Third-party premium has changed from 1st June. Renew now
ಬೈಕ್ ಇನ್ಶೂರೆನ್ಸ್ ನಲ್ಲಿ ಐಡಿವಿ
ಇನ್ಶೂರೆನ್ಸ್ ಪದಗಳನ್ನು ಸರಳಗೊಳಿಸಿ ಇನ್ಶೂರೆನ್ಸ್ ನೊಂದಿಗೆ ನಿಮ್ಮ ಅನುಭವವನ್ನು ಸರಳಗೊಳಿಸುವುದು. ಇದಕ್ಕೆಂದೇ ನಾವು ಇದ್ದೇವೆ. ಇಲ್ಲಿ ಹೆಚ್ಚಾಗಿ ಅಪಾರ್ಥಗೊಂಡ ಬಹಳ ಸಾಮಾನ್ಯ ಪದ ಎಂದರೆ ಅದು ಐಡಿವಿ. ಬೈಕ್ ಇನ್ಶುರೆನ್ಸ್ ನಲ್ಲಿ ಐಡಿವಿ ಎಂದರೇನು? ಮತ್ತು ನಿಮ್ಮ ಬೈಕಿನ ಕವರೇಜ್ ಗೆ ಅದು ಅಷ್ಟು ಮುಖ್ಯವೇ? ಇದನ್ನು ನಿಮಗಾಗಿ ನಾವು ವಿಂಗಡಿಸಿ ದ್ವಿಚಕ್ರ ವಾಹನದಲ್ಲಿ ಐಡಿವಿಯ ಬಗ್ಗೆ ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತೇವೆ.
ಸರ, ಈಗ ಇನ್ನೊಂದು ವರ್ಷ ಕಳೆದಿದೆ ಹಾಗೂ ನಿಮ್ಮ ನೆಚ್ಚಿನ ಬೈಕಿನ ಬೈಕ್ ಇನ್ಶೂರೆನ್ಸ್ ರಿನ್ಯೂ ಮಾಡುವ ಸಮಯ ಮತ್ತೆ ಬಂದಿದೆ. ನಮ್ಮಲ್ಲಿ ಹೆಚ್ಚಿನವರು ಇನ್ಶುರೆನ್ಸ್ ಪ್ರೀಮಿಯಮ್ ಅನ್ನು ಪಾವತಿ ಮಾಡಿ ಮುಗಿಸಿಬಿಡುತ್ತಾರೆ. ಆದರೆ ನಿಮ್ಮ ವಾಹನದ ಒಟ್ಟು ಮೌಲ್ಯ ನಿಮಗೆ ತಿಳಿದಿದೆಯೇ? ನಿಮ್ಮ ವಾಹನ ಕಳವಾದರೆ ಅಥವಾ ಅದಕ್ಕೆ ದುರಸ್ತಿಗೂ ಮೀರಿ ಹಾನಿಯಾದರೆ ನಿಮಗೆ ಎಷ್ಟು ಮೊತ್ತ ಸಿಗಬಹುದು ಎಂದು ಗೊತ್ತೇ?
ಅದಕ್ಕಂತಲೇ ಐಡಿವಿ ಇರುವುದು ಎಂದರೆ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ.
ಐಡಿವಿ - ಐಡಿವಿ ಎಂದರೆ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಇದು ಬೇರೇನೂ ಅಲ್ಲ ನಿಮ್ಮ ವಾಹನದ ಮಾರುಕಟ್ಟೆ ಬೆಲೆಯಾಗಿದೆ.
ಸೂಚನೆ : ಐಡಿವಿ ಕೇವಲ ‘ಕಾಂಪ್ರೆಹೆನ್ಸಿವ್ ಬೈಕ್ ಇನ್ಶುರೆನ್ಸ್ ಪಾಲಿಸಿ’ ಅಡಿಯಲ್ಲಿ ಮಾನ್ಯವಾಗಿದೆ.
ಬೈಕ್ ಇನ್ಶುರೆನ್ಸ್ ನಲ್ಲಿ ಐಡಿವಿ ಎಂದರೇನು?
ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಎಂದರೆ ನಿಮ್ಮ ಬೈಕ್ ನ ಬೆಲೆ ಮಾರುಕಟ್ಟೆಯಲ್ಲಿ ಎಷ್ಟಿದೆ ಎಂದು, ಅದರ ಮೇಲಿನ ಡಿಪ್ರಿಸಿಯೇಷನ್ ಕ್ಯಾಲ್ಕುಲೇಟ್ ಮಾಡಿದ ನಂತರ. ಒಂದು ಸಣ್ಣ ಉದಾಹರಣೆಯಿಂದ ಇದನ್ನು ತಿಳಿಯೋಣ - ನೀವು ರೂ.1 ಲಕ್ಷ ಮೌಲ್ಯದ ಹೊಚ್ಚಹೊಸ ಬೈಕ್ ಖರೀದಿಸಿದ್ದೀರಿ ಎಂದುಕೊಳ್ಳಿ(ನೋಂದಣಿ ವೆಚ್ಚ, ರಸ್ತೆ ತೆರಿಗೆ, ಇನ್ಶುರೆನ್ಸ್, ಉಪಕರಣಗಳು ಇತ್ಯಾದಿಗಳ ವೆಚ್ಚವನ್ನು ಹೊರತುಪಡಿಸಿ). ನಿಮ್ಮ ಬೈಕ್ ಹೊಸದಾದ ಕಾರಣ ಖರೀದಿಯ ಸಮಯದಲ್ಲಿ ಅದರ ಐಡಿವಿ ರೂ. 1 ಲಕ್ಷ ಇರುತ್ತದೆ. ಆದರೆ ನಿಮ್ಮ ಬೈಕ್ ಹಳೆಯದಾದ ಹಾಗೆ, ಅದರ ಮೌಲ್ಯದ ಇಳಿತಾಯವಾಗುತ್ತದೆ, ಇದರ ಜೊತೆ ಐಡಿವಿ ಯೂ ಕೂಡಾ. ಎರಡು ವರ್ಷದ ಬಳಿಕ ನಿಮ್ಮ ಬೈಕಿನ ಮೌಲ್ಯ ರೂ. 65 ಸಾವಿರ ಎಂದಿಟ್ಟುಕೊಳ್ಳಿ. ನಿಮ್ಮ ಐಡಿವಿ ಯೂ ರೂ. 65 ಸಾವಿರವಾಗುತ್ತದೆ.
ಈಗ ಹೆಚ್ಚಿನವರು ಗೊಂದಲಕ್ಕೀಡು ಮಾಡುವ, ಮುಖ್ಯ ಅಂಶಕ್ಕೆ ಬರೋಣ. ಐಡಿವಿ ನಿಮ್ಮ ಬೈಕ್ ನ ಡೆಪ್ರಿಸಿಯೇಷನ್ ಅನ್ನು ‘ ಉತ್ಪಾದಕರ ವಿವರಣೆ’ ಮೇಲೆ ಅಥವಾ ‘ಉತ್ಪಾದಕ ನಿಮ್ಮ ಬೈಕಿಗೆ ಕಟ್ಟಿದ ಬೆಲೆ’ಯ ಮೇಲೆ ನಿರ್ಧರಿಸಲಾಗುತ್ತದೆ, ನೀವು ವೈಯಕ್ತಿಕವಾಗಿ ಉಲ್ಲೇಖಿಸಿದ ಬೆಲೆಯ ಮೇಲೆ ಅಲ್ಲ ಅಂದರೆ, ಯಾರಾದರೂ ನಿಮ್ಮ ಬೈಕ್ ಅನ್ನು ರೂ.85 ಸಾವಿರಕ್ಕೆ ಖರೀದಿಸಲು ಮುಂದಾಗಬಹುದು ಆದರೆ ಅದರ ಐಡಿವಿ ರೂ.65 ಸಾವಿರವೇ ಆಗಿರುತ್ತದೆ. ಹಾಗಾದರೆ, ನಿಮ್ಮ ಬೈಕ್ ನ ಇಳಿತಾಯದ ದರಗಳೇನು?
ನಿಮ್ಮ ಬೈಕ್ ನ ಡೆಪ್ರಿಸಿಯೇಷನ್ ದರ ಏನು?
ಬೈಕ್ ನ ವಯಸ್ಸು | ಡೆಪ್ರಿಸಿಯೇಷನ್ ದರ |
---|---|
6 ತಿಂಗಳು ಹಾಗೂ ಕಡಿಮೆ | 5% |
6 ತಿಂಗಳಿಂದ 1 ವರ್ಷ | 15% |
1 - 2 ವರ್ಷಗಳು | 20% |
2 - 3 ವರ್ಷಗಳು | 30% |
3 - 4 ವರ್ಷಗಳು | 40% |
4 - 5 ವರ್ಷಗಳು | 50% |
5 + ವರ್ಷಗಳು | ಐಡಿವಿ ಅನ್ನು ನಿಮ್ಮ ಇನ್ಶುರರ್ ನಿರ್ಧರಿಸುತ್ತಾರೆ |
ನಿಮ್ಮ ಬೈಕ್ ನ ಐಡಿವಿ ಕ್ಯಾಲ್ಕುಲೇಟರ್
ನಿಮ್ಮ ಐಡಿವಿಯ ಕ್ಯಾಲ್ಕುಲೇಶನ್ ತುಂಬಾ ಸರಳವಾಗಿದೆ : ಇದು ನಿಮ್ಮ ವಾಹನದ ಎಕ್ಸ್ - ಶೋರೂಮ್ ದರ, ಬಿಡಿಭಾಗಗಳ ಡೆಪ್ರಿಸಿಯೇಷನ್ ದರವನ್ನು ಹೊರತುಪಡಿಸಿ, ಆಗಿದೆ. ನೋಂದಣಿ ಸಂಖ್ಯೆ, ರಸ್ತೆ ತೆರಿಗೆ ಮತ್ತು ಇನ್ಶುರೆನ್ಸ್ ವೆಚ್ಚ ನಿಮ್ಮ ಐಡಿವಿಯಲ್ಲಿ ಸೇರಿಲ್ಲ. ಹಾಗೂ ನಂತರ ಜೋಡಿಸಿದ ಉಪಕರಣಗಳು, ಇವುಗಳ ಐಡಿವಿಯನ್ನು ಪ್ರತ್ಯೇಕವಾಗಿ ಕ್ಯಾಲ್ಕುಲೇಟ್ ಮಾಡಲಾಗುತ್ತದೆ.
ಬೈಕ್ ನ ಐಡಿವಿ ಅನ್ನು ಕ್ಯಾಲ್ಕುಲೇಟ್ ಮಾಡಲು ಯಾವ ಅಂಶಗಳನ್ನು ಪರಿಗಣಿಸಲಾಗುತ್ತದೆ?
ಐಡಿವಿ ಮಾರುಕಟ್ಟೆ ಮೌಲ್ಯದ ಸೂಚಕ ಆಗಿರುವುದರಿಂದ, ಐಡಿವಿ ಅನ್ನು ಕ್ಯಾಲ್ಕುಲೇಟ್ ಮಾಡಲು ಈ ಕೆಳಗಿನ ಅಂಶಗಳನ್ನು ಪರಿಗಣಿಸಲಾಗುತ್ತದೆ:
- ನಿಮ್ಮ ಬೈಕ್ ನ ಮೇಕ್ ಮತ್ತು ಮಾಡೆಲ್
- ನಿಮ್ಮ ಬೈಕ್ ನ ನೋಂದಣಿ ದಿನಾಂಕ
- ಬೈಕ್ ನೋಂದಣಿ ಮಾಡಿಸಿದ ನಗರ
- ಬೈಕ್ ಗೆ ಬೇಕಾಗುವ ಇಂಧನ
- ನಿಮ್ಮ ಬೈಕ್ ನ ವಯಸ್ಸು
- ನಿಮ್ಮ ಬೈಕ್ ಪಾಲಿಸಿಯ ವಿಧ
- ನಿಮ್ಮ ಬೈಕ್ ಪಾಲಿಸಿ ಅವಧಿ
ಐದು ವರ್ಷಕ್ಕಿಂತ ಮೇಲ್ಪಟ್ಟ ದ್ವಿಚಕ್ರ ವಾಹನದ ಐಡಿವಿ ಕ್ಯಾಲ್ಕುಲೇಟ್ ಮಾಡುವುದು ಹೇಗೆ?
ಬೈಕ್ ಇನ್ಶುರೆನ್ಸ್ ನಲ್ಲಿ ಐಡಿವಿ ಅನ್ನು ನಿಮ್ಮ ಬೈಕ್ ನ ಉತ್ಪಾದಕರ ಮಾರಾಟದ ಬೆಲೆ ಮತ್ತೂ ಈವರೆಗೂ ಕ್ಯಾಲ್ಕುಲೇಟ್ ಮಾಡಿದ ಇಳಿತಾಯ ದರದ ಮೇಲೆ ನಿರ್ಧರಿಸಲಾಗುತ್ತದೆ. 5 ವರ್ಷಗಳ ತನಕ, ಇದರ ಇಳಿತಾಯವು ಹೊಸ ಬೈಕಿಗೆ 5% ನಿಂದ, 4 ರಿಂದ 5 ವರ್ಷ ಮೇಲ್ಪಟ್ಟ ಬೈಕ್ ಗೆ 50% ವರೆಗೂ ಹೋಗುತ್ತದೆ.
ಆದರೆ, ನಿಮ್ಮ ಬೈಕ್ ನ ವಯಸ್ಸು ೫ ವರ್ಷಕ್ಕಿಂತ ಹೆಚ್ಚಿದ್ದರೆ, ಅದರ ಐಡಿವಿಯನ್ನು ನಿಮ್ಮ ಇನ್ಶುರರ್ ನಿರ್ಧರಿಸುತ್ತಾರೆ. ಈ ಸಂದರ್ಭದಲ್ಲಿ ಇನ್ಶುರರ್ ನಿಮ್ಮ ದ್ವಿಚಕ್ರ ವಾಹನ ಮತ್ತು ಅದರ ಬಿಡಿಭಾಗಗಳ ಕಂಡೀಶನ್ ನೋಡಿ ಐಡಿವಿಯನ್ನು ನಿರ್ಧರಿಸುತ್ತಾರೆ.
ಸೂಚನೆ : ನಿಮ್ಮ ವಾಹನದ ಪ್ರೀಮಿಯಮ್ ಮತ್ತು ಐಡಿವಿ ಮೌಲ್ಯವನ್ನು ಅನ್ನು ಪಡೆಯಲು ಬೈಕ್ ಇನ್ಶುರೆನ್ಸ್ ಕ್ಯಾಲ್ಕುಲೇಟರ್ ಬಳಸಿ.
ಐಡಿವಿ ಹಾಗೂ ಪ್ರೀಮಿಯಮ್
ನಿಮ್ಮ ದ್ವಿಚಕ್ರ ವಾಹನಕ್ಕೆ ಐಡಿವಿ ಇರುವುದು ಅತ್ಯಗತ್ಯ. ಕೆಲವು ಇನ್ಶುರೆನ್ಸ್ ಪ್ರೊವೈಡರ್ಸ್ ಐಡಿವಿ ಮೌಲ್ಯವನ್ನು ಕಡಿಮೆ ಗೊಳಿಸಿ ನಿಮಗೆ ಕಡಿಮೆ ಪ್ರೀಮಿಯಮ್ ನೀಡುತ್ತಾರೆ. ಇದು ಮಾರಕವಾಗಿ ಪರಿಣಮಿಸಬಹುದು. ಯಾಕಂತೀರಾ? ಕಳವು ಅಥವಾ ಸಂಪೂರ್ಣ ಹಾನಿ ಸಂದರ್ಭದಲ್ಲಿ, ನಿಮಗೆ ಇನ್ಶುರೆನ್ಸ್ ಕ್ಲೈಮ್ ಮಾಡುವ ಸಂದರ್ಭ ಬಂದಾಗ, ನಿಮಗೆ ನಿಮ್ಮ ವಾಹನಕ್ಕೆ ಕಡಿಮೆ ಬೆಲೆ ದೊರೆಯುತ್ತದೆ, ನಿಮ್ಮ ಐಡಿವಿ ಕಡಿಮೆ ಇದ್ದ ಕಾರಣ. ನಿಮ್ಮ ಐಡಿವಿ ನಿಮ್ಮ ಪ್ರೀಮಿಯಮ್ ಗೆ ನೇರವಾಗಿ ಅನುಗುಣವಾಗಿದೆ. ಪ್ರೀಮಿಯಮ್ ಕಡಿಮೆ ಇದ್ದರೆ ಐಡಿವಿ ಕಡಿಮೆ ಇರುತ್ತದೆ ಮತ್ತು ವೈಸ್ ವರ್ಸಾ! ಸಧ್ಯ ಡಿಜಿಟ್ ನಲ್ಲಿ, ನಾವು ನಿಮ್ಮ ಐಡಿವಿ ಸೆಟ್ ಮಾಡಲು ಅವಕಾಶ ನೀಡುತ್ತೇವೆ, ಆದ್ದರಿಂದ ಏನು ನಿರೀಕ್ಷಿಸಬೇಕೆಂದು ನಿಮಗೆ ಸರಿಯಾಗಿ ತಿಳಿದಿರುತ್ತದೆ.
ನೀವು ನಿಮ್ಮ ಐಡಿವಿ ಬಗ್ಗೆ ಇಷ್ಟೊಂದು ಕಾಳಜಿ ಏಕೆ ವಹಿಸಬೇಕು?
ದುರಾದ್ರುಷ್ಟವಶಾತ್, ನಿಮ್ಮ ಗಾಡಿ ಕಳುವಾಗಿ ಎಂದಿಗೂ ಸಿಗದಿದ್ದರೆ, ಅಥವಾ ಇನ್ನೂ ಕೆಡುಕು, ಅಂದರೆ ಅಪಘಾತದ ನಂತರ ದುರಸ್ತಿಗೂ ಮೀರಿದ ಹಾನಿಯಾದರೆ! ಎರಡೂ ಸಂದರ್ಭದಲ್ಲಿ ನಿಮ್ಮ ಇನ್ಶುರೆನ್ಸ್ ಕಂಪನಿ ನಿಮಗೆ ಪೂರ್ತಿ ಹಣ ನೀಡುವುದು, ಅಂದರೆ ನಿಮ್ಮ ಇನ್ಶುರೆನ್ಸ್ ಪಾಲಿಸಿ ಐಡಿವಿಯಲ್ಲಿ ಉಲ್ಲೇಖಿಸಿದ ಮೊತ್ತವನ್ನು!
ಬೈಕ್ ಇನ್ಶುರೆನ್ಸ್ ನಲ್ಲಿ ಐಡಿವಿಯ ಮಹತ್ವವೇನು?
ನಿಮ್ಮ ಐಡಿವಿ ನಿಮ್ಮ ಬೈಕ್ ಇನ್ಶುರೆನ್ಸ್ ನ ಅತ್ಯಂತ ಪ್ರಮುಖ ಭಾಗಗಳಲ್ಲಿ ಒಂದಾಗಿದೆ.ಯಾಕೆಂದರೆ ಇದು ನಿಮ್ಮ ಬೈಕ್ ನ ವಾಸ್ತವ ಮೊತ್ತವನ್ನು ನಿರ್ಧರಿಸುವುದು ಅಲ್ಲದೇ ನೀವು ಬೈಕ್ ಇನ್ಶುರೆನ್ಸ್ ಪ್ರೀಮಿಯಮ್ ಆಗಿ ಪಾವತಿಸಬೇಕಾದ ಮೊತ್ತವನ್ನೂ ನಿರ್ಧರಿಸುತ್ತದೆ.
ಇದು ನಿಮ್ಮ ಬೈಕ್ ಗೆ ಸೂಕ್ತ ಬೆಲೆಯಾಗಿದೆ - ಬೈಕ್ ಇನ್ಶುರೆನ್ಸ್ ನಲ್ಲಿ ಐಡಿವಿ ನಿಮ್ಮ ಬೈಕ್ ನ ಸೂಕ್ತ ಮೌಲ್ಯವನ್ನು ನಿರ್ಧರಿಸುತ್ತದೆ ಹಾಗೂ ಇದು ಬೈಕ್ ನ ಮೇಕ್ ಮತ್ತು ಮಾಡೆಲ್, ಬಳಕೆಯ ಅವಧಿ, ಅದರ ಕ್ಯೂಬಿಕ್ ಸಾಮರ್ಥ್ಯ, ಅದು ಬಳಕೆಯಾಗುತ್ತಿರುವ ನಗರ ಇತ್ಯಾದಿ ಹಲವು ಅಂಶಗಳನ್ನು ಅವಲಂಬಿಸುತ್ತದೆ. ಆದ್ದರಿಂದ, ಸರಿಯಾದ ಐಡಿವಿ ಅನ್ನು ಉಲ್ಲೇಖಿಸುವುದು ಅವಶ್ಯಕವಾಗಿದೆ. ಇನ್ಶುರರ್ಸ್ ಇದರ ಮೇಲೆ, ಅದಕ್ಕೆ ಯೋಗ್ಯವಾಗಿರುವ ಕವರ್ ನೀಡುತ್ತರೆ.
ನಿಮ್ಮ ಬೈಕ್ ಇನ್ಶುರೆನ್ಸ್ ನ ಪ್ರೀಮಿಯಮ್ ಇದರ ಮೇಲೆ ಅವಲಂಬಿತವಾಗಿದೆ - ನಿಮ್ಮ ಪ್ರೀಮಿಯಮ್ ಹಲವು ಅಂಶಗಳ ಮೇಲೆ ಅವಲಂಬಿತವಾಗಿದೆ ಪಾಲಿಸಿ ಮಾದರಿ, ಬಳಕೆಯ ನಗರ, ನಿಮ್ಮ ಬೈಕ್ ನ ಸಿಸಿ, ನಿಮ್ಮ ಕ್ಲೈಮ್ ಇತಿಹಾಸ, ಮತ್ತು ಪ್ರಮುಖವಾಗಿ ನಿಮ್ಮ ಐಡಿವಿ.
ನಿಮ್ಮ ಕ್ಲೈಮ್ ಮೊತ್ತ್ ಕೂಡಾ ಇದನ್ನು ಆಧರಿಸಿದೆ - ನಿಮ್ಮ ಐಡಿವಿ ಮೂಲತಃ ಹಾನಿ ಅಥವಾ ನಷ್ಟದ ಸಂದರ್ಭದಲ್ಲಿ ನಿಮಗೆ ಸಿಗಬಹುದಾದ ಗರಿಷ್ಠ ಮೊತ್ತವಾಗಿರುತ್ತದೆ. ಕೆಲವರು ತಮ್ಮ ಐಡಿವಿಯನ್ನು ತಪ್ಪಾಗಿ ಉಲ್ಲೇಖಿಸುತ್ತಾರೆ, ಪ್ರೀಮಿಯಮ್ ಅನ್ನು ಕಡಿಮೆ ಮಾಡುವುದಕ್ಕಾಗಿ. ಆದರೆ ಇದರಿಂದ ನಷ್ಟವೇ ಆಗುತ್ತದೆ ಯಾಕೆಂದರೆ ಕ್ಲೈಮ್ ಸಂದರ್ಭದಲ್ಲೂ, ನಿಮಗೆ ಕಡಿಮೆ ಮೊತ್ತ ಸಿಗುತ್ತದೆ, ಹಾಗೂ ಈ ಮೊತ್ತ ನಿಮ್ಮ ಬೈಕಿಗೆ ಸಾಲದೇ ಇರಬಹುದು.
ಬೈಕ್ ಇನ್ಶುರೆನ್ಸ್ ನಲ್ಲಿ ಐಡಿವಿ ಬಗ್ಗೆ ಹೆಚ್ಚಾಗಿ ಕೇಳಲ್ಪಟ್ಟ ಪ್ರಶ್ನೆಗಳು
ನಿಖರವಾದ ಐಡಿವಿ ಡಿಕ್ಲೇರ್ ಮಾಡುವುದು ಯಾಕೆ ಅಗತ್ಯ?
ನಿಖರವಾದ ಐಡಿವಿಯನ್ನು ಡಿಕ್ಲೇರ್ ಮಾಡುವುದು ಅಗತ್ಯ ಯಾಕೆಂದರೆ ನಿಮ್ಮ ದ್ವಿಚಕ್ರ ವಾಹನಕ್ಕೆ ಅಥವಾ ಅದರಿಂದ ಆದ ಹಾನಿ ಅಥವಾ ನಷ್ಟದ ಸಂದರ್ಭದಲ್ಲಿ ನಿಮಗೆ ಸಿಗಬಹುದಾದ ಗರಿಷ್ಠ ಮೊತ್ತವನ್ನು ನಿರ್ಧರಿಸುತ್ತದೆ.
ಐಡಿವಿಯನ್ನು ತಪ್ಪಾಗಿ ಡಿಕ್ಲೇರ್ ಮಾಡಿದರೆ ಏನಾಗುತ್ತದೆ?
ನೀವು ಐಡಿವಿಯನ್ನು ತಪ್ಪಾಗಿ ಡಿಕ್ಲೇರ್ ಮಾಡಿದರೆ ಪರೋಕ್ಷವಾಗಿ ನೀವು ನಿಮ್ಮ ಬೈಕ್ ಗೆ ಕಡಿಮೆ/ಹೆಚ್ಚು ಮೌಲ್ಯವನ್ನು ಉಲ್ಲೇಖಿಸುತ್ತಿದ್ದೀರಿ. ಆದ್ದರಿಂದ, ನೀವು ಕಡಿಮೆ ಐಡಿವಿ ಉಲ್ಲೇಖಿಸಿದ್ದರೆ ಕ್ಲೈಮ್ಸ್ ಸಮಯದಲ್ಲಿ ನಿಮ್ಮ ಬೈಕ್ ಗೆ ಸಾಲಲಾರದಷ್ಟು ಕಡಿಮೆ ಮೊತ್ತ ನಿಮಗೆ ದೊರೆಯಬಹುದು. ನೀವು ಹೆಚ್ಚು ಐಡಿವಿ ಉಲ್ಲೇಖಿಸಿದ್ದರೆ ಕ್ಲೈಮ್ಸ್ ಸಮಯದಲ್ಲಿ ನಿಮಗೆ ಹೆಚ್ಚು ಮೊತ್ತ ದೊರೆಯುತ್ತದೆ.
ದ್ವಿಚಕ್ರ ವಾಹನದ ಐಡಿವಿ ಅನ್ನು ಕ್ಯಾಲ್ಕುಲೇಟ್ ಮಾಡುವುದು ಹೇಗೆ?
ನೀವು ನಿಮ್ಮ ಬೈಕಿನ ಮಾರುಕಟ್ಟೆ ಮೌಲ್ಯದಿಂದ ಅದರ ಅಳಿತಾಯವನ್ನು(ಅದರ ವಯಸ್ಸಿನ ಪ್ರಕಾರ) ಕಳೆದರೆ ನಿಮಗೆ ನಿಮ್ಮ ಡಿಐವಿ ಯ ಅಂದಾಜು ದೊರೆಯುತ್ತದೆ. ಇದನ್ನು ಹೇಗೆ ಮಾಡುವುದು ಎಂದು ಗೊತ್ತಾಗದಿದ್ದರೆ, ದ್ವಿಚಕ್ರ ವಾಹನಗಳ ಆನ್ಲೈನ್ ಐಡಿವಿ ಕ್ಯಾಲ್ಕುಲೇಟರ್ ಅನ್ನು ಬಳಸಬಹುದು, ಇಂತಹದ್ದು.
ನನ್ನ ದ್ವಿಚಕ್ರ ವಾಹನದ ಐಡಿವಿಯ ಮೌಲ್ಯವನ್ನು ಹೇಗೆ ಹೆಚ್ಚಿಸಬಹುದು?
ಡಿಜಿಟ್ ನಲ್ಲಿ ನಾವು ನಮ್ಮ ಗ್ರಾಹಕರಿಗೆ ಡಿಐವಿ ಅನ್ನು ಕಸ್ಟಮೈಸ್ ಮಾಡಲು ಅವಕಾಶ ನೀಡುತ್ತೇವೆ. ಆದರೆ, ನಮ್ಮ ಸಲಹೆ ಏನೆಂದರೆ ಸರಿಯಾದ ಮೊತ್ತವನ್ನು ಉಲ್ಲೇಖಿಸಿ ಯಾಕೆಂದರೆ ಇದು ನಿಮಗೆ ಸರಿಯಾದ ಪ್ರೀಮಿಯಮ್ ಅನ್ನು ನೀಡಿ, ಕ್ಲೈಮ್ಸ್ ಸಮಯದಲ್ಲಿ ಸರಿಯಾದ ಮೊತ್ತ ದೊರಕಿಸಲು ಸಹಾಯ ಮಾಡುತ್ತದೆ. ನಿಮ್ಮ ಐಡಿವಿ ಹೆಚ್ಚಿದ್ದಲ್ಲಿ, ಪ್ರೀಮಿಯಮ್ ಮತ್ತು ಗರಿಷ್ಠ ಕ್ಲೈಮ್ ಮೊತ್ತ ಕೂಡಾ ಹೆಚ್ಚಿರುತ್ತದೆ ಹಾಗೂ ವೈಸ್ ವರ್ಸಾ.
ನನ್ನ ದ್ವಿಚಕ್ರ ವಾಹನದ ಐಡಿವಿಯನ್ನು ಕಡಿಮೆ ಮಾಡಿ ಪ್ರೀಮಿಯಮ್ ಕಡಿಮೆ ಗೊಳಿಸುವುದು ಒಳ್ಳೆಯ ನಿರ್ಧಾರವೇ?
ಇಲ್ಲ, ಇದು ಜಾಣ್ಮೆಯ ಕೆಲಸವಲ್ಲ, ಯಾಕೆಂದರೆ ಕ್ಲೈಮ್ಸ್ ಸಂದರ್ಭದಲ್ಲಿ ನಿಮಗೆ ಕಡಿಮೆ ಮೊತ್ತ ಸಿಗಬಹುದು ಹಾಗೂ ಇದು ನಿಮ್ಮ ದ್ವಿಚಕ್ರ ವಾಹನಕ್ಕೆ ಸಾಕಾಗದೇ ಇರಬಹುದು. ನೆನಪಿಡಿ, ನಿಮ್ಮ ಐಡಿವಿ, ಹಾನಿ ಅಥವಾ ದುರಸ್ತಿಯ ಸಂದರ್ಭದಲ್ಲಿ ನಿಮ್ಮ ಇನ್ಶುರರ್ ನಿಮಗೆ ನೀಡಬಲ್ಲ ಗರಿಷ್ಠ ಮೊತ್ತವನ್ನು ನಿರ್ಧರಿಸುತ್ತದೆ. ಆದ್ದರಿಂದ ನಿಮ್ಮ ಐಡಿವಿ ಮತ್ತು ಪ್ರೀಮಿಯಮ್ ಕಡಿಮೆ ಇದ್ದಲ್ಲಿ, ಗರಿಷ್ಠ ಕ್ಲೈಮ್ ಮೊತ್ತ ಕೂಡಾ ಕಡಿಮೆ ಇರುತ್ತದೆ.