ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಟ್ಯಾಕ್ಸ್‌ನ ನಂತರದ ಲಾಭ ಎಂದರೇನು: ವ್ಯಾಖ್ಯೆ, ಫಾರ್ಮುಲಾ ಮತ್ತು ಪ್ರಾಮುಖ್ಯತೆಯ ವಿವರಣೆ

ಟ್ಯಾಕ್ಸ್‌ಗಳು ಪ್ರತಿ ಬಿಸಿನೆಸ್ ಯುನಿಟ್‌ನ ಅವಿಭಾಜ್ಯ ಅಂಗಗಳಾಗಿವೆ. ಆದ್ದರಿಂದ, ನೀವು ಅವರ ಎಲ್ಲಾ ಟ್ಯಾಕ್ಸ್‌ಗಳನ್ನು ಪಾವತಿಸಿದ ನಂತರ ನಿಮ್ಮ ಬಳಿ ಉಳಿದಿರುವ ಹಣವನ್ನು ಮೌಲ್ಯಮಾಪನ ಮಾಡಲು ಭಾರತ ಸರ್ಕಾರವು ಟ್ಯಾಕ್ಸ್‌ನ ನಂತರದ ಲಾಭವನ್ನು (ಪಿ.ಎ.ಟಿ - ಪ್ರಾಫಿಟ್ ಆಫ್ಟರ್ ಟ್ಯಾಕ್ಸ್) ಪರಿಚಯಿಸಿದೆ. ಇದು ಪ್ರೈವೇಟ್ ಲಿಮಿಟೆಡ್, ಪಬ್ಲಿಕ್ ಲಿಮಿಟೆಡ್, ಸರ್ಕಾರಿ ಸ್ವಾಮ್ಯದ, ಖಾಸಗಿ ಒಡೆತನದ ಕಂಪನಿಗಳು ತಮ್ಮ ಟ್ಯಾಕ್ಸ್‌ಗಳನ್ನು ಪಾವತಿಸಿದ ನಂತರ ಆರ್ಗನೈಸೇಶನ್‌ನ ಷೇರ್ ಹೋಲ್ಡರ್‌ಗಳಿಗೆ ಉಳಿದಿರುವ ಲಾಭದ ಮೊತ್ತವಾಗಿದೆ.

ನೀವು ಪಿ.ಎ.ಟಿ ಬಗ್ಗೆ ಎಲ್ಲವನ್ನೂ ಕಲಿಯಲು ಮತ್ತು ಅದನ್ನು ನಿಮ್ಮ ಬಿಸಿನೆಸ್‌ನಲ್ಲಿ ನಿರ್ವಹಿಸಲು ಬಯಸುವಿರಾ? ಹಾಗಿದ್ದರೆ, ಈ ಆರ್ಟಿಕಲ್ ಇದರ ಎಲ್ಲಾ ಅನುಕೂಲಗಳು, ಅನಾನುಕೂಲಗಳು ಮತ್ತು ಮಹತ್ವದೊಂದಿಗೆ ನಿಮಗೆ ಗೈಡ್ ಮಾಡುತ್ತದೆ!

ಟ್ಯಾಕ್ಸ್‌ನ ನಂತರದ ಲಾಭ (PAT) ಎಂದರೇನು?

ಭಾರತದ ಬಿಸಿನೆಸ್ ಕಾನೂನುಗಳು, ಪ್ರತಿ ಬಿಸಿನೆಸ್ ಯುನಿಟ್ ವಾರ್ಷಿಕವಾಗಿ ಇನ್ಕಮ್ ಟ್ಯಾಕ್ಸ್ ಅನ್ನು ಪಾವತಿಸುವುದನ್ನು ಕಡ್ಡಾಯಗೊಳಿಸುತ್ತದೆ. ಟ್ಯಾಕ್ಸ್‌ನ ನಂತರದ ಲಾಭವು ಇನ್ಕಮ್ ಟ್ಯಾಕ್ಸ್‌ಗಳನ್ನು ಡಿಡಕ್ಟ್ ಮಾಡಿದ ನಂತರದ ಬಿಸಿನೆಸ್ ಗಳಿಕೆಯನ್ನು ಸೂಚಿಸುತ್ತದೆ. ಇದನ್ನು ಸಾಮಾನ್ಯವಾಗಿ ಕಂಪನಿಯೊಂದು ಮಾಡಿದ ಲಾಭದ ಅಂತಿಮ ಮೊತ್ತ ಮತ್ತು ಇನ್ಕಮ್ ಅನ್ನು ಜನರೇಟ್ ಮಾಡುವ ಅತ್ಯುತ್ತಮ ಸಾಮರ್ಥ್ಯ ಎಂದು ನೋಡಲಾಗುತ್ತದೆ. ಆಪರೇಟಿಂಗ್ ಇನ್ಕಮ್ ಮತ್ತು ಇಂಟರೆಸ್ಟ್ ಇನ್ಕಮ್ ಸೇರಿದಂತೆ ಇತರೆ ಮೂಲಗಳಿಂದ ಬರುವ ಇನ್ಕಮ್ ಅನ್ನು ಪಿಎಟಿ ಸಂಯೋಜಿಸುತ್ತದೆ.

ಸಾಮಾನ್ಯವಾಗಿ ಇನ್ವೆಸ್ಟರ್‌ಗಳು ಕಾಲ ಕಳೆದಂತೆ ಅದರ ಬದಲಾವಣೆಗಳನ್ನು ಅನಲೈಸ್ ಮಾಡಲು ಆರ್ಗನೈಸೇಶನ್‌ನ ಪಿಎಟಿ ಅನ್ನು ನಿಕಟವಾಗಿ ಗಮನಿಸುತ್ತಾರೆ. ಆದ್ದರಿಂದ, ಇದು ಮೌಲ್ಯಮಾಪನ ಇಂಡಿಕೇಟರ್ ಆಗಿ ಕೆಲಸ ಮಾಡುತ್ತದೆ. ಹೀಗಾಗಿ ಇದು ಕಂಪನಿಯ ಷೇರು ಬೆಲೆಯ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ, "ಟ್ಯಾಕ್ಸ್‌ನ ನಂತರದ ಲಾಭ ಎಂದರೇನು?" ಎಂದು ನೀವು ಆಶ್ಚರ್ಯಪಟ್ಟರೆ, ಇದು ಒಂದು ಆರ್ಗನೈಸೇಶನ್‌ ತನ್ನ ಎಲ್ಲಾ ಟ್ಯಾಕ್ಸ್‌ಗಳು ಮತ್ತು ಲಯಬಿಲಿಟಿಗಳನ್ನು ಪಾವತಿಸಿದ ನಂತರ ಉಳಿಸಿಕೊಳ್ಳುವ ಅಂತಿಮ ಮೊತ್ತವಾಗಿದೆ ಮತ್ತು ಷೇರುದಾರರ ನಡುವೆ ತಾನು ಉಳಿಸಿಕೊಂಡ ಗಳಿಕೆಯಾಗಿ ಇದನ್ನು ಹಂಚುತ್ತದೆ.

ಒಂದು ಕಂಪನಿಗೆ ಟ್ಯಾಕ್ಸ್‌ನ ನಂತರದ ಲಾಭ (PAT) ಹೇಗೆ ಮುಖ್ಯವಾಗುತ್ತದೆ?

ಟ್ಯಾಕ್ಸ್‌ನ ನಂತರದ ಲಾಭವು ಒಂದು ಮೊತ್ತವಾಗಿದ್ದು ಅದನ್ನು ಒಂದು ಆರ್ಗನೈಸೇಶನ್‌ ಮತ್ತು ಅದರ ಷೇರ್ ಹೋಲ್ಡರ್‌ಗಳು ಮನೆಗೆ ಕೊಂಡೊಯ್ಯಬಹುದು. ಈ ನಿಟ್ಟಿನಲ್ಲಿ, ಈ ಕೆಳಗಿನ ಫೀಚರ್‌ಗಳೊಂದಿಗೆ ನೀವು ಈ ಪರಿಕಲ್ಪನೆಯನ್ನು ಮತ್ತಷ್ಟು ಅರ್ಥಮಾಡಿಕೊಳ್ಳಬಹುದು.

  • ಪಿಎಟಿ ಒಂದು ಕಾರ್ಪೋರೇಶನ್‌ನ ನಿಜವಾದ ಲಾಭದಾಯಕತೆಯನ್ನು ಪ್ರತಿನಿಧಿಸುತ್ತದೆ ಮತ್ತು ಅದರ ಸ್ಟೇಕ್‌ಹೋಲ್ಡರ್‌ಗಳಿಂದ ಪರಿಗಣಿಸಲ್ಪಡುತ್ತದೆ, ಇನ್ವೆಸ್ಟರ್‌ಗಳ ನಿರ್ಧಾರಗಳಿಗೆ ಅತ್ಯುತ್ತಮ ಪ್ಯಾರಾಮೀಟರ್ ಆಗಿದೆ.
  • ಪಿಎಟಿ ಎನ್ನುವುದು ಒಂದು ಕಂಪನಿಯು ಉಳಿಸಿಕೊಂಡಿರುವ ಗಳಿಕೆಯ, ಏರಿಕೆ ಅಥವಾ ಕುಸಿತವನ್ನು ನೋಡಿಕೊಳ್ಳುವ ಅತ್ಯಗತ್ಯ ಹಣಕಾಸಿನ ಅಳತೆಯಾಗಿದೆ.
  • ಒಂದು ಆರ್ಗನೈಸೇಶನ್, ಪಿಎಟಿ ಅನ್ನು ಸಾಮಾನ್ಯವಾಗಿ ಡಿವಿಡೆಂಡ್ ಅನ್ನುಪಾವತಿಸಲು ಬಳಸುತ್ತದೆ ಅಥವಾ ರಿಇನ್ವೆಸ್ಟ್ ಮಾಡಲು ಕಂಪನಿಯಲ್ಲಿ ಇರಿಸಿಕೊಳ್ಳುತ್ತದೆ.
  • ಇದು ತನ್ನ ಇನ್ಕಮ್ ಅನ್ನು ಲಾಭವಾಗಿ ಪರಿವರ್ತಿಸುವಲ್ಲಿ ಆರ್ಗನೈಸೇಶನ್‌ನ ಸಾಮರ್ಥ್ಯಗಳನ್ನು ಅಳೆಯುತ್ತದೆ.
  • ಜನರು ಇದನ್ನು ಮಾರ್ಜಿನ್ ಅನಾಲಿಸಿಸ್‌ಗಾಗಿ ಬಳಸುತ್ತಾರೆ, ವಿಶೇಷವಾಗಿ ಇಂಡಸ್ಟ್ರಿಯೊಳಗಿನ ಕಂಪನಿಗಳನ್ನು ಹೋಲಿಸುವಾಗ ಇದನ್ನು ಬಳಸುತ್ತಾರೆ.
  • ಇನ್ವೆಸ್ಟರ್‌ಗಳು ಕಂಪನಿಯ ಪಿಎಟಿ ಅನ್ನು ಅಳೆಯುವ ಮೂಲಕ ಲಾಭದಾಯಕತೆಯನ್ನು ಗಳಿಸುವ ಸಾಮರ್ಥ್ಯವನ್ನು ನಿರ್ಧರಿಸುತ್ತಾರೆ.
  • ಕಂಪನಿಗಳು ತಮ್ಮ ವೆಚ್ಚವನ್ನು ನಿಯಂತ್ರಿಸಬೇಕಾದರೆ ಅದನ್ನು ಅರ್ಥಮಾಡಿಕೊಳ್ಳಲು ತಮ್ಮ ಪಿಎಟಿ ಅನ್ನು ಬಳಸಬಹುದು.
  • ನೆಟ್ ಪ್ರಾಫಿಟ್ ಮಾರ್ಜಿನ್ ಅನ್ನು ನಿರ್ಧರಿಸಲು ಇದು ಇನ್ವೆಸ್ಟರ್‌ಗಳಿಗೆ ಸಹಾಯ ಮಾಡುತ್ತದೆ, ಇದು ಒಟ್ಟು ಇನ್ಕಮ್ ಅಥವಾ ಮಾರಾಟದ ಪ್ರತಿ ರೂಪಾಯಿಯಲ್ಲಿ ಕಂಪನಿಯು ಎಷ್ಟು ಲಾಭವನ್ನು ಮಾಡಿದೆ ಎಂಬುದನ್ನು ಸೂಚಿಸುತ್ತದೆ.
  • ಪಿಎಟಿ ಯು ಕಂಪನಿಯ ಆರೋಗ್ಯ-ಸ್ಥಿತಿಗತಿಯನ್ನು ಸೂಚಿಸುತ್ತದೆ. ಬೆಳೆಯುತ್ತಿರುವ ಪಿಎಟಿ ಉತ್ತಮ ಬಿಸಿನೆಸ್ ಪ್ರಾಸ್ಪೆಕ್ಟಸ್ ಮತ್ತು ಅವಕಾಶಗಳನ್ನು ಸೂಚಿಸುತ್ತದೆ.

ಟ್ಯಾಕ್ಸ್‌ನ ನಂತರದ ಲಾಭವನ್ನು (PAT) ಕ್ಯಾಲ್ಕುಲೇಟ್ ಮಾಡಲು ಇರುವ ಫಾರ್ಮುಲಾ ಯಾವುದು?

ಈಗ ನೀವು ಟ್ಯಾಕ್ಸ್‌ನ ನಂತರದ ಲಾಭದ ಬಗ್ಗೆ ಬೇಸಿಕ್ ತಿಳುವಳಿಕೆಯನ್ನು ಹೊಂದಿದ್ದೀರಿ. ಅದರ ಕ್ಯಾಲ್ಕುಲೇಶನ್ ಪ್ರಕ್ರಿಯೆಯ ಬಗ್ಗೆ ನೀವು ಅಚ್ಚರಿ ಪಡುತ್ತೀರಿ. ಕೆಳಗಿನ ಸೆಕ್ಷನ್, ಟ್ಯಾಕ್ಸ್‌ನ ನಂತರದ ಲಾಭದ ಫಾರ್ಮುಲಾ ಬಗ್ಗೆ ನಿಮಗೊಂದು ಚಿತ್ರಣವನ್ನು ನೀಡುತ್ತದೆ.

ಟ್ಯಾಕ್ಸ್‌ನ ನಂತರದ ಲಾಭ = ಟ್ಯಾಕ್ಸ್‌ನ ಮೊದಲು ಲಾಭ - ಟ್ಯಾಕ್ಸ್‌ ದರ

ಟ್ಯಾಕ್ಸ್‌ನ ಮುಂಚಿನ ಲಾಭ (PBT): ಆಪರೇಟಿಂಗ್ ಮತ್ತು ನಾನ್-ಆಪರೇಟಿಂಗ್ ಸೇರಿದಂತೆ ಒಟ್ಟು ವೆಚ್ಚಗಳನ್ನು ಪರಿಗಣಿಸಿ ವ್ಯಕ್ತಿಯು ಅದನ್ನು ಕ್ಯಾಲ್ಕುಲೇಟ್ ಮಾಡಬಹುದು. ನಂತರ ಅದನ್ನು ಒಟ್ಟು ರೆವಿನ್ಯೂದಿಂದ ಹೊರಗಿಡಲಾಗುತ್ತದೆ (ಆಪರೇಟಿಂಗ್ ಮತ್ತು ನಾನ್-ಆಪರೇಟಿಂಗ್ ಇನ್ಕಮ್).

ಟ್ಯಾಕ್ಸ್ ದರ: ಟ್ಯಾಕ್ಸ್ ಅನ್ನು ಪಿಬಿಟಿ ಆಧಾರದ ಮೇಲೆ ಕ್ಯಾಲ್ಕುಲೇಟ್ ಮಾಡಲಾಗುತ್ತದೆ, ಆದರೆ ಕಂಪನಿಯ ಭೌಗೋಳಿಕ ಸ್ಥಳವು ಅದರ ಟ್ಯಾಕ್ಸ್ ದರವನ್ನು ನಿರ್ಧರಿಸುತ್ತದೆ.

ಟ್ಯಾಕ್ಸ್‌ನ ನಂತರದ ನೆಟ್ ಪ್ರಾಫಿಟ್ ಫಾರ್ಮುಲಾವನ್ನು ಅರ್ಥಮಾಡಿಕೊಳ್ಳಲು, ಒಂದು ಉದಾಹರಣೆ ನಿಮಗೆ ಸಹಾಯ ಮಾಡುತ್ತದೆ-

ಐಎಬಿಸಿ ಪ್ರೈವೇಟ್ ಲಿಮಿಟೆಡ್, ₹ 50,000 ಗಳ ವಾರ್ಷಿಕ ರೆವಿನ್ಯೂ ಅನ್ನು ಗಳಿಸುತ್ತದೆ. ಇದರ ಆಪರೇಟಿಂಗ್ ಮತ್ತು ನಾನ್-ಆಪರೇಟಿಂಗ್ ವೆಚ್ಚಗಳು ಕ್ರಮವಾಗಿ ₹15,000 ಮತ್ತು ₹5,000. ಟ್ಯಾಕ್ಸ್ ದರವು ಸುಮಾರು 30% ಆಗಿದೆ.

ವಿವರಗಳು ಮೊತ್ತ
ವಾರ್ಷಿಕ ರೆವಿನ್ಯೂ ₹ 50,000
ಆಪರೇಟಿಂಗ್ ವೆಚ್ಚ ₹ 15,000
ನಾನ್-ಆಪರೇಟಿಂಗ್ ₹ 5,000
ಟ್ಯಾಕ್ಸ್ ದರ 30%
ಟ್ಯಾಕ್ಸ್‌ನ ಮುಂಚಿನ ಲಾಭ (₹ 50,000 - ₹ (15,000 + 5,000) ₹ 30,000
ಟ್ಯಾಕ್ಸೇಬಲ್ ಮೊತ್ತ (₹ 30,000 ನ 30%) ₹ 9,000
ಟ್ಯಾಕ್ಸ್‌ನ ನಂತರದ ಲಾಭ (₹ 30,000 - ₹ 9,000) ₹ 21,000

ಹೀಗಾಗಿ, ಎಬಿಸಿ ಪ್ರೈವೇಟ್ ಲಿಮಿಟೆಡ್‌ನ ಪಿಎಟಿ ₹ 21,000 ಆಗಿದೆ.

ಟ್ಯಾಕ್ಸ್‌ನ ನಂತರದ ಲಾಭದ (PAT) ಮಹತ್ವವೇನು?

ಆರ್ಗನೈಸೇಶನ್‌ನ ಬೆಳವಣಿಗೆ ಮತ್ತು ಸಾಮರ್ಥ್ಯಗಳನ್ನು ಅನಲೈಸ್ ಮಾಡಲು, ಟ್ಯಾಕ್ಸ್‌ನ ನಂತರದ ನೆಟ್ ಲಾಭ ಪರಿಕಲ್ಪನೆಯು ಗಮನಾರ್ಹವಾಗಿದೆ. ಇದು ಎಂಪ್ಲಾಯರ್‌ಗಳಿಗೆ ಇಂಟರ್ನಲ್ ಮತ್ತು ಎಕ್ಸ್ಟ್‌ರ್ನಲ್ ಮ್ಯಾನೇಜ್‌ಮೆಂಟ್‌ನೊಂದಿಗೆ ಅದರ ಹಣಕಾಸಿನ ಬೆಳವಣಿಗೆಗಳ ವಿಷಯದಲ್ಲಿ ಕಂಪನಿಯ ಕಾರ್ಯಕ್ಷಮತೆಯನ್ನು ಚಿತ್ರಿಸುವ ಫೈನಾನ್ಸಿಯಲ್ ಡೇಟಾವನ್ನು ಒದಗಿಸುತ್ತದೆ. ಇದು ಈಗಾಗಲೇ ಒಂದು ವೇರಿಯೇಬಲ್ ಟ್ಯಾಕ್ಸೇಶನ್ ಮೊತ್ತವನ್ನು ಕಡಿಮೆ ಮಾಡುವುದರಿಂದ, ಕಂಪನಿಯ ಮಾಲೀಕರು ತಮ್ಮ ಕಂಪನಿಯ ಟೇಕ್-ಹೋಮ್ ಲಾಭವನ್ನು ನೋಡಬಹುದು ಮತ್ತದನ್ನು ಸುಧಾರಿಸಲು ಪ್ರಯತ್ನಿಸಬಹುದು. 

ಕಂಪನಿಯು ಗಣನೀಯ ಟ್ಯಾಕ್ಸ್ ಪ್ರಯೋಜನಗಳನ್ನು ಜನರೇಟ್ ಮಾಡುವ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದರೆ, ಅದು ಅದರ ನೆಟ್ ಇನ್ಕಮ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಇಂಡಸ್ಟ್ರಿಯು ಪ್ರತಿಕೂಲವಾದ ಟ್ಯಾಕ್ಸ್ ಪ್ರಯೋಜನಗಳನ್ನು ಎದುರಿಸುತ್ತಿದ್ದರೆ, ಕಂಪನಿಯ ನೆಟ್ ಇನ್ಕಮ್ ಸಹಜವಾಗಿಯೇ ಕಡಿಮೆಯಾಗುತ್ತದೆ. ಪಿಎಟಿ ಅನ್ನು ಕ್ಯಾಲ್ಕುಲೇಟ್ ಮಾಡಿದ ನಂತರ, ಕಂಪನಿಯ ಮಾಲೀಕರು ಈಗಾಗಲೇ ಅಸ್ತಿತ್ವದಲ್ಲಿರುವ ಟ್ಯಾಕ್ಸ್ ಕಾನೂನುಗಳನ್ನು ಲೆಕ್ಕಿಸದೆ, ಇತರ ಸಂಸ್ಥೆಗಳ ಕಾರ್ಯಾಚರಣೆಗಳನ್ನು ಹೋಲಿಸಬಹುದು.

ಇದಲ್ಲದೆ, ಟ್ಯಾಕ್ಸ್‌ನ ನಂತರದ ಲಾಭವು, ಇನ್ವೆಸ್ಟರ್‌ಗಳು ತಮ್ಮ ಇನ್ವೆಸ್ಟ್‌ಮೆಂಟ್‌ಗಳ ನಿರ್ಧಾರಗಳನ್ನು ಅನಲೈಸ್ ಮಾಡಲು ಸಹಾಯ ಮಾಡುವ ಫೈನಾನ್ಸಿಯಲ್ ಇಂಡಿಕೇಟರ್ ಆಗಿದೆ. ಹೆಚ್ಚಿನ ಪಿಎಟಿ ಅನುಪಾತವು ಕಂಪನಿಯ ಹೆಚ್ಚಿನ ದಕ್ಷತೆಯನ್ನು ಸೂಚಿಸುತ್ತದೆ ಆದರೆ ಕಡಿಮೆ ಪಿಎಟಿ ಕಡಿಮೆ ದಕ್ಷತೆಯನ್ನು ಸೂಚಿಸುತ್ತದೆ. ಅವರು ಕೆಲವು ಕಂಪನಿಗಳ ಪಿಎಟಿ ಅನ್ನು ಕ್ಯಾಲ್ಕುಲೇಟ್ ಮಾಡಿದರೆ ಮತ್ತು ಪರಿಶೀಲಿಸಿದರೆ, ಅದು ಅವರಿಗೆ ಕಂಪನಿಯ ಹಣಕಾಸಿನ ಸಾಮರ್ಥ್ಯದ ಬಗ್ಗೆ ಆರೋಗ್ಯಕರ ಚಿತ್ರಣವನ್ನು ನೀಡುತ್ತದೆ. ಇದು ಕಡಿಮೆಯಾಗಲು ಪ್ರಾರಂಭಿಸಿದರೆ, ಇನ್ವೆಸ್ಟರ್‌ಗಳು ಅದರಲ್ಲಿ ಇನ್ವೆಸ್ಟ್ ಮಾಡಲು ಮುಂದುವರಿಯಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಬೇಕಾಗುತ್ತದೆ.

ಟ್ಯಾಕ್ಸ್‌ನ ನಂತರದ ಲಾಭ (PAT) ಕ್ರಮಗಳ ಪ್ರಯೋಜನಗಳು ಯಾವುವು?

ಟ್ಯಾಕ್ಸ್‌ನ ನಂತರದ ಲಾಭದ ಉದ್ದೇಶ ಮತ್ತು ಸಾಮರ್ಥ್ಯಗಳನ್ನು ನೀವು ಈಗ ತಿಳಿದಿದ್ದೀರಿ. ಈಗ ಇದನ್ನು ನಿಮ್ಮ ಕಂಪನಿಯಲ್ಲಿ ಕಾರ್ಯಗತಗೊಳಿಸಲು ಪಿಎಟಿಗೆ ಸಂಬಂಧಿಸಿದ ಕೆಳಗಿನ ಅನುಕೂಲಗಳನ್ನು ನೀವು ಪರಿಶೀಲಿಸಬೇಕು.

  • ಕಾರ್ಪೊರೇಟ್ ಬ್ಯಾಲೆನ್ಸ್ ಶೀಟ್‌ಗೆ ಉಳಿಸಿಕೊಂಡಿರುವ ಗಳಿಕೆಯನ್ನು ಸೇರಿಸುವ ಮೂಲಕ ಷೇರ್‌ಹೋಲ್ಡರ್‌ಗಳ ಇಕ್ವಿಟಿ ಮತ್ತು ಸ್ಟಾಕ್ ಮೌಲ್ಯವನ್ನು ಪಿಎಟಿ ಹೆಚ್ಚಿಸುತ್ತದೆ.
  • ಹೆಚ್ಚಿದ ಸ್ಟಾಕ್ ಬೆಲೆಯ ಮೊಮೆಂಟಮ್, ಕಂಪನಿಗಳಿಗೆ ಇನ್ವೆಸ್ಟರ್‌ಗಳನ್ನು ಆಕರ್ಷಿಸಲು ಸಹಾಯ ಮಾಡುತ್ತದೆ.
  • ಪಿಎಟಿ ಕಂಪನಿಗಳಲ್ಲಿ ಲಿಕ್ವಿಡಿಟಿಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ತುರ್ತು ಪರಿಸ್ಥಿತಿಗಳಿಗೆ ಹಣವನ್ನು ನೀಡುವುದಲ್ಲದೆ ಜೊತೆಗೆ ಲೋನ್‌ಗಳನ್ನು ತೆಗೆದುಕೊಳ್ಳದೆ ಕಂಪನಿಯು ಬದುಕಲು ಸಹಾಯ ಮಾಡುತ್ತದೆ.
  • ಇನ್ವೆಸ್ಟರ್‌ಗಳು ಕಂಪನಿಯು ಉಳಿಸಿಕೊಂಡಿರುವ ಗಳಿಕೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದರಿಂದ, ಅವರು ಕಂಪನಿಯ ಬೆಳವಣಿಗೆಗಾಗಿ ಫಂಡ್‌ನಲ್ಲಿ ಆಸಕ್ತಿವಹಿಸಬಹುದು.

ಟ್ಯಾಕ್ಸ್‌ನ ನಂತರದ ಲಾಭ (PAT) ಕ್ರಮಗಳ ಅನಾನುಕೂಲಗಳು ಯಾವುವು?

ಟ್ಯಾಕ್ಸ್‌ನ ನಂತರದ ಲಾಭವು ಹೆಚ್ಚಿನ ಬಿಸಿನೆಸ್‌ಗಳಿಗೆ ಮತ್ತು ಅದರ ಭವಿಷ್ಯದ ಬೆಳವಣಿಗೆಗೆ ಸಹಾಯಕವಾಗಿದ್ದರೂ, ಈ ನಿಟ್ಟಿನಲ್ಲಿ ಅದರ ಕೆಲವು ಅನಾನುಕೂಲಗಳನ್ನು ಸಹ ಪರಿಗಣಿಸಬೇಕು.

  • ಪ್ರಸ್ತುತ ಇರುವ ಲಾಭದ ಬೆಳವಣಿಗೆಯ ದರಗಳನ್ನು ಮಾತ್ರ ಅವಲಂಬಿಸುವುದಕ್ಕಿಂತ ಹಣವನ್ನು ಸಾಲವಾಗಿ ಪಡೆಯುವಾಗ ಇಂಟರೆಸ್ಟ್ ದರಗಳು ಕಂಪನಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.
  • ಇದಲ್ಲದೆ, ಷೇರ್‌ಹೋಲ್ಡರ್‌ಗಳು ಷೇರು ಮೌಲ್ಯವನ್ನು ಹೆಚ್ಚಿಸುವುದಕ್ಕಾಗಿ, ಲಾಭವನ್ನು ರಿಇನ್ವೆಸ್ಟ್ ಮಾಡುವುದಕ್ಕಿಂತ ಹೆಚ್ಚಿನ ಡಿವಿಡೆಂಡ್‌ಗಳನ್ನು ಪಡೆಯಲು ಬಯಸುತ್ತಾರೆ.
  • ಕಂಪನಿಯಲ್ಲಿನ ಲಾಭದ ಸಂದರ್ಭದಲ್ಲಿ ಮಾತ್ರ ಪಿಎಟಿ ಅನ್ನು ಕ್ಯಾಲ್ಕುಲೇಟ್ ಮಾಡಲಾಗುತ್ತದೆ. ನಷ್ಟದ ಸಂದರ್ಭದಲ್ಲಿ ಟ್ಯಾಕ್ಸ್‌ಗಳು ನಿಲ್ ಆಗಿರುತ್ತವೆ. ಆದ್ದರಿಂದ, ನಿರಂತರ ನಷ್ಟದ ಸಮಯದಲ್ಲಿ ಕಂಪನಿಗೆ ಇದು ಕಷ್ಟವಾಗುತ್ತದೆ. 
  • ಟ್ಯಾಕ್ಸ್ ದರವನ್ನು ಹೆಚ್ಚಾದರೆ, ಪಿಎಟಿ ಕಡಿಮೆಯಾಗುತ್ತದೆ. ಇದು ಕನಿಷ್ಠ ಮೊತ್ತವನ್ನು ಷೇರ್‌ಹೋಲ್ಡರ್‌ಗಳಿಗೆ ಹಾಗೆಯೇ ರಿಸರ್ವ್ಸ್ ಮತ್ತು ಸರ್‌ಪ್ಲಸ್‌ಗಳಿಗೆ ಬಿಟ್ಟುಬಿಡುತ್ತದೆ. 

ನೀವು ನೋಡುವಂತೆ, ಕಂಪನಿಗಳ ಆರ್ಥಿಕ ಲಾಭದಾಯಕತೆ ಮತ್ತು ಸಾಮರ್ಥ್ಯವನ್ನು ಅನಲೈಸ್ ಮಾಡಲು, ಟ್ಯಾಕ್ಸ್‌ನ ನಂತರದ ಲಾಭವು ಅತ್ಯಗತ್ಯ ಅವಶ್ಯಕತೆಯಾಗಿದೆ. ಅದರ ಕ್ಯಾಲ್ಕುಲೇಶನ್ ಪ್ರಕ್ರಿಯೆಗೆ ನೀವು ಪಾವತಿಸಿದ ನಂತರ ಎಲ್ಲಾ ಟ್ಯಾಕ್ಸೇಬಲ್ ಮೊತ್ತವನ್ನು ಹೊರತುಪಡಿಸುವ ಅಗತ್ಯವಿದೆ. ಈ ಮೊತ್ತವನ್ನು ಮೆಂಟೇನ್ ಮಾಡುವುದು ಷೇರ್‌ಹೋಲ್ಡರ್‌ಗಳಿಗೆ ನಿಮ್ಮ ಆರ್ಗನೈಸೇಶನ್ ಉಳಿಸಿಕೊಂಡಿರುವ ಗಳಿಕೆಯನ್ನು ಅನಲೈಸ್ ಮಾಡಲು ಸಹಾಯ ಮಾಡುತ್ತದೆ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಟ್ಯಾಕ್ಸ್‌ನ ನಂತರದ ಲಾಭಗಳು ಏಕೆ ಕಡಿಮೆಯಾಗುತ್ತವೆ?

ಟ್ಯಾಕ್ಸ್‌ನ ನಂತರದ ಲಾಭವು ಎಲ್ಲಾ ಟ್ಯಾಕ್ಸ್‌ಗಳನ್ನು ಒಟ್ಟು ಮಾರ್ಜಿನ್‌ಗಳಿಂದ ಕಡಿಮೆಗೊಳಿಸಿ ಕ್ಯಾಲ್ಕುಲೇಟ್ ಮಾಡುತ್ತದೆ. ನೆಟ್ ಇನ್ಕಮ್‌ನ ಬೆಳವಣಿಗೆಯು ನಿಮ್ಮ ಕಂಪನಿಯಲ್ಲಿನ ಮಾರಾಟದ ಬೆಳವಣಿಗೆಗೆ ಸಮವಾಗಿರದಿದ್ದರೆ, ಟ್ಯಾಕ್ಸ್‌ನ ನಂತರದ ಡಿವಿಡೆಂಡ್ ಬದಲಾಗಬಹುದು.

ಕಂಪನಿಯಲ್ಲಿ ಟ್ಯಾಕ್ಸ್‌ನ ನಂತರದ ಲಾಭವು, ನೆಟ್ ಪ್ರಾಫಿಟ್‌ನಂತೆಯೇ ಇರುತ್ತದೆಯೇ?

ಟ್ಯಾಕ್ಸ್‌ಗಳ ನಂತರದ ನೆಟ್ ಇನ್ಕಮ್ (NIAT) ಎಲ್ಲಾ ಟ್ಯಾಕ್ಸ್‌ಗಳನ್ನು ಪಾವತಿಸಿದ ನಂತರ ನಿಮ್ಮ ಕಂಪನಿಯ ಲಾಭವನ್ನು ವಿವರಿಸಲು ಸಹಾಯ ಮಾಡುತ್ತದೆ. ಮತ್ತೊಂದೆಡೆ, ನೆಟ್ ಇನ್ಕಮ್, ಟ್ಯಾಕ್ಸ್‌ಗಳ ಹೊರತಾಗಿಯು ವಿವಿಧ ಅಂಶಗಳನ್ನು ಅಂದರೆ ಸರಕುಗಳ ಮಾರಾಟದ ಬೆಲೆ, ಡೆಪ್ರಿಸಿಯೇಶನ್ ಮತ್ತು ಭೋಗ್ಯ, ವೆಚ್ಚಗಳು, ಇಂಟರೆಸ್ಟ್ ಇತ್ಯಾದಿಗಳನ್ನು ಅಕೌಂಟಿಂಗ್ ಅವಧಿಗೆ ಡಿಡಕ್ಟ್ ಮಾಡುತ್ತದೆ.