ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಪಾಸ್‌ಪೋರ್ಟ್‌ ಗಾಗಿ ಪೋಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (ಪಿಸಿಸಿ) ಗೆ ಅರ್ಜಿ ಸಲ್ಲಿಸುವುದು ಹೇಗೆ?

ನೀವು ವಿದೇಶ ಪ್ರಯಾಣದ ಬಗ್ಗೆ ಅಥವಾ ನೌಕರಿಗಾಗಿ ವಲಸೆ ಹೋಗುವ ಬಗ್ಗೆ ಯೋಚಿಸುತ್ತಿದ್ದೀರಾ?

ಹೌದಾದರೆ, ನಿಮ್ಮ ಉತ್ತಮ ಹಿನ್ನಲೆಯನ್ನು ದೃಢಪಡಿಸಿ ಗೊಂದಲರಹಿತ ಪ್ರಯಾಣವನ್ನು ಮಾಡಲು ನೀವು ಪೋಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಅನ್ನು ಹೊಂದಿರಬೇಕು.

ಅಪ್ಲಿಕೇಶನ್ ನ ಆಧಾರದ ಮೇಲೆ, ಈ ಡಾಕ್ಯುಮೆಂಟ್ ಅನ್ನು ಭಾರತೀಯ ಪೋಲಿಸರಿಂದ ಅಥವಾ ಅಧಿಕೃತ ಭಾರತೀಯ ಸರ್ಕಾರಿ ಅಧಿಕಾರಿಯಿಂದ ಪ್ರಕಟಿಸಲಾಗುತ್ತದೆ.

ಈ ಪಿಸಿಸಿ ಸರ್ಟಿಫಿಕೇಟ್ ಅನ್ನು ಪಡೆಯುವುದು ಹೇಗೆಂದು ತಿಳಿಯಲು ಹಾಗೂ ನಿಮ್ಮ ಅಪ್ಲಿಕೇಶನ್ ಬಗ್ಗೆ ಇತರ ಸಂಬಂಧಿತ ವಿವರಗಳನ್ನು ಪಡೆಯಲು ಓದದನ್ನು ಮುಂದುವರಿಸಿ.

ಪೋಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಅಥವಾ ಪಿಸಿಸಿ ಎಂದರೇನು?

ಭಾರತೀಯ ಪಾಸ್‌ಪೋರ್ಟ್‌ ಹೊಂದಿರುವವರು ನೌಕರಿ, ನಿವಾಸದ ಸ್ಥಿತಿ, ದೀರ್ಘಾವಧಿ ವೀಸಾ ಅಥವಾ ವಲಸೆಗಾಗಿ ಅರ್ಜಿ ಸಲ್ಲಿಸುವಾಗ ಅವರಿಗೆ ಈ ಪೋಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಅಥವಾ ಪಿಸಿಸಿ ಅನ್ನು ನೀಡಲಾಗುತ್ತದೆ.

ಒಬ್ಬ ವ್ಯಕ್ತಿಯು ದೀರ್ಘಕಾಲಕ್ಕಾಗಿ ವಿದೇಶ ಪ್ರಯಾಣಕ್ಕೆ ತೆರಳುವಾಗ, ಈ ಸರ್ಟಿಫಿಕೇಟ್ ಅವನ/ಅವಳ ಅಪರಾಧಿ ರೆಕಾರ್ಡ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಶಿಷ್ಟಾಚಾರದ ಒಂದು ಭಾಗವಾಗಿದೆ ಇದು ಭಾರತೀಯರು ಹಾಗೂ ಭಾರತದಲ್ಲಿ ನೆಲೆಸಿರುವ ವಿದೇಶೀ ನಾಗರಿಕರು ಇಬ್ಬರಿಗೂ ಅನ್ವಯಿಸುತ್ತದೆ.

ಅದಾಗ್ಯೂ, ಟೂರಿಸ್ಟ್ ವೀಸಾದ ಜೊತೆ ವಿದೇಶಕ್ಕೆ ಹೋಗುತ್ತಿರುವ ವ್ಯಕ್ತಿಗಳಿಗೆ ಪಿಸಿಸಿ ಅನ್ನು ನೀಡಲಾಗುವುದಿಲ್ಲ.

ಸಾಮಾನ್ಯವಾಗಿ ಭಾರತದಲ್ಲಿ ಪೋಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಆರು ತಿಂಗಳವರೆಗೆ ಮಾನ್ಯವಾಗಿರುತ್ತದೆ. ಆದರೆ, ಅಧಿಕಾರಿ ಹಾಗೂ ಅಪ್ಲಿಕೇಶನ್ ಫಾರ್ಮ್ ಅಧಾರದ ಮೇಲೆ ಈ ಅಂಶವು ಭಿನ್ನವಾಗಿರಬಹುದು.

ಪಿಸಿಸಿ ಅನ್ನು ಕೇವಲ 18 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಮಾತ್ರ ನೀಡಲಾಗುವುದು ಎಂದು ತಿಳಿಯುವುದು ಆವಶ್ಯಕವಾಗಿದೆ.

ಈ ಸರ್ಟಿಫಿಕೇಟ್ ಗಮನಾರ್ಹ ಮೌಲ್ಯವನ್ನು ಹೊಂದಿರುವ ಕಾರಣ, ಇದರ ಅಪ್ಲಿಕೇಶನ್ ನ ಹಂತಗಳನ್ನು ಅರಿಯುವುದು ಅತ್ಯಗತ್ಯವಾಗುತ್ತದೆ.

ಭಾರತದಲ್ಲಿ ಪೋಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಗಾಗಿ ಅರ್ಜಿ ಸಲ್ಲಿಸುವುದು ಹೇಗೆ?

ಕೆಳಗಡೆ ನೀಡಲಾದ ಹಂತಗಳನ್ನು ಅನುಸರಿಸಿ ನೀವು ಸರಳವಾಗಿ ಪೋಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಗಾಗಿ ಆನ್‌ಲೈನ್‌ ಅರ್ಜಿಯನ್ನು ಸಲ್ಲಿಸಬಹುದು-

  • ಮೊದಲಿಗೆ, ನಿಮ್ಮನ್ನು ನೀವು ಪಾಸ್‌ಪೋರ್ಟ್‌ ಸೇವಾ ಪೋರ್ಟಲ್  ನಲ್ಲಿ ರಿಜಿಸ್ಟರ್ ಮಾಡಿ ಅಥವಾ ನಿಮ್ಮ ಅಸ್ತಿತ್ವದಲ್ಲಿರುವ ಖಾತೆಯಲ್ಲಿ ಲಾಗಿನ್ ಮಾಡಿರಿ.

  • "ಪೋಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಗಾಗಿ ಅರ್ಜಿ ಸಲ್ಲಿಸಿ" ಮೇಲೆ ಕ್ಲಿಕ್ ಮಾಡಿ ಹಾಗೂ ಫಾರ್ಮ್ ಭರ್ತಿ ಮಾಡಿ ಅದನ್ನು ಸಲ್ಲಿಸಿ.

  • ನಂತರ, "ಸೇವ್ ಮಾಡಲಾದ/ಸಲ್ಲಿಸಲಾದ ಅಪ್ಲಿಕೇಶನ್ ಗಳು" ಟ್ಯಾಬ್ ಅಡಿಯಲ್ಲಿರುವ "ಪೇ  ಮಾಡಿ ಹಾಗೂ ಅಪಾಯಿಂಟ್ಮೆಂಟ್ ನಿಗದಿಪಡಿಸಿ" ಅನ್ನು ಆಯ್ಕೆ ಮಾಡಿ.

  • ಪಾವತಿ ಮಾಡಿ ಹಾಗೂ ನಿಮ್ಮ ಅಪ್ಲಿಕೇಶನ್ ರೆಫೆರೆನ್ಸ್ ಸಂಖ್ಯೆ ಹೊಂದಿರುವ ಅಪ್ಲಿಕೇಶನ್ ರಶೀದಿಯನ್ನು ಪ್ರಿಂಟ್ ಮಾಡಿ.

  • ನಿಮ್ಮ ಡಾಕ್ಯುಮೆಂಟುಗಳ ಮೂಲ ಹಾಗೂ ನಕಲು ಪ್ರತಿಗಳೊಂದಿಗೆ ಸ್ಥಳೀಯ ಪಾಸ್‌ಪೋರ್ಟ್‌ ಕಚೇರಿ ಅಥವಾ ಪಾಸ್‌ಪೋರ್ಟ್‌ಸೇವಾ ಕೇಂದ್ರಕ್ಕೆ ಹೋಗಿ.

ನಿಮಗೆ ಆನ್‌ಲೈನ್‌ ಆಗಿ ಪೋಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಫಾರ್ಮ್ ಅನ್ನು ಭರ್ತಿ ಮಾಡುವಾಗ ತೊಂದರೆ ಎದುರಾದರೆ, ಫಾರ್ಮ್ ಅನ್ನು ಡೌನ್ಲೋಡ್ ಮಾಡುವ ಆಯ್ಕೆಯನ್ನು ಮಾಡಿ. ನಂತರ, ನೀವು ಫಾರ್ಮ್ ಅನ್ನು ಭರ್ತಿ ಮಾಡಿ XML  ಸ್ವರೂಪದಲ್ಲಿ ಆಫ್ಲೈನ್ ಆಗಿ ಅದನ್ನು ಸೇವ್ ಮಾಡಬಹುದು.

ಈಗ, ಅಪ್ಲಿಕೇಶನ್ ಅನ್ನು ಸಲ್ಲಿಸಿ ಅಪಾಯಿಂಟ್ಮೆಂಟ್ ಅನ್ನು ನಿಗದಿಪಡಿಸಲು ಮೇಲೆ ನೀಡಿರುವ ಹಂತಗಳನ್ನು ಅನುಸರಿಸಿ. ಇಲ್ಲಿ, ನೀವು ಭರ್ತಿ ಮಾಡಿರುವ XML ಫೈಲ್ ಅನ್ನು ನೇರವಾಗಿ ಅಪ್ಲೋಡ್ ಮಾಡಬಹುದಾಗಿದೆ.

ಎರಡೂ ಫಾರ್ಮ್ ಸಲ್ಲಿಕೆಗಳನ್ನು ಆನ್‌ಲೈನ್‌ ಆಗಿ ಮಾಡಬೇಕು ಎಂದು ತಿಳಿದಿರುವುದು ಇಲ್ಲಿ ಅತ್ಯಗತ್ಯವಾಗುತ್ತದೆ. ವೆರಿಫಿಕೇಶನ್ ಗಾಗಿ ಡಾಕ್ಯುಮೆಂಟ್ ಗಳೊಂದಿಗೆ ಪಾಸ್‌ಪೋರ್ಟ್‌ ಕಚೇರಿಗೆ ನೀಡುವ ಭೇಟಿ ಮಾತ್ರ ಆಫ್ಲೈನ್ ಆಗಿರುತ್ತದೆ.

ಸ್ಥಳೀಯ ಪೋಲೀಸ್ ಠಾಣೆಯಿಂದ ಪಿಸಿಸಿ ಅನ್ನು ಪಡೆಯುವುದು ಹೇಗೆ?

ಪಿಸಿಸಿ ಅಪ್ಲಿಕೇಶನ್ ಮಾಡುವಾಗ ನೀವು ಹತ್ತಿರದ ಪೋಲೀಸ್ ಠಾಣೆಯನ್ನು ಆಯ್ಕೆ ಮಾಡಬಹುದಾಗಿದೆ.  ನಂತರ, ಸರಳವಾಗಿ ನಿಮ್ಮ ಪಿಸಿಸಿ ಅನ್ನು ಪಡೆಯಲು ಹೇಳಿರುವಂತಹ ಹಂತಗಳನ್ನು ಅನುಸರಿಸಿ.

  • ನಿಮ್ಮ ಹತ್ತಿರದ ಪೋಲೀಸ್ ಠಾಣೆಗೆ ಭೇಟಿ ನೀಡಿ.

  • ಪೋಲೀಸ್ ಅಧಿಕಾರಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ. ಅವರು ಸಾಮಾನ್ಯವಾಗಿ ಹಿನ್ನಲೆ ಪರಿಶೀಲನೆಯನ್ನು ನಡೆಸಿ ಅಪ್ಲಿಕೇಶನ್ ನ ಉದ್ದೇಶದ ಬಗ್ಗೆ ತನಿಖೆ ಮಾಡುತ್ತಾರೆ.

  • ಅಧಿಕೃತ ಪಾಸ್‌ಪೋರ್ಟ್‌ ಸೇವಾ  ಪೋರ್ಟಲ್ನಲ್ಲಿ ಉಲ್ಲೇಖಿಸಲಾದ ಸೆಲ್ಫ್ -ಅಟೆಸ್ಟೆಡ್ ಡಾಕ್ಯುಮೆಂಟ್ ಗಳನ್ನು ಸಲ್ಲಿಸಿ.

  • ಆವಶ್ಯಕ ಶುಲ್ಕವನ್ನು ಕ್ಯಾಶ್ ಅಥವಾ ಚೆಕ್ ಮೂಲಕ ಪಾವತಿಸಿ.

ಅಧಿಕಾರಿಗಳು ಡಾಕ್ಯುಮೆಂಟ್ ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ ನಿಮಗೆ ಪೋಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಅನ್ನು ನೀಡಬೇಕೋ ಬೇಡವೋ ಎಂದು ನಿರ್ಧರಿಸುತ್ತಾರೆ.

ಈ ಸರ್ಟಿಫಿಕೇಟ್ ಗಳಿಸುವಲ್ಲಿ ಡಾಕ್ಯುಮೆಂಟುಗಳು ಮಹತ್ವದ ಪಾತ್ರ ವಹಿಸುವುದರಿಂದ, ನೀವು ಯಾವ ಪೇಪರ್ ಗಳನ್ನು ಸಲ್ಲಿಸಬೇಕಾಗುವುದು ಎಂದು ನೋಡೋಣ.

ಪೋಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟಿಗೆ ಅಗತ್ಯವಿರುವ ಡಾಕ್ಯುಮೆಂಟ್ ಗಳು

ಡಾಕ್ಯುಮೆಂಟೇಶನ್ ಗೆ ಸಂಬಧಿಸಿದಂತೆ, ಎರಡು ಭಿನ್ನತೆಗಳಿವೆ. ಇವುಗಳು ಈ ಕೆಳಗಿನ ಅರ್ಜಿದಾರರಿಗೆ ಸಂಬಂಧಿಸಿವೆ-

  • ನೌಕರಿಗಾಗಿ ಇಸಿಆರ್ ದೇಶಗಳಿಗೆ ಹೋಗುವವರಿಗೆ

  • ಇಸಿಆರ್ ಅಲ್ಲದ ದೇಶಗಳಿಗೆ ವಲಸೆ ಹೋಗುವವರಿಗೆ

ನೌಕರಿಯ ಉದ್ದೇಶಗಳಿಂದ ಇಸಿಆರ್ ದೇಶಗಳಿಗೆ ಹೋಗುವವರಿಗೆ

ಕುಶಲ/ಅರೆ-ಕುಶಲ ನೌಕರರಿಗೆ-

  • ತನ್ನ ಮೊದಲ ಎರಡು ಹಾಗೂ ಕೊನೆಯ ಎರಡು ಪುಟಗಳ, ವೀಕ್ಷಣಾ ಪುಟದ ಹಾಗೂ ಇಸಿಆರ್/ಇಸಿಆರ್ ಅಲ್ಲದ ಪುಟದ ಸೆಲ್ಫ್ -ಅಟೆಸ್ಟೆಡ್ ನಕಲನ್ನು ಹೊಂದಿರುವ ಹಳೆಯ ಪಾಸ್‌ಪೋರ್ಟ್‌

  • ವಿದೇಶಿ ಉದ್ಯೋಗದಾತರೊಂದಿಗಿನ ಉದ್ಯೋಗ ಒಪ್ಪಂದದ ಸೆಲ್ಫ್ -ಅಟೆಸ್ಟೆಡ್ ಪ್ರತಿ

  • ಪ್ರಸ್ತುತ ವಿಳಾಸದ ಪುರಾವೆ 

  • ಮಾನ್ಯ ವೀಸಾದ ಪ್ರತಿ(ಇಂಗ್ಲಿಷ್ ಅನುವಾದಿತ)

ಕೌಶಲ್ಯರಹಿತ/ಮಹಿಳಾ ನೌಕರರಿಗೆ( 30 ವರ್ಷ ಮೇಲ್ಪಟ್ಟವರು) -

  • ತನ್ನ ಮೊದಲ ಎರಡು ಹಾಗೂ ಕೊನೆಯ ಎರಡು ಪುಟಗಳ, ವೀಕ್ಷಣಾ ಪುಟದ ಹಾಗೂ ಇಸಿಆರ್/ಇಸಿಆರ್ ಅಲ್ಲದ ಪುಟದ ಸೆಲ್ಫ್ -ಅಟೆಸ್ಟೆಡ್ ನಕಲನ್ನು ಹೊಂದಿರುವ ಹಳೆಯ ಪಾಸ್‌ಪೋರ್ಟ್‌

  • ವಿದೇಶಿ ಉದ್ಯೋಗದಾತರೊಂದಿಗಿನ ಉದ್ಯೋಗ ಒಪ್ಪಂದದ ಸೆಲ್ಫ್ -ಅಟೆಸ್ಟೆಡ್ ಪ್ರತಿ

  • ಪ್ರಸ್ತುತ ವಿಳಾಸದ ಪುರಾವೆ 

  • ಮಾನ್ಯ ವೀಸಾದ ಪ್ರತಿ(ಇಂಗ್ಲಿಷ್ ಅನುವಾದಿತ)

ಕುಶಲ/ಅರೆ-ಕುಶಲ ನೌಕರರಿಗಾಗಿ (ನೇಮಕಾತಿ ಏಜಂಟ್ ಮೂಲಕ) -

  • ಪ್ರಸ್ತುತ ವಿಳಾಸದ ಪುರಾವೆ

  • ತನ್ನ ಮೊದಲ ಎರಡು ಹಾಗೂ ಕೊನೆಯ ಎರಡು ಪುಟಗಳ, ವೀಕ್ಷಣಾ ಪುಟದ ಹಾಗೂ ಇಸಿಆರ್/ಇಸಿಆರ್ ಅಲ್ಲದ ಪುಟದ ಸೆಲ್ಫ್ -ಅಟೆಸ್ಟೆಡ್ ನಕಲನ್ನು ಹೊಂದಿರುವ ಹಳೆಯ ಪಾಸ್‌ಪೋರ್ಟ್‌

  • ನೇಮಕಾತಿ ಏಜಂಟ್(ಆರ್ ಎ) ಇಂದ ದೃಢೀಕರಿಸಲಾದ ಮೂಲ ಉದ್ಯೋಗದ ಒಪ್ಪಂದ, ವಿದೇಶಿ ಉದ್ಯೋಗದಾತರ ಪವರ್ ಆಫ್ ಎಟರ್ನಿ ಮತ್ತು ಡಿಮಾಂಡ್ ಲೆಟರ್ ನ ಪ್ರತಿಗಳು

  • ಭಾರತ ಸರಕಾರದ ಸಾಗರೋತ್ತರ ಭಾರತೀಯ ವ್ಯವಹಾರಗಳ ಸಚಿವಾಲಯದ, ವಲಸಿಗರ ರಕ್ಷಕರಿಂದ ನೀಡಲಾದ ಮಾನ್ಯವಾದ ರೆಜಿಸ್ಟ್ರೇಶನ್ ಸರ್ಟಿಫಿಕೇಟ್ ನ ಪ್ರತಿ

ಕೌಶಲರಹಿತ ವ್ಯಕ್ತಿಗಳು/ಮಹಿಳಾ ಅರ್ಜಿದಾರರಿಗೆ(ನೇಮಕಾತಿ ಏಜಂಟ್ ಗಳ ಮೂಲಕ) -

  • ಉದ್ಯೋಗದ ಒಪ್ಪಂದದ, ವಿದೇಶಿ ಉದ್ಯೋಗದಾತರಿಂದ ಪವರ್ ಆಫ್ ಎಟರ್ನಿ ಮತ್ತು ಡಿಮಾಂಡ್ ಲೆಟರ್ ನ ಸಂಬಂಧಪಟ್ಟ ಭಾರತೀಯ ಆಯೋಗದಿಂದ ದೃಢೀಕೃತವಾದ ಪ್ರತಿಗಳು

  • ಪಿಒಇ ನೀಡಿರುವ ರೆಜಿಸ್ಟ್ರೇಷನ್ ಸರ್ಟಿಫಿಕೇಟ್ ನ ಪ್ರತಿ. 

ಇಸಿಆರ್ ಅಲ್ಲದ ದೇಶಗಳಿಗೆ ವಲಸೆ ಹೋಗುತ್ತಿರುವ ಅರ್ಜಿದಾರರು

  • ನಿವಾಸ ಸ್ಥಿತಿ, ಉದ್ಯೋಗ ಒಪ್ಪಂದ ಅಥವಾ ದೀರ್ಘಾವಧಿ ವೀಸಾ ಅಥವಾ ವಲಸೆಗಾಗಿ ಅರ್ಜಿ ಸಲ್ಲಿಸುವುದಕ್ಕಾಗಿ ಇರುವ ಡಾಕ್ಯುಮೆಂಟ್ ಪುರಾವೆಗಳು

  • ತನ್ನ ಮೊದಲ ಎರಡು ಹಾಗೂ ಕೊನೆಯ ಎರಡು ಪುಟಗಳ, ವೀಕ್ಷಣಾ ಪುಟದ ಹಾಗೂ ಇಸಿಆರ್/ಇಸಿಆರ್ ಅಲ್ಲದ ಪುಟದ ಸೆಲ್ಫ್ -ಅಟೆಸ್ಟೆಡ್ ನಕಲನ್ನು ಹೊಂದಿರುವ ಹಳೆಯ ಪಾಸ್‌ಪೋರ್ಟ್‌

  • ಪ್ರಸ್ತುತ ವಿಳಾಸದ ಪುರಾವೆ

ಪೋಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಗಾಗಿ ಆನ್‌ಲೈನ್‌ ಆಗಿ ಅರ್ಜಿ ಸಲ್ಲಿಸುವಾಗ ಉಲ್ಲೇಖಿಸಲಾದ ಡಾಕ್ಯುಮೆಂಟುಗಳನ್ನು ಸಿದ್ಧವಾಗಿರಿಸಿ. ಇದರಿಂದ ಸಂಪೂರ್ಣ ಪ್ರಕ್ರಿಯೆಯು ಸುಗಮವಾಗಿ ಸಾಕಷ್ಟು ಸಮಯವೂ ಉಳಿಯುವುದು.

ಪೋಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಸ್ಟೇಟಸ್ ಅನ್ನು ಪರಿಶೀಲಿಸುವುದು ಹೇಗೆ?

ಈ ಹಂತಗಳನ್ನು ಅನುಸರಿಸಿದರೆ ನೀವು ಸರಳವಾಗಿ ಪಿಸಿಸಿ ಪರಿಶೀಲನೆಯನ್ನು ಮಾಡಬಹುದಾಗಿದೆ.

  1. ಪಾಸ್‌ಪೋರ್ಟ್‌ ಸೇವಾ ಪೋರ್ಟಲ್  ಗೆ ಭೇಟಿ ನೀಡಿ ಹಾಗೂ "ಅಪ್ಲಿಕೇಶನ್ ಸ್ಟೇಟಸ್ ಟ್ರ್ಯಾಕ್ ಮಾಡಿ" ಮೇಲೆ ಕ್ಲಿಕ್ ಮಾಡಿ.

  2.  ಪಾಸ್‌ಪೋರ್ಟ್‌, ಪಿಸಿಸಿ, ಐಸಿ, ಹಾಗೂ ಜಿಇಪಿ ಆಯ್ಕೆಗಳಿಂದ ನಿಮ್ಮ ಅಪ್ಲಿಕೇಶನ್ ವಿಧವನ್ನು ಆಯ್ಕೆ ಮಾಡಿ.

  3. ನಿಮ್ಮ 13-ಅಂಕಿಗಳ ಫೈಲ್ ಸಂಖ್ಯೆ ಹಾಗೂ ಜನನ ದಿನಾಂಕವನ್ನು ನಮೂದಿಸಿ "ಸ್ಟೇಟಸ್  ಟ್ರ್ಯಾಕ್ ಮಾಡಿ" ಮೇಲೆ ಕ್ಲಿಕ್ ಮಾಡಿ.

  4. ಈ ಸ್ಟೇಟಸ್ ಟ್ರ್ಯಾಕರ್ ಸ್ಕ್ರೀನ್ ನಿಮ್ಮ ಪಾಸ್‌ಪೋರ್ಟ್‌ ಅಪ್ಲಿಕೇಶನ್ ನ ಅಪ್ಡೇಟ್ ಆದ ಸ್ಟೇಟಸ್ ಅನ್ನು ಪ್ರದರ್ಶಿಸುತ್ತದೆ.

ಮೇಲೆ ನೀಡಲಾದ ವಿಷಯಗಳು ನಿಖರವಾಗಿ ಭಾರತದ ಪೋಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪ್ರಕ್ರಿಯೆಯನ್ನು ವಿವರಿಸುತ್ತವೆ. ಅಪ್ಲಿಕೇಶನ್ ತಯಾರಿಸಲು ಈ ಹಂತಗಳನ್ನು ಅನುಸರಿಸಿ ಹಾಗೂ ಯಾವುದೇ ಗೊಂದಲಗಳಿಲ್ಲದೆ ಅಪ್ಡೇಟ್ ಆದ ಸ್ಥಿತಿಯನ್ನು ಪರಿಶೀಲಿಸಿ.

ಭಾರತದಲ್ಲಿ ಪೋಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪ್ರಕ್ರಿಯೆಗೆ ತಗಲುವ ಸಮಯವೆಷ್ಟು?

ಭಾರತದ ಪೋಲೀಸ್ ಅಧಿಕಾರಿಗಳಿಂದ 'ಕ್ಲಿಯರ್' ವರದಿ ಸಿಕ್ಕಿದರೆ ಮಾತ್ರ ನೀವು ಪಿಸಿಸಿ ಅನ್ನು ಪಡೆಯುತ್ತೀರಿ. ಸಂಬಂಧಪಟ್ಟ ಪಾಸ್‌ಪೋರ್ಟ್‌ ಕಚೇರಿ ತಯಾರಿಸಿರುವ  ಪಿಸಿಸಿ ಸ್ಥಿತಿಯನ್ನು ನೀವು ಅಧಿಕೃತ ಪೋರ್ಟಲ್ ನಲ್ಲಿ ಪರಿಶೀಲಿಸಬಹುದು.

ಸಾಮಾನ್ಯವಾಗಿ, ಈ ಪ್ರಕ್ರಿಯೆಯು  1 ತಿಂಗಳುಗಳಷ್ಟು ಸಮಯವನ್ನು ತೆಗೆದುಕೊಳ್ಳಬಹುದು. ಆದರೆ, ಅಪ್ಲಿಕೇಶನ್ ಹಾಗೂ ಪೋಲೀಸ್ ಠಾಣೆಯ ಆಧಾರದ ಮೇಲೆ ಈ ಸಮಯದಲ್ಲಿ ಬದಲಾವಣೆಯಾಗಬಹುದು.

ಪೋಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ನನ್ನ ಪೋಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಸ್ಟೇಟಸ್ ಬಗ್ಗೆ ವಿಚಾರಿಸಲು ನಾನು ಕಾಲ್ ಸೆಂಟರ್ ಅನ್ನು ಸಂಪರ್ಕಿಸಬಹುದೇ?

ಹೌದು, ನೀವು 1800-258-1800 ಪಾಸ್‌ಪೋರ್ಟ್‌ ಸೇವಾ ಕಾಲ್ ಸೆಂಟರ್ ಗೆ ಕರೆ ನೀಡಿ ನಿಮ್ಮ ಅಪ್ಲಿಕೇಶನ್ ನ ಸ್ಟೇಟಸ್ ಬಗ್ಗೆ ವಿಚಾರಿಸಬಹುದು.  ನೀವು ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಪರಿಶೀಲಿಸಲು ಕಾಲ್ ಸೆಂಟರ್ ನಿರ್ವಾಹಕರೊಂದಿಗೆ ಮಾತನಾಡಬಹುದು.

ಪೋಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ನ ವ್ಯಾಲಿಡಿಟಿ ಅವಧಿ ಎಷ್ಟು?

ಇತರೆ ನಿರ್ದೇಶನ ಸಿಗದೇ ಇದ್ದಲ್ಲಿ ಒಂದು ಪೋಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟಿನ ಮಾನ್ಯ ಅವಧಿಯು ಆರು ತಿಂಗಳುಗಳಾಗಿರುತ್ತದೆ.

 

ಎರಡು ಬಾರಿ ಪೋಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಗಾಗಿ ಅರ್ಜಿ ಸಲ್ಲಿಸುವುದು ಸಾಧ್ಯವೇ?

ಒಂದು ಪಿಸಿಸಿ ದೊರೆತ ಮೇಲೆ ಮಾತ್ರ ಒಬ್ಬ ವ್ಯಕ್ತಿ  ಇನ್ನೊಂದಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆದರೆ ಒಂದು ಸಂಸ್ಥೆಯು ಮೊದಲ ಪೋಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಗಾಗಿ ಪಾವತಿಯನ್ನು ಪೂರ್ಣಗೊಳಿಸಿದ ನಂತರ ಪಿಸಿಸಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.