ಕಾಂಪ್ರೆಹೆನ್ಸಿವ್ ಮತ್ತು ಝೀರೋ ಡೆಪ್ರಿಸಿಯೇಷನ್ ಇನ್ಶೂರೆನ್ಸ್ ನಡುವಿನ ವ್ಯತ್ಯಾಸ
ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ + ಝೀರೋ ಡೆಪ್ರಿಸಿಯೇಷನ್ = 100% ತೃಪ್ತಿ
ಝೀರೋ ಡೆಪ್ರಿಸಿಯೇಷನ್ ಎನ್ನುವುದು 'ಆಡ್ಆನ್' ಕವರ್ ಆಗಿದೆ, ಬೇರೆ ರೀತಿಯಲ್ಲಿ ಹೇಳುವುದಾದರೆ, ಕಾಂಪ್ರೆಹೆನ್ಸಿವ್ ಇನ್ಶೂರೆನ್ಸಿನೊಂದಿಗೆ ಖರೀದಿಸಬಹುದಾದ ಹೆಚ್ಚುವರಿ ಪ್ರಯೋಜನವಾಗಿದೆ. ಮೂಲಭೂತವಾಗಿ, ಝೀರೋ ಡೆಪ್ರಿಸಿಯೇಷನ್ ಎನ್ನುವುದು ಕಾಂಪ್ರೆಹೆನ್ಸಿವ್ ಮೋಟಾರ್ ಇನ್ಶೂರೆನ್ಸಿನ ಭಾಗವಾಗಿದೆ😊! ನಿಮಗೆ ಇನ್ನೂ ಉತ್ತಮವಾಗಿ ಅರ್ಥ ಮಾಡಿಸಲು, ಸಂಪೂರ್ಣ ವಿಷಯವನ್ನು ವಿವರವಾಗಿ ವಿವರಿಸುತ್ತೇವೆ. ಮೊದಲು ನಿಮಗೆ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಬಗ್ಗೆ ಸ್ವಲ್ಪ ಹೇಳೋಣ, ಶುರು ಮಾಡೋಣವೇ😊!
ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಎಂದರೇನು?
ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಇದು, ಮೋಟಾರ್ ವಾಹನಗಳಾದ ಕಾರ್ ಮತ್ತು ಬೈಕ್‌ಗಳಿಗೆ 'ಪ್ರೀಮಿಯಂ ಇನ್ಶೂರೆನ್ಸ್' ಪಾಲಿಸಿಯಾಗಿದೆ. ಮತ್ತು ಹೆಸರೇ ಸೂಚಿಸುವಂತೆ, ಇದು ವಾಹನಕ್ಕಾಗುವ ಯಾವುದೇ ಹಾನಿಯನ್ನು ಕವರ್ ಮಾಡುವ 'ಸಂಪೂರ್ಣ ಪ್ಯಾಕೇಜ್' ಆಗಿದೆ. ಹಾಗೂ ಯಾವುದೇ ಅಪಘಾತದ ಸಂದರ್ಭದಲ್ಲಿ ಅದು ಪ್ರಯಾಣಿಕರನ್ನು ಮತ್ತು 'ಥರ್ಡ್ ಪಾರ್ಟಿ'ಯನ್ನು ಕವರ್ ಮಾಡುತ್ತದೆ. ಒಟ್ಟಾರೆಯಾಗಿ, ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಕೆಳಗಿನವುಗಳನ್ನು ಕವರ್ ಮಾಡುತ್ತದೆ:
ಅಪಘಾತದಿಂದಾಗಿ ನಿಮ್ಮ ವಾಹನಕ್ಕೆ ಉಂಟಾಗುವ ಹಾನಿ
ಅಪಘಾತದ ಸಮಯದಲ್ಲಿ ಉಂಟಾಗುವ ವೈಯಕ್ತಿಕ ಗಾಯ
ನಿಮ್ಮ ವಾಹನದ ಕಳ್ಳತನ
ಬೆಂಕಿಯಿಂದಾಗಿ ನಿಮ್ಮ ವಾಹನಕ್ಕೆ ಉಂಟಾಗುವ ಹಾನಿ
ನೈಸರ್ಗಿಕ ವಿಕೋಪಗಳಿಂದ ನಿಮ್ಮ ವಾಹನಕ್ಕೆ ಉಂಟಾಗುವ ಹಾನಿ
ಅಪಘಾತದಲ್ಲಿ ಥರ್ಡ್ ಪಾರ್ಟಿ ವಾಹನ ಅಥವಾ ಆಸ್ತಿಗೆ ಉಂಟಾಗುವ ಹಾನಿ
ಅಪಘಾತದ ಸಮಯದಲ್ಲಿ ಥರ್ಡ್ ಪಾರ್ಟಿಗೆ ಉಂಟಾಗುವ ಗಾಯ
ಈಗ, ಇಲ್ಲಿ ಝೀರೋ ಡೆಪ್ರಿಸಿಯೇಷನ್ ಗ್ರ್ಯಾಂಡ್ ಎಂಟ್ರಿಯನ್ನು ನೀಡುತ್ತದೆ!
ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಇದು, ಪ್ರೀಮಿಯಂ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯಾಗಿರುವುದರಿಂದ, ನೀವು ವಿವಿಧ 'ಆಡ್ ಆನ್' ಕವರ್‌ಗಳು ಅಥವಾ 'ಬೆನಿಫಿಟ್‌ಗಳನ್ನು' ಆರಿಸಿಕೊಳ್ಳುವ ಆಯ್ಕೆಯನ್ನು ಹೊಂದಿರುತ್ತೀರಿ. ಈ ಕವರ್‌ಗಳನ್ನು ಬೇಸಿಕ್ ಇನ್ಶೂರೆನ್ಸ್ ಪಾಲಿಸಿಯ ವೆಚ್ಚಕ್ಕಿಂತ ಕಡಿಮೆ ಪ್ರೀಮಿಯಂನಲ್ಲಿ ಪಡೆಯಬಹುದು.
ರೋಡ್ ಸೈಡ್ ಅಸಿಸ್ಟೆನ್ಸ್, ಇಂಜಿನ್ ಪ್ರೊಟೆಕ್ಷನ್ ಕವರ್, ಕನ್ಸ್ಯುಮೇಬಲ್ ಕವರ್ ಇತ್ಯಾದಿಗಳಂತಹ ಸಾಕಷ್ಟು 'ಆಡ್ ಆನ್' ಕವರ್‌ಗಳಿವೆ. ಆದ್ದರಿಂದ, ಮೂಲಭೂತವಾಗಿ, ಝೀರೋ ಡೆಪ್ರಿಸಿಯೇಷನ್ ಇದು ಆಡ್-ಆನ್ ಕವರ್‌ಗಳಲ್ಲಿ ಒಂದಾಗಿದೆ. ಬಾಯಲ್ಲಿ ನೀರೂರಿಸುವಂತಿರುವ ಈ ಹೆಚ್ಚುವರಿ ಇನ್ಶೂರೆನ್ಸ್ ಪ್ರಯೋಜನಗಳಲ್ಲಿ ನಿಮ್ಮ ವಾಹನಕ್ಕಾಗಿ ನೀವು ಇವುಗಳನ್ನು ಆಯ್ಕೆ ಮಾಡಬಹುದು!
ಕಾಂಪ್ರೆಹೆನ್ಸಿವ್ ಪಾಲಿಸಿ ಮತ್ತು ಝೀರೋ ಡೆಪ್ ಇನ್ಶೂರೆನ್ಸ್ ಪಾಲಿಸಿ ನಡುವಿನ ವ್ಯತ್ಯಾಸ
ಝೀರೋ ಡೆಪ್ ಕವರ್ ಜೊತೆ ಕಾಂಪ್ರೆಹೆನ್ಸಿವ್ ಪಾಲಿಸಿ | ಝೀರೋ ಡೆಪ್ ಕವರ್ ಹೊರತಾಗಿ ಕಾಂಪ್ರೆಹೆನ್ಸಿವ್ ಪಾಲಿಸಿ | |
ಪ್ರೀಮಿಯಂ ಮೊತ್ತ | ಸಾಮಾನ್ಯ ಕಾಂಪ್ರೆಹೆನ್ಸಿವ್ ಪಾಲಿಸಿಗಿಂತ ಸ್ವಲ್ಪ ಹೆಚ್ಚಾಗಿರುತ್ತದೆ | ಝೀರೋ ಡೆಪ್ ಆಡ್‌ಆನ್‌ನೊಂದಿಗಿನ ಪಾಲಿಸಿಗಿಂತ ಕಡಿಮೆಯಿರುತ್ತದೆ |
ಕ್ಲೇಮ್ ಸೆಟಲ್‌ಮೆಂಟ್ ಮೊತ್ತ | ಹೆಚ್ಚಿನ ಡೆಪ್ರಿಸಿಯೇಷನ್ ಅನ್ನು ಪರಿಗಣಿಸಲಾಗುವುದಿಲ್ಲ | ರಿಪೇರಿ ಮಾಡಬೇಕಾದ ವಾಹನದ ಎಲ್ಲ ಭಾಗಗಳಿಗೆ ಡೆಪ್ರಿಸಿಯೇಷನ್ ಅನ್ನು ಕಡಿಮೆ ಎಂದು ಪರಿಗಣಿಸಲಾಗುತ್ತದೆ |
ಪ್ಲಾಸ್ಟಿಕ್ ಭಾಗಗಳ ದುರಸ್ತಿ | ಝೀರೋ ಡೆಪ್ ಆಡ್ಆನ್‌ಗಳ ಜೊತೆಗೆ, ಅಂತಹ ಯಾವುದೇ ಭಾಗಗಳಿಗೆ ಡೆಪ್ರಿಸಿಯೇಷನ್ ಅನ್ನು ಪರಿಗಣಿಸಲಾಗುವುದಿಲ್ಲ | ಕ್ಲೇಮ್ ಅನ್ನು ಪಾವತಿಸುವ ಮೊದಲು ಅಂತಹ ಭಾಗಗಳ ಮೇಲೆ 50% ಡೆಪ್ರಿಸಿಯೇಷನ್ ಅನ್ನು ಪರಿಗಣಿಸಲಾಗುತ್ತದೆ |
ಕವರ್ ಆಗಿರುವ ಕಾರಿನ ವಯಸ್ಸು | ಝೀರೋ ಡೆಪ್ ಆಡ್ಆನ್‌ಗಳ ಜೊತೆಗೆ, ಡೆಪ್ರಿಸಿಯೇಷನ್ ದರಗಳನ್ನು ಶೂನ್ಯ ಎಂದು ಪರಿಗಣಿಸಲಾಗುತ್ತದೆ | ವಯಸ್ಸಿನೊಂದಿಗೆ, ನಿಮ್ಮ ಕಾರಿನ ಡೆಪ್ರಿಸಿಯೇಷನ್ ಸಹ ಹೆಚ್ಚುತ್ತಲೇ ಇರುತ್ತದೆ ಮತ್ತು ಕ್ಲೇಮ್ ಅದನ್ನು ಒಳಗೊಂಡಿರುವುದಿಲ್ಲ |
ಝೀರೋ ಡೆಪ್ರಿಸಿಯೇಷನ್ ಕವರ್ ತೆಗೆದುಕೊಳ್ಳುವುದರಿಂದ ಆಗುವ ಪ್ರಯೋಜನ
ವಯಸ್ಸು ಅದರ ನ್ಯೂನತೆಗಳೊಂದಿಗೆ ಬರುತ್ತದೆ. ಈ ಮಾತು ನಿಮ್ಮ ವಾಹನಕ್ಕೂ ಅನ್ವಯಿಸುತ್ತದೆ. ನಿಮ್ಮ ವಾಹನ ಹಳೆಯದಾದಂತೆ, ನಿಮ್ಮ ಕಾರ್ ಅಥವಾ ಬೈಕಿನ ಮೌಲ್ಯವು ಹೆಚ್ಚು ಇಳಿಯುತ್ತದೆ ಅಥವಾ 'ಸವಕಳಿ'ಯಾಗುತ್ತದೆ (Depreciates). ಆದರೆ, ಚಿಂತಿಸಬೇಡಿ ಈ 'ಆಡ್ ಆನ್' ಎನ್ನುವುದು ನಿಮ್ಮ ವಾಹನದ ಮೌಲ್ಯವು, ನೀವು ವಾಹನ ಖರೀದಿಸಿದ ದಿನದಷ್ಟೇ ಮೌಲ್ಯಯುತವಾಗಿ ಉಳಿಯುತ್ತದೆ ಎಂದು ಖಚಿತಪಡಿಸುತ್ತದೆ!
ಝೀರೋ ಡೆಪ್ರಿಸಿಯೇಷನ್ ಅನ್ನು ನಿಲ್ ಡೆಪ್ರಿಸಿಯೇಶನ್ ಅಥವಾ ಬಂಪರ್ ಟು ಬಂಪರ್ ಕವರ್ ಎಂದೂ ಕರೆಯಲಾಗುತ್ತದೆ. ಅದು ಕವರೇಜಿನಿಂದ 'ಡೆಪ್ರಿಸಿಯೇಶನ್' ಅಂಶವನ್ನು ಬಿಡುತ್ತದೆ.
ಮೂಲಭೂತವಾಗಿ ಘರ್ಷಣೆಯ ನಂತರ ನಿಮ್ಮ ಕಾರ್ ಅಥವಾ ಬೈಕ್ ಹಾನಿಗೊಳಗಾದರೆ, ನಿಮ್ಮ ವಾಹನದ ಯಾವುದೇ ಭಾಗಗಳ ಹಾನಿಯ ವ್ಯಾಪ್ತಿಯಿಂದ, ಡೆಪ್ರಿಸಿಯೇಷನ್ ಅನ್ನು ಕಳೆಯಲಾಗುವುದಿಲ್ಲ ಎಂದು ಇದರ ಅರ್ಥ.
ಇನ್ಶೂರೆನ್ಸ್ ಕಂಪನಿಯು, ನಿಮ್ಮ ವಾಹನದ ದುರಸ್ತಿ ಮಾಡುವ ಅಥವಾ ಬದಲಾಯಿಸುವ ಭಾಗದ (body part) ಸಂಪೂರ್ಣ ವೆಚ್ಚವನ್ನು ಅಂದರೆ 100% ಅನ್ನು ನೀಡುತ್ತದೆ (ಸಹಜವಾಗಿ, ಡಿಡಕ್ಟಿಬಲ್ಸ್ ಅನ್ನು ಕಳೆದು )
ಆದ್ದರಿಂದ, ನಾವು ನೋಡಿದಂತೆ ನಾವು ನಿಜವಾಗಿಯೂ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಮತ್ತು ಝೀರೋ ಡೆಪ್ರಿಸಿಯೇಷನ್ ಅನ್ನು ಹೋಲಿಸಲಾಗುವುದಿಲ್ಲ, ಏಕೆಂದರೆ ಝೀರೋ ಡೆಪ್ರಿಸಿಯೇಷನ್ ಕವರ್ ಎನ್ನುವುದು ಕಾಂಪ್ರೆಹೆನ್ಸಿವ್ ಕವರ್‌ನೊಂದಿಗೆ ತೆಗೆದುಕೊಳ್ಳಬಹುದಾದ ಆಡ್-ಆನ್ ಆಗಿದೆ. ಆದಾಗ್ಯೂ, ಮೊದಲನೆಯದು ನಿಮ್ಮ ಕಾರನ್ನು ರಕ್ಷಿಸಲು ಅಗತ್ಯವಿರುವ ಎಲ್ಲವನ್ನೂ ಒಳಗೊಂಡಿದೆ.
ಝೀರೋ ಡೆಪ್ರಿಸಿಯೇಷನ್ ಜೊತೆಗೆ ಖಚಿತವಾಗಿರಿ. ಇದರಿಂದ ನಿಮ್ಮ ಪ್ರೀತಿಯ ವಾಹನವು ಯಾವಾಗಲೂ 100% ಹೊಸದಾಗಿರುತ್ತದೆ!