Thank you for sharing your details with us!
ಡೈರೆಕ್ಟರ್ಸ್ ಮತ್ತು ಆಫೀಸರ್ಸ್ (ಡಿ ಆಂಡ್ ಓ) ಲಯಬಿಲಿಟಿ ಇನ್ಶೂರೆನ್ಸ್ ಎಂದರೇನು?
ಡೈರೆಕ್ಟರ್ಸ್ ಮತ್ತು ಆಫೀಸರ್ಸ್ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿ ಬಿಸಿನೆಸ್ನ ಡೈರೆಕ್ಟರ್ಸ್ ಅಥವಾ ಆಫೀಸರ್ಸ್ ಉದ್ಯೋಗಗಳ ಮೇಲೆ ಅಥವಾ ಕಂಪನಿಯ ಮೇಲೆ ಮೊಕದ್ದಮೆ ಹೂಡಿದರೆ ಉಂಟಾಗುವ ನಷ್ಟದ ವಿರುದ್ಧ ಕವರೇಜ್ ಒದಗಿಸುತ್ತದೆ. ಅಂಥಾ ಮೊಕದ್ದಮೆಯಿಂದ ಆರ್ಗನೈಸೇಷನ್ ಭರಿಸುವ ಕಾನೂನು ಶುಲ್ಕ ಮತ್ತು ವೆಚ್ಚವನ್ನು ಪಾಲಿಸಿ ಕವರ್ ಮಾಡುತ್ತದೆ.
ಕೆಲವು ಕಾನೂನು ಮೊಕದ್ದಮೆಗಳ ನಷ್ಟಗಳನ್ನೂ ಒಳಗೊಂಡಂತೆ, ಎಲ್ಲಾ ರೀತಿಯ ಅನಿರೀಕ್ಷಿತ ಸಂಭನೀಯ ದೊಡ್ಡ ಲಯಬಿಲಿಟಿ ಕ್ಲೈಮ್ಗಳ ವಿರುದ್ಧ ಹೆಚ್ಚುವರಿ ಮಟ್ಟದ ಕವರೇಜ್ ಅನ್ನು ಪಾಲಿಸಿಯು ಒದಗಿಸುತ್ತದೆ.
ಡೈರೆಕ್ಟರ್ಸ್ ಮತ್ತು ಆಫೀಸರ್ಸ್ (ಡಿ ಆಂಡ್ ಓ) ಲಯಬಿಲಿಟಿ ಇನ್ಶೂರೆನ್ಸ್ ನಿಮಗೆ ಯಾಕೆ ಅವಶ್ಯ?
ಡೈರೆಕ್ಟರ್ಸ್ ಮತ್ತು ಆಫೀಸರ್ಸ್ (ಡಿ ಆಂಡ್ ಓ) ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಯು ಅಗತ್ಯ ಇರುವುದು
ನಿಮಗೆ ಯಾಕೆ ಪಾಲಿಸಿ ಅವಶ್ಯಕತೆ ಎಂಬುದಕ್ಕೆ ಇಲ್ಲಿ ಕಾರಣಗಳಿವೆ:
- ದಂಡಗಳಿಗೆ ಗುರಿಯಾಗುವಿಕೆಯ ವಿರುದ್ಧ ನೀವು ಮತ್ತು ನಿಮ್ಮ ಬಿಸಿನೆಸ್ ಅನ್ನು ರಕ್ಷಿಸುತ್ತದೆ.
- ತಾರತಮ್ಯ, ಕಿರುಕುಳ ಆರೋಪಗಳು ಅಥವಾ ಯಾವುದೇ ಇತರ ಉದ್ಯೋಗ ಅಭ್ಯಾಸ ಉಲ್ಲಂಘನೆಗಳ ಸಂದರ್ಭದಲ್ಲಿ ಬಿಸಿನೆಸ್ ನಷ್ಟವನ್ನು ಎದುರಿಸುವುದಿಲ್ಲ.
- ನಿಯಂತ್ರಣಗೊಳಿಸುವ ತನಿಖೆಗಳ ವೆಚ್ಚ, ಸಮರ್ಥನೆ ಮತ್ತು ಕ್ಲೈಮ್ಗಳನ್ನು ಸೆಟಲ್ ಮಾಡುವುದು, ಜೊತೆಗೆ ಪಾವತಿಸುವ ಯಾವುದೇ ಪರಿಹಾರವನ್ನು ಕವರ್ ಮಾಡುತ್ತದೆ.
- ಕಾರ್ಪೊರೇಟ್ ಆಡಳಿತದ ಅವಶ್ಯಕತೆಗಳು ಮತ್ತು ಇತರ ಕಾನೂನು ಕಾಯಿದೆಗಳನ್ನು ಅನುಸರಿಸುತ್ತಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
- ಕಂಪನಿಯ ನಿರ್ವಹಣೆಯೊಂದಿಗೆ ಬರುವ ಆರ್ಥಿಕ ತೊರೆಯುವಿಕೆ ಮತ್ತು ರಿಸ್ಕ್ಗಳ ವಿರುದ್ದ ಇದು ರಕ್ಷಣೆ ಮಾಡುತ್ತದೆ.
ಡೈರೆಕ್ಟರ್ಸ್ ಮತ್ತು ಆಫೀಸರ್ಸ್ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿ ಏನೆಲ್ಲಾ ಕವರ್ ಮಾಡುತ್ತದೆ?
ನೀವು ಡೈರೆಕ್ಟರ್ಸ್ ಮತ್ತು ಆಫೀಸರ್ಸ್ ಲಯಬಿಲಿಟಿ ಇನ್ಶೂರೆನ್ಸ್ ಪಡೆದುಕೊಂಡರೆ, ಈ ಕೆಳಗಿನ ಸಂದರ್ಭಗಳಲ್ಲಿ ನಿಮ್ಮ ಬಿಸಿನೆಸ್ ರಕ್ಷಿಸಲ್ಪಡುತ್ತದೆ....
ಏನೆಲ್ಲಾ ಕವರ್ ಆಗುವುದಿಲ್ಲ?
ಡಿಜಿಟ್ ಪಾರದರ್ಶಕತೆಯಲ್ಲಿ ನಂಬಿಕೆ ಇಟ್ಟಿರುವುದರಿಂದ, ಈ ಕೆಳಗಿನ ಕೆಲವು ಸಂದರ್ಭಗಳಲ್ಲಿ ನೀವು ಕವರ್ ಆಗುವುದಿಲ್ಲ.
ಡೈರೆಕ್ಟರ್ಸ್ ಮತ್ತು ಆಫೀಸರ್ಸ್ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಗೆ ಪರಿಣಾಮ ಬೀರುವ ಅಂಶಗಳು ಯಾವುವು?
ಡೈರೆಕ್ಟರ್ಸ್ ಮತ್ತು ಆಫೀಸರ್ಸ್ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಗೆ ಪಾವತಿಸಬೇಕಾದ ಪ್ರೀಮಿಯಂ ಆಧರಿಸುವ ಹಲವು ಅಂಶಗಳೆಂದರೆ:
- ಇಂಡಸ್ಟ್ರಿ ಮತ್ತು ಬಿಸಿನೆಸ್ನ ಸ್ವರೂಪ ಮತ್ತು ವಿಧಾನ
- ಕಂಪನಿಯ ಗಾತ್ರ ಮತ್ತು ವಯಸ್ಸು
- ಉದ್ಯೋಗಿಗಳ ಒಟ್ಟು ಸಂಖ್ಯೆ
- ಕಂಪನಿಯಲ್ಲಿ ಕೆಲಸ ಮಾಡುವ ಮ್ಯಾನೇಜರ್ಗಳು, ಡೈರೆಕ್ಟರ್ಗಳು ಮತ್ತು ಆಫೀಸರ್ಗಳ ಸಂಖ್ಯೆ
- ಶೇರ್ಹೋಲ್ಡರ್ಗಳ ಸಂಖ್ಯೆ
- ಕಂಪನಿಯ ಆಸ್ತಿಗಳ ಸಂಖ್ಯೆ
- ಆರ್ಥಿಕ ಸ್ಥಿರತೆ
- ನೀವು ಆರಿಸಿಕೊಳ್ಳುವ ಲಯಬಿಲಿಟಿ ಮಿತಿ
- ಟ್ರೇಡಿಂಗ್ ಮಾದರಿಗಳು
- ಅಂದಾಜು ಆದಾಯ ಮತ್ತು/ಅಥವಾ ಲಾಭ
- ಹಿಂದೆ ಮಾಡಿದ ಕ್ಲೈಮ್ಗಳ ವಿವರಗಳು
- ಲೊಕೇಶನ್
ಯಾವ ಬಿಸಿನೆಸ್ಗೆ ಡೈರೆಕ್ಟರ್ಸ್ ಮತ್ತು ಆಫೀಸರ್ಸ್ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿ ಅವಶ್ಯವಿದೆ?
ಮ್ಯಾನೇಜರ್ಗಳು, ಡೈರೆಕ್ಟರ್ಗಳು ಮತ್ತು ಆಫೀಸರ್ಗಳ ವಿರುದ್ಧ ಇಂಟರ್ನಲ್ ಅಥವಾ ಎಕ್ಸಟರ್ನಲ್ ಕ್ಲೈಮ್ಗಳಿಂದ ನಿಮ್ಮ ಬಿಸಿನೆಸ್ಗೆ ರಕ್ಷಣೆ ಅವಶ್ಯವಿದೆ ಎಂಬ ಭಾವನೆ ನಿಮ್ಮಲ್ಲಿದ್ದರೆ ಡಿ ಆಂಡ್ ಓ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿ ಉಪಯೋಗ ಆಗಬಹುದು. ಸಂಭಾವ್ಯ ದೊಡ್ಡ ಲಯಬಿಲಿಟಿ ಕ್ಲೈಮ್ಗಳ ವಿರುದ್ಧ ಈ ಪಾಲಿಸಿ ಒದಗಿಬರುತ್ತದೆ. ಈ ಕೆಳಗೆ ನಮೂದಿಸುವ ಕಂಪನಿಗಳ ಪ್ರಕಾರಗಳು ಅವರಿಗಾಗಿ ಡೈರೆಕ್ಟರ್ಸ್ ಮತ್ತು ಆಫೀಸರ್ಸ್ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿ ಪಡೆಯಬಹುದು:
ಸರಿಯಾದ ಡೈರೆಕ್ಟರ್ಸ್ ಮತ್ತು ಆಫೀಸರ್ಸ್ ಲಯಬಿಲಿಟಿ ಇನ್ಶೂರೆನ್ಸ್ ಆರಿಸಿಕೊಳ್ಳುವುದು ಹೇಗೆ?
ಡೈರೆಕ್ಟರ್ಸ್ ಮತ್ತು ಆಫೀಸರ್ಸ್ (ಡಿ ಆಂಡ್ ಓ) ಲಯಬಿಲಿಟಿ ಇನ್ಶೂರೆನ್ಸ್ ನಿಯಮಗಳನ್ನು ನಿಮಗಾಗಿ ಸರಳೀಕರಿಸಲಾಗಿದೆ
- ಡೈರೆಕ್ಟರ್ - ಮ್ಯಾನೇಜ್ಮೆಂಟ್ ಬೋರ್ಡ್ನಲ್ಲಿರುವ ಇತರ ಸದಸ್ಯರನ್ನು ಒಳಗೊಂಡು ಸಂಸ್ಥೆಯ ವ್ಯವಸ್ಥಾಪಕ ಸ್ಥಾನದಲ್ಲಿ ಇರುವ ವ್ಯಕ್ತಿ.
- ದೈಹಿಕ ಗಾಯ - ಮರಣ, ಅವಮಾನ, ಮಾನಸಿಕ ಹಿಂಸೆ, ಮಾನಸಿಕ ಗಾಯ ಅಥವಾ ಆಘಾತವನ್ನು ಉಂಟುಮಾಡುವ ಯಾವುದೇ ರೀತಿಯ ದೈಹಿಕ ಗಾಯ, ಅನಾರೋಗ್ಯ ಅಥವಾ ಡಿಸೀಸ್ ಅನ್ನು ಈ ಪದ ಸೂಚಿಸುತ್ತದೆ.
- ಎಂಪ್ಲಾಯ್ಮೆಂಟ್ ರಾಂಗ್ಫುಲ್ ಆ್ಯಕ್ಟ್ - ತಪ್ಪಾದ ವಜಾಗೊಳಿಸುವಿಕೆ, ನ್ಯಾಚುರಲ್ ಜಸ್ಟಿಸ್ ನಿರಾಕರಣೆ, ಉದ್ಯೋಗ ಒಪ್ಪಂದದ ಉಲ್ಲಂಘನೆ, ಲೈಂಗಿಕ ಕಿರುಕುಳ ಇತ್ಯಾದಿ ಕಾರಣಗಳಿಂದ ಉದ್ಯೋಗದಾತರಿಗೆ ಸಂಬಂಧಿಸಿದಂತೆ ಇನ್ಶೂರ್ಡ್ ಮಾಡಿದ ಯಾವುದೇ ತಪ್ಪು ಕೃತ್ಯ.
- ಥರ್ಡ್ ಪಾರ್ಟಿ - ಒಂದು ಘಟನೆ ವಿಶೇಷವಾಗಿ ವಿವಾದದಂತಹ ಸಂದರ್ಭದಲ್ಲಿ ಪ್ರಾಥಮಿಕವಾಗಿ ಒಳಗೊಂಡಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ, ಎರಡು ಪಾರ್ಟಿಗಳನ್ನು ಈ ಪದ ಸೂಚಿಸುತ್ತದೆ.
- ಲಯಬಿಲಿಟಿಯ ಮಿತಿ - ಲಯಬಿಲಿಟಿಯ ಮಿತಿ ಎಂದರೆ ಪಾಲಿಸಿಯ ಅಡಿಯಲ್ಲಿ ಇನ್ಶೂರೆನ್ಸ್ ಕಂಪನಿ ಹೊಣೆಗಾರಿಕೆ ಹೊಂದಿರುವ ಗರಿಷ್ಠ ಅಮೌಂಟ್.
- ಡಿಡಕ್ಟಿಬಲ್ - ಇನ್ಶೂರ್ಡ್ ನಷ್ಟಕ್ಕೆ ನೀವು ಪಾವತಿಸಬೇಕಾದ ಜವಾಬ್ದಾರಿ ಹೊಂದಿರುವ ಹಣದ ಅಮೌಂಟ್.
- ಪ್ರಾಪರ್ಟಿ ಡ್ಯಾಮೇಜ್ - ಭೌತಿಕವಾಗಿ ಡ್ಯಾಮೇಜ್ ಆಗದಿರುವ ವಾಸ್ತವಿಕ ಪ್ರಾಪರ್ಟಿಯ ಬಳಕೆಯ ನಷ್ಟದ ಜೊತೆಗೆ ವಾಸ್ತವಿಕ ಪ್ರಾಪರ್ಟಿಯ ಬಳಕೆಯ ನಷ್ಟಕ್ಕೆ ಕಾರಣವಾಗುವ ಭೌತಿಕ ಗಾಯವನ್ನು ಇದು ಸೂಚಿಸುತ್ತದೆ.
- ವಿಚಾರಣೆ - ಕಂಪನಿಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಡೆಸುವ ತನಿಖೆಯನ್ನು ವಿಚಾರಣೆ ಎಂದು ಉಲ್ಲೇಖಿಸಬಹುದಾಗಿದೆ.
- ಮಾಲಿನ್ಯಕಾರಕ - ಇನ್ಶೂರೆನ್ಸ್ ಪಾಲಿಸಿಯಲ್ಲಿ ಘನ, ದ್ರವ, ಅನಿಲ ಹೀಗೆ ಯಾವುದೇ ರೂಪದಲ್ಲಿರುವ ಯಾವುದೇ ಇರಿಟೆಂಟ್ ಅಥವಾ ಕಂಟೈನ್ಮೆಂಟ್ಗಳೇ ಮಾಲಿನ್ಯಕಾರಕ.