ಟು-ವೀಲರ್ ಇನ್ಶೂರೆನ್ಸ್
ಡಿಜಿಟ್ ನ ಟು-ವೀಲರ್ ವೆಹಿಕಲ್ ಇನ್ಶೂರೆನ್ಸ್‌ಗೆ ಬದಲಾಗಿ.

Third-party premium has changed from 1st June. Renew now

ಟು-ವೀಲರ್ ಇನ್ಶೂರೆನ್ಸ್‌ನಲ್ಲಿ ಡೈಲಿ ಕನ್ವೇಯನ್ಸ್ ಬೆನಿಫಿಟ್ ಆ್ಯಡ್-ಆನ್ ಕವರ್

ಡಿಜಿಟ್ ನೀಡುವ ಡೈಲಿ ಕನ್ವೇಯನ್ಸ್ ಅಥವಾ ದೈನಂದಿನ ಸಾಗಣೆ ಪ್ರಯೋಜನದ ಆ್ಯಡ್-ಆನ್ ಕವರ್ ನಿಮಗೆ, ದುರಸ್ತಿ ಅವಧಿಯಲ್ಲಿ ಉಂಟಾಗುವ ಸಾರಿಗೆ ವೆಚ್ಚಕ್ಕಾಗಿ ಇನ್ಶೂರೆನ್ಸ್ ಪೂರೈಕೆದಾರರು ಪರಿಹಾರ ನೀಡುತ್ತಾರೆ ಎಂಬುದನ್ನು ಖಚಿತಪಡಿಸುತ್ತದೆ. ಪರಿಹಾರವನ್ನು ಎರಡು ವಿಧಾನಗಳಲ್ಲಿ ಯಾವುದಾದರೂ ಒಂದು ವಿಧಾನದ ಮೂಲಕ ಮಾಡಬಹುದು - ಪ್ರತಿದಿನ ನಿಗದಿತ ಭತ್ಯೆಯನ್ನು ನೀಡುವುದು ಅಥವಾ ಟ್ಯಾಕ್ಸಿ ಆಪರೇಟರ್‌ಗಳಿಂದ ದೈನಂದಿನ ನಿಗದಿತ ಭತ್ಯೆಗೆ ಸಮನಾಗಿರುವ ಕೂಪನ್‌ಗಳನ್ನು ಒದಗಿಸುವುದು. ಪಾಲಿಸಿ ಶೆಡ್ಯೂಲ್‌ನಲ್ಲಿ ತಿಳಿಸಿರುವಂತೆ ಈ ಪ್ರಯೋಜನವನ್ನು ಒದಗಿಸಲಾಗುತ್ತದೆ. 

ಸೂಚನೆ: ಟು-ವೀಲರ್ ಇನ್ಶೂರೆನ್ಸ್‌ನಲ್ಲಿನ ಡೈಲಿ ಕನ್ವೇಯನ್ಸ್ ಅಥವಾ ದೈನಂದಿನ ಸಾಗಣೆ ಪ್ರಯೋಜನದ ಆ್ಯಡ್-ಆನ್ ಕವರ್ ಅನ್ನು 'ಡಿಜಿಟ್ ನ ಟು ಪ್ರೈವೇಟ್ ಪ್ಯಾಕೇಜ್ ಪಾಲಿಸಿ - ಭಾರತೀಯ ಇನ್ಶೂರೆನ್ಸ್ ರೆಗ್ಯುಲೆಟರಿ ಮತ್ತು ಡೆವಲಪ್ಮೆಂಟ್ ಅಥಾರಿಟಿ (ಐ.ಆರ್.ಡಿ.ಎ.ಐ) ಯೊಂದಿಗೆ ಯುಐಎನ್ ನಂಬರ್ IRDAN158RP0006V01201718/A0021V01201718 ನೊಂದಿಗೆ ಡೈಲಿ ಕನ್ವೇಯನ್ಸ್ ಬೆನಿಫಿಟ್' ಎಂದು ಸಲ್ಲಿಸಲಾಗಿದೆ.

ಡೈಲಿ ಕನ್ವೇಯನ್ಸ್ ಬೆನಿಫಿಟ್ ಆ್ಯಡ್-ಆನ್ ಅಡಿಯಲ್ಲಿ ಯಾವ ಅಂಶಗಳು ಕವರ್ ಆಗುತ್ತವೆ

ದೈನಂದಿನ ಸಾಗಣೆ ಪ್ರಯೋಜನದ ಆಡ್-ಆನ್ ಕವರ್ ಅನ್ನು ಪಡೆಯುವುದರಿಂದ ನೀವು ಈ ಕೆಳಗಿನವುಗಳಿಗಾಗಿ ಕವರ್ ಆಗುತ್ತೀರಿ ಎಂದು ಖಚಿತಪಡಿಸುತ್ತದೆ:

ಸಾರಿಗೆಗಾಗಿ ನಿಗದಿತ ಭತ್ಯೆ ಪಡೆಯುತ್ತೀರಿ

ಇನ್ಶೂರೆನ್ಸ್ ಮಾಡಲಾದ ವೆಹಿಕಲ್ ಅನ್ನು ರಿಪೇರಿ ಮಾಡುವಾಗ, ಸಾರಿಗೆ ಉದ್ದೇಶಗಳಿಗಾಗಿ ನಿಮಗೆ ಇನ್ಶೂರೆನ್ಸ್ ಪೂರೈಕೆದಾರರಿಂದ ನಿಗದಿತ ದೈನಂದಿನ ಭತ್ಯೆಯನ್ನು ನೀಡಲಾಗುತ್ತದೆ.

ಟ್ಯಾಕ್ಸಿ ಆಪರೇಟರ್‌ಗಳಿಂದ ಕೂಪನ್‌ಗಳು

ಇನ್ಶೂರೆನ್ಸ್ ಪೂರೈಕೆದಾರರು ನಿಮಗೆ ದಿನನಿತ್ಯದ ನಿಗದಿತ ಭತ್ಯೆಗೆ ಸಮಾನವಾದ ಮೊತ್ತಕ್ಕೆ ಓಲಾ ಮತ್ತು ಉಬರ್‌ನಂತಹ ಪ್ರಸಿದ್ಧ ಟ್ಯಾಕ್ಸಿ ಆಪರೇಟರ್‌ಗಳಿಂದ ಕೂಪನ್‌ಗಳನ್ನು ನೀಡುತ್ತಾರೆ.

ಏನನ್ನು ಕವರ್ ಮಾಡುವುದಿಲ್ಲ

ಬೇಸ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಪಟ್ಟಿ ಮಾಡಲಾದ ಸಾಮಾನ್ಯ ಹೊರಗಿಡುವಿಕೆಗಳ ಜೊತೆಗೆ, ದೈನಂದಿನ ಸಾಗಣೆ ಪ್ರಯೋಜನದ ಆ್ಯಡ್-ಆನ್ ಕವರ್‌ನ ಅಡಿಯಲ್ಲಿ, ಕೆಳಗಿನವುಗಳ ಸಂದರ್ಭದಲ್ಲಿ ಇನ್ಶೂರೆನ್ಸ್ ಪೂರೈಕೆದಾರರು ಯಾವುದೇ ಕ್ಲೈಮ್‌ಗಾಗಿ ಪಾವತಿಸಲು ಜವಾಬ್ದಾರರಾಗಿರುವುದಿಲ್ಲ:

  • ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ವ್ಯಾಲಿಡ್ ಆಗಿಲ್ಲದಿರುವುದು.

  • ವೆಹಿಕಲ್ ಇನ್ಶೂರೆನ್ಸ್‌ನ ಅಡಿಯಲ್ಲಿ ನೀವು ಮಾಡಿದ ಓನ್ ಡ್ಯಾಮೇಜ್ ಕ್ಲೈಮ್ ಅನ್ನು ಪಾವತಿಸಲಾಗುವುದಿಲ್ಲ/ಒಪ್ಪಲಾಗುವುದಿಲ್ಲ. 

  • ಡಿಜಿಟ್ ನ ಅಧಿಕೃತ ರಿಪೇರಿ ಶಾಪ್‌ನಲ್ಲಿ ಇನ್ಶೂರೆನ್ಸ್ ಮಾಡಲಾದ ವೆಹಿಕಲ್ ಅನ್ನು ರಿಪೇರಿ ಮಾಡಿಸದಿರುವುದು. 

  • ಭಗವಂತನ ಆಟದಿಂದ ಅಥವಾ ಮುಷ್ಕರ ಮತ್ತು ಗಲಭೆಗಳಿಂದ ನಷ್ಟಗಳು ಉಂಟಾಗುವುದು. 

  • ಯಾವುದೇ ರೀತಿಯ ಇನ್ಶೂರೆನ್ಸ್ ಪಾಲಿಸಿ ಅಥವಾ ಕವರ್‌ನ ಅಡಿಯಲ್ಲಿ ನಷ್ಟವನ್ನು ಕವರ್ ಆಗಿರುವುದು. 

  • ಇನ್ಶೂರೆನ್ಸ್ ಮಾಡಲಾದ ವೆಹಿಕಲ್‌ನ ದುರಸ್ತಿ ಪೂರ್ಣಗೊಂಡ ನಂತರ, ವೆಹಿಕಲ್ ಅನ್ನು ತೆಗೆದುಕೊಳ್ಳುವಲ್ಲಿ ಮಾಡುವ ವಿಳಂಬದ ಪ್ರಯೋಜನ.

  • ನೀವು ಆಯ್ಕೆ ಮಾಡಿದ ಹೆಚ್ಚುವರಿ ಸಮಯವು ಪಾಲಿಸಿಯಲ್ಲಿ ನಮೂದಿಸಿರುವ ಸಮಯಕ್ಕಿಂತ ಭಿನ್ನವಾಗಿರುವುದು. 

 

ಡಿಸ್‌ಕ್ಲೈಮರ್‌ - ಲೇಖನವು ಮಾಹಿತಿ ಉದ್ದೇಶಗಳಿಗಾಗಿ, ಇಂಟರ್ನೆಟ್‌ನಾದ್ಯಂತ ಮತ್ತು ಡಿಜಿಟ್‌ನ ಪಾಲಿಸಿ ಪದಗಳ ಡಾಕ್ಯುಮೆಂಟ್‌ಗೆ ಸಂಬಂಧಿಸಿದಂತೆ ಸಂಗ್ರಹಿಸಲಾಗಿದೆ. ಡಿಜಿಟ್ ಟು ವೀಲರ್ ಪ್ಯಾಕೇಜ್ ಪಾಲಿಸಿ - ದೈನಂದಿನ ಸಾಗಣೆ ಪ್ರಯೋಜನ (UIN: IRDAN158RP0006V01201718/A0021V01201718), ಇದರ ಬಗ್ಗೆ ವಿವರವಾದ ಕವರೇಜ್, ಹೊರಗಿಡುವಿಕೆಗಳು ಮತ್ತು ಷರತ್ತುಗಳಿಗಾಗಿ ನಿಮ್ಮ ಪಾಲಿಸಿ ಡಾಕ್ಯುಮೆಂಟ್ ಅನ್ನು ಎಚ್ಚರಿಕೆಯಿಂದ ನೋಡಿ.

 

ಟು-ವೀಲರ್ ಇನ್ಶೂರೆನ್ಸ್‌ನಲ್ಲಿ ಡೈಲಿ ಕನ್ವೇಯನ್ಸ್ ಬೆನಿಫಿಟ್ ಆ್ಯಡ್-ಆನ್ ಕವರ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು

ಒಂದು ವರ್ಷದಲ್ಲಿ ಡೈಲಿ ಕನ್ವೆಯನ್ಸ್ ಬೆನಿಫಿಟ್ ಆ್ಯಡ್-ಆನ್ ಕವರ್‌ನ ಅಡಿಯಲ್ಲಿ ಎಷ್ಟು ಕ್ಲೈಮ್‌ಗಳನ್ನು ಅನುಮತಿಸಲಾಗುತ್ತದೆ?

ಪಾಲಿಸಿಯ ಅವಧಿಯ ಪ್ರತಿ ವರ್ಷದಲ್ಲಿ ಈ ಆ್ಯಡ್-ಆನ್ ಅಡಿಯಲ್ಲಿ ಗರಿಷ್ಠ ಎರಡು ಕ್ಲೈಮ್‌ಗಳನ್ನು ಅನುಮತಿಸಲಾಗುತ್ತದೆ. 

ಇನ್ಶೂರೆನ್ಸ್ ಮಾಡಲಾದ ವೆಹಿಕಲ್‌ನ ಕಳ್ಳತನ ಮತ್ತು ನಂತರದ ಚೇತರಿಕೆಯ ಸಂದರ್ಭದಲ್ಲಿ, ಈ ಕವರ್‌ನ ಅಡಿಯಲ್ಲಿ ನೀಡಲಾಗುವ ಪ್ರಯೋಜನವನ್ನು ನಾನು ಆನಂದಿಸಲು ಸಾಧ್ಯವಾಗುತ್ತದೆಯೇ?

ಹೌದು, ಖಂಡಿತ ನಿಮಗೆ ಸಾಧ್ಯವಾಗುತ್ತದೆ. ಆದಾಗ್ಯೂ, ನೀವು ಆಯ್ಕೆ ಮಾಡಿದ ಗರಿಷ್ಠ ಸಂಖ್ಯೆಯ ದಿನಗಳಿಗೆ ಒಳಪಟ್ಟು ಅಂತಹ ಚೇತರಿಕೆಯ ದಿನಾಂಕದವರೆಗೆ ಪ್ರಯೋಜನವನ್ನು ಪಾವತಿಸಲಾಗುವುದು. 

ದೈನಂದಿನ ಸಾಗಣೆ ಪ್ರಯೋಜನದ ಆ್ಯಡ್-ಆನ್ ಅಡಿಯಲ್ಲಿ ಪ್ರಯೋಜನವನ್ನು ಪಡೆಯಲು, ಕ್ಲೈಮ್ ಅನ್ನು ಯಾವ ವಿಭಾಗದ ಅಡಿಯಲ್ಲಿ ಮಾಡಬೇಕು?

ಈ ಆ್ಯಡ್-ಆನ್ ಕವರ್ ಅಡಿಯಲ್ಲಿ ನೀಡುವ ಪ್ರಯೋಜನವನ್ನು ಆನಂದಿಸಲು ನೀವು ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯ ಸೆಕ್ಷನ್ 1 - ಓನ್ ಡ್ಯಾಮೇಜ್ ನ ಅಡಿಯಲ್ಲಿ ಕ್ಲೈಮ್ ಮಾಡಬೇಕು.