ತತ್ಕಾಲ್ ಪಾಸ್‌ಪೋರ್ಟ್ : ಶುಲ್ಕಗಳು, ಅಪ್ಲಿಕೇಶನ್ ಪ್ರಕ್ರಿಯೆ ಮತ್ತು ಅಗತ್ಯವಿರುವ ಡಾಕ್ಯುಮೆಂಟುಗಳು
ತತ್ಕಾಲ್ ಪಾಸ್‌ಪೋರ್ಟ್ ಎಂದರೇನು?
ತತ್ಕಾಲ್ ಯೋಜನೆಯು ಹೆಚ್ಚು ಸಮಯ ತೆಗೆದುಕೊಳ್ಳುವ ಪಾಸ್‌ಪೋರ್ಟ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಬಿಟ್ಟುಬಿಡಲು ಸೂಚಿಸುತ್ತದೆ. ಜೊತೆಗೆ ಇದು ವೇಗದ ಪ್ರಕ್ರಿಯೆಯೊಂದಿಗೆ ಪಾಸ್‌ಪೋರ್ಟ್ ಪಡೆಯುವ ಸರಳ ಮಾರ್ಗವನ್ನು ಒದಗಿಸಿ, ನಿಮಗೆ ಕೆಲವೇ ದಿನಗಳಲ್ಲಿ ಪಾಸ್‌ಪೋರ್ಟ್ ದೊರಕುವಂತೆ ಮಾಡುತ್ತದೆ.
ಇದರ ಅಪ್ಲಿಕೇಶನ್ ಪ್ರಕ್ರಿಯೆ, ತತ್ಕಾಲ್ ಪಾಸ್‌ಪೋರ್ಟ್ ಶುಲ್ಕಗಳು ಮತ್ತು ಇತರ ಅಗತ್ಯ ವಿವರಗಳ ಬಗ್ಗೆ ತಿಳಿಯಲು ಇಚ್ಛಿಸುವಿರಾ? ಈ ಲೇಖನದ ಮೂಲಕ ತತ್ಕಾಲ್ ಪಾಸ್‌ಪೋರ್ಟ್ ಕುರಿತ ಸಂಪೂರ್ಣ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದು.
ಓದುವುದನ್ನು ಮುಂದುವರಿಸಿ!
ತತ್ಕಾಲ್ ಪಾಸ್‌ಪೋರ್ಟ್‌ಗೆ ಯಾರು ಅರ್ಹರು?
ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯು ತತ್ಕಾಲ್ ಪಾಸ್‌ಪೋರ್ಟ್ ನೀಡುವುದನ್ನು ನಿರ್ಧರಿಸುತ್ತದೆ. ಪ್ರತಿಯೊಬ್ಬ ಅರ್ಜಿದಾರರು ತತ್ಕಾಲ್ ಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂಬುದನ್ನು ನೆನಪಿಡಿ. ಇದರ ವರ್ಗಗಳು ಈ ಕೆಳಗಿನಂತಿವೆ:
ವಿದೇಶದಲ್ಲಿ ಭಾರತೀಯ ಪೋಷಕರಿಗೆ ಜನಿಸಿದ ಅರ್ಜಿದಾರರು (ಭಾರತೀಯ ಮೂಲದವರು)
ಇತರ ದೇಶಗಳಿಂದ ಭಾರತಕ್ಕೆ ಗಡೀಪಾರಾದ ವ್ಯಕ್ತಿಗಳು.
ವಿದೇಶದಿಂದ ಸ್ವದೇಶಕ್ಕೆ ಮರಳಿದ ವ್ಯಕ್ತಿ.
ನೋಂದಣಿ ಅಥವಾ ನ್ಯಾಚುರಲೈಸೇಷನ್ ಆಧಾರದ ಮೇಲೆ ಪೌರತ್ವವನ್ನು ಪಡೆದ ಭಾರತೀಯ ನಿವಾಸಿಗಳು
ನಾಗಾಲ್ಯಾಂಡ್ , ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳು
ನಾಗಾಲ್ಯಾಂಡ್‌ನ ಹೊರಗೆ ವಾಸಿಸುವ, ನಾಗಾ ಮೂಲದ ಭಾರತೀಯ ನಾಗರಿಕರು.
ಕಡಿಮೆ ಮಾನ್ಯತೆಯ ಪಾಸ್‌ಪೋರ್ಟ್‌ಗಳನ್ನು ನವೀಕರಿಸಲು ಬಯಸುವ ವ್ಯಕ್ತಿಗಳು
ತಮ್ಮ ಹೆಸರಿನಲ್ಲಿ ಪ್ರಮುಖ ಬದಲಾವಣೆ ಬಯಸುವ ಅರ್ಜಿದಾರರು.
ನಾಗಾಲ್ಯಾಂಡ್‌ನ ಅಪ್ರಾಪ್ತ ನಿವಾಸಿಗಳು.
ಕಳೆದುಹೋದ ಪಾಸ್‌ಪೋರ್ಟ್ ನ ಮರು-ಹಂಚಿಕೆ ಬಯಸುತ್ತಿರುವ ಅರ್ಜಿದಾರರು.
ಲಿಂಗ ಬದಲಾವಣೆ ಪಡೆದುಕೊಂಡ ವ್ಯಕ್ತಿಗಳು. ವೈಯಕ್ತಿಕ ರುಜುವಾತುಗಳಲ್ಲಿ ಬದಲಾವಣೆ ಪಡೆದುಕೊಂಡವರು (ಉದಾಹರಣೆಗೆ, ಸಹಿ) ತತ್ಕಾಲ್ ಪಾಸ್‌ಪೋರ್ಟ್‌ಗೆ ಅರ್ಹರಾಗಿರುವುದಿಲ್ಲ.
ಭಾರತೀಯ ಮತ್ತು ವಿದೇಶಿ ಪೋಷಕರಿಂದ ದತ್ತು ಪಡೆದ ಮಕ್ಕಳು.
ಏಕ ಪೋಷಕ ಪಾಲನೆಯಲ್ಲಿರುವ ಅಪ್ರಾಪ್ತ ವಯಸ್ಕರು.
ತತ್ಕಾಲ್ ಪಾಸ್‌ಪೋರ್ಟ್ ಎಂದರೇನು ಮತ್ತು ಅದರ ಅರ್ಹತೆಯ ಬಗ್ಗೆ ಈಗ ನಿಮಗೆ ತಿಳಿದಿದೆ, ಅದರ ಅಪ್ಲಿಕೇಶನ್ ಪ್ರಕ್ರಿಯೆ ಬಗ್ಗೆ ತಿಳಿಯೋಣ.
ಆನ್‌ಲೈನ್‌ನಲ್ಲಿ ತತ್ಕಾಲ್ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ವಿಧಾನವೇನು?
ತತ್ಕಾಲ್ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಪ್ರಶ್ನೆಯೇ? ಈ ಸರಳ ಹಂತಗಳನ್ನು ಅನುಸರಿಸಿ:
ಪಾಸ್‌ಪೋರ್ಟ್ ಸೇವಾ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಿ.
ಒಮ್ಮೆ ನೀವು ಪೋರ್ಟಲ್‌ನಲ್ಲಿ ಖಾತೆಯನ್ನು ರಚಿಸಿದ ನಂತರ, ನಿಮ್ಮ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗ್ ಇನ್ ಆಗಿ.
ಈ ಎರಡು ಆಯ್ಕೆಗಳಲ್ಲಿ ಒಂದನ್ನು ಆಯ್ಕೆಮಾಡಿ - 'ಹೊಸದು/ಮರು-ಹಂಚಿಕೆ'.
"ತತ್ಕಾಲ್" ಅನ್ನು ಒಂದು ಯೋಜನಾ ಪ್ರಕಾರವಾಗಿ ಆಯ್ಕೆಮಾಡಿ.
ಅಪ್ಲಿಕೇಶನ್ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಅದನ್ನು ನಿಮ್ಮ ಹೆಸರು, ಉದ್ಯೋಗದ ಪ್ರಕಾರ, ಕುಟುಂಬದ ವಿವರಗಳು ಇತ್ಯಾದಿ ಸಂಬಂಧಿತ ವಿವರಗಳೊಂದಿಗೆ ಭರ್ತಿ ಮಾಡಿ.
ಆನ್‌ಲೈನ್‌ನಲ್ಲಿ ಫಾರ್ಮ್ ಸಲ್ಲಿಸಿ ಮತ್ತು ಆನ್‌ಲೈನ್ ನಲ್ಲಿ ಪಾವತಿ ಮಾಡುವ ಮೂಲಕ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ರಶೀದಿಯ ಪ್ರಿಂಟ್ ಔಟ್ ತೆಗೆದುಕೊಳ್ಳಿ ಮತ್ತು ನಿಮ್ಮ ಹತ್ತಿರದ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ (ಪಿಎಸ್ ಕೆ) ಅಪಾಯಿಂಟ್‌ಮೆಂಟ್ ಅನ್ನು ಬುಕ್ ಮಾಡಿ.
ತತ್ಕಾಲ್ ಪಾಸ್‌ಪೋರ್ಟ್ ಶುಲ್ಕಗಳನ್ನು ವಿವರಿಸಿ?
ಕೆಳಗಿನ ಕೋಷ್ಟಕವು ಬುಕ್ಲೆಟ್ ನ ಗಾತ್ರದೊಂದಿಗೆ ತತ್ಕಾಲ್ ಪಾಸ್‌ಪೋರ್ಟ್ ಶುಲ್ಕಗಳನ್ನು ಸೂಚಿಸುತ್ತದೆ. ಒಮ್ಮೆ ನೋಡಿ:
ಹೊಸ ಪಾಸ್‌ಪೋರ್ಟ್‌ನ ಅಪ್ಲಿಕೇಶನ್
ವಯಸ್ಸಿನ ಮಿತಿ | ತತ್ಕಾಲ್ ಪಾಸ್‌ಪೋರ್ಟ್ ಬೆಲೆ |
---|---|
15 ವರ್ಷದೊಳಗೆ (36 ಪುಟಗಳು) | ₹3,000 |
15 ರಿಂದ 18 ವರ್ಷಗಳು (36 ಪುಟಗಳು ಮತ್ತು10 ವರ್ಷಗಳವ್ಯಾಲಿಡಿಟಿ) | ₹3,500 |
15 ರಿಂದ 18 ವರ್ಷಗಳು (60 ಪುಟಗಳು ಮತ್ತು10 ವರ್ಷಗಳ ವ್ಯಾಲಿಡಿಟಿ) | ₹4,000 |
18 ವರ್ಷ ಮತ್ತು ಮೇಲ್ಪಟ್ಟವರು (36 ಪುಟಗಳು) | ₹3,500 |
18 ವರ್ಷ ಮತ್ತು ಮೇಲ್ಪಟ್ಟವರು (60 ಪುಟಗಳು) | ₹4,000 |
ಪಾಸ್‌ಪೋರ್ಟ್‌ನ ಮರು-ಹಂಚಿಕೆ ಅಥವಾ ನವೀಕರಣಕ್ಕಾಗಿ
ವಯಸ್ಸಿನ ಮಿತಿ | ತತ್ಕಾಲ್ ಪಾಸ್‌ಪೋರ್ಟ್ ಬೆಲೆ |
---|---|
15 ವರ್ಷದೊಳಗೆ (36 ಪುಟಗಳು) | ₹3,000 |
15 ರಿಂದ 18 ವರ್ಷಗಳು (36 ಪುಟಗಳು ಮತ್ತು10 ವರ್ಷಗಳ ವ್ಯಾಲಿಡಿಟಿ) | ₹3,500 |
15 ರಿಂದ 18 ವರ್ಷಗಳು (60 ಪುಟಗಳು ಮತ್ತು10 ವರ್ಷಗಳ ವ್ಯಾಲಿಡಿಟಿ) | ₹4,000 |
18 ವರ್ಷ ಮತ್ತು ಮೇಲ್ಪಟ್ಟವರು (36 ಪುಟಗಳು) | ₹3,500 |
18 ವರ್ಷ ಮತ್ತು ಮೇಲ್ಪಟ್ಟವರು (60 ಪುಟಗಳು) | ₹4,000 |
ತತ್ಕಾಲ್ ಪಾಸ್‌ಪೋರ್ಟ್ ಶುಲ್ಕವನ್ನು ಪಾವತಿಸುವುದು ಹೇಗೆ?
ಆನ್‌ಲೈನ್ ಪಾವತಿಗಾಗಿ, ಈ ಕೆಳಗಿನ ಮೂರು ಆಯ್ಕೆಗಳನ್ನು ನೀವು ಆರಿಸಿಕೊಳ್ಳಬಹುದು:
ಇಂಟರ್ನೆಟ್ ಬ್ಯಾಂಕಿಂಗ್
ಕ್ರೆಡಿಟ್ ಕಾರ್ಡ್
ಡೆಬಿಟ್ ಕಾರ್ಡ್
ನಿಮ್ಮ ಹತ್ತಿರದ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿಯೂ ಸಹ ತತ್ಕಾಲ್ ಪಾಸ್‌ಪೋರ್ಟ್ ಶುಲ್ಕವನ್ನು ಕ್ಯಾಶ್ ರೂಪದಲ್ಲಿ ಪಾವತಿಸಬಹುದು. ಅಲ್ಲದೆ, ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚಲನ್ ಮೂಲಕವೂ ಪಾವತಿಸಬಹುದು.
ತತ್ಕಾಲ್ ಪಾಸ್‌ಪೋರ್ಟ್‌ಗೆ ಅಗತ್ಯವಿರುವ ಡಾಕ್ಯುಮೆಂಟುಗಳು ಯಾವುವು?
ತತ್ಕಾಲ್ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ನೀವು ಈ ಕೆಳಗಿನ ಯಾವುದಾದರೂ 3 ಡಾಕ್ಯುಮೆಂಟುಗಳನ್ನು ಸಲ್ಲಿಸಬಹುದು:
ಆಧಾರ್ ಕಾರ್ಡ್
ಮತದಾರರ ಗುರುತಿನ ಚೀಟಿ
ಎಸ್ ಸಿ/ಎಸ್ ಟಿ / ಒಬಿಸಿ ಪ್ರಮಾಣಪತ್ರ
ಪ್ಯಾನ್ ಕಾರ್ಡ್
ಪಡಿತರ ಚೀಟಿ
ಶಸ್ತ್ರಾಸ್ತ್ರ ಪರವಾನಗಿ
ಸೇವಾ ಗುರುತಿನ ಚೀಟಿ
ಆಸ್ತಿಯ ಡಾಕ್ಯುಮೆಂಟುಗಳು
ಗ್ಯಾಸ್ ಬಿಲ್‌ಗಳು
ಡ್ರೈವಿಂಗ್ ಲೈಸೆನ್ಸ್
ಜನನ ಪ್ರಮಾಣಪತ್ರ
ಪೆನ್ಶನ್ ಡಾಕ್ಯುಮೆಂಟುಗಳು
ಬ್ಯಾಂಕ್/ಪೋಸ್ಟ್ ಆಫೀಸ್/ಕಿಸಾನ್ ಪಾಸ್‌ಬುಕ್
ವ್ಯಾಲಿಡಿಟಿ ಇರುವ ಶಿಕ್ಷಣ ಸಂಸ್ಥೆಯಿಂದ ಪಡೆದ ವಿದ್ಯಾರ್ಥಿಯ ಗುರುತಿನ ಚೀಟಿ
ತತ್ಕಾಲ್ ಪಾಸ್‌ಪೋರ್ಟ್ ಪ್ರಕ್ರಿಯೆಗೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ?
ಒಮ್ಮೆ ನಿಮ್ಮ ಅರ್ಜಿಯು "ಗ್ರ್ಯಾಂಟೆಡ್" ಎಂಬ ಅಂತಿಮ ಸ್ಥಿತಿಯೊಂದಿಗೆ ಯಶಸ್ವಿಯಾದರೆ, ನಿಮ್ಮ ತತ್ಕಾಲ್ ಪಾಸ್‌ಪೋರ್ಟ್ ಮೂರನೇ ಕೆಲಸದ ದಿನದೊಳಗೆ ತಲುಪಬಹುದು ಎಂದು ನಿರೀಕ್ಷಿಸಬಹುದು. ಇದಲ್ಲದೆ, ಅರ್ಜಿ ಸಲ್ಲಿಕೆ ದಿನಾಂಕವನ್ನು ಹೊರತುಪಡಿಸಿ, ಈ ದಿನಾಂಕವು ಪೊಲೀಸ್ ವೆರಿಫಿಕೇಶನ್ ಅನ್ನು ಒಳಗೊಂಡಿರುತ್ತದೆ.
ಜೊತೆಗೆ, ಅರ್ಜಿದಾರರಿಗೆ ಪೊಲೀಸ್ ವೆರಿಫಿಕೇಶನ್ ಅಗತ್ಯವಿಲ್ಲದಿದ್ದರೆ, ಅವನು/ಅವಳು ಅರ್ಜಿ ಸಲ್ಲಿಸಿದ ದಿನಾಂಕದಿಂದ ಮೊದಲ ಕೆಲಸದ ದಿನದೊಳಗೆ ಪಾಸ್‌ಪೋರ್ಟ್ ಅನ್ನು ನಿರೀಕ್ಷಿಸಬಹುದು.
ಸಾಮಾನ್ಯ ಮತ್ತು ತತ್ಕಾಲ್ ಪಾಸ್‌ಪೋರ್ಟ್ ನಡುವಿನ ವ್ಯತ್ಯಾಸವೇನು?
ಎರಡರ ನಡುವಿನ ಪ್ರಮುಖ ವ್ಯತ್ಯಾಸವು ಅವುಗಳ ವಿಧಾನಗಳನ್ನು ಅವಲಂಬಿಸಿದೆ. ಅದನ್ನುಈ ಕೆಳಗೆ ಹೈಲೈಟ್ ಮಾಡಲಾಗಿದೆ:
ಸಾಮಾನ್ಯ ಪಾಸ್‌ಪೋರ್ಟ್ - ಪ್ರಮಾಣಿತ ಪ್ರಕ್ರಿಯೆಯ ಸಮಯವು ಅರ್ಜಿಯ ದಿನಾಂಕದಿಂದ 30 ರಿಂದ 45 ದಿನಗಳು.
ತತ್ಕಾಲ್ ಪಾಸ್‌ಪೋರ್ಟ್ - ಪೊಲೀಸ್ ವೆರಿಫಿಕೇಶನ್ ಹೊರತುಪಡಿಸಿ ಪ್ರಮಾಣಿತ ಪ್ರಕ್ರಿಯೆಯ ಸಮಯವು ಒಂದು ದಿನದ ಕೆಲಸವಾಗಿದೆ. ಪೊಲೀಸ್ ವೆರಿಫಿಕೇಶನ್ ನ ಅಗತ್ಯವಿದ್ದರೆ, ಅಪ್ಲಿಕೇಶನ್ ದಿನವನ್ನು ಹೊರತುಪಡಿಸಿ ಮೂರನೇ ಕೆಲಸದ ದಿನದೊಳಗೆ ತತ್ಕಾಲ್ ಪಾಸ್‌ಪೋರ್ಟ್ ರವಾನೆಯನ್ನು ನಿರೀಕ್ಷಿಸಬಹುದು.
ಗಮನಿಸಿ: ನೀವು ಪಾಸ್‌ಪೋರ್ಟ್‌ನ ಹೊಸ ಅಥವಾ ಮರು-ಹಂಚಿಕೆಗಾಗಿ ಅರ್ಜಿ ಸಲ್ಲಿಸಲು ಬಯಸಿದರೆ, ನೀವು ಅರ್ಜಿ ಶುಲ್ಕದ ಜೊತೆಗೆ ತತ್ಕಾಲ್ ಅಪ್ಲಿಕೇಶನ್‌ಗೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ತತ್ಕಾಲ್ ಪಾಸ್‌ಪೋರ್ಟ್ ಬಗೆಗಿನ ಪದೇ ಪದೇ ಕೇಳಲಾದ ಪ್ರಶ್ನೆಗಳು
ಗೆಜೆಟೆಡ್ ಅಧಿಕಾರಿಯಿಂದ ತತ್ಕಾಲ್ ಪಾಸ್‌ಪೋರ್ಟ್‌ಗೆ ವೆರಿಫಿಕೇಶನ್ ಸರ್ಟಿಫಿಕೇಟಿನ ಅಗತ್ಯವಿದೆಯೇ?
ಇಲ್ಲ, ತತ್ಕಾಲ್ ಪಾಸ್‌ಪೋರ್ಟ್ ಪಡೆಯಲು ನಿಮಗೆ ವೆರಿಫಿಕೇಶನ್ ಸರ್ಟಿಫಿಕೇಟಿನ ಅಗತ್ಯವಿಲ್ಲ.
ತತ್ಕಾಲ್ ನಲ್ಲಿ ಅಪಾಯಿಂಟ್‌ಮೆಂಟ್ ಕೋಟಾ ಎಂದರೇನು?
ತತ್ಕಾಲ್ ಅಪ್ಲಿಕೇಶನ್ ಅಡಿಯಲ್ಲಿ ಎರಡು ರೀತಿಯ ಅಪಾಯಿಂಟ್‌ಮೆಂಟ್ ಕೋಟಾಗಳು ಲಭ್ಯವಿದೆ. ತತ್ಕಾಲ್ ಅರ್ಜಿದಾರರಾಗಿ, ನೀವು ಆರಂಭಿಕ ಅಪಾಯಿಂಟ್‌ಮೆಂಟ್ ಅನ್ನು ನಿಗದಿಪಡಿಸಲು ಸಾಧ್ಯವಾಗದಿದ್ದಲ್ಲಿ ನೀವು ಸಾಮಾನ್ಯ ಕೋಟಾದ ಅಡಿಯಲ್ಲಿ ಬುಕ್ ಮಾಡಬಹುದು.
ತತ್ಕಾಲ್ ಪಾಸ್‌ಪೋರ್ಟ್ ಶುಲ್ಕವನ್ನು ನಿರ್ಧರಿಸಲು ಯಾವುದಾದರೂ ಆನ್‌ಲೈನ್ ಕ್ಯಾಲ್ಕುಲೇಟರ್ ಇದೆಯೇ?
ಹೌದು, ಭಾರತೀಯ ಪಾಸ್‌ಪೋರ್ಟ್ ತತ್ಕಾಲ್ ಶುಲ್ಕದ ವಿವರಗಳನ್ನು ತಿಳಿಯಲು ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಫೀ ಕ್ಯಾಲ್ಕುಲೇಟರ್ ಟೂಲ್ ನೀವು ಬಳಸಬಹುದು.