ಭಾರತದಿಂದ ಜರ್ಮನಿ ವೀಸಾ
ಭಾರತದಿಂದ ಜರ್ಮನಿ ಟೂರಿಸ್ಟ್ ವೀಸಾ ಬಗ್ಗೆ ಸಂಪೂರ್ಣ ಮಾಹಿತಿ
ಜರ್ಮನಿಗೆ ಪ್ರಯಾಣಿಸಲು ಬಹುಶಃ ಒಂದಕ್ಕಿಂತ ಹೆಚ್ಚು ಕಾರಣಗಳಿವೆ. ಅದರ ರೋಮಾಂಚಕ ಮತ್ತು ಕಲಾತ್ಮಕ ನಗರಗಳಿಂದ ಹಿಡಿದು ಅದರ ವಿಲಕ್ಷಣ ಮತ್ತು ಆಫ್‌ಬೀಟ್ ಗ್ರಾಮಾಂತರ ಪ್ರದೇಶದವರೆಗೆ, ನಿಮ್ಮ ಮುಂದಿನ ಪ್ರಯಾಣವನ್ನು ಮ್ಯಾಪ್ ಮಾಡಲು ಜರ್ಮನಿ ಒಂದು ಸುಂದರವಾದ ದೇಶವಾಗಿದೆ. ಅಕ್ಟೋಬರ್‌ಫೆಸ್ಟ್ ಮತ್ತು ಬರ್ಲಿನ್ ಫಿಲ್ಮ್ ಫೆಸ್ಟಿವಲ್‌ನಂತಹ ಈವೆಂಟ್‌ಗಳಿಗೆ ನೆಲೆಯಾಗಿದೆ, ಇದು ಎಲ್ಲಾ ಕಲೆಗಳ ಫೇಮಸ್ ಹಬ್ ಕೂಡ ಆಗಿದೆ. ಆದರೆ, ನೀವು ಮುಂದುವರಿಯುವ ಮೊದಲು ಮತ್ತು ನಿಮ್ಮ ಪ್ರಯಾಣದ ಕನಸುಗಳನ್ನು ಚಿತ್ರಿಸಲು ಪ್ರಾರಂಭಿಸುವ ಮೊದಲು- ವೀಸಾಗೆ ಅಪ್ಲೈ ಮಾಡಿ ಮತ್ತು ಆಮೇಲೆ, ಆಕಾಶವು ನಿಮ್ಮ ಮಿತಿಯಲ್ಲೇ ಇರುತ್ತದೆ.
ಭಾರತೀಯರಿಗೆ ಜರ್ಮನಿ ವೀಸಾ ಅವಶ್ಯವೇ?
ಹೌದು, ಭಾರತೀಯ ಪಾಸ್‌ಪೋರ್ಟ್ ಹೋಲ್ಡರ್‌ಗಳಿಗೆ ಜರ್ಮನಿಗೆ ಷೆಂಗೆನ್ ವೀಸಾ ಅಗತ್ಯವಿದೆ. ಇದರ ಜೊತೆಗೆ, ನೀವು ಷೆಂಗೆನ್ ಪ್ರದೇಶದಲ್ಲಿ 25 ಇತರ ದೇಶಗಳಿಗೂ ಭೇಟಿ ನೀಡಬಹುದು. ವೀಸಾ ಪಡೆದ ನಂತರ, ಭಾರತೀಯ ಪ್ರಜೆಗಳಿಗೆ ಗರಿಷ್ಠ 90 ದಿನಗಳವರೆಗೆ ಮಾತ್ರ ಉಳಿಯಲು ಅವಕಾಶವಿದೆ. ಆದಾಗ್ಯೂ, ನೀವು ಜರ್ಮನಿಗೆ ಆಗಮಿಸಿದ ದಿನಾಂಕದಿಂದ ಕನಿಷ್ಠ 3-ತಿಂಗಳವರೆಗೆ ನಿಮ್ಮ ಪಾಸ್‌ಪೋರ್ಟ್ ವ್ಯಾಲಿಡ್ ಆಗಿರಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಭಾರತೀಯ ನಾಗರಿಕರಿಗೆ ಜರ್ಮನಿಯಲ್ಲಿ ವೀಸಾ ಆನ್ ಅರೈವಲ್ ಇದೆಯೇ?
ಇಲ್ಲ, ಜರ್ಮನಿ ಮತ್ತು ಇತರ ಯುರೋಪಿಯನ್ ರಾಷ್ಟ್ರಗಳು ವೀಸಾ ಆನ್ ಅರೈವಲ್ ಒದಗಿಸುವುದಿಲ್ಲ. ಜರ್ಮನಿಗೆ ಪ್ರಯಾಣಿಸಲು ಬಯಸುವ ಪ್ರವಾಸಿಗರಾದ ಭಾರತೀಯ ಪ್ರಜೆಗಳಿಗೆ ಪ್ರೀ-ಅಪ್ರೂವ್ಡ್ ವೀಸಾದ ಅಗತ್ಯವಿದೆ.
ಜರ್ಮನಿ ಟೂರಿಸ್ಟ್ ವೀಸಾಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು
ಷೆಂಗೆನ್ ವೀಸಾಗೆ ಅಪ್ಲೈ ಮಾಡುವಾಗ, ನಿಮಗೆ ಈ ಕೆಳಗಿನ ಡಾಕ್ಯುಮೆಂಟ್‌ಗಳು ಅವಶ್ಯ:
ಭಾರತೀಯ ನಾಗರಿಕರಿಗೆ ಜರ್ಮನಿ ವೀಸಾ ಶುಲ್ಕ
ವೀಸಾ ವಿಧವನ್ನು ಪರಿಗಣಿಸದೆ ಭಾರತೀಯ ನಾಗರಿಕರಿಗೆ ಜರ್ಮನಿಯ ವೀಸಾ ಶುಲ್ಕ ಅಡಲ್ಟ್‌ಗಳಿಗೆ ಸುಮಾರು ಇಯುಆರ್ 75 ಮತ್ತು ಮಕ್ಕಳಿಗೆ 37.50 ಇಯುಆರ್ ಆಗಿದೆ. ಆದರೆ ಶುಲ್ಕದಿಂದ ವಿನಾಯಿತಿ ಪಡೆದ ಕೆಲವು ಜನರೆಂದರೆ:
ಜರ್ಮನಿ ಟೂರಿಸ್ಟ್ ವೀಸಾಗೆ ಅರ್ಜಿ ಅಪ್ಲೈ ಮಾಡುವುದು ಹೇಗೆ?
ಜರ್ಮನಿ ಟೂರಿಸ್ಟ್ ವೀಸಾಗೆ ಅಪ್ಲೈ ಮಾಡುವ ಪ್ರೊಸೀಜರ್ ಸರಳವಾಗಿದೆ, ಈ ಕೆಳಗಿನಂತಿದೆ:
ವೀಸಾ ಅಪ್ಲಿಕೇಶನ್ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಅದನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
ವೀಸಾ ಅಪ್ಲಿಕೇಶನ್ ಸೆಂಟರ್ ಅಥವಾ ಎಂಬೆಸಿಯಲ್ಲಿ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಿ.
ನಮೂದಿಸಿದ ವೀಸಾ ಶುಲ್ಕವನ್ನು ಪಾವತಿಸಿ.
ಶೆಡ್ಯೂಲ್ ಆದ ದಿನಾಂಕದಂದು ಸಂದರ್ಶನಕ್ಕೆ ಹಾಜರಾಗಿ.
ಅಗತ್ಯವಿರುವ ಎಲ್ಲಾ ಮಾಹಿತಿ ಮತ್ತು ಬಯೋಮೆಟ್ರಿಕ್‌ಗಳನ್ನು ಸಲ್ಲಿಸಿ.
ರೆಪ್ರೆಸೆಂಟೇಟಿವ್‌ಗಳ ಪ್ರತಿಕ್ರಿಯೆಗೆ ನಿರೀಕ್ಷಿಸಿ.
ನಿಮ್ಮ ಪಾಸ್‌ಪೋರ್ಟ್ ಅನ್ನು ಸಂಗ್ರಹಿಸಿ ಮತ್ತು ವೀಸಾದ ಅಪ್ರೂವಲ್/ತಿರಸ್ಕಾರವನ್ನು ಸ್ವೀಕರಿಸಿ.
ಜರ್ಮನಿ ಟೂರಿಸ್ಟ್ ವೀಸಾ ಪ್ರೊಸೆಸಿಂಗ್ ಸಮಯ
ಜರ್ಮನಿ ಟೂರಿಸ್ಟ್ ವೀಸಾ ಪ್ರೊಸೆಸಿಂಗ್ ಸುಮಾರು 15 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ, ಇದನ್ನು 30 ದಿನಗಳವರೆಗೆ ವಿಸ್ತರಿಸಬಹುದು.
ನಾನು ಜರ್ಮನಿಗೆ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಬೇಕೇ?
ಷೆಂಗೆನ್ ವೀಸಾ ಅವಶ್ಯಕತೆಗಳ ಪ್ರಕಾರ, ಎಲ್ಲಾ ಭಾರತೀಯ ಪ್ರಯಾಣಿಕರಿಗೆ ಜರ್ಮನಿಗೆ ಟ್ರಾವೆಲ್ ಇನ್ಶೂರೆನ್ಸ್ ಕಡ್ಡಾಯವಾಗಿದೆ. ಆದಾಗ್ಯೂ, ಇದು ಅದನ್ನು ಪಡೆಯುವುದಕ್ಕಾಗಿ ನಿಮ್ಮ ನಿಜವಾದ ಕಾರಣವಾಗಿರಬೇಕಾಗಿಲ್ಲ! ಎಲ್ಲದಕ್ಕಿಂತ ಹೆಚ್ಚಾಗಿ, ನಾವು ಎಷ್ಟೇ ಪ್ಲಾನ್ ಮಾಡಿದರೂ - ಕೆಲವು ವಿಷಯಗಳು ಅದರಷ್ಟಕ್ಕೆ ನಡೆಯುತ್ತವೆ. ಜರ್ಮನಿಯ ಟ್ರಾವೆಲ್ ಇನ್ಶೂರೆನ್ಸ್ ಅಂತಹ ಸಂದರ್ಭಗಳಲ್ಲಿ, ಎಲ್ಲಾ ಅನಿರೀಕ್ಷಿತ ಸಂದರ್ಭಗಳಲ್ಲಿ ನಿಮ್ಮನ್ನು ಕಾಪಾಡುವ ನಿಮ್ಮ ರಕ್ಷಕನಾಗಿರುತ್ತದೆ. ಈ ಸಂದರ್ಭಗಳು ವಿಮಾನ ವಿಳಂಬದಿಂದ ಹಿಡಿದು ಮೆಡಿಕಲ್ ತುರ್ತುಸ್ಥಿತಿಗಳು ಅಥವಾ ಟ್ರಿಪ್ ಕ್ಯಾನ್ಸಲೇಷನ್‌ನಂತಹ ದೊಡ್ಡ ಆಘಾತಗಳವರೆಗೆ ಯಾವುದಾದರೂ ಆಗಿರಬಹುದು.
ನೀವು ಎದುರಿಸಬಹುದಾದ ಕೆಲವು ಸಂದರ್ಭಗಳು ಮತ್ತು ಆ ಕಾರಣದಿಂದ ಉಂಟಾಗುವ ಯಾವುದೇ ನಷ್ಟದಿಂದ ನಿಮ್ಮನ್ನು ಟ್ರಾವೆಲ್ ಇನ್ಶೂರೆನ್ಸ್ ಹೇಗೆ ರಕ್ಷಿಸುತ್ತದೆ ಎಂಬುದು ಈ ಕೆಳಗಿನಂತಿವೆ:
ಭಾರತದಿಂದ ಜರ್ಮನಿ ಟೂರಿಸ್ಟ್ ವೀಸಾ ಕುರಿತು ಪದೇಪದೇ ಕೇಳಲಾದ ಪ್ರಶ್ನೆಗಳು
ವೀಸಾ ಅಪ್ಲಿಕೇಶನ್ ಪ್ರೊಸೆಸ್ ಸಮಯದಲ್ಲಿ ಟ್ರಾವೆಲ್ ಇನ್ಶೂರೆನ್ಸ್‌ಗೆ ಅಪ್ಲೈ ಮಾಡುವುದು ಅವಶ್ಯವೇ?
ನಿಮ್ಮ ವೀಸಾ ಅಪ್ಲಿಕೇಶನ್ ಮತ್ತು ಸ್ವೀಕಾರ ಪ್ರೊಸೆಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಟ್ರಾವೆಲ್ ಇನ್ಶೂರೆನ್ಸ್ ಹೊಂದುವುದು ಕಾನೂನಿನ ಅಡಿಯಲ್ಲಿ ಕಡ್ಡಾಯವಾಗಿದೆ. ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹೊಂದಿಲ್ಲದಿದ್ದರೆ ವೀಸಾವನ್ನು ತಿರಸ್ಕರಿಸಬಹುದು.
ಅಪ್ಲಿಕೇಶನ್ ಪ್ರೊಸೆಸ್ ಸಮಯದಲ್ಲಿ ನಾನು ನನ್ನ ಹಣಕಾಸಿನ ಸ್ಥಿತಿಯನ್ನು ನಮೂದಿಸಬೇಕೇ?
ಹೌದು, ಕಳೆದ 3 ತಿಂಗಳಿನ ನಿಮ್ಮ ಬ್ಯಾಂಕ್ ಖಾತೆ ಸ್ಟೇಟ್‌ಮೆಂಟ್‌ಗಳನ್ನು ನೀವು ಸಲ್ಲಿಸಬೇಕು. ಅಧಿಕಾರಿಗಳು ಅದನ್ನು ನೋಡುತ್ತಾರೆ ಮತ್ತು ನೀವು ವೀಸಾಗೆ ಅರ್ಹತೆ ಹೊಂದಿದ್ದೀರಾ ಎಂಬುದನ್ನು ನಿರ್ಧರಿಸುತ್ತಾರೆ.
ಭಾರತೀಯ ವಿಸಿಟರ್‌ಗಳು ಜರ್ಮನಿಯಲ್ಲಿ ವೀಸಾ ಆನ್ ಅರೈವಲ್ ಪಡೆಯಬಹುದೇ?
ಇಲ್ಲ. ಜರ್ಮನಿಯು ಇತರ ಬಹುತೇಕ ಎಲ್ಲಾ ಯುರೋಪಿಯನ್ ರಾಷ್ಟ್ರಗಳಂತೆ, ವೀಸಾ ಆನ್ ಅರೈವಲ್ ಯಾವುದೇ ಯೋಜನೆಗಳನ್ನು ಹೊಂದಿಲ್ಲ. ನೀವು ಪ್ರಾದೇಶಿಕ ಜರ್ಮನ್ ಕಾನ್ಸುಲೇಟ್‌ನಲ್ಲಿ ಮುಂಚಿತವಾಗಿ ಅಪ್ಲೈ ಮಾಡಬೇಕು.
ನಾನು ಷೆಂಗೆನ್ ವೀಸಾದಲ್ಲಿ ಜರ್ಮನಿಗೆ ಪ್ರಯಾಣಿಸಬಹುದೇ?
ಹೌದು, ಜರ್ಮನಿ ಷೆಂಗೆನ್ ಪ್ರದೇಶದ ಭಾಗವಾಗಿದೆ. ನೀವು ಷೆಂಗೆನ್ ವೀಸಾದಲ್ಲಿ ಜರ್ಮನಿಗೆ ಪ್ರಯಾಣಿಸಬಹುದು. ಅಪ್ಲಿಕೇಶನ್ ಪ್ರೊಸೆಸ್ ಒಂದೇ ಆಗಿರುತ್ತದೆ.
ನನ್ನ ವೀಸಾದ ಅಪ್ಲಿಕೇಶನ್ ಮತ್ತು ಪ್ರೊಸೆಸ್‌ಗೆ ಶುಲ್ಕಗಳು ಎಷ್ಟೆಂದು ನನಗೆ ತಿಳಿಯುವುದು ಹೇಗೆ?
ಜರ್ಮನಿಯ ಪ್ರವಾಸೋದ್ಯಮ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡುವ ಮೂಲಕ ನೀವು ಅವುಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ, ದರಗಳ ಬದಲಾವಣೆಯಾದಾಗ, ಬದಲಾವಣೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರಮುಖ ಪಬ್ಲಿಕೇಷನ್‌ಗಳಲ್ಲಿ ಜಾಹೀರಾತುಗಳು ಪ್ರಕಟಗೊಳ್ಳುತ್ತವೆ.