ಭಾರತೀಯರಿಗೆ ಸ್ವಿಟ್ಜರ್ಲೆಂಡ್ ವೀಸಾ
ಭಾರತದಿಂದ ಸ್ವಿಟ್ಜರ್ಲೆಂಡ್ ಟೂರಿಸ್ಟ್ ವೀಸಾ ಬಗ್ಗೆ ಎಲ್ಲಾ
ನನ್ನ ಲೈಫ್ ಟೈಮ್ ಪಟ್ಟಿಯಲ್ಲಿ ವೀಕ್ಷಿಸಬೇಕಾದ ಸ್ಥಳಗಳಲ್ಲಿ ಒಂದೇ ಒಂದು ಸ್ಥಳಕ್ಕೆ ಅವಕಾಶವಿದ್ದರೆ, ಅದು ಬಹುಶಃ ಸ್ವಿಟ್ಜರ್ಲೆಂಡ್ ಆಗಿರಬಹುದು. ಸ್ವಿಟ್ಜರ್ಲೆಂಡ್‌ನ ಹಸಿರು ಹುಲ್ಲುಗಾವಲುಗಳಲ್ಲಿ ತಮ್ಮ ರೊಮ್ಯಾಂಟಿಕ್ ಹಾಡುಗಳನ್ನು ಚಿತ್ರೀಕರಿಸುವ ಬಾಲಿವುಡ್‌ನ ಗೀಳನ್ನು ಹೊರತುಪಡಿಸಿ, ಇದು ಯುವ ಜೋಡಿಗಳು ಮತ್ತು ಹನಿಮೂನ್ ಆಚರಿಸುವವರಿಂದ ಹಿಡಿದು ಸ್ನೇಹಿತರ ಗುಂಪು ಅಥವಾ ನಿಮ್ಮ ಇಡೀ ಕುಟುಂಬದವರೆಗೆ ಎಲ್ಲರಿಗೂ ಸೂಕ್ತವಾದ ಒಂದು ತಾಣವಾಗಿದೆ. ಅದರ ಮನಸೆಳೆಯುವ ಪರ್ವತಗಳಿಂದ ಹಿಡಿದು ಫೇರಿ ಟೇಲ್ ಗಳಲ್ಲಿರುವಂತಹ ಹಸಿರು ಹುಲ್ಲುಗಾವಲುಗಳವರೆಗೆ ಮತ್ತು ಕೆಲವು ಸುಂದರವಾದ ಕಾಲ್ನಡಿಗೆ ಹಾದಿಗಳು, ಅತ್ಯುತ್ತಮ ಚಾಕೊಲೇಟ್‌ಗಳನ್ನು ಒಳಗೊಂಡಂತೆ ಸ್ವಿಟ್ಜರ್ಲೆಂಡ್ ನ ಕೊಡುಗೆಗಳು ಇನ್ನೂ ಬಹಳಷ್ಟಿವೆ!
ಈಗ, ನೀವು ನಿಮ್ಮ ಟ್ರಿಪ್ ಪ್ಲಾನ್ ಮಾಡುವುದನ್ನು ಪ್ರಾರಂಭಿಸುವ ಮೊದಲು ಮತ್ತು ನಿಮ್ಮ ರಜೆಗೆ ಉಳಿದಿರುವ ದಿನಗಳನ್ನು ಎಣಿಸುವ ಮೊದಲು, ನಿಮ್ಮ ವೀಸಾ ಮತ್ತು ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯಂತಹ ಪ್ರಮುಖ ಡಾಕ್ಯುಮೆಂಟ್‌ಗಳನ್ನು ನೀವು ಪಡೆದುಕೊಂಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
ಭಾರತೀಯರಿಗೆ ಸ್ವಿಟ್ಜರ್ಲೆಂಡ್‌ಗಾಗಿ ವೀಸಾ ಅಗತ್ಯವಿದೆಯೇ?
ಹೌದು, ಎಲ್ಲಾ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಸ್ವಿಟ್ಜರ್ಲೆಂಡ್‌ಗೆ ಪ್ರಯಾಣಿಸಲು ವೀಸಾ ಅಗತ್ಯವಿದೆ. ಇದಕ್ಕಾಗಿ ಅನುಮತಿಸಲಾದ ಗರಿಷ್ಠ ವಾಸ್ತವ್ಯವು 90 ದಿನಗಳವರೆಗೆ ಇರುತ್ತದೆ.
ಭಾರತೀಯ ನಾಗರಿಕರಿಗೆ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ವೀಸಾ ಆನ್ ಅರೈವಲ್ ಇದೆಯೇ?
ಇಲ್ಲ, ಭಾರತೀಯ ನಾಗರಿಕರಿಗೆ ಸ್ವಿಟ್ಜರ್ಲೆಂಡ್‌ನಲ್ಲಿ ಆಗಮಿಸಿದಾಗ ಯಾವುದೇ ವೀಸಾ ಆನ್ ಅರೈವಲ್ ಇರುವುದಿಲ್ಲ. ಎಲ್ಲಾ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಸ್ವಿಟ್ಜರ್ಲೆಂಡ್ ಸೇರಿದಂತೆ ಎಲ್ಲಾ ಯುರೋಪಿಯನ್ ರಾಷ್ಟ್ರಗಳಿಗೆ ಪ್ರಯಾಣಿಸಲು ಪ್ರೀ-ಅಪ್ರುವಲ್ ಇರುವ ವೀಸಾವನ್ನು ಹೊಂದಿರಬೇಕು.
ಭಾರತೀಯ ನಾಗರಿಕರಿಗೆ ಸ್ವಿಟ್ಜರ್ಲೆಂಡ್ ಟೂರಿಸ್ಟ್ ವೀಸಾ ರಿಕ್ವೈರ್‌ಮೆಂಟ್ಸ್
ನೀವು ಶೀಘ್ರದಲ್ಲೇ ಸ್ವಿಟ್ಜರ್ಲೆಂಡ್‌ಗೆ ಹಾಲಿಡೇ ಪ್ಲಾನಿಂಗ್ ಮಾಡುತ್ತಿದ್ದರೆ, ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಸಿದ್ಧವಾಗಿಡಿ:
ಸ್ವಿಟ್ಜರ್ಲೆಂಡ್‌ಗೆ ಆಗಮಿಸಿದ ದಿನಾಂಕದಿಂದ ಕನಿಷ್ಠ 6 ತಿಂಗಳವರೆಗೆ ಅರ್ಹತೆಯನ್ನು ಹೊಂದಿರಬೇಕಾದ ಒರಿಜಿನಲ್ ಭಾರತೀಯ ಪಾಸ್‌ಪೋರ್ಟ್ 10 ವರ್ಷಗಳಿಗಿಂತ ಹೆಚ್ಚು ಹಳೆಯದಾಗಿರಬಾರದು.
ಸರಿಯಾಗಿ ಭಾರ್ತಿ ಮಾಡಲಾದ, ವೀಸಾ ಅಪ್ಲಿಕೇಶನ್ ಫಾರ್ಮ್.
ಮ್ಯಾಟ್ ಫಿನಿಶ್ ಮತ್ತು ಬಿಳಿ ಹಿನ್ನೆಲೆಯೊಂದಿಗೆ 35X45 ಮಿಮೀ ಆಯಾಮದ ಎರಡು ಫೋಟೋಗಳು.
ಪ್ರಯಾಣದ ವಿವರಗಳನ್ನು ಹೊಂದಿರುವ ಒಂದು ಕವರ್ ಲೆಟರ್.
ನಿಮ್ಮ ಸ್ವಿಟ್ಜರ್ಲೆಂಡ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯ ಪ್ರತಿ.
ಸ್ವಿಟ್ಜರ್ಲೆಂಡ್‌ಗೆ ಹೋಗಲು ಮತ್ತು ಅಲ್ಲಿಂದ ಹೊರಡಲು ವಿಮಾನ ಟಿಕೆಟ್‌ಗಳು.
ನಿಮ್ಮ ಸ್ವಿಟ್ಜರ್ಲೆಂಡ್ ಟ್ರಿಪ್ ನಲ್ಲಿ ನೋಡಲು ಬಯಸುವ ಸ್ಥಳಗಳ ವಿವರ.
ಸ್ವಿಟ್ಜರ್ಲೆಂಡ್‌ನಲ್ಲಿ ವಸತಿ/ಹೋಟೆಲ್ ಅಥವಾ Airbnb ಬುಕಿಂಗ್ ಪ್ರೂಫ್.
ಕಳೆದ 3 ವರ್ಷಗಳ ಇನ್ಕಮ್ ಟ್ಯಾಕ್ಸ್ ರಿಟರ್ನ್ ಗಳು.
ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್.
ಪಾವತಿಸಿದ ಸ್ವಿಸ್ ವೀಸಾ ಶುಲ್ಕದ ಪ್ರೂಫ್.
ಕಳೆದ 3 ತಿಂಗಳ ಸ್ಯಾಲರಿ ಸ್ಲಿಪ್ ಗಳು.
ಭಾರತದಿಂದ ಸ್ವಿಟ್ಜರ್ಲೆಂಡ್ ವೀಸಾ ಶುಲ್ಕ
ವೀಸಾ ವಿಧ | ರಾಯಭಾರ ಶುಲ್ಕ (ಯು.ಎಸ್.ಡಿ ಯಲ್ಲಿ) |
---|---|
ವಯಸ್ಕರಿಗೆ ಸಿಂಗಲ್ ಎಂಟ್ರಿ ವೀಸಾ | 79.91 |
ಮಗುವಿಗೆ ಸಿಂಗಲ್ ಎಂಟ್ರಿ ವೀಸಾ (6-12 ವರ್ಷಗಳು) | 39.96 |
ಮಗುವಿಗೆ ಸಿಂಗಲ್ ಎಂಟ್ರಿ ವೀಸಾ (0-6 ವರ್ಷಗಳು) | 0 |
ಶುಲ್ಕ ವಿಧ | ಭಾರತೀಯ ರೂಪಾಯಿಗಳಲ್ಲಿ ಶುಲ್ಕ |
---|---|
ಸರ್ವೀಸ್ ಶುಲ್ಕ | 22.98 |
ಕನ್ವೀನಿಯನ್ಸ್(ಅನುಕೂಲಕರ) ಶುಲ್ಕ | 1.84 |
ಕೊರಿಯರ್ | 8.48 |
ಎಸ್ಎಂಎಸ್ | 4.24 |
ಕೊರಿಯರ್ ಅಶೂರೆನ್ಸ್(ಖಾತರಿ) | 12.72 |
ಫಾರ್ಮ್ ಭರ್ತಿ | 31.97 |
ಪ್ರೀಮಿಯಂ ಲೌಂಜ್ | 37.13 |
ಪ್ರೈಮ್ ಟೈಮ್ ಅಪಾಯಿಂಟ್ಮೆಂಟ್ | 42.42 |
ಸ್ವಿಸ್ ವೀಸಾದ ವ್ಯಾಲಿಡಿಟಿ 3 ತಿಂಗಳವರೆಗೆ ಇರುತ್ತದೆ. ಪ್ರತಿ ವಯಸ್ಸಿನ ಗುಂಪಿನ ಅಡಿಯಲ್ಲಿ, ಹೆಚ್ಚುವರಿ ಸರ್ವೀಸ್ ಶುಲ್ಕ ಯು.ಸ್.ಡಿ 86.05 ಮತ್ತು ಜಿಎಸ್‌ಟಿಐಎನ್ ಯು.ಸ್.ಡಿ 15.49 ವಿಧಿಸಲಾಗುತ್ತದೆ.
ಸ್ವಿಟ್ಜರ್ಲೆಂಡ್ ಟೂರಿಸ್ಟ್ ವೀಸಾಗೆ ಅರ್ಜಿ ಸಲ್ಲಿಸುವುದು ಹೇಗೆ?
ಸರಿಯಾದ ವೀಸಾ ವಿಧವನ್ನು ಆಯ್ಕೆಮಾಡಿ.
ಸ್ವಿಸ್ ವೀಸಾಕ್ಕಾಗಿ ವೈಯಕ್ತಿಕವಾಗಿ ಅಥವಾ ಸ್ವಿಟ್ಜರ್ಲೆಂಡ್ ವೀಸಾ ಅಪ್ಲಿಕೇಶನ್ ಕೇಂದ್ರ, ನವದೆಹಲಿಯಲ್ಲಿ ಟ್ರಾವೆಲ್ ಏಜೆಂಟ್ ಮೂಲಕ ಅರ್ಜಿ ಸಲ್ಲಿಸಿ. ಅವರು ಪೋಸ್ಟ್ ಅಥವಾ ಕೊರಿಯರ್ ಮೂಲಕ ಯಾವುದೇ ವಿನಂತಿಯನ್ನು ಸ್ವೀಕರಿಸುವುದಿಲ್ಲ. ನೀವು ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಬೇಕಾಗುತ್ತದೆ.
ವೀಸಾ ಅಪ್ಲಿಕೇಶನ್ ಕೇಂದ್ರದಲ್ಲಿ ಅಪಾಯಿಂಟ್ಮೆಂಟ್ ಅನ್ನು ನಿಗದಿಪಡಿಸಿ.
ನಿಮ್ಮ ಅಪ್ಲಿಕೇಶನ್‌ನಲ್ಲಿ ನೀವು ಸರಿಯಾದ ವೀಸಾ ಕೆಟಗರಿ ಅನ್ನು ಆರಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
ನಿಮ್ಮ ಇಂಟರ್ವ್ಯೂ ದಿನಾಂಕದಂದು ರಾಯಭಾರ ಕಚೇರಿಗೆ ಭೇಟಿ ನೀಡಿ. ಶುಲ್ಕವನ್ನು ಪಾವತಿಸಿ ಮತ್ತು ಆ ಸ್ಟ್ಯಾಂಪ್‌ಗಾಗಿ ಕಾಯಿರಿ
ಸ್ವಿಟ್ಜರ್ಲೆಂಡ್ ಟೂರಿಸ್ಟ್ ವೀಸಾ ಪ್ರೊಸೆಸಿಂಗ್ ಸಮಯ
ನಿಮ್ಮ ವೀಸಾ ಪ್ರೊಸೆಸಿಂಗ್ ಕನಿಷ್ಠ 15 ಕೆಲಸದ ದಿನಗಳನ್ನು ತೆಗೆದುಕೊಳ್ಳುತ್ತದೆ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ, ಇದು ಹೆಚ್ಚು ಸಮಯ ತೆಗೆದುಕೊಳ್ಳಬಹುದು, 30 ದಿನಗಳವರೆಗೂ ಕೂಡಾ. ಆದ್ದರಿಂದ, ಸಮಯಕ್ಕೆ ಮುಂಚಿತವಾಗಿಯೇ ಉತ್ತಮವಾಗಿ ಪ್ಲಾನ್ ಮಾಡಿ.
ನಾನು ಸ್ವಿಟ್ಜರ್ಲೆಂಡ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಬೇಕೇ?
ಸ್ವಿಟ್ಜರ್ಲೆಂಡ್‌ನಲ್ಲಿನ ಪ್ರವಾಸಿಗರ ಸಾಮಾನ್ಯ ದೂರುಗಳಲ್ಲಿ ಒಂದೆಂದರೆ ಅಲ್ಲಿನ ಅಧಿಕವಾಗಿರುವ ಜೀವನ ನಿರ್ವಹಣೆಯ ಒಟ್ಟಾರೆ ವೆಚ್ಚ. ಇದು ಬಾಟಲ್ ನೀರು, ಭೋಜನ ಮತ್ತು ಹೋಟೆಲ್‌ಗಳಂತಹ ದೈನಂದಿನ ವಸ್ತುಗಳ ವೆಚ್ಚವನ್ನು ಒಳಗೊಂಡಿರುತ್ತದೆ. ಹಾಗಾದರೆ ಹೆಲ್ತ್‌ಕೇರ್ ಮತ್ತು ಕಾನೂನು ಪ್ರಕ್ರಿಯೆಗಳಂತಹ ವಿಷಯಗಳ ಬೆಲೆ ಏನಾಗಿರಬಹುದು ಎಂಬುದನ್ನು ನೀವು ಊಹಿಸಬಹುದಷ್ಟೇ! ನಿಖರವಾಗಿ ಇಂತಹ ಸಂದರ್ಭಗಳಲ್ಲಿ ಟ್ರಾವೆಲ್ ಇನ್ಶೂರೆನ್ಸ್ ಸಹಾಯಕ್ಕೆ ಬರುತ್ತದೆ. ಸ್ವಿಟ್ಜರ್‌ಲ್ಯಾಂಡ್‌ಗಾಗಿ ಟ್ರಾವೆಲ್ ಇನ್ಶೂರೆನ್ಸ್ ನಿಮ್ಮ ಯಾವುದೇ ಪ್ಲಾನಿಂಗ್ ಏರುಪೆರಾಗದಿರುವುದನ್ನು ಖಚಿತಪಡಿಸುತ್ತದೆ ಏಕೆಂದರೆ ಇದು ಎಲ್ಲಾ ಅನಿರೀಕ್ಷಿತ ಸಂದರ್ಭಗಳಲ್ಲಿ ನಿಮಗೆ ಕವರ್ ನೀಡುತ್ತದೆ. ಇದು ಇವುಗಳನ್ನು ಒಳಗೊಂಡಿರುತ್ತದೆ, ಆದರೆ ಇವುಗಳಿಗೇ ಸೀಮಿತವಾಗಿರುವುದಿಲ್ಲ: