H-1B ವೀಸಾಗಾಗಿ ಅಪ್ಲೈ ಮಾಡುವುದು ಹೇಗೆ?
US ನಲ್ಲಿ ಕೆಲಸ ಮಾಡಲು ಬಯಸುವವರಿಗೆ H-1B ವೀಸಾ ಅವಶ್ಯಕವಾಗಿದೆ. ಇದು ಪ್ರತಿ ವರ್ಷ 200,000 ಮಅಪ್ಲಿಕಂಟ್‌ಗಳನ್ನು ನೋಡುವ ಹೆಚ್ಚು ಬೆಲೆಬಾಳುವ ವೀಸಾ ಆಗಿದೆ! ಆದರೆ, ದುರದೃಷ್ಟವಶಾತ್, ಇಷ್ಟೊಂದು ಜನರಲ್ಲಿ ಕೆಲವರು ಮಾತ್ರ ಈ ಅಪೇಕ್ಷಿತ ವೀಸಾವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ.
ಹಾಗಾದರೆ, ಈ H1-B ವೀಸಾ ಎಂದರೇನು ಮತ್ತು ಇದಕ್ಕಾಗಿ ನೀವು ಹೇಗೆ ಅಪ್ಲೈ ಮಾಡಬೇಕು?
ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಈ ಕೆಳಗೆ ವಿವರಿಸಲಾಗಿದೆ. ಓದುವುದನ್ನು ಮುಂದುವರೆಸಿ!
H-1B ವೀಸಾ ಎಂದರೇನು?
H-1B ವೀಸಾ USA ಸರ್ಕಾರ ನೀಡುವ ಒಂದು ವಿಧದ ವೀಸಾ. ಇತರ ದೇಶಗಳ ಜನರು US ನಲ್ಲಿ ಕೆಲಸ ಮಾಡಲು ಈ ವೀಸಾ ಅನುಮತಿ ನೀಡುತ್ತದೆ. ಮೇಲಾಗಿ, ಈ ವೀಸಾಗಾಗಿ ಅಪ್ಲೈ ಮಾಡುವ ಯಾವುದೇ ವಿದೇಶಿಗನು US-ಬೇಸ್ಡ್ ವರ್ಕರ್‌ನನ್ನು ಹುಡುಕಲಾಗದ ಫೀಲ್ಡ್/ಪೊಸಿಷನ್‌ನಲ್ಲಿ ಕೆಲಸ ಮಾಡಬೇಕು. ಆದ್ದರಿಂದ, ಈ ನಿಯಮಗಳನ್ನು ಸಾಕಷ್ಟು ಕಟ್ಟುನಿಟ್ಟಾಗಿ ಮತ್ತು ಕಠಿಣವಾಗಿ ಜಾರಿಗೊಳಿಸಲಾಗಿದೆ.
ಮೊದಲನೆಯದಾಗಿ, ನಿಮ್ಮ ಎಂಪ್ಲಾಯರ್‌ಗಳು ಈ ವೀಸಾಗಾಗಿ ಭಾಗಶಃ ಪಾವತಿಸುತ್ತಾರೆ ಮತ್ತು ನಿಮ್ಮ ಪರವಾಗಿ ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಬ್ಮಿಟ್ ಮಾಡುತ್ತಾರೆ ಎಂಬುದನ್ನು ನೀವು ತಿಳಿದಿರಬೇಕು. ಅಲ್ಲದೆ, ವಿದೇಶಿಗರನ್ನು ಕರೆತರುವ ಅಗತ್ಯವನ್ನು ದೃಢೀಕರಿಸಲು ಈಗಾಗಲೇ ಆ ದೇಶದಲ್ಲಿ ಈ ಕೆಲಸವನ್ನು ಮಾಡುವ ಯಾವುದೇ ನುರಿತ ವ್ಯಕ್ತಿಗಳು ಇಲ್ಲ ಎಂಬುದನ್ನು ಎಂಪ್ಲಾಯರ್‌ಗಳು ಪ್ರೂವ್ ಮಾಡಬೇಕು.
H-1B ವೀಸಾಗಾಗಿ ಅರ್ಹತಾ ಮಾನದಂಡಗಳು
H-1B ವೀಸಾ ಅರ್ಹತೆಯು ಹಲವಾರು ನಿಯಮಗಳನ್ನು ಒಳಗೊಂಡಿರುತ್ತದೆ. ಅದರ ಅರ್ಹತಾ ಮಾನದಂಡಗಳನ್ನು ಈ ಕೆಳಗೆ ನೀಡಲಾಗಿದೆ:
ಅಪ್ಲಿಕಂಟ್‌ಗಳು ಬ್ಯಾಚುಲರ್ ಪದವಿ, ಸ್ನಾತಕೋತ್ತರ ಪದವಿ (ಮಾಸ್ಟರ್ ಡಿಗ್ರಿ) ಅಥವಾ ಅದರ ವಿದೇಶಿ ಸಮಾನ ಪದವಿಯನ್ನು ಹೊಂದಿರಬೇಕು.
ಕೆಲಸಕ್ಕೆ ಅಗತ್ಯವಿರುವ ಎಲ್ಲಾ ಪದವಿ ಅವಶ್ಯಕತೆಗಳನ್ನು ನೀವು ಹೊಂದಿರಬೇಕು, ಉದಾಹರಣೆಗೆ, ವೈದ್ಯರಿಗೆ MD ಪದವಿ ಅಗತ್ಯವಿದೆ.
ಈ ಫೀಲ್ಡ್/ಪೊಸಿಷನ್‌ನ ಬಗ್ಗೆ ಅಪಾರ ಜ್ಞಾನವಿರಬೇಕು.
ಎಂಪ್ಲಾಯರ್‌ಗಳು US ನಲ್ಲಿಯೇ ಅನುಭವವುಳ್ಳ ವ್ಯಕ್ತಿಯ ಕೊರತೆಯನ್ನು ತೋರಿಸಬೇಕು.
ಯುನೈಟೆಡ್ ಸ್ಟೇಟ್ಸ್ ಸಿಟಿಜನ್‌ಶಿಪ್ ಮತ್ತು ಇಮಿಗ್ರೇಷನ್ ಸರ್ವೀಸ್‌ಗಳು ಈ ಉದ್ಯೋಗಕ್ಕೆ ಸ್ಪೆಷಲೈಸ್ಡ್ ಸರ್ವೀಸ್ ಬೇಕಾಗಿದೆಯೇ ಮತ್ತು ಅದನ್ನು ಮಾಡಲು ನೀವು ಅರ್ಹರಾಗಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ.
ನಿಮ್ಮ ಎಂಪ್ಲಾಯರ್‌ಗಳು ನಿಮ್ಮ ಕಾಂಟ್ರ್ಯಾಕ್ಟ್‌ನ ನಿಯಮಗಳು ಮತ್ತು ಷರತ್ತುಗಳಿಗೆ ಸಂಬಂಧಿಸಿದಂತೆ, ಡಿಪಾರ್ಟ್‌ಮೆಂಟ್ ಆಫ್ ಲೇಬರ್‌ಗೆ ಲೇಬರ್ ಕಂಡಿಷನ್ ಅನ್ನು ಫೈಲ್ ಮಾಡಬೇಕು.
ನೀವು ಹೋಗುತ್ತಿರುವ ಕೆಲಸವನ್ನು ಮಾಡಲು ನಿಮ್ಮ ಸಾಮರ್ಥ್ಯವನ್ನು ಸಹ ನೀವು ಪ್ರೂವ್ ಮಾಡಬೇಕು.
H-1B ವೀಸಾವನ್ನು ಹೇಗೆ ಪಡೆಯುವುದು ಎಂಬುದನ್ನು ತಿಳಿಯಲು ನೀವೀಗ ಕುತೂಹಲದಿಂದ ಕಾಯುತ್ತಿರುವಿರಿ, ಅಲ್ಲವೇ! ಅದಕ್ಕೆ ಉತ್ತರ ಇಲ್ಲಿದೆ.
H-1B ವೀಸಾಗಾಗಿ ಅಪ್ಲೈ ಮಾಡುವುದು ಹೇಗೆ?
H-1B ವೀಸಾಗಾಗಿ ಅಪ್ಲೈ ಮಾಡಲು ಪ್ರಮುಖವಾದ ನಾಲ್ಕು ಹಂತಗಳಿವೆ. ಅವುಗಳೆಂದರೆ -
ನಿಮ್ಮನ್ನು ನೇಮಿಸಿಕೊಳ್ಳಲು US ನಲ್ಲಿ ಕಂಪನಿ ಅಥವಾ ಆರ್ಗನೈಸೇಶನ್ ಅನ್ನು ಹುಡುಕುವುದು
ಲೇಬರ್ ಕಂಡಿಷನ್ ಅಪ್ರುವಲ್ (LCA) ಅನ್ನು ಪಡೆಯುವುದು
ಫಾರ್ಮ್ I-129 ಅನ್ನು ಭರ್ತಿ ಮಾಡುವುದು
ನಿಮ್ಮ ದೇಶದಲ್ಲಿರುವ US ಕಾನ್ಸ್ಯುಲೇಟ್‌ಗೆ ಭೇಟಿ ನೀಡುವ ಮೂಲಕ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು.
ಈಗ, ನಾವು H-1B ವೀಸಾಗಾಗಿ ಅಪ್ಲೈ ಮಾಡುವುದು ಹೇಗೆ ಎಂಬುದನ್ನು ವಿವರವಾಗಿ ನೋಡೋಣ.
ಹಂತ 1: ನಿಮ್ಮನ್ನು ಸ್ಪಾನ್ಸರ್ ಮಾಡಲು US ನಲ್ಲಿ ಇರುವ ಕಂಪನಿಯೊಂದರ ಅಗತ್ಯವಿದೆ. ಇದರರ್ಥ ಯಾವುದೇ ಕಾನೂನುಬದ್ಧ US ವರ್ಕರ್‌ಗಳು ಲಭ್ಯವಿಲ್ಲದ ಕೆಲಸವನ್ನು ನಿಮಗೆ ನೀಡಲು ಕಂಪನಿಯ ಅಗತ್ಯವಿದೆ.
ಹಂತ 2: ಒಮ್ಮೆ ನೀವು ಕೆಲಸವನ್ನು ಪಡೆದರೆ, ನಿಮ್ಮ ಎಂಪ್ಲಾಯರ್‌ಗಳು H-1B ಅಪ್ಲಿಕೇಶನ್‌ನ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು.
ಹಂತ 3: ಮುಂದೆ, ಈ ಕಂಪನಿಯು ಲೇಬರ್ ಕಂಡಿಷನ್ ಅಪ್ರುವಲ್ (LCA) ಅನ್ನು ಡಿಪಾರ್ಟ್‌ಮೆಂಟ್ ಆಫ್ ಲೇಬರ್‌ಗೆ ಸಲ್ಲಿಸಬೇಕು, ಇದು ವೇತನಕ್ಕೆ ಸಂಬಂಧಿಸಿದ ಕೆಲವು ನಿಯಮಗಳೊಂದಿಗೆ ಪ್ರಾರಂಭವಾಗುತ್ತದೆ.
ಹಂತ 4: ಇದಲ್ಲದೆ, ಎಂಪ್ಲಾಯರ್‌ಗಳು ಫಾರ್ಮ್ I-129 ಅನ್ನು ಭರ್ತಿ ಮಾಡಬೇಕಾಗುತ್ತದೆ. ಇದು ನಾನ್-ಇಮಿಗ್ರಂಟ್ ವರ್ಕರ್‌ನ ಅರ್ಜಿಯಾಗಿದೆ. ಇದು ಸಾಮಾನ್ಯವಾಗಿ ಸುಮಾರು 3 ರಿಂದ 4 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಶುಲ್ಕಗಳು, ರೆಸ್ಯೂಮ್, ದೃಢೀಕರಣ ಪತ್ರ, ಬೆಂಬಲ ಪತ್ರ, ತರಬೇತಿ ಪ್ರಮಾಣಪತ್ರಗಳು, ಶಿಕ್ಷಣ ಮತ್ತು ಅನುಭವದ ಮೌಲ್ಯಮಾಪನ ಮುಂತಾದ ಡಾಕ್ಯುಮೆಂಟ್‌ಗಳನ್ನು ಸಬ್ಮಿಟ್ ಮಾಡುವುದನ್ನು ಒಳಗೊಂಡಿರುತ್ತದೆ.
ಹಂತ 5: ಅರ್ಜಿಯನ್ನು ಅನುಮೋದಿಸಿದ ನಂತರ, ಫಾರ್ಮ್ಯಾಲಿಟಿಗಳನ್ನು ಪೂರ್ಣಗೊಳಿಸಲು ವ್ಯಕ್ತಿಯು ತಮ್ಮ ತಾಯ್ನಾಡಿನಲ್ಲಿರುವ ಅಮೇರಿಕನ್ ಕಾನ್ಸ್ಯುಲೇಟ್‌ಗೆ ಭೇಟಿ ನೀಡಬೇಕು. ಇದು ಸುಮಾರು 2 ರಿಂದ 3 ದಿನಗಳನ್ನು ತೆಗೆದುಕೊಳ್ಳುತ್ತದೆ.
H-1B ವೀಸಾಗಾಗಿ ಅಗತ್ಯವಿರುವ ಡಾಕ್ಯುಮೆಂಟ್‌ಗಳು
ನೀವು ಈಗಾಗಲೇ ನೋಡಿದಂತೆ ಸಾಕಷ್ಟು H-1B ವೀಸಾ ಅವಶ್ಯಕತೆಗಳಿವೆ. ಇಲ್ಲಿ ನಾವು ಅಗತ್ಯವಿರುವ H-1B ವೀಸಾ ಡಾಕ್ಯುಮೆಂಟ್‌ಗಳು ಚರ್ಚಿಸೋಣ.
ಎರಡು ಕೇಸ್‌ಗಳಿವೆ. ಮೊದಲನೆಯದು ಒಬ್ಬ ವ್ಯಕ್ತಿಯು US ನ ಹೊರಗೆ ವಾಸಿಸುತ್ತಿರುವುದು, ಮತ್ತು ಎರಡನೆಯದು ಒಬ್ಬ ವ್ಯಕ್ತಿಯು ಈಗಾಗಲೇ US ನಲ್ಲಿರುವುದು.
ಈ ಕೆಳಗಿನವುಗಳು H-1B ವೀಸಾಗಾಗಿ ಅಗತ್ಯವಿರುವ ಡಾಕ್ಯುಮೆಂಟ್‌ಗಳಾಗಿವೆ.
US ನ ಹೊರಗಿರುವವರಿಗೆ H-1B ವೀಸಾ
ಮೊದಲನೆಯದಾಗಿ, ನಿಮಗೆ 2 ರಿಂದ 3 ಪಾಸ್‌ಪೋರ್ಟ್ ಸೈಜಿನ ಕಲರ್ ಫೋಟೋಗಳು ಬೇಕಾಗುತ್ತವೆ
ನಿಮ್ಮ ಪದವಿಗಳ ಕಾಪಿಗಳು
ಇದಲ್ಲದೆ, ನಿಮ್ಮ ಪ್ರಸ್ತುತ US ಲೈಸೆನ್ಸ್ ಅಥವಾ ಟೆಂಪರರಿ ಲೈಸೆನ್ಸ್‌ನ ಕಾಪಿಗಳು ನಿಮಗೆ ಬೇಕಾಗುತ್ತವೆ ಮತ್ತು ಸಪೋರ್ಟಿಂಗ್ ಸರ್ಟಿಫಿಕೇಟ್‌ಗಳೊಂದಿಗೆ ರೆಸ್ಯೂಮ್ ಬೇಕಾಗುತ್ತವೆ
H-4 ವೀಸಾಗಾಗಿ ಅಪ್ಲೈ ಮಾಡುತ್ತಿದ್ದರೆ, ಮಕ್ಕಳ ಬರ್ತ್ ಸರ್ಟಿಫಿಕೇಟ್‌ಗಳು ಮತ್ತು ಮ್ಯಾರೇಜ್ ಸರ್ಟಿಫಿಕೇಟ್‌ನ ಕಾಪಿಗಳನ್ನು ಸಬ್ಮಿಟ್ ಮಾಡಿ.
ಸ್ಪಾನ್ಸರಿಂಗ್ US ಕಂಪನಿಯೊಂದಿಗೆ ಜಾಬ್ ಡಿಸ್ಕ್ರಿಪ್ಷನ್ ಮತ್ತು ಡ್ಯೂಟಿಯನ್ನು ಸಂಕ್ಷಿಪ್ತವಾಗಿ ವಿವರಿಸಿರಬೇಕು.
ಲೇಬರ್ ಸರ್ಟಿಫಿಕೇಟ್ ಅಪ್ರುವಲ್ (LCA)
ಬಹು ಮುಖ್ಯವಾಗಿ, ನಿಮ್ಮ ಎಂಪ್ಲಾಯರ್‌ಗಳಿಂದ ನಿಮಗೆ ಅಪಾಯಿಂಟ್‌ಮೆಂಟ್ ಪತ್ರ ಬೇಕಾಗುತ್ತದೆ
ನಂತರ, ನೀವು ಕಾನ್ಸುಲರ್ ಜನರಲ್ ಆಫ್ ದಿ ಇಂಡಿಯನ್ ಕಾನ್ಸ್ಯುಲೇಟ್ ಮತ್ತು ಡಿಪಾರ್ಟ್‌ಮೆಂಟ್ ಆಫ್ ಜಸ್ಟೀಸ್‌ಗೆ ಕಳುಹಿಸಿರುವ ಅಪಾಯಿಂಟ್‌ಮೆಂಟ್ ಪತ್ರದ ಕಾಪಿಯನ್ನು ಕಳುಹಿಸಬೇಕು.
ನಂತರ, ನಿಮಗೆ ಹಿಂದಿನ ಕಂಪನಿಗಳು ನೀಡಿದ ಎಲ್ಲಾ ಅಪಾಯಿಂಟ್‌ಮೆಂಟ್‌ಗಳು ಮತ್ತು ರಿಲೀವಿಂಗ್ ಸರ್ಟಿಫಿಕೇಟ್‌ಗಳು ಬೇಕಾಗುತ್ತವೆ.
ಪಾಸ್‌ಪೋರ್ಟ್
ಪೋಸ್ಟ್‌ಗ್ರ್ಯಾಜುವೇಟ್ ಸರ್ಟಿಫಿಕೇಟ್
ಕಂಪನಿಯ ಟ್ಯಾಕ್ಸ್ ರಿಟರ್ನ್ಸ್ ಪೇಪರ್
ನಂತರ, ನೀವು H-1B ಸ್ಟೇಟಸ್‌ನಲ್ಲಿ US ನಲ್ಲಿ ಮೊದಲು ಉಳಿದುಕೊಂಡಿದ್ದ ಯಾವುದಾದರೂ ದಿನಾಂಕಗಳನ್ನು ನಮೂದಿಸಬೇಕಾಗುತ್ತದೆ
ಎರಡು ಡಿಮ್ಯಾಂಡ್ ಡ್ರಾಫ್ಟ್‌ಗಳು, ಪ್ರೊಸೆಸಿಂಗ್ ಫೀಸ್‌ಗಾಗಿ $45 ಮತ್ತು ಇಶ್ಯುಯೆನ್ಸ್ ಫೀಸ್‌ಗಾಗಿ $100
US ನಲ್ಲಿ ವಾಸಿಸುವವರಿಗೆ H-1B ವೀಸಾ
ಪ್ರಸ್ತುತ ಪಾಸ್‌ಪೋರ್ಟ್‌ನ ಬಯಾಗ್ರಫಿಕ್ ಮತ್ತು ವೀಸಾ ಪೇಜುಗಳ ಕಾಪಿ
ಕ್ರೆಡೆನ್ಷಿಯಲ್‌ಗಳ ಮೌಲ್ಯಮಾಪನದ ಕಾಪಿ
ಯೂನಿವರ್ಸಿಟಿ ಅಥವಾ ಕಾಲೇಜು ಪದವಿಯ ಕಾಪಿ
ಪ್ರಸ್ತುತ ಲೈಸೆನ್ಸ್‌ನ ಕಾಪಿ, ಯಾವುದಾದರೂ ಇದ್ದಲ್ಲಿ
ಎಂಪ್ಲಾಯ್‌ಮೆಂಟ್ ಅನುಭವ ಹೊಂದಿರುವ ಪ್ರಸ್ತುತ ರೆಸ್ಯೂಮ್
ಪ್ರಸ್ತುತ U.S. ಅಡ್ರೆಸ್
H1-B ಸ್ಟೇಟಸ್‌ನ ಅಡಿಯಲ್ಲಿ US ನಲ್ಲಿ ಮೊದಲು ಉಳಿದುಕೊಂಡಿದ್ದ ದಿನಾಂಕಗಳು
ದಿನದ ಮತ್ತು ಸಂಜೆಯ ಫೋನ್ ನಂಬರ್‌ಗಳು
ನಿಮ್ಮ ಜಾಬ್ ಮತ್ತು ಡ್ಯೂಟಿಗಳ ವಿವರವಾದ ವಿವರಣೆ
ಇಮೇಲ್ ಅಡ್ರೆಸ್
ವಿದೇಶಿ ಅಡ್ರೆಸ್
ಫಾರ್ಮ್ I-94 ಕಾರ್ಡ್ ಕಾಪಿ
ಹಿಂದಿನ H1-B ಅಪ್ರುವಲ್ ನೋಟೀಸ್‌ನ ಕಾಪಿ
ಇತ್ತೀಚಿನ ಪೇಸ್ಲಿಪ್‌ನ ಕಾಪಿ
ಇತ್ತೀಚಿನ W2 ಕಾಪಿ
ಸೋಶಿಯಲ್ ಸೆಕ್ಯೂರಿಟಿ ನಂಬರ್
ಸ್ಪಾನ್ಸರಿಂಗ್ US ಕಂಪನಿಯೊಂದಿಗೆ ನೀವು ಹೊಂದಿರುವ ಟೈಟಲ್
ಇದಲ್ಲದೆ, ನೀವು ಸಬ್ಮಿಟ್ ಮಾಡಬೇಕಾದ ಪಾಸ್‌ಪೋರ್ಟ್ ಸೈಜಿನ ಫೋಟೋಗಳ ಅವಶ್ಯಕತೆಗಳನ್ನು ತಿಳಿದುಕೊಳ್ಳುವುದು ಸಹ ಮುಖ್ಯವಾಗಿದೆ.
H-1B ವೀಸಾ ಅಪ್ಲಿಕೇಶನ್‌ಗಾಗಿ ಫೋಟೋ ಅಗತ್ಯತೆಗಳು
ಚಿತ್ರವು ಚೌಕವಾಗಿರಬೇಕು ಮತ್ತು ಅದರ ಕನಿಷ್ಠ ಡೈಮೆನ್ಷನ್ 600 x 600 ಪಿಕ್ಸೆಲ್‌ಗಳಾಗಿರಬೇಕು.
ಫೋಟೋ ಕಲರ್ (SRGB) ಕೋಡ್‌ನಲ್ಲಿರಬೇಕು.
ಫೈಲ್‌ನ ಫಾರ್ಮ್ಯಾಟ್ JPEG ಆಗಿರಬೇಕು.
ಫೋಟೋ ಫೈಲ್‌ನ ಸೈಜ್ 240 KB ಅಥವಾ ಅದಕ್ಕಿಂತ ಕಡಿಮೆ ಇರಬೇಕು.
ನಿಮ್ಮ ಫೋಟೋದ ಮುಂಭಾಗದ ನೋಟದಲ್ಲಿ ಪೂರ್ಣ ಮುಖ, ಭುಜಗಳು ಮತ್ತು ಕುತ್ತಿಗೆಯು ಕಾಣುವಂತಿರಬೇಕು.
ಮುಖದ ಎಕ್ಸ್‌ಪ್ರೆಶನ್‌ಗಳು ನಗುವಿನಿಂದ ಕೂಡಿರಬಾರದು ಮತ್ತು ತಟಸ್ಥವಾಗಿರಬೇಕು. ಕಣ್ಣುಗಳು ತೆರೆದಿರಬೇಕು. ಅಲ್ಲದೇ, ನೀವು ನೇರವಾಗಿ ಕ್ಯಾಮೆರಾವನ್ನೇ ನೋಡಬೇಕು.
ನಿಮ್ಮ ತಲೆಯನ್ನು ಯಾವುದೇ ಕಡೆಗೂ ವಾಲಿಸಬಾರದು. ಇದು ಯಾವಾಗಲೂ ಫ್ರೇಮ್‌ನ ಮಧ್ಯಭಾಗದಲ್ಲಿರಬೇಕು.
ಬ್ಯಾಕ್‌ಗ್ರೌಂಡ್ ಲೈಟ್ ಕಲರ್‌ನಲ್ಲಿರಬೇಕು. ಜೊತೆಗೆ, ಚಿತ್ರದಲ್ಲಿ ಯಾವುದೇ ನೆರಳುಗಳು ಇರಬಾರದು.
ಮುಖವು ಫೋಕಸ್ ಆಗಿರಬೇಕು ಮತ್ತು ಈ ಚಿತ್ರವನ್ನು ಶಾರ್ಪ್ ಮಾಡಬಾರದು.
ಇದಲ್ಲದೆ, ಫೋಟೋ ಓವರ್ ಅಥವಾ ಅಂಡರ್ ಎಕ್ಸ್‌ಪೋಸ್ಡ್ ಆಗಿರಬಾರದು.
H-1B ವೀಸಾದ ಶುಲ್ಕಗಳು ಯಾವುವು?
ಉದ್ದೇಶ | ಪಾವತಿಸಬೇಕಾದ ಶುಲ್ಕಗಳು |
---|---|
ರಿಜಿಸ್ಟ್ರೇಷನ್ ಫೀಸ್ | $10 |
ಫಾರ್ಮ್ I-129 ಗಾಗಿ ಸ್ಟ್ಯಾಂಡರ್ಡ್ ಫೀಸ್ | $460 |
ACWIA ಟ್ರೈನಿಂಗ್ ಫೀಸ್ | $750 - $1500 |
ವಂಚನೆ ತಡೆಗಟ್ಟುವಿಕೆ ಮತ್ತು ಡಿಟೆಕ್ಷನ್ ಫೀಸ್ | $500 |
ಸಾರ್ವಜನಿಕ ಕಾನೂನು 114-113 H-1B ಅಥವಾ L1 ಸ್ಟೇಟಸ್ ಅನ್ನು ಹೊಂದಿರುವ ಅರ್ಧದಷ್ಟು ವರ್ಕರ್‌ಗಳನ್ನು ಹೊಂದಿರುವ ಕಂಪನಿಗಳ ಫೀಸ್ | $4000 |
ಫಾರ್ಮ್ I-907 ನೊಂದಿಗೆ H-1B ವೀಸಾ ಪ್ರಕ್ರಿಯೆಯನ್ನು ತ್ವರಿತಗೊಳಿಸುವವರಿಗೆ ಆಪ್ಷನಲ್ ಫೀಸ್ | $1440 |
H-1B ವೀಸಾಗೆ ಸಂಬಂಧಿಸಿದಂತೆ ಇತರ ವಿವಿಧ ಅಂಶಗಳು
H-1B ವೀಸಾದ ಲಾಟರಿ ಪ್ರಕ್ರಿಯೆ ಹೇಗಿರುತ್ತದೆ?
ಅನುಮೋದಿಸಲಾದ H-1B ವೀಸಾಗಳ ಸಂಖ್ಯೆಯ ಮೇಲೆ ವಾರ್ಷಿಕ ಲಿಮಿಟ್ ಇದೆ. ಈ ಲಿಮಿಟ್ ಅನ್ನು ತಲುಪಿದ ನಂತರ, ಅಪ್ಲಿಕಂಟ್‌ಗಳು ರ‍್ಯಾ0ಡಮ್ ಆಗಿ ಲಾಟರಿಯನ್ನು ನಮೂದಿಸಬೇಕಾಗುತ್ತದೆ. ಒಂದುವೇಳೆ ನಿಮ್ಮ ನಂಬರ್ ಆಯ್ಕೆಯಾದರೆ, ನೀವು ವೀಸಾ ಪ್ರಕ್ರಿಯೆಯೊಂದಿಗೆ ಮುಂದುವರೆಯಬಹುದು. ಇಲ್ಲದಿದ್ದರೆ, ಅಪ್ಲೈ ಮಾಡಲು ನೀವು ಮುಂದಿನ ವರ್ಷದವರೆಗೆ ಕಾಯಬೇಕಾಗುತ್ತದೆ.
H-1B ವೀಸಾದ ಸ್ಟೇಟಸ್ ಅನ್ನು ಚೆಕ್ ಮಾಡುವುದು ಹೇಗೆ?
H-1B ಸ್ಟೇಟಸ್ ಚೆಕ್ ಮಾಡುವುದನ್ನು ಆನ್‌ಲೈನ್‌ನಲ್ಲಿ ಮಾಡಬಹುದು. ಅದಕ್ಕಾಗಿ ಈ ಹಂತಗಳನ್ನು ಅನುಸರಿಸಿ -
ಹಂತ 1: USCIS ನ ಆಫೀಷಿಯಲ್ ಪೋರ್ಟಲ್‌ಗೆ ಭೇಟಿ ನೀಡಿ.
ಹಂತ 2: ರಿಜಿಸ್ಟರ್ ಮಾಡಿದ ನಂತರ, ನೀವು 13-ಡಿಜಿಟ್‌ನ ರಿಸಿಪ್ಟ್ ನಂಬರ್ ಅನ್ನು ಸ್ವೀಕರಿಸುತ್ತೀರಿ. ಇದು EAC, VSC, NSC, WAC ಯಿಂದ ಪ್ರಾರಂಭವಾಗಬೇಕು.
ಹಂತ 3: ಈ ನಂಬರ್ ಅನ್ನು ನಮೂದಿಸಿ ಮತ್ತು H-1B ಟ್ರ್ಯಾಕಿಂಗ್ ಅನ್ನು ಪೂರ್ಣಗೊಳಿಸಲು ಚೆಕ್ ಮಾಡಿ!
H-1B ವೀಸಾದ ವ್ಯಾಲಿಡಿಟಿ ಏನು?
H-1B ವೀಸಾವು 3 ವರ್ಷಗಳವರೆಗೆ ವ್ಯಾಲಿಡ್ ಆಗಿರುತ್ತದೆ. ಅದರ ನಂತರ, ಅದನ್ನು ಇನ್ನೂ ಮೂರು ವರ್ಷಗಳವರೆಗೆ ಎಕ್ಸ್‌ಟೆಂಡ್ ಮಾಡಬಹುದು. ಅದರ ನಂತರ, ನೀವು F-1 ಸ್ಟೂಡೆಂಟ್ ಅಥವಾ O-1 ವರ್ಕರ್‌ಗಾಗಿ ಅಪ್ಲೈ ಮಾಡಬೇಕಾಗುತ್ತದೆ.
ಆರು ವರ್ಷಗಳ ನಂತರ ವೀಸಾವನ್ನು ಎಕ್ಸ್‌ಟೆಂಡ್ ಮಾಡಲು, ಅರ್ಜಿದಾರರು ಅಂದರೆ ನಿಮ್ಮ ಪ್ರಸ್ತುತ ಎಂಪ್ಲಾಯರ್ ಆಗಿರಲಿ ಅಥವಾ ಹೊಸ ಎಂಪ್ಲಾಯರ್ ಆಗಿರಲಿ, ಫಾರ್ಮ್ I-126 ಅನ್ನು ಫೈಲ್ ಮಾಡಬೇಕು.
H-1B ವೀಸಾವನ್ನು ಪ್ರಕ್ರಿಯೆಗೊಳಿಸಲು ಎಷ್ಟು ಸಮಯ ಬೇಕಾಗುತ್ತದೆ?
ಯಶಸ್ವಿ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲು ಸುಮಾರು 3-5 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದಾಗ್ಯೂ, H1B ಅರ್ಜಿಯ ಅವಧಿಯು 3 ರಿಂದ 6 ತಿಂಗಳುಗಳನ್ನು ತೆಗೆದುಕೊಳ್ಳಬಹುದು. ಆದಾಗ್ಯೂ, ಪ್ರೀಮಿಯಂ ಪ್ರಕ್ರಿಯೆಗೆ ರಿಕ್ವೆಸ್ಟ್ ಮಾಡಿದಲ್ಲಿ, ಈ ಪ್ರಕ್ರಿಯೆಯು 15 ಕ್ಯಾಲೆಂಡರ್ ದಿನಗಳನ್ನು ತೆಗೆದುಕೊಳ್ಳುತ್ತದೆ.
ರಿಸಿಪ್ಟ್ ನಂಬರ್ ಇಲ್ಲದೆ H1B ವೀಸಾ ಸ್ಟೇಟಸ್ ಅನ್ನು ಚೆಕ್ ಮಾಡುವುದು ಹೇಗೆ?
1-800-375-5283 ಗೆ ಕಾಲ್ ಮಾಡುವ ಮೂಲಕ ನಿಮ್ಮ ವೀಸಾ ಸ್ಟೇಟಸ್ ಅನ್ನು ನೀವು ಚೆಕ್ ಮಾಡಬಹುದು. ಕಾಲ್ ವಾಲ್ಯೂಮ್‌ಗಳನ್ನು ಆಧರಿಸಿ, ರಿಸಿಪ್ಟ್ ನಂಬರ್ ಇಲ್ಲದೆಯೇ ನಿಮ್ಮ H-1B ವೀಸಾ ಸ್ಟೇಟಸ್ ಅನ್ನು ನೀವು ಚೆಕ್ ಮಾಡಬಹುದು.
H-1B ವೀಸಾದ ಪ್ರಯೋಜನಗಳೇನು?
H-1B ವೀಸಾದಿಂದ ಸಾಕಷ್ಟು ಪ್ರಯೋಜನಗಳಿವೆ, ವಿಶೇಷವಾಗಿ ವ್ಯಕ್ತಿಗೆ ಮತ್ತು ಅವರ ಕುಟುಂಬಕ್ಕೆ ಪ್ರಯೋಜನಗಳಿವೆ. ಅವುಗಳು ಹೀಗಿವೆ -
ಕುಟುಂಬದ ಸದಸ್ಯರು (21 ವರ್ಷದೊಳಗಿನ ಮಕ್ಕಳು ಮತ್ತು ಸಂಗಾತಿಗಳು) ಅವರ ವಾಸ್ತವ್ಯದ ಸಮಯದಲ್ಲಿ ಆ ವ್ಯಕ್ತಿಯನ್ನು ಸೇರಿಕೊಳ್ಳಬಹುದು. ಆದಾಗ್ಯೂ, ಅವರು H4 ವೀಸಾಗಾಗಿ ಅಪ್ಲೈ ಮಾಡಬೇಕಾಗುತ್ತದೆ.
H4 ವೀಸಾಹೋಲ್ಡರ್‌ಗಳು ಶಾಲೆಗೆ ಹೋಗಬಹುದು, ಬ್ಯಾಂಕ್ ಅಕೌಂಟ್‌ಗಳನ್ನು ತೆರೆಯಬಹುದು ಮತ್ತು ಸೋಶಿಯಲ್ ಸೆಕ್ಯೂರಿಟಿ ನಂಬರ್ ಅನ್ನು ಪಡೆಯಬಹುದು.
H-1B ವೀಸಾವು ಸಾಮಾನ್ಯ ಅವಶ್ಯಕತೆಗಳನ್ನು ಹೊಂದಿದ್ದು, ಅದರಿಂದ ಅಪ್ಲೈ ಮಾಡಲು ಮತ್ತು ಪಡೆಯಲು ಸುಲಭವಾಗುತ್ತದೆ. ಇದಕ್ಕೆ ಬ್ಯಾಚುಲರ್ ಪದವಿ ಮತ್ತು US-ಬೇಸ್ಡ್ ಕಂಪನಿಯಿಂದ ಜಾಬ್ ಆಫರ್‌ನ ಅಗತ್ಯವಿದೆ.
ಈ ವೀಸಾದ ಅವಧಿಯು J-1 ಅಥವಾ B-1 ನಂತಹ ಇತರ ವೀಸಾಗಳಿಗಿಂತ ಹೆಚ್ಚು.
ನೀವು US ನಲ್ಲಿ ಪಾರ್ಟ್-ಟೈಮ್ ಮಾಡಬಹುದು ಮತ್ತು ಅನೇಕ ಎಂಪ್ಲಾಯರ್‌ಗಳಿಗೆ ಸಹ ಕೆಲಸ ಮಾಡಬಹುದು.
ಈ ವೀಸಾ ಅಡಿಯಲ್ಲಿ ನೀವು US ನಲ್ಲಿ ಲೀಗಲ್ ಪರ್ಮನೆಂಟ್ ರೆಸಿಡೆನ್ಸಿಯನ್ನು ಮುಂದುವರೆಸಬಹುದು.
ಕೊನೆಯಲ್ಲಿ, H-1B ಏಕೆ ಇಷ್ಟು ಜನಪ್ರಿಯ ಮತ್ತು ಪ್ರಮುಖ ವೀಸಾ ಆಗಿದೆ ಎಂಬುದು ರಹಸ್ಯವಾದ ವಿಷಯವೇನಲ್ಲ. ಆದಾಗ್ಯೂ, ಇದು ಹಿಂದೆ ಎಂಪ್ಲಾಯರ್‌ಗಳಿಂದ ದುರುಪಯೋಗಪಡಿಸಲ್ಪಟ್ಟಿದೆ. ಆದ್ದರಿಂದ, ಪ್ರಸ್ತುತ ಕಟ್ಟುನಿಟ್ಟಾದ ನಿಯಮಗಳನ್ನು ಹೊಂದಿದೆ.
ಪದೇಪದೇ ಕೇಳಲಾದ ಪ್ರಶ್ನೆಗಳು
H1-B ವೀಸಾಗಾಗಿ ಅಪ್ಲಿಕಂಟ್‌ಗಳ ಸಂಖ್ಯೆಯ ವಾರ್ಷಿಕ ಮಿತಿ ಎಷ್ಟು?
ಲಾಟರಿ ಮೂಲಕ ವಾರ್ಷಿಕ 85,000 ಅಪ್ಲಿಕೇಶನ್‌ಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ.
ನೀವು H1B ವೀಸಾ ಲಾಟರಿಯಲ್ಲಿ ಆಯ್ಕೆಯಾಗದಿದ್ದರೆ ಏನಾಗುತ್ತದೆ?
ನೀವು ಲಾಟರಿಯಲ್ಲಿ ಆಯ್ಕೆಯಾಗದಿದ್ದಲ್ಲಿ USCIS ನಿಮ್ಮ ಪಿಟಿಷನ್ ಮತ್ತು ಅಪ್ಲಿಕೇಶನ್ ಶುಲ್ಕವನ್ನು ಹಿಂದಿರುಗಿಸುತ್ತದೆ.