ಟ್ರಾವೆಲ್ ಇನ್ಶೂರೆನ್ಸ್ ನ ಸಮಗ್ರ ಪ್ರಯೋಜನಗಳು
ನಿಮಗೆ ಅಗತ್ಯವಿರುವ ಎಲ್ಲವನ್ನೂ ಕವರ್ ಮಾಡುವ ಟ್ರಾವೆಲ್ ಇನ್ಶೂರೆನ್ಸ್
#ವಾಂಡರ್‌ಲಸ್ಟ್ ಮತ್ತು #ಟ್ರಾವೆಲ್ಗೋಲ್ಸ್ ಯುಗದಲ್ಲಿ, ಇಂದಿನ ಪೀಳಿಗೆಯು ಎಂದಿಗಿಂತಲೂ ಹೆಚ್ಚಾಗಿ ಪ್ರಯಾಣಿಸುತ್ತಿದೆ. ಆಸ್ತಿಗಾಗಿ ಉಳಿಸುವುದರಿಂದ ಸರಿದು ಅನುಭವಗಳಿಗಾಗಿ ಉಳಿಸುವುದರೊಂದಿಗೆ, ಪ್ರಯಾಣವು ಪ್ರತಿಯೊಬ್ಬರ ಬಕೆಟ್ ಲಿಸ್ಟ್ ನಲ್ಲಿ ಅಗ್ರಸ್ಥಾನದಲ್ಲಿದೆ; ಸಾಂಪ್ರದಾಯಿಕ ಯುರೋಪಿಯನ್ ಮತ್ತು ಅಮೇರಿಕನ್ ಹಾಲಿಡೇಗಳಿಂದ ಹಿಡಿದು ಪ್ರಪಂಚದ ಇತರ ಭಾಗಗಳ ಜೊತೆ ಭಾರತದಾದ್ಯಂತ ಸಹ ಭಿನ್ನವಾದ ಸಾಹಸಗಳವರೆಗೆ.
ನೀವು ಯುರೋಪ್‌ನ ಸುಂದರವಾದ ದೇಶಗಳಾದ್ಯಂತ ಅದ್ಭುತವಾದ ಟ್ರಿಪ್ ಅನ್ನು ಪ್ಲ್ಯಾನ್ ಮಾಡಿ ಅಥವಾ ಥೈಲ್ಯಾಂಡ್‌ನ ಅನೇಕ ದ್ವೀಪಗಳಿಗೆ ಬೀಚ್ ಟ್ರಿಪ್ ಅನ್ನು ಪ್ಲ್ಯಾನ್ ಮಾಡಿ, ಇಂದು ನಮ್ಮ ಮುಂದೆ ಇರುವ ಸಾಧ್ಯತೆಗಳು ಅಸಂಖ್ಯಾತ. ಟ್ರಾವೆಲ್ ಬ್ಲಾಗರ್‌ಗಳು ಮತ್ತು ಟ್ರಾವೆಲ್ ವೆಬ್‌ಸೈಟ್‌ಗಳ ವಿವಿಧ ಔಟ್‌ಲೆಟ್‌ಗಳ ಕೃಪೆಯಿಂದ, ಟ್ರಿಪ್ ಪ್ಲ್ಯಾನ್ ಮಾಡುವುದು ಮತ್ತು ಯೂನಿಕ್ ಆದ ಟ್ರಾವೆಲ್ ಕ್ರಮಗಳನ್ನು ನಿರ್ಮಿಸುವುದು ಇಂದು ರೂಢಿಯಾಗಿದೆ ಮತ್ತು ಎಲ್ಲವೂ ಡಿಜಿಟಲ್ ಆಗುವುದರೊಂದಿಗೆ, ನಿಮ್ಮ ಟ್ರಿಪ್ ಅನ್ನು ಆನ್‌ಲೈನ್‌ನಲ್ಲಿ ಸೆಕ್ಯೂರ್ ಮಾಡುವುದು ಸಾಧ್ಯವಾಗಿದೆ, ಆನ್‌ಲೈನ್ ಟ್ರಾವೆಲ್ ಇನ್ಶೂರೆನ್ಸ್ ಗೆ ಧನ್ಯವಾದಗಳು.
ಹಾಗಾದರೆ, ಈ ಟ್ರಾವೆಲ್ ಇನ್ಶೂರೆನ್ಸ್ ಎಂದರೇನು?
ನಾವು ಎಷ್ಟು ಟ್ರಾವೆಲ್ ಬ್ಲಾಗ್‌ಗಳು ಮತ್ತು ಮಾರ್ಗದರ್ಶಿಗಳನ್ನು ಓದಿದರೂ ಅಥವಾ ನಾವು ಎಷ್ಟು ಪ್ಲ್ಯಾನ್ ಮಾಡಿದರೂ, ಕೆಲವು ಸಣ್ಣ ಟ್ರಾವೆಲ್ ತೊಂದರೆಗಳು ಯಾವಾಗಲೂ ನಮ್ಮ ಮನೆಯಿಂದ ದೂರವಿರುವ ಊರಿನಲ್ಲಿ ನಾವು ಗೊಂದಲಕ್ಕೆ ಸಿಕ್ಕಿಹಾಕಿಕೊಳ್ಳುವಂತೆ ಮಾಡುತ್ತವೆ. ನಿಮಗೆ ಲಗೇಜ್ ನ ದುರಾದೃಷ್ಟ ಎದುರಾದರೆ ಅಥವಾ ನೀವು ಹಾಲಿಡೇಯಲ್ಲಿರುವಾಗ ಅನಾರೋಗ್ಯಕ್ಕೆ ತುತ್ತಾದರೆ; ಇವುಗಳನ್ನು ದೋಷಗಳು ಎಂದು ಕರೆಯಲು ಒಂದು ಕಾರಣವಿದೆ. ಇವುಗಳು ಅಘೋಷಿತವಾಗಿ ಬರುತ್ತವೆ ಮತ್ತು ಇದ್ದಕ್ಕಿದ್ದಂತೆ ಸಂಭವಿಸುತ್ತವೆ; ಮತ್ತು ಇದಕ್ಕಾಗಿಯೇ ಎಲ್ಲಾ ಅಡಚಣೆಗಳ ವಿರುದ್ಧ ನಿಮ್ಮನ್ನು ನೀವು ರಕ್ಷಿಸಲು, ಈ ಟ್ರಾವೆಲ್ ಇನ್ಶೂರೆನ್ಸ್ ಎಂಬುದನ್ನು ನೀವು ಹೊಂದಬಹುದು!
ನಿಮ್ಮ ಟ್ರಿಪ್ ನಲ್ಲಿ ಬರಬಹುದಾದ ನಷ್ಟಗಳು ಮತ್ತು ಅನಿರೀಕ್ಷಿತ ಟ್ರಾವೆಲ್ ದೋಷಗಳ ವಿರುದ್ಧ ಟ್ರಾವೆಲ್ ಇನ್ಶೂರೆನ್ಸ್ ನಿಮ್ಮನ್ನು ರಕ್ಷಿಸುತ್ತದೆ; ಫ್ಲೈಟ್ ಡಿಲೇ ಮತ್ತು ಬ್ಯಾಗೇಜ್ ನಷ್ಟದಿಂದ ಹಿಡಿದು ಕಳ್ಳತನ, ಅನಾರೋಗ್ಯ ಮತ್ತು ಅಪಘಾತಗಳವರೆಗೆ.
ಟ್ರಾವೆಲ್ ಇನ್ಶೂರೆನ್ಸ್ ಪ್ರಾಮುಖ್ಯತೆ
ಅನಿರೀಕ್ಷಿತ ಟ್ರಾ ವೆಲ್ ತೊಂದರೆಗಳು
ವೈದ್ಯಕೀಯ ತುರ್ತುಸ್ಥಿತಿಗಳು
ಮುಷ್ಕರಗಳು ಅಥವಾ ಗಲಭೆಗಳು
ನೈಸರ್ಗಿಕ ವಿಪತ್ತು
ನಿಮ್ಮ ಪಾಸ್‌ಪೋರ್ಟ್ ಅಥವಾ ವೀಸಾವನ್ನು ಕಳೆದುಕೊಂಡರೆ
ನಿಮಗಿದು ತಿಳಿಯದೇ ಇರಬಹುದು, ಆದರೆ ನಿಮ್ಮ ಟ್ರಾವೆಲ್ ಡಾಕ್ಯುಮೆಂಟ್ ಗಳನ್ನು ನೀವು ಕಳೆದುಕೊಳ್ಳದೆಯೇ ಇರಬಹುದು. ಆದರೆ, ನಿಮ್ಮ ಮೆದುಳಿಗೆ ಎಷ್ಟೇ ಕಷ್ಟ ನೀಡಿದರೂ, ನೀವು ಅವುಗಳನ್ನು ಎಲ್ಲಿ ಇಟ್ಟಿದ್ದೀರಿ ಎಂದು ನಿಮಗೆ ನೆನಪಾಗುವುದೇ ಇಲ್ಲ! ಅದೃಷ್ಟವಶಾತ್, ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ನಿಮ್ಮ ಪ್ಲ್ಯಾನ್ ಅನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಪಾಸ್‌ಪೋರ್ಟ್ ಇಲ್ಲದ ಕಾರಣ ನೀವು ಟ್ರಿಪ್ ಅನ್ನು ಕ್ಯಾನ್ಸಲ್ ಮಾಡಿದಾಗ ನಿಮ್ಮ ವೆಚ್ಚಗಳಿಗೆ ಕವರ್ ಅನ್ನು ಒದಗಿಸುತ್ತದೆ.
ಭಯಾನಕ ಡಿಲೇಗಳು
ಆದ್ದರಿಂದ, ನಿಮ್ಮ ಪುಸ್ತಕವನ್ನು ಹೊರತೆಗೆಯಿರಿ ಮತ್ತು ವಿಮಾನ ನಿಲ್ದಾಣದಲ್ಲಿ ಗೌರ್ಮೆ ಕಾಫಿಯನ್ನು ಆನಂದಿಸಿ!
ಫ್ಲೈಟ್ ಅನ್ನೇ ಮಿಸ್ ಮಾಡುವುದು
ಹಠಾತ್ ಆಸ್ಪತ್ರೆ ದಾಖಲಾತಿ
ಬ್ಯಾಗೇಜ್ ಸಂಕಟಗಳು
ದುರದೃಷ್ಟಕರ ಕ್ಯಾನ್ಸಲೇಶನ್ ಗಳು
1. ತುರ್ತು ಆಸ್ಪತ್ರೆ ದಾಖಲಾತಿ ಅಥವಾ ಇನ್ಶೂರ್ ಆದ ವ್ಯಕ್ತಿ ಅಥವಾ ಒಬ್ಬ ತಕ್ಷಣದ ಕುಟುಂಬದ ಸದಸ್ಯರು ಅಥವಾ ಟ್ರಾವೆಲ್ ಪಾರ್ಟ್ನರ್ ನ ಸಾವು.
2. ನಿಮಗೆ ನ್ಯಾಯಾಲಯದಿಂದ ಸಮನ್ಸ್ ನೀಡಲಾಗಿದ್ದು ಅದರ ದಿನಾಂಕವು ಟ್ರಾವೆಲ್ ಅವಧಿಯೊಳಗೆ ಬಂದರೆ.
3. ನೈಸರ್ಗಿಕ ವಿಕೋಪದಿಂದಾಗಿ ನಿಮ್ಮ ಮನೆ ಅಥವಾ ಪ್ರಯಾಣಿಸಬೇಕಾದ ಗಮ್ಯಸ್ಥಾನಕ್ಕೆ ಹಾನಿ.
4. ಮುಷ್ಕರ ಅಥವಾ ನಾಗರಿಕ ಗದ್ದಲ.
5. ನಿರ್ಗಮನದ ಮೊದಲು ಪಾಸ್ಪೋರ್ಟ್ ನಷ್ಟ
ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ಗಳು ಏನೆಲ್ಲಾ ಕವರ್ ಮಾಡುತ್ತವೆ
ವೈಯಕ್ತಿಕ ಅಪಘಾತ
ನಿಮ್ಮ ಟ್ರಿಪ್ ಸಮಯದಲ್ಲಿ ಅಪಘಾತದಿಂದಾಗಿ ನೀವು ಗಾಯಗೊಂಡರೆ.
ಸಾಹಸ ಕ್ರೀಡೆಗಳು
ಸಾಹಸ ಕ್ರೀಡಾ ಚಟುವಟಿಕೆಗಳ ಸಮಯದಲ್ಲಿ ಸಂಭವಿಸುವ ಯಾವುದೇ ತುರ್ತು ಪರಿಸ್ಥಿತಿಗಳಿಗೆ ಕವರ್ ನೀಡುತ್ತದೆ. ಉದಾಹರಣೆಗೆ: ಸ್ಕೂಬಾ ಡೈವಿಂಗ್ ಮಾಡುವಾಗ ನೀವು ಸಮಸ್ಯೆಯನ್ನು ಎದುರಿಸಿದರೆ ಮತ್ತು ಅದಕ್ಕಾಗಿ ವೈದ್ಯರನ್ನು ಭೇಟಿ ಮಾಡಬೇಕಾದರೆ.
ಫ್ಲೈಟ್ ಡಿಲೇ
ಫ್ಲೈಟ್ ಡಿಲೇಗಳಿಗೆ ಕವರ್ ನೀಡುತ್ತದೆ; ದೇಶೀಯ ವಿಮಾನಗಳ ಸಂದರ್ಭದಲ್ಲಿ ಕನಿಷ್ಠ 75 ನಿಮಿಷಗಳ ಡಿಲೇ ಮತ್ತು ಅಂತಾರಾಷ್ಟ್ರೀಯ ವಿಮಾನಕ್ಕಾಗಿ 6-ಗಂಟೆಗಳ ಡಿಲೇ .
ಚೆಕ್-ಇನ್ ಲಗೇಜ್ ನ ಡಿಲೇ
ನಿಮ್ಮ ಚೆಕ್-ಇನ್ ಆದ ಲಗೇಜ್ 6-ಗಂಟೆಗಳವರೆಗೆ ಡಿಲೇ ಆದ ಸಮಯಗಳಿಗೆ ಕವರ್ ನೀಡುತ್ತದೆ.
ಚೆಕ್-ಇನ್ ಆದ ಲಗೇಜ್‌ನ ಒಟ್ಟು ನಷ್ಟ
ನಿಮ್ಮ ಚೆಕ್-ಇನ್ ಆದ ಲಗೇಜ್ ತಪ್ಪಿಹೋದಾಗ ಅಥವಾ ಕಳೆದುಹೋದಾಗ ಆಗುವ ನಷ್ಟವನ್ನು ಕವರ್ ಮಾಡುತ್ತದೆ.
ತಪ್ಪಿದ ಸಂಪರ್ಕ
ನಿಮ್ಮ ಕನೆಕ್ಟಿಂಗ್ ಫ್ಲೈಟ್ ಅನ್ನು ನೀವು ತಪ್ಪಿಸಿಕೊಂಡಂತಹ ದುರದೃಷ್ಟಕರ ಸಮಯಗಳನ್ನು ಕವರ್ ಮಾಡುತ್ತದೆ.
ಪಾಸ್ಪೋರ್ಟ್ ನಷ್ಟ
ವಿದೇಶಿ ಸ್ಥಳದಲ್ಲಿ ನಿಮ್ಮ ಅಸ್ತಿತ್ವದಲ್ಲಿರುವ ಪಾಸ್‌ಪೋರ್ಟ್ ಅನ್ನು ನೀವು ಕಳೆದುಕೊಂಡಾಗ ನಿಮ್ಮ ಹೊಸ ಪಾಸ್‌ಪೋರ್ಟ್ ಅನ್ನು ಪಡೆಯಲು ತಗಲುವ ವೆಚ್ಚಗಳನ್ನು ಕವರ್ ಮಾಡುತ್ತದೆ.
ಕಳವಾದ ಹಣ/ವಾಲೆಟ್
ನಿಮ್ಮ ಹಣ ಮತ್ತು ವ್ಯಾಲೆಟ್ ಕಳೆದುಹೋದ ಅಥವಾ ಕಳ್ಳತನವಾದ ದುರದೃಷ್ಟಕರ ಸಮಯಗಳಲ್ಲಿ ತುರ್ತು ಕ್ಯಾಶ್ ಅನ್ನು ಒದಗಿಸುತ್ತದೆ.
ತುರ್ತು ಟ್ರಿಪ್ ವಿಸ್ತರಣೆ
ತುರ್ತು ಪರಿಸ್ಥಿತಿಯ ಕಾರಣದಿಂದಾಗಿ ನಿಮ್ಮ ಟ್ರಿಪ್ ಅನ್ನು ನೀವು ವಿಸ್ತರಿಸಬೇಕಾದ ಸಮಯಗಳಿಗೆ ಕವರ್ ನೀಡುತ್ತದೆ. ಆದರೆ, ಹೆಚ್ಚು ಮೋಜು ಮಾಡುವುದನ್ನು ತುರ್ತು ಎಂದು ಪರಿಗಣಿಸಲಾಗುವುದಿಲ್ಲ.
ಟ್ರಿಪ್ ತ್ಯಜಿಸುವಿಕೆ
ತುರ್ತು ಪರಿಸ್ಥಿತಿಯ ಕಾರಣದಿಂದಾಗಿ ನಿಮ್ಮ ಟ್ರಿಪ್ ಅನ್ನು ನೀವು ಸಂಪೂರ್ಣವಾಗಿ ತ್ಯಜಿಸಬೇಕಾದ ಸಂದರ್ಭಗಳಿಗಾಗಿ. ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಆಗ ಎಲ್ಲಾ ರಿಫಂಡ್ ಆಗದ ಪ್ರಯಾಣ ವೆಚ್ಚಗಳಿಗಾಗಿ ಪಾವತಿಸುತ್ತದೆ.
ಪರ್ಸನಲ್ ಲಯಬಿಲಿಟಿ ಬಾಂಡ್
ವಿದೇಶದಲ್ಲಿ ಆದ ಕಾನೂನು ಸಮಸ್ಯೆಗಳಿಗೆ ಕವರ್ ನೀಡುತ್ತದೆ. ನಿಮ್ಮ ಬಾಡಿಗೆ ಕಾರಿನಲ್ಲಿ ಸಹ ನೀವು ಸ್ಕ್ರಾಚ್ ಮಾಡಿದರೆ ಅಂತಹ ಸಮಯವನ್ನು ಇದು ಕವರ್ ಮಾಡುತ್ತದೆ.
ಅಪಘಾತದ ಸಾವು/ಅಂಗವೈಕಲ್ಯ
ರಜೆಯಲ್ಲಿರುವ ಸಮಯದಲ್ಲಿ ಒಬ್ಬರ ಮರಣ ಅಥವಾ ಅಂಗವೈಕಲ್ಯದಿಂದ ಉಂಟಾಗುವ ವೆಚ್ಚಗಳಿಗೆ ಕವರ್ ನೀಡುತ್ತದೆ.
ತುರ್ತು ಡೆಂಟಲ್ ಚಿಕಿತ್ಸೆ
ತುರ್ತು ಹಲ್ಲಿನ ಚಿಕಿತ್ಸೆಗಳಿಗೆ ಕವರ್ ನೀಡುತ್ತದೆ.
ತುರ್ತು ಅಪಘಾತದ ಚಿಕಿತ್ಸೆ ಮತ್ತು ಸ್ಥಳಾಂತರಿಸುವಿಕೆ
ಅಪಘಾತದ ಚಿಕಿತ್ಸೆಯಿಂದ ಉಂಟಾಗುವ ವೆಚ್ಚಗಳನ್ನು ಕವರ್ ಮಾಡುತ್ತದೆ.
ತುರ್ತು ವೈದ್ಯಕೀಯ ಚಿಕಿತ್ಸೆ ಮತ್ತು ಸ್ಥಳಾಂತರಿಸುವಿಕೆ
ಅನಾರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ಚಿಕಿತ್ಸೆಗಳು ಮತ್ತು ಸ್ಥಳಾಂತರಿಸುವಿಕೆಯ ವೆಚ್ಚಗಳಿಗೆ ಕವರ್ ನೀಡುತ್ತದೆ.
ದೈನಂದಿನ ನಗದು ಭತ್ಯೆ - 5 ದಿನಗಳವರೆಗೆ (ಆಸ್ಪತ್ರೆಯಲ್ಲಿ ದಾಖಲಾಗಿರುವಾಗ)
ನೀವು ಅಥವಾ ಕುಟುಂಬದ ಸದಸ್ಯರು ಆಸ್ಪತ್ರೆಗೆ ದಾಖಲಾಗಿರುವಾಗ ದೈನಂದಿನ ನಗದು ಭತ್ಯೆಯನ್ನು ಒದಗಿಸುತ್ತದೆ.
ಏನೆಲ್ಲಾ ಕವರ್ ಆಗಿರುವುದಿಲ್ಲ?
ನಮ್ಮದು ಒಂದು ಟ್ರಾವೆಲ್ ಇನ್ಶೂರೆನ್ಸ್ ಆಗಿದ್ದು ಅದು ಹಾಲಿಡೇ ಸಮಯದಲ್ಲಿ ಅನಿರೀಕ್ಷಿತವಾದ ಎಲ್ಲವನ್ನೂ ಕವರ್ ಮಾಡಿದರೂ, ನಾವು ಮಾಡುವ ಪ್ರತಿಯೊಂದರಲ್ಲೂ ನಾವು ಪಾರದರ್ಶಕವಾಗಿರುತ್ತೇವೆ. ಆದ್ದರಿಂದ, ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನೆಲ್ಲಾ ಕವರ್ ಆಗಿರುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಏನೆಲ್ಲಾ ಕವರ್ ಆಗಿರುತ್ತದೆ ಎಂಬುದನ್ನು ತಿಳಿದುಕೊಳ್ಳುವುದರಷ್ಟೇ ಮುಖ್ಯವಾಗಿದೆ. ಆದ್ದರಿಂದ, ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ನಾವು ಕವರ್ ಮಾಡಲು ಸಾಧ್ಯವಾಗದ ಕೆಲವು ಮಾನ್ಯವಾದ ವಿನಾಯಿತಿಗಳು ಇಲ್ಲಿವೆ:
ಕೊನೆಯಲ್ಲಿ, ಟ್ರಾವೆಲ್ ಇನ್ಶೂರೆನ್ಸ್ ಭವಿಷ್ಯ ನುಡಿಯುವ ಜ್ಯೋತ್ಯಿಷಿ ಅಲ್ಲ ಆದರೆ ಅದು ಖಂಡಿತವಾಗಿಯೂ ನೀವು ಭಾರೀ ಖರ್ಚುಗಳನ್ನು ಮಾಡುವುದರಿಂದ ನಿಮ್ಮನ್ನು ಉಳಿಸುತ್ತದೆ. 😉