ಬಜಾಜ್ ಪ್ಲಾಟಿನಾ ಇನ್ಶೂರೆನ್ಸ್

₹752 ರಿಂದ ಪ್ರಾರಂಭವಾಗುವ ಬಜಾಜ್ ಪ್ಲಾಟಿನಾ ಬೈಕ್ ವಿಮಾ ಪಾಲಿಸಿಯನ್ನು ಪರಿಶೀಲಿಸಿ

Third-party premium has changed from 1st June. Renew now

source

ನಿಮ್ಮ ಜೇಬಿಗೂ ಸರಿಯಾದ, ಆದರೆ ಆರ್ಥಿಕವಾಗಿಯೂ ಸದೃಢವಾದ ರೈಡ್‌ಗಾಗಿ ಹುಡುಕುತ್ತಿರುವಿರಾ? ಹಾಗಿದ್ದರೆ, ಬಜಾಜ್ ಪ್ಲಾಟಿನಾ ನಿಮ್ಮ ಬಿಲ್‌ಗೆ ಸರಿಯಾಗಿ ಹೊಂದಿಕೊಳ್ಳುತ್ತದೆ ಆದಾಗ್ಯೂ, ಗಟ್ಟಿಮುಟ್ಟಾದ ಬೈಕ್‌ಗೆ ರಸ್ತೆಯಲ್ಲಿನ ಅಪಾಯಗಳಿಂದ ರಕ್ಷಿಸಲು ಸರಿಯಾದ ಇನ್ಶೂರೆನ್ಸ್ ಪಾಲಿಸಿಯ ಅಗತ್ಯವಿದೆ. ಅತ್ಯುತ್ತಮ ಬಜಾಜ್ ಪ್ಲಾಟಿನಾ ಇನ್ಶೂರೆನ್ಸ್ ಪಾಲಿಸಿಯನ್ನು ಹೇಗೆ ಪಡೆಯುವುದು ಎಂಬುದರ ಕುರಿತು ಈ ಕೆಳಗೆ ವಿವರಣೆಯಿದೆ.

ಬಜಾಜ್ ಪ್ಲಾಟಿನಾ, ಭಾರತದಲ್ಲಿ ಹೆಚ್ಚು ಸ್ವೀಕಾರಾರ್ಹ ಟು ವೀಲರ್ ವೆಹಿಕಲ್‌ಗಳಲ್ಲಿ ಒಂದಾಗಿದ್ದು, ಇದು ರೆಗ್ಯುಲರ್ ಓಡಾಟಕ್ಕೆ ಸರಿಯಾದ ಬೈಕ್ ಆಗಿದೆ. ಮೋಟಾರ್‌ಸೈಕಲ್ ದಟ್ಟ ಅರಣ್ಯ ಪ್ರದೇಶಗಳಲ್ಲಿ ಅಥವಾ ದೂರದ ಪ್ರಯಾಣಕ್ಕೆ ಅತ್ಯಂತ ಶಕ್ತಿಶಾಲಿ ಎಂಬ ಹೆಗ್ಗಳಿಕೆಗೆ ಒಳಪಡಿಸದಿದ್ದರೂ, ಇದು ನಿಮಗೆ ಶ್ರದ್ಧೆಯಿಂದ ಮತ್ತು ನಿಯಮಿತವಾಗಿ ಸೇವೆ ಸಲ್ಲಿಸುವ ನಿಷ್ಠಾವಂತ ರೈಡ್ ಆಗಿದೆ. ಗಟ್ಟಿಮುಟ್ಟಾದ ಆಟೋ-ರಿಕ್ಷಾಗಳ ಜನರೇಶನ್‌ಗಳಿಗೆ ಹೆಸರುವಾಸಿ ಕಂಪನಿಯಾದ ಬಜಾಜ್ ಮತ್ತು ಚೇತಕ್ ಸ್ಕೂಟರ್‌ನಿಂದ ಪ್ಲಾಟಿನಾ ತಯಾರಿಸಲ್ಪಟ್ಟಿದೆ. ಪ್ಲಾಟಿನಾವು ನಾಲ್ಕು-ಸ್ಟ್ರೋಕ್ ಗೇರ್ಡ್ ಟು ವೀಲರ್ ವೆಹಿಕಲ್ ಆಗಿದ್ದು, ಇದನ್ನು ಕೆಲವು ವೇರಿಯಂಟ್‌ಗಳಲ್ಲಿ ನೀಡಲಾಗುತ್ತದೆ.

ಇದನ್ನು 2006 ರಲ್ಲಿ ಪರಿಚಯಿಸಲಾಯಿತು. ಬಜಾಜ್ ಪ್ಲಾಟಿನಾ ಭಾರತೀಯ ಮಾರುಕಟ್ಟೆಯಲ್ಲಿ ಇನ್ನೂ ಸಕ್ರಿಯವಾಗಿರುವ ಮೋಟಾರ್‌ಸೈಕಲ್ ಆಗಿದೆ. ಇದು ವರ್ಷಾನುವರ್ಷಗಳವರೆಗೆ ಇರುತ್ತದೆ ಎಂದು ತಿಳಿದಿದ್ದರೂ ಸಹ, ಮಾಲೀಕರಾಗಿ, ಅದರ ದೀರ್ಘಾಯುಷ್ಯವನ್ನು ಖಚಿತಪಡಿಸಿಕೊಳ್ಳಲು ನೀವು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ. ಟು ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದು ಉತ್ತಮ ಮಾರ್ಗವಾಗಿದೆ.

ಇದಲ್ಲದೆ, ಮೋಟಾರ್ ವೆಹಿಕಲ್ಸ್ ಆ್ಯಕ್ಟ್ 1988 ರ ಅಡಿಯಲ್ಲಿ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದು ಸಹ ಕಡ್ಡಾಯವಾಗಿದೆ. ಈ ನಿಯಮವನ್ನು ಅನುಸರಿಸಲು ವಿಫಲವಾದರೆ ನಿಮಗೆ ₹2000 ಗಳ ಮತ್ತು ಪುನರಾವರ್ತಿತ ಅಪರಾಧಕ್ಕಾಗಿ ₹4000 ಗಳ ಭಾರೀ ಟ್ರಾಫಿಕ್ ದಂಡವನ್ನು ವಿಧಿಸಬಹುದು. ಪ್ಲಾಟಿನಾ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ನಿರ್ಧರಿಸಿದ ಮೇಲೆ, ನಿಮ್ಮ ಮೋಟಾರ್‌ಸೈಕಲ್‌ಗೆ ಯಾವ ಪಾಲಿಸಿ ಉತ್ತಮವಾಗಿದೆ ಎಂಬುದನ್ನು ಸಹ ನೀವು ಅರ್ಥಮಾಡಿಕೊಳ್ಳಬೇಕು.

ಆದಾಗ್ಯೂ, ಬಜಾಜ್ ಪ್ಲಾಟಿನಾ ಇನ್ಶೂರೆನ್ಸ್ ಪಾಲಿಸಿಗಳ ಫೀಚರ್‌ಗಳ ಸೂಕ್ಷ್ಮ ವ್ಯತ್ಯಾಸಗಳನ್ನು ನೋಡುವ ಮೊದಲು, ಟು ವೀಲರ್ ವೆಹಿಕಲ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವುದು ಮುಖ್ಯವಾಗಿದೆ.

ಬಜಾಜ್ ಪ್ಲಾಟಿನಾ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ

ನೀವು ಡಿಜಿಟ್‌ನ ಬಜಾಜ್ ಪ್ಲಾಟಿನಾ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಹೋಂಡಾ ಏವಿಯೇಟರ್‌ಗಾಗಿ ಇನ್ಶೂರೆನ್ಸ್ ಪ್ಲ್ಯಾನ್‌ಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದ ಕಾರಣದಿಂದಾಗಿ ಸ್ವಂತ ಟು ವೀಲರ್‌ಗೆ ಉಂಟಾಗುವ ಹಾನಿ/ನಷ್ಟಗಳು

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಟು ವೀಲರ್‌ಗೆ ಉಂಟಾಗುವ ಹಾನಿ/ನಷ್ಟಗಳು

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಟು ವೀಲರ್‌ಗೆ ಉಂಟಾಗುವ ಹಾನಿ/ನಷ್ಟಗಳು

×

ಥರ್ಡ್ ಪಾರ್ಟಿ ವೆಹಿಕಲ್‌ಗೆ ಉಂಟಾಗುವ ಹಾನಿ

×

ಥರ್ಡ್ ಪಾರ್ಟಿ ಆಸ್ತಿಗೆ ಉಂಟಾಗುವಹಾನಿ

×

ವೈಯಕ್ತಿಕ ಅಪಘಾತದ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಸಾವು

×

ನಿಮ್ಮ ಸ್ಕೂಟರ್ ಅಥವಾ ಬೈಕಿನ ಕಳ್ಳತನ

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಟು ವೀಲರ್ ಇನ್ಶೂರೆನ್ಸ್‌ನ ವ್ಯತ್ಯಾಸದ ಬಗ್ಗೆ ಮತ್ತಷ್ಟು ತಿಳಿಯಿರಿ

ಕ್ಲೈಮ್ ಸಲ್ಲಿಸುವುದು ಹೇಗೆ?

ನಮ್ಮ ಟು ವೀಲರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ, ನೀವು ಚಿಂತಾ ಮುಕ್ತರಾಗಿ ಬದುಕಬಹುದು. ಏಕೆಂದರೆ ನಾವು ಸರಳವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!

ಹಂತ 1

1800-258-5956 ಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ನಲ್ಲಿ ಸ್ವಯಂ ತಪಾಸಣೆಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವೆಹಿಕಲ್‌ನ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ಮರುಪಾವತಿ ಅಥವಾ ಕ್ಯಾಶ್‌ಲೆಸ್ ಆಯ್ಕೆಗಳೆರಡರಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ಬಜಾಜ್ ಪ್ಲಾಟಿನಾದ ಆಕರ್ಷಕ ಫೀಚರ್‌ಗಳತ್ತ ಒಂದು ನೋಟ

ಬಜಾಜ್ ಪ್ಲಾಟಿನಾ ಒಂದು ಚಿಕ್ಕ ಎಂಜಿನ್ ಹೊಂದಿರುವ ಮೋಟಾರ್‌ಸೈಕಲ್ ಆಗಿದ್ದು, ಜನದಟ್ಟಣೆಯಿರುವ ನಗರದ ಬೀದಿಗಳಲ್ಲಿ ಬುದ್ದಿವಂತಿಕೆಯಿಂದ ಓಡಿಸಲು ಸರಿಯಾದ ಟು ವೀಲರ್ ವೆಹಿಕಲ್ ಆಗಿದೆ. ಅಷ್ಟೇ ಪ್ರಸಿದ್ಧವಾದ ಮೋಟಾರ್‌ಸೈಕಲ್‌ನ ಉತ್ತರಾಧಿಕಾರಿ, ಬಜಾಜ್ ಸಿ.ಟಿ100, ಬಜಾಜ್ ಪ್ಲಾಟಿನಾವನ್ನು ಖರೀದಿಸಲು ಆಸಕ್ತಿಯುಳ್ಳವರಿಗೆ ಕೆಲವು ಆಯ್ಕೆಗಳಿವೆ.

  • ಆರಂಭದಲ್ಲಿ 100 ಸಿಸಿ ಡಿಸ್‌ಪ್ಲೇಸ್‌ಮೆಂಟ್‌ನ ಎಂಜಿನ್‌ನೊಂದಿಗೆ ಪ್ರಾರಂಭಿಸಲಾಯಿತು. ಬಜಾಜ್ ಪ್ಲಾಟಿನಾ ಈಗ ಅದರ 125 ಸಿಸಿ ಮತ್ತು 110 ಸಿಸಿ ವೇರಿಯಂಟ್‌ಗಳನ್ನು ಒಳಗೊಂಡಂತೆ ಕೆಲವು ಮಾಡೆಲ್‌ಗಳನ್ನು ಹೊಂದಿದೆ.

  • ಬಜಾಜ್ ಕವಾಸಕಿ ವಿಂಡ್ 125 ರನ್ನು ಹೋಲುವ ಡಿಸೈನ್‌ನೊಂದಿಗೆ, ಪ್ಲಾಟಿನಾ ರೆಗ್ಯುಲರ್ ರೈಡ್‌ಗೆ ಸೂಕ್ತವಾದ ನೇರವಾದ ಭಂಗಿಯನ್ನು ನೀಡುತ್ತದೆ.

  • ಪ್ಲಾಟಿನಾ 8.1 Nm ಟಾರ್ಕ್ ಅನ್ನು ಹೊಂದಿದೆ, ಇದು ಈ ವರ್ಗದ ಮೋಟಾರ್‌ಸೈಕಲ್‌ಗಳಲ್ಲಿ ಅತ್ಯಧಿಕವಾಗಿದೆ.

  • ಈ ಟು ವೀಲರ್ ವೆಹಿಕಲ್, 8.2 BHP ಶಕ್ತಿಯನ್ನು ಹೊಂದಿದ್ದು, ಇದು ಎಂಟ್ರಿ-ಲೆವೆಲ್ ಮೋಟಾರ್‌ಸೈಕಲ್ ಎಂದು ಪರಿಗಣಿಸಿರುವುದರಿಂದ, ಇದು ಸಾಕಷ್ಟು ಗಮನಾರ್ಹವಾಗಿದೆ.

  • ಸೆಪ್ಟೆಂಬರ್ 2008 ರಲ್ಲಿ ಬಿಡುಗಡೆಯಾದ ಪ್ಲಾಟಿನಾದ 125 ಸಿಸಿ ವೇರಿಯಂಟ್, ತಿಂಗಳಿಗೆ 30,000 ಯುನಿಟ್‌ಗಳ ಮಾರಾಟವನ್ನು ದಾಖಲಿಸಿತು; ಭಾರತದಲ್ಲಿ ಟು ವೀಲರ್ ವೆಹಿಕಲ್‌ಗಳ ಮಾರಾಟದ ಅತ್ಯಧಿಕ ಸಂಖ್ಯೆಗಳಲ್ಲಿ ಒಂದಾಗಿದೆ.

ಸರಳವಾಗಿ ಹೇಳುವುದಾದರೆ, ಬಜಾಜ್ ಪ್ಲಾಟಿನಾ ಒಂದು ಮೋಟಾರ್‌ಸೈಕಲ್ ಆಗಿದ್ದು, ಇದು ಭಾರತದಲ್ಲಿ ದೈನಂದಿನ ಪ್ರಯಾಣಕ್ಕಾಗಿ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ.

ಆದ್ದರಿಂದ ನೀವು ಮಾಲೀಕರಾಗಿ, ಈ ನಿಷ್ಠಾವಂತ ಯಂತ್ರಕ್ಕೆ ಕಾಂಪ್ರೆಹೆನ್ಸಿವ್ ರಕ್ಷಣೆಯೊಂದಿಗೆ ಖಂಡಿತ ರಿವಾರ್ಡ್ ಅನ್ನು ನೀಡಬೇಕು. ಆಕರ್ಷಕ ಫೀಚರ್‌ಗಳೊಂದಿಗೆ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಅತ್ಯಗತ್ಯವಾಗಿರುತ್ತದೆ.

ಹಲವಾರು ಇನ್ಶೂರೆನ್ಸ್ ಪೂರೈಕೆದಾರರು ವಿವಿಧ ರೀತಿಯ ಪಾಲಿಸಿಗಳನ್ನು ನೀಡುತ್ತಿರುವಾಗ, ನಿಮ್ಮ ಬಜಾಜ್ ಪ್ಲಾಟಿನಾ ಬೈಕ್ ಇನ್ಶೂರೆನ್ಸ್ ಪಾಲಿಸಿಗೆ ನೀವು ಉತ್ತಮ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯವಾಗಿದೆ.

ಈ ನಿರ್ದಿಷ್ಟ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಡಿಜಿಟ್‌ನ ಕೊಡುಗೆಗಳನ್ನು ನಾವೀಗ ನೋಡೋಣ.

ಬಜಾಜ್ ಪ್ಲಾಟಿನಾ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್‌ಗಾಗಿ, ಡಿಜಿಟ್ ಅನ್ನೇ ಏಕೆ ಆಯ್ಕೆ ಮಾಡಬೇಕು?

ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಇನ್ಶೂರೆನ್ಸ್ ಪೂರೈಕೆದಾರರಲ್ಲಿ, ವೇಗವಾಗಿ ಹೆಚ್ಚುತ್ತಿರುವ ತನ್ನ ಗ್ರಾಹಕ ವರ್ಗದೊಂದಿಗೆ ಡಿಜಿಟ್ ಕಂಪನಿಯು ಬೇರೆಲ್ಲದರ ಮಧ್ಯೆ ವಿಶೇಷವಾಗಿ ಕಾಣುತ್ತದೆ. "ಪಾಪ್ಯುಲಾರಿಟಿ" ನಿಮ್ಮಲ್ಲಿ ಆಸಕ್ತಿ ಮೂಡಿಸಲು ವ್ಯಾಲಿಡ್ ಆದ ಕಾರಣವಾಗಿದ್ದರೂ, ಮಾಲೀಕರಾಗಿ ನಿಮ್ಮ ಡಿಜಿಟ್ ಪ್ಲಾಟಿನಾ ಬೈಕ್ ಇನ್ಶೂರೆನ್ಸ್ ಪಾಲಿಸಿಯಿಂದ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ನೀವು ತಿಳಿದಿರಬೇಕು ಹಾಗೂ ನೀವದನ್ನು ಆಯ್ಕೆ ಮಾಡಬೇಕು. 

  • ಕ್ಲೈಮ್ ಸೆಟಲ್‌ಮೆಂಟ್‌ಗಾಗಿ ಅನುಕೂಲಕರ ಫೈಲಿಂಗ್ ಪ್ರಕ್ರಿಯೆ - ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ನೀವು ಪರಿಶೀಲಿಸಬೇಕಾದ ಅತ್ಯಂತ ಪ್ರಮುಖವಾದ ಪಾಯಿಂಟರ್‌ಗಳಲ್ಲಿ ಒಂದು ಕ್ಲೈಮ್ ಸಲ್ಲಿಸುವ ವಿಧಾನವಾಗಿದೆ. ಡಿಜಿಟ್ ಸುಲಭವಾದ ವೆರಿಫಿಕೇಶನ್‌ನೊಂದಿಗೆ ಪ್ರಾಂಪ್ಟ್ ಕ್ಲೈಮ್‌ಗಳನ್ನು ನೀಡುತ್ತದೆ. ವಿಶೇಷವಾಗಿ ಡಿಜಿಟ್ ನೀಡುವ ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸ್ವಯಂ ತಪಾಸಣೆಯೊಂದಿಗೆ, ಈ ಪ್ರಕ್ರಿಯೆಯನ್ನು ನೀವು ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳಿಸಬಹುದು. ಹೆಚ್ಚುವರಿಯಾಗಿ, ನಿಮ್ಮ ಪ್ಲಾಟಿನಾ ಇನ್ಶೂರೆನ್ಸ್ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬೇಕಾದರೆ, ಧನಾತ್ಮಕ ಅಂಶಗಳನ್ನು ಸೂಚಿಸುವ ಅಧಿಕ ಪ್ರಮಾಣದ ಕ್ಲೈಮ್ ಸೆಟಲ್‌ಮೆಂಟ್‌ಗಳನ್ನು ಸಹ ನಾವು ಹೊಂದಿದ್ದೇವೆ.

  • ನೆಟ್‌ವರ್ಕ್ ಗ್ಯಾರೇಜ್‌ಗಳ ಉತ್ತಮ ಸಂಪರ್ಕಿತ ಶ್ರೇಣಿ - ಡಿಜಿಟ್ ಭಾರತದಾದ್ಯಂತ 4400 ಕ್ಕೂ ಹೆಚ್ಚು ನೆಟ್‌ವರ್ಕ್ ಗ್ಯಾರೇಜ್‌ಗಳನ್ನು ಹೊಂದಿದೆ. ಇದು ವಿಶೇಷವಾಗಿ ಸಹಾಯಕವಾಗಿದೆ ಏಕೆಂದರೆ ಅಪಘಾತದ ಸಂದರ್ಭದಲ್ಲಿ ನಿಮ್ಮ ಬಜಾಜ್ ಪ್ಲಾಟಿನಾವನ್ನು, ಈ ಯಾವುದೇ ಗ್ಯಾರೇಜ್‌ನಿಂದ ಹಣ ಹೊಂದಿಸುವ ತೊಂದರೆಯಿಲ್ಲದೆ, ಸುಲಭವಾಗಿ ರಿಪೇರಿ ಮಾಡಿಸಬಹುದು. 

ಪಾಲಿಸಿ ಪ್ರಕಾರದ ಆಯ್ಕೆ - ಡಿಜಿಟ್ ನಿಮಗೆ, ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯ ಹಲವಾರು ಆಯ್ಕೆಗಳನ್ನು ನೀಡುತ್ತದೆ. ಇದರಿಂದ ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಸೂಕ್ತವಾದ ಪಾಲಿಸಿಯನ್ನು ನೀವು ಆಯ್ಕೆ ಮಾಡಬಹುದು. ಪರಿಣಾಮವಾಗಿ, ನೀವು ವಿವಿಧ ಪಾಲಿಸಿಗಳ ಆಫರ್‌ಗಳನ್ನು ಅವುಗಳ ಪ್ರಯೋಜನಗಳೊಂದಿಗೆ ಅರ್ಥಮಾಡಿಕೊಳ್ಳುವುದು ಸಹ ಅತ್ಯಗತ್ಯ.

  • ಥರ್ಡ್-ಪಾರ್ಟಿ ಲಯಬಿಲಿಟಿ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ : ಸರ್ಕಾರಿ ನಿಯಮಗಳ ಅಡಿಯಲ್ಲಿ ಕಡ್ಡಾಯವಾಗಿದೆ. ಇದು ಅಪಘಾತದ ಸಂದರ್ಭದಲ್ಲಿ ನಿಮ್ಮ ಬಜಾಜ್ ಪ್ಲಾಟಿನಾ ವಿರುದ್ಧ ಎದುರಾಗಬಹುದಾದ ಯಾವುದೇ ಲಯಬಿಲಿಟಿ ಚಾರ್ಜ್‌ಗಳನ್ನು, ಈ ಪಾಲಿಸಿಗಳು ನೋಡಿಕೊಳ್ಳುತ್ತವೆ. ಇದು ಯಾವುದೇ ಥರ್ಡ್ ಪಾರ್ಟಿ ಆಸ್ತಿ ಅಥವಾ ವೆಹಿಕಲ್‌ನ ಹಾನಿ ಹಾಗೂ ಇನ್ನೊಬ್ಬ ವ್ಯಕ್ತಿಗೆ ಉಂಟಾದ ಗಾಯವನ್ನು ಒಳಗೊಂಡಿರುತ್ತದೆ. ಗಮನಿಸಬೇಕಾದ ಅಂಶವೆಂದರೆ, ಅಪಘಾತದ ಸಂದರ್ಭದಲ್ಲಿ ನಿಮ್ಮ ಸ್ವಂತ ಮೋಟಾರ್‌ಬೈಕ್‌ಗೆ ಉಂಟಾದ ಹಾನಿಯನ್ನು ಥರ್ಡ್ ಪಾರ್ಟಿಯ ಬಜಾಜ್ ಪ್ಲಾಟಿನಾ ಇನ್ಶೂರೆನ್ಸ್ ಪಾಲಿಸಿಯು ಕವರ್ ಮಾಡುವುದಿಲ್ಲ.

  • ಕಾಂಪ್ರೆಹೆನ್ಸಿವ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ : ಈ ಪಾಲಿಸಿಯ ಹೆಸರೇ ಸೂಚಿಸುವಂತೆ, ಅಪಘಾತದಲ್ಲಿ ನಿಮ್ಮ ಟು ವೀಲರ್ ವೆಹಿಕಲ್‌ಗೆ ಉಂಟಾದ ಹಾನಿಯ ಜೊತೆಗೆ ಲಯಬಿಲಿಟಿ ಚಾರ್ಜ್ ಎರಡನ್ನೂ ಕವರ್ ಮಾಡುತ್ತದೆ. ಇದಲ್ಲದೆ, ಈ ಪಾಲಿಸಿಗಳು ನಿಮ್ಮ ಬಜಾಜ್ ಪ್ಲಾಟಿನಾ ಕಳ್ಳತನವಾದರೆ ಅಥವಾ ನೈಸರ್ಗಿಕ ಹಾಗೂ ಮಾನವ ನಿರ್ಮಿತ ವಿಪತ್ತುಗಳಿಂದ ಹಾನಿಗೊಳಗಾದರೆ ಅದನ್ನು ಸಹ ಕವರ್ ಮಾಡುತ್ತದೆ.

ಸೆಪ್ಟೆಂಬರ್ 2018 ರ ನಂತರ ನಿಮ್ಮ ಮೋಟಾರ್‌ಬೈಕ್ ಅನ್ನು ನೀವು ಖರೀದಿಸಿದ್ದರೆ, ನೀವು ಓನ್ ಡ್ಯಾಮೇಜ್ ಕವರ್ ಅನ್ನು ಸಹ ಆಯ್ಕೆ ಮಾಡಿಕೊಳ್ಳಬಹುದು ಎಂಬುದನ್ನು ಗಮನಿಸಿ. ಈ ಪಾಲಿಸಿಗಳು ಕೇವಲ ಅಪಘಾತದ ಸಂದರ್ಭದಲ್ಲಿ ನಿಮ್ಮ ಮೋಟಾರ್‌ಸೈಕಲ್‌ಗೆ ಉಂಟಾದ ಹಾನಿಯನ್ನು ಮಾತ್ರ ಕವರ್ ಮಾಡುತ್ತವೆ. ಅರ್ಥವಾಗುವಂತೆ, ಥರ್ಡ್-ಪಾರ್ಟಿ ಲಯಬಿಲಿಟಿ ಪಾಲಿಸಿಗಳನ್ನು ಪಡೆಯುವುದು ಭಾರತದಲ್ಲಿ ಕಡ್ಡಾಯವಾಗಿರುವುದರಿಂದ, ನೀವು ಈಗಾಗಲೇ ಪ್ರಸ್ತುತ ಒಂದು ಪಾಲಿಸಿಯನ್ನು ಹೊಂದಿರಬೇಕು.

ಆಯ್ಕೆ ಮಾಡಲು ಅನೇಕ ಆ್ಯಡ್-ಆನ್ ಆಯ್ಕೆಗಳು - ಡಿಜಿಟ್ ನಿಮ್ಮ ಟು ವೀಲರ್ ವೆಹಿಕಲ್ ಅನ್ನು ಇನ್ನಷ್ಟು ರಕ್ಷಿಸಲು ನಿಮ್ಮ ಕಾಂಪ್ರೆಹೆನ್ಸಿವ್ ಪ್ಲಾಟಿನಾ ಬೈಕ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಖರೀದಿಸಬಹುದಾದ ಹಲವಾರು ಆ್ಯಡ್-ಆನ್ ಕವರ್‌ಗಳನ್ನು ಸಹ ನೀಡುತ್ತದೆ.

  • ಎಂಜಿನ್ ಮತ್ತು ಗೇರ್ ಪ್ರೊಟೆಕ್ಷನ್ ಕವರ್
  • ಝೀರೋ ಡೆಪ್ರಿಸಿಯೇಶನ್ ಕವರ್
  • ಕನ್ಸ್ಯೂಮೆಬಲ್ ಕವರ್
  • ಬ್ರೇಕ್ ಡೌನ್ ಅಸಿಸ್ಟೆನ್ಸ್
  • ರಿಟರ್ನ್ ಟು ಇನ್‌ವಾಯ್ಸ್ ಕವರ್‌
  • ಖರೀದಿ ಮತ್ತು ರಿನೀವಲ್‌ನ ಸುಲಭತೆ - ಆನ್‌ಲೈನ್ ಲಭ್ಯತೆಯೊಂದಿಗೆ, ಡಿಜಿಟ್ ನಿಮ್ಮ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯ ಖರೀದಿ ಅಥವಾ ರಿನೀವಲ್‌ ಅನ್ನು ಸುಲಭಗೊಳಿಸುತ್ತದೆ. ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಪಾಲಿಸಿಯನ್ನು ಆಯ್ಕೆ ಮಾಡುವ ಅವಕಾಶದ ಜೊತೆಗೆ, ವಿವಿಧ ಇನ್ಶೂರೆನ್ಸ್ ಕವರ್‌ಗಳಲ್ಲಿ ನೀಡಲಾದ ಫೀಚರ್‌ಗಳನ್ನು ಹೋಲಿಸಲು ಸಹ ಇದು ನಿಮ್ಮನ್ನು ಅನುಮತಿಸುತ್ತದೆ. ನಿಮ್ಮ ಆಯ್ಕೆಯ ಪಾಲಿಸಿಯನ್ನು ಆಯ್ಕೆ ಮಾಡಿದ ಕೆಲವೇ ನಿಮಿಷಗಳಲ್ಲಿ ಆನ್‌ಲೈನ್ ಖರೀದಿಯನ್ನು ಪೂರ್ಣಗೊಳಿಸಬಹುದು. ನಿಮ್ಮ ಅಕೌಂಟ್‌ಗೆ ಲಾಗ್ ಇನ್ ಮಾಡುವ ಮೂಲಕ ಪ್ಲಾಟಿನಾ ಬೈಕ್ ಇನ್ಶೂರೆನ್ಸ್ ರಿನೀವಲ್‌ ಅನ್ನು ಇನ್ನಷ್ಟು ವೇಗವಾಗಿ ಪೂರ್ಣಗೊಳಿಸಬಹುದು.

  • ಸದಾಕಾಲ ಲಭ್ಯವಿರುವ 24x7 ಕಸ್ಟಮರ್ ಕೇರ್ - ನೀವು ಯಾವುದೇ ಸಮಯದಲ್ಲಿ ನಮ್ಮನ್ನು ಸಂಪರ್ಕಿಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಲು ಡಿಜಿಟ್‌ನ ಕಸ್ಟಮರ್ ಕೇರ್ ತುಂಬಾ ಸಕ್ರಿಯವಾಗಿದೆ. ನಿಮ್ಮ ಕ್ಲೈಮ್ ಸಲ್ಲಿಸುವ ತುರ್ತು ಪರಿಸ್ಥಿತಿಯಾಗಿರಲಿ ಅಥವಾ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ನೀವು ಎದುರಿಸುವ ಯಾವುದೇ ಪ್ರಶ್ನೆಯಾಗಿರಲಿ; ನಿಮಗಾಗಿ ಡಿಜಿಟ್‌ನ ಕಸ್ಟಮರ್ ಕೇರ್ ದಿನವಿಡೀ ಲಭ್ಯವಿರುತ್ತದೆ. ಹೆಚ್ಚುವರಿಯಾಗಿ, ನಮ್ಮ ಕಸ್ಟಮರ್ ಕೇರ್ 24X7 ಸಕ್ರಿಯವಾಗಿರುವುದರಿಂದ ನೀವು ನಮ್ಮನ್ನು ವಾರದುದ್ದಕ್ಕೂ ಸಂಪರ್ಕಿಸಬಹುದು.

  • ನಿಮ್ಮ ಟು ವೀಲರ್ ವೆಹಿಕಲ್‌ಗಾಗಿ ಕಸ್ಟಮೈಸ್ ಮಾಡಿದ ಐಡಿವಿ - ಐಡಿವಿ ಅಥವಾ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಎನ್ನುವುದು ನಿಮ್ಮ ಬಜಾಜ್ ಪ್ಲಾಟಿನಾ ಕಳುವಾದ ಸಂದರ್ಭದಲ್ಲಿ ಅಥವಾ ಯಾವುದೇ ರಿಪೇರಿ ವ್ಯಾಪ್ತಿಯನ್ನು ಮೀರಿ ಹಾನಿಗೊಳಗಾದ ಸಂದರ್ಭದಲ್ಲಿ ನೀವು ಪಡೆಯುವ ಒಟ್ಟು ಮೊತ್ತವಾಗಿದೆ. ಡಿಜಿಟ್‌ನಲ್ಲಿ, ನಿಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ನಿಮ್ಮ ಐಡಿವಿ ಎಂದು ಪಡೆಯಲು ಬಯಸುವ ಮೊತ್ತವನ್ನು ನೀವೇ ಆಯ್ಕೆ ಮಾಡಬಹುದು. 

  • ನೋ ಕ್ಲೈಮ್ ಬೋನಸ್‌ನ ಪ್ರಯೋಜನ - ರೈಡರ್ ಆಗಿ, ನೀವು ಸುರಕ್ಷತಾ ಮಾನದಂಡಗಳನ್ನು ಕೈಗೊಂಡಿದ್ದರೆ, ಅಪಘಾತದಿಂದಾಗಿ ನಿಮ್ಮ ಟು ವೀಲರ್ ವೆಹಿಕಲ್ ಹಾನಿಗೊಳಗಾಗುವ ಸಾಧ್ಯತೆ ಕಡಿಮೆಯಿರುತ್ತದೆ. ಅಂತಹ ಸಂದರ್ಭಗಳಲ್ಲಿ, ನಿಮ್ಮ ಪ್ರಸ್ತುತ ಪಾಲಿಸಿಯ ಮೇಲೆ ಯಾವುದೇ ಕ್ಲೈಮ್ ಮಾಡದ ಕಾರಣ, ಒಟ್ಟುಗೂಡಿದ ಬೋನಸ್‌ಗೆ ನೀವು ಅರ್ಹರಾಗಿದ್ದೀರಿ. ಈ ನೋ ಕ್ಲೇಮ್ ಬೋನಸ್ ನಿಮ್ಮ ಬಜಾಜ್ ಪ್ಲಾಟಿನಾ ಬೈಕ್ ಇನ್ಶೂರೆನ್ಸ್ ರಿನೀವಲ್ ಸಮಯದಲ್ಲಿ ವಿಶೇಷವಾಗಿ ಸಹಾಯಕವಾಗಬಹುದು. ಏಕೆಂದರೆ ಇದು ನೀವು ಪಾವತಿಸಬೇಕಾದ ಪ್ರೀಮಿಯಂ ಅನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ.

ನಿಮ್ಮ ಬಜಾಜ್ ಪ್ಲಾಟಿನಾದ ಗರಿಷ್ಠ ರಕ್ಷಣೆಯನ್ನು ಆಯ್ಕೆ ಮಾಡಲು ಯಾವ ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆ ಮಾಡಬೇಕೆಂದು ನೀವು ಸರಿಯಾಗಿ ನಿರ್ಧರಿಸುವ ಸಮಯವಿದು; ಯಾವುದೇ ಅನಿರೀಕ್ಷಿತ ಸಂದರ್ಭಗಳ ವಿರುದ್ಧ ರಕ್ಷಿಸುವ ಅವಶ್ಯಕತೆಗಾಗಿ ಉತ್ತಮ ಇನ್ಶೂರೆನ್ಸ್ ಕಂಪನಿಯ ಆಯ್ಕೆ ತುಂಬಾ ಮುಖ್ಯವಾಗಿರುತ್ತದೆ.

ಬಜಾಜ್ ಪ್ಲಾಟಿನಾ - ವೇರಿಯಂಟ್‌ಗಳು ಮತ್ತು ಎಕ್ಸ್ ಶೋರೂಂ ಬೆಲೆ

ವೇರಿಯಂಟ್‌ಗಳು ಎಕ್ಸ್ ಶೋರೂಂ ಬೆಲೆ (ಆಯಾ ನಗರಕ್ಕೆ ಅನುಗುಣವಾಗಿ ಬೆಲೆಯು ಬದಲಾಗಬಹುದು)
ಪ್ಲಾಟಿನಾ 110 ES ಅಲಾಯ್ CBS, 104 Kmpl, 115 ಸಿಸಿ ₹ 50,515
ಪ್ಲಾಟಿನಾ 110 H ಗೇರ್ ಡ್ರಮ್, 115 ಸಿಸಿ ₹ 53,376
ಪ್ಲಾಟಿನಾ 110 H ಗೇರ್ ಡಿಸ್ಕ್, 115 ಸಿಸಿ ₹ 55,373

ಭಾರತದಲ್ಲಿ ಬಜಾಜ್ ಪ್ಲಾಟಿನಾ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು

ಒಂದೇ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯನ್ನು, ಮಲ್ಟಿಪಲ್ ಟು ವೀಲರ್ ವೆಹಿಕಲ್‌ಗಳನ್ನು ಕವರ್ ಮಾಡಲು ಬಳಸಬಹುದೇ?

ಇಲ್ಲ, ಮಲ್ಟಿಪಲ್ ಬೈಕ್‌ಗಳಿಗಾಗಿ ಇನ್ಶೂರೆನ್ಸ್ ಅನ್ನು ಖರೀದಿಸಲು ನೀವು ಪ್ರತ್ಯೇಕ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಗಳನ್ನು ಖರೀದಿಸಬೇಕಾಗುತ್ತದೆ.

ನನ್ನ ಬಜಾಜ್ ಪ್ಲಾಟಿನಾದ ಟೈರ್‌ಗಳಂತಹ ಸುಲಭವಾಗಿ ಹಾಳಾಗುವ ಭಾಗಗಳನ್ನು ರಕ್ಷಿಸಲು ಯಾವುದೇ ಮಾರ್ಗವಿದೆಯೇ?

ಸುಲಭವಾಗಿ ಹಾಳಾಗುವ ಮತ್ತು ಟೈರ್‌ಗಳಂತಹ ಕನ್ಸ್ಯೂಮೆಬಲ್ ಭಾಗಗಳನ್ನು ರಕ್ಷಿಸಲು ನಿಮ್ಮ ಟು ವೀಲರ್ ವೆಹಿಕಲ್ ಪಾಲಿಸಿಯಲ್ಲಿ ಆ್ಯಡ್-ಆನ್ ಆಗಿ ನೀವು ಕನ್ಸ್ಯೂಮೆಬಲ್ ಕವರ್ ಪಾಲಿಸಿಯನ್ನು ಖರೀದಿಸಬಹುದು. ಆದಾಗ್ಯೂ, ಅದರೊಂದಿಗೆ ಯಾವುದೇ ಆ್ಯಡ್-ಆನ್ ಅನ್ನು ಖರೀದಿಸಲು ನೀವು ಕಾಂಪ್ರೆಹೆನ್ಸಿವ್ ಪಾಲಿಸಿಯನ್ನು ಖರೀದಿಸಬೇಕು.

ನಾನು ಬೇರೆ ಇನ್ಶೂರೆನ್ಸ್ ಪೂರೈಕೆದಾರರಿಂದ ಡಿಜಿಟ್‌ಗೆ ಬದಲಾಯಿಸುತ್ತಿದ್ದರೆ, ನನ್ನ ನೋ ಕ್ಲೈಮ್ ಬೋನಸ್ ಅನ್ನು ನಾನು ಬಳಸಬಹುದೇ?

ಹೌದು, ನೀವು ನಿಮ್ಮ ಪ್ರಸ್ತುತ ಇನ್ಶೂರೆನ್ಸ್ ಏಜೆಂಟ್‌ನಿಂದ ಡಿಜಿಟ್‌ಗೆ ಬದಲಾಗುತ್ತಿದ್ದರೆ ನೀವು ನೋ ಕ್ಲೈಮ್ ಬೋನಸ್ ಅನ್ನು ಈಗಲೂ ಪಡೆಯಬಹುದು. ಹೊಸ ಪಾಲಿಸಿಯನ್ನು ಖರೀದಿಸುವಾಗ, ಡಿಜಿಟ್‌ಗೆ ನಿಮ್ಮ ಪ್ರಸ್ತುತ ಪಾಲಿಸಿಯ ಅಗತ್ಯ ವಿವರಗಳ ಅವಶ್ಯಕತೆಯಿರುತ್ತದೆ ಮತ್ತು ಅದಕ್ಕನುಗುಣವಾಗಿ ನಿಮಗೆ ಅರ್ಹವಾದ ಡಿಸ್ಕೌಂಟ್ ಅನ್ನು ನೀಡುತ್ತದೆ.