ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಇನ್‌ಕಮ್‌ ಟ್ಯಾಕ್ಸ್‌ ಫಾರ್ಮ್ 16 ಎಂದರೇನು: ಸಂಪೂರ್ಣ ವಿವರಣೆ

ಇನ್‌ಕಮ್‌ ಟ್ಯಾಕ್ಸ್ ಫಾರ್ಮ್ 16 ಎನ್ನುವುದು ಉದ್ಯೋಗಿಯ ಪರವಾಗಿ ಉದ್ಯೋಗದಾತರಿಂದ ನೀಡಲಾದ ಟ್ಯಾಕ್ಸ್ ಡಿಡಕ್ಷನ್ ಅಟ್ ಸೋರ್ಸ್ ಸರ್ಟಿಫಿಕೇಟ್. ಇದು ಡಿಡಕ್ಟರ್‌ಗಳು ಮತ್ತು ಡಿಡಕ್ಟೀಗಳ ನಡುವಿನ ಹಲವಾರು ಟ್ರಾನ್ಸಾಕ್ಷನ್‌ಗಳಿಗೆ ಟಿಸಿಎಸ್/ಟಿಡಿಎಸ್‌ನ ವಿವರಗಳನ್ನು ಒದಗಿಸುತ್ತದೆ.

ನೀವು ಒಂದು ಹಣಕಾಸು ವರ್ಷದಲ್ಲಿ ಉದ್ಯೋಗಗಳನ್ನು ಬದಲಾಯಿಸಿದ್ದರೆ ಅಥವಾ ಅನೇಕ ಉದ್ಯೋಗದಾತರೊಂದಿಗೆ ಕೆಲಸ ಮಾಡಿದ್ದರೆ, ನಿಮ್ಮ ಟ್ಯಾಕ್ಸ್ ಅನ್ನು ಅನೇಕ ಸ್ಥಳಗಳಲ್ಲಿ ಡಿಡಕ್ಟ್ ಮಾಡುವ ಸಾಧ್ಯತೆಯಿದೆ. ಅಂತಹ ಸಂದರ್ಭದಲ್ಲಿ, ನೀವು ಅವರಿಂದ ಪ್ರತ್ಯೇಕವಾಗಿ ಐಟಿಆರ್ ಫಾರ್ಮ್ 16 ಅನ್ನು ಪಡೆಯಬೇಕಾಗುತ್ತದೆ.

"ಫಾರ್ಮ್ 16 ಎಂದರೇನು?" ಎಂಬುದಕ್ಕೆ ಜನರ ಹುಡುಕಾಟ ಮೊದಲನೆಯದಾಗಿ, ಅದು ಏಕೆ ಮುಖ್ಯವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

[ಮೂಲ]

ನಿಮಗೆ ಐಟಿಆರ್ ಫಾರ್ಮ್ 16 ಏಕೆ ಬೇಕು?

ಇನ್‌ಕಮ್‌ ಟ್ಯಾಕ್ಸ್‌ ಫಾರ್ಮ್ 16 ಸಕಾಲಿಕ ಟ್ಯಾಕ್ಸ್ ಪೇಮೆಂಟ್‌ಗಳ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ, ಟ್ಯಾಕ್ಸ್‌ಪೇಯರ್‌ ಆಗಿ, ನೀವು ಈ ಸರ್ಟಿಫಿಕೇಟ್‌ನೊಂದಿಗೆ ನಿಮ್ಮ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್ ಅನ್ನು ಸುಲಭವಾಗಿ ಫೈಲ್ ಮಾಡಬಹುದು.

ಐಟಿಆರ್ ಫಾರ್ಮ್ 16 ಆ ಹಣಕಾಸು ವರ್ಷದ ಆರಂಭದಲ್ಲಿ ಮಾಡಿದ ಇನ್‌ವೆಸ್ಟ್‌ಮೆಂಟ್‌ ಡಿಕ್ಲರೇಷನ್‌ಗಳನ್ನು ಅವಲಂಬಿಸಿ ನಿಮ್ಮ ಟ್ಯಾಕ್ಸ್‌ ಅನ್ನು ಹೇಗೆ ಕ್ಯಾಲ್ಕುಲೇಟ್‌ ಮಾಡಲಾಗಿದೆ ಎಂಬ ಮಾಹಿತಿಯನ್ನು ಸಹ ಒಳಗೊಂಡಿದೆ. ಈ ಡಿಕ್ಲರೇಷನ್‌ಗಳು ಕಂಪನಿಯ ಅಲೋಯನ್ಸ್‌ಗಳು, ಮನೆ ಬಾಡಿಗೆ, ಲೋನ್‌ಗಳು, ಮೆಡಿಕಲ್ ಬಿಲ್‌ಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ, ಇವುಗಳನ್ನು ನಿಮ್ಮ ಒಟ್ಟು ಇನ್‌ಕಮ್‌ನಿಂದ ಡಿಡಕ್ಟ್‌ ಮಾಡಲಾಗಿದೆ ಮತ್ತು ನಿಮ್ಮ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್‌ಗಳನ್ನು ಫೈಲ್ ಮಾಡಲು ಸಹಾಯ ಮಾಡುತ್ತದೆ.

ಆದಾಗ್ಯೂ, ಹಣಕಾಸು ವರ್ಷದಲ್ಲಿ ನಿಮ್ಮ ಒಟ್ಟಾರೆ ನೆಟ್ ಇನ್‌ಕಮ್‌ ಅನ್ನು ಪರಿಗಣಿಸಿ, ನಿಮ್ಮ ಉದ್ಯೋಗದಾತರು ನಿಮ್ಮ ಸ್ಯಾಲರಿಯಿಂದ ಯಾವುದೇ ಟ್ಯಾಕ್ಸ್ ಅನ್ನು ಡಿಡಕ್ಟ್‌ ಮಾಡಬಹುದು ಅಥವಾ ಮಾಡದೆಯೂ ಇರಬಹುದು. ಆದ್ದರಿಂದ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಮೊದಲು, ನೀವು ಐಟಿಆರ್ ಫಾರ್ಮ್ 16ಗೆ ಅರ್ಹರಾಗಿದ್ದೀರಾ ಎಂಬುದನ್ನು ನೀವು ಮೊದಲು ತಿಳಿದುಕೊಳ್ಳಬೇಕು.

ಐಟಿಆರ್ ಫಾರ್ಮ್ 16ರ ಅಡಿಯಲ್ಲಿ ಸ್ಯಾಲರೀಡ್ ವ್ಯಕ್ತಿಗಳಿಗೆ ಅರ್ಹತೆ

ನೀವು ಸ್ಯಾಲರೀಡ್ ವ್ಯಕ್ತಿಯಾಗಿದ್ದರೆ ಮತ್ತು ನಿಮ್ಮ ಉದ್ಯೋಗದಾತರು ನಿಮ್ಮ ಸ್ಯಾಲರಿಯಿಂದ ಮೂಲದಲ್ಲಿ ಟ್ಯಾಕ್ಸ್ ಅನ್ನು ಡಿಡಕ್ಟ್ ಮಾಡಿದ್ದರೆ, ನೀವು ಇನ್‌ಕಮ್‌ ಟ್ಯಾಕ್ಸ್‌ ಫಾರ್ಮ್ 16ಗೆ ಅರ್ಹರಾಗುತ್ತೀರಿ.

ನಿಮ್ಮ ನೆಟ್ ವಾರ್ಷಿಕ ಇನ್‌ಕಮ್‌, ಟ್ಯಾಕ್ಸ್ ವಿನಾಯಿತಿ ಲಿಮಿಟ್‌ನ ಮೇಲೆ ಅಥವಾ ಅದರ ಅಡಿಗೆ ಬರಬಹುದು. ಆದರೆ ನಿಮ್ಮ ಉದ್ಯೋಗದಾತರು ಟ್ಯಾಕ್ಸ್ ಡಿಡಕ್ಷನ್‌ಗಳನ್ನು ಮಾಡಿದ್ದರೆ, ಅವನು/ಅವಳು ಐಟಿಆರ್ ಫಾರ್ಮ್ 16 ಅನ್ನು ನೀಡಬೇಕಾಗುತ್ತದೆ.

ಹೆಚ್ಚುವರಿಯಾಗಿ, ನಿಗದಿತ ದಿನಾಂಕದ ಮೊದಲು ನಿಮ್ಮ ಐಟಿಆರ್ ಅನ್ನು ಫೈಲ್ ಮಾಡಲು ನಿಮಗೆ ಸಾಕಷ್ಟು ಸಮಯವನ್ನು ನೀಡಲು ಮೌಲ್ಯಮಾಪನ ವರ್ಷದ ಮೇ 31ರಂದು ಅಥವಾ ಮೊದಲು ನಿಮ್ಮ ಉದ್ಯೋಗದಾತರು ಐಟಿಆರ್ ಫಾರ್ಮ್ 16 ಅನ್ನು ನೀಡಬೇಕಾಗುತ್ತದೆ.

ಫಾರ್ಮ್ 16 ಅನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಈ ಸರಳ ಹಂತಗಳಲ್ಲಿ ನೀವು ಇನ್‌ಕಮ್‌ ಟ್ಯಾಕ್ಸ್‌ ಫಾರ್ಮ್ 16 ಅನ್ನು ಡೌನ್‌ಲೋಡ್ ಮಾಡಬಹುದು.

  • ಇನ್‌ಕಮ್‌ ಟ್ಯಾಕ್ಸ್‌ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
  • ಮುಂದೆ, 'ಫಾರ್ಮ್ಸ್/ಡೌನ್‌ಲೋಡ್'ಗೆ ಹೋಗಿ ಮತ್ತು 'ಇನ್‌ಕಮ್‌ ಟ್ಯಾಕ್ಸ್‌ ಫಾರ್ಮ್ಸ್' ಮೇಲೆ ಕ್ಲಿಕ್ ಮಾಡಿ.
  • ಇಲ್ಲಿ, ನೀವು 'ಪಿಡಿಎಫ್' ಮತ್ತು 'ಫಿಲ್ಲೇಬಲ್ ಫಾರ್ಮ್' ಆಯ್ಕೆಗಳನ್ನು ಕಾಣಬಹುದು.
  • ನೀವು ಡೌನ್‌ಲೋಡ್ ಮಾಡಲು ಬಯಸಿದರೆ 'ಪಿಡಿಎಫ್' ಮೇಲೆ ಕ್ಲಿಕ್ ಮಾಡಿ.

ನೀವು ಅದನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಲು ಬಯಸಿದರೆ, ಇಂಟರ್‌ನೆಟ್‌ನಲ್ಲಿ ಲಭ್ಯವಿರುವ ಯಾವುದೇ ಪಿಡಿಎಫ್ ಎಡಿಟರ್ ಅನ್ನು ನೀವು ಆರಿಸಿಕೊಳ್ಳಬಹುದು.

ಇನ್‌ಕಮ್‌ ಟ್ಯಾಕ್ಸ್‌ ಫಾರ್ಮ್ 16 ಅನ್ನು ಅರ್ಥಮಾಡಿಕೊಳ್ಳುವುದು

ಈ ಫಾರ್ಮ್ ಸ್ಯಾಲರೀಡ್ ನೌಕರರು ಮತ್ತು ಪೆನ್ಷನರ್‌ಗಳಿಗೆ ಅಪ್ಲೈ ಆಗುತ್ತದೆ. ಇದು ಎರಡು ಭಾಗಗಳನ್ನು ಒಳಗೊಂಡಿದೆ - ಭಾಗ ಎ ಮತ್ತು ಭಾಗ ಬಿ.

ಭಾಗ ಎ ಉದ್ಯೋಗದಾತರಿಂದ ಡಿಡಕ್ಟ್ ಮಾಡಲಾದ ಮತ್ತು ಡೆಪಾಸಿಟ್ ಮಾಡಲಾದ ಟಿಡಿಎಸ್‌ಗೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡಿದೆ. ಇದು ಒಳಗೊಂಡಿರುವಂಥದ್ದು -

  • ಟಿಡಿಎಸ್ ಸರ್ಟಿಫಿಕೇಟ್‌ ಸಂಖ್ಯೆ
  • ಉದ್ಯೋಗದಾತರ ಹೆಸರು ಮತ್ತು ವಿಳಾಸ
  • ಟ್ಯಾಕ್ಸ್‌ಪೇಯರ್‌ ಹೆಸರು ಮತ್ತು ವಿಳಾಸ
  • ಉದ್ಯೋಗದಾತರ ಪ್ಯಾನ್ ಮತ್ತು ಟ್ಯಾನ್
  • ಟ್ಯಾಕ್ಸ್‌ಪೇಯರ್‌ರ ಪ್ಯಾನ್ ಮತ್ತು ಉದ್ಯೋಗಿ ರೆಫರೆನ್ಸ್ ಸಂಖ್ಯೆ
  • ಹಣಕಾಸು ವರ್ಷ ಮತ್ತು ಉದ್ಯೋಗದ ಅವಧಿ
  • ಮೂಲದಲ್ಲಿ ಡಿಡಕ್ಟ್ ಮಾಡಲಾದ ಒಟ್ಟು ಟಿಡಿಎಸ್

ಮತ್ತೊಂದೆಡೆ, ಐಟಿಆರ್ ಫಾರ್ಮ್ 16ರ ಭಾಗ ಬಿ ಒಳಗೊಂಡಿರುವಂಥದ್ದು -

  • ಗ್ರಾಸ್ ಸ್ಯಾಲರಿ
  • ಸೆಕ್ಷನ್ 10ರ ಪ್ರಕಾರ ವಿನಾಯಿತಿ ಪಡೆದ ಅಲೋಯನ್ಸ್‌ಗಳ ಮಾಹಿತಿ
  • ಸೆಕ್ಷನ್ 16 ಅಡಿಯಲ್ಲಿ ಸ್ಟಾಂಡರ್ಡ್ ಡಿಡಕ್ಷನ್
  • ಹೆಡ್ ಸ್ಯಾಲರಿಗಳ ಅಡಿಯಲ್ಲಿ ಚಾರ್ಜ್ ಮಾಡಬಹುದಾದ ಇನ್‌ಕಮ್‌
  • ಮನೆ ಪ್ರಾಪರ್ಟಿಯಿಂದ ಇನ್‌ಕಮ್
  • ಯಾವುದೇ ಇತರ ಇನ್‌ಕಮ್
  •  ಗ್ರಾಸ್ ಒಟ್ಟು ಇನ್‌ಕಮ್
  • ಟ್ಯಾಕ್ಸ್ ಉಳಿತಾಯ ಇನ್‌ವೆಸ್ಟ್‌ಮೆಂಟ್‌ಗಳ ವಿವರಗಳು (ಐಟಿಎ ಅಧ್ಯಾಯ VIA ಪ್ರಕಾರ ಡಿಡಕ್ಷನ್‌ಗಳನ್ನು ಅನುಮತಿಸಲಾಗಿದೆ)
  • ಒಟ್ಟು ಟ್ಯಾಕ್ಸೇಬಲ್ ಇನ್‌ಕಮ್
  • ಒಟ್ಟು ಇನ್‌ಕಮ್‌ ಮೇಲಿನ ಟ್ಯಾಕ್ಸ್
  • ಸೆಕ್ಷನ್ 87A ಅಡಿಯಲ್ಲಿ ರಿಬೇಟ್
  • ಅಪ್ಲಿಕೇಬಲ್ ಆಗುವಲ್ಲೆಲ್ಲಾ ಸರ್‌ಚಾರ್ಜ್‌
  • ಹೆಲ್ತ್ ಮತ್ತು ಎಜುಕೇಷನ್ ಸೆಸ್
  • ಟ್ಯಾಕ್ಸ್ ಪೇಯೇಬಲ್
  • ಸೆಕ್ಷನ್ 89ರ ಅಡಿಯಲ್ಲಿ ಪರಿಹಾರ
  • ನೆಟ್ ಟ್ಯಾಕ್ಸ್ ಪೇಯೇಬಲ್
  • ಉದ್ಯೋಗದಾತರಿಂದ ವೆರಿಫಿಕೇಷನ್

[ಮೂಲ]

ಇನ್‌ಕಮ್‌ ಟ್ಯಾಕ್ಸ್‌ ಫಾರ್ಮ್ 16 ವೆರಿಫಿಕೇಷನ್ ಮಾಡುವುದು ಹೇಗೆ?

ಐಟಿಆರ್ ಫಾರ್ಮ್ 16 ಅನ್ನು ಡೌನ್‌ಲೋಡ್ ಮಾಡಿ ಮತ್ತು ಭರ್ತಿ ಮಾಡಿದ ನಂತರ, ನೀವು ಈ ಸರಳ ಹಂತಗಳಲ್ಲಿ ಅದನ್ನು ವೆರಿಫೈ ಮಾಡಬಹುದು.

  • ಟ್ರೇಸಸ್‌ನ ಅಧಿಕೃತ ಪೋರ್ಟಲ್‌ಗೆ ಹೋಗಿ.
  • ಕ್ಯಾಪ್ಚಾ ಕೋಡ್ ನಮೂದಿಸಿದ ನಂತರ 'ಪ್ರೊಸೀಡ್' ಮೇಲೆ ಕ್ಲಿಕ್ ಮಾಡಿ.
  • ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಮತ್ತು 'ವ್ಯಾಲಿಡೇಟ್' ಮೇಲೆ ಕ್ಲಿಕ್ ಮಾಡಿ.

ಐಟಿಆರ್ ಫಾರ್ಮ್ 16 ಅನ್ನು ಹೊಂದುವ ಪ್ರಯೋಜನಗಳು ಯಾವುವು?

ಫಾರ್ಮ್ 16ರ ಪ್ರಾಥಮಿಕ ಬಳಕೆಯ ಜೊತೆಗೆ ನಿಮ್ಮ 'ಸ್ಯಾಲರಿ ಸ್ಟೇಟ್‌ಮೆಂಟ್‌', ನೀವು ಹಲವಾರು ಇತರ ಸನ್ನಿವೇಶಗಳಲ್ಲಿ ಈ ಸರ್ಟಿಫಿಕೇಟ್ ಅನ್ನು ಬಳಸಬಹುದು.

  • ನಿಮ್ಮ ಇನ್‌ಕಮ್‌ನ ಪುರಾವೆ
  • ನಿಮ್ಮ ಎಲ್ಲಾ ಟ್ಯಾಕ್ಸ್-ಉಳಿತಾಯ ಇನ್‌ವೆಸ್ಟ್‌ಮೆಂಟ್‌ಗಳನ್ನು ಚೆಕ್ ಮಾಡುವುದು
  • ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಫೈಲಿಂಗ್
  • ಲೋನ್ ಮೌಲ್ಯಮಾಪನ ಮತ್ತು ಅಪ್ರೂವಲ್
  • ನಿಮ್ಮ ಟ್ಯಾಕ್ಸ್ ಡಿಡಕ್ಷನ್‌ಗಳ ಡಾಕ್ಯುಮೆಂಟೇಷನ್
  • ವೀಸಾ ನೀಡಿಕೆ
  • ಹೆಚ್ಚುವರಿಯಾಗಿ ಪಾವತಿಸಿದ ಟ್ಯಾಕ್ಸ್‌ಗಳನ್ನು ಚೆಕ್ ಮಾಡುವುದು
  • ನಿಮ್ಮ ಟ್ಯಾಕ್ಸ್ ಲಯಬಿಲಿಟಿಗಳನ್ನು ಕ್ಯಾಲ್ಕ್ಯುಲೇಟ್ ಮಾಡಲು ಮುಂದಿನ ಉದ್ಯೋಗದಾತರಿಗೆ ಸಹಾಯ ಮಾಡುವುದು

ಐಟಿಆರ್ ಫಾರ್ಮ್ 16 ಟ್ಯಾಕ್ಸ್ ವಿನಾಯಿತಿ ಎಂದರೇನು?

ವಾರ್ಷಿಕ ಫಾರ್ಮ್ 16 ಅರ್ಹತಾ ಸ್ಯಾಲರಿ ₹2,50,000 ಆಗಿದೆ. ಆದ್ದರಿಂದ, ಮೌಲ್ಯಮಾಪನ ವರ್ಷದ ನಿಮ್ಮ ವಾರ್ಷಿಕ ಇನ್‌ಕಮ್‌ ₹2,50,000 ಒಳಗಿದ್ದರೆ, ನೀವು ಐಟಿಆರ್ ಫಾರ್ಮ್ 16 ಅನ್ನು ಫೈಲ್ ಮಾಡುವುದರಿಂದ ವಿನಾಯಿತಿ ನೀಡಲಾಗುತ್ತದೆ.

ಫಾರ್ಮ್ 16ನೊಂದಿಗೆ ಐಟಿಆರ್ ಅನ್ನು ಹೇಗೆ ಫೈಲ್ ಮಾಡುವುದು?

ನೀವು ಟ್ಯಾಕ್ಸ್‌ಪೇಯರ್ ಆಗಿದ್ದರೆ ಮತ್ತು ಟ್ಯಾಕ್ಸ್‌ನಲ್ಲಿ ಉಳಿಸಲು ಬಯಸಿದರೆ, ನಿಮ್ಮ ಟ್ಯಾಕ್ಸ್ ರಿಟರ್ನ್ಸ್ ಅನ್ನು ನೀವು ಕಡ್ಡಾಯವಾಗಿ ಫೈಲ್ ಮಾಡಬೇಕು.

ಆನ್‌ಲೈನ್‌ ಪ್ರೊಸೆಸ್

ನಿಮ್ಮ ಟ್ಯಾಕ್ಸ್ ರಿಟರ್ನ್ಸ್ ಅನ್ನು ಆನ್‌ಲೈನ್‌ನಲ್ಲಿ ಫೈಲ್ ಮಾಡಲು ನೀವು ಐಟಿ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಬಹುದು.

  • ಇನ್‌ಕಮ್‌ ಟ್ಯಾಕ್ಸ್‌ ಇ-ಫೈಲಿಂಗ್ ಪೋರ್ಟಲ್‌ https://www.incometax.gov.in/iec/foportal/ಗೆ ಹೋಗಿ
  • 'ಡೌನ್‌ಲೋಡ್ಸ್ > ಐಟಿ ರಿಟರ್ನ್ ಪ್ರಿಪರೇಷನ್ ಸಾಫ್ಟ್‌ವೇರ್' ಅಡಿಯಲ್ಲಿ ಸೂಕ್ತವಾದ ಐಟಿಆರ್ ಯುಟಿಲಿಟಿ ಅನ್ನು ಡೌನ್‌ಲೋಡ್ ಮಾಡಿ.
  • ಡೌನ್‌ಲೋಡ್ ಮಾಡಿದ ಯುಟಿಲಿಟಿ ಜಿಪ್ ಫೈಲ್ ಅನ್ನು ಎಕ್ಸ್‌ಟ್ರಾಕ್ಟ್ ಮಾಡಿ ಮತ್ತು ಎಕ್ಸ್‌ಟ್ರಾಕ್ಟೆಡ್ ಫೋಲ್ಡರ್‌ನಿಂದ ಯುಟಿಲಿಟಿಯನ್ನು ತೆರೆಯಿರಿ.
  • ಐಟಿಆರ್ ಫಾರ್ಮ್‌ನ ಅಪ್ಲಿಕೇಬಲ್ ಆಗುವ ಮತ್ತು ಕಡ್ಡಾಯ ಫೀಲ್ಡ್ ಗಳನ್ನು ಭರ್ತಿ ಮಾಡಿ.
  • ಐಟಿಆರ್ ಫಾರ್ಮ್‌ನ ಎಲ್ಲಾ ಟ್ಯಾಬ್‌ಗಳನ್ನು ವ್ಯಾಲಿಡೇಟ್ ಮಾಡಿ ಮತ್ತು ಟ್ಯಾಕ್ಸ್ ಅನ್ನು ಕ್ಯಾಲ್ಕುಲೇಟ್ ಮಾಡಿ.
  • ಎಕ್ಸ್‌ಎಂಎಲ್‌ ಅನ್ನು ರಚಿಸಿ ಮತ್ತು ಸೇವ್‌ ಮಾಡಿ.
  • ಯೂಸರ್ ಐಡಿ (ಪ್ಯಾನ್), ಪಾಸ್‌ವರ್ಡ್, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ 'ಲಾಗಿನ್' ಕ್ಲಿಕ್ ಮಾಡುವ ಮೂಲಕ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಆಗಿ.
  • 'ಇ-ಫೈಲ್' ಮೆನು ಕ್ಲಿಕ್ ಮಾಡಿ ಮತ್ತು 'ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್' ಲಿಂಕ್ ಅನ್ನು ಕ್ಲಿಕ್ ಮಾಡಿ.
  • ಈ ರಿಟರ್ನ್ ಪೇಜ್‌ನಲ್ಲಿ ಅಗತ್ಯವಿರುವ ಎಲ್ಲಾ ವಿವರಗಳು ಸ್ವಯಂ-ಪಾಪ್ಯುಲೇಟ್ ಆಗಿರುತ್ತದೆ.
  • ಮುಂದಿನ ಹಂತ ವೆರಿಫಿಕೇಷನ್. ಆಧಾರ್ ಓಟಿಪಿ ವೆರಿಫಿಕೇಷನ್ ಸೇರಿದಂತೆ ನಿಮ್ಮ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಅನ್ನು ವೆರಿಫೈ ಮಾಡಲು ಹಲವಾರು ಆಯ್ಕೆಗಳಿವೆ.
  • ಬ್ಯಾಂಕ್ ಖಾತೆ, ಡಿಮ್ಯಾಟ್ ಖಾತೆ ಅಥವಾ ಬ್ಯಾಂಕ್ ಎಟಿಎಂ ಮೂಲಕ ಇವಿಸಿಯು ವೆರಿಫಿಕೇಷನ್ ಆಯ್ಕೆಯಾದರೆ, ಬ್ಯಾಂಕ್ ಅಥವಾ ಡಿಮ್ಯಾಟ್ ಖಾತೆಯಲ್ಲಿ ರಿಜಿಸ್ಟರ್ ಮಾಡಿದ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ ಇವಿಸಿ ಅನ್ನು ನಮೂದಿಸಿ.
  • ಇತರ ಎರಡು ವೆರಿಫಿಕೇಷನ್ ಆಯ್ಕೆಗಳು, ಐಟಿಆರ್ ಅನ್ನು ಸಬ್‌ಮಿಟ್‌ ಮಾಡಲಾಗುತ್ತದೆ ಆದರೆ ಅದನ್ನು ವೆರಿಫೈ ಆಗುವವರೆಗೆ ಐಟಿಆರ್‌ಗಳನ್ನು ಫೈಲ್ ಮಾಡುವ ಪ್ರೊಸೆಸ್ ಪೂರ್ಣಗೊಳ್ಳುವುದಿಲ್ಲ. ಸಬ್‌ಮಿಟ್‌ ಮಾಡಿದ ಐಟಿಆರ್ ಅನ್ನು ನಂತರ 'ಮೈ ಅಕೌಂಟ್ > ಇ-ವೆರಿಫೈ ರಿಟರ್ನ್' ಆಯ್ಕೆಯನ್ನು ಬಳಸಿಕೊಂಡು ಇ-ವೆರಿಫೈಡ್ ಆಗಿರಬೇಕು ಅಥವಾ ಸಹಿ ಮಾಡಿದ ಐಟಿಆರ್-ವಿ ಅನ್ನು ಸಿಪಿಸಿ, ಬೆಂಗಳೂರು ಇಲ್ಲಿಗೆ ಕಳುಹಿಸಬೇಕು.
  • ಒದಗಿಸಿದ ಇಮೇಲ್ ಐಡಿಗೆ ಐಟಿಆರ್-ವಿ ಅನ್ನು ಸ್ವಯಂಚಾಲಿತವಾಗಿ ಕಳುಹಿಸಲಾಗುತ್ತದೆ.

ಯಶಸ್ವಿ ಸಬ್‌ಮಿಷನ್‌ ನಂತರ, ವಿವರಗಳನ್ನು ಇ-ವೆರಿಫೈ ಮಾಡಲು ಲಿಂಕ್ ಅನ್ನು ಪ್ರದರ್ಶಿಸಲಾಗುತ್ತದೆ. ಅದನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಮತ್ತು ಭವಿಷ್ಯದ ಉಲ್ಲೇಖಗಳಿಗಾಗಿ ಅದನ್ನು ಸೇವ್ ಮಾಡಿ.

ಆಫ್‌ಲೈನ್ ಪ್ರೊಸೆಸ್

ಅಗತ್ಯ ಫಾರ್ಮ್‌ಗಳನ್ನು ಡೌನ್‌ಲೋಡ್ ಮಾಡಿ ಮತ್ತು ಭರ್ತಿ ಮಾಡಿದ ನಂತರ, ಅವುಗಳನ್ನು ನಿಮ್ಮ ಹತ್ತಿರದ ‘ಆಯ್ಕಾರ್ ಸಂಪರ್ಕ ಕೇಂದ್ರ’ದಲ್ಲಿ ಸಬ್‌ಮಿಟ್‌ ಮಾಡಿ. ನೀವು ಸ್ವೀಕೃತಿ ಫಾರ್ಮ್ ಅನ್ನು ಸಹ ಭರ್ತಿ ಮಾಡಬೇಕಾಗುತ್ತದೆ, ಅದಕ್ಕೆ ಅಸೆಸಿಂಗ್ ಅಧಿಕಾರಿಯಿಂದ ಸ್ಟ್ಯಾಂಪ್ ಮಾಡಿಸಲಾಗುವುದು ಮತ್ತು ಹಿಂತಿರುಗಿಸಲಾಗುವುದು.

ಫಾರ್ಮ್ 16 ಇಲ್ಲದೆ ಐಟಿಆರ್ ಫೈಲ್ ಮಾಡುವುದು ಹೇಗೆ?

ಒಂದು ವೇಳೆ ನಿಮ್ಮ ಉದ್ಯೋಗದಾತರು ಟಿಡಿಎಸ್ ಅನ್ನು ಡಿಡಕ್ಟ್ ಮಾಡಿದ ನಂತರ ಐಟಿಆರ್ ಫಾರ್ಮ್ 16 ಅನ್ನು ನೀಡಲು ವಿಫಲವಾದರೆ, ಡಿಫಾಲ್ಟ್ ಮುಂದುವರಿಯುವ ಪ್ರತಿ ದಿನವೂ ಉದ್ಯೋಗದಾತರು ₹100 ಪಾವತಿಸಬೇಕಾಗುತ್ತದೆ.

ಹೇಳುವುದಾದರೆ, ಫಾರ್ಮ್ 16 ಇಲ್ಲದೆ ಐಟಿಆರ್ ಅನ್ನು ಫೈಲ್ ಮಾಡುವ ಹಂತಗಳು ಇಲ್ಲಿವೆ -

  • ಮೊದಲನೆಯದಾಗಿ, ನಿಮ್ಮ ಎಲ್ಲಾ ಮೂಲಗಳಿಂದ ಒಟ್ಟು ಇನ್‌ಕಮ್‌ ಅನ್ನು ನಿರ್ಧರಿಸಿ.
  • ನಂತರ, ಟ್ರೇಸಸ್ ವೆಬ್‌ಸೈಟ್‌ನಿಂದ ಏಕೀಕೃತ ಫಾರ್ಮ್ 26AS ಸಹಾಯದಿಂದ ಇನ್‌ಕಮ್‌ ಮೇಲೆ ಡಿಡಕ್ಟ್ ಮಾಡಲಾದ ಟಿಡಿಎಸ್ ಅನ್ನು ಕಂಡುಹಿಡಿಯಿರಿ.
  • ಇನ್‌ವೆಸ್ಟ್‌ಮೆಂಟ್‌ ಡಿಕ್ಲರೇಷನ್‌ಗಳ ಮೂಲಕ ಕ್ಲೈಮ್ ಡಿಡಕ್ಷನ್‌ಗಳು.
  • ಅದರ ನಂತರ, ವರ್ಷಕ್ಕೆ ನಿಮ್ಮ ಒಟ್ಟು ಟ್ಯಾಕ್ಸೇಬಲ್‌ ಇನ್‌ಕಮ್‌ ಮತ್ತು ಟ್ಯಾಕ್ಸ್ ಲಯಬಿಲಿಟಿಯನ್ನು ಕ್ಯಾಲ್ಕುಲೇಟ್ ಮಾಡಿ. ಮುಂದೆ, ಅದಕ್ಕೆ ಅನುಗುಣವಾಗಿ ನಿಮ್ಮ ಐಟಿ ರಿಟರ್ನ್ ಅನ್ನು ಫೈಲ್ ಮಾಡಿ.

ಈಗ ನಿಮಗೆ ಇನ್‌ಕಮ್‌ ಟ್ಯಾಕ್ಸ್‌ ಫಾರ್ಮ್ 16 ಮತ್ತು ಅದರ ಪ್ರಯೋಜನಗಳನ್ನು ಪಡೆಯುವ ವಿವರವಾದ ಪ್ರೊಸೆಸ್ ತಿಳಿದಿದೆ, ಅದನ್ನು ನಿಮ್ಮ ಉದ್ಯೋಗದಾತರಲ್ಲಿ ಕೇಳಿ. ಹೆಚ್ಚುವರಿ ಟ್ಯಾಕ್ಸ್ ಪೇಮೆಂಟ್ ಅನ್ನು ಉಳಿಸಲು, ಮೊದಲೇ ತಿಳಿಸಿದಂತೆ ನೀವೇ ಅದನ್ನು ಡೌನ್‌ಲೋಡ್ ಮಾಡಬಹುದು.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಫಾರ್ಮ್ 16 ಇಲ್ಲದೆ ಟ್ಯಾಕ್ಸ್ ರಿಟರ್ನ್ ಇರುವುದಿಲ್ಲವೇ?

ನಿಮ್ಮ ಐಟಿ ರಿಟರ್ನ್ ಅನ್ನು ಫಾರ್ಮ್ 16ನೊಂದಿಗೆ ಫೈಲ್ ಮಾಡಲು ಶಿಫಾರಸು ಮಾಡಲಾಗಿದೆ. ಆದಾಗ್ಯೂ, ಅದನ್ನು ನೀವು ಫಾರ್ಮ್ ಇಲ್ಲದೆಯೂ ಸಹ ಮಾಡಬಹುದು.

ಇನ್‌ಕಮ್‌ ಟ್ಯಾಕ್ಸ್‌ ಫೈಲ್ ಮಾಡುವಾಗ ಫಾರ್ಮ್ 16 ಅನ್ನು ಲಗತ್ತಿಸುವುದು ಕಡ್ಡಾಯವೇ?

ಇಲ್ಲ, ಐಟಿ ಇಲಾಖೆಯ ಪ್ರಕಾರ, ನಿಮ್ಮ ಇನ್‌ಕಮ್‌ ಟ್ಯಾಕ್ಸ್‌ ಅನ್ನು ಭರ್ತಿ ಮಾಡುವಾಗ ಫಾರ್ಮ್ 16 ಅನ್ನು ಲಗತ್ತಿಸುವುದು ಕಡ್ಡಾಯವಲ್ಲ.