ಪಾಸ್‌ಪೋರ್ಟ್‌ಗಾಗಿ ಆರ್‌ಟಿಐ ಅಪ್ಲಿಕೇಶನ್ ಸಲ್ಲಿಸುವುದು ಹೇಗೆ?
ಮಾಹಿತಿ ಹಕ್ಕು ಕಾಯಿದೆ, 2005 ರ ಪ್ರಕಾರ, ಭಾರತೀಯ ನಾಗರಿಕರು ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ (CPV ವಿಭಾಗ, ವಿದೇಶಾಂಗ ವ್ಯವಹಾರಗಳ ಸಚಿವಾಲಯ) ಲಿಖಿತವಾಗಿ ಅಥವಾ ಆನ್‌ಲೈನ್‌ನಲ್ಲಿ ಇಂಡಿವಿಜುಯಲ್ ರೈಟ್ಸ್ ಟು ನಾಲೆಡ್ಜ್ ಅಡಿಯಲ್ಲಿ ಬರುವ ಮಾಹಿತಿಯನ್ನು ಬಿಡುಗಡೆ ಮಾಡಲು ವಿನಂತಿಸಬಹುದು.
ಅದೇ ರೀತಿಯಲ್ಲಿ, ನಿಮ್ಮ ಪಾಸ್‌ಪೋರ್ಟ್ ಸಮಯಕ್ಕೆ ಸರಿಯಾಗಿ ಅಥವಾ ಇತರ ಪ್ರಮುಖ ಕಾರಣಗಳಿಂದ ದೊರಕದಿದ್ದಲ್ಲಿ ನೀವು ಆರ್‌ಟಿಐ ಅಪ್ಲಿಕೇಶನ್ ಅನ್ನು ಸಲ್ಲಿಸಬಹುದು.
ಪಾಸ್‌ಪೋರ್ಟ್ ಗಾಗಿ ಆರ್‌ಟಿಐ ಅಪ್ಲಿಕೇಶನ್ ಸಲ್ಲಿಸುವುದು ಹೇಗೆ ಎಂದು ಮತ್ತು ಇತರೆ ಸಂಬಂಧಿತ ವಿವರಗಳನ್ನು ಪಡೆಯಲು ಇಲ್ಲಿ ಓದುವುದನ್ನು ಮುಂದುವರಿಸಿ.
ಪಾಸ್‌ಪೋರ್ಟ್‌ಗಾಗಿ ಆರ್‌ಟಿಐ ಅಪ್ಲಿಕೇಶನ್ ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಸಲ್ಲಿಸುವುದು ಹೇಗೆ?
ಪಾಸ್‌ಪೋರ್ಟ್‌ಗಾಗಿ ಆರ್‌ಟಿಐ ಸಲ್ಲಿಸುವುದು ಹೇಗೆ ಎಂಬುದನ್ನು ತಿಳಿಯಲು ಈ ಕೆಳಗಿನ ನಿರ್ದೇಶನಗಳನ್ನು ನೋಡಿ -
ಆಫ್‌ಲೈನ್ ಪ್ರಕ್ರಿಯೆ
ನಿರ್ದಿಷ್ಟ ಸ್ವರೂಪದ ಪ್ರಕಾರ ನೀವು ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಅಪ್ಲಿಕೇಶನ್ ಸಲ್ಲಿಸಬೇಕು. ನಿಮ್ಮ ಹೆಸರು, ವಸತಿ ವಿಳಾಸ, ಸಂಪರ್ಕ ವಿವರಗಳು ಮತ್ತು ಇತರ ಸಂಬಂಧಿತ ವಿವರಗಳನ್ನು ಭರ್ತಿ ಮಾಡಿ.
ಆನ್‌ಲೈನ್ ಪ್ರಕ್ರಿಯೆ
ಆಶ್ಚರ್ಯವಾಗುತ್ತಿದೆಯೇ "ಆನ್‌ಲೈನ್ ಮೂಲಕ ಪಾಸ್‌ಪೋರ್ಟ್‌ಗಾಗಿ ಆರ್‌ಟಿಐ ಸಲ್ಲಿಸುವುದು ಹೇಗೆ"ಎಂದು?.
ಪ್ರಕ್ರಿಯೆ ಇಲ್ಲಿದೆ -
ಹಂತ 1: ಆರ್‌ಟಿಐನ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ.
ಹಂತ 2: ವೆಬ್‌ಸೈಟ್‌ನಲ್ಲಿ 'ವಿನಂತಿ ಸಲ್ಲಿಸಿ' ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 3: 'ಆರ್‌ಟಿಐ ಆನ್‌ಲೈನ್ ಪೋರ್ಟಲ್ ಬಳಕೆಗಾಗಿ ಮಾರ್ಗಸೂಚಿಗಳು' ಪುಟದಲ್ಲಿನ ಚೆಕ್‌ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು 'ಸಲ್ಲಿಸು' ಆಯ್ಕೆಮಾಡಿ.
ಹಂತ 4: ನಂತರ, ಅಪ್ಲಿಕೇಶನ್ ಪಡೆಯಲು ಇಲಾಖೆ ಅಥವಾ ಸಚಿವಾಲಯವನ್ನು ಆಯ್ಕೆಮಾಡಿ.
ಹಂತ 5: ಅರ್ಜಿಯನ್ನು ಸಲ್ಲಿಸಿದ ನಂತರ, ಭವಿಷ್ಯದ ಬಳಕೆಗಾಗಿ ಯೂನಿಕ್ ರೆಫರೆನ್ಸ್ ಸಂಖ್ಯೆಯನ್ನು ಸೇವ್ ಮಾಡಿ.
ಹಂತ 6: ನೀವು ಬಿಪಿಎಲ್ ವರ್ಗದವರಾಗಿಲ್ಲದಿದ್ದರೆ, 'ಅರ್ಜಿದಾರರು ಬಡತನ ರೇಖೆಗಿಂತ ಕೆಳಗಿದ್ದಾರೆಯೇ?' ನಲ್ಲಿ 'ಇಲ್ಲ' ಆಯ್ಕೆಮಾಡಿ.
ಹಂತ 7: ನಿಯಮಗಳ ಪ್ರಕಾರ ₹ 10 ಪಾವತಿಸಿ.
ಹಂತ 8: 3000 ಅಕ್ಷರಗಳವರೆಗಿನ ಆರ್‌ಟಿಐ ರಿಕ್ವೆಸ್ಟ್ ಅಪ್ಲಿಕೇಶನ್ ಅನ್ನು ಹುಡುಕಿ. ಆದಾಗ್ಯೂ, ಪಠ್ಯವು 3000 ಕ್ಕಿಂತ ಹೆಚ್ಚು ಅಕ್ಷರಗಳನ್ನು ಹೊಂದಿದ್ದರೆ, ಅದನ್ನು ಸಪೋರ್ಟಿಂಗ್ ಡಾಕ್ಯುಮೆಂಟ್ ಫೈಲ್ ನಲ್ಲಿ ಹುಡುಕಿ.
ಹಂತ 9: “ಪಾವತಿ ಮಾಡು” ಆಯ್ಕೆಮಾಡಿ.
ಹಂತ 10: ಅಂತಿಮವಾಗಿ, ನಿಮ್ಮ ಪಾವತಿಯನ್ನು ಪೂರ್ಣಗೊಳಿಸಿ.
ಇವೆಲ್ಲವೂ ಪಾಸ್‌ಪೋರ್ಟ್‌ಗಾಗಿ ಆರ್‌ಟಿಐ ಅಪ್ಲಿಕೇಶನ್ ಸಲ್ಲಿಸುವುದರ ಕುರಿತು ಮಾಹಿತಿ.
ಪಾಸ್‌ಪೋರ್ಟ್‌ಗಾಗಿ ಆರ್‌ಟಿಐ ಅಪ್ಲಿಕೇಶನ್ ಸಲ್ಲಿಸಲು ಬೇಕಾಗುವ ಡಾಕ್ಯುಮೆಂಟುಗಳು
ವ್ಯಕ್ತಿಗಳು ಆರ್‌ಟಿಐ ಅಪ್ಲಿಕೇಶನ್ ಗೆ ಅಗತ್ಯವಿರುವ ಕೆಳಗಿನ ಡಾಕ್ಯುಮೆಂಟುಗಳನ್ನು ಸಲ್ಲಿಸಬೇಕಾಗುತ್ತದೆ -
ಬಿಪಿಎಲ್ ವರ್ಗದ ಅಡಿಯಲ್ಲಿ ಬರುವ ಅರ್ಜಿದಾರರು ಅಪ್ಲಿಕೇಶನ್ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಆದಾಗ್ಯೂ, ಅವರು ಅಪ್ಲಿಕೇಶನ್ ಪತ್ರದೊಂದಿಗೆ ಬಿಪಿಎಲ್ ಅಥವಾ ಅಂತ್ಯೋದಯ ಪಡಿತರ ಚೀಟಿಯ ಪ್ರತಿಯನ್ನು ಲಗತ್ತಿಸಬೇಕು. ಅಲ್ಲದೆ, ಅವರು ತಮ್ಮ ಬಿಪಿಎಲ್ ಕಾರ್ಡ್ ಸಂಖ್ಯೆ, ನೀಡಿದ ವರ್ಷ ಮತ್ತು ಪ್ರಾಧಿಕಾರವನ್ನು ನಮೂದಿಸಬೇಕಾಗುತ್ತದೆ.
ಇತರ ಅರ್ಜಿದಾರರಿಗೆ, ಆರ್‌ಟಿಐ ಸಲ್ಲಿಸಲು ಯಾವುದೇ ನಿರ್ದಿಷ್ಟ ಡಾಕ್ಯುಮೆಂಟುಗಳ ಅಗತ್ಯವಿಲ್ಲ. ನಿಮಗೆ ಅಗತ್ಯವಿರುವ ಮಾಹಿತಿಯ ವಿವರಗಳನ್ನು ನಿರ್ದಿಷ್ಟಪಡಿಸುವ ಪ್ರತ್ಯೇಕ ಹಾಳೆಯನ್ನು ನೀವು ಲಗತ್ತಿಸಬಹುದು.
ಇವೆಲ್ಲವೂ ಆರ್‌ಟಿಐ ಅಪ್ಲಿಕೇಶನ್ ಗೆ ಅಗತ್ಯವಿರುವ ಕನಿಷ್ಠ ಡಾಕ್ಯುಮೆಂಟುಗಳು.
ಪಾಸ್‌ಪೋರ್ಟ್‌ನಲ್ಲಿ ಆರ್‌ಟಿಐ ಅಪ್ಲಿಕೇಶನ್ ಸಲ್ಲಿಸಲು ಇರುವ ಶುಲ್ಕ ಎಷ್ಟು?
ವಿಭಾಗ 6 ರ ಉಪವಿಭಾಗ (1) ರ ಅಡಿಯಲ್ಲಿ ಮಾಹಿತಿಯನ್ನು ಪಡೆಯಲು ಬಯಸಿದರೆ, ನೀವು ₹10 ಪಾವತಿಸಬೇಕಾಗುತ್ತದೆ.
ಹೆಚ್ಚುವರಿ ಅಪ್ಲಿಕೇಶನ್ ಶುಲ್ಕಗಳು
ವಿಭಾಗ 7 ರ ಉಪ-ವಿಭಾಗಗಳು (1) ಮತ್ತು (5) ಅಡಿಯಲ್ಲಿ ಮಾಹಿತಿಯನ್ನು ಪಡೆಯಬೇಕಾದರೆ ಹೆಚ್ಚುವರಿ ಶುಲ್ಕಗಳು ಅನ್ವಯವಾಗುತ್ತವೆ. ಅನ್ವಯವಾಗುವ ದರಗಳನ್ನು ತಿಳಿಯಲು ಕೆಳಗಿನ ಪಟ್ಟಿಯನ್ನುನೋಡಿ -
ವಿಭಾಗ 7 ರ ಉಪವಿಭಾಗ (1)
ಪ್ರತಿ ಪುಟವನ್ನು ರಚಿಸಲು ಅಥವಾ A4 ಮತ್ತು A3 ಗಾತ್ರದ ಪೇಪರ್ ನಲ್ಲಿ ನಕಲಿಸಲು ಪಾವಿತಸಬೇಕಾದ ದರ | ₹2 |
---|---|
ಸ್ಯಾಂಪಲ್ ಗಳು ಅಥವಾ ಮಾದರಿಗಳು | ನಿಜವಾದ ಬೆಲೆ |
ದಾಖಲೆಗಳ ಪರಿಶೀಲನೆ | ಮೊದಲ ಗಂಟೆಯಲ್ಲಿ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಅದರ ನಂತರ, ಪ್ರತಿ ಗಂಟೆಗೆ ₹5 ಅನ್ವಯಗೊಳ್ಳುತ್ತದೆ |
ಫ್ಲಾಪಿ ಡಿಸ್ಕ್‌ಗಳಲ್ಲಿ ಮಾಹಿತಿಯನ್ನು ಒದಗಿಸಲು | ಪ್ರತಿ ಫ್ಲಾಪಿ ಡಿಸ್ಕ್ ಗೆ ₹50 |
---|---|
ಪ್ರಿಂಟ್ ನಲ್ಲಿ ಮಾಹಿತಿಯನ್ನು ಒದಗಿಸಲು | ಪ್ರಕಟಣೆಯಿಂದ ಪ್ರತಿ ಪುಟಕ್ಕೆ ₹2 |
ಆರ್‌ಟಿಐ ಅಪ್ಲಿಕೇಶನ್ ಶುಲ್ಕಕ್ಕಿರುವ ಪಾವತಿ ವಿಧಾನಗಳು ಯಾವುವು?
ಅರ್ಜಿದಾರರಾಗಿ, ನೀವು ಈ ಕೆಳಗಿನ ಯಾವುದೇ ಪಾವತಿ ವಿಧಾನಗಳನ್ನು ಆಯ್ಕೆ ಮಾಡಬಹುದು -
ಆಫ್‌ಲೈನ್
ಬರವಣಿಗೆಯ ಮೂಲಕ ಆರ್‌ಟಿಐ ಅಪ್ಲಿಕೇಶನ್ ಅನ್ನು ಸಲ್ಲಿಸುತ್ತಿದ್ದರೆ, ನಿಮಗಿರುವ ಪಾವತಿ ವಿಧಾನಗಳು:
ಕ್ಯಾಶ್
ಡಿಮ್ಯಾಂಡ್ ಡ್ರಾಫ್ಟ್
ಬ್ಯಾಂಕಿನ ಚೆಕ್
ಭಾರತೀಯ ಪೋಸ್ಟಲ್ ಆರ್ಡರ್
ಆನ್‌ಲೈನ್
ಆನ್‌ಲೈನ್ ಅಪ್ಲಿಕೇಶನ್‌ನಲ್ಲಿ, ನೀವು ಈ ಮೂಲಕ ಪಾವತಿಸಬಹುದು -
ಇಂಟರ್ನೆಟ್ ಬ್ಯಾಂಕಿಂಗ್ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇತರ ಸಂಬಂಧಿತ ಬ್ಯಾಂಕುಗಳು)
ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್
ಅಪ್ಲಿಕೇಶನ್‌ಗೆ ಪ್ರತಿಕ್ರಿಯಿಸಲು ಪಿಐಒ ಎಷ್ಟು ಸಮಯ ತೆಗೆದುಕೊಳ್ಳುತ್ತಾರೆ?
ಆರ್‌ಟಿಐ ಕಾಯಿದೆಯು “ಅರ್ಜಿದಾರರು 30 ದಿನಗಳಲ್ಲಿ ಮಾಹಿತಿಯನ್ನು ಪಡೆಯುತ್ತಾರೆ” ಎಂದು ಖಾತರಿಪಡಿಸುತ್ತದೆ. ನಿಗದಿತ ದಿನಾಂಕದೊಳಗೆ ನೀವು ಬಯಸಿದ ಮಾಹಿತಿಯನ್ನು (ಉಪ-ವಿಭಾಗ (1) ಅಥವಾ ವಿಭಾಗ 7 ರ ಷರತ್ತು 3 (ಎ) ಪ್ರಕಾರ) ನೀವು ಪಡೆಯದಿದ್ದರೆ ಅಥವಾ ಪಿಐಓನ ನಿರ್ಧಾರದಿಂದ ತೃಪ್ತರಾಗದಿದ್ದರೆ, ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿಯನ್ನು ಸಲ್ಲಿಸಬಹುದು.
ಪಿಎಸ್ ಪಿ ವಿಭಾಗದಲ್ಲಿನ ಸಿಪಿಐಓಗಳು ಅಥವಾ ಮೊದಲ ಮೇಲ್ಮನವಿ ಪ್ರಾಧಿಕಾರ (ಎಫ್ಎಎ) ಕುರಿತು ವಿವರಗಳು
ಅರ್ಜಿದಾರರಾಗಿ, ನೀವು ನಿಮ್ಮ ಅಪ್ಲಿಕೇಶನ್ ಅನ್ನು ಈ ಕೆಳಗಿನ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಲಿಖಿತವಾಗಿ ಸಲ್ಲಿಸಬೇಕು. ಕೇಂದ್ರ ಸಾರ್ವಜನಿಕ ಅಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರದ ಕೆಲವು ಹೆಸರುಗಳು ಮತ್ತು ಇತರ ಪ್ರಮುಖ ಮಾಹಿತಿ ಕೆಳಗಿನ ಕೋಷ್ಠಕದಲ್ಲಿದೆ.
ಗಮನಿಸಿ:
ಪಿಎಸ್ ಪಿ ವಿಭಾಗದಲ್ಲಿ ಸಿಪಿಐಓಗಳ ಬಗ್ಗೆ ವಿವರಗಳು
ಸಿಪಿಐಓ (ಹೆಸರು ಮತ್ತು ಹುದ್ದೆ) | ದೂರವಾಣಿ ಸಂಖ್ಯೆ | ಇಮೇಲ್ ಐಡಿ |
ಶ್ರೀ ಎ.ಎಸ್. ತಾಖಿ - ನಿರ್ದೇಶಕರು (ಪಿಎಸ್ ಪಿ-ಸಮನ್ವಯ ಮತ್ತು ವಿಜಿಲೆನ್ಸ್) | 23382658 | dirpspc@mea.gov.in |
ಶ್ರೀ ಟಿ. ಪಿ.ಎಸ್ ರಾವತ್ - ಉಪ ಕಾರ್ಯದರ್ಶಿ (ಪಿಎಸ್ ಪಿ -I) | 23070364 | uspsp1@mea.gov.in |
ಶ್ರೀ ಕೆ.ಕೆ ಮೀನಾ - ಅಧೀನ ಕಾರ್ಯದರ್ಶಿ (Ops.) | 23386786 | dpo.ops@mea.gov.in |
ಶ್ರೀ ಸಾಹಿಬ್ ಸಿಂಗ್ - (ಪಿಎಸ್ ಪಿ-ನಿರ್ವಾಹಕರು ಮತ್ತು ಕೇಡರ್) | 23073259 | dpopsp4@mea.gov.in |
ಮೊದಲ ಮೇಲ್ಮನವಿ ಪ್ರಾಧಿಕಾರ (ಹೆಸರು ಮತ್ತು ಹುದ್ದೆ) | ದೂರವಾಣಿ ಸಂಖ್ಯೆ | ಇಮೇಲ್ ಐಡಿ |
ಶ್ರೀ ಪ್ರಭಾತ್ ಕುಮಾರ್ - ಎಎಸ್(ಪಿಎಸ್ ಪಿ)ಮತ್ತು ಸಿಪಿಒ | 23387013 / 23384536 | jscpo@mea.gov.in |
ಶ್ರೀ ಅಶೋಕ್ ಕುಮಾರ್ ಸಿಂಗ್ - OSD(PSP) | 23386064 | dirpsp@mea.gov.in |
ಪಾಸ್‌ಪೋರ್ಟ್ ಕಛೇರಿಗಳಲ್ಲಿ ಸಿಪಿಐಒಗಳು ಮತ್ತು ಮೊದಲ ಮೇಲ್ಮನವಿ ಪ್ರಾಧಿಕಾರದ ಬಗೆಗಿನ ವಿವರಗಳು
ಪಾಸ್‌ಪೋರ್ಟ್ ಕಛೇರಿಗಳಲ್ಲಿನ ಸಿಪಿಐಒಗಳು ಮತ್ತು ಮೊದಲ ಮೇಲ್ಮನವಿ ಪ್ರಾಧಿಕಾರದ ಕುರಿತು ಕೆಲವು ಪ್ರಮುಖ ಮಾಹಿತಿಗಳು -
ಪಾಸ್‌ಪೋರ್ಟ್ ಕಛೇರಿಗಳಲ್ಲಿ ಸಿಪಿಐಒಗಳ ಬಗೆಗಿನ ವಿವರಗಳು
ಸಾರ್ವಜನಿಕ ಮಾಹಿತಿ ಅಧಿಕಾರಿ (ಹೆಸರು ಮತ್ತು ಹುದ್ದೆ) | ದೂರವಾಣಿ ಸಂಖ್ಯೆ | ಇಮೇಲ್ ಐಡಿ |
ಶ್ರೀ ಬಾಲರಾಜ್ - ಹಿರಿಯ ಅಧೀಕ್ಷಕರು | 0183-2506251, 2506252, 0183-2502104/08 | rpo.amritsar@mea.gov.in |
ಶ್ರೀ ಸಿ.ವಿ. ರವೀಂದ್ರನ್ - ಹಿರಿಯ ಅಧೀಕ್ಷಕರು | 079-26309103, 079-26309104, 079-26309118 | rpo.ahmedabad@mea.gov.in |
ಶ್ರೀ ಅತುಲ್ ಕುಮಾರ್ ಸಕ್ಸೇನಾ - ಹಿರಿಯ ಅಧೀಕ್ಷಕರು | 0581-2311874, 0581-2301027, 0581-2302031 | rpo.bareilly@mea.gov.in |
ಶ್ರೀಮತಿ. ಎವಿಲಿನ್ ಡೇನಿಯಲ್ - ಉಪ ಪಾಸ್‌ಪೋರ್ಟ್ ಅಧಿಕಾರಿ | 080-25706146, 25706100, 25706101, 25706102, 25706103 | rpo.bangalore@mea.gov.in |
ಶ್ರೀ ದೇವಬ್ರತ ಭೂಯ್ಯ - ಸಹಾಯಕ ಪಾಸ್‌ಪೋರ್ಟ್ ಅಧಿಕಾರಿ | 0674-2564470 / 2563855, 0674-2564460 | rpo.bbsr@mea.gov.in |
ಮೊದಲ ಮೇಲ್ಮನವಿ ಪ್ರಾಧಿಕಾರ | ಹುದ್ದೆ |
---|---|
ಶ್ರೀ ಮುನಿಶ್ ಕಪೂರ್ | ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ (ಅಮೃತಸರ -143 001). |
ಶ್ರೀಮತಿ. ಸೋನಿಯಾ ಯಾದವ್ | ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ (ಅಹಮದಾಬಾದ್ -380 006) |
ಮೊಹಮ್ಮದ್ ನಸೀಮ್ | ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ (ಬರೇಲಿ -243 122) |
ಶ್ರೀ. ಕೃಷ್ಣ ಕೆ. | ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ (ಬೆಂಗಳೂರು -560 095) |
ಶ್ರೀ ಸುಧನ್ಸು ಶೇಖರ್ ಮಿಶ್ರಾ | ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ (ಭುವನೇಶ್ವರ -751 012) |
ಪಾಸ್‌ಪೋರ್ಟ್‌ಗಾಗಿ ಆರ್‌ಟಿಐ ಅಪ್ಲಿಕೇಶನ್ ನಿಮ್ಮ ಪಾಸ್‌ಪೋರ್ಟ್‌ಗೆ ಸಂಬಂಧಿಸಿದಂತೆ ನೀವು ಎದುರಿಸುವ ಯಾವುದೇ ಕುಂದುಕೊರತೆಗಳನ್ನು ಪರಿಹರಿಸುವ ಒಂದು ಪ್ರಮುಖ ಹಂತವಾಗಿದೆ. ಹೆಚ್ಚುವರಿಯಾಗಿ, ಆನ್‌ಲೈನ್ ಅಪ್ಲಿಕೇಶನ್‌ಗೆ ಸುಲಭವಾಗಿ ಅಪ್ಲಿಕೇಶನ್ ಸಲ್ಲಿಸಬಹುದಾಗಿದೆ. ಪಾಸ್‌ಪೋರ್ಟ್‌ಗಾಗಿ ಆರ್‌ಟಿಐ ಅಪ್ಲಿಕೇಶನ್ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅಪ್ಲಿಕೇಶನ್ ಪ್ರಕ್ರಿಯೆ ಸುಗಮಗೊಳ್ಳಲು ಅಗತ್ಯವಿರುವ ಡಾಕ್ಯುಮೆಂಟುಗಳ ಬಗ್ಗೆ ನೆನಪಿಟ್ಟುಕೊಳ್ಳಿ.
ಪಾಸ್‌ಪೋರ್ಟ್‌ಗಾಗಿ ಆರ್‌ಟಿಐ ಅಪ್ಲಿಕೇಶನ್ ಕುರಿತ ಪದೇ ಪದೇ ಕೇಳಲಾದ ಪ್ರಶ್ನೆಗಳು
ನಿಮ್ಮ ಆರ್‌ಟಿಐ ಅಪ್ಲಿಕೇಶನ್ ಸ್ಟೇಟಸ್ ಅನ್ನು ನೀವು ಟ್ರ್ಯಾಕ್ ಮಾಡಬಹುದೇ?
ಹೌದು.ಪಾಸ್‌ಪೋರ್ಟ್ ಸೇವಾ ಅಧಿಕೃತ ವೆಬ್‌ಸೈಟ್‌ನಲ್ಲಿ ನಿಮ್ಮ ಆರ್‌ಟಿಐ ಅರ್ಜಿಯ ಸ್ಟೇಟಸ್ ಅನ್ನು ನೀವು ಟ್ರ್ಯಾಕ್ ಮಾಡಬಹುದು.
ನಿಮ್ಮ ಆರ್‌ಟಿಐ ರೆಫರೆನ್ಸ್ ಸಂಖ್ಯೆಯನ್ನು ನಮೂದಿಸಿ ಮತ್ತು ಅಪ್ಲಿಕೇಶನ್ ಸ್ಟೇಟಸ್ ಅನ್ನು ಪರಿಶೀಲಿಸಲು "ಟ್ರ್ಯಾಕ್" ಆಯ್ಕೆಮಾಡಿ.
ಆರ್‌ಟಿಐಯಲ್ಲಿನ ಮೊದಲ ಮೇಲ್ಮನವಿಗಾಗಿ ನೀವು ಪಾವತಿಸಬೇಕೇ?
ಇಲ್ಲ. ಆರ್‌ಟಿಐ ಯಲ್ಲಿನ ಮೊದಲ ಮೇಲ್ಮನವಿಗಾಗಿ ನೀವು ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ.