Work
in spare time
Earn
side income
FREE
training by Digit
ಹೂಡಿಕೆಯಿಲ್ಲದೆ ಆನ್ಲೈನ್ನಲ್ಲಿ ಹಣ ಗಳಿಸುವುದು ಹೇಗೆ?
ಈ ದಿನಗಳಲ್ಲಿ ಬಹಳಷ್ಟು ಜನರು ಮನೆಯಲ್ಲಿ ಸಿಲುಕಿಕೊಂಡಿರುವುದರಿಂದ, ಅನೇಕರು ಯಾವುದೇ ಹೂಡಿಕೆಯಿಲ್ಲದೆ ಮನೆಯಿಂದಲೇ ಹಣವನ್ನು ಗಳಿಸುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ ಉದಾಹರಣೆಗೆ- ಕಾಲೇಜು ವಿದ್ಯಾರ್ಥಿಗಳು, ಮನೆಯಲ್ಲಿಯೇ ಇರುವ ಸಂಗಾತಿಗಳು, ಗೃಹಿಣಿಯರು, ನಿವೃತ್ತರು ಮತ್ತು ಜೊತೆಗೆ ಹೆಚ್ಚಿನ ಕೆಲಸಗಳನ್ನು ಮಾಡಲು ಬಯಸುವ ವ್ಯಾಪಾರಸ್ಥರು/ಮಹಿಳೆಯರು ಸಹ ಇದ್ದಾರೆ.
ನಿಜ ಹೇಳಬೇಕೆಂದರೆ, ಒಂದೇ ಒಂದು ರೂಪಾಯಿ ಹೂಡಿಕೆಯಿಲ್ಲದೆ ನೀವು ಆನ್ಲೈನ್ನಲ್ಲಿ ಹಣವನ್ನು ಗಳಿಸಲು ಹಲವಾರು ಮಾರ್ಗಗಳಿವೆ. ಈ ರೀತಿ, ನೀವು ಕಷ್ಟಪಟ್ಟು ದುಡಿದ ಹಣವನ್ನು ಅಪಾಯಕ್ಕೆ ಒಳಪಡಿಸುವ ಯಾವುದೇ ಹಣಕಾಸಿನ ಪರಿಣಾಮಗಳ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ.
ಹೂಡಿಕೆ ಇಲ್ಲದೆ ಆನ್ಲೈನ್ನಲ್ಲಿ ಹಣ ಗಳಿಸಲು ಕೆಲವು ಉತ್ತಮ ಮಾರ್ಗಗಳು ಇಲ್ಲಿವೆ
1. ಇನ್ಶೂರೆನ್ಸ್ ಪಿಒಎಸ್ಪಿ(POSP) ಆಗಿ
ಹಣ ಹೂಡಿಕೆ ಮಾಡದೇ, ಯಾವುದೇ ಸಮಯದ ನಿರ್ಬಂಧಗಳಿಲ್ಲದೆ ಮತ್ತು ಮನೆಯಿಂದಲೇ ಕೆಲಸ ಮಾಡುವ ರೀತಿ ಆನ್ಲೈನ್ನಲ್ಲಿ ಹಣ ಗಳಿಸುವ ಪ್ರಮುಖ ಮಾರ್ಗವೆಂದರೆ ಅದು ಪಿಒಎಸ್ಪಿ (ಪಾಯಿಂಟ್ ಆಫ್ ಸೇಲ್ಸ್ಪರ್ಸನ್) ಆಗುವುದು.
ಪಿಒಎಸ್ಪಿ ಎಂದರೆ ನಿರ್ದಿಷ್ಟ ಇನ್ಶೂರೆನ್ಸ್ ಉತ್ಪನ್ನಗಳನ್ನು ಆನ್ಲೈನ್ನಲ್ಲಿ ಮಾರಾಟ ಮಾಡಲು ಇನ್ಶೂರೆನ್ಸ್ ಕಂಪನಿಯೊಂದಿಗೆ ಕೆಲಸ ಮಾಡುವ ಒಬ್ಬ ಇನ್ಶೂರೆನ್ಸ್ ಏಜೆಂಟ್.ಒಬ್ಬ ಪಿಒಎಸ್ಪಿ ಏಜೆಂಟ್ ಆಗಿ, ಗ್ರಾಹಕರು ತಮ್ಮ ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ತಮಗೆ ಸರಿಯಾದ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಲು ನೀವು ಅವರಿಗೆ ಸಹಾಯ ಮಾಡುತ್ತೀರಿ.
ಯಾವುದೇ ಅವಶ್ಯಕತೆಗಳಿವೆಯೇ? - ಇನ್ಶೂರೆನ್ಸ್ ಏಜೆಂಟ್ ಆಗಲು ಇರುವ ಏಕೈಕ ಅವಶ್ಯಕತೆಗಳೆಂದರೆ ನೀವು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಮತ್ತು 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು. ಇಇದನ್ನು ಅನುಸರಿಸಿ, ನೀವು ಮಾಡಬೇಕಾಗಿರುವುದು ಸಾಮಾನ್ಯ/ಲೈಫ್ ಇನ್ಶೂರೆನ್ಸ್ ಲೈಸೆನ್ಸ್ ಪಡೆಯಲು ಐಆರ್ಡಿಎಐ ನೀಡುವ 15-ಗಂಟೆಗಳ ಕಡ್ಡಾಯ ತರಬೇತಿಯನ್ನು ಪೂರ್ಣಗೊಳಿಸುವುದು.
ನೀವು ಎಷ್ಟು ಸಂಪಾದಿಸಬಹುದು? - ವಿವಿಧ ರೀತಿಯ ಪಾಲಿಸಿಗಳನ್ನು ಮಾರಾಟ ಮಾಡಲು ಸಾಕಷ್ಟು ಅವಕಾಶಗಳಿವೆ ಮತ್ತು ನಿಮ್ಮ ಆದಾಯವು ನೀವು ಮಾರಾಟ ಮಾಡುವ ಪಾಲಿಸಿಗಳ ಸಂಖ್ಯೆಯ ಮೇಲೆ ಅವಲಂಬಿಸಿರುತ್ತದೆ. ನೀವು ಎಷ್ಟು ವೇಗವಾಗಿ ಹೆಚ್ಚು ಪಾಲಿಸಿಗಳನ್ನು ಮಾರಾಟ ಮಾಡುತ್ತೀರೋ ಅಷ್ಟು ವೇಗವಾಗಿ ಹೆಚ್ಚಿನ ಆದಾಯವನ್ನು ಗಳಿಸಬಹುದು
ಆದ್ದರಿಂದ, ನೀವು ಸ್ಮಾರ್ಟ್ಫೋನ್ ಮತ್ತು ಉತ್ತಮ ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವವರೆಗೆ ಮಾರಾಟ ಮಾಡುವ ಕೌಶಲ್ಯವನ್ನು ಬಳಸಿಕೊಂಡು ಪಿಒಎಸ್ಪಿ ಏಜೆಂಟ್ ಆಗಬಹುದು. ಪಿಒಎಸ್ಪಿ ಏಜೆಂಟ್ ಆಗುವ ಹಂತಗಳು, ಅವಶ್ಯಕತೆಗಳು ಮತ್ತು ನಿಯಮಗಳ ಕುರಿತು ನೀವು ಇಲ್ಲಿ ಇನ್ನಷ್ಟು ತಿಳಿದುಕೊಳ್ಳಬಹುದು.
2. ಫ್ರೀಲ್ಯಾನ್ಸಿಂಗ್ ಮೂಲಕ
ಫ್ರೀಲ್ಯಾನ್ಸ್ ಕೆಲಸವು ಆನ್ಲೈನ್ನಲ್ಲಿ ಹಣ ಸಂಪಾದಿಸುವ ಅತ್ಯಂತ ಜನಪ್ರಿಯ ವಿಧಾನಗಳಲ್ಲಿ ಒಂದಾಗಿದೆ ಮತ್ತು ಈ ಕೆಲಸವನ್ನು ಪ್ರಾರಂಭಿಸಲು ನಿಮಗೆ ಯಾವುದೇ ಹೂಡಿಕೆಯ ಅಗತ್ಯವಿಲ್ಲ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ಕೆಲವು ಪ್ರಮುಖ ಪೋರ್ಟಲ್ಗಳನ್ನು ಪತ್ತೆ ಹಚ್ಚುವುದು ಮತ್ತು ಅಲ್ಲಿ ನಿಮ್ಮನ್ನು ನೀವು ಒಬ್ಬ ಫ್ರೀಲ್ಯಾನ್ಸರ್ ಆಗಿ ರಿಜಿಸ್ಟರ್ ಮಾಡಿಕೊಳ್ಳುವುದು. ನಂತರ ನೀವು ನಿಮ್ಮ ಕೆಲವು ಸ್ಯಾಂಪಲ್ ಕೆಲಸವನ್ನು ಹಂಚಿಕೊಳ್ಳುವ ಮೂಲಕ ಗ್ರಾಹಕರಿಗೆ ನಿಮ್ಮ ಕೌಶಲ್ಯಗಳನ್ನು ಮಾರ್ಕೆಟ್ ಮಾಡಬೇಕಾಗುತ್ತದೆ.
ಏನಾದರೂ ಅವಶ್ಯಕತೆಗಳಿವೆಯೇ? - ನೀವು ರೈಟಿಂಗ್, ಪ್ರೋಗ್ರಾಮಿಂಗ್, ಎಡಿಟಿಂಗ್, ಡಿಸೈನಿಂಗ್ ಅಥವಾ ಹಲವಾರು ಇತರ ಕೌಶಲ್ಯಗಳನ್ನು ಅಭ್ಯಸಿಸಿಕೊಂಡರೆ, ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡುವ ಮೂಲಕ ನೀವು ಆನ್ಲೈನ್ನಲ್ಲಿ ಹಣ ಸಂಪಾದಿಸಬಹುದು. ಈ ದಿನಗಳಲ್ಲಿ, ಅನೇಕ ಬಿಸಿನೆಸ್ ಗಳು ಹೆಚ್ಚಾಗಿ ಫ್ರೀಲ್ಯಾನ್ಸರ್ ಗಳಿಗೆ ಸಣ್ಣ ಪುಟ್ಟ ಕೆಲಸಗಳನ್ನು ಹಸ್ತಾಂತರಿಸುತ್ತಿವೆ.
- ನೀವು ಎಷ್ಟು ಸಂಪಾದಿಸಬಹುದು? - ನೀವು ನೀಡುವ ಕೆಲಸದ ಪ್ರಕಾರವನ್ನು ಆಧರಿಸಿ, ನೀವು ಫ್ರೀಲ್ಯಾನ್ಸರ್ ಆಗಿ ಹೆಚ್ಚು-ಪಾವತಿಸುವ ಗಿಗ್ಗಳನ್ನು ಸುಲಭವಾಗಿ ಕಾಣಬಹುದು.
ಈ ಕೆಳಗಿನ ಕೆಲವು ಉನ್ನತ ಫ್ರೀಲ್ಯಾನ್ಸಿಂಗ್ ಸೈಟ್ಗಳು ನಿಜವಾದ ಕೆಲಸವನ್ನು ನೀಡುತ್ತವೆ:
3. ಮನೆಯಲ್ಲಿ ತಯಾರಾದ ವಸ್ತುಗಳನ್ನು ಮಾರಾಟ ಮಾಡುವುದು
ಇದು ಯಾವುದೇ ಹಣಕಾಸಿನ ಹೂಡಿಕೆಯಿಲ್ಲದೆ ನೀವು ಮನೆಯಿಂದಲೇ ಸುಲಭವಾಗಿ ಹಣವನ್ನು ಗಳಿಸುವ ಇನ್ನೊಂದು ಮಾರ್ಗವಾಗಿದೆ. ನಿಮಗೆ ಬೇಕಾಗಿರುವುದು ಅಡುಗೆ ಪದಾರ್ಥಗಳು ಅಥವಾ ಕರಕುಶಲ ಸರಬರಾಜುಗಳಂತಹ ನಿಮ್ಮ ಉತ್ಪನ್ನಗಳಿಗೆ ಕಚ್ಚಾ ಸಾಮಗ್ರಿಗಳು. ಇವುಗಳಲ್ಲಿ ಬೇಯಿಸಿದ ಸರಕುಗಳು, ಆರೋಗ್ಯಕರ ತಿಂಡಿಗಳು, ಪರಿಮಳಯುಕ್ತ ಮೇಣದ ಬತ್ತಿಗಳು, ವಾಲ್ ಹ್ಯಾಂಗಿಂಗ್ಗಳು, ಟೇಬಲ್ ಮ್ಯಾಟ್ಗಳು ಮತ್ತು ಅಲಂಕಾರಿಕ ವಸ್ತುಗಳು ಸೇರಿವೆ.
ಯಾವುದೇ ಅವಶ್ಯಕತೆಗಳಿವೆಯೇ? - ನೀವು ಕಲೆ ಮತ್ತು ಕರಕುಶಲ ಅಥವಾ ಅಡುಗೆ ಕ್ಷೇತ್ರಗಳಲ್ಲಿ ಕೌಶಲ್ಯಗಳನ್ನು ಹೊಂದಿದ್ದರೆ, ನಿಮ್ಮ ಮನೆಯಲ್ಲಿ ತಯಾರಿಸಿದ ಉತ್ಪನ್ನಗಳನ್ನು ಆನ್ಲೈನ್ನಲ್ಲಿ ಮಾರಾಟ ಮಾಡುವುದು ತುಂಬಾ ಸರಳವಾದ ಕೆಲಸ.
ನೀವು ಎಷ್ಟು ಸಂಪಾದಿಸಬಹುದು? - ನೀವು ಮಾರಾಟ ಮಾಡುವ ಉತ್ಪನ್ನಗಳು, ನಿಮ್ಮ ಮಾರ್ಕೆಟಿಂಗ್ ಕೌಶಲ್ಯಗಳು ಮತ್ತು ನೀವು ಆಯ್ಕೆ ಮಾಡುವ ಮಾರಾಟ ಪಾಲುದಾರ ಸೈಟ್ ಅನ್ನು ಅವಲಂಬಿಸಿ, ನಿಮ್ಮ ಉತ್ಪನ್ನಗಳನ್ನು ಹೆಚ್ಚಿನ ಬೆಲೆಗೆ ಹೊಂದಿಸಬಹುದು.
ನೀವು ಏನು ತಯಾರು ಮಾಡಲು ಮತ್ತು ಮಾರಾಟ ಮಾಡಲು ಬಯಸುತ್ತೀರಿ ಎಂದು ನಿಮಗೆ ತಿಳಿದ ನಂತರ, ನೀವು ಈ ಕೆಳಗಿನ ಸೈಟ್ಗಳಲ್ಲಿ ಮಾರಾಟಗಾರರಾಗಿ ನಿಮ್ಮನ್ನು ನೀವು ನೋಂದಾಯಿಸಿಕೊಳ್ಳಬೇಕು:
ಈ ಸೈಟ್ಗಳು ನಿಮ್ಮ ಉತ್ಪನ್ನಗಳನ್ನು ವರ್ಧಿಸುತ್ತವೆ ಮತ್ತು ಅವುಗಳನ್ನು ಗ್ರಾಹಕರಿಗೆ ತಲುಪಿಸುವುದನ್ನು ಖಚಿತಪಡಿಸುತ್ತವೆ. ಮತ್ತೊಂದೆಡೆ, ನೀವು ಇನ್ಸ್ಟಾಗ್ರಾಮ್, ಫೇಸ್ಬುಕ್, ಅಥವಾ ವಾಟ್ಸಪ್ ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳ ಮೂಲಕ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಬಹುದು ಮತ್ತು ದ್ವಿತೀಯ ಡೆಲಿವರಿ ಸರ್ವಿಸ್ ಅನ್ನು ಬಳಸಬಹುದು.
4. ಡೇಟಾ ಎಂಟ್ರಿ ಕೆಲಸಗಳನ್ನು ಆಯ್ಕೆ ಮಾಡಿ
ಹೂಡಿಕೆಯಿಲ್ಲದೆ ಆನ್ಲೈನ್ ಕೆಲಸ ಹುಡುಕುತ್ತಿರುವವರಿಗೆ ಡೇಟಾ ಎಂಟ್ರಿ ಮತ್ತೊಂದು ಆಯ್ಕೆಯಾಗಿದೆ. ನೀವು ಮನೆಯಿಂದ ಕೆಲಸ ಮಾಡಲು ಬಯಸಿದರೆ ಅಥವಾ ವಿದ್ಯಾರ್ಥಿಯು ಫ್ಲೆಕ್ಸಿಬಿಲಿಟಿಯೊಂದಿಗೆ ಪಾರ್ಟ್-ಟೈಮ್ ಕೆಲಸವನ್ನು ಹುಡುಕುತ್ತಿದ್ದರೆ, ಇದು ಉತ್ತಮ ಆಯ್ಕೆಯಾಗಿದೆ.
ಯಾವುದೇ ಅವಶ್ಯಕತೆಗಳಿವೆಯೇ? - ಅಂತಹ ಉದ್ಯೋಗಗಳಿಗೆ ನಿಮಗೆ ಬೇಕಾಗಿರುವುದು ಕಂಪ್ಯೂಟರ್, ಎಕ್ಸೆಲ್ ಮತ್ತು ಇತರ ಮೈಕ್ರೋಸಾಫ್ಟ್ ಟೂಲ್ಸ್ ಗಳ ಜ್ಞಾನ, ನಿಖರತೆ ಮತ್ತು ಕೊಟ್ಟ ಡೆಡ್ಲೈನ್ ಅಡಿಯಲ್ಲಿ ಕೆಲಸ ಮಾಡುವ ಚಾಕಚಕ್ಯತೆ.
ನೀವು ಎಷ್ಟು ಸಂಪಾದಿಸಬಹುದು? - ಡೇಟಾ ಎಂಟ್ರಿ ಕೆಲಸಗಳು ಸಾಮಾನ್ಯವಾಗಿ ತ್ವರಿತ ಅಥವಾ ಸುಲಭ, ಮತ್ತು ನೀವು ಪ್ರತಿ ಗಂಟೆಗೆ ₹300 ರಿಂದ ₹1,500ವರೆಗೆ ಗಳಿಸಬಹುದು.
- ವಿಶ್ವಾಸಾರ್ಹ ವೆಬ್ಸೈಟ್ನಲ್ಲಿ ರಿಜಿಸ್ಟರ್ ಮಾಡಿದ ನಂತರ, ನೀವು ಪ್ರಪಂಚದಾದ್ಯಂತದ ವಿವಿಧ ಕಂಪನಿಗಳಿಂದ ಡೇಟಾ ಎಂಟ್ರಿ ಉದ್ಯೋಗಗಳನ್ನು ಸ್ವೀಕರಿಸಬಹುದು (ನಿಮ್ಮ ಖಾತೆಯ ವಿವರಗಳನ್ನು ವರ್ಗಾಯಿಸುವ ಮೊದಲು ಅವುಗಳ ಕಾನೂನುಬದ್ಧತೆಯನ್ನು ಮೊದಲು ಪರೀಕ್ಷಿಸಿ). ನಂತರ ನಿಮಗೆ ಇಮೇಲ್ ಅಥವಾ ಡೇಟಾ ಮೂಲಕ್ಕೆ ಲಿಂಕ್ ಅನ್ನು ಕಳುಹಿಸಲಾಗುತ್ತದೆ ಮತ್ತು ಏನು ಮಾಡಬೇಕೆಂದು ಅದರಲ್ಲಿ ಸೂಚನೆಗಳನ್ನು ನೀಡಲಾಗುತ್ತದೆ.
ಡೇಟಾ ಎಂಟ್ರಿ ಉದ್ಯೋಗಗಳಿಗಾಗಿ ನೀವು ನೋಡಬಹುದಾದ ಕೆಲವು ವಿಶ್ವಾಸಾರ್ಹ ವೆಬ್ಸೈಟ್ಗಳು ಇಲ್ಲಿವೆ:
5. ಲೈವ್ ಗೆ ಹೋಗುವ ಮುಂಚೆ ಅಪ್ಲಿಕೇಶನ್ ಮತ್ತು ವೆಬ್ ಸೈಟ್ ಗಳನ್ನು ಟೆಸ್ಟ್ ಮಾಡಿ
ಯಾವುದೇ ಹೂಡಿಕೆಯಿಲ್ಲದೆ ಆನ್ಲೈನ್ನಲ್ಲಿ ಹಣ ಗಳಿಸುವ ಇನ್ನೊಂದು ಸರಳ ಮಾರ್ಗವೆಂದರೆ ಅಪ್ಲಿಕೇಶನ್ಗಳು ಮತ್ತು ವೆಬ್ಸೈಟ್ಗಳನ್ನು ಟೆಸ್ಟ್ ಮಾಡುವುದು. ಕಂಪನಿಗಳು ಮತ್ತು ಅಪ್ಲಿಕೇಶನ್ ಡೆವಲಪರ್ಗಳು ತಮ್ಮ ಬಳಕೆದಾರರು ತಮ್ಮ ಅಪ್ಲಿಕೇಶನ್ಗಳು ಮತ್ತು ಸೈಟ್ಗಳಿಂದ ಗೊಂದಲಕ್ಕೊಳಗಾಗುವುದನ್ನು ಬಯಸುವುದಿಲ್ಲವಾದ್ದರಿಂದ, ಅವರು 'ಬೀಟಾ ಟೆಸ್ಟಿಂಗ್' ಮಾಡಲು ಬಳಕೆದಾರರನ್ನು ನೇಮಿಸಿಕೊಳ್ಳುತ್ತಾರೆ. ಮೂಲಭೂತವಾಗಿ, ಅವರು ತಮ್ಮ ಸೈಟ್ಗಳು ಅಥವಾ ಅಪ್ಲಿಕೇಶನ್ಗಳನ್ನು ಪರೀಕ್ಷಿಸುತ್ತಾರೆ ಮತ್ತು ತಮ್ಮ ಬಳಕೆದಾರರ ಅನುಭವವನ್ನು ರಿಪೋರ್ಟ್ ಮಾಡುತ್ತಾರೆ, ಅಥವಾ ಅವರು ಸಾರ್ವಜನಿಕರಿಗೆ ಲೈವ್ಗೆ ಹೋಗುವ ಮೊದಲು ಯಾವುದೇ ದೋಷಗಳು ಮತ್ತು ಸಮಸ್ಯೆಗಳನ್ನುತಿಳಿಸುತ್ತಾರೆ.
ಯಾವುದೇ ಅವಶ್ಯಕತೆಗಳಿವೆಯೇ? - ಇದನ್ನು ಮಾಡಲು, ನಿಮಗೆ ಯಾವುದೇ ವಿಶೇಷ ಜ್ಞಾನದ ಅಗತ್ಯವಿಲ್ಲ, ಆದ್ದರಿಂದ ಮನೆಯಿಂದ ಕೆಲಸ ಮಾಡಲು ಬಯಸುವವರಿಗೆ ಅಥವಾ ಪಾರ್ಟ್-ಟೈಮ್ ಕೆಲಸ ಮಾಡುವವರಿಗೆ ಇದು ಒಳ್ಳೆಯದು.
ನೀವು ಎಷ್ಟು ಸಂಪಾದಿಸಬಹುದು? - ಬೀಟಾ ಟೆಸ್ಟಿಂಗ್ ಪ್ರಕ್ರಿಯೆಯು ಎಷ್ಟು ಸಮಯ ಹಿಡಿಯುತ್ತದೆ ಮತ್ತು ಎಷ್ಟು ಸಂಕೀರ್ಣವಾಗಿದೆ ಮತ್ತು ಬೀಟಾ ಟೆಸ್ಟ್ ನೊಂದಿಗೆ ನಿಮ್ಮ ಅನುಭವ ಹೇಗಿದೆ ಎನ್ನುವುದನ್ನು ಅವಲಂಬಿಸಿ, ನೀವು ಸುಮಾರು ₹1000 ರಿಂದ ₹3000 ವರೆಗೆ ಗಳಿಸಬಹುದು.
ಅಪ್ಲಿಕೇಶನ್ ಮತ್ತು ವೆಬ್ಸೈಟ್ ಟೆಸ್ಟಿಂಗ್ ಉದ್ಯೋಗಗಳನ್ನು ಒದಗಿಸುವ ಕೆಲವು ಸೈಟ್ಗಳು:
ನೀವು ಆನ್ಲೈನ್ನಲ್ಲಿ ಕೆಲಸ ಹುಡುಕುವ ಮೊದಲು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳು
ಆದರೂ, ಇಂಟರ್ನೆಟ್ ನಲ್ಲಿ ನಕಲಿ ಏಜೆನ್ಸಿಗಳು, ಸ್ಕ್ಯಾಮ್ ಗಳು ಮತ್ತು ಫ್ರಾಡ್ ಗಳಿಂದ ತುಂಬಿರುವುದರಿಂದ ಆನ್ಲೈನ್ನಲ್ಲಿ ಹಣವನ್ನು ಗಳಿಸಲು ಸುಲಭವಾದ ಮತ್ತು ಕಾನೂನುಬದ್ಧ ಮಾರ್ಗಗಳನ್ನು ಕಂಡುಹಿಡಿಯುವುದು ಕಷ್ಟಕರವಾಗಿರುತ್ತದೆ.
ಕೆಲಸವನ್ನು ಒದಗಿಸುವ ಮುಂಚೆ ನಿಮ್ಮ ಬಳಿ ನೋಂದಣಿ ಶುಲ್ಕವನ್ನು ಕೇಳುವ ಅಥವಾ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕೇಳುವ ಯಾವುದೇ ಸೈಟ್ಗಳ ಬಗ್ಗೆ ಜಾಗರೂಕರಾಗಿರಿ.
ನಿಮ್ಮ ಕೆಲಸದ ಕೌಶಲ್ಯದ ಲಾಭವನ್ನು ಪಡೆದುಕೊಳ್ಳುವ ಮತ್ತು ನಿಮಗೆ ಪಾವತಿ ಮಾಡದೆ ಇರುವ ವೆಬ್ಸೈಟ್ ಗಳ ಕಡೆಗೆ ನಿಮ್ಮ ಎಚ್ಚರಿಕೆ ಇರಲಿ
ಅಂತಹ ಮೋಸದ ವೆಬ್ಸೈಟ್ಗಳು ಮತ್ತು ಕಂಪನಿಗಳನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ಯಾವುದೇ ಸೈಟ್ ಅನ್ನು ಸಂಪೂರ್ಣವಾಗಿ ರಿಸರ್ಚ್ ಮಾಡುವುದು ಮತ್ತು ಜನರು ಅದರ ಬಗ್ಗೆ ಬಿಟ್ಟಿರುವ ವಿಮರ್ಶೆಗಳು ಮತ್ತು ಕಾಮೆಂಟ್ಗಳನ್ನು ಓದುವುದು.
ಸಹಿ ಮಾಡುವ ಮೊದಲು ಅವರು ನಿಮಗೆ ನೀಡುವ ಒಪ್ಪಂದವನ್ನು ಚೆನ್ನಾಗಿ ಓದಲು ಮರೆಯಬೇಡಿ.
ನಿಮ್ಮ ಸಮಯವನ್ನು ಉತ್ತಮವಾಗಿ ಬಳಸಿಕೊಳ್ಳುವ ಮೂಲಕ ಮತ್ತು ಹೆಚ್ಚು ಉತ್ಪಾದಕವಾಗುವುದರ ಮೂಲಕ, ನೀವು ಮನೆಯಲ್ಲಿ ಕುಳಿತು ಯಾವುದೇ ಹೂಡಿಕೆಯಿಲ್ಲದೆ ಹೆಚ್ಚುವರಿ ಹಣವನ್ನು ಗಳಿಸಬಹುದು.
ಆನ್ಲೈನ್ನಲ್ಲಿ ಮನೆಯಿಂದ ಹಣವನ್ನು ಗಳಿಸುವ ಈ ವಿಧಾನಗಳು ಸಮಯ ಸ್ನೇಹಿಯಾಗಿವೆ ಮತ್ತು ಅವುಗಳು ವಿದ್ಯಾರ್ಥಿಗಳು, ಗೃಹಿಣಿಯರು, ನಿವೃತ್ತರು ಮತ್ತು ಹೆಚ್ಚಿನವರಿಗೆ ಉತ್ತಮ ಆಯ್ಕೆಗಳಾಗಿವೆ. ನೀವು ಈಗಾಗಲೇ ಕೆಲಸವನ್ನು ಹೊಂದಿದ್ದರೂ ಸಹ, ಜೊತೆಯಲ್ಲಿ ಏನನ್ನಾದರೂ ಮಾಡಲು ಇದು ಉತ್ತಮ ಮಾರ್ಗವಾಗಿದೆ. ಆದ್ದರಿಂದ, ಹೆಚ್ಚಿನ ಹಣವನ್ನು ಗಳಿಸಲು ಈ ಅವಕಾಶಗಳನ್ನು ಏಕೆ ಬಳಸಿಕೊಳ್ಳಬಾರದು.