ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಆನ್‌ಲೈನ್ ಮತ್ತು ಆಫ್‌ಲೈನ್ ನಲ್ಲಿ ಪಾಸ್‌ಪೋರ್ಟ್ ಸ್ಟೇಟಸ್ ಅನ್ನು ಪರಿಶೀಲಿಸುವುದು ಹೇಗೆ

ಹೊಸ ಪಾಸ್‌ಪೋರ್ಟ್‌ಗೆ ನೀವು ಅರ್ಜಿ ಸಲ್ಲಿಸಿದ್ದೀರಾ?

ಹೌದು ಎಂದಾದರೆ, ನಿಮ್ಮ ಪಾಸ್‌ಪೋರ್ಟ್ ಅಪ್ಲಿಕೇಶನ್ ಸ್ಟೇಟಸ್ ಅನ್ನು ನೀವು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಪರಿಶೀಲಿಸಿಕೊಳ್ಳಬಹುದು. ಇದಲ್ಲದೆ, ನೀವು mPassport ಸೇವಾ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡು, ವೆಬ್‌ಸೈಟ್‌ಗೆ ಲಾಗ್ ಇನ್ ಆಗದೆಯೇ ಪಾಸ್‌ಪೋರ್ಟ್ ಸ್ಟೇಟಸ್ ಅನ್ನು ಪರಿಶೀಲಿಸಬಹುದು. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳ ಬಯಸಿದ್ದಲ್ಲಿ, ಓದುವುದನ್ನು ಮುಂದುವರಿಸಿ.

ಪಾಸ್‌ಪೋರ್ಟ್‌ ಅಪ್ಲಿಕೇಶನ್ ಸ್ಟೇಟಸ್ ಅನ್ನು ಪರಿಶೀಲಿಸುವುದು ಹೇಗೆ?

ಪಾಸ್‌ಪೋರ್ಟ್ ಅಪ್ಲಿಕೇಶನ್ ಸಂಖ್ಯೆಯನ್ನು ಪರಿಶೀಲಿಸಲು ನಿಮಗೆ ಬೇಕಾಗಿರುವುದು - 

  • ನಿಮ್ಮ ಪಾಸ್‌ಪೋರ್ಟ್‌ನ ಫೈಲ್ ಸಂಖ್ಯೆ (ಪಾಸ್‌ಪೋರ್ಟ್ ಅಪ್ಲಿಕೇಶನ್ ಸಲ್ಲಿಸಿದ ನಂತರ ದೊರೆಯುವ 15-ಅಂಕಿಯ ಸಂಖ್ಯೆ).

  • ನಿಮ್ಮ ಹುಟ್ಟಿದ ದಿನಾಂಕ.

 

ಈಗ, ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಪಾಸ್‌ಪೋರ್ಟ್ ಅಪ್ಲಿಕೇಶನ್ ಸ್ಟೇಟಸ್ ಅನ್ನು ಪರಿಶೀಲಿಸುವುದು ಹೇಗೆ ಎಂಬುದನ್ನು ನೋಡೋಣ: 

ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡುವುದು ಹೇಗೆ?

"ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್ ಸ್ಟೇಟಸ್ ಅನ್ನು ಪರಿಶೀಲಿಸುವುದು ಹೇಗೆ?" ಎಂಬುದರ ಕುರಿತು ನೀವು ಇಂಟರ್ನೆಟ್ ನಲ್ಲಿ ಹುಡುಕಿದ್ದೀರಾ?   ಹಾಗಾದರೆ ನಿಮ್ಮ ಹುಡುಕಾಟವನ್ನು ಕೊನೆಗೊಳಿಸಿ, ಹಂತ ಹಂತವಾಗಿ ಈ ಸರಳ ಕ್ರಮಗಳನ್ನು ಅನುಸರಿಸಿ:

  • ಹಂತ 1: "ಪಾಸ್‌ಪೋರ್ಟ್ ಸೇವಾ" ದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, "ಟ್ರ್ಯಾಕ್ ಅಪ್ಲಿಕೇಶನ್ ಸ್ಟೇಟಸ್" ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

  • ಹಂತ 2: ಪುಟವು "ಅಪ್ಲಿಕೇಶನ್ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡಿ" ಗೆ ಮರುನಿರ್ದೇಶಿಸುತ್ತದೆ. 

  • ಹಂತ 3: ಇಲ್ಲಿ, ನಿಮ್ಮ ಅಪ್ಲಿಕೇಶನ್ ಪ್ರಕಾರವನ್ನು ಆಯ್ಕೆಮಾಡಿ. ಅಲ್ಲದೆ, ನಿಮ್ಮ ಜನ್ಮ ದಿನಾಂಕ ಮತ್ತು 15-ಅಂಕಿಯ ಫೈಲ್ ಸಂಖ್ಯೆಯನ್ನು ನಮೂದಿಸಿ. "ಟ್ರ್ಯಾಕ್ ಸ್ಟೇಟಸ್" ಮೇಲೆ ಕ್ಲಿಕ್ ಮಾಡಿ.

ಮುಂದಿನ ಪುಟವು ನಿಮ್ಮ ಪ್ರಸ್ತುತ ಪಾಸ್‌ಪೋರ್ಟ್ ಅಪ್ಲಿಕೇಶನ್ ಸ್ಟೇಟಸ್ ಅನ್ನು ಪ್ರದರ್ಶಿಸುತ್ತದೆ.

ಆಫ್‌ಲೈನ್‌ನಲ್ಲಿ ಪಾಸ್‌ಪೋರ್ಟ್ ಸ್ಥಿತಿಯನ್ನು ಟ್ರ್ಯಾಕ್ ಮಾಡುವುದು ಹೇಗೆ?

ಕೆಳಗಿನ ವಿಧಾನಗಳ ಮೂಲಕ ಪಾಸ್‌ಪೋರ್ಟ್ ಅಪ್ಲಿಕೇಶನ್ ಸ್ಟೇಟಸ್ ಆಫ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಿ:

  • SMS: ನಿಮ್ಮ ಫೋನ್‌ನಲ್ಲಿಯೇ ನಿಮ್ಮ ಪಾಸ್‌ಪೋರ್ಟ್ ಅಪ್ಲಿಕೇಶನ್ ಸ್ಟೇಟಸ್ ಕುರಿತು ನೀವು ಅಪ್ಡೇಡ್ ಗಳನ್ನು ಪಡೆಯಬಹುದು. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 9704100100 ಗೆ "STATUS FILE NUMBER" ಅನ್ನು ಕಳುಹಿಸಿ. ಅಪ್ಲಿಕೇಶನ್ ಸಲ್ಲಿಸುವ ಸಮಯದಲ್ಲಿ ಈ ಪೇಯ್ಡ್ SMS ಸೇವೆಯನ್ನು ನೀವು ಆರಿಸಿಕೊಳ್ಳಬಹುದು.

  • ನ್ಯಾಷನಲ್ ಕಾಲ್ ಸೆಂಟರ್: ನೀವು ನ್ಯಾಷನಲ್ ಕಾಲ್ ಸೆಂಟರ್ ನ ಟೋಲ್-ಫ್ರೀ ಸಂಖ್ಯೆ 1800-258-1800 ಗೆ ಕರೆ ಮಾಡಬಹುದು. ನಾಗರಿಕ ಸೇವಾ ಕಾರ್ಯನಿರ್ವಾಹಕರು ಬೆಳಿಗ್ಗೆ 8:00 ರಿಂದ ರಾತ್ರಿ 10:00 ರವರೆಗೆ ಲಭ್ಯವಿರುತ್ತಾರೆ. 24/7 ಸ್ವಯಂಚಾಲಿತ ಸಂವಾದಾತ್ಮಕ ಧ್ವನಿ ಪ್ರತಿಕ್ರಿಯೆಯು ಸಹ ಲಭ್ಯವಿದೆ. ಆದ್ದರಿಂದ, ಕೆಲಸದ ವೇಳೆಯನ್ನು ಹೊರತುಪಡಿಸಿಯೂ ನಿಮ್ಮ ಪಾಸ್‌ಪೋರ್ಟ್ ಅಪ್ಲಿಕೇಶನ್ ಸ್ಟೇಟಸ್ ಬಗ್ಗೆ ನೀವು ಮಾಹಿತಿಯನ್ನು ಪಡೆಯಬಹುದು. 

ದಯವಿಟ್ಟು ಗಮನಿಸಿ: ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳ ನಿವಾಸಿಗಳು ಈ ಕೆಳಗಿನ ಸಂಪರ್ಕ ವಿವರಗಳ ಮೂಲಕ ಸಂವಹನ ಮಾಡಬಹುದು: 

ಜಮ್ಮು ಕಾಶ್ಮೀರ - 040-66720567(ಪೇಯ್ಡ್)

ಈಶಾನ್ಯ ರಾಜ್ಯಗಳು - 040-66720581(ಪೇಯ್ಡ್)

  • ಸಹಾಯವಾಣಿ: ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ನಿಮ್ಮ ಪಾಸ್‌ಪೋರ್ಟ್‌ನ ಅಪ್ಲಿಕೇಶನ್ ಸ್ಟೇಟಸ್ ಕುರಿತು ಅಪ್ಡೇಡ್ ಗಳನ್ನು ಪಡೆಯಲು ಇಮೇಲ್ ಕಳುಹಿಸಿ.

ಪಾಸ್‌ಪೋರ್ಟ್ ಸೇವಾ ಅಪ್ಲಿಕೇಶನ್ ಬಳಸಿಕೊಂಡು ಪಾಸ್‌ಪೋರ್ಟ್ ಅಪ್ಲಿಕೇಶನ್ ಸ್ಟೇಟಸ್ ಟ್ರ್ಯಾಕ್ ಮಾಡುವುದು ಹೇಗೆ?

mPassport ಸೇವಾ ಅಪ್ಲಿಕೇಶನ್ ಒಂದು ಮೊಬೈಲ್ ಅಪ್ಲಿಕೇಶನ್ ಆಗಿದ್ದು, ಇದರಲ್ಲಿ ಅರ್ಜಿದಾರರು ಪಾಸ್‌ಪೋರ್ಟ್ ಅಪ್ಲಿಕೇಶನ್ ಸ್ಟೇಟಸ್ ಅನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು. ಜೊತೆಗೆ, ನೋಂದಣಿ ಮತ್ತು ಅಪಾಯಿಂಟ್‌ಮೆಂಟ್ ಅನ್ನು ನಿಗದಿಪಡಿಸುವಂತಹ ಇನ್ನಿತರೆ ಸೇವೆಗಳು ಇಲ್ಲಿ ಲಭ್ಯವಿವೆ. Android ಮತ್ತು iOS ಎರಡೂ ಡಿವೈಸುಗಳಲ್ಲಿಯೂ ಈ ಮೊಬೈಲ್ ಅಪ್ಲಿಕೇಶನ್ ಲಭ್ಯವಿದೆ.

ಈ ಅಪ್ಲಿಕೇಶನ್‌ನಲ್ಲಿ ಪಾಸ್‌ಪೋರ್ಟ್ ಸ್ಟೇಟಸ್ ಅನ್ನು ಪರಿಶೀಲಿಸುವ ಸರಳ ಮಾರ್ಗದರ್ಶನ ಇಲ್ಲಿದೆ:

  • ಹಂತ 1: ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್ ನಿಂದ mPassport ಸೇವಾ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ. 

  • ಹಂತ 2: ನಿಮ್ಮ ಹೆಸರು, ಇಮೇಲ್ ವಿಳಾಸ ಮತ್ತು ಜನ್ಮ ದಿನಾಂಕದೊಂದಿಗೆ ನೋಂದಾಯಿಸಿಕೊಳ್ಳಿ.

  • ಹಂತ 3: "ಸ್ಟೇಟಸ್ ಟ್ರ್ಯಾಕರ್" ಆಯ್ಕೆಮಾಡಿ. ಪಾಸ್‌ಪೋರ್ಟ್ ಅಪ್ಲಿಕೇಶನ್ ಸ್ಟೇಟಸ್ ಪರಿಶೀಲಿಸಲು 15-ಅಂಕಿಯ ಫೈಲ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.

ಪಾಸ್‌ಪೋರ್ಟ್ ರವಾನೆ ಮತ್ತು ಡೆಲಿವರಿ ಸ್ಟೇಟಸ್ ಟ್ರ್ಯಾಕ್ ಮಾಡುವುದು ಹೇಗೆ?

ಪಾಸ್‌ಪೋರ್ಟ್ ಸ್ಟೇಟಸ್ ಟ್ರ್ಯಾಕ್ ಮಾಡುವುದು ಹೇಗೆ ಎಂದು ತಿಳಿದುಕೊಂಡ ನಂತರ, ಅದರ ಡೆಲಿವರಿ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ.

ಭಾರತೀಯ ಸ್ಪೀಡ್ ಪೋಸ್ಟ್ ಸಾಮಾನ್ಯವಾಗಿ ಅರ್ಜಿದಾರರ ಪಾಸ್‌ಪೋರ್ಟ್ ಅನ್ನು ಅವರ ಪ್ರಸ್ತುತ ವಿಳಾಸಕ್ಕೆ ರವಾನಿಸುತ್ತದೆ (ಪಾಸ್‌ಪೋರ್ಟ್ ಅಪ್ಲಿಕೇಶನ್ ಫಾರ್ಮ್ ನಲ್ಲಿ ಉಲ್ಲೇಖಿಸಿದಂತೆ). ಸ್ಪೀಡ್ ಪೋಸ್ಟ್-ಟ್ರ್ಯಾಕಿಂಗ್ ಯುಟಿಲಿಟಿಯನ್ನು ಬಳಸಿಕೊಂಡು ನಿಮ್ಮ ಪಾಸ್‌ಪೋರ್ಟ್ ಡೆಲಿವರಿ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡಿ.

ಸಾಮಾನ್ಯವಾಗಿ, ಆನ್‌ಲೈನ್ ಡೆಲಿವರಿ ಸ್ಟೇಟಸ್ ನೈಜ-ಸಮಯದ ಡೆಲಿವರಿ ಸ್ಟೇಟಸಿಗಿಂತ ಭಿನ್ನವಾಗಿರುತ್ತದೆ. ಆದ್ದರಿಂದ, ಈ ಬಗ್ಗೆ ನಿಮ್ಮ ಹತ್ತಿರದ ಸ್ಪೀಡ್ ಪೋಸ್ಟ್ ಕೇಂದ್ರವನ್ನು ಸಂಪರ್ಕಿಸುವುದು ಒಳಿತು. ಸ್ಪೀಡ್ ಪೋಸ್ಟ್ ಕೇಂದ್ರದ ಸಿಬ್ಬಂದಿ ನಿಮ್ಮ ವಿಳಾಸವನ್ನು ಪತ್ತೆಹಚ್ಚಲು ಸಾಧ್ಯವಾಗದಿದ್ದರೆ, ಅದನ್ನು ಕಳುಹಿಸಿದವರಿಗೇ ಹಿಂತಿರುಗಿಸಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಹೆಚ್ಚಿನ ಸಹಾಯಕ್ಕಾಗಿ ದಯವಿಟ್ಟು ನಿಮ್ಮ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯನ್ನು ಸಂಪರ್ಕಿಸಿ.

ನಿಮ್ಮ ಪಾಸ್‌ಪೋರ್ಟ್‌ನ ರವಾನೆ ಮತ್ತು ಡೆಲಿವರಿ ಸ್ಟೇಟಸ್ ಅನ್ನು ಪರಿಶೀಲಿಸಲು ಈ ಹಂತಗಳನ್ನು ಅನುಸರಿಸಿ -

  • ಹಂತ 1: ಪಾಸ್‌ಪೋರ್ಟ್ ಸೇವಾ ಅಧಿಕೃತ ವೆಬ್‌ಸೈಟ್‌ನಿಂದ ಟ್ರ್ಯಾಕಿಂಗ್ ಅಪ್ಲಿಕೇಶನ್ ಸ್ಥಿತಿಯಿಂದ 13-ಅಂಕಿಯ ಟ್ರ್ಯಾಕಿಂಗ್ ಸಂಖ್ಯೆಯನ್ನು ಸಂಗ್ರಹಿಸಿ.

  • ಹಂತ 2: ಇಂಡಿಯಾ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

  • ಹಂತ 3: ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಟೂಲ್ ಮೇಲೆ ಕ್ಲಿಕ್ ಮಾಡಿ ಮತ್ತು "ಟ್ರ್ಯಾಕ್ ಕನಸೈನ್ಮೆಟ್" ಗೆ ನ್ಯಾವಿಗೇಟ್ ಮಾಡಿ. "ಕನ್ಸೈನ್ಮೆಟ್ ಸಂಖ್ಯೆ" ವಿಭಾಗದಲ್ಲಿ 13-ಅಂಕಿಯ ಟ್ರ್ಯಾಕಿಂಗ್ ಸಂಖ್ಯೆಯನ್ನು ನಮೂದಿಸಿ. ನಂತರ, "ಹುಡುಕಿ" ಕ್ಲಿಕ್ ಮಾಡಿ.

ನೀವು ಯಾವುದೇ ಡೆಲಿವರಿ ಟ್ರ್ಯಾಕಿಂಗ್ ಡೇಟಾವನ್ನು ಗಮನಿಸದಿದ್ದರೆ, ನಿಮ್ಮ ಪಾಸ್‌ಪೋರ್ಟ್ ಇನ್ನು ರವಾನೆಗೊಂಡಿಲ್ಲ ಎಂದರ್ಥ.

ಭಾರತೀಯ ಅಂಚೆ SMS ಸೇವೆ

ಭಾರತೀಯ ಅಂಚೆಯ SMS ಸೇವೆಯ ಮೂಲಕ ನಿಮ್ಮ ಪಾಸ್‌ಪೋರ್ಟ್‌ನ ಡೆಲಿವರಿ ಸ್ಟೇಟಸ್ ಅನ್ನು ಸಹ ನೀವು ಟ್ರ್ಯಾಕ್ ಮಾಡಬಹುದು. ನಿಮ್ಮ 13-ಅಂಕಿಯ ಟ್ರ್ಯಾಕಿಂಗ್ ಸಂಖ್ಯೆಯನ್ನು POST TRACK <ನಿಮ್ಮ 13-ಅಂಕಿಯ ಟ್ರ್ಯಾಕಿಂಗ್ ಸಂಖ್ಯೆ> ರೂಪದಲ್ಲಿ 166 ಅಥವಾ 51969 ಗೆ ಕಳುಹಿಸಿ.

ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಿಂದ ಪಾಸ್‌ಪೋರ್ಟ್ ಪಡೆದುಕೊಳ್ಳಿ.

ತುರ್ತು ಸಂದರ್ಭವಿದ್ದಲ್ಲಿ, ನೀವು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಿಂದ ಪಾಸ್‌ಪೋರ್ಟ್ ಅನ್ನು ಸಂಗ್ರಹಿಸಬಹುದು. ನೆನಪಿಡಿ ಪಾಸ್‌ಪೋರ್ಟ್ ಅನ್ನು ತುರ್ತಾಗಿ ಸಂಗ್ರಹಿಸುವ ಕಾರಣವನ್ನು ತಿಳಿಸುವ ಅಪ್ಲಿಕೇಶನ್ ಫಾರ್ಮ್ ಅನ್ನು ನೀವು ಭರ್ತಿ ಮಾಡಬೇಕಾಗುತ್ತದೆ.  ಆದರೆ ಕೆಲವು ಸಂದರ್ಭಗಳಲ್ಲಿ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿಗಳು ತಮ್ಮ ಕಚೇರಿಯಿಂದ ವೈಯಕ್ತಿಕವಾಗಿ ಪಾಸ್‌ಪೋರ್ಟ್ ಸಂಗ್ರಹಿಸಲು ನಿಮ್ಮ ಅಪ್ಲಿಕೇಶನ್ ಸ್ವೀಕರಿಸಬಹುದು ಅಥವಾ ತಿರಸ್ಕರಿಸಬಹುದು.

ಪಾಸ್‌ಪೋರ್ಟ್ ಗುರುತಿನ ಮತ್ತು ವಯಸ್ಸಿನ ಪುರಾವೆಯಾಗಿ ಕಾರ್ಯನಿರ್ವಹಿಸುವ ಒಂದು ಅತ್ಯಗತ್ಯ ಡಾಕ್ಯುಮೆಂಟ್ ಆಗಿದೆ. ಆದ್ದರಿಂದ ಆದಷ್ಟು ಬೇಗ ಅಪ್ಲಿಕೇಶನ್ ಸಲ್ಲಿಸುವುದು ಮುಖ್ಯ. ಇದಲ್ಲದೆ, ನೀವು ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್ ಅಪ್ಲಿಕೇಶನ್ ಸ್ಟೇಟಸ್ ಸಹ ಟ್ರ್ಯಾಕ್ ಮಾಡಬಹುದು. ಈ ಕಾರ್ಯಗಳು ಸುಗಮವಾಗಿ ನಡೆಯಲು ನೀವು ಪಾಸ್‌ಪೋರ್ಟ್ ಸ್ಟೇಟಸ್ ಪರಿಶೀಲಿಸುವಾಗ ಈ ಅಂಶಗಳನ್ನು ನೆನಪಿನಲ್ಲಿಡಿ.

ಪಾಸ್‌ಪೋರ್ಟ್ ಸ್ಟೇಟಸ್ ಪರಿಶೀಲಿಸುವ ಕುರಿತ ಪದೇ ಪದೇ ಕೇಳಲಾದ ಪ್ರಶ್ನೆಗಳು

ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಿಂದ ನೀವು ವೈಯಕ್ತಿಕವಾಗಿ ಪಾಸ್‌ಪೋರ್ಟ್ ಸಂಗ್ರಹಿಸಬಹುದೇ?

ಇಲ್ಲ. ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಿಂದ ಪಾಸ್‌ಪೋರ್ಟ್ ಸಂಗ್ರಹಿಸಲು ನಿಮಗೆ ಅನುಮತಿ ಇರುವುದಿಲ್ಲ.

ಪಾಸ್‌ಪೋರ್ಟ್ ಅಪ್ಲಿಕೇಶನ್ ಸ್ಟೇಟಸ್ ಪರಿಶೀಲಿಸಲು ನ್ಯಾಷನಲ್ ಕಾಲ್ ಸೆಂಟರ್ ಅನ್ನು ಸಂಪರ್ಕಿಸುವಾಗ ನೀವು ಯಾವ ಮಾಹಿತಿಯನ್ನು ಒದಗಿಸಬೇಕು?

ಪಾಸ್‌ಪೋರ್ಟ್ ಅಪ್ಲಿಕೇಶನ್ ಸ್ಟೇಟಸ್ ಪರಿಶೀಲಿಸಲು ನೀವು ರಾಷ್ಟ್ರೀಯ ಕಾಲ್ ಸೆಂಟರ್ ಕಾರ್ಯನಿರ್ವಾಹಕರಿಗೆ ಫೈಲ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಒದಗಿಸಬೇಕು.

ಪಾಸ್‌ಪೋರ್ಟ್‌ನ ಸ್ಟೇಟಸ್ ಪರಿಶೀಲಿಸಲು ನಮ್ಮ ಮೊಬೈಲ್ ಸಂಖ್ಯೆಯನ್ನು ಹೇಗೆ ಬಳಸಬಹುದು?

ಪಾಸ್‌ಪೋರ್ಟ್‌ನ ಸ್ಟೇಟಸ್ ಕಂಡುಹಿಡಿಯಲು 9704100100 ಕ್ಕೆ SMS ಕಳುಹಿಸುವ ಮೂಲಕ  ನಿಮ್ಮ  ಮೊಬೈಲ್ ಸಂಖ್ಯೆಯನ್ನು ಬಳಸಬಹುದಾಗಿದೆ. SMS ಕಳುಹಿಸುವಾಗ, ಪಾಸ್‌ಪೋರ್ಟ್ ಸೇವಾ ಕೇಂದ್ರ ಅಥವಾ ಪಾಸ್‌ಪೋರ್ಟ್ ಶಿಬಿರದಲ್ಲಿ ಪಾಸ್‌ಪೋರ್ಟ್ ಅಪ್ಲಿಕೇಶನ್ ಯಶಸ್ವಿಯಾಗಿ ಸಲ್ಲಿಸಿದ ನಂತರ ರಚಿಸಲಾದ 15-ಅಂಕಿಯ ಆಲ್ಫಾನ್ಯೂಮರಿಕ್ ಫೈಲ್ ಸಂಖ್ಯೆಯನ್ನು ನೀವು ನಮೂದಿಸಬೇಕಾಗುತ್ತದೆ.

ನ್ಯಾಷನಲ್ ಕಾಲ್ ಸೆಂಟರ್ 24/7 ಗ್ರಾಹಕರಿಗೆ ಸೇವೆಯನ್ನು ನೀಡುತ್ತದೆಯೇ?

ಬಳಕೆದಾರರು ವಾರದ ಪ್ರತಿ ದಿನ ಬೆಳಗ್ಗೆ 8 ರಿಂದ ರಾತ್ರಿ 10 ರವರೆಗೆ ಈ ಸೇವೆಯನ್ನು ಪಡೆಯಬಹುದಾಗಿದೆ. ಕೆಲವೊಮ್ಮೆ ಗ್ರಾಹಕರು ತಮ್ಮ ಪ್ರಶ್ನೆಗಳಿಗೆ ಪರಿಹಾರಗಳನ್ನು ಹುಡುಕಲು ಸ್ವಯಂಚಾಲಿತ IVRS ಅನ್ನು ಬಳಸಬಹುದು.