Thank you for sharing your details with us!

ಕಾಂಟ್ರ್ಯಾಕ್ಟರ್ಸ್ ಪ್ಲಾಂಟ್ ಮತ್ತು ಮಷೀನರಿ ಇನ್ಶೂರೆನ್ಸ್ ಎಂದರೇನು?

ಕಾಂಟ್ರ್ಯಾಕ್ಟರ್ಸ್ ಪ್ಲಾಂಟ್ ಮತ್ತು ಮಷೀನರಿ ಇನ್ಶೂರೆನ್ಸ್ ಏನೆಲ್ಲಾ ಕವರ್ ಮಾಡುತ್ತದೆ?

ಈ ಕೆಳಗೆ ನಮೂದಿಸಿದ ಕವರೇಜ್‌ಗಳನ್ನು ಕಾಂಟ್ರ್ಯಾಕ್ಟರ್ಸ್ ಪ್ಲಾಂಟ್ ಮತ್ತು ಮಷೀನರಿ ಇನ್ಶೂರೆನ್ಸ್ ಒದಗಿಸುತ್ತದೆ:

ಕಂಟ್ರಾಕ್ಟರ್‌ಗಳ ನಿರ್ಮಾಣ ಉಪಕರಣಗಳಿಗೆ ಆದ ನಷ್ಟ/ಡ್ಯಾಮೇಜ್

ಬೆಂಕಿ, ದಂಗೆಗಳು, ಮುಷ್ಕರಗಳು, ದುರುದ್ದೇಶಪೂರ್ವಕ ಡ್ಯಾಮೇಜ್, ಭೂಕಂಪ, ಪ್ರವಾಹ, ಚಂಡಮಾರುತ ಇತ್ಯಾದಿ ಅಪಾಯಗಳಿಂದ ಸಂಭವಿಸಬಹುದಾದ ಅಪಘಾತಗಳ ಕಾರಣದಿಂದ ಕನ್‌ಸ್ಟ್ರಕ್ಷನ್ ಸೈಟ್‌ನಲ್ಲಿ ಬಳಸುವ ಉಪಕರಣಗಳ ಡ್ಯಾಮೇಜ್‌ನಿಂದ ಉಂಟಾಗಬಹುದಾದ ನಷ್ಟ ಅಥವಾ ಡ್ಯಾಮೇಜ್‌ನ ವೆಚ್ಚವನ್ನು ಪಾಲಿಸಿ ಕವರ್ ಮಾಡುತ್ತದೆ.

ಕೆಲಸ, ವಿಶ್ರಾಂತಿ ಅಥವಾ ಆರೈಕೆ ಸಂದರ್ಭಗಳಲ್ಲಿ ಉಂಟಾಗುವ ಡ್ಯಾಮೇಜ್

ಒಂದು ವೇಳೆ ಕೆಲಸ, ವಿಶ್ರಾಂತಿ ಅಥವಾ ಮೇಂಟೆನೆನ್ಸ್ ಸಂದರ್ಭದಲ್ಲಿ ಇನ್ಶೂರ್ಡ್ ಪ್ರಾಪರ್ಟಿ ಡ್ಯಾಮೇಜ್ ಆದರೆ, ಪಾಲಿಸಿ ಅದನ್ನು ಕವರ್ ಮಾಡುತ್ತದೆ.

ಏನೆಲ್ಲಾ ಕವರ್ ಆಗುವುದಿಲ್ಲ?

ಡಿಜಿಟ್‌ನ ಕಾಂಟ್ರ್ಯಾಕ್ಟರ್ಸ್ ಪ್ಲಾಂಟ್ ಮತ್ತು ಮಷೀನರಿ ಇನ್ಶೂರೆನ್ಸ್ ಪಾಲಿಸಿ ಈ ಕೆಳಗಿನ ಕಾರಣಗಳಿಂದ ಆದ ನಷ್ಟವನ್ನು ಕವರ್ ಮಾಡುವುದಿಲ್ಲ:

ನಿರ್ಲಕ್ಷ್ಯ

ಒಂದು ವೇಳೆ ಇನ್ಶೂರ್ಡ್‌ ವ್ಯಕ್ತಿಗಳ ಅಥವಾ ಅ‍ವರ ರೆಪ್ರೆಸೆಂಟೇಟಿವ್‌ ನಿರ್ಲಕ್ಷ್ಯದಿಂದ ಮಷೀನರಿಗೆ ಡ್ಯಾಮೇಜ್ ಸಂಭವಿಸಿದರೆ, ಪಾಲಿಸಿಯು ಆ ವೆಚ್ಚವನ್ನು ಕವರ್ ಮಾಡುವುದಿಲ್ಲ.

ಭಯೋತ್ಪಾದನೆ

ಒಂದು ವೇಳೆ ಭಯೋತ್ಪಾದನಾ ಕೃತ್ಯಗಳಿಂದ ಉಪಕರಣಗಳಿಗೆ ಡ್ಯಾಮೇಜ್ ಸಂಭವಿಸಿದರೆ, ಅದು ಕವರ್ ಆಗುವುದಿಲ್ಲ.

ಯುದ್ಧ ಮತ್ತು ನ್ಯೂಕ್ಲಿಯರ್ ಅಪಾಯಗಳು

ಯುದ್ಧ ಮತ್ತು ಅಟಾಮಿಕ್ ಅಪಾಯಗಳಂತಹ ಅಂಶಗಳಿಂದಾಗಿ ಉಪಕರಣಗಳ ತುಣುಕುಗಳಿಗೆ ಡ್ಯಾಮೇಜ್ ಸಂಭವಿಸಿದರೆ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಕವರ್ ಆಗುವುದಿಲ್ಲ.

ಉಪಯೋಗ ಕೊರತೆ ಮತ್ತು ಪರೀಕ್ಷೆಗೆ ಒಳಗಾಗುವುದು

ಉಪಯೋಗದ ಕೊರತೆ ಮತ್ತು ಪರೀಕ್ಷೆಗೆ ಒಳಗಾಗುವುದರಿಂದ ಮಷೀನರಿ ಕೆಟ್ಟುಹೋದರೆ ಅಥವಾ ಡ್ಯಾಮೇಜ್ ಆದರೆ ಪಾಲಿಸಿ ಅಡಿಯಲ್ಲಿ ಕವರ್ ಆಗುವುದಿಲ್ಲ.

ಮೊದಲೇ ಅಸ್ತಿತ್ವದಲ್ಲಿರುವ ಡ್ಯಾಮೇಜ್‌ಗಳು

ಪಾಲಿಸಿಯನ್ನು ಖರೀದಿಸುವ ಮೊದಲೇ ಅಸ್ತಿತ್ವದಲ್ಲಿದ್ದ ಉಪಕರಣಗಳ ತುಣುಕುಗಳ ದೋಷ ಅಥವಾ ಡ್ಯಾಮೇಜ್ ಅನ್ನು ಪಾಲಿಸಿ ಕವರ್ ಮಾಡುವುದಿಲ್ಲ.

ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಕಲ್ ಬ್ರೇಕ್‌ಡೌನ್‌

ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಕಲ್ ಬ್ರೇಕ್‌ಡೌನ್‌ ಕಾರಣದಿಂದ ಮಷೀನರಿ ವೈಫಲ್ಯ ಉಂಟಾದರೆ ಕಾಂಟ್ರ್ಯಾಕ್ಟರ್ಸ್ ಪ್ಲಾಂಟ್ ಮತ್ತು ಮಷೀನರಿ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಕವರ್ ಆಗುವುದಿಲ್ಲ.

ಒತ್ತಡದ ಪಾತ್ರೆ/ಬಾಯ್ಲರ್ ಸ್ಫೋಟ

ಒತ್ತಡ ಪಾತ್ರೆಗಳ ಸ್ಫೋಟದಿಂದ ಉಪಕರಣಗಳಿಗೆ ಉಂಟಾಗುವ ಯಾವುದೇ ಡ್ಯಾಮೇಜ್ ಅನ್ನು ಪಾಲಿಸಿ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ.

ಕಾಂಟ್ರ್ಯಾಕ್ಟರ್ಸ್ ಪ್ಲಾಂಟ್ ಮತ್ತು ಮಷೀನರಿ ಇನ್ಶೂರೆನ್ಸ್ ಪಾಲಿಸಿಯ ವೈಶಿಷ್ಟ್ಯಗಳು

ಕಾಂಟ್ರ್ಯಾಕ್ಟರ್ಸ್ ಪ್ಲಾಂಟ್ ಮತ್ತು ಮಷೀನರಿ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಹೇಗೆ ಕ್ಯಾಲ್ಕುಲೇಟ್ ಮಾಡಲಾಗುತ್ತದೆ?

ಪಾಲಿಸಿಯ ಪಾವತಿಸಬೇಕಾದ ಪ್ರೀಮಿಯಂ ಹಲವು ಅಂಶಗಳನ್ನು ಅವಲಂಬಿಸಿದೆ. ಅವುಗಳೆಂದರೆ -

ಸಮ್ ಇನ್ಶೂರ್ಡ್

ಇನ್ಶೂರ್ಡ್ ವ್ಯಕ್ತಿ ಪಾವತಿಸಬೇಕಾದ ಪ್ರೀಮಿಯಂ ಮೇಲೆ ಪಾಲಿಸಿಯಲ್ಲಿ ಇನ್ಶೂರ್ ಮಾಡಿದ ಅಮೌಂಟ್ ಪರಿಣಾಮ ಬೀರುತ್ತದೆ. ಸಮ್ ಇನ್ಶೂರ್ಡ್ ಜಾಸ್ತಿ ಇದ್ದಾಗ, ಪ್ರೀಮಿಯಂ ಕೂಡ ಜಾಸ್ತಿ ಇರುತ್ತದೆ ಮತ್ತು ವೈಸ್ ವರ್ಸಾ.

ಮಷೀನರಿ ವಿಧಗಳು

ಪ್ರೀಮಿಯಂ ಒಳಗೊಂಡಿರುವ ಮಷೀನರಿಯ ವಿಧವನ್ನೂ ಅ‍ವಲಂಬಿಸಿದೆ. ಸಾಮಾನ್ಯವಾಗಿ ನಿರ್ಮಾಣ ಸ್ಥಳದಲ್ಲಿ ಬಳಸಲಾಗುವ ಉಪಕರಣ ದುಬಾರಿಯಾಗಿರುತ್ತದೆ, ಆದ್ದರಿಂದ ಸಮ್ ಇನ್ಶೂರ್ಡ್ ಕೂಡ ಸಾಮಾನ್ಯವಾಗಿ ಜಾಸ್ತಿ ಇರುತ್ತದೆ. ಪಾಲಿಸಿಹೋಲ್ಡರ್ ಜಾಸ್ತಿ ಪ್ರೀಮಿಯಂ ಅನ್ನು ಪಾವತಿಸುತ್ತಿದ್ದರೆ, ಒಂದು ವೇಳೆ ಮಷೀನರಿಯ ಡ್ಯಾಮೇಜ್ ಅಥವಾ ಯಾವುದೇ ನಷ್ಟ ಉಂಟಾದಾಗ ಬಹಳಷ್ಟು ಹಣವನ್ನು ಉಳಿಸುತ್ತಾರೆ.

ರಿಸ್ಕ್‌ಗಳು

ಪ್ರಾಜೆಕ್ಟ್‌ ಸ್ಥಳಕ್ಕೆ ಸಂಬಂಧಿಸಿದ ರಿಸ್ಕ್‌ಗಳು ಕೂಡ ಪಾಲಿಸಿಯ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತವೆ. ಸ್ಟ್ಯಾಕ್‌ಗಳು ಜಾಸ್ತಿ ಇದ್ದರೆ ಅಪಘಾತ ಆಗಬಹುದಾದ ಸಾಧ್ಯತೆ ಕೂಡ ಜಾಸ್ತಿ ಇರುತ್ತದೆ, ಅದರ ಪರಿಣಾಮ ಇನ್ಶೂರರ್ ಭಾರಿ ಪ್ರಮಾಣದ ನಷ್ಟ ಭರಿಸಬೇಕಾಗುತ್ತದೆ.

ಲೊಕೇಶನ್

ಕೆಲಸದ ಸ್ಥಳ ಅಥವಾ ಉಪಕರಣಗಳನ್ನು ಇಟ್ಟುಕೊಂಡಿರುವ ಲೊಕೇಶನ್ ಪಾವತಿಸಬೇಕಾದ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆ.

ಉಪಕರಣದ ಬಳಕೆ

ಡ್ಯಾಮೇಜ್‌ಗೆ ಒಳಗಾಗುವ ಜಾಸ್ತಿ ರಿಸ್ಕ್ ಇರುವ ಉದ್ದೇಶಕ್ಕೆ ಮಷೀನರಿ ಬಳಕೆಯಾಗುತ್ತಿದ್ದರೆ, ನಂತರ ಮಷೀನರಿ ಅದಕ್ಕೆ ಗುರಿಯಾಗುತ್ತವೆ. ಹಾಗಾಗಿ, ಉಪಕರಣಗಳ ಬಳಕೆ ಕೂಡ ಪಾಲಿಸಿಯ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತವೆ.

ಯಾರು ಪಾಲಿಸಿಯನ್ನು ಖರೀದಿಸಬೇಕು?

ಕಾಂಟ್ರ್ಯಾಕ್ಟರ್ಸ್ ಪ್ಲಾಂಟ್ ಮತ್ತು ಮಷೀನರಿ ಇನ್ಶೂರೆನ್ಸ್ ಪಾಲಿಸಿಯು ಈ ಕೆಳಗಿನ ನಮೂದಿಸಿದವರು ಪಡೆಯಬಹುದು:

ಉಪಕರಣಗಳ ಮಾಲೀಕರು

ಮಷೀನರಿಯ ಮಾಲೀಕರು ಪಾಲಿಸಿಯನ್ನು ಖರೀದಿಸಬಹುದು. ಉಪಕರಣಗಳು ಡ್ಯಾಮೇಜ್ ಆದಾಗ ಅಥವಾ ಕಳ್ಳತನವಾದಾಗ ಉಂಟಾಗುವ ವೆಚ್ಚವನ್ನು ಕವರ್ ಮಾಡಲು ಇದು ನೆರವಾಗುತ್ತದೆ.

ಪ್ರಾಜೆಕ್ಟ್‌ನ ಹೂಡಿಕೆದಾರರು

ಮಷೀನರಿಗಳನ್ನು ಬಳಸಲಾಗುವ ಪ್ರೊಜೆಕ್ಟ್‌ಗಳಲ್ಲಿ ಹೂಡಿಕೆ ಮಾಡಿದ ಬ್ಯಾಂಕುಗಳು ಅಥವಾ ಆರ್ಥಿಕ ಸಂಸ್ಥೆಗಳು ಕೂಡ ಪಾಲಿಸಿಯನ್ನು ಖರೀದಿಸಬಹುದು.

ಮಷೀನರಿಯ ಬಳಕೆದಾರರು

ಪ್ರೊಜೆಕ್ಟ್ ಮುಗಿಸುವ ಟಾಸ್ಕ್ ಇರುವ ಕಂಟ್ರಾಕ್ಟರ್‌ಗಳು ಮತ್ತು ಪ್ರೊಜೆಕ್ಟ್ ಸೈಟ್‌ನಲ್ಲಿ ಮಷೀನರಿ ಬಳಸುವ ಜನರು ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬಹುದು.

ಸರಿಯಾದ ಕಾಂಟ್ರ್ಯಾಕ್ಟರ್ಸ್ ಪ್ಲಾಂಟ್ ಮತ್ತು ಮಷೀನರಿ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ?

ಭಾರತದಲ್ಲಿ ಕಾಂಟ್ರ್ಯಾಕ್ಟರ್ಸ್ ಪ್ಲಾಂಟ್ ಮತ್ತು ಮಷೀನರಿ ಇನ್ಶೂರೆನ್ಸ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು