ಡೈರೆಕ್ಟರ್ಸ್ ಮತ್ತು ಆಫೀಸರ್ಸ್ (ಡಿ ಆಂಡ್ ಓ) ಲಯಬಿಲಿಟಿ ಇನ್ಶೂರೆನ್ಸ್ ಎಂದರೇನು?
ಡೈರೆಕ್ಟರ್ಸ್ ಮತ್ತು ಆಫೀಸರ್ಸ್ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿ ಬಿಸಿನೆಸ್‌ನ ಡೈರೆಕ್ಟರ್ಸ್ ಅಥವಾ ಆಫೀಸರ್ಸ್ ಉದ್ಯೋಗಗಳ ಮೇಲೆ ಅಥವಾ ಕಂಪನಿಯ ಮೇಲೆ ಮೊಕದ್ದಮೆ ಹೂಡಿದರೆ ಉಂಟಾಗುವ ನಷ್ಟದ ವಿರುದ್ಧ ಕವರೇಜ್ ಒದಗಿಸುತ್ತದೆ. ಅಂಥಾ ಮೊಕದ್ದಮೆಯಿಂದ ಆರ್ಗನೈಸೇಷನ್ ಭರಿಸುವ ಕಾನೂನು ಶುಲ್ಕ ಮತ್ತು ವೆಚ್ಚವನ್ನು ಪಾಲಿಸಿ ಕವರ್ ಮಾಡುತ್ತದೆ.
ಕೆಲವು ಕಾನೂನು ಮೊಕದ್ದಮೆಗಳ ನಷ್ಟಗಳನ್ನೂ ಒಳಗೊಂಡಂತೆ, ಎಲ್ಲಾ ರೀತಿಯ ಅನಿರೀಕ್ಷಿತ ಸಂಭನೀಯ ದೊಡ್ಡ ಲಯಬಿಲಿಟಿ ಕ್ಲೈಮ್‌ಗಳ ವಿರುದ್ಧ ಹೆಚ್ಚುವರಿ ಮಟ್ಟದ ಕವರೇಜ್ ಅನ್ನು ಪಾಲಿಸಿಯು ಒದಗಿಸುತ್ತದೆ.
ಡೈರೆಕ್ಟರ್ಸ್ ಮತ್ತು ಆಫೀಸರ್ಸ್ (ಡಿ ಆಂಡ್ ಓ) ಲಯಬಿಲಿಟಿ ಇನ್ಶೂರೆನ್ಸ್ ನಿಮಗೆ ಯಾಕೆ ಅವಶ್ಯ?
ಡೈರೆಕ್ಟರ್ಸ್ ಮತ್ತು ಆಫೀಸರ್ಸ್ (ಡಿ ಆಂಡ್ ಓ) ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಯು ಅಗತ್ಯ ಇರುವುದು
ನಿಮಗೆ ಯಾಕೆ ಪಾಲಿಸಿ ಅವಶ್ಯಕತೆ ಎಂಬುದಕ್ಕೆ ಇಲ್ಲಿ ಕಾರಣಗಳಿವೆ:
- ದಂಡಗಳಿಗೆ ಗುರಿಯಾಗುವಿಕೆಯ ವಿರುದ್ಧ ನೀವು ಮತ್ತು ನಿಮ್ಮ ಬಿಸಿನೆಸ್ ಅನ್ನು ರಕ್ಷಿಸುತ್ತದೆ.
- ತಾರತಮ್ಯ, ಕಿರುಕುಳ ಆರೋಪಗಳು ಅಥವಾ ಯಾವುದೇ ಇತರ ಉದ್ಯೋಗ ಅಭ್ಯಾಸ ಉಲ್ಲಂಘನೆಗಳ ಸಂದರ್ಭದಲ್ಲಿ ಬಿಸಿನೆಸ್ ನಷ್ಟವನ್ನು ಎದುರಿಸುವುದಿಲ್ಲ.
- ನಿಯಂತ್ರಣಗೊಳಿಸುವ ತನಿಖೆಗಳ ವೆಚ್ಚ, ಸಮರ್ಥನೆ ಮತ್ತು ಕ್ಲೈಮ್‌ಗಳನ್ನು ಸೆಟಲ್ ಮಾಡುವುದು, ಜೊತೆಗೆ ಪಾವತಿಸುವ ಯಾವುದೇ ಪರಿಹಾರವನ್ನು ಕವರ್ ಮಾಡುತ್ತದೆ.
- ಕಾರ್ಪೊರೇಟ್ ಆಡಳಿತದ ಅವಶ್ಯಕತೆಗಳು ಮತ್ತು ಇತರ ಕಾನೂನು ಕಾಯಿದೆಗಳನ್ನು ಅನುಸರಿಸುತ್ತಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
- ಕಂಪನಿಯ ನಿರ್ವಹಣೆಯೊಂದಿಗೆ ಬರುವ ಆರ್ಥಿಕ ತೊರೆಯುವಿಕೆ ಮತ್ತು ರಿಸ್ಕ್‌ಗಳ ವಿರುದ್ದ ಇದು ರಕ್ಷಣೆ ಮಾಡುತ್ತದೆ.
ಡೈರೆಕ್ಟರ್ಸ್ ಮತ್ತು ಆಫೀಸರ್ಸ್ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿ ಏನೆಲ್ಲಾ ಕವರ್ ಮಾಡುತ್ತದೆ?
ನೀವು ಡೈರೆಕ್ಟರ್ಸ್ ಮತ್ತು ಆಫೀಸರ್ಸ್ ಲಯಬಿಲಿಟಿ ಇನ್ಶೂರೆನ್ಸ್ ಪಡೆದುಕೊಂಡರೆ, ಈ ಕೆಳಗಿನ ಸಂದರ್ಭಗಳಲ್ಲಿ ನಿಮ್ಮ ಬಿಸಿನೆಸ್ ರಕ್ಷಿಸಲ್ಪಡುತ್ತದೆ....
ಒಂದು ವೇಳೆ ನಿಮ್ಮ ಉದ್ಯೋಗಿ/ಕ್ಲೈಂಟ್/ಥರ್ಡ್-ಪಾರ್ಟಿ ನಿಮ್ಮ ವಿರುದ್ಧ ಕೇಸ್ ಫೈಲ್ ಮಾಡಿದರೆ, ರಕ್ಷಣಾ ವೆಚ್ಚಗಳು, ಕಾನೂನು ಶುಲ್ಕ ಮತ್ತು ವೆಚ್ಚಗಳ ಪಾವತಿಯ ಕಾನೂನು ಲಯಬಲಿಟಿಗಳಿಂದ ನಿಮ್ಮ ಬಿಸಿನೆಸ್ ಅನ್ನು ರಕ್ಷಣೆ ಮಾಡುತ್ತದೆ.
ಒಂದು ವೇಳೆ ನಿಮ್ಮ ಕಂಪನಿಯ ಮಾಜಿ ಅಥವಾ ನಿವೃತ್ತ ಡೈರೆಕ್ಟರ್ಸ್ ಮತ್ತು ಆಫೀಸರ್ಸ್‌ಗಳ ವಿರುದ್ಧ ಕ್ಲೈಮ್ ಮಾಡಲ್ಪಟ್ಟಿದ್ದರೆ, ಅವರ ಅಧಿಕಾರಾವಧಿಯಲ್ಲಿ ಉದ್ಭವಿಸಿದ್ದರೆ, ವೆಚ್ಚಗಳನ್ನು ಕವರ್ ಮಾಡಲು ನಾವು ನೆರವಾಗುತ್ತೇವೆ.
ನಕರಾತ್ಮಕ ಪ್ರಚಾರಗಳಿಂದಾಗುವ ಪರಿಣಾಮಗಳನ್ನು ತಡೆಗಟ್ಟಲು ಸಾರ್ವಜನಿಕ ಸಂಪರ್ಕ ಸಲಹೆಗಾರರ ನೆರವಿನ ಅಗತ್ಯ ನಿಮಗಿದ್ದರೆ, ಆ ವೆಚ್ಚಗಳಿಗೂ ನಾವು ನೆರವಾಗುತ್ತೇವೆ.
ನಮ್ಮೊಂದಿಗೆ ಲಿಖಿತ ಅನುಮತಿ ಪಡೆಯುವ ಮುನ್ನವೇ ಪ್ರಾತಿನಿಧ್ಯ ವೆಚ್ಚಗಳನ್ನು ಅಥವಾ ಕ್ಲೈಮ್ ವೆಚ್ಚಗಳನ್ನು ಭರಿಸಬೇಕಾಗಿ ಬಂದರೆ, ಈ ಅಮೌಂಟ್‌ಗಳಿಗೆ ನಾವು ನಿಮಗೆ ಪೂರ್ವಾವಲೋಕನದ ಅಪ್ರೂವಲ್ ನೀಡುತ್ತೇವೆ.
ನ್ಯಾಯಬಾಹಿರ ಟರ್ಮಿನೇಷನ್, ತಾರತಮ್ಯ ಮತ್ತು ಕೆಲಸದ ಸ್ಥಳದಲ್ಲಿ ಕಿರುಕುಳ ಆರೋಪಗಳಂತಹ ಉದ್ಯೋಗ-ಸಂಬಂಧಿತ ಕ್ಲೈಮ್‌ಗಳಿಂದ ಉಂಟಾಗುವ ಡ್ಯಾಮೇಜ್‌ಗಳು ಮತ್ತು ರಕ್ಷಣಾತ್ಮಕ ವೆಚ್ಚಗಳನ್ನು ಕವರ್ ಮಾಡುತ್ತದೆ. ಈ ಕವರೇಜ್ ಅನ್ನು ಕೆಲವೊಮ್ಮೆ ಎಂಪ್ಲಾಯ್‌ಮೆಂಟ್ ಪ್ರಾಕ್ಟೀಸ್ ಲಯಬಿಲಿಟಿ (ಇಪಿಎಲ್) ಎಂದೂ ಕರೆಯಲಾಗುತ್ತದೆ.
ದುರದೃಷ್ಟಕರ ಸಂದರ್ಭದಲ್ಲಿ ಇನ್ಶೂರ್ಡ್ ವ್ಯಕ್ತಿಯು ಅಪಹರಣದ ಬಲಿಪಶುವಾದಾಗ, ಈ ಪರಿಸ್ಥಿತಿಯಿಂದ ಉಂಟಾಗುವ ವೆಚ್ಚವನ್ನು ನಾವು ನೋಡಿಕೊಳ್ಳುತ್ತೇವೆ.
ಕಡ್ಡಾಯ ವಿಚಾರಣೆ ಹಾಜರಾತಿ ಅಥವಾ ಕ್ಲೈಮ್ ಸಂದರ್ಭದಲ್ಲಿ ಒತ್ತಡ, ಆ್ಯಂಕ್ಸೈಟಿ ಅಥವಾ ಅಂಥದ್ದೆ ಮೆಡಿಕಲ್ ಕಂಡಿಷನ್‌ಗಳಿಗೆ ಇನ್ಶೂರ್ಡ್ ವ್ಯಕ್ತಿಗಳು ಸೈಕ್ರಿಯಾಟ್ರಿಸ್ಟ್ ಅಥವಾ ಸೈಕಾಲಜಿಸ್ಟ್ ಅಥವಾ ಕೌನ್ಸಿಲರ್ ಬಳಿ ತೆಗೆದುಕೊಳ್ಳುವ ಚಿಕಿತ್ಸೆಯ ವೆಚ್ಚಗಳು ಮತ್ತು ಶುಲ್ಕದ ವೆಚ್ಚವನ್ನು ಇದು ಕವರ್ ಮಾಡುತ್ತದೆ.
ನಿಮ್ಮ ವಿರುದ್ಧ ಕ್ಲೈಮ್ ಜರುಗಿಸಿರುವ ಕಂಪನಿಯ ಶೇರ್‌ಹೋಲ್ಡರ್‌ಗೆ ಯಾವುದೇ ಶುಲ್ಕ, ವೆಚ್ಚಗಳು, ಚಾರ್ಜ್‌ಗಳು ಮತ್ತು ಕಾನೂನು ವೆಚ್ಚಗಳನ್ನು ನೀವು ಪಾವತಿಸಬೇಕಾಗಿ ಬಂದಾಗ ನೀವು ಮತ್ತು ನಿಮ್ಮ ಕಂಪನಿಯನ್ನು ನಾವು ಕವರ್ ಮಾಡುತ್ತೇವೆ.
ಒಂದು ವೇಳೆ ಅಂಗಸಂಸ್ಥೆಯು ನಿಮ್ಮ ಕಂಪನಿಯ ಭಾಗವಾಗಿಲ್ಲದೆ ಹೋದರೆ, ನಾವು ಪ್ರಸ್ತುತ ಅಸ್ತಿತ್ವದಲ್ಲಿರುವ ಕವರೇಜ್ ಅನ್ನು ಪಾಲಿಸಿಯನ್ನು ಖರೀದಿಸಿದ ದಿನಾಂಕದಿಂದ ಎಕ್ಸ್‌ಪೈರಿವರೆಗೆ ಮುಂದುವರಿಸುತ್ತೇವೆ.
ಮಾಲಿನ್ಯಕಾರಕಗಳ ನಿಜವಾದ ಅಥವಾ ಆರೋಪಿತ ಡಿಸ್‌ಚಾರ್ಜ್, ಡಿಸ್‌ಪರ್ಸಲ್ ಅಥವಾ ಲೀಕ್‌ಗಳನ್ನು ಸಮರ್ಥಿಸಿಕೊಳ್ಳುವಾಗ ಉಂಟಾಗುವ ಕಾನೂರು ಮತ್ತು ರಕ್ಷಣಾ ವೆಚ್ಚಗಳನ್ನು ಕವರ್ ಮಾಡುತ್ತದೆ.
ಒಂದು ವೇಳೆ ನಿಮ್ಮ ಕಂಪನಿಯು ಹೊಸ ಅಂಗಸಂಸ್ಥೆಯನ್ನು ಸ್ಥಾಪಿಸಿದರೆ ಅಥವಾ ಸ್ವಾಧೀನಪಡಿಸಿಕೊಂಡರೆ, ನಿಗದಿತ ನಿಯಮಗಳು ಮತ್ತು ಷರತ್ತುಗಳಿಗೆ ಅನುಗುಣವಾಗಿ ಅವುಗಳ ಸ್ಥಾಪನೆ ಅಥವಾ ಸ್ವಾಧೀನಪಡಿಸಿದ ದಿನಾಂಕದಿಂದ ಅವುಗಳನ್ನೂ ಆ ಪಾಲಿಸಿ ಅಡಿಯಲ್ಲಿ ಕವರ್ ಮಾಡಲಾಗುತ್ತದೆ.
ಏನೆಲ್ಲಾ ಕವರ್ ಆಗುವುದಿಲ್ಲ?
ಡಿಜಿಟ್ ಪಾರದರ್ಶಕತೆಯಲ್ಲಿ ನಂಬಿಕೆ ಇಟ್ಟಿರುವುದರಿಂದ, ಈ ಕೆಳಗಿನ ಕೆಲವು ಸಂದರ್ಭಗಳಲ್ಲಿ ನೀವು ಕವರ್ ಆಗುವುದಿಲ್ಲ.
ದಂಡಗಳು ಮತ್ತು ಪೆನಲ್ಟಿ ಭರಿಸುವಂತೆ ಮಾಡುವ ಯಾವುದೇ ಕ್ರಿಮಿನಲ್, ಮೋಸ, ಅಪ್ರಾಮಾಣಿಕ ಅಥವಾ ದುರುದ್ದೇಶಪೂರ್ವಕ ಕೃತ್ಯಗಳು.
ಕಾಂಟ್ರಾಕ್ಟ್, ಕಾನೂನು ಅಥವಾ ರೆಗ್ಯುಲೇಷನ್‌ಗಳನ್ನು ಉಲ್ಲಂಘಿಸುವ ಉದ್ದೇಶಪೂರ್ವಕ ಕ್ರಿಯೆಗಳು.
ಪಾಲಿಸಿ ಆರಂಭವಾಗುವ ಮೊದಲೇ ಅಸ್ತಿತ್ವದಲ್ಲಿದ್ದ ತಿಳಿದಿರುವ ತಪ್ಪು ಕ್ರಿಯೆಗಳು.
ಯುದ್ಧ, ಭಯೋತ್ಪಾದನೆ ಮತ್ತು ನ್ಯೂಕ್ಲಿಯರ್ ಅಪಾಯಗಳಿಂದ ಉಂಟಾಗುವ ನಷ್ಟಗಳು.
ಪೇಟೆಂಟ್‌ಗಳ ಅಥವಾ ಟ್ರೇಡ್ ಸೀಕ್ರೆಟ್‌ಗಳ ಯಾವುದೇ ಉಲ್ಲಂಘನೆ ಅಥವಾ ದುರುಪಯೋಗ.
ಕೆಲಸವನ್ನು ನಿರ್ವಹಿಸುತ್ತಿರುವಾಗ ಯಾವುದೇ ಉದ್ಯೋಗಿಗೆ ಉಂಟಾಗುವ ದೈಹಿಕ ಗಾಯ ಅಥವಾ ಅಂಗವೈಕಲ್ಯದ ಸಂದರ್ಭದಲ್ಲಿನ ಉದ್ಯೋಗದಾತರ ಲಯಬಿಲಿಟಿ.
ಕೆಲಸವನ್ನು ನಿರ್ವಹಿಸುತ್ತಿರುವಾಗ ಯಾವುದೇ ಉದ್ಯೋಗಿಗೆ ಉಂಟಾಗುವ ದೈಹಿಕ ಗಾಯ ಅಥವಾ ಅಂಗವೈಕಲ್ಯದ ಸಂದರ್ಭದಲ್ಲಿನ ಉದ್ಯೋಗದಾತರ ಲಯಬಿಲಿಟಿ.
ಸ್ವಚ್ಛತೆ, ಕಂಟೈನ್‌ಮೆಂಟ್ ಇತ್ಯಾದಿ ವೆಚ್ಚಗಳು ಸೇರಿದಂತೆ ಮಾಲಿನ್ಯ ಅಥವಾ ಸೋರುವಿಕೆ ಕಾರಣಕ್ಕೆ ದಂಡಗಳು, ಪೆನಲ್ಟಿಗಳು ಮತ್ತು ಕ್ಲೈಮ್‌ಗಳು.
ಡೈರೆಕ್ಟರ್ಸ್ ಮತ್ತು ಆಫೀಸರ್ಸ್ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಗೆ ಪರಿಣಾಮ ಬೀರುವ ಅಂಶಗಳು ಯಾವುವು?
ಡೈರೆಕ್ಟರ್ಸ್ ಮತ್ತು ಆಫೀಸರ್ಸ್ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಗೆ ಪಾವತಿಸಬೇಕಾದ ಪ್ರೀಮಿಯಂ ಆಧರಿಸುವ ಹಲವು ಅಂಶಗಳೆಂದರೆ:
- ಇಂಡಸ್ಟ್ರಿ ಮತ್ತು ಬಿಸಿನೆಸ್‌ನ ಸ್ವರೂಪ ಮತ್ತು ವಿಧಾನ
- ಕಂಪನಿಯ ಗಾತ್ರ ಮತ್ತು ವಯಸ್ಸು
- ಉದ್ಯೋಗಿಗಳ ಒಟ್ಟು ಸಂಖ್ಯೆ
- ಕಂಪನಿಯಲ್ಲಿ ಕೆಲಸ ಮಾಡುವ ಮ್ಯಾನೇಜರ್‌ಗಳು, ಡೈರೆಕ್ಟರ್‌ಗಳು ಮತ್ತು ಆಫೀಸರ್‌ಗಳ ಸಂಖ್ಯೆ
- ಶೇರ್‌ಹೋಲ್ಡರ್‌ಗಳ ಸಂಖ್ಯೆ
- ಕಂಪನಿಯ ಆಸ್ತಿಗಳ ಸಂಖ್ಯೆ
- ಆರ್ಥಿಕ ಸ್ಥಿರತೆ
- ನೀವು ಆರಿಸಿಕೊಳ್ಳುವ ಲಯಬಿಲಿಟಿ ಮಿತಿ
- ಟ್ರೇಡಿಂಗ್ ಮಾದರಿಗಳು
- ಅಂದಾಜು ಆದಾಯ ಮತ್ತು/ಅಥವಾ ಲಾಭ
- ಹಿಂದೆ ಮಾಡಿದ ಕ್ಲೈಮ್‌ಗಳ ವಿವರಗಳು
- ಲೊಕೇಶನ್
ಯಾವ ಬಿಸಿನೆಸ್‌ಗೆ ಡೈರೆಕ್ಟರ್ಸ್ ಮತ್ತು ಆಫೀಸರ್ಸ್ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿ ಅವಶ್ಯವಿದೆ?
ಮ್ಯಾನೇಜರ್‌ಗಳು, ಡೈರೆಕ್ಟರ್‌ಗಳು ಮತ್ತು ಆಫೀಸರ್‌ಗಳ ವಿರುದ್ಧ ಇಂಟರ್ನಲ್ ಅಥವಾ ಎಕ್ಸಟರ್ನಲ್ ಕ್ಲೈಮ್‌ಗಳಿಂದ ನಿಮ್ಮ ಬಿಸಿನೆಸ್‌ಗೆ ರಕ್ಷಣೆ ಅವಶ್ಯವಿದೆ ಎಂಬ ಭಾವನೆ ನಿಮ್ಮಲ್ಲಿದ್ದರೆ ಡಿ ಆಂಡ್ ಓ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿ ಉಪಯೋಗ ಆಗಬಹುದು. ಸಂಭಾವ್ಯ ದೊಡ್ಡ ಲಯಬಿಲಿಟಿ ಕ್ಲೈಮ್‌ಗಳ ವಿರುದ್ಧ ಈ ಪಾಲಿಸಿ ಒದಗಿಬರುತ್ತದೆ. ಈ ಕೆಳಗೆ ನಮೂದಿಸುವ ಕಂಪನಿಗಳ ಪ್ರಕಾರಗಳು ಅವರಿಗಾಗಿ ಡೈರೆಕ್ಟರ್ಸ್ ಮತ್ತು ಆಫೀಸರ್ಸ್ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿ ಪಡೆಯಬಹುದು:
ಯಾವುದೇ ಪ್ರಕಾರದ ಸ್ಟಾರ್ಟ್-ಅಪ್‌ಗಳೇ ಇರಲಿ, ಐಟಿ ಕಂಪನಿಗಳು ಅಥವಾ ಕನ್ಸಲ್ಟಿಂಗ್ ಫರ್ಮ್‌ಗಳು ಅವರಿಗಾಗಿ ಪಾಲಿಸಿ ಪಡೆಯಬಹುದು.
ಒಟ್ಟು 500 ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳೂ ಅವರಿಗಾಗಿ ಡಿ ಆಂಡ್ ಓ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿ ಪಡೆಯಬಹುದು.
ತಮ್ಮ ಪೇರೋಲ್‌ನಲ್ಲಿ 1000ಕ್ಕೂ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳೂ ಇನ್ಶೂರೆನ್ಸ್ ಪಾಲಿಸಿ ಖರೀದಿಸಬಹುದು.
ಸರಿಯಾದ ಡೈರೆಕ್ಟರ್ಸ್ ಮತ್ತು ಆಫೀಸರ್ಸ್ ಲಯಬಿಲಿಟಿ ಇನ್ಶೂರೆನ್ಸ್ ಆರಿಸಿಕೊಳ್ಳುವುದು ಹೇಗೆ?
ಡೈರೆಕ್ಟರ್ಸ್ ಮತ್ತು ಆಫೀಸರ್ಸ್ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿ ನೋಡುವಾಗ ಅವಶ್ಯ ಇರುವ ಸಂಪೂರ್ಣ ಕವರೇಜ್ ಅನ್ನು ಪಾಲಿಸಿ ಹೊಂದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ರಕ್ಷಣೆ ವೆಚ್ಚಗಳು, ಸೆಟಲ್‌ಮೆಂಟ್‌ಗಳು, ಜಡ್ಜ್‌ಮೆಂಟ್‌ಗಳು ಇತ್ಯಾದಿ ಅಂಶಗಳನ್ನು ನೀವು ಗಮನಿಸುವ ಅವಶ್ಯಕತೆ ಇದೆ.
ಲಯಬಿಲಿಟಿಯ ಮಿತಿಯನ್ನು ಕಸ್ಟಮೈಸ್ ಮಾಡುವ ಅವಕಾಶ ಕೊಡುವ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ನಿಮ್ಮ ಬಿಸಿನೆಸ್‌ನ ಸ್ವರೂಪ ಮತ್ತು ಗಾತ್ರಕ್ಕೆ ಅನುಗುಣವಾಗಿ ಸೂಕ್ತವಾಗಿ ಅಮೌಂಟ್ ಅನ್ನು ಆಯ್ಕೆಮಾಡಲು ಕಸ್ಟಮೈಸೇಷನ್ ಅನುವು ಮಾಡಿಕೊಡುತ್ತದೆ.
ಸರಿಯಾದ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಇನ್ಶೂರರ್‌ನ ಕ್ಲೈಮ್ ಸೆಟಲ್‌ಮೆಂಟ್ ಪ್ರೊಸೆಸ್ ಅನ್ನು ಗಮನಿಸಿ. ತೊಂದರೆ-ಮುಕ್ತ ಕ್ಲೈಮ್ ಸೆಟಲ್‌ಮೆಂಟ್ ಪಾಲಿಸಿಯನ್ನು ಹೊಂದುವುದರಿಂದ ನಿಮ್ಮ ಕ್ಲೈಮ್‌ಗಳು ಸುಲಭವಾಗಿ ಸೆಟಲ್ ಮಾಡುವ ಖಚಿತತೆ ಸಿಗುತ್ತದೆ.
ಅವಶ್ಯವಾಗಿ ಮಾಡಬೇಕಾದ ಇನ್ನೊಂದು ವಿಚಾರವೆಂದರೆ ಇತರ ಇನ್ಶೂರೆನ್ಸ್ ಕಂಪನಿಗಳು ಒದಗಿಸುವ ವಿವಿಧ ಪಾಲಿಸಿಗಳನ್ನು ಹೋಲಿಸುವುದು. ಇದರಿಂದ ನೀವು ನಿಮಗಾಗಿ ಗರಿಷ್ಠ ಪ್ರಯೋಜನಗಳೊಂದಿಗೆ ಸೂಕ್ತವಾದ ಕವರೇಜ್ ಅನ್ನು ಒದಗಿಸುವ ಪಾಲಿಸಿ ಪಡೆಯಲು ಸಹಾಯವಾಗುತ್ತದೆ.
ಬಹುತೇಕ ಇನ್ಶೂರರ್‌ಗಳು ಯಾವುದೇ ಸಂಭವನೀಯ ಘಟನೆಗಳಿಗೆ ಕವರೇಜ್ ಒದಗಿಸುತ್ತಾರೆ, ಹಾಗಾಗಿ ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸುವ ಇನ್ಶೂರರ್‌ಗಳನ್ನು ನೋಡಿ. ಇದು ಸುಲಭ ಬಳಕೆಯ ಆ್ಯಪ್‌ಗಳು, ಹಗಲಿರುಳು ಕಸ್ಟಮರ್ ಅಸಿಸ್ಟೆನ್ಸ್ ಇತ್ಯಾದಿ ಯಾವುದೇ ರೂಪದಲ್ಲಿ ಇರಬಹುದು.
ಡೈರೆಕ್ಟರ್ಸ್ ಮತ್ತು ಆಫೀಸರ್ಸ್ (ಡಿ ಆಂಡ್ ಓ) ಲಯಬಿಲಿಟಿ ಇನ್ಶೂರೆನ್ಸ್ ನಿಯಮಗಳನ್ನು ನಿಮಗಾಗಿ ಸರಳೀಕರಿಸಲಾಗಿದೆ
- ಡೈರೆಕ್ಟರ್ - ಮ್ಯಾನೇಜ್‌ಮೆಂಟ್ ಬೋರ್ಡ್‌ನಲ್ಲಿರುವ ಇತರ ಸದಸ್ಯರನ್ನು ಒಳಗೊಂಡು ಸಂಸ್ಥೆಯ ವ್ಯವಸ್ಥಾಪಕ ಸ್ಥಾನದಲ್ಲಿ ಇರುವ ವ್ಯಕ್ತಿ.
- ದೈಹಿಕ ಗಾಯ - ಮರಣ, ಅವಮಾನ, ಮಾನಸಿಕ ಹಿಂಸೆ, ಮಾನಸಿಕ ಗಾಯ ಅಥವಾ ಆಘಾತವನ್ನು ಉಂಟುಮಾಡುವ ಯಾವುದೇ ರೀತಿಯ ದೈಹಿಕ ಗಾಯ, ಅನಾರೋಗ್ಯ ಅಥವಾ ಡಿಸೀಸ್ ಅನ್ನು ಈ ಪದ ಸೂಚಿಸುತ್ತದೆ.
- ಎಂಪ್ಲಾಯ್‌ಮೆಂಟ್ ರಾಂಗ್‌ಫುಲ್ ಆ್ಯಕ್ಟ್ - ತಪ್ಪಾದ ವಜಾಗೊಳಿಸುವಿಕೆ, ನ್ಯಾಚುರಲ್ ಜಸ್ಟಿಸ್ ನಿರಾಕರಣೆ, ಉದ್ಯೋಗ ಒಪ್ಪಂದದ ಉಲ್ಲಂಘನೆ, ಲೈಂಗಿಕ ಕಿರುಕುಳ ಇತ್ಯಾದಿ ಕಾರಣಗಳಿಂದ ಉದ್ಯೋಗದಾತರಿಗೆ ಸಂಬಂಧಿಸಿದಂತೆ ಇನ್ಶೂರ್ಡ್ ಮಾಡಿದ ಯಾವುದೇ ತಪ್ಪು ಕೃತ್ಯ.
- ಥರ್ಡ್ ಪಾರ್ಟಿ - ಒಂದು ಘಟನೆ ವಿಶೇಷವಾಗಿ ವಿವಾದದಂತಹ ಸಂದರ್ಭದಲ್ಲಿ ಪ್ರಾಥಮಿಕವಾಗಿ ಒಳಗೊಂಡಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ, ಎರಡು ಪಾರ್ಟಿಗಳನ್ನು ಈ ಪದ ಸೂಚಿಸುತ್ತದೆ.
- ಲಯಬಿಲಿಟಿಯ ಮಿತಿ - ಲಯಬಿಲಿಟಿಯ ಮಿತಿ ಎಂದರೆ ಪಾಲಿಸಿಯ ಅಡಿಯಲ್ಲಿ ಇನ್ಶೂರೆನ್ಸ್ ಕಂಪನಿ ಹೊಣೆಗಾರಿಕೆ ಹೊಂದಿರುವ ಗರಿಷ್ಠ ಅಮೌಂಟ್.
- ಡಿಡಕ್ಟಿಬಲ್ - ಇನ್ಶೂರ್ಡ್ ನಷ್ಟಕ್ಕೆ ನೀವು ಪಾವತಿಸಬೇಕಾದ ಜವಾಬ್ದಾರಿ ಹೊಂದಿರುವ ಹಣದ ಅಮೌಂಟ್.
- ಪ್ರಾಪರ್ಟಿ ಡ್ಯಾಮೇಜ್ - ಭೌತಿಕವಾಗಿ ಡ್ಯಾಮೇಜ್ ಆಗದಿರುವ ವಾಸ್ತವಿಕ ಪ್ರಾಪರ್ಟಿಯ ಬಳಕೆಯ ನಷ್ಟದ ಜೊತೆಗೆ ವಾಸ್ತವಿಕ ಪ್ರಾಪರ್ಟಿಯ ಬಳಕೆಯ ನಷ್ಟಕ್ಕೆ ಕಾರಣವಾಗುವ ಭೌತಿಕ ಗಾಯವನ್ನು ಇದು ಸೂಚಿಸುತ್ತದೆ.
- ವಿಚಾರಣೆ - ಕಂಪನಿಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಡೆಸುವ ತನಿಖೆಯನ್ನು ವಿಚಾರಣೆ ಎಂದು ಉಲ್ಲೇಖಿಸಬಹುದಾಗಿದೆ.
- ಮಾಲಿನ್ಯಕಾರಕ - ಇನ್ಶೂರೆನ್ಸ್ ಪಾಲಿಸಿಯಲ್ಲಿ ಘನ, ದ್ರವ, ಅನಿಲ ಹೀಗೆ ಯಾವುದೇ ರೂಪದಲ್ಲಿರುವ ಯಾವುದೇ ಇರಿಟೆಂಟ್ ಅಥವಾ ಕಂಟೈನ್‌ಮೆಂಟ್‌ಗಳೇ ಮಾಲಿನ್ಯಕಾರಕ.
ಭಾರತದಲ್ಲಿ ಡಿ ಆಂಡ್ ಓ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು
ಸಣ್ಣ ಬಿಸಿನೆಸ್‌ಗಳಿಗೆ ಡಿ ಆಂಡ್ ಓ ಇನ್ಶೂರೆನ್ಸ್ ಲಯಬಿಲಿಟಿ ಪಾಲಿಸಿ ಪಡೆಯುವುದು ಅವಶ್ಯವೇ?
ಅತೃಪ್ತ ವ್ಯಕ್ತಿಗಳು, ಶೇರ್‌ಹೋಲ್ಡರ್‌ಗಳು ಕಾನೂನು ಮೊಕದ್ದಮೆ ಹೂಡಬಹುದಾದ್ದರಿಂದ ಬಿಸಿನೆಸ್‌ಗಳ ಗಾತ್ರವನ್ನು ಪರಿಗಣಿಸದೆಯೇ ಡಿ ಆಂಡ್ ಓ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿ ಪಡೆಯುವುದು ಉತ್ತಮ. ವಿವಿಧ ಡೊಮೇನ್‌ಗಳ ಮೂಲಕ ಜನರ ಸೇವೆ ಮಾಡುವ ಕಂಪನಿಗಳು, ಯಾವು ಸಂಭವನೀಯ ಘಟನೆಗಳ ಸಂದರ್ಭದಲ್ಲಿ ಬೆನ್ನಿಗೆ ನಿಲ್ಲುವ ಪಾಲಿಸಿ ಹೊಂದುವುದು ಆದ್ಯತೆಯಾಗಿರಬೇಕು.
ಡೈರೆಕ್ಟರ್ಸ್ ಮತ್ತು ಆಫೀಸರ್ಸ್ ಇನ್ಶೂರೆನ್ಸ್ ಪಾಲಿಸಿ ಖರೀದಿಸುವ ಮೊದಲು ನಾನು ಏನೆಲ್ಲಾ ಪರಿಗಣಿಸಬೇಕು?
ಡಿ ಆಂಡ್ ಓ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿ ಖರೀದಿಸುವ ಮೊದಲು ಏನೆಲ್ಲಾ ಪರಿಗಣಿಸಬೇಕು ಎಂಬುದು ನಿಮ್ಮ ಸಂಸ್ಥೆಗಳ ಅವಶ್ಯಕತೆಗಳನ್ನು ಅವಲಂಬಿಸಿರುತ್ತದೆ. ಆದಾಗ್ಯೂ, ಮ್ಯಾನೇಜರ್‌ಗಳು ಮತ್ತು ಕಂಪನಿ ಪೂರ್ತಿಯಾಗಿ ಒಳಗೊಂಡು ನಿಮ್ಮ ಕಂಪನಿಯ ವಿವಿಧ ಭಾಗಗಳನ್ನು ಪಾಲಿಸಿ ಕವರ್ ಮಾಡುತ್ತದೆಯೇ ಎಂಬುದು ನೀವು ಪರಿಗಣಿಸುವುದು ಅವಶ್ಯವಿರುವ ಒಂದು ಪ್ರಮುಖ ವಿಚಾರ.
ಡಿ ಆಂಡ್ ಓ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಯು ಪ್ರೊಫೆಷನಲ್ ಲಯಬಿಲಿಟಿ ಇನ್ಶೂರೆನ್ಸ್‌ನಂತೆಯೇ ಇದೆಯೇ?
ಇಲ್ಲ, ಡೈರೆಕ್ಟರ್ಸ್ ಮತ್ತು ಆಫೀಸರ್ಸ್ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿ ಮತ್ತು ಪ್ರೊಫೆಷನಲ್ ಲಯಬಿಲಿಟಿ ಇನ್ಶೂರೆನ್ಸ್ ಒಂದೇ ಥರ ಇಲ್ಲ. ಪ್ರೊಫೆಷನಲ್ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಯಂತೆ ಇದು ಪ್ರೊಫೆಷನಲ್ ಸರ್ವೀಸ್‌ಗಳನ್ನು ಒದಗಿಸುವ ಬಿಸಿನೆಸ್‌ಗಳನ್ನು ರಕ್ಷಣೆ ಮಾಡುವುದಿಲ್ಲ. ಇದು ವ್ಯಾಜ್ಯದಲ್ಲಿ ಸಂಸ್ಥೆಯ ಡೈರೆಕ್ಟರ್‌ಗಳು ಮತ್ತು ಆಫೀಸರ್‌ಗಳ ಹೆಸರು ಬಂದಾಗ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.
ಡೈರೆಕ್ಟರ್ಸ್ ಮತ್ತು ಆಫೀಸರ್ಸ್ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಎಷ್ಟು ಪ್ರೀಮಿಯಂ ಪಾವತಿಸಬೇಕು ಎಂಬುದಕ್ಕೆ ನಿಖರವಾದ ಉತ್ತರ ಇದೆಯೇ?
ಅದಕ್ಕೆ ನಿಖರವಾದ ಉತ್ತರ ಇಲ್ಲ, ನೀವು ಆಯ್ಕೆ ಮಾಡಿಕೊಳ್ಳುವ ಕವರೇಜ್ ಅವಲಂಬಿಸಿ ಪ್ರೀಮಿಯಂ ಬದಲಾಗುತ್ತದೆ. ಇದು ಅವುಗಳಿಗೆ ಸಂಬಂಧಿಸಿದ ಅವಶ್ಯಕತೆಗಳು ಮತ್ತು ರಿಸ್ಕ್‌ಗಳು ಇತ್ಯಾದಿ ಅಂಶಗಳನ್ನು ಗಮನಿಸುತ್ತದೆ.
ಸಂಸ್ಥೆಯ ಬೋರ್ಡ್ ಸದಸ್ಯರ ದಂಡ ವಿಧಿಸುವ ಡ್ಯಾಮೇಜ್‌ಗಳನ್ನು ಡಿ ಆಂಡ್ ಓ ಲಯಬಿಲಿಟಿ ಪಾಲಿಸಿ ಕವರ್ ಮಾಡುತ್ತದೆಯೇ?
ಪಾಲಿಸಿಯು ಬೋರ್ಡ್ ಸದಸ್ಯರನ್ನು ಕವರ್ ಮಾಡುತ್ತದೆಯೇ ಹೊರತು, ಅವರಿಗೆ ವಿಧಿಸಲಾಗುವ ದಂಡ ವಿಧಿಸಬಲ್ಲ ಡ್ಯಾಮೇಜ್‌ಗಳನ್ನು ಕವರ್ ಮಾಡುವುದಿಲ್ಲ. ಕಾನೂನು ಪ್ರಕಾರ ಇನ್ಶೂರ್ ಆಗುವಂತಹ ದಂಡಗಳನ್ನು ಮತ್ತು ಪೆನಲ್ಟಿಗಳನ್ನು ಮಾತ್ರ ಡಿ ಆಂಡ್ ಓ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿ ಕವರ್ ಮಾಡುತ್ತದೆ.