ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹೋಲಿಸಿ ಮತ್ತು ಖರೀದಿಸಿ
ಇತರ ಯಾವುದೇ ರೀತಿಯ ಜನರಲ್ ಇನ್ಶೂರೆನ್ಸ್ ನಂತೆಯೇ, ಟ್ರಾವೆಲ್ ಇನ್ಶೂರೆನ್ಸ್ ಅನ್ನೂ ಸಹ ಸಂಕಷ್ಟದ ಸಮಯದಲ್ಲಿ ಜನರಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ನೀವು ಇಂಟರ್ನ್ಯಾಷನಲ್ ಟ್ರಿಪ್ ಅನ್ನು ಮಾಡುತ್ತಿದ್ದರೆ ಅಥವಾ ದೇಶದೊಳಗೆ ಪ್ರಯಾಣಿಸುತ್ತಿದ್ದರೆ, ಟ್ರಾವೆಲ್ ಇನ್ಶೂರೆನ್ಸ್ ಫ್ಲೈಟ್ ವಿಳಂಬಗಳು, ಟ್ರಿಪ್ ಕ್ಯಾನ್ಸಲೇಶನ್, ಬ್ಯಾಗೇಜ್ ನಷ್ಟ, ಪಾಸ್‌ಪೋರ್ಟ್‌ನ ನಷ್ಟ ಮತ್ತು ವೈದ್ಯಕೀಯ ತುರ್ತುಸ್ಥಿತಿಗಳಂತಹ ಅನಿರೀಕ್ಷಿತ ಸಂದರ್ಭಗಳಿಂದ ನಿಮ್ಮನ್ನು ರಕ್ಷಿಸುವುದರ ಜೊತೆಗೆ ಹಲವಾರು ಇತರ ಪ್ರಯೋಜನಗಳನ್ನು ಒಳಗೊಂಡಿದೆ.
ಇಂದು, ಬೆಳೆಯುತ್ತಿರುವ ಇನ್ಶೂರ್ಟೆಕ್ ಉದ್ಯಮದೊಂದಿಗೆ, ಆನ್‌ಲೈನ್‌ನಲ್ಲಿ ಹೆಚ್ಚಿನ ಸಂಖ್ಯೆಯ ಟ್ರಾವೆಲ್ ಇನ್ಶೂರೆನ್ಸ್ ಗಳು ದೊರೆಯುತ್ತವೆ. ಇದು ನಿಮಗೆ ಅತ್ಯಂತ ಪರಿಣಾಮಕಾರಿ ರೀತಿಯಲ್ಲಿ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವ ಪ್ರಯೋಜನವನ್ನು ನೀಡುವುದು ಮಾತ್ರವಲ್ಲದೆ, ನಿಮ್ಮ ಮನೆ ಮತ್ತು ಸಮಯದ ಸೌಕರ್ಯದಲ್ಲಿ ಆನ್‌ಲೈನ್‌ನಲ್ಲಿ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ಗಳನ್ನು ಹೋಲಿಸುವ ಪ್ರಯೋಜನವನ್ನು ಇದು ನಿಮಗೆ ನೀಡುತ್ತದೆ ಮತ್ತು ಈ ಮೂಲಕ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವ ಮತ್ತು ಮತ್ತು ನಿಮ್ಮ ಪ್ರಯಾಣಕ್ಕಾಗಿ ಸೂಕ್ತವಾದ ಪ್ಲ್ಯಾನ್ ಅನ್ನು ಆರಿಸುವ ಪ್ರಯೋಜನವನ್ನೂ ನಿಮಗೆ ನೀಡುತ್ತದೆ. ಈ ಲೇಖನದಲ್ಲಿ, ಆನ್‌ಲೈನ್‌ನಲ್ಲಿ ಟ್ರಾವೆಲ್ ಇನ್ಶೂರೆನ್ಸ್ಅನ್ನು ಹೋಲಿಸುವ ಪ್ರಾಮುಖ್ಯತೆ, ಲಭ್ಯವಿರುವ ಟ್ರಾವೆಲ್ ಪಾಲಿಸಿಗಳ ವಿಧಗಳು, ಮತ್ತು ನೀವು ಭಾರತ ಅಥವಾ ವಿದೇಶದಲ್ಲಿ ನಿಮ್ಮ ಮುಂಬರುವ ಪ್ರವಾಸವನ್ನು ಸೆಕ್ಯೂರ್ ಮಾಡಲು ಬಯಸುತ್ತಿರುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿವಿಧ ಅಂಶಗಳನ್ನು ನಾವು ವಿವರಿಸುತ್ತೇವೆ.
ನಾನು ಟ್ರಾವೆಲ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಏಕೆ ಹೋಲಿಸಬೇಕು?
ನೀವು ಏನಾದರೂ ಮುಖ್ಯವಾದದ್ದನ್ನು ಖರೀದಿಸಿದ ಎಲ್ಲಾ ಸಮಯಗಳ ಬಗ್ಗೆ ಯೋಚಿಸಿ. ಅದು ಪೆನ್ನಿನಷ್ಟು ಚಿಕ್ಕದಾಗಿರಲಿ ಅಥವಾ ಕಾರಿನಂತಹ ಬೃಹತ್ ಗಾತ್ರದ್ದಾಗಿರಲಿ; ಲಭ್ಯವಿರುವ ಆಯ್ಕೆಗಳ ವಿಧವನ್ನು ನೋಡುವುದು, ಎಲ್ಲಾ ವಿಭಿನ್ನ ಅಂಶಗಳನ್ನು ಹೋಲಿಸುವುದು ನಮ್ಮ ಮಾನವ ಪ್ರವೃತ್ತಿಯಾಗಿದೆ, ಮತ್ತು ನಮ್ಮಲ್ಲಿ ಕೆಲವರು ನಿರ್ಧರಿಸುವ ಮೊದಲು ಅದನ್ನು ಪರೀಕ್ಷಿಸುವಂತಹ ಮಟ್ಟಕ್ಕೂ ಹೋಗುತ್ತಾರೆ. ನೀವು ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸುವಾಗಲೂ ನಿಮಗೆ ಇದೇ ಮನಸ್ಥಿತಿಯ ಅಗತ್ಯವಿದೆ. ಎಷ್ಟೇ ಆದರೂ, ಏನಾದರೂ ತಪ್ಪಾದಲ್ಲಿ, ನೀವು ಸಾಧ್ಯವಾದಷ್ಟು ಉತ್ತಮ ರೀತಿಯ ಸುರಕ್ಷತೆಯನ್ನು ಪಡೆಯಲು ಬಯಸುತ್ತೀರಿ. ಟ್ರಾವೆಲ್ ಇನ್ಶೂರೆನ್ಸ್ ಹೋಲಿಕೆ ಏಕೆ ಸಮಂಜಸವಾಗಿದೆ ಎಂಬುದಕ್ಕೆ ಕೆಲವು ಕಾರಣಗಳು:
ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಗಳ ವಿಧಗಳು
ಏನನ್ನಾದರೂ, ಈ ಸಂದರ್ಭದಲ್ಲಿ- ಒಂದು ಟ್ರಾವೆಲ್ ಇನ್ಶೂರೆನ್ಸ್, ಖರೀದಿಸುವ ಮೊದಲು, ನಿಮಗೆ ಮೊಟ್ಟಮೊದಲು ಯಾವ ರೀತಿಯ ಪಾಲಿಸಿ ಬೇಕು ಎಂಬುದು ನಿಮಗೆ ತಿಳಿದಿರುವುದು ಮುಖ್ಯ. ನೀವು ಓದಬಹುದಾದ ಮತ್ತು ಹೋಲಿಸಬಹುದಾದ ಕೆಲವು ಜನಪ್ರಿಯ ರೀತಿಯ ಟ್ರಾವೆಲ್ ಪಾಲಿಸಿಗಳನ್ನು ಕೆಳಗೆ ನೀಡಲಾಗಿದೆ:
ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸುವಾಗ ಹೋಲಿಸಬೇಕಾದ ಅಂಶಗಳು
ಸಮ್ ಇನ್ಶೂರ್ಡ್ - ಸಮ್ ಇನ್ಶೂರ್ಡ್ ಯಾವುದೇ ಅಪಘಾತದ ಸಂದರ್ಭದಲ್ಲಿ ಒಂದು ಟ್ರಾವೆಲ್ ಇನ್ಶೂರೆನ್ಸ್ ಕವರ್ ಮಾಡುವಂತಹ ಗರಿಷ್ಠ ಅಮೌಂಟ್ ಆಗಿದೆ. ಸಾಮಾನ್ಯವಾಗಿ, ಟ್ರಾವೆಲ್ ಪಾಲಿಸಿಯಲ್ಲಿನ ಪ್ರತಿಯೊಂದು ಕವರ್ ಪ್ರತ್ಯೇಕ ಸಮ್ ಇನ್ಶೂರ್ಡ್ ಅನ್ನು ಹೊಂದಿರುತ್ತದೆ. ಆದ್ದರಿಂದ, ಪ್ರತಿಯೊಂದು ಕವರ್‌ಗಳು ಮತ್ತು ಪ್ರಯೋಜನಗಳಿಗೆ ಲಭ್ಯವಿರುವ ಸಮ್ ಇನ್ಶೂರ್ಡ್ ಅನ್ನು ಹೋಲಿಕೆ ಮಾಡಿ ಮತ್ತು ಅದು ಸಾಕಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ. ಉದಾಹರಣೆಗೆ: ನೀವು ಯುಎಸ್ಎ ಗೆ ಪ್ರಯಾಣಿಸುತ್ತಿದ್ದರೆ, ಅಲ್ಲಿ ಹೆಲ್ತ್‌ಕೇರ್ ವೆಚ್ಚಗಳು ತುಂಬಾ ಹೆಚ್ಚಿರುತ್ತವೆ. ಈ ಸಂದರ್ಭದಲ್ಲಿ, ವೈದ್ಯಕೀಯ ಕವರೇಜ್ ಸಾಕಷ್ಟು ಇದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಬೇಕಾಗುತ್ತದೆ.
ವೈದ್ಯಕೀಯ ಕವರ್‌ಗಳು - ಟ್ರಾವೆಲ್ ಇನ್ಶೂರೆನ್ಸ್ ನಲ್ಲಿರುವ ವೈದ್ಯಕೀಯ ಕವರ್, ನಿಮ್ಮ ಟ್ರಿಪ್ ನ ಸಮಯದಲ್ಲಿ ಸಂಭವಿಸಬಹುದಾದ ಯಾವುದೇ ವೈದ್ಯಕೀಯ ತುರ್ತು ಪರಿಸ್ಥಿತಿಗಳು, ಅನಾರೋಗ್ಯಗಳು ಅಥವಾ ಅಪಘಾತಗಳಿಗೆ ಕವರ್ ಅನ್ನು ಒದಗಿಸುತ್ತದೆ. ಹೆಚ್ಚಿನ ಟ್ರಾವೆಲ್ ಪಾಲಿಸಿಗಳು ಇದನ್ನು ಕವರ್ ಮಾಡಿದರೂ, ಪ್ರತಿಯೊಂದರಲ್ಲೂ ಸಮ್ ಇನ್ಶೂರ್ಡ್ ಅನ್ನು ಮತ್ತು ಒದಗಿಸಲಾದ ನಿರ್ದಿಷ್ಟ ವೈದ್ಯಕೀಯ ಪ್ರಯೋಜನಗಳನ್ನು ಹೋಲಿಸುವುದು ಮುಖ್ಯವಾಗಿದೆ. ಉದಾಹರಣೆಗೆ: ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗೆ ಕವರ್ ನೀಡುವುದರ ಜೊತೆಗೆ, ವಿದೇಶದಲ್ಲಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ನಾವು ದೈನಂದಿನ ಆಸ್ಪತ್ರೆಯ ಕ್ಯಾಶ್ ಅನ್ನು ಸಹ ಒದಗಿಸುತ್ತೇವೆ.
ಟ್ರಾನ್ಸಿಟ್ ಕವರ್‌ಗಳು - ಟ್ರಾನ್ಸಿಟ್ ಅಥವಾ ಪ್ರಯಾಣದ ಕವರ್‌ಗಳು ತಪ್ಪಿದ ಸಂಪರ್ಕ, ಫ್ಲೈಟ್ ವಿಳಂಬ, ಟ್ರಿಪ್ ಕ್ಯಾನ್ಸಲೇಶನ್, ಚೆಕ್-ಇನ್ ಲಗೇಜ್‌ನ ವಿಳಂಬ ಅಥವಾ ನಷ್ಟದಂತಹ ಸಂದರ್ಭಗಳಲ್ಲಿ ಒಬ್ಬರು ಪಡೆಯಬಹುದಾದ ಪ್ರಯೋಜನಗಳನ್ನು ಉಲ್ಲೇಖಿಸುತ್ತವೆ. ಪ್ರಾಮಾಣಿಕವಾಗಿ \ ಹೇಳಬೇಕೆಂದರೆ, ಇವುಗಳು ಜನರು ತಮ್ಮ ಪ್ರಯಾಣದ ಸಮಯದಲ್ಲಿ ಎದುರಿಸುವ ಕೆಲವು ಸಾಮಾನ್ಯ ಅವಘಡಗಳಾಗಿರುತ್ತವೆ. ಆದ್ದರಿಂದ, ಈ ಕವರೇಜ್‌ಗಳಿಗಾಗಿ ಹುಡುಕಿ ಮತ್ತು ವಿಭಿನ್ನ ಟ್ರಾವೆಲ್ ಪಾಲಿಸಿಗಳ ಜೊತೆ ಅದರ ಹೋಲಿಕೆ ಮಾಡಿ.
ಇತರೆ ಟ್ರಿಪ್ ಕವರ್‌ಗಳು - ಎಲ್ಲಾ ಇತರ ಪ್ರಯೋಜನಗಳು ಮತ್ತು ಕವರ್‌ಗಳನ್ನು ಹೋಲಿಕೆ ಮಾಡಿ; ಉದಾಹರಣೆಗೆ, ಸಾಹಸ ಕ್ರೀಡೆಗಳು, ಪಾಸ್‌ಪೋರ್ಟ್‌ನ ನಷ್ಟ, ಟ್ರಿಪ್ ಕ್ಯಾನ್ಸಲೇಶನ್ ಇತ್ಯಾದಿಗಳಿಗೆ ಈ ಟ್ರಾವೆಲ್ ಇನ್ಶೂರೆನ್ಸ್ ಕವರ್ ನೀಡುತ್ತದೆಯೇ ಎಂದು. ಅಲ್ಲದೆ, ಎಷ್ಟರ ಮಟ್ಟಿಗೆ ಈ ಪ್ರಯೋಜನವನ್ನು ನೀಡಲಾಗುತ್ತದೆ ಎಂಬುದನ್ನು ಹೋಲಿಸಲು ಮರೆಯಬೇಡಿ!
ಪದಗಳು - ಪ್ರತಿಯೊಬ್ಬರೂ ಇನ್ಶೂರೆನ್ಸ್ ಪದಗಳ ಬಗ್ಗೆ ಎಚ್ಚರದಿಂದಿರುತ್ತಾರೆ, ಅಲ್ಲವೇ? ಆದ್ದರಿಂದ, ನೀವು ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಮೊದಲು ಯಾವಾಗಲೂ ಪದಗಳನ್ನು ಗಮನಿಸಿ. ಉದಾಹರಣೆಗೆ: ಕೆಲವು ಟ್ರಾವೆಲ್ ಇನ್ಶೂರೆನ್ಸ್ ಗಳು ಡೊಮೆಸ್ಟಿಕ್ ಫ್ಲೈಟ್ ವಿಳಂಬಗಳಿಗೆ ಕವರ್ ಅನ್ನು ನೀಡುತ್ತವೆ ಆದರೆ ಕನಿಷ್ಠ 6 ಗಂಟೆಗಳ ಕಾಲ ವಿಳಂಬವಾದರೆ ಮಾತ್ರ. ಈ ಸಂದರ್ಭದಲ್ಲಿ, ಡೊಮೆಸ್ಟಿಕ್ ವಿಮಾನಗಳು ಸಾಮಾನ್ಯವಾಗಿ 1-3 ಗಂಟೆಗಳ ಕಾಲ ಮಾತ್ರ ವಿಳಂಬವಾಗುವುದರಿಂದ ನೀವು ಈ ಕವರ್‌ನಿಂದ ಪ್ರಯೋಜನ ಪಡೆಯಲು ಸಾಧ್ಯವಿಲ್ಲ.
ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹೋಲಿಸುವ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು
ಅದು ಕಡ್ಡಾಯವಾಗಿದ್ದರೆ ನಾನು ಟ್ರಾವೆಲ್ ಇನ್ಶೂರೆನ್ಸ್ ಅನ್ನು ಮಾತ್ರ ಖರೀದಿಸಬೇಕೇ?
ದುರದೃಷ್ಟವಶಾತ್, ಇದು ಕೆಲ ನಿರ್ದಿಷ್ಟ ವೀಸಾ ಅಪ್ಲಿಕೇಶನ್ ಗಳಿಗೆ ಕಡ್ಡಾಯವಾಗಿರುವ ಕಾರಣ, ಬಹಳಷ್ಟು ಜನರು ಕುರುಡಾಗಿ ಯಾವುದೇ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಪಡೆಯುತ್ತಾರೆ. ಅದಾಗ್ಯೂ, ಇದು ಕಡ್ಡಾಯವಾಗಿರಲಿ ಅಥವಾ ಇಲ್ಲದಿರಲಿ- ಇದು ನೀವು ನಿಮ್ಮೊಂದಿಗೆ ತೆಗೆದುಕೊಂಡು ಹೋಗಬೇಕಾದ ಟ್ರಾವೆಲ್ ಅಗತ್ಯಗಳಲ್ಲಿ ಒಂದಾಗಿದೆ, ಏಕೆಂದರೆ ಈಗ ಪ್ರಯಾಣಗಳು ಆಶ್ಚರ್ಯಗಳು ಮತ್ತು ಅನಿಶ್ಚಿತತೆಗಳಿಂದ ತುಂಬಿವೆ ಅಲ್ಲವೇ? (ನೀವು ಹಾಗೆ ಯೋಚಿಸದಿದ್ದರೆ- ನೀವು ಬಹುಶಃ ಸಾಕಷ್ಟು ಚಲನಚಿತ್ರಗಳನ್ನು ವೀಕ್ಷಿಸಿಲ್ಲ.
ನನ್ನ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಹೇಗೆ ಲೆಕ್ಕಾಚಾರ ಮಾಡಲಾಗುತ್ತದೆ?
ಪ್ರತಿಯೊಬ್ಬರ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ ವಿಭಿನ್ನವಾಗಿರಲು ಒಂದು ಕಾರಣವಿದೆ. ಇದಕ್ಕೆ ಕಾರಣ, ನಿಮ್ಮ ವಯಸ್ಸು, ನಿಮ್ಮ ಟ್ರಿಪ್ ನ ಅವಧಿ, ಪ್ಲ್ಯಾನ್ ನಲ್ಲಿ ಒಳಗೊಂಡಿರುವ ಕುಟುಂಬದ ಸದಸ್ಯರು, ಆಯ್ಕೆ ಮಾಡಿದ ಪ್ಲ್ಯಾನ್ ಮತ್ತು ಕವರೇಜ್ ಮತ್ತು ನೀವು ಪ್ರಯಾಣಿಸುತ್ತಿರುವ ದೇಶ ಅಥವಾ ದೇಶಗಳು ಸೇರಿದಂತೆ, ಹಲವು ಅಂಶಗಳ ಸಂಯೋಜನೆಯನ್ನು ಆಧರಿಸಿ ಇದನ್ನು ಲೆಕ್ಕಹಾಕಲಾಗುತ್ತದೆ.
ನನ್ನ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಸಹ ನಾನು ಹೋಲಿಸಬೇಕೇ?
ಪ್ರೀಮಿಯಂ ನಿಮ್ಮ ಟ್ರಿಪ್ ಅನ್ನು ಸೆಕ್ಯೂರ್ ಮಾಡಲು ನಿಮ್ಮ ಜೇಬಿನಿಂದ ನೀವು ಪಾವತಿಸುವ ಬೆಲೆಯಾಗಿದೆ! ಆದ್ದರಿಂದ, ಖಂಡಿತವಾಗಿಯೂ ನೀವು ಟ್ರಾವೆಲ್ ಇನ್ಶೂರೆನ್ಸ್ ಕೊಟೇಶನ್ ಗಳನ್ನು ಹೋಲಿಸಬೇಕು ಮತ್ತು ಯಾವುದು ಹೆಚ್ಚು ಸಮಂಜಸವಾಗಿದೆ- ಅಂದರೆ ಆ ಬೆಲೆಗೆ ಸಾಕಷ್ಟು ಕವರೇಜ್ ಅನ್ನು ಒದಗಿಸುತ್ತದೆ,.ಎಂದು ನೋಡಬೇಕು.
ಡಿಜಿಟ್ ಯಾವ ರೀತಿಯ ಟ್ರಾವೆಲ್ ಪಾಲಿಸಿಯನ್ನು ನೀಡುತ್ತದೆ?
ಡಿಜಿಟ್‌ನಲ್ಲಿ, ನಾವು ಸರಳ ಪಾಲಿಸಿಗಳನ್ನು ಒದಗಿಸುತ್ತೇವೆ- ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಮತ್ತು ಡೊಮೆಸ್ಟಿಕ್ ಟ್ರಾವೆಲ್ ಇನ್ಶೂರೆನ್ಸ್. ನಿಮ್ಮ ಟ್ರಾವೆಲ್ ಪ್ಲ್ಯಾನ್ ಗಳ ಪ್ರಕಾರ ನಿಮ್ಮ ಕುಟುಂಬದ ಸದಸ್ಯರು ಮತ್ತು ಅನೇಕ ದೇಶಗಳು/ನಗರಗಳನ್ನು ಸೇರಿಸಲು ಇದನ್ನು ಕಸ್ಟಮೈಸ್ ಮಾಡಬಹುದು. ಹೆಚ್ಚುವರಿಯಾಗಿ, ನಾವು ಇತ್ತೀಚಿಗೆ ಫ್ಲೈಟ್ ವಿಳಂಬಕ್ಕಾಗಿ ಪ್ರಯಾಣಿಕರಿಗೆ ಕಾಂಪನ್ಸೇಶನ್ ನೀಡಲು ನಿರ್ದಿಷ್ಟ ಫ್ಲೈಟ್-ವಿಳಂಬ ಇನ್ಶೂರೆನ್ಸ್ ಅನ್ನು ನೀಡಲು ಪ್ರಾರಂಭಿಸಿದ್ದೇವೆ.
ನನ್ನ ಡಿಜಿಟ್ ಟ್ರಾವೆಲ್ ಪಾಲಿಸಿಯನ್ನು ಸಕ್ರಿಯಗೊಳಿಸಲು ಎಷ್ಟು ಸಮಯ ಬೇಕಾಗುತ್ತದೆ?
ನಮ್ಮ ಟ್ರಾವೆಲ್ ಇನ್ಶೂರೆನ್ಸ್, ಆನ್‌ಲೈನ್, ಸರಳ ಮತ್ತು ತ್ವರಿತವಾಗಿದೆ. ಆದ್ದರಿಂದ, ನಿಮ್ಮ ಡಿಜಿಟ್ ಟ್ರಾವೆಲ್ ಪಾಲಿಸಿಯನ್ನು ಸಕ್ರಿಯಗೊಳಿಸಲು ಕೆಲವೇ ನಿಮಿಷಗಳುಬೇಕಾಗುತ್ತದೆ. ನೀವು ಮಾಡಬೇಕಾಗಿರುವುದು ಇಷ್ಟೇ; ನಿಮ್ಮ ಟ್ರಾವೆಲ್ ದಿನಾಂಕಗಳು, ಗಮ್ಯಸ್ಥಾನ ಮತ್ತು ಪ್ಲ್ಯಾನ್ ನ ಆಯ್ಕೆ ಸೇರಿದಂತೆ ನಿಮ್ಮ ಮೂಲಭೂತ ವಿವರಗಳನ್ನು ನಮೂದಿಸಿ, ಅದರ ನಂತರ ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಕ್ಷಣಾರ್ಧದಲ್ಲಿ ನಿಮಗೆ ಇಮೇಲ್ ಮಾಡಲಾಗುತ್ತದೆ!
ಫ್ಲೈಟ್ ವಿಳಂಬದ ಸಂದರ್ಭದಲ್ಲಿ ಡಿಜಿಟ್‌ನ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಬಳಸಲು ಇರುವ ಕಂಡೀಶನ್ ಗಳು ಯಾವುವು?
ಡೊಮೆಸ್ಟಿಕ್ ಫ್ಲೈಟ್ ವಿಳಂಬದ ಸಂದರ್ಭದಲ್ಲಿ, ನಿಮ್ಮ ವಿಮಾನವು 70 ನಿಮಿಷಗಳು ಅಥವಾ ಅದಕ್ಕಿಂತ ಹೆಚ್ಚು ವಿಳಂಬವಾಗಿದ್ದರೆ ನಿಮಗೆ ಸ್ವಯಂಚಾಲಿತವಾಗಿ ಕಾಂಪನ್ಸೇಶನ್ ಅನ್ನು ನೀಡಲಾಗುತ್ತದೆ. ಆದರೆ, ಇಂಟರ್‌ನ್ಯಾಷನಲ್ ಫ್ಲೈಟ್ ವಿಳಂಬದ ಸಂದರ್ಭದಲ್ಲಿ, ನಿಮ್ಮ ವಿಮಾನವು 4 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ವಿಳಂಬವಾಗಿದ್ದರೆ ನಿಮಗೆ ಕಾಂಪನ್ಸೇಶನ್ ಅನ್ನು ನೀಡಲಾಗುತ್ತದೆ.
ನಾನು ನನ್ನ ಟ್ರಿಪ್ ಅನ್ನು ಕ್ಯಾನ್ಸಲ್ ಮಾಡಲು ಬಯಸಿದರೆ ಡಿಜಿಟ್‌ನ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಬಳಸಲು ಇರುವ ಕಂಡೀಶನ್ ಗಳು ಯಾವುವು?
ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯ ಭಾಗವಾಗಿ, ನಿಮ್ಮ ಟ್ರಿಪ್ ಅನ್ನು ನೀವು ಕ್ಯಾನ್ಸಲ್ ಮಾಡಬೇಕಾಗುವ ಸಂದರ್ಭದಲ್ಲಿ ನಷ್ಟದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು. ಈ ಸಂದರ್ಭದಲ್ಲಿ, ನಿಮ್ಮ ಎಲ್ಲಾ ರಿಫಂಡ್ ಆಗದ ಬುಕಿಂಗ್‌ಗಳಿಗೆ ಡಿಜಿಟ್ ಕವರ್ ಅನ್ನು ನೀಡುತ್ತದೆ. ಈ ಪ್ರಯೋಜನವನ್ನು ಪಡೆಯಲು ಇರುವ ಏಕೈಕ ಕಂಡೀಶನ್ ಎಂದರೆ, ನಿಮ್ಮ ಟ್ರಿಪ್ ಕ್ಯಾನ್ಸಲೇಶನ್ ಇಲ್ಲಿ ನೀಡಲಾದ ಕಾರಣಗಳಿಂದಾಗಿ ಆಗಿರಬಾರದು- ನಿಮ್ಮ ವೀಸಾ ಅಪ್ಲಿಕೇಶನ್ ತಿರಸ್ಕರಿಸಲಾಗಿದ್ದರೆ, ನಿಮ್ಮ ಅಥವಾ ಕುಟುಂಬದ ಸದಸ್ಯರ ಆರೋಗ್ಯದ ಸ್ಥಿತಿಯಿಂದಾಗಿ ನಿಮ್ಮ ಟ್ರಿಪ್ ಕ್ಯಾನ್ಸಲ್ ಮಾಡಬೇಕಾಗಿದ್ದು, ಇದರ ಬಗ್ಗೆ ನಿಮಗೆ ಈಗಾಗಲೇ ತಿಳಿದಿದ್ದರೆ, ಅಥವಾ ನೀವು ಈಗಾಗಲೇ ತಿಳಿದಿರುವ ಒಂದು ನಿರ್ದಿಷ್ಟ ಘಟನೆಯಿಂದಾಗಿ (ಉದಾಹರಣೆಗೆ, ನ್ಯಾಯಾಲಯದ ಸಮನ್ಸ್) ಹೋಗಲಾರದಿದ್ದರೆ.