, ಡ್ರಾಯಿಂಗ್‌ಗಳು, ಅಕೌಂಟ್ ಗಳು, ಬಿಲ್‌ಗಳು, ಕರೆನ್ಸಿ, ಸ್ಟ್ಯಾಂಪ್‌ಗಳು, ಡೀಡ್ ಪತ್ರಗಳು, ನೋಟುಗಳು, ಸೆಕ್ಯೂರಿಟಿಗಳು ಇತ್ಯಾದಿಗಳಿಗೆ ಉಂಟಾಗುವ ಡ್ಯಾಮೇಜ್.
ಎರೆಕ್ಷನ್ ಒಪ್ಪಂದದ ಅಡಿಯಲ್ಲಿ ಅಥವಾ ಯಾವುದೇ ಇತರ ಕಟ್ಟುಪಾಡುಗಳ ಅಡಿಯಲ್ಲಿ ಪೂರ್ಣಗೊಳಿಸಬೇಕಾದ ನಿಯಮಗಳನ್ನು ಇನ್ಶೂರ್ ಆಗಿರುವವರು ಪೂರೈಸದ ಕಾರಣ ತೆರಬೇಕಾಗುವ ಪೆನಲ್ಟಿಗಳು.
ಸಾಗಣೆಯಲ್ಲಿರುವ ವಾಹನಗಳಿಂದ ಉಂಟಾಗುವ ಅಪಘಾತಗಳು.
ಅಂತಹ ಒಪ್ಪಂದದ ಅನುಪಸ್ಥಿತಿಯಲ್ಲಿ, ಅಂತಹ ಲಯಬಿಲಿಟಿಯನ್ನು ಲಗತ್ತಿಸಿರುವುದನ್ನು ಸಹ ಹೊರತುಪಡಿಸಿ, ನಷ್ಟ ಪರಿಹಾರದ ಅಥವಾ ಇತರ ರೀತಿಯಲ್ಲಿ ಯಾವುದೇ ಮೊತ್ತವನ್ನು ಪಾವತಿಸಲು ಇನ್ಶೂರ್ ಆಗಿರುವವರು ಮಾಡಿರುವ ಯಾವುದೇ ಒಪ್ಪಂದ.
ಪ್ರಾಜೆಕ್ಟ್‌ಗೆ ಸಂಬಂಧಿಸಿದ ಉದ್ಯೋಗಿಗಳು/ಪ್ರಮುಖ ಕೆಲಸಗಾರರು/ಕಾಂಟ್ರ್ಯಾಕ್ಟರ್‌ಗಳು/ಪ್ರಾಜೆಕ್ಟ್ ಗೆ ಸಂಬಂಧಪಟ್ಟ ಅನ್ಯ ಯಾವುದೇ ಸಂಸ್ಥೆಯವರ ಅನಾರೋಗ್ಯ, ದೈಹಿಕ ಗಾಯದ ಪರಿಣಾಮವಾಗಿ ಉಂಟಾಗುವ ಲಯಬಿಲಿಟಿಯನ್ನು ಕವರ್ ಮಾಡಲಾಗುವುದಿಲ್ಲ.
ಪೂರ್ಣವಾಗಿ ಅಥವಾ ಭಾಗಶಃ ಇನ್ಶೂರ್ ಆಗಿರುವ ಪ್ರಾಜೆಕ್ಟ್ ಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿರುವವರಿಗೆ ಕಾಂಟ್ರ್ಯಾಕ್ಟರ್‌ಗಳಿಗೆ, ಪ್ರಿನ್ಸಿಪಲ್ ಗೆ ಸೇರಿರುವ, ಅಥವಾ ಅವರ ಆರೈಕೆ, ಕಸ್ಟಡಿ ಅಥವಾ ನಿಯಂತ್ರಣದಲ್ಲಿರುವ ಆಸ್ತಿಯ ನಷ್ಟ ಅಥವಾ ಡ್ಯಾಮೇಜ್.
ಎರೆಕ್ಷನ್ ಆಲ್ ರಿಸ್ಕ್ ಇನ್ಶೂರೆನ್ಸ್ ನ ಅಗತ್ಯ ಯಾರಿಗೆ ಇರುತ್ತದೆ?
ಈ ಇನ್ಶೂರೆನ್ಸ್ ಪಾಲಿಸಿಯನ್ನು ಕೆಳಗೆ ಉಲ್ಲೇಖಿಸಲಾದವರು ಖರೀದಿಸಬಹುದು:
ಎರೆಕ್ಷನ್ ಆಲ್ ರಿಸ್ಕ್ ಪಾಲಿಸಿಯನ್ನು ಕಂಪನಿ ಅಥವಾ ಕಾರ್ಖಾನೆಯ ಮಾಲೀಕರು ಖರೀದಿಸಬೇಕು. ಸ್ಥಾಪನೆಯ ಸಮಯದಲ್ಲಿ ಹಾನಿಯಿಂದ ಉಂಟಾಗುವ ವೆಚ್ಚಗಳ ಭಾರವನ್ನು ಅವರು ಭರಿಸಬೇಕಾಗುವುದರಿಂದ, ಅವರ ಹೆಸರಿನಲ್ಲಿ ಪಾಲಿಸಿಯನ್ನು ಹೊಂದಿರುವುದು ಅತ್ಯಗತ್ಯ.
ಸಲಕರಣೆಗಳ ತಯಾರಕರು ಮತ್ತು ಅವರ ಪೂರೈಕೆದಾರರು ಸಹ ಈ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬಹುದು. ಸ್ಥಾಪಿಸಲಾದ ಸಲಕರಣೆಗಳಲ್ಲಿ ಕೆಲವು ದೋಷಗಳಿದ್ದರೆ ಇದು ಸಹಾಯಕಾರಿಯಾಗಬಹುದು.
ಕಛೇರಿ ಅಥವಾ ಕಾರ್ಖಾನೆಯಲ್ಲಿ ಉಪಕರಣಗಳನ್ನು ಸ್ಥಾಪಿಸುವ ಕಾಂಟ್ರ್ಯಾಕ್ಟ್ ಪಡೆದವರು ಸಹ ಎರೆಕ್ಷನ್ ಆಲ್ ರಿಸ್ಕ್ ಇನ್ಶೂರೆನ್ಸ್ ಅನ್ನು ಖರೀದಿಸಬಹುದು.
ಮಷೀನರಿ ಅನ್ನು ಸ್ಥಾಪಿಸಲು ಸಂಬಂಧಿಸಿದ ನಿರ್ದಿಷ್ಟ ಕಾರ್ಯವನ್ನು ಪೂರ್ಣಗೊಳಿಸಲು ಕಾಂಟ್ರ್ಯಾಕ್ಟರ್‌ಗಳು ನಿಯೋಜಿಸಿದ ಸಬ್ ಕಾಂಟ್ರ್ಯಾಕ್ಟರ್‌ಗಳು ಸಹ ಈ ಪಾಲಿಸಿಯನ್ನು ಪಡೆಯಬಹುದು.
ನೀವು ಎರೆಕ್ಷನ್ ಆಲ್ ರಿಸ್ಕ್ ಇನ್ಶೂರೆನ್ಸ್ ಪಾಲಿಸಿಯನ್ನು ಏಕೆ ಖರೀದಿಸಬೇಕು?
ಈ ಕಾರಣಗಳಿಗಾಗಿ ಡಿಜಿಟ್‌ನ ಎರೆಕ್ಷನ್ ಆಲ್ ರಿಸ್ಕ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆದುಕೊಳ್ಳಿ:
ಒಬ್ಬಪಾಲಿಸಿಹೋಲ್ಡರ್ , ಈ ಪಾಲಿಸಿಯ ಅಡಿಯಲ್ಲಿ ಸ್ಥಾಪನೆಯ ಸಮಯದಲ್ಲಿ ರಿಪೋರ್ಟ್ ಆದ ಯಾವುದೇ ವಸ್ತು ಹಾನಿ ಅಥವಾ ನಷ್ಟವನ್ನು ಕ್ಲೈಮ್ ಮಾಡಬಹುದು.
ಟೆಸ್ಟ್ ರನ್ ಮತ್ತು ಮೆಂಟೇನೆನ್ಸ್ ಸಂದರ್ಭದಲ್ಲಿ ಪ್ರಾಪರ್ಟಿಗೆ ಯಾವುದೇ ಹಾನಿ ಉಂಟಾದರೆ, ಪಾಲಿಸಿಯು ಅದನ್ನು ಕವರ್ ಮಾಡುತ್ತದೆ.
ಎರೆಕ್ಷನ್ ಆಲ್ ರಿಸ್ಕ್ ಇನ್ಶೂರೆನ್ಸ್ ಗಾಗಿ ಪ್ರೀಮಿಯಂ ಅನ್ನು ಹೇಗೆ ಕ್ಯಾಲ್ಕ್ಯುಲೇಟ್ ಮಾಡಲಾಗುತ್ತದೆ?
ಎರೆಕ್ಷನ್ ಆಲ್ ರಿಸ್ಕ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಪ್ರೀಮಿಯಂ ಕೆಳಗೆ ಪಟ್ಟಿ ಮಾಡಲಾದ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ:
ಇನ್ಶೂರೆನ್ಸ್ ಪಾಲಿಸಿ ಯಾವುದೇ ಇರಲಿ, ಪಾವತಿಸಬೇಕಾದ ಪ್ರೀಮಿಯಂ ಮುಖ್ಯವಾಗಿ ಸಮ್ ಇನ್ಶೂರ್ಡ್ ಮೇಲೆ ಅವಲಂಬಿತವಾಗಿರುತ್ತದೆ. ಸಮ್ ಇನ್ಶೂರ್ಡ್ ಹೆಚ್ಚಿದ್ದಷ್ಟು, ಪ್ರೀಮಿಯಂ ಹೆಚ್ಚಿರುತ್ತದೆ ಮತ್ತು ಪ್ರತಿಯಾಗಿ. ಅದರ ಜೊತೆಗೆ, ಸಂಬಂಧಿತ ಅಪಾಯ ಮತ್ತು ಪ್ರಾಜೆಕ್ಟ್ ನ ಅಂದಾಜು ಪೂರ್ಣತೆಯ ಮೌಲ್ಯವು ಪಾವತಿಸಬೇಕಾದ ಪ್ರೀಮಿಯಂನಲ್ಲಿ ಒಂದು ಪಾತ್ರವನ್ನು ವಹಿಸುತ್ತದೆ.
ಪ್ರಾಜೆಕ್ಟ್ ಸೈಟ್‌ನಲ್ಲಿ ಮಷೀನರಿ ಅಥವಾ ಉಪಕರಣಗಳನ್ನು ಸ್ಥಾಪಿಸಲು ತೆಗೆದುಕೊಳ್ಳುವ ಸಮಯವು ಸಹ ಪಾಲಿಸಿಯ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆ. ಅವಧಿ ದೀರ್ಘವಾಗಿದ್ದರೆ ಪ್ರೀಮಿಯಂ ಅಧಿಕವಾಗಿರುತ್ತದೆ.
ಹೊಸ ಮಷೀನರಿ ಸ್ಥಾಪನೆಯು ಪೂರ್ಣಗೊಂಡ ನಂತರ, ಅದನ್ನು ಪ್ರಾಜೆಕ್ಟ್ ಮಾಲೀಕರಿಗೆ ಹಸ್ತಾಂತರಿಸುವ ಮೊದಲು ಅದನ್ನು ಪರೀಕ್ಷಿಸುವ ಸಮಯವಿರುತ್ತದೆ. ಪ್ರೀಮಿಯಂ ಅನ್ನು ಸೆಟ್ ಮಾಡುವಲ್ಲಿ ಈ ಅವಧಿಯು ಒಂದು ಪಾತ್ರವನ್ನು ವಹಿಸುತ್ತದೆ.
ಪಾಲಿಸಿಹೋಲ್ಡರ್ ಪಾಲಿಸಿಯ ಭಾಗವಾಗಿ ಸ್ವಲ್ಪ ಸ್ವಯಂಪ್ರೇರಿತ ಆ್ಯಕ್ಸೆಸ್ ಅನ್ನು ಆರಿಸಿಕೊಳ್ಳಬಹುದು. ಇದು ಪಾಲಿಸಿಯ ಅಡಿಯಲ್ಲಿ ಪಾವತಿಸಬೇಕಾದ ಪ್ರೀಮಿಯಂನಲ್ಲಿ ಕಡಿತವನ್ನು ನೀಡುತ್ತದೆ.
ಅತ್ಯುತ್ತಮ ಎರೆಕ್ಷನ್ ಆಲ್ ರಿಸ್ಕ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡುವುದು ಹೇಗೆ?
ಸರಿಯಾದ ಎರೆಕ್ಷನ್ ಆಲ್ ರಿಸ್ಕ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಲು, ನೀವು ಕೆಳಗೆ ತಿಳಿಸಲಾದ ಅಂಶಗಳನ್ನು ಪರಿಗಣಿಸಬೇಕು:
1. ಸಮ್ ಇನ್ಶೂರ್ಡ್ - ಸರಿಯಾದ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಲು ಸರಿಯಾದ ಸಮ್ ಇನ್ಶೂರ್ಡ್ ಅನ್ನು ಪಡೆಯುವುದು ಅತ್ಯಗತ್ಯ. ಯಾವ ಘಟನೆಗೆ ಬೇಕಾದರೂ ನೀವು ಕವರ್ ಪಡೆಯುತ್ತೀರಿ ಎಂದು ಇದು ಖಚಿತಪಡಿಸುತ್ತದೆ.
2. ಸರಿಯಾದ ಕವರೇಜ್ - ನೀವು ಯಾವ ಎರೆಕ್ಷನ್ ಆಲ್ ರಿಸ್ಕ್ ಪಾಲಿಸಿಯನ್ನು ಪಡೆಯಬೇಕು ಎಂಬುದನ್ನು ನಿರ್ಧರಿಸುವಾಗ ಪರಿಗಣಿಸಬೇಕಾದ ಇನ್ನೊಂದು ವಿಷಯವೆಂದರೆ, ಸರಿಯಾದ ಕವರೇಜ್ ನೀಡುವ ಪಾಲಿಸಿಯಾಗಿದೆ.
3. ಗೊಂದಲ-ಮುಕ್ತ ಕ್ಲೈಮ್ ಪ್ರಕ್ರಿಯೆ - ಒಂದು ಗೊಂದಲ-ಮುಕ್ತ ಕ್ಲೈಮ್ ಪ್ರಕ್ರಿಯೆಯೊಂದಿಗೆ ಇನ್ಶೂರರ್ ನಿಂದ ಪಾಲಿಸಿಯನ್ನು ಪಡೆಯಿರಿ. ಕ್ಲೈಮ್ ಇತ್ಯರ್ಥದ ಸಮಯದಲ್ಲಿ ನೀವು ಅದನ್ನು ಸುಲಭವಾಗಿ ಮತ್ತು ತ್ವರಿತವಾಗಿ ಇತ್ಯರ್ಥಪಡಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳುವುದರಿಂದ, ನೀವು ಅದನ್ನು ಸುಲಭವಾಗಿ ಮತ್ತು ತ್ವರಿತವಾಗಿ ಇತ್ಯರ್ಥಗೊಳಿಸುತ್ತೀರಿ.
4. ವಿವಿಧ ಇನ್ಶೂರರ್ ಗಳ ಪಾಲಿಸಿಗಳನ್ನು ಹೋಲಿಕೆ ಮಾಡಿ - ಮಾರ್ಕೆಟ್ ನಲ್ಲಿ ಇತರ ಇನ್ಶೂರರ್ ಗಳು ನೀಡುವ ಪಾಲಿಸಿಗಳನ್ನು ಹೋಲಿಕೆ ಮಾಡಿ. ಪಾಲಿಸಿಯು ಯಾವ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಇದು ನಿಮಗೆ ಸಹಾಯ ಮಾಡುತ್ತದೆ ಮತ್ತು ಅದರ ಆಧಾರದ ಮೇಲೆ, ನಿಮಗಾಗಿ ಸೂಕ್ತವಾದ ಪಾಲಿಸಿಯನ್ನು ಆಯ್ಕೆಮಾಡಿ.
ಭಾರತದಲ್ಲಿ ಎರೆಕ್ಷನ್ ಆಲ್ ರಿಸ್ಕ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು
ಪಾಲಿಸಿಯ ಅವಧಿ ಮತ್ತು ಪ್ರಾಜೆಕ್ಟ್ ಅವಧಿ ಸಮಾನವಾಗಿರಬೇಕೇ?
ಹೌದು, ಪಾಲಿಸಿಯ ಅವಧಿಯು ಪ್ರಾಜೆಕ್ಟ್ ಅವಧಿಗೆ ಸಮಾನವಾಗಿರಬೇಕು. ಇದು ಸೈಟ್‌ನಲ್ಲಿ ಮಷೀನರಿ ಅಥವಾ ಸಲಕರಣೆಗಳ ಆಗಮನ, ಟೆಸ್ಟಿಂಗ್ ಮತ್ತು ಕಾರ್ಯಾರಂಭವನ್ನು ಒಳಗೊಂಡಿರುತ್ತದೆ.
ಎರೆಕ್ಷನ್ ಆಲ್ ರಿಸ್ಕ್ ಇನ್ಶೂರೆನ್ಸ್ ಪಾಲಿಸಿಯು ಪ್ರಾಜೆಕ್ಟ್ ಪೂರ್ಣಗೊಳಿಸುವಿಕೆಯಲ್ಲಿನ ವಿಳಂಬದಿಂದಾಗಿ ಆಗುವ ಹಣಕಾಸಿನ ನಷ್ಟವನ್ನು ಕವರ್ ಮಾಡುತ್ತದೆಯೇ?
ಪ್ರಾಜೆಕ್ಟ್ ಪೂರ್ಣಗೊಳಿಸುವಲ್ಲಿ ವಿಳಂಬವಾಗುವುದರಿಂದ ಆಗುವ ಹಣಕಾಸು ನಷ್ಟವನ್ನು ಪಾಲಿಸಿಯು ಕವರ್ ಮಾಡುವುದಿಲ್ಲ.
ಜಂಟಿ ಹೆಸರುಗಳಲ್ಲಿ ಪಾಲಿಸಿಯನ್ನು ಖರೀದಿಸಬಹುದೇ?
ಹೌದು, ನೀವು ಜಂಟಿ ಹೆಸರುಗಳಲ್ಲಿ ಎರೆಕ್ಷನ್ ಆಲ್ ರಿಸ್ಕ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬಹುದು.
ಎಒಜಿ ಅಪಾಯಗಳು ಏನನ್ನು ಸೂಚಿಸುತ್ತವೆ?
ಎಒಜಿ 'ಆಕ್ಟ್ ಆಫ್ ಗಾಡ್' ಅನ್ನು ಉಲ್ಲೇಖಿಸುತ್ತದೆ. ಮಾನವರ ನಿಯಂತ್ರಣಕ್ಕೆ ಮೀರಿದ ಯಾವುದೇ ನೈಸರ್ಗಿಕ ವಿಕೋಪವನ್ನು ಎಒಜಿ ಅಪಾಯಗಳ ಅಡಿಯಲ್ಲಿ ಸೇರಿಸಬಹುದು. ಇವುಗಳಲ್ಲಿ ಕೆಲವು ಎಂದರೆ ಭೂಕಂಪಗಳು, ಪ್ರವಾಹಗಳು, ಭೂಕುಸಿತಗಳು, ಬಿರುಗಾಳಿಗಳು, ಸುನಾಮಿಗಳು ಇತ್ಯಾದಿ.