ಯಮಹಾ ರೇ-ಝೆಡ್ ಇನ್ಶೂರೆನ್ಸ್

ಯಮಹಾ ರೇ Z ವಿಮಾ ಪ್ರೀಮಿಯಂ ಅನ್ನು ತಕ್ಷಣವೇ ಪರಿಶೀಲಿಸಿ

Third-party premium has changed from 1st June. Renew now

ಯಮಹಾ ರೇ-ಝೆಡ್ ಇನ್ಶೂರೆನ್ಸ್ ಅನ್ನು ಆನ್‌ಲೈನ್ ಖರೀದಿಸಿ/ರಿನ್ಯೂ ಮಾಡಿ

ಮಹಿಳೆಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಯಮಹಾ ರೇ ಸ್ಕೂಟರ್‌ನ ಯಶಸ್ಸನ್ನು ಗಮನದಲ್ಲಿಟ್ಟುಕೊಂಡು, ಜಪಾನಿನ ಬೈಕ್ ತಯಾರಕರು ಪುರುಷರನ್ನು ಗುರಿಯಾಗಿಟ್ಟುಕೊಂಡು 2 ರೇ-ಝಡ್ ವೇರಿಯಂಟ್ ಗಳನ್ನು ಬಿಡುಗಡೆ ಮಾಡಿದರು. 2013 ರಲ್ಲಿ ಪರಿಚಯಿಸಲಾದ ರೇ-Z, ಸ್ಪೋರ್ಟಿ ಆಕರ್ಷಣೆಯೊಂದಿಗೆ ಅತ್ಯುತ್ತಮ ಪ್ರದರ್ಶನವನ್ನು ನೀಡಿತು.

ನೀವು ಇನ್ನೂ ಈ ಮಾಡೆಲ್ ಗಳಲ್ಲಿ ಯಾವುದಾದರೂ ಒಂದನ್ನು ರೈಡ್ ಮಾಡುತ್ತಿದ್ದರೆ, ಯಮಹಾ ರೇ-ಝೆಡ್ ಇನ್ಶೂರೆನ್ಸ್ ಅನ್ನು ಪಡೆಯುವುದು ನಿರ್ಣಾಯಕವಾಗಿದೆ. ಇದಲ್ಲದೆ,1988 ರ ಮೋಟಾರ್ ವೆಹಿಕಲ್ಆಕ್ಟ್ ಭಾರತದಲ್ಲಿನ ಎಲ್ಲಾ ಟು ವೀಲರ್ ಗಳಿಗೆ ಮೋಟಾರ್ ಸೈಕಲ್ ಇನ್ಶೂರೆನ್ಸ್ ಅನ್ನು ಕಡ್ಡಾಯಗೊಳಿಸಿದೆ.

ಈಗ, ನೀವು ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆಮಾಡುವ ಮೊದಲು, ನಿಮ್ಮ ಬಜೆಟ್ ಮತ್ತು ಅವಶ್ಯಕತೆಗಳಿಗೆ ಸೂಕ್ತವಾದ ನಿರ್ದಿಷ್ಟ ನಿಯತಾಂಕಗಳನ್ನು ಪರಿಶೀಲಿಸಬೇಕಾಗುತ್ತದೆ. ಡಿಜಿಟ್ ಇನ್ಶೂರೆನ್ಸ್‌ನಂತಹ ಪ್ರಮುಖ ಇನ್ಶೂರರ್ ಗಳು ಗರಿಷ್ಠ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತವೆ.

ಯಮಹಾ ರೇ-ಝೆಡ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿರುತ್ತದೆ

ನೀವು ಡಿಜಿಟ್‌ನ ಯಮಹಾ ರೇ-ಝೆಡ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಯಮಹಾ ರೇ-ಝೆಡ್ ಗೆ ಇನ್ಶೂರೆನ್ಸ್ ಪ್ಲಾನ್ ಗಳ ವಿಧಗಳು

ಥರ್ಡ್-ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದಾಗಿ ಸ್ವಂತ ಟು ವೀಲರ್ ಗೆ ಹಾನಿ/ನಷ್ಟ

×

ಬೆಂಕಿಯಿಂದಾಗಿ ಸ್ವಂತ ಟು ವೀಲರ್ ಗೆ ಹಾನಿ/ನಷ್ಟ

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಟು ವೀಲರ್ ಗೆ ಆದ ಹಾನಿ/ನಷ್ಟಗಳು

×

ಥರ್ಡ್-ಪಾರ್ಟಿ ವಾಹನಕ್ಕೆ ಹಾನಿ

×

ಥರ್ಡ್-ಪಾರ್ಟಿ ಆಸ್ತಿಗೆ ಹಾನಿ

×

ವೈಯಕ್ತಿಕ ಅಪಘಾತ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು

×

ನಿಮ್ಮ ಸ್ಕೂಟರ್ ಅಥವಾ ಬೈಕಿನ ಕಳ್ಳತನ

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ ಮಾಡಲಾದ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್-ಪಾರ್ಟಿ ಟು ವೀಲರ್ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ

ಕ್ಲೈಮ್ ಅನ್ನು ಫೈಲ್ ಮಾಡುವುದು ಹೇಗೆ?

ನಮ್ಮ ಟು ವೀಲರ್ ಇನ್ಶೂರೆನ್ಸ್ ಪ್ಲಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನ್ಯೂ ಮಾಡಿದ ನಂತರ, ನಾವು 3-ಸ್ಟೆಪ್, ಸಂಪೂರ್ಣ ಡಿಜಿಟಲ್ ಆದ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿರುವುದರಿಂದ ನೀವು ಚಿಂತೆಯಿಲ್ಲದೆ ಹಾಯಾಗಿ ಬದುಕುತ್ತೀರಿ!

ಹಂತ 1

1800-258-5956 ಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ.

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ನಲ್ಲಿ ಸ್ವತಪಾಸಣೆಗಾಗಿ ಲಿಂಕ್ ಅನ್ನು ಪಡೆಯಿರಿ. ಮಾರ್ಗದರ್ಶನವಿರುವ ಹಂತ ಹಂತವಾದ ಪ್ರಕ್ರಿಯೆಯಿಂದ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನಕ್ಕಾದ ಡ್ಯಾಮೇಜ್ ಗಳನ್ನು ಶೂಟ್ ಮಾಡಿ.

ಹಂತ 3

ನೀವು ಆಯ್ಕೆ ಮಾಡಲು ಬಯಸುವ ರಿಪೇರಿ ವಿಧಾನವನ್ನು ಆರಿಸಿ, ಅಂದರೆ, ರಿಇಂಬರ್ಸ್‌ಮೆಂಟ್ ಅಥವಾ ನಮ್ಮ ಗ್ಯಾರೇಜ್ ಗಳ ನೆಟ್‌ವರ್ಕ್ ಮೂಲಕ ಕ್ಯಾಶ್‌ಲೆಸ್ ರಿಪೇರಿ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳ ಇತ್ಯರ್ಥ ಎಷ್ಟು ಬೇಗ ಆಗುತ್ತದೆ? ನಿಮ್ಮ ಇನ್ಶೂರೆನ್ಸ್ ಕಂಪೆನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವು ಅದನ್ನೇ ಮಾಡುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್ ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ಯಮಹಾ ರೇ-ಝೆಡ್ ಇನ್ಶೂರೆನ್ಸ್ ಗಾಗಿ ಡಿಜಿಟ್ ಅನ್ನು ಆರಿಸಲು ಕಾರಣಗಳು

ಅನಗತ್ಯ ಮತ್ತು ಅನಿವಾರ್ಯ ಹಾನಿ ರಿಪೇರಿ ವೆಚ್ಚಗಳಿಂದ ನಿಮ್ಮನ್ನು ಮುಕ್ತಗೊಳಿಸಲು ಡಿಜಿಟಲ್ ಇನ್ಶೂರೆನ್ಸ್ ಲಾಭದಾಯಕ ಕೊಡುಗೆಗಳ ಒಂದು ಶ್ರೇಣಿಯನ್ನೇ ಒದಗಿಸುತ್ತದೆ. ಡಿಜಿಟ್ ಇನ್ಶೂರೆನ್ಸ್ ಅದರ ಪ್ರತಿಸ್ಪರ್ಧಿಗಳಿಂದ ಹೇಗೆ ಭಿನ್ನವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಕೆಳಗಿನ ವಿಭಾಗವನ್ನು ನೋಡೋಣ.

  • ಇನ್ಶೂರೆನ್ಸ್ ಪಾಲಿಸಿಗಳ ಆನ್‌ಲೈನ್ ಲಭ್ಯತೆ - ಯಮಹಾ ರೇ-ಝೆಡ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸುವ ಆಯ್ಕೆಯನ್ನು ಡಿಜಿಟ್ ನಿಮಗೆ ನೀಡುತ್ತದೆ. ಆದ್ದರಿಂದ, ನಿಮ್ಮ ಬೈಕ್‌ಗಳನ್ನು ಬುಕ್ ಮಾಡುವ ಮೊದಲು, ಅವುಗಳ ಬೆಲೆಗಳೊಂದಿಗೆ ಲಭ್ಯವಿರುವ ಆಯ್ಕೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಡಿಜಿಟ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ನೀವು ಅವುಗಳ ಖಾತೆಗಳಿಗೆ ಸೈನ್ ಇನ್ ಮಾಡುವ ಮೂಲಕವೂ ಆನ್‌ಲೈನ್‌ನಲ್ಲಿ ಯಮಹಾ ರೇ-ಝೆಡ್ ಇನ್ಶೂರೆನ್ಸ್ ರಿನೀವಲ್ ನ ಆಯ್ಕೆ ಮಾಡಬಹುದು.

  • ಉತ್ಪನ್ನಗಳ ವ್ಯಾಪಕ ಶ್ರೇಣಿ - ಡಿಜಿಟ್‌ನಲ್ಲಿ, ನಿಮ್ಮ ಬಜೆಟ್ ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಇನ್ಶೂರೆನ್ಸ್ ಪಾಲಿಸಿಗಳನ್ನು ಆಯ್ಕೆ ಮಾಡುವ ಅವಕಾಶವನ್ನು ನೀವು ಪಡೆಯುತ್ತೀರಿ. ಉದಾಹರಣೆಗೆ,

  • ಥರ್ಡ್-ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯು ಬೇಸಿಕ್ ಆಗಿದ್ದರೂ, ಥರ್ಡ್-ಪಾರ್ಟಿ ಲಯಬಿಲಿಟಿಗಳಿಂದ ಸಂಪೂರ್ಣ ರಕ್ಷಣೆ ನೀಡುತ್ತದೆ. ಅಂದರೆ, ನಿಮ್ಮ ಬೈಕು ಮತ್ತೊಂದು ವೆಹಿಕಲ್ ಅಥವಾ ಪ್ರಾಪರ್ಟಿಗೆ ಹಾನಿಯನ್ನುಂಟುಮಾಡಿದರೆ ಅಥವಾ ಯಾವುದೇ ವ್ಯಕ್ತಿಯನ್ನು ಗಾಯಗೊಳಿಸಿದರೆ, ಡಿಜಿಟ್ ಎಲ್ಲಾ ವೆಚ್ಚಗಳನ್ನು ಭರಿಸುತ್ತದೆ. ಅಂತಹ ಸಂದರ್ಭಗಳಲ್ಲಿ ಉದ್ಭವಿಸಬಹುದಾದ ಮೊಕದ್ದಮೆ ಸಮಸ್ಯೆಗಳನ್ನೂ ಡಿಜಿಟ್ ನಿಭಾಯಿಸುತ್ತದೆ.
  • ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯು ಥರ್ಡ್-ಪಾರ್ಟಿ ಲಯಬಿಲಿಟಿಗಳು ಮತ್ತು ಓನ್ ಡ್ಯಾಮೇಜ್ ರಿಪೇರಿ ವೆಚ್ಚಗಳು ಎರಡನ್ನೂ ಕವರ್ ಮಾಡುವ ಇನ್ನಷ್ಟು ವಿಶಾಲವಾದ ರಕ್ಷಣೆಯನ್ನು ನೀಡುತ್ತದೆ. ಆ್ಯಡ್-ಆನ್‌ಗಳೊಂದಿಗೆ ನಿಮ್ಮ ಪಾಲಿಸಿಯನ್ನು ಮತ್ತಷ್ಟು ಉನ್ನತೀಕರಿಸಲು ಡಿಜಿಟ್ ನಿಮಗೆ ಅವಕಾಶವನ್ನು ನೀಡುತ್ತದೆ.

ಸೂಚನೆ : ಥರ್ಡ್-ಪಾರ್ಟಿ ಪಾಲಿಸಿಯು ಓನ್ ಡ್ಯಾಮೇಜ್ ಪ್ರೊಟೆಕ್ಷನ್ ಅನ್ನು ನೀಡುವುದಿಲ್ಲ. ಆದ್ದರಿಂದ, ಅಂತಹ ಅವರೇಜ್ ಅನ್ನು ಬಳಸಿಕೊಳ್ಳಲು, ಹೆಚ್ಚುವರಿ ಶುಲ್ಕಗಳನ್ನು ಪಾವತಿಸಿ ಸ್ಟ್ಯಾಂಡಲೋನ್ ಓನ್ ಡ್ಯಾಮೇಜ್ ಪ್ರೊಟೆಕ್ಷನ್ ಅನ್ನು ಆರಿಸಿಕೊಳ್ಳಿ.

  • ತಕ್ಷಣ ಕ್ಲೈಮ್ ಇತ್ಯರ್ಥ - ಈಗ 3-ಸುಲಭ ಸ್ಟೆಪ್ ಗಳಲ್ಲಿ ತಕ್ಷಣವೇ ಕ್ಲೈಮ್ ಅನ್ನು ಫೈಲ್ ಮಾಡಿ.

  • ಸ್ವತಪಾಸಣೆ ಲಿಂಕ್ ಪಡೆಯಲು ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ನಿಂದ 1800 258 5956 ಗೆ ಕರೆ ಮಾಡಿ
  • ಎಲ್ಲಾ ಸಂಬಂಧಿತ ಚಿತ್ರಗಳನ್ನು ಲಿಂಕ್‌ನಲ್ಲಿ ಸಲ್ಲಿಸಿ
  • ನಿಮಗೆ ಬೇಕಾದ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ, "ರಿಇಂಬರ್ಸ್‌ಮೆಂಟ್" ಅಥವಾ "ಕ್ಯಾಶ್‌ಲೆಸ್"
  • ಆ್ಯಡ್-ಆನ್‌ಗಳೊಂದಿಗೆ ಪಾಲಿಸಿ ಕಸ್ಟಮೈಸೇಶನ್ - ನಿಮ್ಮ ಬೇಸ್ ಪಾಲಿಸಿಯನ್ನು ಹೆಚ್ಚಿಸಿ ಹೆಚ್ಚಿನ ಹಣವನ್ನು ಉಳಿಸಲು ನಿಮಗೆ ಸಹಾಯ ಮಾಡಲು ಡಿಜಿಟ್ ಇನ್ಶೂರೆನ್ಸ್ 5 ಆ್ಯಡ್-ಆನ್‌ಗಳನ್ನು ಒದಗಿಸುತ್ತದೆ. ಇವುಗಳ ಆಯೆಗಳು ಈ ರೀತಿ ಇವೆ-

○ ರಿಟರ್ನ್ ಟು ಇನ್‌ವಾಯ್ಸ್

○ ಕನ್ಸ್ಯೂಮೆಬಲ್ ಕವರ್

○ ಎಂಜಿನ್ ಪ್ರೊಟೆಕ್ಷನ್

ಝೀರೋ ಡೆಪ್ರಿಸಿಯೇಶನ್

○ ಬ್ರೇಕ್ ಡೌನ್ ರಿಕವರಿ

ಸೂಚನೆ : ಹೆಚ್ಚುವರಿ ಶುಲ್ಕಗಳನ್ನು ಪಾವತಿಸಿ ಯಮಹಾ ರೇ-ಝೆಡ್ ಇನ್ಶೂರೆನ್ಸ್ ಪಾಲಿಸಿ ರಿನೀವಲ್ ಮಾಡಿದ ನಂತರ ನೀವು ಈ ಆ್ಯಡ್-ಆನ್‌ಗಳನ್ನು ಮುಂದಕ್ಕೆ ಸಾಗಿಸಬಹುದು.

  • ಇನ್ಶೂರ್ಡ್ ಡಿಕ್ಲೇರ್ಡ್ ಮೌಲ್ಯ ಮಾರ್ಪಾಡು - ಡಿಜಿಟ್ ಅನ್ನು ಆಯ್ಕೆ ಮಾಡಲು ಮತ್ತೊಂದು ಕಾರಣ ಐಡಿವಿ ಅನ್ನು ಮಾರ್ಪಡಿಸುವ ಅದರ ಆಯ್ಕೆಯಾಗಿದೆ. ಐಡಿವಿ ಹೆಚ್ಚಿದ್ದರೆ, ಡಿಜಿಟ್ ನಿಮ್ಮ ಬೈಕ್‌ಗೆ ಸಂಪೂರ್ಣ ನಷ್ಟ ಅಥವಾ ಸರಿಪಡಿಸಲಾಗದ ಹಾನಿಯ ಸಂದರ್ಭದಲ್ಲಿ ಹೆಚ್ಚಿನ ಕಾಂಪನ್ಸೇಶನ್ ಒದಗಿಸುತ್ತದೆ. ಆದಾಗ್ಯೂ, ನೀವು ಈ ಪ್ರಯೋಜನವನ್ನು ಹೆಚ್ಚುವರಿ ಶುಲ್ಕಗಳನ್ನು ಪಾವತಿಸಿದ ನಂತರ ಮಾತ್ರ ಬಳಸಿಕೊಳ್ಳಬಹುದು.

  • ಗ್ಯಾರೇಜ್‌ಗಳ ವ್ಯಾಪಕ ನೆಟ್‌ವರ್ಕ್ - 2900 ಕ್ಕೂ ಹೆಚ್ಚು ಡಿಜಿಟ್ ನೆಟ್‌ವರ್ಕ್ ಬೈಕು ಗ್ಯಾರೇಜ್‌ಗಳು ದೇಶದ ಯಾವುದೇ ಮೂಲೆಯಲ್ಲಿ ನಿಮಗೆ ಸೇವೆ ಸಲ್ಲಿಸಲು ಲಭ್ಯವಿದೆ. ಈ ಗ್ಯಾರೇಜ್‌ಗಳಲ್ಲಿ ಯಾವುದಾದರೂ ಕ್ಯಾಶ್‌ಲೆಸ್ ರಿಪೇರಿಗಾಗಿ ನೀವು ಆಯ್ಕೆ ಮಾಡಬಹುದು.

  • ವಿಶ್ವಾಸಾರ್ಹ ಗ್ರಾಹಕ ಬೆಂಬಲ ಸೇವೆ - ನಿಮ್ಮ ಇನ್ಶೂರೆನ್ಸ್-ಸಂಬಂಧಿತ ಪ್ರಶ್ನೆಗಳಿಗೆ ಪರಿಣಾಮಕಾರಿ ಮತ್ತು ತ್ವರಿತ ಪರಿಹಾರಗಳನ್ನು ನೀಡಲು ಡಿಜಿಟ್ ಇನ್ಶೂರೆನ್ಸ್ 24X7 ಸಿದ್ಧವಾಗಿದೆ.

ಡಿಜಿಟ್‌ನಲ್ಲಿ, ನಿಮ್ಮ ರೇ-Z ಇನ್ಶೂರೆನ್ಸ್ ಬೆಲೆಯನ್ನು ಕಡಿಮೆ ಮಾಡಲು ನೀವು ಮತ್ತಷ್ಟು ಅವಕಾಶವನ್ನು ಪಡೆಯುತ್ತೀರಿ. ನೀವು ಮಾಡಬೇಕಾಗಿರುವುದು, ಕೇವಲ ವಾಲಂಟರಿ ಡಿಡಕ್ಟಿಬಲ್ ಅನ್ನು ಆರಿಸುವುದು ಮತ್ತು ಸಣ್ಣ ಕ್ಲೈಮ್ ಗಳನ್ನು ತಪ್ಪಿಸುವುದು.

ನಿಮ್ಮ ಯಮಹಾ ರೇ-ಝೆಡ್ ಇನ್ಶೂರೆನ್ಸ್ ಪಾಲಿಸಿಗಾಗಿ ಡಿಜಿಟ್ ಅನ್ನು ಏಕೆ ಆರಿಸಬೇಕು?

ಬೈಕ್ ಇನ್ಶೂರೆನ್ಸ್ ಉದ್ದೇಶವು ನಿಮ್ಮ ಬೈಕ್ ರಿಪೇರಿಗೆ ಆರ್ಥಿಕ ರಕ್ಷಣೆ ನೀಡುವುದು ಮಾತ್ರವಾಗಿರುವುದಿಲ್ಲ. ಸವಾರನು ಗಾಯಗೊಂಡರೆ ಅಥವಾ ದುರಾದೃಷ್ಟವಶಾತ್ ಸಾವಿಗೀಡಾದರೆ ಇದು ಸಮಾನವಾದ ಕಾಂಪನ್ಸೇಶನ್ ಅನ್ನು ಒದಗಿಸುತ್ತದೆ.

ಟು ವೀಲರ್ ಇನ್ಶೂರೆನ್ಸ್ ನ ಮಹತ್ವವನ್ನು ವಿವರವಾಗಿ ತಿಳಿದುಕೊಳ್ಳಲು ಕೆಳಗಿನ ಪಾಯಿಂಟರ್‌ಗಳ ಅಧ್ಯಯನ ಮಾಡೋಣ.

  • ಕಾನೂನು ಪರಿಣಾಮಗಳಿಂದ ಉಳಿಸುತ್ತದೆ - ವ್ಯಾಲಿಡ್ ಇನ್ಶೂರೆನ್ಸ್ ಡಾಕ್ಯುಮೆಂಟ್ ಗಳು ಭಾರತೀಯ ಬೀದಿಗಳಲ್ಲಿ ರಸ್ತೆ ಕಾನೂನುಬದ್ಧವಾಗಿ ಉಳಿಯಲು ನಿಮಗೆ ಸಹಾಯ ಮಾಡುತ್ತದೆ. ಈ ರೀತಿಯಲ್ಲಿ, ನೀವು ಇನ್ನು ಮುಂದೆ ₹ 2,000 ಮತ್ತು ₹ 4,000 ಅನ್ನು ದಂಡಕ್ಕಾಗಿ ಖರ್ಚು ಮಾಡಬೇಕಾಗಿಲ್ಲ. ಆದಾಗ್ಯೂ, ಯಾವುದೇ ಉಲ್ಲಂಘನೆಯು ಡ್ರೈವಿಂಗ್ ಲೈಸೆನ್ಸ್ ಕ್ಯಾನ್ಸಲೇಷನ್ ಗೆ ಮತ್ತು 3 ತಿಂಗಳವರೆಗೆ ಜೈಲು ಶಿಕ್ಷೆಗೆ ಕಾರಣವಾಗಬಹುದು.

  • ಓನ್ ಡ್ಯಾಮೇಜ್ ವೆಚ್ಚಗಳಿಂದ ರಕ್ಷಿಸುತ್ತದೆ - ಯಮಹಾ ರೇ-ಝೆಡ್ ಯ ಟು ವೀಲರ್ ಇನ್ಶೂರೆನ್ಸ್ ನೊಂದಿಗೆ, ರಿಪೇರಿ ವೆಚ್ಚಗಳ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. ಅಂದರೆ ನಿಮ್ಮ ಬೈಕ್ ಅಪಘಾತದಲ್ಲಿ, ಅಥವಾ ಪ್ರವಾಹ, ಭೂಕಂಪ, ಭಾರೀ ಮಳೆ, ಬೆಂಕಿ ಮತ್ತು ಇತರ ವಿಪತ್ತುಗಳಿಂದಾಗಿ ಹಾನಿಗೊಳಗಾದರೆ, ನಿಮ್ಮ ಇನ್ಶೂರರ್ ಎಲ್ಲಾ ವೆಚ್ಚಗಳನ್ನು ಭರಿಸುತ್ತಾರೆ.

  • ವೈಯಕ್ತಿಕ ಅಪಘಾತದ ರಕ್ಷಣೆಯನ್ನು ಒದಗಿಸುತ್ತದೆ - ಒಂದು ಅಪಘಾತವು ಸವಾರನನ್ನು ಶಾಶ್ವತವಾಗಿ ಅಥವಾ ಭಾಗಶಃವಾಗಿ ನಿಷ್ಕ್ರಿಯಗೊಳಿಸಬಹುದು ಮತ್ತು ಸಾವಿಗೆ ಸಹ ಕಾರಣವಾಗಬಹುದು. ಈ ನಿಟ್ಟಿನಲ್ಲಿ, ಐಆರ್‌ಡಿಎಐ ಭಾರತದಲ್ಲಿ ವೈಯಕ್ತಿಕ ಅಪಘಾತ ಕವರ್ಅನ್ನು ಕಡ್ಡಾಯಗೊಳಿಸಿದೆ. ಈ ಕವರೇಜ್ ಅಡಿಯಲ್ಲಿ, ಇಂತಹ ದುರದೃಷ್ಟಕರ ಘಟನೆಗಳಲ್ಲಿ ಇನ್ಶೂರರ್ ನಿಂದ ನೊಂದ ಕುಟುಂಬಕ್ಕೆ ಕಾಂಪನ್ಸೇಶನ್ ದೊರೆಯುತ್ತದೆ.

  • ಥರ್ಡ್-ಪಾರ್ಟಿ ಜವಾಬ್ದಾರಿಗಳನ್ನು ಕವರ್ ಮಾಡುತ್ತದೆ - ಮೋಟಾರು ವಾಹನಗಳ ಕಾಯಿದೆ 1988 ರ ಪ್ರಕಾರ, ಸಂಬಂಧಿತ ಇನ್ಶೂರೆನ್ಸ್ ಪಾಲಿಸಿ ಡಾಕ್ಯುಮೆಂಟ್ ಗಳಿಲ್ಲದೆ ಮೋಟಾರ್‌ಸೈಕಲ್‌ಗಳನ್ನು ರೈಡ್ ಮಾಡುವುದು ಭಾರತದಲ್ಲಿ ಕಾನೂನುಬಾಹಿರವಾಗಿದೆ. ಈ ರಕ್ಷಣೆಯೊಂದಿಗೆ ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ವಿರುದ್ಧ ನಿಮ್ಮ ಇನ್ಶೂರರ್ ನೇರವಾಗಿ ಪೀಡಿತ ಪಕ್ಷಕ್ಕೆ ಹಣಕಾಸಿನ ನೆರವು ನೀಡುತ್ತಾರೆ.

  • ಪ್ರೀಮಿಯಂಗಳ ಮೇಲಿನ ಡಿಸ್ಕೌಂಟ್ ಗಳು - ಒಮ್ಮೆ ನೀವು ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ವಿರುದ್ಧ ಯಾವುದೇ ಕ್ಲೈಮ್ ಅನ್ನು ಮಾಡದೆಯೇ ಒಂದು ವರ್ಷವನ್ನು ಪೂರ್ಣಗೊಳಿಸಿದರೆ, ನಿಮ್ಮ ಇನ್ಶೂರರ್ ಪ್ರೀಮಿಯಂಗಳ ಮೇಲೆ ನೋ ಕ್ಲೈಮ್ ಬೋನಸ್ ಡಿಸ್ಕೌಂಟ್ ಅನ್ನು ನಿಮಗೆ ಬಹುಮಾನವಾಗಿ ನೀಡುತ್ತಾರೆ. ಉದಾಹರಣೆಗೆ, ಡಿಜಿಟ್‌ನಂತಹ ಇನ್ಶೂರೆನ್ಸ್ ಪೂರೈಕೆದಾರರು ಕ್ಲೈಮ್ ಮಾಡದ ವರ್ಷಗಳ ಸಂಖ್ಯೆಯನ್ನು ಅವಲಂಬಿಸಿ 20% ರಿಂದ 50% ಡಿಸ್ಕೌಂಟ್ ಗಳನ್ನು ವಿಸ್ತರಿಸುತ್ತಾರೆ.

ಈ ಕಾರಣಗಳು ಭಾರತದಲ್ಲಿ ಬೈಕ್ ಇನ್ಶೂರೆನ್ಸ್ ಪಾಲಿಸಿ ಏಕೆ ಕಡ್ಡಾಯವಾಗಿದೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತವೆ.

ಯಮಹಾ ರೇ-ಝೆಡ್ ಕುರಿತು ಇನ್ನಷ್ಟು ತಿಳಿಯಿರಿ

ಸ್ಪೋರ್ಟಿ ಗ್ರಾಫಿಕ್ಸ್ ಜೊತೆಗಿನ ತೀಕ್ಷ್ಣವಾದ ಏರೋಡೈನಾಮಿಕ್ ವಿನ್ಯಾಸವು ರೇ-Z ಮಾಡೆಲ್ ಗಳನ್ನು ತನ್ನ ವಿಭಾಗದಲ್ಲಿ ಎದ್ದು ಕಾಣುವಂತೆ ಮಾಡಿತ್ತು. ಇದರ ಕೆಲವು ಅತ್ಯಾಧುನಿಕ ವೈಶಿಷ್ಟ್ಯಗಳೆಂದರೆ-

  • ಎಂಜಿನ್ - 113 ಸಿಸಿ ಏರ್-ಕೂಲ್ಡ್ ಮೋಟರ್‌ ಅನ್ನು ಹೊಂದಿರುವ ರೇ-Z ವರ್ಷನ್ , 7.2 ಪಿಎಸ್ ಗರಿಷ್ಠ ಶಕ್ತಿ ಮತ್ತು 8.1 ಎನ್ಎಂ ಗರಿಷ್ಠ ಟಾರ್ಕ್ ಅನ್ನು ನೀಡಿತ್ತು. ಸುಗಮವಾದ ರೈಡಿಂಗ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಈ ಮಾಡೆಲ್ ಗಳು ಗೇರ್‌ಲೆಸ್ ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ ಲಭ್ಯವಿದ್ದವು.
  • ಸಸ್ಪೆನ್ಷನ್ - ರೇ-Z ಎರಡೂ ತುದಿಗಳಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್ ಮತ್ತು ಟ್ಯೂಬ್‌ಲೆಸ್ ಟೈರ್‌ಗಳೊಂದಿಗೆ ಬರುತ್ತಿತ್ತು.
  • ಬ್ರೇಕಿಂಗ್ - ರೇ-Z ಎರಡೂ ತುದಿಗಳಲ್ಲಿ 130 ಎಂಎಂ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿತ್ತು.
  • ಬಿಲ್ಡ್ - ರೇ-Z ನ ಮುಂಭಾಗದ ಬಾಡಿವರ್ಕ್ ಎಡ ಮತ್ತು ಬಲ ಇಂಡಿಕೇಟರ್ ಗಳೊಂದಿಗೆ ಹೆಡ್‌ಲ್ಯಾಂಪ್ ಅನ್ನು ಪ್ರದರ್ಶಿಸುತ್ತದೆ. ಇದಲ್ಲದೆ, ಕಾರ್ಬನ್ ಫೈಬರ್ ಮಾದರಿಯೊಂದಿಗೆ ಜೋಡಿಸಲಾದ ಅಲ್ಯೂಮಿನಿಯಂ ವಿಂಗ್ ಗ್ರಾಬ್ ರೈಲ್ ಮತ್ತು ಸ್ಪೀಡೋಮೀಟರ್ ಒಟ್ಟಾರೆ ಆಕರ್ಷಣೆಯನ್ನು ಹೆಚ್ಚಿಸುತ್ತದೆ.
  • ರೈಡಿಂಗ್ ದಕ್ಷತಾಶಾಸ್ತ್ರ - ರೇ-Z ನೇರವಾದ, ಆರಾಮದಾಯಕವಾದ ಆಸನವನ್ನು ನೀಡಿತ್ತು. ಇದಲ್ಲದೆ, ಫ್ಲೋರ್‌ಬೋರ್ಡ್‌ನಲ್ಲಿ ಎರಡೂ ಪಾದಗಳಿಗೆ ಸಾಕಷ್ಟು ಲೆಗ್‌ರೂಮ್ ಇರುವುದನ್ನು ಇದರ ವೇರಿಯಂಟ್ ಗಳು ಖಚಿತಪಡಿಸಿದ್ದವು.

ಅದೇನೇ ಇದ್ದರೂ, ರೇ-Z ಬೈಕ್‌ಗಳು ಇತರ ಯಾವುದೇ ಮೋಟಾರ್‌ಸೈಕಲ್‌ಗಳಂತೆ ಅಪಘಾತಗಳಿಗೆ ಸಮಾನವಾಗಿ ಒಳಗಾಗುತ್ತವೆ. ಆದ್ದರಿಂದ, ಯಮಹಾ ರೇ-ಝೆಡ್ ಇನ್ಶೂರೆನ್ಸ್ ಅನಗತ್ಯ ವೆಚ್ಚಗಳನ್ನು ಹೊರತೆಗೆಯಲು ನಿರ್ಣಾಯಕವಾಗಿದೆ.

ಯಮಹಾ ರೇ-ಝೆಡ್ - ವೇರಿಯಂಟ್ ಗಳು ಮತ್ತು ಎಕ್ಸ್ ಶೋರೂಂ ಬೆಲೆ

ವೇರಿಯಂಟ್ ಗಳು ಎಕ್ಸ್ ಶೋರೂಂ ಬೆಲೆ (ನಗರಕ್ಕೆ ಅನುಗುಣವಾಗಿ ಬದಲಾಗಬಹುದು)
ಸ್ಟ್ಯಾಂಡರ್ಡ್ ₹ 52,949 ಯುಬಿಎಸ್ ₹ 53,349

ಭಾರತದಲ್ಲಿ ಯಮಹಾ ರೇ-ಝೆಡ್ ಟು ವೀಲರ್ ಇನ್ಶೂರೆನ್ಸ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು

3 ಕ್ಲೈಮ್-ಮುಕ್ತ ವರ್ಷಗಳ ವಿರುದ್ಧ ಡಿಜಿಟ್ ಎಷ್ಟು ನೋ ಕ್ಲೈಮ್ ಬೋನಸ್ ಡಿಸ್ಕೌಂಟ್ ಅನ್ನು ನೀಡುತ್ತದೆ?

ಡಿಜಿಟ್ ಇನ್ಶೂರೆನ್ಸ್ 3 ಕ್ಲೈಮ್-ಫ್ರೀ ವರ್ಷಗಳ ವಿರುದ್ಧ 35% ಡಿಸ್ಕೌಂಟ್ ಅನ್ನು ವಿಸ್ತರಿಸುತ್ತದೆ.

ರಿಟರ್ನ್ ಟು ಇನ್‌ವಾಯ್ಸ್ ಆ್ಯಡ್-ಆನ್‌ ಏನನ್ನು ಕವರ್ ಮಾಡುವುದಿಲ್ಲ?

ರಿಟರ್ನ್ ಟು ಇನ್‌ವಾಯ್ಸ್ ಆ್ಯಡ್-ಆನ್‌ ಈ ಕೆಳಗಿನ ಸಂದರ್ಭಗಳಲ್ಲಿ ರಕ್ಷಣೆಯನ್ನು ಒದಗಿಸುವುದಿಲ್ಲ.

  • ನಿಮ್ಮ ಬೈಕು ಹಳೆಯದಾಗಿದ್ದರೆ.
  • ನಿಮ್ಮ ಬೈಕ್ ರಿಪೇರಿಗೂ ಮೀರಿದಷ್ಟು ಹಾನಿಗೊಳಗಾಗದಿದ್ದರೆ.
  • ವ್ಯಾಲಿಡ್ ಎಫ್ಐಆರ್ ಅಥವಾ ಪೊಲೀಸ್ ದೂರು ಡಾಕ್ಯುಮೆಂಟ್ ಗಳಿಲ್ಲದೆ ನೀವು ಕ್ಲೈಮ್ ಅನ್ನು ರೈಸ್ ಮಾಡಿದರೆ.