ಭಾರತದಿಂದ ಫ್ರಾನ್ಸ್ ಟೂರಿಸ್ಟ್ ವೀಸಾ
ಭಾರತದಿಂದ ಫ್ರಾನ್ಸ್ ಟೂರಿಸ್ಟ್ ವೀಸಾ ಕುರಿತ ಸಂಪೂರ್ಣ ಮಾಹಿತಿ
ಫ್ರಾನ್ಸ್‌ಗೆ ಭೇಟಿ ನೀಡುವ ವಿಚಾರ ಬಂದಾಗ, ಪ್ಯಾರಿಸ್ ಪ್ರತಿ ಟ್ರಾವೆಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುತ್ತದೆ. ಪ್ಯಾರಿಸ್ ಐತಿಹಾಸಿಕ ದೃಶ್ಯಗಳು, ಆರ್ಕಿಟೆಕ್ಚರ್, ಕಲೆ (ಅದರಲ್ಲಿ ಬಹಳಷ್ಟಿದೆ!) ಮತ್ತು ಕೆಲವು ಅಸಾಧಾರಣ ಪಾಕಪದ್ಧತಿಗಳಿಂದ ತುಂಬಿದೆ. ಅನ್ವೇಷಣೆಗೆ ನಿಮಗೆ ಒಂದು ದಿನ, ಒಂದು ವಾರ ಅಥವಾ ಒಂದು ತಿಂಗಳು ಇದ್ದರೂ, ಪ್ಯಾರಿಸ್ ತನ್ನದೇ ರೀತಿಯಲ್ಲಿ ಒಂದು ಸುಂದರ ಅನುಭವವಾಗಿದೆ. ಇದು ಖಚಿತವಾಗಿ ಹೆಡ್‌ಲೈನ್‌ಗಳನ್ನು ಡಾಮಿನೇಟ್ ಮಾಡುತ್ತದೆ, ಆದರೆ ಭೇಟಿ ನೀಡಲು ಯೋಗ್ಯವಾದ ಅನೇಕ ಇತರ ಫ್ರೆಂಚ್ ನಗರಗಳೂ ಇವೆ. ವಸ್ತುಸಂಗ್ರಹಾಲಯಗಳು, ಕೆಫೆಗಳು, ರೈತರ ಮಾರುಕಟ್ಟೆಗಳು, ಸುಂದರವಾದ ಉದ್ಯಾನವನಗಳು ಮತ್ತು ಫ್ರಾನ್ಸ್‌ನ ಆಕರ್ಷಕ ಪುಟ್ಟ ನಗರಗಳು ಒದಗಿಸುವ ಎಲ್ಲದರಲ್ಲೂ ಸುತ್ತಾಡಬಹುದು.
ನಿಮ್ಮ ಬಜ್ ಅನ್ನು ಸಾಯಿಸುವ ಉದ್ದೇಶ ಇಲ್ಲ, ಪ್ರತಿಯೊಬ್ಬರೂ ಯಾವುದಾದರೊಂದು ಸಮಯದಲ್ಲಿ ಫ್ರಾನ್ಸ್‌ಗೆ ಪ್ರಯಾಣಿಸಲು ಬಯಸುತ್ತಾರೆ, ಅದಕ್ಕಾಗಿ ವೀಸಾ ಪಡೆಯುವುದು ಯಾವಾಗಲೂ ಸುಲಭವಾಗಿರುವುದಿಲ್ಲ. ಮೊದಲನೆಯದಾಗಿ, ನಿಮ್ಮ ಪ್ರಯಾಣದ ಸಮಯಕ್ಕೆ ಕನಿಷ್ಠ 60 ದಿನಗಳ ಮೊದಲು ನೀವು ವೀಸಾಗೆ ಅಪ್ಲೈ ಮಾಡಬೇಕು ಏಕೆಂದರೆ ಪ್ರೊಸೆಸ್, ವೆರಿಫಿಕೇಷನ್ ಸಾಕಷ್ಟು ಸಮಯವನ್ನು ತೆಗೆದುಕೊಳ್ಳಬಹುದು. ಆದ್ದರಿಂದ, ಮುಂದಿನ ಪ್ಲಾನ್ ಮಾಡಿ ಮತ್ತು ವೀಸಾ ಮತ್ತು ಉತ್ತಮ ಟ್ರಾವೆಲ್ ಇನ್ಶೂರೆನ್ಸ್ ಎರಡನ್ನೂ ಸುರಕ್ಷಿತಗೊಳಿಸಿ, ಅದು ನಿಮ್ಮ ಮುಂದಿನ ಪ್ರಯಾಣಕ್ಕೆ ಬಲವಾದ ಆಧಾರವನ್ನು ಒದಗಿಸುತ್ತದೆ.
ಭಾರತೀಯರಿಗೆ ಫ್ರಾನ್ಸ್‌ಗೆ ವೀಸಾ ಅವಶ್ಯವೇ?
ಹೌದು, ಫ್ರಾನ್ಸ್‌ಗೆ ಭೇಟಿ ನೀಡಲು ಭಾರತೀಯರಿಗೆ ಷೆಂಗೆನ್ ವೀಸಾ ಅಗತ್ಯವಿದೆ.
ಭಾರತೀಯ ನಾಗರಿಕರಿಗೆ ಫ್ರಾನ್ಸ್‌ನಲ್ಲಿ ವೀಸಾ ಆನ್ ಅರೈವಲ್ ಇದೆಯೇ?
ಇಲ್ಲ, ಭಾರತೀಯ ನಾಗರಿಕರಿಗೆ ಫ್ರಾನ್ಸ್‌ನಲ್ಲಿ ವೀಸಾ ಆನ್ ಅರೈವಲ್ ಒದಗಿಸುವುದಿಲ್ಲ.
ಭಾರತೀಯ ನಾಗರಿಕರಿಗೆ ಫ್ರಾನ್ಸ್ ವೀಸಾ ಶುಲ್ಕ
ಶಾರ್ಟ್-ಟರ್ಮ್ ವೀಸಾಗೆ ಷೆಂಗೆನ್ ವೀಸಾ ಶುಲ್ಕ 93 ಯುರೋಗಳು (ಅಂದಾಜು ರೂ.6,600)
ಭಾರತದಿಂದ ಫ್ರಾನ್ಸ್ ಟೂರಿಸ್ಟ್ ವೀಸಾಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು
ನಿಮ್ಮ ಪ್ರಸ್ತಾವಿತ ಪ್ರವಾಸದ ನಂತರ ಕನಿಷ್ಠ ಎರಡು ಖಾಲಿ ಪುಟಗಳನ್ನು ಹೊಂದಿರುವ ಮತ್ತು ಕನಿಷ್ಠ 3 ತಿಂಗಳವರೆಗೆ ವ್ಯಾಲಿಡ್ ಆಗಿರುವ ಪಾಸ್‌ಪೋರ್ಟ್. ನೀವು ಹಿಂದೆಯೇ ಪಾಸ್‌ಪೋರ್ಟ್ ಹೊಂದಿದ್ದು, ಅದು ಎಕ್ಸ್‌ಪೈರ್ ಆಗಿದ್ದರೆ ಅಥವಾ ಕ್ಯಾನ್ಸಲ್ ಆಗಿದ್ದರೆ, ಅದನ್ನು ಸಹ ಒಯ್ಯುವ ಅಗತ್ಯವಿದೆ.
2 ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಬಣ್ಣದ ಫೋಟೋಗ್ರಾಫ್‌ಗಳು (ಕೆಳಗೆ ನೀಡಲಾದ ಫೋಟೋ ಸ್ಪೆಸಿಫಿಕೇಷನ್‌ಗಳನ್ನು ನೋಡಿ)
ಕವರ್ ಲೆಟರ್
ಸರಿಯಾಗಿ ಭರ್ತಿ ಮಾಡಲಾದ ಅಪ್ಲಿಕೇಶನ್ ಫಾರ್ಮ್
ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿ ಕಾಪಿ
ವಿಮಾನ ರಿಸರ್ವೇಷನ್‌ಗಳ ಕಾಪಿ
ವಸತಿ ಪುರಾವೆ
ಅಗತ್ಯವಾಗಿರುವ ಆರ್ಥಿಕ ಪುರಾವೆ
ಫೋಟೋಗ್ರಾಫ್ ಸ್ಪೆಸಿಫಿಕೇಷನ್‌ಗಳು:
ಪ್ಲೈನ್ ಆದ, ನ್ಯೂಟ್ರಲ್ ಆದ ಬ್ಯಾಕ್‌ಗ್ರೌಂಡ್ ಅನ್ನು ಫೋಟೋಗ್ರಾಫ್ ಹೊಂದಿರಬೇಕು
ನಿಮ್ಮ ವೀಸಾ ಅಪಾಯಿಂಟ್‌ಮೆಂಟ್‌ನ ಹಿಂದಿನ 6 ತಿಂಗಳೊಳಗೆ ಫೋಟೋಗ್ರಾಫ್ ತೆಗೆದುಕೊಂಡಿರಬೇಕು
ಇದು 35-40 ಎಂಎಂ ಅಗಲವಾಗಿರಬೇಕು ಮತ್ತು ನಿಮ್ಮ ಮುಖವು ಫ್ರೇಮ್‌ನಲ್ಲಿ 70-80% ಕಾಣಿಸಬೇಕು
ಇದನ್ನು ಉತ್ತಮ ಗುಣಮಟ್ಟದ ಕಾಗದದ ಮೇಲೆ ಮುದ್ರಿಸಬೇಕು ಮತ್ತು ಅದರ ಮೇಲೆ ಯಾವುದೇ ಸುಕ್ಕು ಅಥವಾ ಗುರುತುಗಳು ಇರಬಾರದು.
ಎರಡೂ ಕಿವಿಗಳು ಮತ್ತು ಹಣೆಯಿಂದ ಗಲ್ಲದವರೆಗಿನ ಸಂಪೂರ್ಣ ಮುಖವು ಸ್ಪಷ್ಟವಾಗಿ ಗೋಚರಿಸುವಂತಿರಬೇಕು
ನೀವು ಕನ್ನಡಕವನ್ನು ಧರಿಸುವವರಾದರೆ, ಟಿಂಟ್ ಇರದ ಮತ್ತು ನಿಮ್ಮ ಕಣ್ಣುಗಳನ್ನು ಕವರ್ ಮಾಡದ ಲೈಟ್ ಫ್ರೇಮ್ ಅನ್ನು ಆರಿಸಿಕೊಳ್ಳಿ
ಧಾರ್ಮಿಕ ಕಾರಣಗಳಿಗಾಗಿ ಧರಿಸದ ಹೊರತು ಹೆಡ್‌ಗೇರ್‌ಗಳಿಗೆ ಅನುಮತಿ ಇಲ್ಲ. ಅಂತಹ ಸಂದರ್ಭಗಳಲ್ಲಿ, ಅದು ನಿಮ್ಮ ಮುಖದ ಮೇಲೆ ಯಾವುದೇ ನೆರಳುಗಳನ್ನು ಉಂಟುಮಾಡಬಾರದು ಮತ್ತು ನಿಮ್ಮ ಹಣೆ ಅಥವಾ ನಿಮ್ಮ ಗಲ್ಲವನ್ನು ಕವರ್ ಮಾಡಬಾರದು
ಮಕ್ಕಳ ಫೋಟೋಗ್ರಾಫ್‌ಗಳ ಸಂದರ್ಭದಲ್ಲಿ, ಫ್ರೇಮ್‌ನಲ್ಲಿ ಬೇರೆ ಯಾರೂ ಗೋಚರಿಸಬಾರದು
ಭಾರತದಿಂದ ಫ್ರಾನ್ಸ್ ಟೂರಿಸ್ಟ್ ವೀಸಾಗೆ ಅಪ್ಲೈ ಮಾಡುವುದು ಹೇಗೆ?
ಭಾರತದಲ್ಲಿನ ಫ್ರೆಂಚ್ ಎಂಬೆಸಿಯು ತನ್ನ ಸೇವಾ ಪಾಲುದಾರರಾದ ವಿಎಫ್‌ಎಸ್ ಮೂಲಕ ವೀಸಾ ಅಪ್ಲಿಕೇಶನ್ ಅನ್ನು ಸ್ವೀಕರಿಸುತ್ತದೆ. ನಿಮಗೆ ಫ್ರಾನ್ಸ್‌ಗೆ ಷೆಂಗೆನ್ ವೀಸಾ ಅಗತ್ಯವಿರುತ್ತದೆ ಮತ್ತು ಅದನ್ನು ಪಡೆಯುವ ಮೊದಲ ಹಂತವೆಂದರೆ ನೀವು ಅಪ್ಲೈ ಮಾಡಬೇಕಾದ ವೀಸಾ ವಿಧವನ್ನು ಆರಿಸಿಕೊಳ್ಳುವುದು.
1) ಶಾರ್ಟ್-ಸ್ಟೇ ಯೂನಿಫಾರ್ಮ್ ವೀಸಾ - ಇದು ಪ್ರತೀ ಆರು ತಿಂಗಳಿಗೊಮ್ಮೆ ಆಸ್ಟ್ರಿಯಾ, ಬೆಲ್ಜಿಯಂ, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಎಸ್ಟೋನಿಯಾ, ಫಿನ್‌ಲ್ಯಾಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಹಂಗೇರಿ, ಐಸ್‌ಲ್ಯಾಂಡ್, ಇಟಲಿ, ಲಾಟ್ವಿಯಾ, ಲಿಚ್ಟೆನ್‌ಸ್ಟೈನ್, ಲಿಥುವೇನಿಯಾ, ಲಕ್ಸೆಂಬರ್ಗ್, ಮಾಲ್ಟಾ, ನೆದರ್‌ಲ್ಯಾಂಡ್ಸ್, ನಾರ್ವೆ, ಪೋಲೆಂಡ್, ಪೋರ್ಚುಗಲ್, ಸ್ಲೋವಾಕಿಯಾ, ಸ್ಲೊವೇನಿಯಾ, ಸ್ಪೇನ್, ಸ್ವೀಡನ್ ಮತ್ತು ಸ್ವಿಟ್ಜರ್ಲೆಂಡ್‌ಗೆ ಗರಿಷ್ಠ 3 ತಿಂಗಳಿಗೆ ಪ್ರಯಾಣ ಮಾಡಲು ಅನುಮತಿ ನೀಡುತ್ತದೆ.
2) ಶಾರ್ಟ್-ಸ್ಟೇ ವಿತ್ ಲಿಮಿಟೆಡ್ ಟೆರಿಟೋರಿಯಲ್ ವ್ಯಾಲಿಡಿಟಿ - ವೀಸಾ ಸ್ಟಿಕ್ಕರ್‌ನಲ್ಲಿ ಸೂಚಿಸಲಾದ ಸ್ಥಳಗಳಿಗೆ ಮಾತ್ರ ಪ್ರಯಾಣಿಸಲು ಇದು ನಿಮಗೆ ಅನುಮತಿ ನೀಡುತ್ತದೆ.
ನಿಮ್ಮ ವೀಸಾ ವಿಧವನ್ನು ನೀವು ತಿಳಿದುಕೊಂಡ ಬಳಿಕ, ಅಪ್ಲೈ ಮಾಡಲು ಈ ಸುಲಭ ಹಂತಗಳನ್ನು ಅನುಸರಿಸಿ:
- ವಿಎಫ್ಎಸ್ ಗ್ಲೋಬಲ್ ವೆಬ್‌ಸೈಟ್‌ನಿಂದ ಅಪ್ಲಿಕೇಶನ್ ಫಾರ್ಮ್ ಡೌನ್‌ಲೋಡ್ ಮಾಡಿ.
- ಅಗತ್ಯವಿರುವ ಎಲ್ಲಾ ಡಾಕ್ಯುಮೆಂಟ್‌ಗಳೊಂದಿಗೆ ನಿಮ್ಮ ಫಾರ್ಮ್ ಅನ್ನು ಸಲ್ಲಿಸಿ
- ನಿಮ್ಮ ವೀಸಾಗೆ ಅಪ್ಲೈ ಮಾಡಲು ನಿಮ್ಮ ಹತ್ತಿರದ ವಿಎಫ್‌ಎಸ್ ಗ್ಲೋಬಲ್‌ನ ವೀಸಾ ಅಪ್ಲಿಕೇಶನ್ ಸೆಂಟರ್‌ಗೆ ಭೇಟಿ ನೀಡಿ
- ನಿಮ್ಮ ಅಪ್ಲಿಕೇಶನ್ ಅನ್ನು ಟ್ರ್ಯಾಕ್ ಮಾಡಿ
ಫ್ರಾನ್ಸ್ ಟೂರಿಸ್ಟ್ ವೀಸಾ ಪ್ರೊಸೆಸಿಂಗ್ ಸಮಯ
ನಿಮ್ಮ ವೀಸಾ ಅಪ್ಲಿಕೇಶನ್ ಅನ್ನು 15 ಕ್ಯಾಲೆಂಡರ್ ದಿನಗಳಲ್ಲಿ ಪ್ರೊಸೆಸ್ ಮಾಡಲಾಗುವುದು, ಆದರೆ ಕೆಲವು ಸಂದರ್ಭಗಳಲ್ಲಿ 30 ದಿನಗಳವರೆಗೆ ವಿಸ್ತರಿಸಬಹುದು. ಹೆಚ್ಚುವರಿ ಡಾಕ್ಯುಮೆಂಟ್‌ಗಳ ಅಗತ್ಯವಿದ್ದಲ್ಲಿ, ನಿಮ್ಮ ವೀಸಾ ಅಪ್ಲಿಕೇಶನ್ ಅನ್ನು ಗರಿಷ್ಠ 60 ದಿನಗಳ ಒಳಗೆ ನಿರ್ಧರಿಸಲಾಗುತ್ತದೆ.
ನಾನು ಫ್ರಾನ್ಸ್‌ಗೆ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಬೇಕೇ?
ಹೌದು, ಫ್ರಾನ್ಸ್‌ಗೆ ಪ್ರವೇಶಿಸಲು ಟ್ರಾವೆಲ್ ಇನ್ಶೂರೆನ್ಸ್ ಹೊಂದುವುದು ಕಡ್ಡಾಯವಾಗಿದೆ. ಯುರೋಪಿಯನ್ ಕಾನೂನಿನ ಪ್ರಕಾರ ಜೂನ್ 2004 ರಿಂದ ಷೆಂಗೆನ್ ದೇಶಗಳಿಗೆ ವೀಸಾ ಅಪ್ಲಿಕೇಶನ್‌ಗೆ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಕಡ್ಡಾಯಗೊಳಿಸಲಾಗಿದೆ. ಆದ್ದರಿಂದ, ವೀಸಾ ಅಪ್ಲಿಕೇಶನ್ ಸಮಯದಲ್ಲಿ ನೀವು ವ್ಯಾಲಿಡ್ ಆದ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು.
ಇದು ನೀವು ಮನೆಯಿಂದ ದೂರದಲ್ಲಿರುವ ಅಪರಿಚಿತ ಭೂಮಿಯಲ್ಲಿರುವ ಕಾರಣದಿಂದ ನೀವು ವಿಶೇಷವಾಗಿ ದುರ್ಬಲರಾಗಿರು ಸಂದರ್ಭದಲ್ಲಿ ಉಂಟಾಗುವ ಯಾವುದೇ ಅನಿರೀಕ್ಷಿತ ಮೆಡಿಕಲ್ ವೆಚ್ಚಗಳು ಮತ್ತು ಲಗೇಜ್ ಭದ್ರತೆ, ವಿಳಂಬಿತ ಅಥವಾ ಕ್ಯಾನ್ಸಲ್ ಆದ ವಿಮಾನಗಳು, ಕಳ್ಳತನಗಳು ಮತ್ತು ಇತರ ಸನ್ನಿವೇಶಗಳಲ್ಲಿ ಪ್ರಯಾಣ-ಸಂಬಂಧಿತ ತುರ್ತುಸ್ಥಿತಿಗಳ ಅಪಾಯದಿಂದ ನಿಮ್ಮನ್ನು ರಕ್ಷಿಸುತ್ತದೆ.
ಇದರ ಬಗ್ಗೆ ಇನ್ನಷ್ಟು ತಿಳಿಯಿರಿ:
ಜಾಗರೂಕತೆ ಎಂಬುದು ಘೋಷವಾಕ್ಯ ಆಗಿರಲಿ. ಇನ್ಶೂರ್ಡ್ ಆಗಿರಿ ಮತ್ತು ಫ್ರಾನ್ಸ್‌ನಲ್ಲಿ ಶಾಂತಿಯುತ ಮತ್ತು ಆರ್ಥಿಕವಾಗಿ ಸುರಕ್ಷಿತ ಪ್ರವಾಸವನ್ನು ಆನಂದಿಸಿ! :)
ಭಾರತೀಯ ನಾಗರಿಕರಿಗೆ ಫ್ರಾನ್ಸ್ ಟೂರಿಸ್ಟ್ ವೀಸಾ ಕುರಿತು ಪದೇಪದೇ ಕೇಳಲಾದ ಪ್ರಶ್ನೆಗಳು
ಭಾರತದಿಂದ ಪ್ರಯಾಣಿಸುವ ಭಾರತೀಯ ನಾಗರಿಕರಿಗೆ ಫ್ರಾನ್ಸ್ ವೀಸಾ ಆನ್ ಅರೈವಲ್ ನೀಡುತ್ತದೆಯೇ?
ಇಲ್ಲ, ಭಾರತದಿಂದ ಪ್ರಯಾಣಿಸುವವರಿಗೆ ವೀಸಾ ಆನ್ ಅರೈವಲ್ ಇರುವುದಿಲ್ಲ. ಆದಾಗ್ಯೂ, ಷೆಂಗೆನ್ ವೀಸಾದಲ್ಲಿ ಪ್ರಯಾಣಿಸುವವರು ಅಂತಹ ಅವಕಾಶಕ್ಕೆ ಅರ್ಹತೆ ಹೊಂದಿರುತ್ತಾರೆ.
ಫ್ರಾನ್ಸ್‌ಗೆ ಪ್ರಯಾಣಿಸುವಾಗ ನನಗೆ ಕಡ್ಡಾಯ ಟ್ರಾವೆಲ್ ಇನ್ಶೂರೆನ್ಸ್ ಅಗತ್ಯವಿದೆಯೇ?
ಹೌದು. ವೀಸಾ ಪಡೆಯುವ ಮೂಲಭೂತ ಮಾನದಂಡಗಳಲ್ಲಿ ಟ್ರಾವೆಲ್ ಇನ್ಶೂರೆನ್ಸ್ ಕೂಡ ಒಂದು. ಎಲ್ಲಾ ಷೆಂಗೆನ್ ದೇಶಗಳಿಗೆ ಕಡ್ಡಾಯ ಟ್ರಾವೆಲ್ ಇನ್ಶೂರೆನ್ಸ್ ಅಗತ್ಯವಿದೆ.
ಇತರ ಡಾಕ್ಯುಮೆಂಟ್‌ಗಳ ಜೊತೆಗೆ ನಾನು ವಸತಿಯ ಪುರಾವೆಯನ್ನು ತೋರಿಸುವುದು ಅವಶ್ಯವೇ?
ಹೌದು, ನಿಮ್ಮ ಪ್ರವಾಸದ ಸಮಯದಲ್ಲಿ ನೀವು ಎಲ್ಲಿ ಉಳಿಯುತ್ತೀರಿ ಎಂಬ ವಿವರಗಳನ್ನು ನೀವು ಸಲ್ಲಿಸಬೇಕು.
ವೀಸಾ ಪ್ರೊಸೆಸಿಂಗ್‌ನ ಸರಾಸರಿ ಅವಧಿ ಎಷ್ಟು?
ಪ್ರೊಸೆಸಿಂಗ್‌ನ ಸರಾಸರಿ ಅವಧಿಯು ಸಾಮಾನ್ಯವಾಗಿ 15 ಬಿಸಿನೆಸ್ ದಿನಗಳು. ಆದಾಗ್ಯೂ, ಇದು ಅಪ್ಲಿಕೆಂಟ್‌ಗಳ ಸಂಖ್ಯೆಯನ್ನು ಅವಲಂಬಿಸಿ 30 ದಿನಗಳವರೆಗೆ ಹೋಗಬಹುದು.
ಪುದುಚೇರಿಯ ಫ್ರೆಂಚ್ ಕಾನ್ಸುಲೇಟ್ ಟ್ರಾವೆಲ್ ವೀಸಾಗಳನ್ನು ನೀಡಲು ಸಮರ್ಥವಾಗಿದೆಯೇ?
ಹೌದು, ಪುದುಚೇರಿಯಲ್ಲಿರುವ ಕಾನ್ಸುಲೇಟ್ ವೀಸಾವನ್ನು ನೀಡಬಹುದು. ಭಾರತದ ಇತರ ಎಂಬೆಸಿಗಳು ಸಹ ಅವಶ್ಯಕತೆಗಳನ್ನು ಪೂರೈಸಬಹುದು.